ಕಪ್ರಸಂ ಇಂತೆಂದಿತು:
ಹಿಂದಿಯನ್ನು ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲಿ ಕಡ್ಡಾಯದ ಪ್ರಶ್ನೆಯೇ ಇಲ್ಲ.
ಮೇಲಿನ ಬಾಲಿಶ ವಿಶ್ಲೇಷಣೆಯಿಂದ ಮುಗುಳ್ನಕ್ಕು ಏನ್ಗುರುವು ಇಂತೆಂದನು:
ಇಲ್ಲಿ ಲಕ್ಷಾಂತರ ಮಕ್ಕಳು ತಾವೇ ಮೇಲೆ ಬಿದ್ದು ಹಿಂದಿ ಕಲೀತಿದಾರಂತೆ! ಯಾಕೆ ಕಲಿತಾರು ಸ್ವಾಮಿ? ಹಿಂದೀಗೂ ನಮಗೂ ಏನು ಸಂಬಂಧ? ಹಿಂದೀನೇ ಯಾಕೆ ಕಲಿತಾರು? ಹಿಂದಿ ಬದ್ಲು ಸಿಂಹಳ ಭಾಷೇನೋ ಸ್ವಾಹಿಲಿ ಭಾಷೇನೋ ಯಾಕೆ ಕಲೀತಿಲ್ಲ ಸ್ವಾಮಿ? ಯಾಕೆ ಗೊತ್ತಾ? ಕನ್ನಡದ ಮುಗ್ಧ ಮಕ್ಕಳಿಗೆ ಕಡ್ಡಾಯವಾಗಿ ಹಿಂದಿ ಕಲೀಲೇಬೇಕು ಅಂತ ತ್ರಿಭಾಷಾ ಸೂತ್ರ ಅನ್ನೋ ಶಿಕ್ಷೆ ಜಡಿದಿದಾರಲ್ಲ, ಅದೇ ಕಾರಣ! ಇದು ಕಡ್ಡಾಯ ಅಲ್ಲದೆ ಇನ್ನೇನು, ಬುದ್ದಿ?
ಕನ್ನಡದ ಪಠ್ಯಪುಸ್ತಕದಲ್ಲೇ ಹಿಂದೀನ ರಾಷ್ಟ್ರಭಾಷೆ ಅನ್ನೋ ಸುಳ್ಳು ಹೇಳ್ಕೊಟ್ಟು ಹಿಂದೀನ ಕಣ್ಮುಚ್ಚಿಕೊಂಡು ಒಪ್ಕೋಬೇಕು ಅನ್ನೋ ವಾತಾವರಣ ಹುಟ್ಟಿಸಿಬಿಟ್ಟು "ಔರೇ ಸ್ವಂತವಾಗಿ ಕಲೀತಿದಾರೆ" ಅಂದ್ರೆ ಎಲ್ಲೀ ನ್ಯಾಯ ಸ್ವಾಮಿ?
ಕಪ್ರಸಂ ಇಂತೆಂದಿತು:
ಅಖಿಲ ಭಾರತ ಸಂಸ್ಥೆಗಳಲ್ಲಿ ಹಿಂದಿ ಬಳಕೆ ವಿರೋಧಿಸುವ ಚಳವಳಿಯೂ ಇಲ್ಲಿ ಇಲ್ಲ.
ಒಳಗುಟ್ಟನ್ನರಿಯದ ಕಪ್ರಸಂ-ನನ್ನು ಕುರಿತು ಏನ್ಗುರುವು ಇಂತೆಂದನು:
ಕರ್ನಾಟಕದಲ್ಲಿ ಅಖಿಲ ಭಾರತ ಸಂಸ್ಥೆಗಳಲ್ಲಿ ಹಿಂದಿ ಬಳಕೇನ ಯಾರೂ ಯಾಕೆ ವಿರೋಧಿಸ್ತಾ ಇಲ್ಲ ಗೊತ್ತಾ ಮಾಹಾಸ್ವಾಮಿ? ಯಾಕೇಂದ್ರೆ ಹಿಂದಿ ಕಲ್ತ್ರೆ ನಿಮಗೆ ಭಡ್ತಿ ಕೊಡ್ತೀವಿ, ಹಿಂದಿ ಕಲ್ತ್ರೆ ನಿಮಗೆ ಸಂಬಳ ಹೆಚ್ಚಿಸ್ತೀವಿ, ಹಿಂದಿ ಕಲ್ತ್ರೆ ನಿಮಗೆ ಚಾಕ್ಲೇಟ್ ಕೊಡ್ತೀವಿ, ನಿಮಗೆ ಲಾಲಿಪಪ್ಪು ಕೊಡ್ತೀವಿ ಅಂತ ಆಸೆ ತೋರ್ಸಿ ಕೂಡ್ಸಿದಾರಲ್ಲ, ಅದೇ ಕಾರಣ ಸ್ವಾಮಿ! ಇಷ್ಟೆಲ್ಲಾ ಆಮಿಷ ತೋರಿಸಿದರೆ ಪಾಪ ಆ ಸಂಸ್ಥೆಗಳ ಒಳಗೇ ಯೇಗಬೇಕಾಗಿರೋ ಕನ್ನಡಿಗರು ಹೇಗೆ ತಾನೆ ಚಳುವಳಿ ಮಾಡಾರು ಬುದ್ದಿ? ಬಡವ, ನಾ ಮಡಗಿದಂಗೆ ಇರ್ತೀನಿ ಅಂತ ಸುಮ್ನೆ ಕೂತೌರೆ ಬುದ್ದಿ! ಇಷ್ಟೂ ಅರ್ಥ ಆಗಿಲ್ವಾ ನಿಮಗೆ?
ಕಪ್ರಸಂ ಇಂತೆಂದಿತು:
ರಾಜ್ಯದಲ್ಲಿ ಸದ್ಯಕ್ಕೆ ಹಿಂದಿ ಹೇರಿಕೆಯ ವಾತಾವರಣ ಇಲ್ಲ. ಆದರೆ ಹಿಂದಿಗೆ ಉತ್ತೇಜನ ನೀಡುವ ವ್ಯವಸ್ಥೆ ಇದೆ. ಅದೇ ಸರಿಯಾದ ನೀತಿ.
ತರವಲ್ಲದ ತಂಬೂರಿ ಸ್ವರವನ್ನು ಬಾರಿಸಿದ ಕಪ್ರಸಂ-ನನ್ನು ಕುರಿತು ತುಸು ಕೋಪಗೊಂಡು ಏನ್ಗುರುವು ಇಂತೆಂದನು:
ತಕ್ಕೋ! ಬುಟ್ಬುಟ್ರು ಪದಗಳಲ್ಲಿ ನಿಜಾಂಶವನ್ನ ತೇಲಿಸಿಬಿಡೋ ವಾಕ್ಯಾನ! ಅಲ್ಲಾ, ಹೇರಿಕೆಗೂ ಉತ್ತೇಜನಕ್ಕೂ ವೆತ್ಯಾಸವಾದ್ರೂ ಏನೆಂದು ಹೇಳುವಂತವನಾಗು ಓ ಪದಪ್ರಯೋಗವಿಶಾರದನೆ! "ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕು ಕೊಲೆ ನಡಿಯಬೇಕು ಎಂಬ ಹೇರಿಕೆ ಇಲ್ಲ" ಅನ್ನೋ ವಾಕ್ಯಕ್ಕೂ "ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕು ಕೊಲೆ ನಡೆಯುವುದಕ್ಕೆ ಉತ್ತೇಜನ ನೀಡುವ ವ್ಯವಸ್ಥೆ ಇದೆ" ಅನ್ನೋ ವಾಕ್ಯಕ್ಕೂ ಏನು ವೆತ್ಯಾಸ ಅಂತ ಒಸಿ ತಿಳಿಸಿಕೊಡಿ ಬುದ್ದಿ!
ಈ ನಾಟಕಗಳ್ನ ಬಿಟ್ಟು, ನಿಜದಿಂದ ದೂರ ಹೋಗದೆ ನಿಂತು ನೋಡಿ, ನಿಮಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ, ಮಾರುಕಟ್ಟೆಯಲ್ಲಿ, ಗ್ರಾಹಕಸೇವೆಯಲ್ಲಿ, ಮನರಂಜನೆಯಲ್ಲಿ - ಪ್ರತಿಯೊಂದರಲ್ಲೂ ನಡೀತಿರೋ ಹಿಂದಿ ಹೇರಿಕೆ ಕಣ್ಣಿಗೆ ಕಾಣತ್ತೆ. ಈ ಹಿಂದಿ ಹೇರಿಕೆ ಅನ್ನೋದು ಕನ್ನಡಿಗರ ಮೇಲೆ ಬಿದ್ದಿರೋ ಒಂದು ಶಾಪ. ಇದರಿಂದ ಕನ್ನಡಕ್ಕೆ ಕನ್ನಡನಾಡಿನಲ್ಲೇ ಸಾರ್ವಭೌಮತ್ವ ಇಲ್ಲದಂತಾಗಿದೆ. ಇದರಿಂದ ಕನ್ನಡಿಗನಿಗೆ ತನ್ನ ನುಡಿಯ ಬಗ್ಗೇನೇ ಕೀಳರಿಮೆ ಹುಟ್ಟಿದೆ, ತನ್ನ ನಾಡಿನ ಬಗ್ಗೇನೇ ಕೀಳರಿಮೆ ಹುಟ್ಟಿದೆ.
ಇದು ಯಾವ ರೀತೀಲೂ "ಸರಿಯಾದ ನೀತಿ" ಖಂಡಿತ ಅಲ್ಲ! ಇದನ್ನ "ಸರಿಯಾದ ನೀತಿ" ಅಂತ ಒಪ್ಕೊಳೋದೂ ಒಂದೆ, ಪ್ರತಿಯೊಬ್ಬ ಕನ್ನಡಿಗಾನೂ ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳ್ಕೊಳೋದೂ ಒಂದೇ! ಆದ್ದರಿಂದ ಈ ಹಿಂದಿ ಹೇರಿಕೆಗೆ ಒಂದು ಚೂರೂ ಸೊಪ್ಪು ಹಾಕಬಾರದು!
6 ಅನಿಸಿಕೆಗಳು:
ಈ ಕಪ್ರದ ರಂಗನಾಥ್, ಆ ವಿಕದ ಭಟ್ರು ಇವ್ರು ಮತ್ ಇಂಥವ್ರುನ್ ನೋಡುದ್ರೆ ಅಯ್ಯೋ ಅನ್ಸುತ್ತೆ. ಎಲ್ರೂ ಅದೇ ಹುಸಿ ರಾಷ್ಟ್ರೀಯವಾದಾನ ನಂಬಿರೋರು.ಪಾಪ,ತುಂಬ ದೇಶಭಕ್ತಿ ಇದೆ ಈ ಬಲವಂತರಿಗೆ. ಆದ್ರೆ ಅವರು ನಂಬಿ ನಡೀತಿರೋ ದಾರೀಲ್ ಹೋದ್ರೆ ದೇಶ ಒಡೆದು ಹೋಗುತ್ತೆ ಅನ್ನೋ ಪ್ರಜ್ಞೆ ಇಲ್ಲದವರು. ಯಾರ ಮೇಲೂ ಏನನ್ನೂ ಹೇರಕ್ ಆಗಲ್ಲ, ಹೇರಕ್ ಪ್ರಯತ್ನ ಪಟ್ರೆ ಪ್ರತಿರೋಧ ಹುಟ್ಟುತ್ತೆ ಅನ್ನೊ ಗ್ನಾನ ಇಲ್ದವ್ರು. ಇವ್ರುಗೆಲ್ಲಾ ದೇಶ, ಒಕ್ಕೂಟ, ಒಕ್ಕೂಟದಲ್ಲಿ ಸ್ವಾಯತ್ತತೆ ಅಂದ್ರೆ ಏನು ಅಂತೆಲ್ಲಾ ಯೂರೋಪಿನಂತಹ ಪ್ರದೇಶಗಳಿಗೆ ಕರ್ಕೊಂಡು ಹೋಗಿ ತೋರಿಸ್ಬೇಕು. ಇವ್ರು ಮತ್ ಇವ್ರಂಥೋರು ಮಾಡ್ತಿರೋ ಕೆಲ್ಸದಿಂದ ಕನ್ನಡದವರಿಗೆ ಕೆಲ್ಸ ಸಿಗ್ತಿಲ್ಲ, ಬದುಕು ಮೂರಾಬಟ್ಟೆ ಆಗ್ತಿದೆ ಅಂತ ಗೊತ್ತೇ ಆಗ್ತಿಲ್ಲ ಇವರುಗಳಿಗೆ. ಸೋತ ಜನ...ತಾವೂ ಕೆಟ್ಟು ನಾಡನ್ನೂ ಕೆರಹಿಡ್ಸಕ್ ಹೊಂಟಿವೆ...
ಧಿಕ್ಕಾರ ಇಂಥ ಹುಸಿ ರಾಷ್ಟ್ರೀಯವಾದಿಗಳಿಗೆ.
ಎನ್ ಸರಿಯಾಗಿ ಬರೆದಿದಿರ..ನಾವೆಲ್ಲ ರಾಶ್ತ್ರಿ...still I've to get used to typing in Baraha. This Ranganath and other pseudo Nationalists don't seem to understand that Kannadigas are the only ones speak Rashtriya Language in north or south of Karnataka. Let them write the same in Tamilnadu and save their ass.
With current environment everyone has become Pseudo Secular, Pseudo Intellectual , Pseudo Nationalist !
saiyagi bardiddira guru.... naanu aa article odi confuse aagbittidde... ee paper-avre swalpa hindina promote maadthare. kannada prabha headlinesalle avru hindi padagalna seristhare... inthavrindle naav heegaagirodu... naavella seri sariyaagi buddi kalsbeku intha nan maklige..
ತುಂಬ ಚೆನ್ನಾಗಿ ಬರಿದಿದ್ದೀರ ಗುರು.. ನನಗೆ ನಾನೇ ನಗು ನಗುತ್ತ ಓದಿ ಮುಗಿಸುವಷ್ಟರಲ್ಲಿ, ನಿಮ್ಮ ಸಂದೇಶ ತಾನಾಗಿಯೆ ತಲೆ ಒಳಗೆ ಹೋಗಿತ್ತು..
ಕನ್ನಡದ ಬಗ್ಗೆ ಬರೀಬೇಕು.. ಎಷ್ಟು ಬರೀಬೇಕು ಅಂದ್ರೆ.. ಗೂಗಲ್ ನಲ್ಲಿ ಕನ್ನಡ ಅಂಥ ಟೈಪ್ ಮಾಡಿದ್ರೆ... ಬರೀ ನಮ್ಮ ಬರಹಗಳೇ ಎದ್ದು ನಿಲ್ಲಬೇಕು.. ಮತ್ತು ಹಿಂದಿ ಹೇರಿಕೆಗೆ ಕರ್ನಾಟಕದಲ್ಲಿ ಎಳ್ಳಷ್ಟೂ ಜಾಗ ಇಲ್ಲ ಅಂತ ಓದಕ್ಕೆ ಸಿಗಬೇಕು. ಕನ್ನಡಿಗರು ಜಾಗೃತರು ಅಂತ ಎಲ್ಲರಿಗೂ ಸರ್ಯಾಗಿ ಮನದಟ್ಟಾಗಬೇಕು.
hesarige kannada patrikegalu, praachara hindi-samskruta, thoo naaDadrohidagla.
saayutide nimma nuDui O kannaDada kandarira
horanuDiya horeyinda kusidu kuggi
raajanuDiyendeondu, raashtranuDiyondendu, devanuDiyondendu hatti-jaggi
niriniTilu nitilendu mudimoole muriyutide
kannaDammana bennu baLuki baggi
koogekoLLalu kooDa balavilla makkaLe
baimuchchi hiDidiharu kelaru nuggi
- KUVEMPU
swalpa yochisi nodi, sadhyake hindiyannu rashtra bhaashe anta oppikondare, mikka naadina bhaashegalige hege anyaya aaguttade andare, neevu horadeshakke hodaga nimma rashtreeyate bharatiya aagirutade aa deshada bhaashe hindi antaadare, nimmannu hindi-bhaashiganendu gurutisuttaare, adu namage beka, namma bhaashe kannada, karnataka huttiddu swatantrya sikkamelalla, adu hindinindaloo ittu, adannu hindiyavarenu danavaagi kottidalla, ella raajyagalannu hege swatantra bandamele bhaashe aadharisi maadidaro haage hindi kooda aagide. ellaru sampurna swatantrakkagi horadidare horatu bhaashe athava raajakeeyakke maatra horadalilla. gandhiji hindiyannu rashtra bhaashe maadabekendu heliddare endu kelavu hindi krimigalu adannu durupayoga paDedukonDu, janaralli gandhiyavara bagge iruva gowravavannu durupayoga maadikolluttiddare. gandhiyavaru ahimse haagu madhyapaana/dhoomapaanavannoo virodhisiddaru, haagiddamele police/military kaiyalli laaThi/bandooka yake? ishtondu madhya tayarisuva kaarkhanegalu/maaruva angaDigaleke? RSS hindi para prachara maaDuvaga gandhi/neharu hindi-para chintanegalannu upayogisuttade aadare mikka vishyagalalli saada avaribbarabagge apaprachara maaduttiruttade. hindi priyara prachara hegiruttade annuvudakke idondu udaaharane. innu gandhiyavaru makkalige maatrubhaasheye shikshana maadhyama aagabeku anta heliddare, aadare kendra sarkara maatra kendriya vidyaalagalnnu teredu, CBSE, ICSE hesarinaali hindige maatra prachara koduttide, yaake? idella hindi bhaashigara kutantra.
hindiyannu bere deshagaLalli bharatada rashtrabhaashe endu apaprachara maadi alliyavarril hindiyannu ee deshada raashtrabhaashe endu kaliyalu avakaasha maaDiddare, heegaagi sahajavaagi hindi chitragalu/saahityakke dodda prachara sikku uttama maarukatte odagide. adara badalu bhaaratadalli istu raajyagalive avakke tammade aada rajya bhaashe ide, ee ella bhaashegaloo namma rashtra bhaashegale endu prachara kottiddare, mikkella bhaashegala samskruti/chitragalu/saahityaprachara hechchaguttittu. eega endagide heli? tamilu, kannada, bengali, muntaada bhaashegala chitragalu, videshadalli bidugade aadaroo, avannu noDuva bahumandi aya bhashigare hechchu. aadare hindi aareetiyalla, bhaaratada rashtra bhaashe anta sahajavaagiye videshiyaroo kaliyalu aasakti hondiruttare, aaddarinda hindi chitra/saahityada bagge tiliyalu chitragaLannu noDuttare. kale ellrannu seleyaballudu, videshiyaru aaga hindi kalvidarabagge/saahitagalabagge abhimaanigalaaguvudu sahaja, aaga hindi kalavidarige/saahitigalige vishva mannane siguttage. bhaaratadallaaga hindi kalavidara ee saadhneyannu eggillade pracharakoduttare,aaga mikka bhaashigaru hindiyavaru hero-galu nammavarige antha mannane illa, hindi andre antarrashtriya mannane ide, namma bhaashege yaavude mannane illa, heegagi hindi rashtrabhaasheyagalu yogya, namma bhaashy naalayakku emba keelarime hutti hindi kalikege/prachaarakke nilluttare. horadeshagalalli nadeyuva bhaarateeya chitrotsavakke hindiyadde kaarubaaru, mikka bhaashegalendare asadde.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!