ಇಲ್ಲಿ ಯಾರು ಕುಂಬ್ಳೆ ಅಂದ್ರೆ? ಕೈ ಎತ್ತಿ!

ಕನ್ನಡಿಗ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ತಡವಾಗಾದ್ರೂ ಆಯ್ಕೆಯಾಗಿರೋದು ಹೆಮ್ಮೆ ತಂದಿದೆ ಗುರು! ಕುಂಬ್ಳೆಗೆ ಈ ಹೊಸ ಜವಾಬ್ದಾರಿಯಲ್ಲೂ ಯಶಸ್ಸು ಸಿಗಲಿ! ಅಂದಹಾಗೆ, ಅನಿಲ್ ಕುಂಬ್ಳೆಗೆ ಈ ಸ್ಥಾನ ಅಷ್ಟು ಸಲೀಸಾಗೇನು ದಕ್ಕಿಲ್ಲ. ನಾಯಕನ ಸ್ಥಾನಕ್ಕೆ ಏರಿದ ಕುಂಬ್ಳೆ ಸಾಗಿದ ದೂರ ಬಹಳ, ಸವೆಸಿದ ದಾರಿನೂ ದೂರದ್ದು. ಈ ಹಾದೀಲಿ ಸಾಗ್ತಾ ಸಾಗ್ತಾ ಕುಂಬ್ಳೆ 118 ಟೆಸ್ಟ್ ಪಂದ್ಯಗಳ್ನ ಆಡಿದಾರೆ, 566 ವಿಕೆಟ್ ಉರುಳಿಸಿ ಭಾರತದ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಕೂಡಾ ಆಗಿದಾರೆ, ಉಪನಾಯಕನಾಗಿ ಆಡಿ ಅನುಭವಾನೂ ಪಡೆದಿದಾರೆ.

ವೆಸ್ಟ್ ಇಂಡೀಸ್ ಎದುರು ಒಂದು ಪಂದ್ಯದಲ್ಲಿ ಚೆಂಡೇಟು ಬಿದ್ದು ದವಡೆ-ಮೂಳೆ ಚದರಿ ಹೋದಾಗ್ಲೂ ಬೌಲ್ ಮಾಡಿದ ಅನಿಲ್ ಕುಂಬ್ಳೆ, ಬದ್ಧತೆಗೊಂದು ಹೊಸ ಭಾಷ್ಯ ಬರೆದದ್ದು ಕ್ರಿಕೆಟ್ ಇರೋವರೆಗೂ ಮರೆಯಕ್ಕಾಗದೇ ಇರೋ ವಿಷ್ಯ! 1999ರಲ್ಲಿ ಪಾಕಿಸ್ತಾನದ ಜೊತೆ ಆಡಿದ ಪಂದ್ಯದ ಒಂದು ಇನ್ನಿಂಗ್ಸ್ ನಲ್ಲಿ ಹತ್ತೂ ವಿಕೆಟ್ ಗಳನ್ನು ಕಬಳಿಸಿದ ಆ ಆಟ ಅನಿಲ್ ಕುಂಬ್ಳೆಯ ದೈತ್ಯ ಪ್ರತಿಭೆಗೆ ಹಿಡಿದ ಕನ್ನಡಿ ಗುರು! ಕುಂಬ್ಳೆ ತಂಡದ ನಾಯಕನಾಗಕ್ಕೆ ಕಾರಣ ಬರೀ ಆತನ ಪ್ರತಿಭೆಯೊಂದೇ ಕಾರಣ ಅಲ್ಲ; ಅದರ ಜೊತೆ ಜೊತೆಗೇ ಸಕ್ಕತ್ ಪರಿಶ್ರಮ, ಬಿಡುವಿಲ್ದಿರೋ ಪ್ರಯತ್ನ, ಛಲ ಮತ್ತು ಆಟಕ್ಕೆ ಬದ್ಧತೆಗಳು ಬಹಳ ಪಾತ್ರ ವಹಿಸಿವೆ.

ಕನ್ನಡ ನಾಡು ಏಳಿಗೆ ಹೊಂದಕ್ಕೆ ಇವತ್ತು ನಮ್ಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ, ಉದ್ದಿಮೆ, ಮನರಂಜನೆ, ಶಿಕ್ಷಣ, ರಾಜಕಾರಣ... ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕುಂಬ್ಳೆಗಳು ಬೇಕು. ಆ ಛಲವಂತ ಬೇರೆಲ್ಲೂ ಇಲ್ಲ, ಕನ್ನಡಿಗ ಕನ್ನಡಿ ಮುಂದೆ ನಿಂತ್ರೆ ತಾನೇ ಕಾಣ್ಸ್ತಾನೆ! ಏನ್ ಗುರು?

4 ಅನಿಸಿಕೆಗಳು:

Madhu ಅಂತಾರೆ...

Nammellara hemmeya Kannadiga Anil Kumblege nayakathva sikkirodhu bahala santhoshada vishaya.

Anonymous ಅಂತಾರೆ...

good.

ಶ್ರೀನಿಧಿ ಅಂತಾರೆ...

ಅನಿಲ್ ಕುಂಬ್ಳೆಗೆ ಇದ್ದ ಅರ್ಹತೆಗೆ ಇದು ಬಹಳ ತಡವಾಗಿ ಬಂದಿದೆ, ಆದರು ಅದನ್ನೆಲ್ಲ ಕ್ರೀಡ ಸ್ಪೂರ್ತಿಯಿಂದ ತೆಗೆದುಕೊಂಡು ಯಾರನ್ನು ದೂಷಿಸದೆ ತನ್ನ ಸೇವೆಯನ್ನು ಸಲ್ಲಿಸುತ್ತಿರುವ ಅನಿಲ್ ಗೆ ಶುಭವಾಗಲಿ!!!!!!!! ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವಂತಾಗಲಿ.

Amarnath Shivashankar ಅಂತಾರೆ...

Anil kumble kannada naaDina vijaya pathaakeyannu haarisida kelavaralli pramukharu ennabahudu.
intaha world class spinnergaLu iDi prapanchadallE beraLeNikeyashtu.
kumble kannaDiga aada onde kaaraNakke cricket rangakke paadarpaNe maaDI 17 varshagaLa nantara captain agta irodu.
kannaDirige ella ksetragaLallu anyaayavaagide.
kumble naayakanaagi uttama kelasa maaDi, tanDavannu munnaDesuttare annuvudu nanna nambike, mahadaase

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails