ದೀಪಿಕಾ ಕಳೆದುಕೊಂಡ ಐಶ್ವರ್ಯ!

ದೀಪಿಕಾ ಪಡುಕೋಣೆ ತನ್ನ ಮೊದಲ ಚಿತ್ರ ಇತ್ತೀಚೆಗೆ ಬಂದ ಯಾವುದೋ ಹಿಂದಿ ಚಿತ್ರ ಅಂತ ಸುಳ್ಳು ಹೇಳಿಕೊಂಡು ತಿರುಗ್ತಿದಾಳೆ ಅಂತ ಎಲ್ಲೆಲ್ಲೂ ಸುದ್ದಿ. ಅಲ್ಲ - ಇದೆಂಥಾ ರೋಗ? ಉಪ್ಪಿ ಜೊತೆಗೆ "ಐಶ್ವರ್ಯ" ಅನ್ನೋ ಕನ್ನಡ ಚಿತ್ರದಿಂದ ತೆರೆಗೆ ಬಂದೋಳಿಗೆ ತನ್ನ ಅಭಿನಯದ ಮೊದಲ ಚಿತ್ರ ಕನ್ನಡದ್ದು ಅಂತ ಹೇಳೋಕ್ಕೆ ಕೀಳರಿಮೆ ಯಾಕಿರಬೇಕು? ತಾನು ಮೇಲೆ ಹತ್ತಕ್ಕೆ ನೆರೆವಾದ ಕನ್ನಡದ ಏಣಿಗೆ ಗೌರವದಿಂದ ನಮಸ್ಕರಿಸೋ ಬದಲು ಕಾಲಿನಿಂದ ದಬ್ಬಿದಾಳಲ್ಲ ಗುರು?

ತಾನು ಯಾರು, ತನ್ನ ನಾಡು ಯಾವುದು, ತನ್ನ ನುಡಿ ಯಾವುದು ಅನ್ನೋದರ ಬಗ್ಗೇನೇ ಕೀಳರಿಮೆ ಇಟ್ಟುಕೊಂಡು ಅದನ್ನೆಲ್ಲ ಮುಚ್ಚಿಹಾಕೋಂಥೋರು ನಾಡಿನ ಮಟ್ಟಿಗೆ ಸತ್ತ ಲೆಕ್ಕವೇ. "ಐಶ್ವರ್ಯ" ಚಿತ್ರದಲ್ಲಿ ಏನಾದರೂ ಈ ಉಂಡಮನೆಗೆ ಎರಡು ಬಗೆಯೋಳ್ನ ನೋಡಿ ಖುಷಿ ಪಟ್ಟಿದ್ದರೆ ಇವತ್ತಿಗೆ ಆ ಖುಷೀನೆಲ್ಲ ಸೇರಿಸಿ ಸುಟ್ಟಾಕಬೇಕು ಗುರು!

ದೀಪಿಕಾ ಪಡುಕೋಣೆ, ನೀನೇ ನಿನ್ನ ತಪ್ಪು ತಿದ್ದುಕೊಳ್ಳೋ ದಿನ ಹೆಚ್ಚು ದೂರ ಇಲ್ಲ! ಒಂದು ದಿನ ಬರತ್ತೆ, ಆಗ ನಿನಗೆ "ಐಶ್ವರ್ಯ"ವೂ ನೆನಪಾಗತ್ತೆ, ನಿನ್ನ ನುಡೀನೂ ನೆನಪಾಗತ್ತೆ, ನಿನ್ನ ನಾಡೂ ನೆನಪಾಗತ್ತೆ. ನಿನ್ನ ಐಶ್ವರ್ಯವೆಲ್ಲವೂ ಹಾಳಾಗಿ ನೀನು ಕನ್ನಡಾಂಬೆಯ ಕಾಲಿಗೆ ಬಿದ್ದು ಕಣ್ಣೀರಿಡುವ ದಿನ ಬರತ್ತೆ, ಕಾದು ನೋಡು!

22 ಅನಿಸಿಕೆಗಳು:

Anonymous ಅಂತಾರೆ...

ade vidya balan, madhavan, avarenna ella nodi avaru thammanna Tamil origina antha helkotare. Avaru TN nalli hutti beleyade idru. ide nammavarige itararige iro vyatyasa .. - Dhanyasi

Unknown ಅಂತಾರೆ...

ee dabba heroin galige saayo kaalakke neeru bidokke kannada chitraranga beku guru,anyways naavanthu avalu maadiro "Om shanthi om" film nodtha illa,avalu maadida yavdu hindi cinima bedaa..

Shame shame deepika...

Anonymous ಅಂತಾರೆ...

ಒಂದು ಹಿಂದಿ ಚಿತ್ರದಲ್ಲಿ ನಟಿಸಿದ್ದಕ್ಕೇ ಇಷ್ಟು !! ಒಂದೆರಡು ಚಿತ್ರಗಳಲ್ಲಿ ನಟಿಸಿ ಕೊನೆಗೆ ಐಟಂ ಗರ್ಲ್ ಆಗಿ ಹಿಂದಿಯಲ್ಲಿ ಉಳಿದರೂ ಪರ್ವಾಗಿಲ್ಲ ಆದ್ರೆ ಕನ್ನಡ ಚಿತ್ರದಲ್ಲಿ ನಟಿಸಿದ್ದೆ, ನಾನು ಕನ್ನಡದವಳು ಅಂತ ಹೇಳ್ಕೋಳೊಲ್ಲ ಇಂತವ್ರು. ಈಕೆಯ ಮುಂದಿನ ಚಿತ್ರಗಳು ತೋಪಾಗಲಿ ಎಂದು ಎಲ್ಲ ಸ್ವಾಭಿಮಾನಿ ಕನ್ನಡಿಗರ ಹಾರೈಕೆ. ಸುಮ್ನೆ ಇಂತವರನ್ನ ಕನ್ನಡದವ್ರು ಅಂತ ಮೆರೆಸೋದನ್ನ ನಮ್ಮ ಮಾಧ್ಯಮಗಳು ಬಿಡಬೇಕು.

ಈ ಭಾಷಾ ಕೀಳರಿಮೆ ಅನ್ನೋದನ್ನ ನಮ್ಮ ಜನರ ಮನಸ್ಸಿನಿಂದ ಕಿತ್ತು ಹಾಕೋದು ಹೇಗೆ ಅಂತಾನೇ ಗೊತ್ತಾಗ್ತಾ ಇಲ್ಲ ಗುರು :(

Lohith ಅಂತಾರೆ...

Houdu guru ad kandita neja....Entavr enda le nam nadige ket hesaru.....Even Daisy Boppana kuda hindi al madidru hag anta kannada martela.......namagu kushi ne nam kannada hudagi bollywood nal star adre ....Adre a abhimana avrg erbeku e soil mel

Anonymous ಅಂತಾರೆ...

buscuit..

Pramod P T ಅಂತಾರೆ...

ಇಂತವ್ರ್ನೆಲ್ಲಾ ಕಟ್ಕೊಂಡು ನಾವ್ ಎನೂ ಮಾಡೊಕ್ಕಾಗಲ್ಲಾ...
ಇಂತವ್ರೆಲ್ಲಾ ಇದ್ರೂ ಅಷ್ಟೆ! ಸತ್ರೂ ಕನ್ನಡಕ್ಕೇನೂ loss ಇಲ್ಲಾ ಬಿಡಿ.

Pramod P T ಅಂತಾರೆ...

ಇಂತವ್ರ್ನೆಲ್ಲಾ ಕಟ್ಕೊಂಡ್ ಎನೂ ಮಾಡೊಕ್ಕಾಗಲ್ಲಾ...
ಇದ್ರೂ ಅಷ್ಟೇ! ಸತ್ರೂ ಕನ್ನಡಕ್ಕೇನೂ loss ಇಲ್ಲಾ ಬಿಡಿ!!

Anonymous ಅಂತಾರೆ...

Haagenu illa ansutte ,,yakandre monne NDTV yalli interview maadovaaga ..naanu kanandadavalu aadrinda nanna first film kannada ne irbeku anta aase ittu anta heliddale..and even bengaluru naanu huttida ooru endoo bidokke sadhya illa antanu heliddale .. idella sumne gossip anta ansutte

Anonymous ಅಂತಾರೆ...

nija guru,, kannada dalli debut maadide andre ivaLa ganTen hogtitto?

intavaranella namma kannada media davaru kannadati annodu shuddha waste...

Anonymous ಅಂತಾರೆ...

Bereyavara swaiccheyalli namage thale haakuvudu olleyadalla. Bahalashtu jana kanadadinda praarambha maadi, hindi filmnalli hejje ittiddare. Avara ginthi nimagella gottu.

Kannadada eradu kaasu herogala jothe natisuvudannu helikolluvudakke yaarige thaane baaye baruthade?

Nandan S R ಅಂತಾರೆ...

ಇದನ್ನೇ ಕೊಬ್ಬು ಅಂತ ಹೇಳೋದು. ಹಿಂದಿಯಲ್ಲಿ ಐಟಂ ಹಾಡುಗಳಲ್ಲಿ ನಟಿಸಿದರು ಪರ್ವಾಗಿಲ್ಲ ಕನ್ನಡದಲ್ಲಿ ನಟಿಸಿದ್ದೇನೆ ಎಂದು ಹೇಳ್ಕೊಳಲ್ಲ. ಇಂಥವರನ್ನ ವದ್ದು ಓಡಿಸಬೇಕು. ಕನ್ನಡ ತಾಯಿ ಇಂಥವರನ್ನ ಹೇಗೆ ಹೆರುತ್ತಾಳೋ ನಾ ಕಾಣೆ.

Srik ಅಂತಾರೆ...

ಕಳಕಳೀಯ ಪ್ರಾರ್ಥನೆ,

ಕನ್ನಡ ಮಾತನಾಡಲು, ಮಾತನಾಡುದನ್ನು ಬಯಸದೆ ಇರುವವರನ್ನು ನಾವು ಯಾಕೆ ಕನ್ನಡಿಗರು ಎಂದು ಅಂದುಕೊಳ್ಳಬೇಕು. ದ್ರಾವಿಡ್ ಗೆ ಹೋಲಿಸಿದಲ್ಲಿ ಪಡುಕೋಣೆ ಎಸ್ಟೋ ರೀತಿಯಲ್ಲಿ ಓಕೆ, ಕನ್ನಡದಲ್ಲಿ ಮಾತನಾಡಲಾದರು ಬರುತ್ತದೆ. ದ್ರಾವಿಡ್ ಬೆಳದ್ದಿದ್ದು ಕನ್ನಡ ನಾಡಲ್ಲಿ ಆದರೆ ಎಂದಾದರೂ ಕನ್ನಡ ಮಾತನಾದಳುಪ್ರಯತ್ನಿಸಿದ್ದು ನೋಡಿದ್ದೀರಾ? ... ನಮಗೆ ಯಾಕೆ ದ್ರಾವಿಡ್ ಮೇಲೆ ಅಸ್ಟು ಗೌರವ?

ಇಂತಿ ನಿಮ್ಮವ
ಶ್ರೀಕಾಂತ್

Anonymous ಅಂತಾರೆ...

ಇಷ್ಟೊಂದು ಕೀಳರಿಮೆ ಯಾಕೆ? ಇಂಥವರು ಹೊರಗಿರೋದೆ ಒಳ್ಳೆಯದು.

ಇತ್ತೀಚೆಗೆ ಹೊರಬಂದ "ಭೇಜಾ ಫ್ರೈ" ಎಂಬ ಯಶಸ್ವೀ ಹಿಂದಿ ಚಿತ್ರದ ನಿರ್ದೇಶಕ/ಬರಹಗಾರ ಸಾಗರ್ ಬಳ್ಳಾರಿ. ಈತ ಅಪ್ಪಟ ಕನ್ನಡಿಗ. ರಾಜ್ಯದ ಹೊರಗೆ ಬೆಳೆದಿದ್ದರೂ ನಾನು ಕನ್ನಡಿಗ ಮತ್ತು ನಾನು ವಿಚಾರ ಮಾಡೋದು ಕನ್ನಡದಲ್ಲೇ ಎಂದು ಬೆಂಗಳೂರಿಗೆ ಬಂದಾಗ ಹೇಳಿಕೆ ಕೊಟ್ಟ. ಕನ್ನಡದಲ್ಲೂ ಒಂದಿನ ಚಿತ್ರ ತಗೆಯುವ ಆಸಕ್ತಿ ತೋರಿಸಿದೆ. ನಮಗೆ ಇಂಥವರು ಬೇಕು. ಮುದ್ದು ಮುಖವನ್ನ ಬಂಡವಾಳವಾಗಿಟ್ಕೋಂಡು ಅದಕ್ಕೆ ಮಣೆ ಹಾಕಿ ಅನ್ನೋ ದೀಪಿಕಾಗಳಲ್ಲ.

Anonymous ಅಂತಾರೆ...

ಗುರುವೆ ಈ ವಿಷಯದಲ್ಲಿ ನೀನು ಎಡವಿದ್ದೀಯ. ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ಧಿ ಯಾವಾಗಲೂ ನಿಜವಲ್ಲ. ದೀಪಿಕಾ ತಾನು ಕನ್ನಡ ಚಿತ್ರಗಳಲ್ಲಿ ನಟಿಸುವುದನ್ನು ಹಿಂದೆ ಹಲವಾರು ಸಲ ಹೇಳಿಕೊಂಡಿದ್ದಾಳೆ. ನಿನ್ನ ಲೇಖನದಲ್ಲಿ “ನಿನ್ನ ಐಶ್ವರ್ಯವೆಲ್ಲಾ ಹಾಳಾಗಿ... ಕಣ್ಣೀರಿಡುವ ಕಾಲ ಬರುತ್ತೆ” ಎಂಬ ಸಿನಿಮಾ ಡೈಲಾಗ್ ಬೇಕಿರಲಿಲ್ಲ.

Sandeep Nataraj ಅಂತಾರೆ...

I think deepika doesnt deserve the blame. I find it hard to believe that she is saying so.
In one to the interviews she said that her mother tongue is kannada and that she doesnt know to speak hindi being from bangalore.
isTu dhairyadinda hindi gothilla anta esTu mandi(bollywood aspirants) heLtaare guru??

Anonymous ಅಂತಾರೆ...

ಗುರುಗಳೆ, ಹಲವಾರು ಕಡೆ ಈ ಬಗ್ಗೆ ಓದಿದಾಗ ನೀವು ಮತ್ತು ಕೆಲ ಓದುಗರು ದುಡುಕಿದ್ದಾರೆ ಅನ್ನಿಸುತ್ತೆ. Rediffನಲ್ಲಿ ಬರೆದದ್ದು ಗಾಸಿಪ್ ಕಾಲಮ್ ತರಾ ಇದೆ. ಮಾಧ್ಯಮದವರು ಬರೆಯೋದೆಲ್ಲಾ ನಿಜಾ ಇರಲ್ಲ. ದೀಪಿಕಾಳಿಗೆ ಕನಿಷ್ಟ benefit of the doubt ಕೊಡಬಹುದಿತ್ತು.

ಅದೇನೇ ಇರಲಿ, ದೀಪಿಕಾ ನಾನು ಕನ್ನಡದವಳು; ಐಶ್ವರ್ಯ ನನ್ನ ಮೊದಲ ಚಿತ್ರ ಎಂದು ಬೇರೆ ಕಡೆ ಹೇಳಿರೋದು ನಿಜಾ ಇದ್ರೆ ಖುಷಿ ತರುವ ವಿಷಯ.

Anonymous ಅಂತಾರೆ...

sandeepa, deepika padukone mother tongue tulu nappa. avaLa native kudla(mangalore). adakke avaLige kannada fluency illa. maneli mathaado bashe tulu.

"Om" heroin prema mothertongue coorgi gottaa?

Anonymous ಅಂತಾರೆ...

correct

Deshpande N.R. ಅಂತಾರೆ...

ನೀವು ದುಡುಕಿದ್ದೀರಾ ಅನಿಸ್ತಾ ಇದೆ. ಹಿಂದಿ ಭಾಷೆಯಲ್ಲಿ ಮೊದಲನೇ ಚಿತ್ರ ಎಂದೂ ಹೇಳಿರಬಹುದು. ಅಂತೆ-ಕಂತೆಗಳ ಮೇಲೆ ಇಷ್ಟೊಂದು ಖಾರವಾಗಿ ಒಬ್ಬರ ಬಗ್ಗೆ ಮಾತನಾಡುವದು ಸರಿಯಲ್ಲ. ಈ ಮಟ್ಟಿಗೆ ಅವರು ಬೆಳೆಯಬೇಕಾದರೆ ಅವರು ಪಟ್ಟ ಶ್ರಮ, ತ್ಯಾಗ ಎಲ್ಲವನ್ನೂ ನೋಡಿದರೆ ನಾವು ಹಗುರವಾಗಿ ಮಾತನಾಡುವದು ಸಮಂಜಸವಲ್ಲ. ಮೇಲಾಗಿ ಅವರೇನೂ ನಮ್ಮ ಹತ್ತಿರ ಕನ್ನಡದ ನಾಗರಿಕ ಪದವಿಯನ್ನು ಬೇಡಿಕೊಂಡೂ ಬಂದಿಲ್ಲ. ಚರ್ಚೆಗೆ ಬೇಕಾದಷ್ಟು ವಿಷಯಗಳು ಇವೆ. ಇಂಥ ವಿಷಯಗಳು ಬೇಕಾ?

Anonymous ಅಂತಾರೆ...

ಪ್ರಸನ್, ನಾಗರಿಕ ಪದವಿ ಕೊಡೋಕ್ಕೆ ನಾವು ಯಾರೂ ಅಲ್ಲ. ಕನ್ನಡಿಗ ಅನ್ನೋದು ಪದವಿ ಅಲ್ಲವೂ ಅಲ್ಲ. ಅದನ್ನು ಕೊಡೋ ಅಧಿಕಾರ ಅಥವಾ ಅವಕಾಶ ಯಾರಿಗೂ ಇಲ್ಲ. ಇದರ ಉದ್ದೇಶ ಪ್ರಸಿದ್ಧ ವ್ಯಕ್ತಿಗಳು ತಮ್ಮ ನೆಲ, ನುಡಿಯ ಬಗ್ಗೆ ಅಭಿಮಾನ್ ಇಟ್ಕೊಂಡು ಬೆಳೆದ್ರೆ ಅದು ಸಾಮಾನ್ಯ ಜನರಿಗೂ ಸ್ಪೂರ್ತಿ ಆಗತ್ತೆ ಅಂತ ಅಷ್ಟೆ.

ಆಮೆಲೆ ಅದೇನೋ ’ತ್ಯಾಗ’ ಅಂದ್ರಲ್ಲಾ ಅದೇನು ಅಂತ ಗೊತ್ತಾಗ್ಲಿಲ್ಲ !! :) :) ಬಟ್ಟೆ ತ್ಯಾಗ ಮಾಡಿದ್ಲು ಅಂತನಾ? ಇದಕ್ಕೆ ’ಶ್ರಮ ’ ಬೇಕೆ ಬೇಕು ಬಿಡಿ(ತಮಾಷೆ) :)

Anonymous ಅಂತಾರೆ...

swabhimaana illada jana namma kannada naaDinalli yaake Huttuttare?

Unknown ಅಂತಾರೆ...

Fantastic Guys, nivella kannadada bagge istondu Abhimana itkondiddira anta keLi khushi aitu, but illi comments barediruvavaralli obbaru kUda 100% kannadadalli comments baredilla yake? nivella kannadigara? if u guys r really kannadiga's then y u people using English? ur's every word should be in kannada.....bereyavara bagge gossip mada badalu nivu mirror munde nitu nodi wat u r anta amele nivu sari iddare bereyavara bagge keelagi matadi...if u r not then don't say any thing wrong about others u don't have any rites to say like that....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails