ಕನ್ನಡ ಚಿತ್ರಗಳಿಂದ ನಾವೇ ದುಡ್ಡು ಮಾಡ್ಕೋಬೇಕು

ಗೋವಾದಲ್ಲಿ ನಡಿತಿರೋ 38ನೇ ಅಂತರ್ರಾಷ್ಟ್ರೀಯ ಚಲನ-ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ಮಿನುಗುತ್ತಿವೆ ಅಂತ ಡೆಕ್ಕನ್ ಹೆರಾಲ್ಡ್ ನಲ್ಲಿ ಸುದ್ಧಿ. ಕನ್ನಡದಲ್ಲಿ ಒಳ್ಳೇ ಚಿತ್ರಗಳು ಇವೆಯಾ, ಅಥವಾ ಇರಕ್ಕೆ ಸಾಧ್ಯ ಇದೆಯಾ, ಜನ ಅದನ್ನು ನೋಡುತ್ತಾರಾ ಅಂತ ಕುಹಕ ಪ್ರಶ್ನೆಗಳ್ನ ಹಾಕೋರಿಗೆ ಈ ವರದಿ ಸರಿಯಾದ ಉತ್ತರ ನೀಡತ್ತೆ ಗುರು!

ಕಳೆದ ಎರಡು ವರ್ಷದಿಂದ ಅನೇಕ ಕನ್ನಡ ಚಿತ್ರಗಳು ಯಶಸ್ಸು ಕಂಡು ಬಂಡವಾಳ ಹಾಕೋರ ಜೇಬು ತುಂಬಿಸಿ ಕನ್ನಡ ಚಿತ್ರಗಳಿಗೆ ಬೇಜಾನ್ ಮಾರುಕಟ್ಟೆ ಇದೆ ಅಂತ ಸಾಬೀತು ಮಾಡಿವೆ. ಅನೇಕ ಯುವ ನಟ-ನಟಿಯರು, ಕಲಾವಿದರು, ತಂತ್ರಜ್ಞರು ಕನ್ನಡ ಚಿತ್ರರಂಗ ಪ್ರವೇಶಿಸಿ ಹೊಸ ಹೊಸ ಪ್ರಯೋಗಗಳ ಮೂಲಕ ಮೆರಗು-ಬೆರಗು ಹುಟ್ಟಿಸಿದ್ದಾರೆ.

ಆದ್ರೆ ಕನ್ನಡ ಚಿತ್ರಗಳಿಗಿರೋ ಮಾರುಕಟ್ಟೆಯಿಂದ ಇವತ್ತಿನ ದಿನ ಎರ್ರಾಬಿರ್ರಿ ದುಡ್ಡು ಮಾಡ್ಬೋದು ಅಂತ ಅರ್ಥ ಮಾಡ್ಕೊಂಡಿರೋ ನಿರ್ದೇಶಕ, ನಿರ್ಮಾಪಕರಲ್ಲಿ ಪರಭಾಷಿಕರು ಸಕ್ಕತ್ ಜನ ಇದಾರೆ ಅನ್ನೋದು ನಮ್ಮ ಮುಟ್ಠಾಳತನದ ಗುರುತು! ನಮ್ಮ ಭಾಷೆಯ ಚಿತ್ರಗಳ್ನ ಮಾಡ್ಕೊಂಡು ನಾವೇ ದುಡ್ಡು ಮಾಡ್ಕೊಳೋ ಯೋಗ್ಯತೇನೂ ನಮಗೆ ಇಲ್ಲವಾ? ನಮ್ಮ ಕನ್ನಡದ ನಿರ್ದೇಶಕ-ನಿರ್ಮಾಪಕರು ದುಡ್ಡು ಸುರಿದು ಒಳ್ಳೊಳ್ಳೇ ಚಿತ್ರಗಳ್ನ ತೆಗೀಬೇಕು, ಕನ್ನಡದ ಮಾರುಕಟ್ಟೆಯಿಂದ ಲಾಭ ಪಡ್ಕೋಬೇಕು. ಈ ಲಾಭಾನೂ ಬೀದೀಲಿ ಹೋಗೋರೆಲ್ಲಾ ಹೊಡ್ಕೊಂಡು ಹೋಗಕ್ಕೆ ಬಿಡಬಾರದು ಗುರು! ಸೋಲಿಗೆ ಹೆದರಿ "ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ" ಆಗದು ಗೆಲುವು ಎಂದೂ ಅಂತ ನಾವು ಅರ್ಥ ಮಾಡ್ಕೋಬೇಕು.

3 ಅನಿಸಿಕೆಗಳು:

Nandan S R ಅಂತಾರೆ...

ನೀವ್ ಹೇಳೋದು ಸರಿ ಗುರು. ನಂ ಕನ್ನಡ ಚಿತ್ರರಂಗದಲ್ಲೇ ಬೇಕಾದಷ್ಟು ಒಳ್ಳೆ ಕಲಾವಿದರಿದ್ದಾರೆ. ಬೇರೆಯವರ ದುಡ್ಡು ಉಪಯೋಗಿಸಿಕೊಂಡು ಅವರಿಗೆ ನಾವ್ ಯಾಕೆ ಲಾಭ ಮಾಡ್ಕೊಡ್ಬೇಕು. ಆ ಲಾಭ ನಮ್ಮದೇ ಆದರೆ ಇನ್ನು ಒಳ್ಳೆ ಚಿತ್ರಗಳನ್ನು ತೆಗೀಬೋದು. ಇದರಿಂದ ಬರೀ ದುಡ್ಡು ಮಾತ್ರ ಬರೋದಿಲ್ಲ, ಜೊತೆಗೆ ನಂ ಕನ್ನಡ ಭಾಷೆ ಕೂಡ ಬೆಳಿಯುತ್ತದೆ.

Amarnath Shivashankar ಅಂತಾರೆ...

igina kannada chitraranga sampoornavaagi real estate navra kainallide..
aasti maari banda duddnalli cinema tegeyodu..cinema dinda baro duddna baDDI ge biDodu heege.
bere oorgaLavru bandu kannada chitra produce madtaare andre adu avara tapalla..illi vyaapaara agatte duddu madtaare.
nammavru business ge kai hakabeku..sumne appa haakid aalada mara anta kootidre enu saadhsakke agalla..

Anonymous ಅಂತಾರೆ...

yashassina suddi yanna namagella hanchi oLLe kelasa maadtidddira gurgaLe. KeLi swalpanaadru santosha aaytu.

kannaDigaru cinema business nallu minchabeku ..

Nidhi

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails