ಕನ್ನಡದಲ್ಲಿ ಎಂ.ಬಿ.ಎ. ಅಂದ್ರೆ ವಿಚಿತ್ರ ಅನ್ನಿಸೋ ವ್ಯವಸ್ಥೆ ರಿಪೇರಿ ಆಗಬೇಕು

ಮೈಸೂರಲ್ಲಿ ರಾಜೀವ ಸರಳಾಕ್ಷ ಅನ್ನೋರು ಒಲ್ಲದ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಜೊತೆಗೆ ಏಗಿ ಏಗಿ ಕೊನೆಗೂ ಕನ್ನಡದಲ್ಲಿ ಎಂ.ಬಿ.ಎ. ಪರೀಕ್ಷೆ ತೊಗೊಂಡು ಪಾಸಾಗಿದಾರೆ ಅಂತ ಪ್ರಜಾವಾಣಿ ಕೆಲವು ದಿನದ ಹಿಂದೆ ವರದಿ ಮಾಡಿತ್ತು. ರಾಜೀವ ಇವತ್ತು ಒಬ್ಬ ವಿಚಿತ್ರ ಮನುಷ್ಯ ಅಂತ ಅನ್ನಿಸೋ ವ್ಯವಸ್ಥೆ ಸರಿಯಲ್ಲ ಗುರು! ನಮ್ಮ ಜನರಿಗಾಗೇ ಇರಬೇಕಾದ ನಮ್ಮ ವಿ.ವಿ.ಗಳು ನಮ್ಮದಲ್ಲದ ಒಂದು ಭಾಷೇಲಿ ಇಂಥಾ ಪದವಿಗಳ್ನ ಪಡ್ಕೋಬೇಕು ಅನ್ನೋ ಪೆದ್ದತನ ನಿಧಾನವಾಗಾದರೂ ನಿಲ್ಲಬೇಕು. ನಿಜವಾದ ಕಲಿಕೆಗೂ ನಮಗೂ ನಡುವೆ ಬೇರೆ ಒಂದು ಭಾಷೆ ಅಡ್ಡಗೋಡೆಯಾಗಿ ನಿಂತಿರೋದು ಸರೀನಾ ಅಂತ ಪ್ರಶ್ನೆ ಮಾಡೋಷ್ಟು ಸ್ವಂತ ಚಿಂತನೇನಾದ್ರೂ ನಮಗೆ ಬರಬೇಕು ಗುರು!

ಇವತ್ತಿನ ದಿನ ಕನ್ನಡದಲ್ಲಿ ಉನ್ನತ ಶಿಕ್ಷಣ ಇಲ್ಲ ಅನ್ನೋದೇನೋ ನಿಜ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಕಲಿಕೆಯಾಗಲಿ ಮ್ಯಾನೇಜ್ಮೆಂಟಿನ ಕಲಿಕೆಯಾಗಲಿ ಇಲ್ಲ ಅನ್ನೋದು ನಿಜ. ಆದ್ರೆ ಇದೇ ವ್ಯವಸ್ಥೆ ಇನ್ನೆಂದೆಂದಿಗೂ ಇರಲಿ ಅಂತ ಒಂದು ರೀತಿ ಸೋಲೊಪ್ಪಿಕೊಂಡಿವೆಯಲ್ಲ ನಮ್ಮ ವಿ.ವಿ.ಗಳು, ಇದೆಷ್ಟು ಸರಿ? ನಮ್ಮ ವಿ.ವಿ.ಗಳ್ನ ನಾವು ಹುಟ್ಟಿಹಾಕಿಕೊಂಡಿರೋದು ನಿಜಕ್ಕೂ ನಮ್ಮ ಲಾಭಕ್ಕೇ ಅನ್ನೋದಾದರೆ ನಮ್ಮ ಜನರ ಭಾಷೆಯಲ್ಲೇ ಕಲಿಕೆಯ ಏರ್ಪಾಡು ಮಾಡೋದು ಇವರ ಗುರಿಯಾಗಬೇಡ್ವಾ ಗುರು?

ನಮ್ಮ ಎಷ್ಟು ವಿ.ವಿ.ಗಳಲ್ಲಿ ಇವತ್ತು ಬೇಡ, ಇನ್ನು ಐವತ್ತು ವರ್ಷದಲ್ಲಾದರೂ ಕನ್ನಡದಲ್ಲಿ ಉನ್ನತಶಿಕ್ಷಣ ಸಿಗೋಹಾಗೆ ಮಾಡಕ್ಕೆ ಯಾವ ಯೋಜನೆಗಳ್ನ ಹಾಕಿಕೊಂಡಿದಾರೆ? ನಿಧಾನವಾಗಿ - ಅಂದ್ರೆ ಇವತ್ತಿನ ಪರಿಸ್ಥಿತಿಯಲ್ಲಿ ಇಂಗ್ಲೀಷಿನ ಶಿಕ್ಷಣ ವ್ಯವಸ್ಥೆಯಿಂದ ಏನು ಪಡ್ಕೋಬೇಕೋ ಅದನ್ನೂ ಕೈಬಿಡದೆ - ಕಲಿಕೆಯ ಸೌಲಭ್ಯವನ್ನ ಕರ್ನಟಕದ ಮುಲೆಮೂಲೆಗಳಲ್ಲಿ ಅಡಗಿರೋ ಪ್ರತಿಭೆಗಳಿಗೆಲ್ಲಾ ಮುಟ್ಟಿಸೋ ಕೆಲಸಕ್ಕೆ ಧೈರ್ಯದಿಂದ ಕೈ ಹಾಕಬೇಕು. ಕನಸೇ ಕಾಣದೆ ಹೋದರೆ ನನಸಾಗೋದು ಹೇಗೆ ಗುರು?

8 ಅನಿಸಿಕೆಗಳು:

Anonymous ಅಂತಾರೆ...

kelavu tingaLugaLa hinde Vi.Ka dallu ide reeti ondu patra vaachakara vijayadalli bandittu. obbaata ondu padaviyannu (sariyaagi nenepilla yaava padavi emdu) correspondance nalli kannaDa maadhyamadalli tegedu kollalu ichcisidda. kannaDa maadhyama adhikrutavaagi idditu kooDa. aadare eshtu tingaLaadaroo avanige kannaDa maadhyamada pustakagaLanne kalislilvante. ivanu bahaLa vichaarisalaagi avaru aangla maadhyama pustakagaLannu kalisidrante. avanu vi.vi. ya adhikaarigaLannu samparikisiddakke, 'nammalli eega kannaDa maadhyamada pustakagaLilla' endu hELi avanannu 'adu sari kannaDa maadhyamadalli odi enu maadbeku ankonDiddiri' endella prashnegaLannu kElidarante !!.

namma janagaLige, namma Vi.Vi gaLige ee vishayadalli aasakti illa andmele enmadokkagutte hELi?

Anonymous ಅಂತಾರೆ...

"ಕನ್ನಡದಲ್ಲಿ ಮಾಡಿ ಉಪಯೋಗ ಏನು ?!" ಎಂದು ಎಲ್ರೂ ಕೇಳ್ತಾರೆ. ಯಾವುದಾರೂ ಕೆಲಸ ಮಾಡುವಾಗ ಎಲ್ರೂ ಅದರಿಂದ ಆಗೋ ಲಾಭದ ಬಗ್ಗೆ ಯೋಚಿಸ್ತಾರೆಯೇ ಹೊರತು ಸುಮ್ನೆ ಅಭಿಮಾನದಿಂದ ಮಾಡೋದಿಲ್ಲ. ಕನ್ನಡದಲ್ಲಿ ಎಂ.ಬಿ.ಎ ಮಾಡಿ ಮುಂದೆ ಅದರಿಂದ ಕೆಲಸ ತಗೋಳ್ಳೋದು ಮತ್ತು ಕಂಪನಿಯಲ್ಲಿ ಕೆಲಸ ಮಾಡೋದು ಕಷ್ಟ ಆಗತ್ತೆ ಅಂತ ಎಲ್ರಿಗೂ ಅನ್ನಿಸುವುದು ಸಹಜ. ಯಾಕಂದ್ರೆ ಈಗಿನ ಎಲ್ಲಾ ವ್ಯವಹಾರಗಳೂ ಇಂಗ್ಲೀಷ್ನಲ್ಲೇ ನೆಡಿತವೆ.

ಕನ್ನಡದಲ್ಲಿ ಮಾಡಿದ್ರೂ ತೊಂದರೆಯಿಲ್ಲ, ಅದರಿಂದಲೂ ಉಪಯೋಗ(ಮುಖ್ಯವಾಗಿ ಕೆಲಸಕ್ಕೆ) ಇದೆ ಅನ್ನೋ ಭರವಸೆ ಜನರಲ್ಲಿ ಬಂದಾಗ ಮಾತ್ರ ನೀವು ಹೇಳಿದಂತೆ ಆಗುವುದು ಸಾಧ್ಯ. ಇಂದು ವಿದೇಶಿ ಸೇವಾ ಆಧಾರಿತ ಕೆಲಸಗಳೇ ಜಾಸ್ತಿ ಇರುವುದರಿಂದ ಇದು ಭಾರೀ ಕಷ್ಟದ ಕೆಲಸ.

ಆದರೆ ಐಚ್ಚಿಕವಾಗಿ ಕನ್ನಡದಲ್ಲಿ ಮಾಡೋ ಆಸೆ ಇದ್ದವರಿಗಾದರೂ ಅದು ಸುಲಭವಾಗಿ ದೊರಕುವಂತೆ ಇರಬೇಕು. ಅದಕ್ಕಾಗಿ ನಮ್ಮ ಸರಕಾರ ಕ್ರಮ ತೆಗೆದುಕೊಳ್ಳಬೇಕಾದ್ದು ಬಹಳ ಮುಖ್ಯ.
ಈಗಾಗಲೇ ಆ ವ್ಯವಸ್ಥೆ ಇದೆ ಅಂತಾದರೆ ಅದಕ್ಕೆ ಸರಿಯಾದ ಪಠ್ಯ ಪುಸ್ತಕಗಳನ್ನು ತಯಾರಿಸಿ ಇಡುವುದು ವಿ.ವಿಗಳ ಕರ್ತವ್ಯ . ಆದ್ರೆ ಅವರನ್ನ ಕೇಳಿ ನೋಡಿ .... ಕನ್ನಡದಲ್ಲಿ ಯಾರು ಮಾಡ್ತಾರೆ ಸಾರ್ ಈಗ?.... ಸುಮ್ನೆ ವೇಸ್ಟು.. ಅದಕ್ಯಾಕೆ ವಿ.ವಿಗಳು ಅಷ್ಟು ಖರ್ಚು ಮಾಡ್ಬೇಕು, ತಲೆಕೆಡಿಸ್ಕೋಬೇಕು ಅಂತಾರೆ..... :(

Anonymous ಅಂತಾರೆ...

ಅಜಯ್, ಎಂಬಿಎ ಮಾಡಿದರೆ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡಲೇಬೇಕು ಎಂದು ಹೇಳಿದವರಾರು? ಕರ್ನಾಟಕದ ಒಳಗೇ ಇದ್ದು ಕರ್ನಾಟಕದ ಕಂಪನಿಗಳಲ್ಲೇ ಇಡೀ ಜೀವನ ಕಳೆಯುವವರಿಗೆ ಯಾರಿಗೂ ಎಂಬಿಎ ಬೇಡ ಎಂದೇನಿಲ್ಲವಲ್ಲ? ಅಂಥವರಿಗಾದರೂ ಕನ್ನಡದಲ್ಲಿ ಮಾಡಲು ಅವಕಾಶ ಇರಬೇಕು. ಉದಾಹರಣೆಗೆ ಒಬ್ಬ ರೈತ ಅಥವಾ ದಿನಸಿ ಅಂಗಡಿ ಇಟ್ಟವನು ಎಂಬಿಎ ಮಾಡಿದರೆ ತನ್ನ ಕೆಲಸ ಇನ್ನಷ್ಟು ಚೆನ್ನಾಗಿ ಮಾಡುವುದಿಲ್ಲವೆ?

Anonymous ಅಂತಾರೆ...

ಎಂ.ಬಿ.ಎ ಗಳ ಅಗತ್ಯವಿರೋ ಕರ್ನಾಟಕದ ಕಂಪನಿಗಳಲ್ಲೂ ವ್ಯವಾರ ಇಂಗ್ಲೀಷ್ನನ್ನೇ ನೆಡಿತವೆ ನೋಡಿ. ಇನ್ನುಳಿದವ್ಕೆ ಎಂ.ಬಿ.ಎ ಗಳು ಬೇಕಾಗೋದೇ ಇಲ್ಲ. ರೈತ, ದಿನ್ಸಿ ಅಂಗಡಿಯವ್ನು ಎಂ.ಬಿ.ಎ ಓದ್ಕ್ಯಂಡು ಇನ್ನೂ ಚೆನ್ನಾಗಿ ಕೆಲ್ಸ ಮಾಡ್ತಾನೆ ಅಂದಿದ್ದಕ್ಕೆ ನಗ್ಬೇಕೋ ,ಅಳ್ಬೇಕೋ ಗೊತ್ತಾಗ್ತಿಲ್ಲ.
ನಾನು ಜೆನೆರಲ್ಲಾಗಿ ಜನ ಯೋಚ್ನೆ ಮಾಡೋ ಬಗ್ಗೆ ಹೇಳ್ದೆ ಅಷ್ಟೆ. ಕನ್ನಡದಲ್ಲಿ ಮಾಡೋ ಇಷ್ಟ ಇದ್ದೋರಿಗೆ ಅವಕಾಶ ಇರ್ಲೇ ಬೇಕು ಅಂತ ಕೊನೋ ಪ್ಯಾರಾದಲ್ಲಿ ಹೇಳಿದಿನಲ್ಲಾ ಗುರು.

Anonymous ಅಂತಾರೆ...

"ಎಂ.ಬಿ.ಎ ಗಳ ಅಗತ್ಯವಿರೋ ಕರ್ನಾಟಕದ ಕಂಪನಿಗಳಲ್ಲೂ ವ್ಯವಾರ ಇಂಗ್ಲೀಷ್ನನ್ನೇ ನೆಡಿತವೆ ನೋಡಿ. ಇನ್ನುಳಿದವ್ಕೆ ಎಂ.ಬಿ.ಎ ಗಳು ಬೇಕಾಗೋದೇ ಇಲ್ಲ."

>>>>>>> ಅಲ್ಲ ರೀ ಸ್ವಾಮಿ, ನಿಮ್ಮ ತರ್ಕಕ್ಕೆ ಬಡ್ಕೋಬೇಕು! ಎಂಬಿಎ ಅಗತ್ಯವಿರೋ ಕಂಪನಿಗಳ್ನ ಬಿಟ್ಟು ಬೇರೆಯವಕ್ಕೆ ಎಂಬಿಎ ಗಳು ಬೇಕಾಗಿಲ್ಲ ಅಂತ ಚಿಕ್ಕ ಮಗು ತರ ವಾದ ಮಾಡಕ್ಕೆ ನಾಚಿಕೆಯಾಗಬೇಕು ನಿಮ್ಗೆ!

"ಎಂಬಿಎ ಗಳ ಅಗತ್ಯವಿರೋ ಕರ್ನಾಟಕದ ಕಂಪನಿಗಳಲ್ಲೂ ವ್ಯವಾರ ಇಂಗ್ಲೀಷ್ನಲ್ಲೇ ನಡೀತವೆ" ಅಂತ ಪೆದ್ದಪೆದ್ದಾಗಿ ವಾದ ಮಾಡ್ತೀರಲ್ಲ, ಎಂಬಿಎ ಅಗತ್ಯವಿರೋ ಕಂಪನಿಗಳು ಅಂದ್ರೆ ಯಾವುವು ಅಂತ ಸ್ವಲ್ಪ ವಿವರ್ಸಿ ಹೇಳಿ! ಏನು ಎಂಬಿಎ ಅಂದ್ರೆ ಅಂತ ಒಂದು ಹುಲ್ಲುಕಡ್ಡಿಯಷ್ಟಾದರೂ ಗೊತ್ತಾ ನಿಮಗೆ?

ನಮ್ಮ ರೈತ, ದಿನಸಿ ಅಂಗಡಿಯೋರಿಗೆ ಎಂಬಿಎ ಬೇಡ ಅಂತ ವಾದಿಸೋ ನಿಮ್ಮಂಥಾ ಮೂರ್ಖಶಿಖಾಮಣಿಗಳಿಂದ್ಲೇ ಇವತ್ತಿನ ದಿನ Monsanto ಅನ್ನೋ ಕಂಪನಿಯ ಎಂಬಿಎ ಗಳು ನಿಮ್ಮ ಬಾಗಿಲ ತನಕ ಬಂದು ನಿಮಗೇ ಬೀಜ ಮಾರ್ತಿರೋದು! ನಿಮ್ಮಂಥಾ ಹತ್ತಿರದ-ದೃಷ್ಟಿಯ ರೋಗ ಇರೋರಿಂದ್ಲೇ ಇವತ್ತು WalMart ನಂಥಾ ದಿನಸಿ ಅಂಗಡಿಗಳ ಎಂಬಿಎ ಗಳು ಬಂದು ಬೀದಿಬೀದಿಗಳಲ್ಲಿರೋ ದೇಸಿ ದಿನಸಿ ಅಂಗಡಿಗಳ್ನ ಮುಚ್ಚುಸ್ತಿರೋದು.

ನಿಮ್ಮ ಪೆದ್ದತನಕ್ಕೆ ನಾನು ಅಳಬೇಕೋ ನಗಬೇಕೋ ಗೊತ್ತಾಗಲ್ಲ.

Anonymous ಅಂತಾರೆ...

ಬಂಡವಾಳಶಾಹಿ ಬುದ್ಧಿಯ ಪ್ರತಿರೂಪ ಇದ್ದಂಗಿದಿರಾ. ಯಾವುದೋ ಎಂಬಿಎ ಕಾಲೇಜಿನವರಿರ್ಬೇಕು ನೀವು. ಜನ ಬೇಕಾಗಿದಾರಾ? :) ಅಗತ್ಯವಿಲ್ಲದೇ ಇರೋದನ್ನ ತಂದು ನಿಮಗೆ ಇದು ಬೇಕು ಇಲ್ಲಾಂದ್ರೆ ಬದುಕಲ್ಲ ನೀವು ಅಂತ ಭಯ ಹುಟ್ಟಿಸಿ ಬೇಳೆ ಬೇಯಿಸಿಕೊಳ್ಳೋರು. ರೈತಂಗೆ ಅಥವಾ ಇನ್ಯಾರಿಗೇ ಆದರೂ ಎಂಬಿಎ ಬೇಕಾಗೋಲ್ಲ ಅನ್ನೂದು ಎಷ್ಟು ಸತ್ಯವೋ ಹಾಗೆ ಎಂಬಿಎ ಮಾಡಿದವ್ನು ನಂತರ ರೈತನಾಗೋಲ್ಲ ಅನೋದು ಅಷ್ಟೆ ಸತ್ಯ. ಅಂದಹಾಗೆ ನೀವು ಕನ್ನಡದಲ್ಲೇ ಎಂಬಿಎ ಮಾಡಿ ಆಮೇಲೆ ಎಲ್ಲಿ ಕೆಲ್ಸಕ್ಕೆ ಸೇರ್ಕೋಂಡಿದಿರಾ ಅಂತ ತಿಳಿಸಿ.:-) ಆಡುವುದು ಸುಲಭ, ಮಾಡುವುದು ಕಷ್ಟ. ನಗ್ತೀರೋ ಅಳ್ತೀರೋ ಏನಾದ್ರೂ ಮಾಡಿ. ಆದ್ರೆ ಕನ್ನಡದಲ್ಲೇ ಮಾಡಿ. ಕೊನೆ ನಮಸ್ಕಾರ.

Anonymous ಅಂತಾರೆ...

ನಾನು ಎಂಬಿಎ ಕಾಲೇಜಿನವನೋ ಅಲ್ಲವೋ - ನಿಮಗಂತೂ ಎಂಬಿಎ ಕಾಲೇಜಿನ ಬಾಗಿಲಲ್ಲಿ ಕೂತು ಭಿಕ್ಷೆ ಬೇಡೋ ಯೋಗ್ಯತೇನೂ ಇಲ್ಲ ಅಂತ ತೋರಿಸಿಕೊಂಡಿದೀರ. ಎಲ್ಲಾದ್ರೂ ಹೋಗಿ "ವ್ಯಾಪಾರದ ಅಆಇಈ" ಅನ್ನೋ ಪುಸ್ತಕ ಏನಾದ್ರೂ ಇದ್ದರೆ ತೊಗೊಂಡು ಓದಿ!

Unknown ಅಂತಾರೆ...

mba mattu kannada idara charche khanditavagi upayukta vada charche. vyapara vyavahara taletalantaragalinda nadedu kondu bandide. Adare idaralli bhashe endigu nanage ondu mukhyavad patrakkinta ondu madhayamavagi beledu bandide. Intaha sandarbhadalli bhasheyinda yenu sadhyavilla mba mattu tadanantarada kelasa mukhya endu vadisuvavarige vyapara shuru madi vyavahara kaliyalu salahe bekaguttade embudu nanna anisike. Dhanyavadagalu intaha charche innu munde bahalashtu nadeyabekagide mattu namma indina hagu mundina janagakke idara mahatva vannu charcheya mulaka parichaya maduva avashyakate jagrutiyannu belesabeku.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails