ಮೈಸೂರಿಂದ ಮದರಾಸಿಗೆ
ಅಕಸ್ಮಾತ್ ನಿಮಗೆ ಗೊತ್ತಿಲ್ಲದೇ ಇದ್ರೆ...ಜಯಲಲಿತಾ ಔರು ಮೈಸೂರಲ್ಲಿ ಹುಟ್ಟಿ ವಲಸೆ ಹೋಗಿದ್ದು ತಮಿಳುನಾಡಿಗೆ. ಅಲ್ಲೇ ದುಡಿಮೆ ಮಾಡಿ, ಜನ ಮೆಚ್ಚುಗೆ ಗಳಿಸಿ, ಕೊನೆಗೆ ತಮಿಳು ಜನಗಳನ್ನು ಪ್ರತಿನಿಧಿಸಿ ರಾಜ್ಯದ ಮುಖ್ಯಮಂತ್ರಿಯೂ ಆಗಿ ರಾಜಕೀಯವಾಗೂ ಏಳಿಗೆ ಪಡೆದದ್ದು ತಮಿಳುನಾಡಿನಲ್ಲೇ.
ಜಯಲಲಿತಾ ಔರಿಗೆ ಒಂದು ಬಹಿರಂಗ ಪ್ರಶ್ನೆ
ಜಯಲಲಿತಾ ಔರು ತಮ್ಮ ರಕ್ತದ ಬಗ್ಗೆ ಒಂದು ಸಕ್ಕತ್ ಡೈಲಾಗ್ ಹೊಡೆದಿರೋದು ಹಾಗಿರಲಿ. ಆದ್ರೆ ಇಲ್ಲಿ ನಮ್ಮ ಪ್ರಶ್ನೆ:
ಮೈಸೂರಲ್ಲಿದ್ದಾಗ ಈಕೆ ಕನ್ನಡ ಮಾತಾಡ್ತಾ ಇದ್ದರೋ ಇಲ್ಲವೋ? ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಇವರು ಪೂರಕವಾದಂಥಾ ನಿಲುವುಗಳ್ನ ಇಟ್ಟುಕೊಂಡಿದ್ದರೋ ಇಲ್ಲವೋ?
ಇವರ ಉತ್ತರ "ಹೌದು, ಕನ್ನಡ ಮಾತಾಡ್ತಾ ಇದ್ದೆ, ಪೂರಕವಾದ ನಿಲುವುಗಳ್ನ ಇಟ್ಕೊಂಡಿದ್ದೆ" ಅನ್ನೋದಾದರೆ (ಆದರೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ತೀರ್ಮಾನ ನಮ್ಮದಲ್ಲ) ಇವತ್ತು ಔರು ತಮ್ನ ತಮಿಳ್ನೋರು ಅಂತ ಕರ್ಕೊಂಡ್ರೂ "ಭೇಷ್! ನೀವು ಮೈಸೂರಲ್ಲಿದ್ದಾಗ ಕನ್ನಡತಿಯೇ ಆಗಿದ್ದಿದ್ದು" ಅಂತ ಔರಿಗೆ ಹೇಳಬೇಕು. ಯಾಕೇಂತೀರಾ? ಒಂದು ಪ್ರದೇಶದಲ್ಲಿ ವಾಸ ಮಾಡೋ ಬೇರೆ ತಾಯಿನುಡಿಯ ಜನರು ಆಯಾ ಪ್ರದೇಶದ ಭಾಷೆ, ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು, ಆಯಾ ಭಾಷಾ ಜನಗಳ, ಪ್ರಾಂತ್ಯದ ಅನನ್ಯತೆಗೆ ಪೂರಕವಾಗಿ ಬದುಕು ಸಾಗಿಸಿದ್ರೆ ಆಯಾ ಭಾಷಿಕರೇ ಆಗಿ ಹೋದಂಗೆ ಗುರು. ಹಾಗಾಗೇ ನಾವೆಲ್ಲ ಮಾಸ್ತಿ, ಬೇಂದ್ರೆ ಮೊದಲಾದೋರ್ನ ಕನ್ನಡಿಗರು ಅಂತ ಕರ್ಯೋದು. ಕರ್ನಾಟಕಕ್ಕೆ ಯಾವಾಗಲೋ ನೂರಾರು ವರ್ಷಗಳ ಹಿಂದೆ ವಲಸೆ ಬಂದೋರ ಮನೆಯಲ್ಲಿ ಹುಟ್ಟಿದ ಜನ ತಮ್ಮ ಮನೆ ಮಾತು ಬೇರೆ ಅನ್ನೋ ಕಾರಣಕ್ಕೆ ತಾವು ಕನ್ನಡದವರಲ್ಲ ಅಂದುಕೊಳ್ಳೋದು ಮಹಾ ತಪ್ಪು!
ಇದು ಬಿಟ್ಟು "ಇಲ್ಲ, ನಾನು ಮೈಸೂರಲ್ಲಿ ಕನ್ನಡ ಮಾತಾಡ್ತಾ ಇರಲಿಲ್ಲ, ನಾನು ಕರ್ನಾಟಕದಲ್ಲಿ ಇದ್ದುಗೊಂಡೂ ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಪೂರಕವಾದ ನಿಲುವುಗಳ್ನ ಇಟ್ಕೊಂಡಿರಲಿಲ್ಲ" ಅನ್ನೋದಾದರೆ (ತಿರ್ಗಾ ಆದರೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ತೀರ್ಮಾನ ನಮ್ಮದಲ್ಲ) ಮ್ಯಾಟ್ರು ಒಸಿ ಬೇರೇನೇ ಆಗೋಗತ್ತೆ. ಯಾಕೇಂತೀರಾ? ಇಲ್ಲೇ ಹುಟ್ಟಿ, ಓದು-ಬರಹ ಕಲ್ತು, ಯೌವನ ಕಳೆದು, ಇಲ್ಲೀ ಸೌಲತ್ತುಗಳ್ನೆಲ್ಲಾ ಬಳಸಿಕೊಂಡು, ಇಲ್ಲೀ ಉಪ್ಪು ತಿಂದು, ಇಲ್ಲೀ ನೀರು ಕುಡಿದು, ಇಲ್ಲೀ ಸಂಸ್ಕೃತಿಗೆ, ಇಲ್ಲೀ ನಾಡು-ನುಡಿ-ನಾಡಿಗರಿಗೆ ಗೌರವ ಕೊಡದೇ ಇದ್ದೆ ಅನ್ನೋ ಮಾತು ಇವರಿಗೆ ಶೋಭಿಸೋದೇ ಇಲ್ಲ ಗುರು! ಇವತ್ತಿನ ದಿನ ಬೆಂಗ್ಳೂರಲ್ಲಿ ಕೆಲವು ವಲಸಿಗ್ರು ಇದಾರಲ್ಲ - ಉಂಡ ಮನೆಗೇ ಎರಡು ಬಗೆಯೋಂಥೋರು, ಕನ್ನಡಾನ ಕಸದಬುಟ್ಟೀಗೆ ಎಸಿಯೋರು, ನಮಗೇ ಔರ್ ಭಾಷೆ ಕಲಿಸ್ತೀವಿ ಅನ್ನೋ ಸೊಕ್ಕಿನ ಜನ - ಔರಿಗೂ ಇವ್ರಿಗೂ ಏನು ವೆತ್ಯಾಸ ಅಂತ ಕೇಳಬೇಕಾಗತ್ತೆ (ಆಗತ್ತೆ ಅನ್ನೋ ಪದ ನೆನಪಿನಲ್ಲಿಡಿ; ಆಗಿದೆ ಅಂತ ಹೇಳ್ತಿಲ್ಲ).
ಏನ್ ಜಯಲಲಿತಾ ಔರೆ? ನಿಮ್ಮ ಉತ್ತರ ಏನು?
7 ಅನಿಸಿಕೆಗಳು:
ತಮಿಳ್ನಾಡಲ್ಲಿ ಬದುಕುಳ್ಯೋದಕ್ಕೆ ಅಂತ ಜಯಲಲಿತಾ ಅವ್ರು "ಇಲ್ಲ ನಾನು ಮೈಸೂರಿನಲ್ಲಿದ್ದಾಗ್ಲೂ ತಮಿಳೇ ಮಾತಾಡ್ತಿದ್ದಿದ್ದು" ಅಂದೇ ಅಂತಾಳೆ ಅನ್ಸತ್ತೆ. ಹಾಗಾಗಿ ಈಗ್ಲೇ ಹೇಳ್ಬೋದು ಅವ್ಳೂ, ನಮ್ಮಲ್ಲಿ ಬಂದಿರೋ ಕೆಲ ವಲಸಿಗ್ರಿಗೂ ಏನಂದ್ರೇನೂ ಯತ್ವಾಸ ಇಲ್ಲ ದಣಿ ಅಂತ!
ಇದು ಹೆಂಗೆ ಅಂದ್ರೆ ನಮ್ಮ ಹಿಂದು ಧರ್ಮದವರೇ ಆದ್ರೂ ಮುಸ್ಲಿಮರ ಜೊತೆ ಕುಳಿತು ಮಾತಾಡ್ತಾ ಉರ್ದು ಬರೋ ಹಾಗೆ ನಟಿಸ್ತಾರಲ್ಲ ನಮ್ಮ ಕೆಲ ರಾಜಕಾರ್ಣಿಗಳು - ಹಾಗೇ ತಮಿಳ್ನಾಡಿನ ಮುಖ್ಯ-ಮಂತ್ರಿ ಪಟ್ಟ ಮುಂದಿನ ಬಾರಿ ಗಿಟ್ಟಿಸ್ಕೊಳಕ್ಕೆ ಈ ಸುಳ್ಳೂ ಹೇಳ್ಲೇಬೇಕಾಗತ್ತೆ ಜಯ!
ಈ ಬಿಕನಾಸಿ ಏನಾರು ಏಳ್ಕಳಿ ಬಿಡಿ ಬುದ್ದಿ! ನೀವ್ಯಾಕ್ ಟೆನ್ಸನ್ ತಗತೀರ? ಈ ವಮ್ಮ ನಾನು ಕನ್ನಡದವ್ಳು ಅಂತ ಏಳಿ ನಮ್ಮ ಮಾನ ಮರ್ವಾದೆ ತೆಗಿತಾಳೆ ಅಷ್ಟೆ. ಅವರಷ್ಟಕ್ ಅವ್ರು ಸೀರೆ ಪಂಚೆ ಎಳ್ಕೊಂಡು, ಮೆಟ್ನಾಗ್ ಹೊಡ್ದಾಡ್ಕೊಂಡು ಸಾಯ್ಲಿ ಬಿಡಿ ಬಡ್ದೈಕ್ಳು, ನಮ್ಮ #$%ಕ್ಕೇನು?
-ಇರ್ಸುಮುರ್ಸು
ಔರು ... ಹಾ೦ಗದ್ರೇನ್ಗುರು? "ಅವರು" ಅ೦ತಲ್ವಾ?
--ಸಿವಾ
ಯಾರು ಕನ್ನಡಿಗ, ಯಾರು ತಮಿಳರು ಅನ್ನುವ ಬಗ್ಗೆ ಜಯಲಲಿತಾ ಅವರ ವ್ಯಾಖ್ಯೆ ಮತ್ತು ನಮ್ಮ/ನಿಮ್ಮ ವ್ಯಾಖ್ಯೆ ಸರಿಹೊಂದುವುದಿಲ್ಲ.
ಕನ್ನಡವನ್ನು (ತಮಿಳನ್ನು) ಮನೆಮಾತಾಗಿ ಉಳ್ಳವರು ಮಾತ್ರ ಕನ್ನಡಿಗರು (ತಮಿಳರು) ಅಂತ ಅವರ ಭಾವನೆ.
ನಮ್ಮದು ಹಾಗಲ್ಲ.
-ಉಉನಾಶೆ
ಶತಾವಧಾನಿ ನಮ್ಮ ಶ್ರೀ ಗಣೇಶ್ ಅವರು ಇತ್ತೀಚೆಗೆ ಹೇಳಿದ ಮಾತುಗಳನ್ನು ಕನ್ನಡನಾಡಿನ ತಮಿಳರು ಗಮನಿಸಬೇಕು. “ನನ್ನ ಮನೆ ಮಾತು ತಮಿಳು. ಮಾನಸಿಕ ಭಾಷೆ ಕನ್ನಡ.”
ಅದೆಲ್ಲಾ ಇರ್ಲಿ ಬಿಡು ಗುರು, ರಾಜಕಾರಣಿಗಳು ಅವರ ಅಗತ್ಯಕ್ಕೆ, ಅನುಕೂಲಕ್ಕೆ ಮಾತಾಡ್ಕೋತಾರೆ. ಅದಕೆ ತಲೆಕೆಡಿಸಿಕೊಳ್ಳೋದು ಬೇಡ. ಆದ್ರೆ ನಿಂಗೆ ಈ ವಿಷ್ಯ ’ಡೆಕ್ಕನ್ ಹೆರಾಲ್ಡ್’ ನಿಂದನೇ ಗೊತ್ತಾಯ್ತಾ? "ಪ್ರಜಾವಾಣಿ"ಯಲ್ಲೂ ಈ ವಿಷ್ಯ ಹಾಕಿದ್ರಲ್ಲಾ !!
ಆ ಚುರುಮುರಿ ಅನ್ನೊ ಪತ್ರಿಕೆನಲ್ಲಿ ಆಯಮ್ಮನ್ನ, ೧೦೦ ಜನ ಪ್ರಸಿದ್ಧ ಕನ್ನಡಿಗರ ಪಟ್ಟಿಲಿ ಸೇರ್ಸಿದಾರಲ್ಲ, ಅವರ ಬುದ್ದಿಗೆನ್ ಏಳ್ಬೇಕು ? ಮಾನ್ಗೆಟ್ಟೋಳ್ ಕೂಟೆ ಮಾತಾಡ್ ಯೇನ್ ಉಪ್ಯೋಗ, ನೀವೆ ಒಸಿ ಯೇಳಿ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!