ಅಡಿಗೆ ಸಿಲಿಂಡ್ರಿಗೆ ಹತ್ತಿರೋ ಹಿಂದಿ ಕಿಡಿ

"ಭಾರತದ ಸ್ವತಂತ್ರ ಪ್ರಜೆಗಳೇ, ನೀವೆಲ್ಲಾ ಹಿಂದಿಯನ್ನು ನಿಮ್ಮ ಸುರಕ್ಷತೆಗಾಗಿ ಕಲಿಯಿರಿ, ಇಲ್ಲವೇ ಅಪಾಯ ಬರದಂಗೆ, ಏನ್ಮಾಡ್ಬೇಕು ಅಂತ ಬರ್ದಿರೋ ಸೂಚನೆಗಳ್ನ ಓದಕ್ಕಾಗ್ದೆ ನೆಗುದ್ ಬಿದ್ದು ಸಾಯ್ರಿ" ಅಂತಂದ್ರೆ ಎಂಗನ್ಸುತ್ತೆ ಗುರು?

ಈಗ... ಒಸಿ ನೋಡು, ಎಂಗದೆ ನಮ್ ಬಾರತದ ಯವಸ್ತೆ ಅಂತ. ಎಲ್ರು ಮನ್ಯಾಗಿರೋ ಅಡ್ಗೆ ಸಿಲಿಂಡ್ರು ಮೇಲಿರೋ ಸೂಚನೆಗಳನ್ನು ಓದಿ ತಿಳ್ಕೊಂಬೇಕು ಅಂದ್ರೆ ಇಲ್ಲಾ ಇಂಗ್ಲಿಸ್ ಬರ್ಬೇಕು, ಇಲ್ಲಾ ಇಂದಿ ಬರ್ಬೇಕು.

ಪರ್ಪಂಚದಾಗೆ ಬೇರೆ ಕಡೆ ಸುರಕ್ಸತೆ ಅನ್ನೋದಕ್ಕೆ ಅದೆಸ್ಟು ಮಹತ್ವ ಕೊಟ್ಟೌರೆ ಅಂದ್ರೆ ಓದು ಬರಾ ಬರ್ದೆ ಇರೋ ಪುಟ್ಟ ಮಗಿ ಕೂಡಾ ಚಿತ್ರ ನೋಡಿ ಅರ್ತ ಮಾಡ್ಕೊಂಡ್ ಬುಡ್ಬೇಕು. ಆದ್ರೆ ಇಲ್ನೋಡಿ, ನಮ್ಮೂರಲ್ಲೇ ನಮ್ಮ ಮನೆಗಳ್ಗೆ ಸರಬರಾಜು ಆಗೋ ಅಡ್ಗೆ ಸಿಲಿಂಡ್ರು ಮೇಲೆ ಚಿತ್ರಾನೂ ಇಲ್ಲಾ.. ಒಂದಕ್ಸರ ಕನ್ನಡಾನೂ ಇಲ್ಲ. ಅಲ್ಲಾ ಈ ದೇಸದಾಗ್ ಇರೋರ್ಗೆಲ್ಲಾ ಇಂದಿ ಬತ್ತದೆ ಅಂತ ಈ ಎಚ್ಪಿ, ಇಂಡೇನು, ಬಾರತ್ತು... ಇವುಕ್ಕೆಲ್ಲಾ ಅದ್ಯಾವ ಬಡ್ಡೇದ ಏಳವ್ನೆ ಗುರು?

"ಕರ್ನಾಟಕ್ದಾಗೆ ಇಂದೀ ಗಿಂದೀ ಏರಿಕೆ ನಡೀತಿಲ್ಲ, ಎಲ್ಲಾ ಕನ್ನಡದ ಐಕ್ಳು ಅವಾಗವೇ ಕಲೀತಿವೆ" ಅನ್ನೋ ಬುದ್ವಂತ್ರು ಇದಕ್ಕೇನಂತಾರೋ? "ಕನ್ನಡದ ಮಂದಿ ಇಂದೀ ಕಲ್ತುಕೊಳ್ಮ ಅಂತ, ದಿಲ್ಲಿ ದೊರೆಗಳ್ಗೆ ಉದ್ದುದ್ದಕ್ ಅಡ್ಬಿದ್ದು, ಇಂಗೇ ಸಿಲಿಂಡ್ರು ಮ್ಯಾಗೆಲ್ಲಾ ಒಸಿ ಇಂದಿ ಅಕ್ಸರ ಬರ್ಕೊಡಿ, ಕಲ್ತ್ ಕ್ಯಂತೀವಿ" ಅಂತ ಬ್ಯಾಡ್ಕಂಡವ್ರೆ ಅನ್ಬೋದೋ ಏನೋ!

8 ಅನಿಸಿಕೆಗಳು:

Unknown ಅಂತಾರೆ...

ad yaak hing maadtharo devrige gotthu.English,Hindi gotthildiro namma halli Jana en maadbeku?odokke agde saaybekaa?hindi haakli bedaa annalla jotheli kannadanu haakli alvaa guru?

Anonymous ಅಂತಾರೆ...

national integrity ge hindi ne beku anno central govt na policy ne idakkella karana guru. Aa.Na.Kra heLidante, strong Karnataka, strong kerala, strong maharashtra, strong andhra will make a strong India. adu aagbeku andre aaya rajyada bhashe jote jana gurtisikollo haage, abhimaana pado hage maadbeku, adu bittu e riti forcibly hindi herike inda alla..

Anonymous ಅಂತಾರೆ...

Guru .. ninna ella matanna optene .. aadre nanna abhiprayadalli kannaDada abhivridhige English beku .. hindi namge beda ..

just like madrasis .. namma bhashe bahu mukhya, english beku, hindi .. who cares ..

sri

Rohith B R ಅಂತಾರೆ...

ಈ ಬಗೆಯ ಸಿಲಿಂಡರ್ ಕೋಂಡವರು ಅಕಸ್ಮಾತ್ ಅನಾಹುತಕ್ಕೆ ಒಳಗಾದ್ರೆ ಅವಾಗ ಆ ಸಿಲಿಂಡರ್ ಕಂಪನಿಯೋರ್ನ ನಾವು ಕೋರ್ಟಿಗೆ ಎಳೀಬೋದಾ? ಅವಾಗ್ಲಾದ್ರೂ ಬರೆದಿಟ್ಟಿರೋ ನಿಯಮಗಳ್ನ ಸರಿಯಾಗಿ ಪಾಲಿಸ್ತಾರೇನೋ ಈ ಬಡ್ಡಿಮಕ್ಳು ಕಂಪನಿಗಳೋರು..

Anonymous ಅಂತಾರೆ...

idella enu, latest agi pak agiro medicine nodi. strip mele hindi nalli hesaru bardirutte amele expiry date kooda hindi nalli bardirtare. amele ella advertisements punch line hindi nalli irutte. Time of india news items headings kooda hindimaya... en madodu guru???

Anonymous ಅಂತಾರೆ...

Nijavaglu ivrigella buddi Kalisa bekU. Saarvajanika Hitasakti arji sallisabeku.


Purna

Kishore ಅಂತಾರೆ...

ಇದೆಲ್ಲ ಜಾಗೃತಿ ಇಲ್ಲದ ಲಕ್ಷಣಗಳು. ಕನ್ನಡಿಗನು ಮಲಗಿದ್ದಾನೆ. ಆ ಸ್ವಾಭಿಮಾನಿ ಕನ್ನಡಿಗ ಎಲ್ಲಿದ್ದಾನೆ ? ಪ್ರತಿಯೊಂದು ಮನೆಯಲ್ಲೂ.. ಇಂತ ಒಂದು ಕನ್ನಡಿಗ ಹುಟ್ಟಿಕೊಳ್ಳಬೇಕು. ಗ್ರಾಹಕ ಸೇವೆ ಎಂತಹದ್ದೇ ಆಗಿರಲಿ, ಕನ್ನಡದಲ್ಲೇ ಇರಬೇಕು.. ಇಲ್ಲದಿದ್ದರೆ.. ಅಂತ ಸೇವೆಯೇ ಬೇಡ ಅನ್ನುವ ಮಟ್ಟಿಗೆ ಕನ್ನಡಿಗ ತಯರಾಗಲೇ ಬೇಕು. ಇಂದಲ್ಲ ನಾಳೆ ಈ ಕೆಲಸ ಇಲ್ಲ ನಮ್ಮಿಂದ ಅಥವಾ ನಿಮ್ಮಿಂದನೇ ಆಗಬೇಕು.

Manjunatha Kollegala ಅಂತಾರೆ...

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಮಾಡ್ತಾ ಇದೆ!!!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails