Showing posts with label ಆರ್ಥಿಕತೆ. Show all posts
Showing posts with label ಆರ್ಥಿಕತೆ. Show all posts

ಕನ್ನಡಿಗರಿಗೆ ಕೆಲಸ: ರಾಜ್ಯಸರ್ಕಾರದಿಂದ ಒಂದೊಳ್ಳೇ ಹೆಜ್ಜೆ!

(ಫೋಟೋ: http://sadanandagowda.com/news-events/cm-performed-bhumi-puja/)
ಬೆಂಗಳೂರಿನ ಸಮೀಪವಿರುವ ನರಸಾಪುರ ಕೈಗಾರಿಕಾ ಪ್ರದೇಶ(ಕೋಲಾರ ಜಿಲ್ಲೆ)ದಲ್ಲಿ ಹೊಸ ಹೊಸ ಕೈಗಾರಿಕೆಗಳು ಶುರುವಾಗುತ್ತಿವೆ. ಆಟೋಮೊಬೈಲ್ ದಿಗ್ಗಜರಲ್ಲೊಂದಾದ ಹೋಂಡಾ ಸಂಸ್ಥೆಯ ಮೂರನೆಯ ಘಟಕವು ಇಲ್ಲಿ ಇತ್ತೀಚಿಗೆ ಶುರುವಾಯಿತು. ಹೋಂಡಾ ಮೋಟಾರ್‍‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಹೆಸರಿನ ಈ ಸಂಸ್ಥೆಗೆ ಭಾರತೀಯ ಜನತಾ ಪಕ್ಷದ  ನಮ್ಮ ರಾಜ್ಯಸರ್ಕಾರವು ಅನೇಕಾನೇಕ ವಿನಾಯ್ತಿ, ರಿಯಾಯಿತಿಗಳನ್ನು ನೀಡಿದೆ. ಈ ಸಂಬಂಧವಾದ ಆದೇಶಗಳಿಗೆ ಸಂಪುಟಸಭೆಯಲ್ಲಿ ಮುಖ್ಯಮಂತ್ರಿಗಳಿಂದ ಒಪ್ಪಿಗೆ ಪಡೆಯಲಾಯಿತಂತೆ. ಇದೇ ಸಂದರ್ಭದಲ್ಲಿ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಎಸ್ ಸುರೇಶ್ ಕುಮಾರ್ ಅವರು  ಸಂಸ್ಥೆಯ ಅಧಿಕಾರಿಗಳಿಗೆ "ಸಂಸ್ಥೆಯಲ್ಲಿ ಕಡಿಮೆಯೆಂದರೆ ನೂರಕ್ಕೆ ಎಂಬತ್ತರಷ್ಟು ಕನ್ನಡಿಗರಿಗೆ ಕೆಲಸ ನೀಡದಿದ್ದಲ್ಲಿ ಈ ಸವಲತ್ತುಳನ್ನೆಲ್ಲಾ ಹಿಂಪಡೆಯಲಾಗುವುದು" ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರಂತೆ. ಈ ಸುದ್ದಿಯನ್ನು ಮಾಧ್ಯಮದ ವರದಿಗಳಲ್ಲಿ ಕಂಡಾಗ ಹಾಲು ಕುಡಿದಷ್ಟು ಹಿಗ್ಗುಂಟಾಯ್ತು ಗುರೂ!

ಹೊಸ ಉದ್ದಿಮೆಗಳು ಮತ್ತು ಕೆಲಸದ ಅವಕಾಶಗಳು

ಯಾವುದೇ ನಾಡಿನಲ್ಲಿ ಶುರುವಾಗುವ ಸಂಸ್ಥೆಗಳು ಆ ನೆಲದ ಜನರಿಗೆ ಉದ್ಯೋಗ ದೊರಕಿಸಿಕೊಡಬೇಕಾದ್ದು ಸಹಜ ನ್ಯಾಯವಾಗಿದೆ. ಸರ್ಕಾರವು ಹೊರನಾಡಿನ ಸಂಸ್ಥೆಗಳು ನಮ್ಮಲ್ಲಿ ಆರಂಭವಾಗುವುದಕ್ಕೆ ಉತ್ತೇಜನ ನೀಡುತ್ತಾ ಅವುಗಳಿಗೆ ಎಲ್ಲಾ ತೆರನಾದ ಸವಲತ್ತುಗಳನ್ನು ನೀಡಲು ಮುಂದಾಗುತ್ತದೆ. ಕಡಿಮೆದರದಲ್ಲಿ/ ಪುಕ್ಕಟೆಯಾಗಿ ವಿದ್ಯುತ್ತು, ನೀರು, ನೆಲ ಕೊಡುವುದಲ್ಲದೆ ನೋಂದಣಿ ಶುಲ್ಕದಲ್ಲಿ ವಿನಾಯಿತಿ, ತೆರಿಗೆ ರಜೆಯೇ ಮೊದಲಾದ ಸೌಕರ್ಯಗಳನ್ನು ನೀಡುತ್ತದೆ. ಮೂಲತಃ ಹೀಗೆ ಮಾಡುವುದು ಬಂಡವಾಳವನ್ನು ಸೆಳೆಯಲೆಂದೇ ಆಗಿದೆ. ಇದರಿಂದಾಗಿ ನಾಡಿಗೆ ಸಿಗಬಹುದಾದ ಅತಿದೊಡ್ಡ ಲಾಭವೆಂದರೆ ನಿರುದ್ಯೋಗ ಸಮಸ್ಯೆಯು ಕಡಿಮೆಯಾಗುವುದು. ಹಾಗಾಗೇ ಹೊಸ ಉದ್ದಿಮೆಗಳ ಆರಂಭಕ್ಕೆ ಒಪ್ಪಿಗೆ ಕೊಡುವಾಗ ಸರ್ಕಾರವು ಇಂಥಾ ಕಟ್ಟಳೆಗಳನ್ನು ಮುಂದಿಡಬಹುದಾಗಿದೆ. ಈಗ ಈ ಹೋಂಡಾ ಘಟಕದಿಂದಲೇ ೩೨೦೦ ನೇರ ನೇಮಕಾತಿ ನಡೆಯಲಿದೆ. ಇದಲ್ಲದೆ ಪೂರಕ ಉದ್ದಿಮೆಗಳಲ್ಲಿಯೂ ೧೨೦೦ ಹುದ್ದೆಗಳು ಹುಟ್ಟಿಕೊಳ್ಳಲಿವೆಯಂತೆ. ಬಿಜೆಪಿ ಸರ್ಕಾರ ನಿಜಕ್ಕೂ ಕನ್ನಡಿಗರಿಗೆ ೮೦% ಕೆಲಸ ಕೊಡಲೇಬೇಕು ಎನ್ನುವುದನ್ನು ಒಂದು ಕಟ್ಟಳೆಯಾಗಿ ಮಾಡಿರುವುದು ಅತ್ಯುತ್ತಮವಾದ ಹೆಜ್ಜೆಯಾಗಿದೆ.

ಇಂದಿಗೆ ಸರೋಜಿನಿ ಮಹಿಷಿ ವರದಿ

೧೯೮೩ರಲ್ಲಿ ರಚನೆಯಾಗಿ ತನ್ನ ಅಂತಿಮ ವರದಿಯನ್ನು ೫೮ ಮಹತ್ವದ ಸಲಹೆಗಳ ಮೂಲಕ  ೧೯೮೬ರಲ್ಲಿ ನೀಡಿದ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಗೆ ಅಂದಂದಿನ ಸರ್ಕಾರಗಳು ಅನೇಕ ಆದೇಶಗಳನ್ನು ಹೊರಡಿಸಿದ್ದರೂ ಇಂದಿಗೂ ವರದಿಯು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ನಾಡಿನಲ್ಲಿ ಈ ವರದಿಯ ಜಾರಿಗಾಗಿ ಅನೇಕ ಹೋರಾಟಗಳು ನಡೆದಿದ್ದು ಇದರ ಜಾರಿಗೆ ರಾಜ್ಯಸರ್ಕಾರ ಮನಸ್ಸು ಮಾಡಬೇಕಾಗಿದೆ. ಇದಕ್ಕೂ ಮುನ್ನ ಅಂದಿಗೆ ಹೊಂದುವಂತಿದ್ದ ಮಹಿಷಿ ವರದಿಯನ್ನು ಇಂದಿನ ಸನ್ನಿವೇಶದಲ್ಲಿ ಮತ್ತೆ ಪರಿಶೀಲಿಸಿ, ಬೇಕಾದ ತಿದ್ದುಪಡಿಗಳನ್ನು ಸೂಚಿಸುವ ಸಮಿತಿಯನ್ನು ರಚಿಸಬೇಕಾಗಿದೆ. ಸಮಿತಿಗೆ ನಿಗದಿತ ಸಮಯದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿ ಸದರಿ ವರದಿಯನ್ನು ಜಾರಿ ಮಾಡಲು ಮುಂದಾಗಬೇಕಿದೆ. ನಾಡಿನಲ್ಲಿ ಉದ್ದಿಮೆ ಸ್ಥಾಪಿಸಲು ಬರುವ ಎಲ್ಲಾ ಸಂಸ್ಥೆಗಳಿಗೆ ಸ್ಥಳೀಯರಿಗೆ ಇಂತಿಷ್ಟು ಕೆಲಸಗಳನ್ನು ನೀಡಲೇಬೇಕೆಂದು ಕಟ್ಟಳೆಯನ್ನು ರೂಪಿಸಲು ಅನುವಾಗುವ ಕಾಯ್ದೆಯನ್ನು ಆ ಮೂಲಕ ಜಾರಿಗೊಳಿಸಬೇಕಾಗಿದೆ. ಈಗಾಗಲೇ ಹೋಂಡಾ ಸಂಸ್ಥೆಯೊಂದಿಗೆ ಇಂತಹ ಕರಾರಿಗೆ ಬಂದು ನೂರಕ್ಕೆ ಎಂಬತ್ತು ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಬೇಕೆಂದು ತಾಕೀತು ಮಾಡಿ ಮೊದಲ ಹೆಜ್ಜೆಯಿಟ್ಟಿರುವ ರಾಜ್ಯಸರ್ಕಾರ ಈ ದಿಕ್ಕಿನಲ್ಲಿ ಮತ್ತಷ್ಟು ವೇಗವಾಗಿ ನಡೆಯಲಿದೆಯೆಂದು ಆಶಿಸೋಣ!

ಕೊನೆಹನಿ: ಇಂತಹ ಕಾಯ್ದೆ ಮಾಡೋದು ಹ್ಯಾಗಪ್ಪಾ ಅಂತಾ ಸರ್ಕಾರ ಚಿಂತೆ ಮಾಡೋ ಹಾಗೇ ಇಲ್ಲಾ... ಯಾಕಂದ್ರೆ ಬಿಜೆಪಿಯ ಸರ್ಕಾರವೇ ಇರುವ ಗುಜರಾತಿನಲ್ಲಿ ಈಗಾಗಲೇ ಇಂತಹ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಗುಜರಾತು, ಒರಿಸ್ಸಾ, ತಮಿಳುನಾಡು ಹಾಗೂ ಮಹಾರಾಷ್ಟ್ರಗಳಲ್ಲಿ ಇಂತಹ ವ್ಯವಸ್ಥೆ ಇದ್ದು ನಮ್ಮ ಸರ್ಕಾರವೂ ಬೇಗನೆ ಇದಕ್ಕೊಂದು ನೀತಿಯನ್ನು ರೂಪಿಸಲಿ. 

ಹಣಕಾಸು ಒಳಗೊಳ್ಳುವಿಕೆ: ಇನ್ಮುಂದೆ ಕಂಪನಿ ಮಾಹಿತಿ ಕನ್ನಡದಲ್ಲೂ!

ಭಾರತ ಸರ್ಕಾರದ ಭಾಷಾನೀತಿಯ ಹುಳುಕು ಏನೇ ಇರಲಿ. ಕೇಂದ್ರಸರ್ಕಾರದ ಸಚಿವಾಲಯಗಳು ಮಾತ್ರಾ ತಮ್ಮ ಇಲಾಖೆಗಳು ರೂಪಿಸಿರುವ ಯೋಜನೆಗಳು ಜನರನ್ನು ತಲುಪಬೇಕಿದ್ದರೆ ಸರಿಯಾಗಿರೋ ನೀತಿಯನ್ನು ಅನುಸರಿಸಲೇ ಬೇಕು ಅನ್ನೋದನ್ನು ಮನವರಿಕೆ ಮಾಡಿಕೊಂಡಿರುವ ಹಾಗಿದೆ ಗುರೂ! ಭಾರತ ಸರ್ಕಾರದ ಕಂಪನಿ ವ್ಯವಹಾರಗಳ ಸಚಿವಾಲಯವನ್ನು ಕುರಿತು ಇತ್ತೀಚಿಗೆ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸುದ್ದಿಯನ್ನು ನೋಡಿ.

ಹಣಕಾಸು ಒಳಗೊಳ್ಳುವಿಕೆಯ ಪರಿಣಾಮಕಾರಿ ದಾರಿ!

"ಹಣಕಾಸು ಒಳಗೊಳ್ಳುವಿಕೆ" ಎನ್ನುವ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸಲು ಪಣ ತೊಟ್ಟಿರುವ ಕಂಪನಿ ವ್ಯವಹಾರಗಳ ಸಚಿವಾಲಯವು ಇನ್ನು ಮುಂದೆ ಕಂಪನಿಗಳ ಆಯವ್ಯಯ ಮಾಹಿತಿಯನ್ನು ಸಚಿವಾಲಯದ ಅಧಿಕೃತ ಅಂತರ್ಜಾಲ ತಾಣದಲ್ಲಿ ನಮ್ಮ ನಮ್ಮ ಭಾಷೆಗಳಲ್ಲೇ ಸಿಗುವಂತೆ ಕ್ರಮತೆಗೆದುಕೊಳ್ಳುತ್ತದೆಯಂತೆ. ಇದಕ್ಕೆ ಸಚಿವಾಲಯದ ಒಪ್ಪಿಗೆಯೂ ಇದೆಯಂತೆ. ಆಹಾ! ಎಂಥಾ ಸೊಗಸಾದ ಸುದ್ದಿ ಇದು. ಕನ್ನಡ ಭಾಷೆಯ ಹೂಡಿಕೆದಾರರು ಕನ್ನಡದಲ್ಲೇ ತಮಗೆ ಬೇಕಾದ ಕಂಪನಿಯ ಲೆಕ್ಕಪತ್ರಗಳನ್ನು ನೋಡಿಕೊಳ್ಳುವಂತಾಗುತ್ತದೆ ಎನ್ನುವ ಸುದ್ದಿಯೇ ಸೂಪರ್ರು ಗುರೂ! ಇಂಥಾ ಕ್ರಮಗಳಿಂದ ಮಾತ್ರವೇ "ಹಣಕಾಸು ಒಳಗೊಳ್ಳುವಿಕೆ"ಯಂತಹ ಜನರಿಗೆ ಉಪಯೋಗವಾಗೋ ಯೋಜನೆಗಳು ಎಲ್ಲರನ್ನೂ ಮುಟ್ಟಲು ಸಾಧ್ಯ! ಅಂದ ಹಾಗೆ ಈ ಸಚಿವಾಲಯದ ಮಂತ್ರಿಗಳು ನಮ್ಮ ಕರ್ನಾಟಕದ ಶ್ರೀ ವೀರಪ್ಪ ಮೊಯ್ಲಿಯವರು ಅನ್ನೋದು ಕೂಡಾ ಸಂತಸದ ವಿಷಯವೇ ಆಗಿದೆ. ಇರಲಿ, ಇದು ಯಾವುದೋ ಒಂದು ಯೋಜನೆಗೆ, ಒಂದು ಇಲಾಖೆಗೆ ಸೀಮಿತವಾಗಿಬಿಡಬಾರದು. ಕೇಂದ್ರಸರ್ಕಾರದ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಭಾರತದ ಸಂವಿಧಾನದ ಎಂಟನೇ ಪರಿಚ್ಛೇಧದಲ್ಲಿರುವ ಎಲ್ಲಾ ೨೨ ಭಾಷೆಗಳಲ್ಲಿ ಸೇವೆ ಕೊಡುವಂತಾಗಲಿ...! ಹೌದಲ್ವಾ ಗುರೂ?

ಬಂಡವಾಳದ ಹೊಳೆ ಹರಿಯಲಿ ಉದ್ಯೋಗದ ಮಳೆ ಸುರಿಯಲಿ !

ನಾಳೆ (03.06.2010) ನಮ್ಮ ರಾಜ್ಯಸರ್ಕಾರ ಒಂದು ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡ್ತಾಯಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಾಳೆ ಮತ್ತು ನಾಡಿದ್ದು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ - 2010 ನಡೆಯಲಿದೆ. ಕರ್ನಾಟಕಕ್ಕೆ ಹೊಸ ಉದ್ದಿಮೆಗಳನ್ನು ಸೆಳೆಯಲು ಸರ್ಕಾರ ಮಾಡುತ್ತಿರುವ ಈ ಕಾರ್ಯಕ್ರಮ ಶ್ಲಾಘನೆಗೆ ಅರ್ಹವಾಗಿದೆ. ರಾಜ್ಯ ಸರ್ಕಾರಕ್ಕೆ, ಅದರ ನಾಯಕರಾದ ಮುಖ್ಯಮಂತ್ರಿಗಳಾದ ಶ್ರೀ ಯಡ್ಯೂರಪ್ಪನವರಿಗೆ ನಮ್ಮ ಅಭಿನಂದನೆಗಳು. ಈ ಉದ್ದಿಮೆಗಳು ಶುರುವಾಗುವಾಗ ಡಾ.ಸರೋಜಿನಿ ಮಹಿಷಿ ವರದಿಯ ಆಧಾರದ ಮೇರೆಗೆ ಕನ್ನಡಿಗರಿಗೆ ಅಲ್ಲಿನ ಕೆಲಸಗಳನ್ನು ಕೊಡಬೇಕೆಂಬ ಅಂಶವನ್ನು ಸರ್ಕಾರ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಟ್ಟು ಕಟ್ಟಳೆಯನ್ನಾಗಿಸಲಿ. ನಮ್ಮ ನೆಲ ಜಲಗಳ ಸದ್ಬಳಕೆಯಾಗಲಿ, ಯಾವೊಬ್ಬ ರೈತನೂ ಕಣ್ಣೀರುಗರೆಯದಂತಾಗಲಿ ಎಂಬೆಲ್ಲಾ ಆಶಯಗಳೊಂದಿಗೆ ಈ ಹಿಂದೆ ಇಂತಹುದೇ ಸನ್ನಿವೇಶದಲ್ಲಿ ಬರೆಯಲಾಗಿದ್ದ ಎರಡು ಬರಹಗಳನ್ನು ಕೆಳಗೆ ನೀಡಿದ್ದೇವೆ.

1. ಬಂಡವಾಳ ಹೂಡಿಕೆ: ನಮ್ಮ ಜನರಿಗೆ ಕೆಲಸಾನೂ ಕೊಡಬೇಕು!
ಕರ್ನಾಟಕದಲ್ಲಿ ಟಾಟಾ ಸಂಸ್ಥೆಯೋರು ನ್ಯಾನೋ ಮಾದರಿ ಕಾರುಗಳನ್ನು ತಯಾರಿಸೋ ಘಟಕಾನ ಕಡೆಗೂ ಆರಂಭಿಸುವುದಿಲ್ಲ ಎನ್ನುವ ತೀರ್ಮಾನ ತೆಗೆದುಕೊಂಡರು. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಮುಂದೇನಾಗಬೇಕು ಅಂತ ಚೂರು ನೋಡೋಣ ಬಾ ಗುರು!

ಉದ್ದಿಮೆಗಾರಿಕೆ ಮತ್ತು ಉದ್ಯೋಗಾವಕಾಶ!ನಮ್ಮ ನಾಡಲ್ಲಿ ಉದ್ದಿಮೆಗಳ ಆರಂಭಕ್ಕಿರೋ ಮುಖ್ಯವಾದ ಆಯಾಮ ಸರ್ಕಾರಕ್ಕೆ ತೆರಿಗೆ ಮೂಲಕ ದೊರೆಯುವ ಆದಾಯ, ನಾಡಿನ ಜನರಿಗೆ ನೇರವಾಗಿ ಸಿಗಬಹುದಾದ ಉದ್ಯೋಗಗಳು ಮತ್ತು ಈ ಉದ್ದಿಮೆಗಳಿಗೆ ಪೂರಕವಾಗಿ ಆರಂಭವಾಗೋ ಇತರೆ ಉದ್ದಿಮೆಗಳು. ಈ ಉದ್ದೇಶಗಳ ಈಡೇರಿಕೆಗಾಗಿಯೇ ಸರ್ಕಾರಗಳು ಉದ್ದಿಮೆ ಆರಂಭಿಸಲು ಉತ್ತೇಜನ ಕೊಡ್ತಾ, ಕಡಿಮೆ ದರದಲ್ಲಿ ನೆಲ, ನೀರು, ವಿದ್ಯುತ್ ಇವುಗಳನ್ನು ಉದ್ದಿಮೆದಾರರಿಗೆ ನೀಡುತ್ತದೆ. ಇಂತಿಷ್ಟು ತೆರಿಗೆ ವಿನಾಯ್ತಿ, ಇಷ್ಟು ವರ್ಷದ ತೆರಿಗೆ ರಜಾಗಳನ್ನು ನೀಡುತ್ತದೆ. ಇಷ್ಟೆಲ್ಲಾ ಇದ್ದಾಗ್ಲೂ ನಮ್ಮ ಸರ್ಕಾರ ಈ ಬಾರಿ ಟಾಟಾ ಸಂಸ್ಥೆಯನ್ನು ಸೆಳೆಯಲು ಯಾಕೆ ವಿಫಲವಾಯ್ತು ಅಂತ ನೋಡುದ್ರೆ ಕರ್ನಾಟಕದ ರಾಜಕೀಯ ಸ್ಥಿತಿಗತಿ, ಇಲ್ಲಿನ ರೈತ ಸಮುದಾಯದ ಪ್ರತಿಕ್ರಿಯೆಗಳು, ಉದ್ದಿಮೆ ಎದುರಿಸಲು ಉಂಟಾಗಬಹುದಾದ ತೊಡಕುಗಳು, ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳು, ಸರ್ಕಾರದ ನಿಯಮಾವಳಿಗಳ ಅಸ್ಥಿರತೆ/ ಅಸ್ಪಷ್ಟತೆ ಇವೆಲ್ಲಾ ಪ್ರಮುಖ ಪಾತ್ರ ವಹಿಸಿದ ಹಾಗೆ ಕಾಣ್ತಿದೆ ಗುರು!

ರೈತರ ಮನವೊಲಿಕೆಯ ಮಹತ್ವ!ಉದ್ದಿಮೆ ಆರಂಭಕ್ಕಾಗಿ ನೆಲ ವಶಪಡಿಸಿಕೊಳ್ಳಲು ಸರ್ಕಾರ ಅನುಸರಿಸೋ ನೀತಿ ಮತ್ತಷ್ಟು ಸುಧಾರಿಸಬೇಕಾಗಿದೆ. ಕೈಗಾರಿಕಾ ಪ್ರದೇಶಗಳನ್ನು ಗುರುತಿಸಬೇಕಾದಾಗ ಅಲ್ಲಿ ಏನೇನಿರಬೇಕು ಅನ್ನೋದು ಸ್ಪಷ್ಟವಾಗಿರಬೇಕು. ಅಂತಹ ಭೂಮಿಯನ್ನು ನೀಡುವ ರೈತನಿಗೆ ಏನೆಲ್ಲಾ ಪರಿಹಾರ ಕೊಡಬೇಕು ಅನ್ನೋದು ರೈತನನ್ನು ಪ್ರೋತ್ಸಾಹಿಸೋ ಹಾಗಿರಬೇಕು. ದೇವನಹಳ್ಳಿ ಸುತ್ತಲ ಭೂಮಿನ ಸರ್ಕಾರ ವಶ ಪಡಿಸಿಕೊಂಡಾಗ ಯಾವ ಬೆಲೆಗೆ ಕೊಂಡುಕೊಳ್ತು? ಇವತ್ತು ಅದರಲ್ಲಿ ಎಷ್ಟು ಭಾಗ ಮಾತ್ರಾ ವಿಮಾನ ನಿಲ್ದಾಣಕ್ಕೆ ಅಗತ್ಯವಿದೆ? ಉಳಿದದ್ದನ್ನು ಯೋಜನೆಯಲ್ಲೇ ವಾಣಿಜ್ಯ ಉದ್ದೇಶಕ್ಕೆ ಅಂತ ತೋರಿಸಿ... ವಿಮಾನ ನಿಲ್ದಾಣ ಕಟ್ಟಿದ ಮೇಲೆ ಆ ನೆಲದ ಬೆಲೆ ಗಗನಕ್ಕೇರಿಸಿ ಲಾಭ ಹೆಚ್ಚಿಸಿಕೊಳ್ಳೋದನ್ನು ನೋಡಿದಾಗ ನೆಲ ಬಿಟ್ಟುಕೊಟ್ಟ ರೈತ, ನಾ ಕೊಟ್ಟ ಜಮೀನು ವಿಮಾನ ನಿಲ್ದಾಣಕ್ಕಲ್ಲ... ಅದನ್ನು ಕಟ್ಟಿದೋರ ಲಾಭ ಗಳಿಕೆಗೆ ಅಂತ ಅಸಮಾಧಾನ ಪಟ್ಕೊಳ್ಳೋ ಹಾಗೆ ನಮ್ಮ ನಿಯಮ ಇರಬಾರದು ಅಲ್ವಾ ಗುರು? ಅಂದ್ರೆ ನೆಲ ಕಳೆದುಕೊಳ್ಳುವವನು ಲಾಭದ ಭಾಗೀದಾರ ಆಗಬೇಕು ತಾನೆ? ಆಗ ಮಾತ್ರ ತಮ್ಮ ನೆಲ ಸರ್ಕಾರ ಕೊಂಡುಕೊಳ್ಳುತ್ತೆ ಅಂದ್ರೆ ಖುಷಿ ಪಟ್ಕೊಳ್ಳೋ ಪರಿಸ್ಥಿತಿ ಹುಟ್ಕೊಳ್ಳೋದು. ಒಳ್ಳೇ ಬೆಲೆ, ಸರಿಯಾದ ಪುನರ್ವಸತಿ, ದಬ್ಬಾಳಿಕೆ ಹಾಗೂ ಒತ್ತಾಯವಿಲ್ಲದ ಗೌರವದಿಂದ ನಡೆಸಿಕೊಳ್ಳೋದು ಇವೆಲ್ಲಾ ಸಾಧನಗಳನ್ನು ಬಳಸಿ ರೈತಣ್ಣನ ಮನವೊಲಿಸಬೇಕು.

ಏನೆಲ್ಲಾ ಕೊಡಬೇಕು?
ಅತ್ಯುತ್ತಮ ರಸ್ತೆ, ರೈಲು ಸಂಪರ್ಕಗಳ ಜೊತೆಯಲ್ಲಿ ಅಗತ್ಯವಾದ ನೀರು ಮತ್ತು ವಿದ್ಯುತ್ತುಗಳ ಪೂರೈಕೆ ಮಾಡಬೇಕಾಗಿದೆ. ಅದಕ್ಕೆ ಅಗತ್ಯವಾದಂತೆ ನದಿ ನೀರಿನ ಸದ್ಬಳಕೆಗೆ ಯೋಜನೆಗಳು, ವಿದ್ಯುತ್ ಉತ್ಪಾದನೆಗೆ ಬೇರೆ ಬೇರೆ ಶಕ್ತಿಮೂಲಗಳ ಬಳಕೆ, ಸೋರಿಕೆ ತಡೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರದ ನಾಯಕತ್ವ ಗಟ್ಟಿ ದೃಷ್ಟಿಕೋನದ, ದೂರಗಾಮಿ ಯೋಜನೆಯುಳ್ಳ, ನಾಡಿನ ಏಳಿಗೆಯ ಬಗ್ಗೆ ಸದಾ ತುಡಿಯುತ್ತಿರುವುದಾಗಿರಬೇಕು. ಕನ್ನಡನಾಡಿನ ಏಳಿಗೆಯೊಂದೇ ಪರಮಗುರಿಯಾಗಿರಬೇಕು. ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವಿಕೆ, ಸುತ್ತು ಬಳಸು ಮೀನ ಮೇಷವಿಲ್ಲದ ಪಾರದರ್ಶಕವಾದ ಚುರುಕಾದ ಆಡಳಿತ ಯಂತ್ರದ ಅಗತ್ಯವಿದೆ. ಉದ್ದಿಮೆ ಆರಂಭಿಸಲು ಬೇಕಾದ ಪರವಾನಿಗೆಗಳನ್ನು ಹಲವಾರು ಇಲಾಖೆಗಳಿಂದ ಪಡೆಯಬೇಕಾದ ಅಗತ್ಯವನ್ನು ಇಲ್ಲವಾಗಿಸಿ ಒಂದೇ ಸಂಸ್ಥೆಯಲ್ಲಿ ಸರಳವಾಗಿ ಲೈಸೆನ್ಸ್ ನೀಡಬೇಕಾದ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾಗಿದೆ. ದೀರ್ಘಕಾಲಕ್ಕಾಗಿ ರೂಪಿಸಲಾದ, ಯಾವುದೆ ಸರ್ಕಾರವಿದ್ದರೂ ಬದಲಾಗದ ರೀತಿನೀತಿ ನಿಯಮಾವಳಿಗಳ ಅಗತ್ಯವಿದೆ.

ನಾಡಿನ ಏಳಿಗೆಗೆ ಉದ್ದಿಮೆಗಾರಿಕೆಯೇ ರಹದಾರಿ
ನಾಡು ಆರ್ಥಿಕವಾಗಿ ಬೆಳೆಯಲು, ನಾಡಿನ ಜನತೆಗೆ ಉದ್ಯೋಗಾವಕಾಶಗಳನ್ನು ತಂದುಕೊಡುವ ಉದ್ದಿಮೆಗಳೇ ಇಂದಿನ ಅಗತ್ಯವಾಗಿವೆ. ಸಿಂಗೂರಿಂದ ಟಾಟಾ ಎತ್ತಂಗಡಿ ಆಗುತ್ತೇ ಅಂದಾಗ ಸಂತೆಗೆ ಮೂರು ಮೊಳ ನೆಯ್ದಂಗೆ ತಕಾಪಕಾ ಕುಣಿದು ಟಾಟಾ ಮುಂದೆ ಲಾಗಾ ಹಾಕೊ ಬದಲಾಗಿ ನಾಡಿನ ಆಳುವ ಸರ್ಕಾರಗಳು ಈ ಬಗ್ಗೆ ಸರಿಯಾದ ನಿಯಮಗಳನ್ನು ಎಲ್ಲ ಕ್ಷೇತ್ರಗಳ ತಜ್ಞರ ಸಹಕಾರದಿಂದ ರೂಪಿಸಿ ಜಾರಿಗೆ ತರಬೇಕಾಗಿದೆ. ಇಗೋ! ಕರ್ನಾಟಕ ರಾಜ್ಯದ ಉದ್ದಿಮೆ ನೀತಿ ಇದು. ನಮ್ಮ ನಾಡಲ್ಲಿ ನೀವು ಉದ್ದಿಮೆ ಆರಂಭಿಸಲು ಇಂತಿಂತಹ ಪೂರಕ ವಾತಾವರಣವಿದೆ. ಈ ನಾಡಲ್ಲಿ ನಿಮಗೆ ಇಂತಿಂತಹ ಸವಲತ್ತುಗಳನ್ನು ಸರ್ಕಾರ ನಿಮಗೆ ನೀಡುತ್ತದೆ. ಬದಲಾಗಿ ನೀವು ಇಂತಿಷ್ಟು ಕನ್ನಡಿಗರಿಗೆ ಕೆಲಸ ಕೊಡಬೇಕು. ಉದ್ದಿಮೆ ಆರಂಭಕ್ಕಾಗಿ ಅಗತ್ಯವಿರುವ ನೆಲವನ್ನು ಸರ್ಕಾರ ರೈತರಿಂದ ಕೊಳ್ಳಲು ಇಂತಹ ನೀತಿಯನ್ನು ಅನುಸರಿಸುತ್ತದೆ, ಈ ಮಾನದಂಡದ ಆಧಾರದ ಮೇಲೆ ಇಂತಿಷ್ಟು ಪರಿಹಾರ ನೀಡಲಾಗುತ್ತದೆ... ಎಂಬೆಲ್ಲಾ ವಿಷಯಗಳು ಪಾರದರ್ಶಕವಾಗಿಯೂ, ಸ್ಫುಟವಾಗಿಯೂ ಇದ್ದಲ್ಲಿ ನಮ್ಮ ನಾಡಿಗೆ ಉದ್ದಿಮೆಗಳು ಹರಿದು ಬರುವುದು ಅಷ್ಟೊಂದು ಕಠಿಣವಾಗಲಾರದು ಗುರು!

2. ಬಂಡವಾಳ ಹರಿದು ಬರಲು ಗಟ್ಟಿನೀತಿ ಬೇಕು!ಆರ್ಸೆಲರ್ , ಪೋಸ್ಕೋ, ಲಫಾರ್ಜ್ ಸೇರಿದಂತೆ ಹಲವು ದೊಡ್ಡ ದೊಡ್ಡ ಸಂಸ್ಥೆಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿದ್ದು, ಸುಮಾರು ರೂ.1,38,000 ಕೋಟಿಯಷ್ಟು ಬಂಡವಾಳ ಹೂಡಲು ಮುಂದಾಗಿದ್ದಾರೆ ಮತ್ತು ಇದು 92,000ಕ್ಕೂ ಹೆಚ್ಚು ಕೆಲಸ ಹುಟ್ಟು ಹಾಕಲಿದೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ! ಇದು ರಾಜ್ಯದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ನೋಡಿದರೆ ಒಂದೊಳ್ಳೆ ಬೆಳವಣಿಗೆಯಾಗಿ ಕಾಣ್ತಿದೆ. ಈ ಸದವಕಾಶದ ಲಾಭ ನಮ್ಮ ನಾಡಿಗೆ ಸಂಪೂರ್ಣವಾಗಿ ಸಿಗಬೇಕಾದರೆ ಸರ್ಕಾರ ಈಗಿಂದಲೇ ಎಚ್ಚರಿಕೆಯಿಂದ ಕೆಲ್ಸ ಮಾಡ್ಬೇಕು. ಸರ್ಕಾರ ಎಚ್ಚರ ತಪ್ಪದ ಹಾಗೆ ಜನ ಎಚ್ಚರ ವಹಿಸಬೇಕು ಗುರೂ! ಇದು ಈ ಯೋಜನೆಯ ಸಂಪೂರ್ಣ ಲಾಭ ನಮ್ಮ ನಾಡಿಗೇ ಸಿಗೋಕ್ಕೆ ಭಾಳಾ ಅಗತ್ಯವಾಗಿದೆ.

ಏನೇನ್ ಆಗ್ತಿದೆ ?
ಈ ಯೋಜನೆಗಳಿಂದ ಸಿಮೆಂಟ್, ಕಬ್ಬಿಣ ಮತ್ತು ಅದಿರು ಮುಂತಾದ ವಿವಿಧ ದೊಡ್ಡ ಕೈಗಾರಿಕಾ ವಲಯಗಳಲ್ಲಿ ಉದ್ಯೋಗದ ಅವಕಾಶಗಳು ಸೃಷ್ಟಿ ಆಗುವುದರ ಜೊತೆಗೆ, ಪೂರಕ ವಲಯಗಳಾದ ಬಿಡಿ ಭಾಗಗಳ ತಯಾರಿಕೆ, ಮೂಲ ಉತ್ಪನ್ನಗಳ ಪೂರೈಕೆ, ಹೊಸ ಸಂಶೋಧನಾ ಘಟಕಗಳು, ಹೀಗೆಯೇ ಹತ್ತಾರು ಕ್ಷೇತ್ರಗಳಲ್ಲಿ ಹೊಸ ಹೊಸ ಕೆಲಸಗಳು ಹುಟ್ಟಿಕೊಳ್ಳಲಿವೆ.

ಇತ್ತ ಗಮನವಿರಲಿ !
ಸರ್ಕಾರ ಈ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳೊ ಸಂದರ್ಭದಲ್ಲೇ ಕೆಳಗಿನ ಕೆಲವು ಮುಖ್ಯ ವಿಷಯಗಳ ಬಗ್ಗೆ ಗಮನ ಹರಿಸಬೇಕು ಗುರು. ಯೋಜನೆಗಳಿಂದ ಹುಟ್ಟುತ್ತಿರುವ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಹೇಗೆ ಕೊಡಿಸುವುದು ?
ಈ ಹೂಡಿಕೆಯಿಂದ ಯಾವ ಯಾವ ತರಹದ ಕೆಲಸಗಳು ಸೃಷ್ಟಿ ಆಗುತ್ತೆ? ಆ ಕೆಲಸಗಳಿಗೆಲ್ಲ ಬೇಕಾದ ನೈಪುಣ್ಯತೆ ಈ ಭಾಗದ ಕನ್ನಡಿಗರಲ್ಲಿದೆಯಾ? ಇಲ್ಲದೇ ಹೋದಲ್ಲಿ, ಅದನ್ನು ಹುಟ್ಟು ಹಾಕುವತ್ತ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು?
ನಮ್ಮ ನೆಲ, ಜಲ ಸೇರಿದಂತೆ ಎಷ್ಟು ಸಂಪನ್ಮೂಲದ ಬಳಕೆಯಾಗುತ್ತೆ? ಆ ಬಳಕೆಗೆ ತಕ್ಕ ಲಾಭ ನಾಡಿಗೆ ಆಗಲಿದೆಯೇ?
ಯೋಜನೆಗಳಿಗೆ ರೈತರಿಂದ ಪಡೆಯುತ್ತಿರುವ ಭೂಮಿ ಎಂತಹದ್ದು? ರೈತರಿಂದ ಫಲವತ್ತಾದ ಕೃಷಿ ಭೂಮಿ ಪಡೆಯುವುದು ಅನಿವಾರ್ಯ ಅನ್ನುವಂತಹ ಸಂದರ್ಭದಲ್ಲಿ, ರೈತರಿಗೆ ಸರಿಯಾದ ಪುನರ್ವಸತಿ ಸೌಲಭ್ಯ ಸಿಗುವಂತೆ ಮಾಡುವುದಕ್ಕೆ ಏನು ಮಾಡಬೇಕು? ಅದಕ್ಕೂ ಮೀರಿ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಗಳಲ್ಲಿ ಒಬ್ಬ ಭಾಗಿದಾರ ಅನ್ನುವಂತೆ ತೊಡಗಿಸಿಕೊಳ್ಳುವುದು ಹೇಗೆ? ಬಂಡವಾಳ ಹೂಡುತ್ತಿರುವ ಕಂಪನಿಗಳು ಶಾಲೆ, ಆಸ್ಪತ್ರೆ ನಿರ್ಮಾಣದಂತಹ ಕೆಲಸದ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿ ತೋರಿಸುವಂತೆ ಅವರ ಮನ ಒಲಿಸುವುದು ಹೇಗೆ? ಬಂಡವಾಳ ತರೋದಷ್ಟೇ ತನ್ನ ಕೆಲಸ ಎಂದು ವರ್ತಿಸದೇ, ಸರ್ಕಾರ ಮೇಲಿನ ಎಲ್ಲ ಅಂಶಗಳ ಬಗ್ಗೆ ಸರಿಯಾದ ಗಮನ ಕೊಡಬೇಕು ಗುರು.

ಬಂಡವಾಳ ಹರಿದು ಬರಲು ಗಟ್ಟಿನೀತಿ ಬೇಕು


ಕರ್ನಾಟಕದಲ್ಲಿ ಟಾಟಾ ಸಂಸ್ಥೆಯೋರು ನ್ಯಾನೋ ಮಾದರಿ ಕಾರುಗಳನ್ನು ತಯಾರಿಸೋ ಘಟಕಾನ ಕಡೆಗೂ ಆರಂಭಿಸುವುದಿಲ್ಲ ಎನ್ನುವ ತೀರ್ಮಾನ ತೆಗೆದುಕೊಂಡರು. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಮುಂದೇನಾಗಬೇಕು ಅಂತ ಚೂರು ನೋಡೋಣ ಬಾ ಗುರು!
ಉದ್ದಿಮೆಗಾರಿಕೆ ಮತ್ತು ಉದ್ಯೋಗಾವಕಾಶ!

ನಮ್ಮ ನಾಡಲ್ಲಿ ಉದ್ದಿಮೆಗಳ ಆರಂಭಕ್ಕಿರೋ ಮುಖ್ಯವಾದ ಆಯಾಮ ಸರ್ಕಾರಕ್ಕೆ ತೆರಿಗೆ ಮೂಲಕ ದೊರೆಯುವ ಆದಾಯ, ನಾಡಿನ ಜನರಿಗೆ ನೇರವಾಗಿ ಸಿಗಬಹುದಾದ ಉದ್ಯೋಗಗಳು ಮತ್ತು ಈ ಉದ್ದಿಮೆಗಳಿಗೆ ಪೂರಕವಾಗಿ ಆರಂಭವಾಗೋ ಇತರೆ ಉದ್ದಿಮೆಗಳು. ಈ ಉದ್ದೇಶಗಳ ಈಡೇರಿಕೆಗಾಗಿಯೇ ಸರ್ಕಾರಗಳು ಉದ್ದಿಮೆ ಆರಂಭಿಸಲು ಉತ್ತೇಜನ ಕೊಡ್ತಾ, ಕಡಿಮೆ ದರದಲ್ಲಿ ನೆಲ, ನೀರು, ವಿದ್ಯುತ್ ಇವುಗಳನ್ನು ಉದ್ದಿಮೆದಾರರಿಗೆ ನೀಡುತ್ತದೆ. ಇಂತಿಷ್ಟು ತೆರಿಗೆ ವಿನಾಯ್ತಿ, ಇಷ್ಟು ವರ್ಷದ ತೆರಿಗೆ ರಜಾಗಳನ್ನು ನೀಡುತ್ತದೆ. ಇಷ್ಟೆಲ್ಲಾ ಇದ್ದಾಗ್ಲೂ ನಮ್ಮ ಸರ್ಕಾರ ಈ ಬಾರಿ ಟಾಟಾ ಸಂಸ್ಥೆಯನ್ನು ಸೆಳೆಯಲು ಯಾಕೆ ವಿಫಲವಾಯ್ತು ಅಂತ ನೋಡುದ್ರೆ ಕರ್ನಾಟಕದ ರಾಜಕೀಯ ಸ್ಥಿತಿಗತಿ, ಇಲ್ಲಿನ ರೈತ ಸಮುದಾಯದ ಪ್ರತಿಕ್ರಿಯೆಗಳು, ಉದ್ದಿಮೆ ಎದುರಿಸಲು ಉಂಟಾಗಬಹುದಾದ ತೊಡಕುಗಳು, ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳು, ಸರ್ಕಾರದ ನಿಯಮಾವಳಿಗಳ ಅಸ್ಥಿರತೆ/ ಅಸ್ಪಷ್ಟತೆ ಇವೆಲ್ಲಾ ಪ್ರಮುಖ ಪಾತ್ರ ವಹಿಸಿದ ಹಾಗೆ ಕಾಣ್ತಿದೆ ಗುರು!

ರೈತರ ಮನವೊಲಿಕೆಯ ಮಹತ್ವ!

ಉದ್ದಿಮೆ ಆರಂಭಕ್ಕಾಗಿ ನೆಲ ವಶಪಡಿಸಿಕೊಳ್ಳಲು ಸರ್ಕಾರ ಅನುಸರಿಸೋ ನೀತಿ ಮತ್ತಷ್ಟು ಸುಧಾರಿಸಬೇಕಾಗಿದೆ. ಕೈಗಾರಿಕಾ ಪ್ರದೇಶಗಳನ್ನು ಗುರುತಿಸಬೇಕಾದಾಗ ಅಲ್ಲಿ ಏನೇನಿರಬೇಕು ಅನ್ನೋದು ಸ್ಪಷ್ಟವಾಗಿರಬೇಕು. ಅಂತಹ ಭೂಮಿಯನ್ನು ನೀಡುವ ರೈತನಿಗೆ ಏನೆಲ್ಲಾ ಪರಿಹಾರ ಕೊಡಬೇಕು ಅನ್ನೋದು ರೈತನನ್ನು ಪ್ರೋತ್ಸಾಹಿಸೋ ಹಾಗಿರಬೇಕು. ದೇವನಹಳ್ಳಿ ಸುತ್ತಲ ಭೂಮಿನ ಸರ್ಕಾರ ವಶ ಪಡಿಸಿಕೊಂಡಾಗ ಯಾವ ಬೆಲೆಗೆ ಕೊಂಡುಕೊಳ್ತು? ಇವತ್ತು ಅದರಲ್ಲಿ ಎಷ್ಟು ಭಾಗ ಮಾತ್ರಾ ವಿಮಾನ ನಿಲ್ದಾಣಕ್ಕೆ ಅಗತ್ಯವಿದೆ? ಉಳಿದದ್ದನ್ನು ಯೋಜನೆಯಲ್ಲೇ ವಾಣಿಜ್ಯ ಉದ್ದೇಶಕ್ಕೆ ಅಂತ ತೋರಿಸಿ... ವಿಮಾನ ನಿಲ್ದಾಣ ಕಟ್ಟಿದ ಮೇಲೆ ಆ ನೆಲದ ಬೆಲೆ ಗಗನಕ್ಕೇರಿಸಿ ಲಾಭ ಹೆಚ್ಚಿಸಿಕೊಳ್ಳೋದನ್ನು ನೋಡಿದಾಗ ನೆಲ ಬಿಟ್ಟುಕೊಟ್ಟ ರೈತ, ನಾ ಕೊಟ್ಟ ಜಮೀನು ವಿಮಾನ ನಿಲ್ದಾಣಕ್ಕಲ್ಲ... ಅದನ್ನು ಕಟ್ಟಿದೋರ ಲಾಭ ಗಳಿಕೆಗೆ ಅಂತ ಅಸಮಾಧಾನ ಪಟ್ಕೊಳ್ಳೋ ಹಾಗೆ ನಮ್ಮ ನಿಯಮ ಇರಬಾರದು ಅಲ್ವಾ ಗುರು? ಅಂದ್ರೆ ನೆಲ ಕಳೆದುಕೊಳ್ಳುವವನು ಲಾಭದ ಭಾಗೀದಾರ ಆಗಬೇಕು ತಾನೆ? ಆಗ ಮಾತ್ರ ತಮ್ಮ ನೆಲ ಸರ್ಕಾರ ಕೊಂಡುಕೊಳ್ಳುತ್ತೆ ಅಂದ್ರೆ ಖುಷಿ ಪಟ್ಕೊಳ್ಳೋ ಪರಿಸ್ಥಿತಿ ಹುಟ್ಕೊಳ್ಳೋದು. ಒಳ್ಳೇ ಬೆಲೆ, ಸರಿಯಾದ ಪುನರ್ವಸತಿ, ದಬ್ಬಾಳಿಕೆ ಹಾಗೂ ಒತ್ತಾಯವಿಲ್ಲದ ಗೌರವದಿಂದ ನಡೆಸಿಕೊಳ್ಳೋದು ಇವೆಲ್ಲಾ ಸಾಧನಗಳನ್ನು ಬಳಸಿ ರೈತಣ್ಣನ ಮನವೊಲಿಸಬೇಕು.

ಏನೆಲ್ಲಾ ಕೊಡಬೇಕು?

ಅತ್ಯುತ್ತಮ ರಸ್ತೆ, ರೈಲು ಸಂಪರ್ಕಗಳ ಜೊತೆಯಲ್ಲಿ ಅಗತ್ಯವಾದ ನೀರು ಮತ್ತು ವಿದ್ಯುತ್ತುಗಳ ಪೂರೈಕೆ ಮಾಡಬೇಕಾಗಿದೆ. ಅದಕ್ಕೆ ಅಗತ್ಯವಾದಂತೆ ನದಿ ನೀರಿನ ಸದ್ಬಳಕೆಗೆ ಯೋಜನೆಗಳು, ವಿದ್ಯುತ್ ಉತ್ಪಾದನೆಗೆ ಬೇರೆ ಬೇರೆ ಶಕ್ತಿಮೂಲಗಳ ಬಳಕೆ, ಸೋರಿಕೆ ತಡೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರದ ನಾಯಕತ್ವ ಗಟ್ಟಿ ದೃಷ್ಟಿಕೋನದ, ದೂರಗಾಮಿ ಯೋಜನೆಯುಳ್ಳ, ನಾಡಿನ ಏಳಿಗೆಯ ಬಗ್ಗೆ ಸದಾ ತುಡಿಯುತ್ತಿರುವುದಾಗಿರಬೇಕು. ಕನ್ನಡನಾಡಿನ ಏಳಿಗೆಯೊಂದೇ ಪರಮಗುರಿಯಾಗಿರಬೇಕು. ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವಿಕೆ, ಸುತ್ತು ಬಳಸು ಮೀನ ಮೇಷವಿಲ್ಲದ ಪಾರದರ್ಶಕವಾದ ಚುರುಕಾದ ಆಡಳಿತ ಯಂತ್ರದ ಅಗತ್ಯವಿದೆ. ಉದ್ದಿಮೆ ಆರಂಭಿಸಲು ಬೇಕಾದ ಪರವಾನಿಗೆಗಳನ್ನು ಹಲವಾರು ಇಲಾಖೆಗಳಿಂದ ಪಡೆಯಬೇಕಾದ ಅಗತ್ಯವನ್ನು ಇಲ್ಲವಾಗಿಸಿ ಒಂದೇ ಸಂಸ್ಥೆಯಲ್ಲಿ ಸರಳವಾಗಿ ಲೈಸೆನ್ಸ್ ನೀಡಬೇಕಾದ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾಗಿದೆ. ದೀರ್ಘಕಾಲಕ್ಕಾಗಿ ರೂಪಿಸಲಾದ, ಯಾವುದೆ ಸರ್ಕಾರವಿದ್ದರೂ ಬದಲಾಗದ ರೀತಿನೀತಿ ನಿಯಮಾವಳಿಗಳ ಅಗತ್ಯವಿದೆ.

ನಾಡಿನ ಏಳಿಗೆಗೆ ಉದ್ದಿಮೆಗಾರಿಕೆಯೇ ರಹದಾರಿ

ನಾಡು ಆರ್ಥಿಕವಾಗಿ ಬೆಳೆಯಲು, ನಾಡಿನ ಜನತೆಗೆ ಉದ್ಯೋಗಾವಕಾಶಗಳನ್ನು ತಂದುಕೊಡುವ ಉದ್ದಿಮೆಗಳೇ ಇಂದಿನ ಅಗತ್ಯವಾಗಿವೆ. ಸಿಂಗೂರಿಂದ ಟಾಟಾ ಎತ್ತಂಗಡಿ ಆಗುತ್ತೇ ಅಂದಾಗ ಸಂತೆಗೆ ಮೂರು ಮೊಳ ನೆಯ್ದಂಗೆ ತಕಾಪಕಾ ಕುಣಿದು ಟಾಟಾ ಮುಂದೆ ಲಾಗಾ ಹಾಕೊ ಬದಲಾಗಿ ನಾಡಿನ ಆಳುವ ಸರ್ಕಾರಗಳು ಈ ಬಗ್ಗೆ ಸರಿಯಾದ ನಿಯಮಗಳನ್ನು ಎಲ್ಲ ಕ್ಷೇತ್ರಗಳ ತಜ್ಞರ ಸಹಕಾರದಿಂದ ರೂಪಿಸಿ ಜಾರಿಗೆ ತರಬೇಕಾಗಿದೆ. ಇಗೋ! ಕರ್ನಾಟಕ ರಾಜ್ಯದ ಉದ್ದಿಮೆ ನೀತಿ ಇದು. ನಮ್ಮ ನಾಡಲ್ಲಿ ನೀವು ಉದ್ದಿಮೆ ಆರಂಭಿಸಲು ಇಂತಿಂತಹ ಪೂರಕ ವಾತಾವರಣವಿದೆ. ಈ ನಾಡಲ್ಲಿ ನಿಮಗೆ ಇಂತಿಂತಹ ಸವಲತ್ತುಗಳನ್ನು ಸರ್ಕಾರ ನಿಮಗೆ ನೀಡುತ್ತದೆ. ಬದಲಾಗಿ ನೀವು ಇಂತಿಷ್ಟು ಕನ್ನಡಿಗರಿಗೆ ಕೆಲಸ ಕೊಡಬೇಕು. ಉದ್ದಿಮೆ ಆರಂಭಕ್ಕಾಗಿ ಅಗತ್ಯವಿರುವ ನೆಲವನ್ನು ಸರ್ಕಾರ ರೈತರಿಂದ ಕೊಳ್ಳಲು ಇಂತಹ ನೀತಿಯನ್ನು ಅನುಸರಿಸುತ್ತದೆ, ಈ ಮಾನದಂಡದ ಆಧಾರದ ಮೇಲೆ ಇಂತಿಷ್ಟು ಪರಿಹಾರ ನೀಡಲಾಗುತ್ತದೆ... ಎಂಬೆಲ್ಲಾ ವಿಷಯಗಳು ಪಾರದರ್ಶಕವಾಗಿಯೂ, ಸ್ಫುಟವಾಗಿಯೂ ಇದ್ದಲ್ಲಿ ನಮ್ಮ ನಾಡಿಗೆ ಉದ್ದಿಮೆಗಳು ಹರಿದು ಬರುವುದು ಅಷ್ಟೊಂದು ಕಠಿಣವಾಗಲಾರದು ಗುರು!
ಕೊನೆಹನಿ : ಗುಜರಾತಿಗೆ ಟಾಟಾ ಹೋದ ನಂತರ ಮೋದಿ "ಉಳಿದವರಿಗಿಂತ ಭಿನ್ನವಾಗಿ ಮಾಡಿದ ಕೆಲಸ ಒಂದೇ, ಸಿಂಗೂರಿನಿಂದ ನ್ಯಾನೋ ಎತ್ತಂಗಡಿಯಾಗೋದು ಗೊತ್ತಾದ ಎರಡು ನಿಮಿಷದಲ್ಲಿ ರತನ್ ಟಾಟಾರ ಮೊಬೈಲ್ ಗೆ ’ಗುಜರಾತಿಗೆ ಸ್ವಾಗತ’ ಅನ್ನೋ ಒಂದು ಸಣ್ಣ ಎಸ್ಸೆಮ್ಮೆಸ್ ಕಳಿಸ್ದೆ" ಅಂದ್ರು ಅನ್ನೋ ಗಾಳಿಸುದ್ದಿ ಎಲ್ಲಾ ಕಡೆ ಓಡಾಡ್ತಿದೆ ಗುರು.

ಗಣಿಗಾರಿಕೆಯಿಂದ ಗರಿಷ್ಟ ಲಾಭ ಸಿಗ್ಬೇಕು


ಇತ್ತೀಚಿಗೆ ಮುಖ್ಯಮಂತ್ರಿಗಳು ಗಣಿ ಪರವಾನಿಗೆ ಬೇಕಂದ್ರೆ ಉಕ್ಕು ಕಾರ್ಖಾನೇನೂ ಸ್ಥಾಪಿಸಬೇಕು ಅಂತಂದ ಸೊಗಸಾದ ಹೇಳಿಕೆ ಕೊಟ್ಟಿದಾರೆ ಗುರು! ನಿಜಕ್ಕೂ ಇದು ಒಂದು ಒಳ್ಳೆಯ ಅತ್ಯಗತ್ಯವಾದ ನಡೆಯಾಗಿದೆ.

ಕರಗೋ ನೈಸರ್ಗಿಕ ಸಂಪತ್ತು

ನಮ್ಮ ನಾಡು ಬಹಳ ಸಮೃದ್ಧವಾದ ನಾಡು. ಇವತ್ತಿಗೂ ಕನ್ನಡನಾಡಲ್ಲೇ ಅತಿ ಹೆಚ್ಚು ಚಿನ್ನ ಸಿಗ್ತಿರೋದು. ಹಾಗೇ ನೋಡ್ತಾ ಹೋದ್ರೆ ನಮ್ಮ ಕಾಡುಗಳಲ್ಲಿ ಬೆಳೆಯೋ ಅನೇಕ ಮರಗಳು ಅತ್ಯಂತ ಬೆಲೆಬಾಳೋ ಅಪೂರ್ವವಾದವುಗಳು. ನಮ್ಮ ನಾಡಲ್ಲಿ ಹರಿಯೋ ನದಿಗಳು ಅನೇಕ... ಒಟ್ಟಲ್ಲಿ ಆ ದೇವರು ಒಳ್ಳೇ ಮೂಡಲ್ ಇದ್ದಾಗ ಸೃಷ್ಟಿ ಮಾಡಿದ್ದು ನಮ್ ನಾಡನ್ನ ಅಂದ್ರೆ ತಪ್ಪಾಗಲ್ಲಾ ಗುರು! ಇಂಥಾ ಸಮೃದ್ಧ ನಾಡಿನ ನೈಸರ್ಗಿಕ ಸಂಪತ್ತಿನ ಹಕ್ಕುದಾರರು ಯಾರು? ತಲತಲಾಂತರಗಳಿಂದ ಇದೇ ಮಣ್ಣಲ್ಲಿ ಬದುಕಿದ ನಮ್ಮ ಹಿರಿಯರು, ಈಗ ಬದುಕುತ್ತಿರೋ ನಾವು ಮತ್ತು ಮುಂದಿನ ನಮ್ಮ ನೂರಾರು ತಲೆಮಾರುಗಳು. ಈ ನೈಸರ್ಗಿಕ ಸಂಪತ್ತನ್ನು ನಾವು ಕರಗ್ಸೋದಾದ್ರೆ ಮುಂದಿನೋರಿಗೆ ಏನುತ್ತರ ಕೊಟ್ಟೇವು? ಹಾಗಂದ್ರೆ ಇದನ್ನು ನಾವು ಖರ್ಚು ಮಾಡಲೇ ಬಾರದೆನು? ಇಂದು ನಾವಲ್ಲದಿದ್ರೆ ಮುಂದಿನ ಇನ್ಯಾರಾದರೋ ಇದನ್ನು ಬಳಸಲೇ ಬೇಕು. ಆಗಲೇ ಇದನ್ನು ಸಂಪನ್ಮೂಲ ಅನ್ನಕ್ಕೆ ಸಾಧ್ಯ. ಇದು ತೆಗೆದ ಹಾಗೆಲ್ಲಾ ಕರಗೋ ಸಂಪತ್ತು ಅನ್ನೋದು ಎಷ್ಟು ಸತ್ಯಾನೋ, ತೆಗೀದೆ ಇರೋದು ಪೆದ್ದುತನ ಅನ್ನೋದೂ ಅಷ್ಟೆ ಸತ್ಯಾ ಗುರು!ಹಾಗಿದ್ರೆ ಇದನ್ನು ಎಷ್ಟು ಯೋಗ್ಯವಾಗಿ ಹೇಗೆ ಬಳಸಬೇಕು ಅನ್ನೋದೊಂದೇ ನಮ್ಮ ಮುಂದಿರೋ ಪ್ರಶ್ನೆ ಅಲ್ವಾ!

ಗರಿಷ್ಟ ಲಾಭ ತಂದುಕೊಡಬೇಕು ಗಣಿ!

ಇವತ್ತಿನ ದಿನ ಒಂದು ಟನ್ ಕಬ್ಬಿಣದ ಅದಿರನ್ನು ತೆಗೆದಾಗ ಅಂತಹ ಗಣಿ ಉದ್ಯಮಿ ಸರ್ಕಾರಕ್ಕೆ ಕಟ್ಟೋ ಶುಲ್ಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ದಕ್ಕೋದು ಶೇಕಡಾ ಒಂದರಷ್ಟು ಮಾತ್ರಾ ಅಂದ್ರೆ ಇಪ್ಪತ್ತು ರೂಪಾಯಿಗಿಂತಲೂ ಕಮ್ಮಿ!!! ನಮ್ಮ ನಾಡಲ್ಲಿ ಗಣಿಗಾರಿಕೆ ಮಾಡಿ ನಮ್ಮ ಸಂಪನ್ಮೂಲಾನ ಶಾಶ್ವತವಾಗಿ ಬರಿದು ಮಾಡೋದಕ್ಕೆ ಅನುಮತಿಸಿದ್ದಕ್ಕೆ ನಮಗೆ ಸಿಗ್ತಿರೋ ಪ್ರತಿಫಲ ಇಷ್ಟೇ ಆದ್ರೆ ಹೆಂಗೆ ಗುರು? ಗಣಿಗಾರಿಕೆಯಿಂದ ನಮ್ಮ ಸರ್ಕಾರಕ್ಕೆ ಸಂಪನ್ಮೂಲ ಹರಿಹರಿದು ಬರಬೇಕು. ನಿಜಕ್ಕೂ ಗಣಿಯಿಂದ ಅದಿರು ತೆಗೆಯೋ ಪರವಾನಿಗೆ ಇರೋರಿಗೆ ಸಿಗಬೇಕಾದ್ದು ಬರೀ ಸಂಸ್ಕರಣಾ ಶುಲ್ಕ ಮಾತ್ರಾ ಅಲ್ವಾ ಗುರು? ಗಣಿಗಾರಿಕೆಯಿಂದ ತೆಗೆದ ಕಬ್ಬಿಣದ ಅದಿರನ್ನು ಇಲ್ಲೇ ಸಂಸ್ಕರಿಸಿ ಉಕ್ಕು ಕಾರ್ಖಾನೆ ತೆಗೆದರೆ ನಮ್ಮ ಜನಕ್ಕೆ ದೊರಕುವ ಉದ್ಯೋಗಗಳ ಸಂಖ್ಯೆ ಹೆಚ್ಚುತ್ತೆ. ಆ ಕಾರಣದಿಂದ ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆ ಆ ಮಟ್ಟಿಗೆ ನಾಡಿಗೆ ಉಪಯೋಗಕಾರಿಯಾಗಿದೆ. ಆದ್ರೆ ಇಷ್ಟರಿಂದಲೇ ನಾವು ತೃಪ್ತರಾದ್ರೆ ತಪ್ಪಾಗುತ್ತೆ, ನಿಜಕ್ಕೂ ನಮ್ಮ ಜನರ ಸಂಪತ್ತನ್ನು ನಾವು ಮಾರಿಕೊಳ್ಳೋದರಿಂದ ಸಿಗೋ ಅಷ್ಟೂ ಬೆಲೆ ನಮ್ಮ ಸರ್ಕಾರಕ್ಕೇ ಸಿಗಬೇಕಾದದ್ದೂ, ಹಾಗೆ ಸಿಕ್ಕೋ ಸಂಪತ್ತಿಂದ ನಮ್ಮ ಜನರ ಕಲ್ಯಾಣ, ಕಲಿಕೆ, ಉದ್ಯೋಗಗಳಿಗೆ ನೆರವು ಸಿಗೋದು... ಇದೇ ಸರಿ ಅಲ್ವಾ ಗುರು?
ಕೊನೆಹನಿ : ಒಂದು ಟನ್ ಮರಳಿಗೆ ಸರ್ಕಾರ ಗಳಿಸೋ ರಾಯಧನ 25 ರೂಪಾಯಿ, ಆದ್ರೆ ಕಬ್ಬಿಣದ ಅದಿರಿಗೆ ಸಿಗೋದು ಬರೀ 15 ರೂಪಾಯಿ ಅನ್ನೋದು ಎಂಥಾ ಸೋಜಿಗದ ವಿಷ್ಯಾ ಅಲ್ವಾ ಗುರು?

ಅನಿವಾಸಿ ಕನ್ನಡಿಗರ ಘಟಕಕ್ಕೆ ಸಲಹೆ


ಯಡಿಯೂರಪ್ಪನವರ ಸರ್ಕಾರ ಹೊರನಾಡ ಕನ್ನಡಿಗ ಮತ್ತು ಕನ್ನಡ ನಾಡಿನ ನಡುವೆ ಸೇತುವೆಯಾಗಿರೋ ಒಂದು ಘಟಕಾನ ಹುಟ್ಟುಹಾಕಿರೋದು ಒಳ್ಳೆ ಬೆಳವಣಿಗೆ ಗುರು! ಈ ಘಟಕದ ಕಾರ್ಯ ವ್ಯಾಪ್ತಿ ಏನು? ಏನೇನು ಕೆಲಸ ಮಾಡಕ್ಕೆ ಇದು ಮುಂದಾಗುತ್ತೆ ಅಂತಾ ಇನ್ನೂ ವಿವರಗಳು ಹೊರ ಬರಬೇಕಿದೆ, ಆದ್ರೂ ಇದು ಕನ್ನಡಿಗರ ಅದ್ರಲ್ಲೂ ಹೊರನಾಡ ಕನ್ನಡಿಗರ ಪಾಲಿಗೆ ಒಳಿತನ್ನು ಮಾಡುವಲ್ಲಿ ಒಳ್ಳೇ ಹೆಜ್ಜೆಯಾಗಿದೆ.

ಹೊರನಾಡ ಕನ್ನಡಿಗರೆಂದರೆ?

ಹೊರನಾಡ ಕನ್ನಡಿಗರು ಅಂದ್ರೆ ಬರೀ ಭಾರತದ ಹೊರಗಿರೋ ಕನ್ನಡಿಗ್ರು ಮಾತ್ರಾ ಅಲ್ಲ, ಅದು ಕನ್ನಡ ನಾಡನ್ನು ಬಿಟ್ಟು ಹೊರಗಿರೋ ಎಲ್ಲಾ ಕನ್ನಡಿಗ್ರು. ಹಾಗಂದುಕೊಂಡು ನೋಡುದ್ರೆ ಹೊರದೇಶದಲ್ಲಿರೋರಿಗಾಗಿ ಒಂದು, ಹೊರ ರಾಜ್ಯದಲ್ಲಿರೋರಿಗೆ ಇನ್ನೊಂದು ಘಟಕಗಳನ್ನು ಮಾಡೋದು ಒಳ್ಳೇದು. ಗಡಿ ಭಾಗಗಳಲ್ಲಿ ಹೊರರಾಜ್ಯದ ಕನ್ನಡಿಗ್ರು ಕನ್ನಡಾನ ಉಳಿಸಿಕೊಳ್ಳಕ್ಕೆ ಎಷ್ಟು ಒದ್ದಾಡ್ತಿದಾರೆ ಅನ್ನೋದನ್ನು ಮಹಾರಾಷ್ಟ್ರ, ಆಂಧ್ರದಲ್ಲಿನ ಕನ್ನಡ ಶಾಲೆಗಳ ಸಮಸ್ಯೆ, ಅಲ್ಲಿನ ಕನ್ನಡ ಪುಸ್ತಕಗಳ ಕೊರತೆಯ ಸಮಸ್ಯೆಗಳು ಎತ್ತಿ ತೋರಿಸ್ತಿವೆ. ಹಾಗಾಗಿ ಹೊರರಾಜ್ಯದ ಕನ್ನಡಿಗರು ತಮ್ಮ ತಾಯ್ನಾಡು ತಾಯ್ನುಡಿಯೊಂದಿಗೆ ಬೇರಿನ ಸಂಬಂಧ ಉಳಿಸಿಕೊಳ್ಳೋಕೆ, ಅಲ್ಲಿನ ಕನ್ನಡ ಸಂಘಗಳು ಇಲ್ಲಿನ ಸರ್ಕಾರದ ಜೊತೆ ನೇರ ಸಂಪರ್ಕ ಸಾಧ್ಸಕ್ಕೆ ಈ ವಿಶೇಷ ಘಟಕ ನೆರವಾಗಬೇಕು. ಹೊರನಾಡಲ್ಲೇ ಹುಟ್ಟಿ ಬೆಳ್ಯೋ ಕನ್ನಡದ ಮಕ್ಕಳು ತಾಯ್ನುಡಿಯ ನಂಟು ಉಳಿಸಿಕೊಳ್ಳಲು, ತಾಯ್ನಾಡಿನಲ್ಲಿ ಅಗತ್ಯ ಸವಲತ್ತು ಸೌಕರ್ಯ ಪಡೆಯಲು ಅನುಕೂಲ ಮಾಡಿಕೊಡಲು ಸಖತ್ ಸಹಾಯ ಮಾಡಬೇಕು. ಎಲ್ಲ ರಾಜ್ಯಗಳಲ್ಲೂ ಒಂದೊಂದು "ತಾಯ್ನಾಡು ಸಂಪರ್ಕ ಕೇಂದ್ರ"ಗಳನ್ನು ಹುಟ್ಟುಹಾಕುದ್ರೆ ಭಾಳಾ ಒಳ್ಳೇದು ಗುರು!

ಹೊರದೇಶಗಳ ಕನ್ನಡಿಗರು

ಹೊರದೇಶಗಳ ಕನ್ನಡಿಗರಿಗೆ ಬಂಡವಾಳ ಹೂಡಿಕೆಗೆ ಉತ್ತೇಜನ ಕೊಡಬೇಕಾದ್ದು ಒಂದು ಸಹಜವಾದ ಚಟುವಟಿಕೇನೆ ಆಗಿದ್ರೂ ಇದು ಬರೀ ಬಂಡವಾಳ ಸೆಳೆಯೋಕೆ ಇರೋ ಘಟಕ ಆಗಬಾರ್ದು ಗುರು. ಅಲ್ಲಿನ ಕನ್ನಡಿಗರ ಸುಖದುಃಖಕ್ಕೆ ಒದಗೋ ಶಕ್ತಿಯಾಗಬೇಕು. ಇಲ್ಲಿಂದ ಹೊರನಾಡಿಗೆ ಹೋಗೋರಿಗೆ ಮಾರ್ಗದರ್ಶನ, ಸಲಹೆ, ತರಬೇತಿ ಕೊಡೋದು, ಅಲ್ಲಿನ ಕನ್ನಡಿಗರು ತಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿಕೊಳ್ಳಕ್ಕೆ ಸಹಾಯ ಮಾಡೋದೂ ಕೂಡಾ ಈ ಘಟಕದ ಅಂಗವಾಗೋದು ಒಳ್ಳೇದು. ಕನ್ನಡ ನಾಡಿನ ಉದ್ದಿಮೆದಾರರ ಪರವಾಗಿ ಹೊರನಾಡುಗಳಲ್ಲಿ ಬೆಂಬಲವಾಗಿ ನೀಲ್ಲಬೇಕು. ಕನ್ನಡದ ಮಾರುಕಟ್ಟೆ ಬೆಳಸಕ್ಕೆ ಉತ್ತೇಜನ ಕೊಡಲು ಮುಂದಾಗಬೇಕು. ಉದಾಹರಣೆಗೆ ಕನ್ನಡ ಸಿನಿಮಾಗೆ ಮಾರುಕಟ್ಟೆ ಕಟ್ಟಿಕೊಡಲು ಈ ಒಂದು ಘಟಕ ತನ್ನ ಎಲ್ಲ ಸಂಪರ್ಕಗಳನ್ನು ಬಳಸಿಕೊಂಡು ಸಹಾಯ ಒದಗಿಸಿಕೊಡಬಹುದು. ಹೊರದೇಶಗಳ ಕನ್ನಡಿಗರಲ್ಲೇ ಸಂಪರ್ಕ ಜಾಲ ಹುಟ್ಟುಹಾಕಬಹುದು. ಒಟ್ನಲ್ಲಿ ಹೊರನಾಡ ಕನ್ನಡಿಗರಿಗೆ ತಾಯ್ನಾಡಿನ ಜೊತೆ ಇರೋ ಸಂಬಂಧವನ್ನು ಉತ್ತಮಗೊಳಿಸೋದೂ, ತಾಯಿಬೇರಿನ ನಂಟನ್ನು ಗಟ್ಟಿ ಮಾಡೋದೂ ಈ ಘಟಕದ ಮೂಲೋದ್ದೇಶವಾಗಲಿ. ಈ ಘಟಕದ ಕೆಲಸದ ವ್ಯಾಪ್ತಿ ಸಮಗ್ರವಾಗಿರಬೇಕಾದ್ದು ನಾಡಿನ ನಾಳಿನ ಒಳಿತಿನ ದೃಷ್ಟಿಯಿಂದ ಸಖತ್ ಅಗತ್ಯವಾದದ್ದು ಗುರು!

ಅಂತರರಾಜ್ಯ ವಲಸೆ ಬಗ್ಗೆ ಏನಂತೀರಾ? ಧಣಿಗಳೇ...


ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಒಳ್ಳೆ ಆಲೋಚನೆಯನ್ನು ಹರಿಬಿಟ್ಟಿದ್ದಾರೆ ಗುರು! ಬೆಂಗಳೂರು ಒಂದು ಬೆಳವಣಿಗೆ ಆದ್ರೆ ಮಾತ್ರಾ ಸಾಲ್ದು, ಕನ್ನಡ ನಾಡು ಉದ್ಧಾರ ಆಗಬೇಕು ಅಂದ್ರೆ ಬೇರೆ ಬೇರೆ ಕಡೆ ಬೆಳವಣಿಗೆಗಳು ಆಗಬೇಕು ಅಂದಿದ್ದಾರೆ. ನಿಜಕ್ಕೂ ಇದು ಮುಖ್ಯಮಂತ್ರಿಗಳು ನಾಡಿನ ಸರ್ವಾಂಗೀಣ ಏಳಿಗೆ ಬಗ್ಗೆ ಹೊಂದಿರೋ ಕಾಳಜಿ ತೋರುಸ್ತಿದೆ. ಆದರೆ ಇದಕ್ಕೆ ಸಾಹೇಬರು ಕೊಟ್ಟಿರೋ ಸಮರ್ಥನೆ ಮಾತ್ರಾ ಸೊಲ್ಪ ಎಡವಟ್ಟಾಗಿದೆ ಗುರು.

ನಗರಗಳಿಗೆ ವಲಸೆ ತಡೀಬೇಕು ಅನ್ನೋ ಕಾರಣ!

ಕನ್ನಡ ನಾಡಿನಲ್ಲಿರೋ ಜನರಲ್ಲಿ ಭಾಳಾ ಜನ್ರು ನಗರಗಳಿಗೆ ವಲಸೆ ಬರ್ತಾ ಇದಾರೆ, ಇದಕ್ಕೆ ಉದ್ದಿಮೆಗಳು ಬೆಂಗಳೂರಿನಲ್ಲಿ ಕೇಂದ್ರಿತವಾಗ್ತಿರೋದು ಕಾರಣ, ಹಾಗಾಗಿ ಬೆಳವಣಿಗೆ ಚಟುವಟಿಕೆಯನ್ನು ಬೆಂಗಳೂರಿನಿಂದ ಆಚೆಗೂ ವಿಸ್ತರಿಸಬೇಕು ಅಂತಾ ಹೇಳಿದಾರೆ. ಇದಕ್ಕೆ ಮೂಲ ಕಾರಣ ನಗರಗಳನ್ನು ನಿಭಾಯಿಸಕ್ಕೆ ಬರ್ತಾ ಬರ್ತಾ ಬಲೇ ತ್ರಾಸು ಉಂಟಾಗುತ್ತೆ ಅನ್ನೋದು ಒಂದ್ಕಡೆ ಆಗಿದ್ರೆ ಬೆಂಗಳೂರೊಂದೇ ಬೆಳವಣಿಗೆ ಹೊಂದ್ತಾ ಉಳಿದ ಕಡೆ ಹಿಂದುಳಿದೇ ಇದ್ರೆ ಸರಿಯಲ್ಲ ಅನ್ನೋದು ಇನ್ನೊಂದು ಕಡೆ. ಒಪ್ಪಲೇಬೇಕಾದ ಮಾತಂದ್ರೆ ಬೆಂಗಳೂರನ್ನ ಬಿಟ್ಟೂ ಹತ್ತಾರು ಕಡೆ ಆರ್ಥಿಕ ಚಟುವಟಿಕೆಗಳು ನಡೀಬೇಕು. ಅದಕ್ಕೆ ಬೇಕಾದ ಮೂಲಸೌಕರ್ಯಗಳಾದ ರಸ್ತೆ, ರೈಲು, ನೀರು, ವಿದ್ಯುತ್ ಎಲ್ಲಾ ಮಾಡಿಕೊಡಬೇಕು. ಇದು ನಿಜಕ್ಕೂ ಕನ್ನಡಿಗರಿಗೆ ಕೆಲಸ ಕೊಡ್ಸುತ್ತೆ, ನಮ್ಮ ಪರಿಣಿತಿ ಹೆಚ್ಚಿಸುತ್ತೆ, ನಮ್ಮ ಏಳಿಗೆ ಉಂಟಾಗಲು ಪೂರಕವಾಗುತ್ತೆ. ಆದ್ರೆ ಇದು ನಗರಗಳಿಗೆ ವಲಸೆ ತಡ್ಯಲ್ಲ, ಬದಲಾಗಿ ಬೆಂಗಳೂರಿಗೆ ವಲಸೆ ತಡೆದೀತು ಅಷ್ಟೇ. ಏನೇ ಅಂದ್ರು ಇದು ಆದ್ಯತೆ ಮೇಲೆ ಆಗಲೇ ಬೇಕಾದ ಕೆಲಸ ಗುರು.
ಅಂತರರಾಜ್ಯ ವಲಸೇನ್ನೇ ತಡೀಬೇಕಾದ್ದಲ್ವಾ?
ಒಳನಾಡಿನಿಂದ, ಹಳ್ಳಿಗಾಡಿನಿಂದ ನಗರಗಳಿಗೆ ವಲಸೆ ಬರ್ತಾರೆ ಜನಾ ಅನ್ನೋದಕ್ಕೆ ಇಷ್ಟು ಮಹತ್ವ ಕೊಟ್ಟಿರೋ ಮಾನ್ಯ ಮುಖ್ಯಮಂತ್ರಿಗಳು ಜೊತೆಯಲ್ಲೇ ಬಂಡವಾಳ ಹರಿವು ಯಾವ ಕಾರಣಕ್ಕೂ ಕೈ ತಪ್ಪದಂತೆ ನೋಡಿಕೊಳ್ಳೋ ಭರವಸೇನೂ ಕೊಟ್ಟಿದಾರೆ. "ಈಗ ಹೊಸ ಹೊಸ ಉದ್ದಿಮೆಗಳು ಆರಂಭ ಮಾಡೋದಾಗ್ಲೀ, ಇಲ್ಲಿ ಬಂಡವಾಳ ಹರಿದು ಬರಲಿ ಅಂತ ಅನೇಕ ರಿಯಾಯ್ತಿಗಳನ್ನು ಉದ್ದಿಮೆದಾರರಿಗೆ ಒದಗಿಸೋದಾಗ್ಲೀ, ನಮ್ಮ ನೆಲ, ಜಲವನ್ನೆಲ್ಲಾ ಕಡಿಮೆ ದರದಲ್ಲಿ ಒದಗಿಸಿ ಕೊಡೋದಾಗ್ಲಿ, ತೆರಿಗೆ ರಜಾ ವರ್ಷದ ಸವಲತ್ತು ಕೊಡೋದಾಗ್ಲೀ ಯಾಕೆ? ನಮ್ಮ ಜನರಿಗೆ ಉದ್ಯೋಗ ಸಿಗಲಿ, ನಮ್ಮೂರು ಆರ್ಥಿಕವಾಗಿ ಬೆಳೀಲಿ ಅನ್ನೋ ಕಾರಣಕ್ಕೆ ತಾನೆ? ಹಾಗಿದ್ರೆ ಕನ್ನಡ ನಾಡೆಂಬ ನಲ್ ತೋಟದಲ್ಲಿ ಮಸ್ತ್ ಮಸ್ತು ಹಣ್ಣು ಬೆಳ್ಸೋ ಮೊದಲು ಆ ಹಣ್ಣುಗಳು ನಮ್ಮೋರಿಗೆ ದಕ್ಕುತ್ತೆ ಅಂತ ಖಚಿತ ಮಾಡ್ಕೊಬೇಕಲ್ವಾ? ಅದುಕ್ಕೊಸ್ಕರ ಬೇಕಾಗೋ ಬೇಲಿ ಹಾಕಬೇಕಲ್ವಾ?ನಮ್ಮದನ್ನೆಲ್ಲಾ ತ್ಯಾಗ ಮಾಡಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡೋದೂ, ಆದ್ರೆ ನಮ್ಮ ಜನರಿಗೆ ಅಲ್ಲಿ ಕೆಲಸ ಇಲ್ಲವಾಗೊದೂ ಯಾವ ನ್ಯಾಯಾ? ಇಲ್ಲಿನ ಉದ್ದಿಮೆಗಳಿಗೆ ಹೊರ ರಾಜ್ಯಗಳ ನೌಕರರನ್ನು ಕರೆ ತರೋದು ತಪ್ಪಲ್ವಾ ಧಣಿಗಳೇ" ಅಂತ ಕನ್ನಡಿಗರು ಮುಖ್ಯಮಂತ್ರಿಗಳಾದ ಯಡ್ಯೂರಪ್ಪ ಅವರನ್ನು ಕೇಳ್ತಾ ಔರೆ ಗುರು. ಹೊರರಾಜ್ಯದೋರು ನಮ್ಮೂರಿಗೆ ಅಡೆತಡೆಯಿಲ್ಲದೆ ಪ್ರವಾಹವಾಗಿ ನುಗ್ಗಿ ಬರ್ತಿರೋದನ್ನು ತಡ್ಯಕ್ಕೆ ಏನಾದರೂ ಮಾಡಬೇಕೂ ಅನ್ನುಸ್ತಿಲ್ವಾ ಧಣಿಗಳೇ? ಅಂತರ ರಾಜ್ಯ ವಲಸೆ ನಿಯಂತ್ರಣದ ಬಗ್ಗೆ ನಿಮ್ಮ ಮತ್ತು ನಿಮ್ಮ ಸರ್ಕಾರದ ನಿಲುವೇನು? ಅದ್ರು ಬಗ್ಗೆನೂ ದನಿ ಎತ್ತಿ ಧಣಿಗಳೇ ಅಂತಾ ಕೇಳ್ತಾ ಔರೆ ಗುರು. ಅಂತರ ರಾಜ್ಯ ವಲಸೆ ನಿಯಂತ್ರಣಕ್ಕೆ ಬೇಕಾದ ಕಾಯ್ದೆಯೊಂದನ್ನು ಜಾರಿಗೆ ತರಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲು ಮುಂದಾಗ್ತೀರಾ ಧಣಿಗಳೇ ಅಂತಾ ಕೇಳ್ತಾ ಔರೆ ಗುರು!

ಕನ್ನಡಿಗರಿಗೆ ಕೆಲಸ - ಹೊಸ ಸರ್ಕಾರಕ್ಕಿದು ಸದವಕಾಶ!


ಆಂಧ್ರಪ್ರದೇಶ ಸರ್ಕಾರ ಸುಮಾರು ನಾಲ್ಕು ವರ್ಷಗಳಿಂದ ತನ್ನ ನಾಡಿನ ಹಳ್ಳಿ ಯುವಕರ ಬದುಕು ಹಸನು ಮಾಡಲು ಉದ್ಯೋಗ ಅವಕಾಶಗಳನ್ನು ಕಟ್ಟಿಕೊಡೋ ಅನೇಕ ಕ್ಷೇತ್ರಗಳಲ್ಲಿ, ಅದ್ರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತರಬೇತಿ ಕೊಡ್ತಾ ಇದೆ ಗುರು! ಮೈಕ್ರೋಸಾಫ್ಟ್ ಒಂದಿಗೆ ಸೇರಿ ಇಂತಹ ಒಂದು ಯೋಜನೇನಾ ಕೈಗೊಂಡಿದ್ದು, ಇದರಿಂದ ಅನೇಕ ಹಳ್ಳಿಗರ ಬದುಕು ಹಸನಾಗಿದೆಯಂತೆ. ಒಟ್ಟಿನಲಿ ಕಾಲಕ್ಕೆ ತಕ್ಕಂತೆ ಬದಲಾಗಿ ತನ್ನ ನಾಡಿನ ಯುವಕರನ್ನು ಲಾಭದಾಯಕ ಉದ್ದಿಮೆಗಳತ್ತ ಕರೆದೊಯ್ಯೋದ್ರಲ್ಲಿ ಕೈಹಾಕಿ ತೆಲುಗು ನಾಡಿನ ಜನರಿಗೆ ಐ.ಟಿ ಕ್ಷೇತ್ರದಲ್ಲೂ ಉದ್ಯೋಗ ವಂಚನೆಯಾಗ್ದೇ ಇರೋ ಹಾಗೆ ನೋಡ್ಕೊಂಡಿದೆ ಗುರು!

ಆಂಧ್ರದ ರಾಜ್ಯ ಸರ್ಕಾರದ ಈ ತರಬೇತಿ ಕಾರ್ಯಕ್ರಮದಡಿ ಮುಂಚೆ ಇಡೀ ತಿಂಗಳು ದುಡಿದರೂ ಸಿಗದಷ್ಟು ಹಣ ಒಂದು ದಿನದಲ್ಲೇ ಸಂಪಾದ್ಸೋ ಸಾಮರ್ಥ್ಯವನ್ನು ಮತ್ತು ಅದಕ್ಕೆ ತಕ್ಕಂತ ಹುದ್ದೆಯನ್ನೂ ತನ್ನ ನೆಲದ ಮಕ್ಕಳಿಗೆ ದೊರಕಿಸಿಕೊಟ್ಟಿದೆ ಗುರು! ಆಂಧ್ರದ ಸರ್ಕಾರ ನಿಜಕ್ಕೂ ತನ್ನ ರಾಜ್ಯದ ಏಳಿಗೆ ತನ್ನ ಯುವಕರ ಉದ್ಯೋಗ ಪರಿಸ್ಥಿತಿಯೊಳಗೆ ಅಡಗಿದೆ ಅಂತ ಚೆನ್ನಾಗೇ ಮನವರಿಕೆ ಮಾಡಿಕೊಂಡಿದೆ. ಇಂತಹ ಯೋಜನೆಯಿಂದ ಆಂಧ್ರ ಪ್ರದೇಶ ಸರ್ಕಾರ ನಾಡಿನ ಯುವಕರು ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಸಿರೋದ್ರ ಜೊತೆಗೆ, ತಮ್ಮ ನಾಡಿನಲ್ಲೇ ಹುಟ್ಟಿಕೊಂಡಿರುವ ಐ.ಟಿ ಕಂಪನಿಗಳ ಕಚೇರಿಗಳೊಳಗಿನ ಉದ್ಯೋಗದ ಅವಶ್ಯಕತೆಗಳನ್ನು ತಮ್ಮ ನಾಡಿನ ಯುವಕರಿಂದಲೇ ಪೂರೈಸಿ ಬೇರೆ ರಾಜ್ಯ ಸರ್ಕಾರಗಳಿಗೆ ಒಂದು ರೀತಿಯ ಉದಾಹರಣೆಯಾಗಿ ನಿಂತಿದೆ!
ಹೊಸ ಸರ್ಕಾರ ಇಂಥಾ ತರಬೇತಿ ಯೋಜನೆ ರೂಪಿಸಲಿ

ಕರ್ನಾಟಕದಲ್ಲೂ ಒಂದು ಹೊಸ ಸರ್ಕಾರ ಬಂದಿದೆ. ನಮ್ಮ ನಾಡಿನ ಹಳ್ಳಿಹಳ್ಳಿಯಲ್ಲೂ ಯುವ ಶಕ್ತಿ ಇದೆ ಮತ್ತು ಅವರಿಗೆ ಉದ್ಯೋಗವಿರದ ಸಮಸ್ಯೆ ಕಾಡ್ತಾ ಇದೆ. ನಮ್ಮ ರಾಜ್ಯ ಸರ್ಕಾರ ಆಂಧ್ರಪ್ರದೇಶ ರೂಪಿಸಿರುವಂಥಾ ಒಂದು ಯೋಜನೇನಾ ನಮ್ಮ ನಾಡಿನ ಮುಂಚೂಣಿ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯವಿಡೀ ಎಲ್ಲಾ ತಾಲೂಕು/ ಹೋಬಳಿಗಳಲ್ಲಿ ಶುರು ಮಾಡಿ ಬೇಡಿಕೆಯ ನಾನಾ ಉದ್ಯೋಗಗಳಿಗೆ ಸಂಬಂಧಪಟ್ಟಂತೆ ಪ್ರತಿಭೆಗಳನ್ನು ಬೆಳೆಸೋ ಕೆಲ್ಸ ಮಾಡಿ, ತರಬೇತಿ ಪಡೆದೋರಿಗೆ ಆಯಾ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಶಕ್ತರನ್ನಾಗಿ ಮಾಡಬೇಕು ಗುರು!
Related Posts with Thumbnails