ನಿಮ್ಮ ಮನೇಲೇ ಇರ್ತೀನಿ, ನಿಮ್ಮನ್ನೇ "ಕೀಳು ಜನಾಂಗ" ಅಂತ ಬೈತೀನಿ!


೨೯ ಜೂನಿನ "ಬ್ಯಾಂಗಲೋರ್ ಬಯಾಸ್" ಎಂಬ ಬೆಂಗಳೂರಿನ ಒಂದು ಇಂಗ್ಲೀಷ್ ಪುಡಿ-ಪತ್ರಿಕೆಯಲ್ಲಿ "ಬ್ಯಾಂಗಲೋರ್ ಟಾರ್ಪೆಡೋ" ಎಂಬ ಪುಣ್ಯಾತ್ಮನ ಉವಾಚಗಳಿಗೆ ಸ್ವಲ್ಪ ಗಮನ ಹರಿಸೋಣ. ಈ ಪತ್ರಿಕೆಯೇನು ಮನೆಮಾತಾಗಿದೆ, ಇವರು ಬರೆದಿದ್ದಕ್ಕೆಲ್ಲ ನಾವು ಉತ್ತರ ಕೊಡಬೇಕು ಅಂತೇನಲ್ಲ (ಯಾವ್ ಬಯಾಸೋ ಯಾರೂ ಕೇಳೇ ಇಲ್ಲ, ಬಿಡಿ!), ಆದರೆ ನಮ್ಮ ಮನೆಯಲ್ಲೇ ಇದ್ದುಗೊಂಡು ನಮ್ಮನ್ನೇ ಕೀಳು ಜನಾಂಗ ಅನ್ನುತ್ತಿರುವವನ ಮೀಟ್ರು ಎಷ್ಟು ಅಂತ ನೋಡಿ:

A few weeks after the release of Rajnikant's latest movie Sivaji - The Boss, one still encounters traffic jams outside theatres screening the movie, presumably running to a full house or close to it. Compare this to the sad state of Kannada cinema and its offerings and you wonder why actors and other stalwarts of this so called industry still indulge in pointless brinkmanship and bravado.


ಕನ್ನಡ ಚಿತ್ರರಂಗ ದುಃಖಕರ ಸ್ಥಿತಿಯಲ್ಲಿ ಇದೆ ಅನ್ನೋದು ಶುದ್ಧ ಸುಳ್ಳು, ಅಂಕಿ-ಅಂಶಗಳ ಆಧಾರವಿಲ್ಲದ, ಬಯಾಸ್ ತುಂಬಿದ ಬೊಗಳೆ. ಇತ್ತೀಚಿನ "ಜೋಗಿ" (ಅಂದಹಾಗೆ ಈ ಚಿತ್ರವನ್ನು ನಾಮುಂದು-ತಾಮುಂದು ಅಂತ ತಮಿಳರು ಬಂದು ತಮಿಳಲ್ಲಿ ರೀಮೇಕ್ ಮಾಡಿದ್ದನ್ನ ಮಿಸ್ಟರ್ ಟಾರ್ಪೆಡೋಗೆ ಯಾರಾದ್ರೂ ಹೇಳಬೇಕು!), "ಅಮೃತಧಾರೆ", "ಸಯನೈಡ್", "ಮುಂಗಾರುಮಳೆ", "ದುನಿಯಾ" - ಇವುಗಳೆಲ್ಲ ಕನ್ನಡ ಚಿತ್ರರಂಗದ ಜನಪ್ರಿಯತೆ ಮತ್ತು ಹೆಗ್ಗಳಿಕೆಯನ್ನು ಹೇಳಿಕೊಳ್ಳುತ್ತಿರುವಾಗ ಇವನಿಗೆ ಕಣ್ಣು ಕುರುಡಾಗಿತ್ತಾ? ಅಥವಾ ಕಿವುಡೇನಾದರೂ ಬಡಿದಿತ್ತಾ? "So called industry" ಅಂತಾನಲ್ಲ, ಕನ್ನಡ ಚಿತ್ರರಂಗ ಒಂದು ಉದ್ದಿಮೆಯೇ ಅಲ್ಲ ಅಂತ ಕನ್ನಡಿಗರಿಗೇನು ಅನ್ನಿಸುವುದಿಲ್ಲ! ಕನ್ನಡದ ನಟ-ನಟಿಯರೆಲ್ಲ ಸಮಯ ದಂಡ ಮಾಡ್ತಿದಾರೆ ಅಂತ ನಮಗೇನು ಖಂಡಿತ ಅನ್ನಿಸುವುದಿಲ್ಲ! ದಿನೇ ದಿನೇ ಜನಪ್ರಿಯವಾಗುತ್ತಿರುವ ಕನ್ನಡ ಚಿತ್ರಗಳು, ಕತೆಗಳು, ನಟ-ನಟಿಯರನ್ನು ನೋಡಿದರೆ ಸಕ್ಕತ್ ಸಂತೋಷವೇ ಆಗುತ್ತದೆ. ಹೀಗಿರುವಾಗ ನಮ್ಮ ಭೂಪ ಅನ್ನೋದು ನೋಡಿ:

Most Kannada movies...are boring and pointless

ಈ ಮಹಾನುಭಾವನಿಗೆ ಕನ್ನಡ ಚಿತ್ರಗಳು ಬೋರಂತೆ, ಅರ್ಥವಿಲ್ಲದ್ದಂತೆ. ಕನ್ನಡ ಚಿತ್ರರಂಗದ ಬಗ್ಗೆ ಈರೀತಿ ಬೈದು ಬರೆಯುವ ಇವನು ಎಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದಾನಂತೆ? ಅಥವಾ ಇವನಿಗೆ ತಮಿಳರು ಪೆದ್ದಪೆದ್ದಾಗಿ ಕುಣೀತಿಲ್ಲದ ಚಿತ್ರಗಳೆಲ್ಲ boring and pointless ಅನ್ನೋದಾದರೆ ತನ್ನ ಅನಿಸಿಕೆಯನ್ನ ತನ್ನಪಾಡಿಗೆ ತಾನಿಟ್ಟುಕೊಂಡಿದ್ದರೆ ಸಾಕಾಗಿತ್ತಲ್ಲ? ಹೀಗೆ ಅವಹೇಳನ ಮಾಡಿ ಕನ್ನಡಿಗರನ್ನ ಕೆಣಕುವ ಕೆಲಸಕ್ಕೆ ಯಾಕೆ ಕೈಹಾಕಬೇಕಿತ್ತು?
Why the need to compare when apparently there is no comparison?
ಇವನು ಹೇಳುತ್ತಿರುವುದೇನೆಂದರೆ - ತಮಿಳು ಚಿತ್ರಗಳಿಗೂ ಕನ್ನಡ ಚಿತ್ರಗಳಿಗೂ ಹೋಲಿಕೆಯೇ ಇಲ್ಲ, ಹೋಲಿಸುತ್ತಿದ್ದೀರಿ ಯಾಕೆ ಅಂತ. ಈ ತರ್ಕಕಲಾಚತುರನೇ ಹೋಲಿಕೆ ಮಾಡುತ್ತಿರುವುದು - ಕನ್ನಡ ಕೀಳು, ತಮಿಳು ಮೇಲು ಅಂತ, ನಾವಲ್ಲವಲ್ಲ? ಶಿವಾಜಿ ವಿರುದ್ಧ ಪ್ರತಿಭಟಿಸಿದವರು ಯಾರೂ ಕನ್ನಡ ಚಿತ್ರ ಮೇಲು, ತಮಿಳು ಕೀಳು ಎನ್ನಲಿಲ್ಲವಲ್ಲ? ಹೋಲಿಕೆ ತಾನೇ ಮಾಡಿ ತನ್ನ ತರ್ಕದಲ್ಲೇ ದೋಷ ಇಟ್ಟುಕೊಂಡು ಇವನು ನಮ್ಮನ್ನು ಕೀಳು ಎನ್ನುವುದು ಬೇರೆ! ಇಷ್ಟಕ್ಕೇ ಇವನ ಕನ್ನಡದ ಅವಹೇಳನ ನಿಲ್ಲಲ್ಲ. ಬರೀತಾನೆ:
It is quite clear that the dwindling number of Kannada movie fans have little in their own beloved Sandalwood to entertain them. There is a limit to the number of unimaginative movies with the same old scripts with the same ugly stars who cannot act scared on a sinking ship one can go watch.
ಕನ್ನಡ ಚಲನಚಿತ್ರ ಹಿಂದೆಂದೂ ಇಲ್ಲದಷ್ಟು ಜನಪ್ರಿಯತೆ ಪಡೆಯುತ್ತಿದೆ ಅನ್ನೋದು ಇವನಿಗೆ ಕಾಣಿಸುತ್ತಿಲ್ಲ, ಅದನ್ನ ನೋಡಕ್ಕೆ ಇವನಿಗೆ ಯೋಗ್ಯತೆಯಿಲ್ಲ ಅಂತ ಈಗಾಗಲೇ ಗೊತ್ತಾಗಿದೆ. ಯಾವ ಅಂಕಿ-ಅಂಶಗಳ ಆಧಾರದಮೇಲೆ ಕನ್ನಡ ಚಿತ್ರಗಳನ್ನು ನೋಡೋರು ಕಡಿಮೆಯಾಗುತ್ತಿದ್ದಾರೆ ಅಂತ ಹೇಳ್ತಿದಾನೆ ಸ್ವಲ್ಪ ಕೇಳಿ! ಅಂಕಿ ಅಂಶ ಇಲ್ಲದೆ ತಮಿಳರ ಬಯಾಸನ್ನು ಬೆಂಗಳೂರಿನಲ್ಲಿ ತುಂಬಲಿಕ್ಕೆ ಹೊರಟಿದ್ದಾನೆಯೇ ಹೊರತು ಇವನ ವಾದದಲ್ಲಿ ಯಾವ ನಿಜಾಂಶವೂ ಇಲ್ಲ, ಯಾವ ತರ್ಕವೂ ಇಲ್ಲ. ಮತ್ತೆ ಕನ್ನಡ ಚಿತ್ರಗಳು unimaginative ಅಂತೆ! ಎಷ್ಟು ಚಿತ್ರಗಳನ್ನು ವಿಮರ್ಶೆ ಮಾಡಿ ಈ ತೀರ್ಮಾನಕ್ಕೆ ಬಂದನಂತೆ? ಮತ್ತೆ ugly stars ಅಂತೆ! ಈ ಒಂದೇ ಮಾತು ಕನ್ನಡಿಗರ ವಿರುದ್ಧ ಜನಾಂಗೀಯ ದ್ವೇಷವನ್ನು ತೋರಿಸುತ್ತದೆ. ಹಿಂದೆ ಬ್ರಿಟಿಷರು ದಕ್ಷಿಣ ಆಫ್ರಿಕಾಗೆ ಹೋಗಿ ಅಲ್ಲಿಯ ಜನರು ugly ಎಂದಂತಿದೆ ಇವನ ಅಪವಾದ.
Nobody wants to watch your movies? Oh too bad! Try the auto-driver community...try offering them one-and-half.
ಇವನು ಹೇಳುತ್ತಿರುವುದು - ಕನ್ನಡ ಚಿತ್ರಗಳು ಕೀಳು, ಅದನ್ನ ನೋಡುವುದು ಕೇವಲ ಆಟೋಚಾಲಕರ "ಸಮಾಜ" ಮಾತ್ರ (ಆದ್ದರಿಂದ ಅವರೂ ಕೀಳು) ಅಂತ. ಮೊದಲನೆಯದಾಗಿ ಕನ್ನಡ ಚಿತ್ರಗಳು ಕೀಳು ಅನ್ನೋದನ್ನ ಯಾವ ಆಧಾರವೂ ಇಲ್ಲದೆ ತೀರ್ಮಾನಿಸಿದ್ದಾನೆ ಈ ಅಯೋಗ್ಯ. ಎರಡನೆಯದಾಗಿ ಆಟೋಚಾಲಕರು ಕೀಳು ಅಂತ ಹೇಳೋ ಅಧಿಕಾರ ಇವನಿಗೆ ಯಾರು ಕೊಟ್ಟೋರು? ಇಲ್ಲವೇ ಕನ್ನಡ ಚಿತ್ರಗಳನ್ನ ಅವರು ಮಾತ್ರ ನೋಡೋದು ಅಂತ ಯಾವ ಅಂಕಿ-ಅಂಶದ ಆಧಾರದ ಮೇಲೆ ಹೇಳಿದ್ದಾನೆ?
ನಮ್ಮ ಮನೇಲೇ ಇದ್ದು ನಮ್ಮನ್ನೇ ಕೀಳು ಜನಾಂಗ ಅಂತ ಕರೆಯುವ, ಉಂಡಮನೆಗೆ ಎರಡು ಬಗೆಯುವ ಕೃತಘ್ನರು ಇವರು. ಥೂ!

ವಿಶ್ವಮಾನವನ ಜೀನೋಮಿನಲ್ಲಿ ಸ್ಥಳೀಯತೆಯ ಅಚ್ಚು

ಇವತ್ತಿನ ನ್ಯೂಯಾರ್ಕ್ ಟೈಮ್ಸ್ ನಲ್ಲಿ ನಿಕೊಲಾಸ್ ವೇಡ್ ಬರೀತಾರೆ (ಇಡೀ ಬರಹಕ್ಕೆ ಇಲ್ಲಿ ಒತ್ತಿ):
The genome bears many fingerprints in places where natural selection has recently remolded the human clay, researchers have found, as people in the various continents adapted to new diseases, climates, diets and, perhaps, behavioral demands.

A striking feature of many of these changes is that they are local. The genes under selective pressure found in one continent-based population or race are mostly different from those that occur in the others.

ಗಮನಿಸಬೇಕಾದ ವಿಷಯವೇನೆಂದರೆ - ಮಾನವನ ಬೆಳವಣಿಗೆಗೆ ಸ್ಥಳೀಯ ವಾತಾವರಣವೇ ಹೆಚ್ಚಾಗಿ ಕಾರಣವಾಗುವುದು. ಸ್ಥಳೀಯ ಗಾಳಿ-ಬೆಳಕಿನ ಸ್ಥಿತಿ, ಸ್ಥಳೀಯ ಬೆಳೆ-ತರಕಾರಿ-ಮಾಂಸಗಳು, ಸ್ಥಳೀಯ ಸಂಸ್ಕೃತಿ. ಸ್ಥಳೀಯ ಭಾಷೆ ಅಂತ ವಿಶೇಷವಾಗಿ ಹೇಳಬೇಕೆ?

ಒಟ್ಟಿನಲ್ಲಿ ವಿಶ್ವಮಾನವನ ಜೀನೋಮಿಲ್ಲಿ ಸ್ಥಳೀಯತೆಯ ಅಚ್ಚಿರುವುದಕ್ಕೆ ಸಂದೇಹವಿಲ್ಲ ಅನ್ನೋದಕ್ಕೆ ಇತ್ತೀಚಿನ ಸಂಶೋಧನೆಯ ಸಮರ್ಥನೆ ಬೇಕಾಗಿತ್ತಾ? ಸ್ಪಷ್ಟವಾಗೇ ಇದೆಯಲ್ಲ?

ಕನ್ನಡದಲ್ಲಿ ಹುಡುಕುವುದು ಹೇಗೆ?

ಅಂತರ್ಜಾಲದ ನಿಜವಾದ ಲಾಭ ಪಡೀಬೇಕಾದರೆ ನಿಮಗೆ ಬೇಕಾದ ಮಾಹಿತಿಯನ್ನ ಹುಡುಕಕ್ಕೆ ಆಗೋದು ಬಹಳ ಮುಖ್ಯ. ಅದಕ್ಕೇ ಗೂಗಲ್ ನಂತಹ ಹುಡುಕು-ಯಂತ್ರಗಳು ಕೋಟಿಮೇಲೆ ಕೋಟಿ ರೂಪಾಯಿ ಪೇರಿಸಿಕೊಳ್ಳುತ್ತಿರುವುದು. ಇತ್ತೀಚೆಗೆ ಅಂತರ್ಜಾಲದಲ್ಲಿ ಕನ್ನಡ ಎಲ್ಲೆಲ್ಲೂ ಹರಡಿದೆ. ಕನ್ನಡದ ಪುಟಗಳಿಗೆ ಏನೂ ಕಡಿಮೆಯಿಲ್ಲ. ಸುಮ್ಮನೆ "ಕನ್ನಡ" ಅಂತ ಗೂಗಲ್ಲಿನಲ್ಲಿ ಹುಡುಕಿದರೆ ಹೆಚ್ಚು ಕಡಿಮೆ ೧೧ ಲಕ್ಷ ಪುಟಗಳಿವೆ ಅನ್ನತ್ತೆ.
ಕನ್ನಡದಲ್ಲಿ ಹುಡುಕುವುದು - ಗೂಗಲ್
ಕನ್ನಡದಲ್ಲಿ ಹುಡುಕಕ್ಕೆ ನೀವೇನು ಮಾಡಬೇಕು ಗೊತ್ತಾ?

  • ಮೊದಲನೇದಾಗಿ ನಿಮ್ಮ ಗಣಕ ಯೂನಿಕೋಡ್ ತೋರಿಸುವುದಕ್ಕೆ/ಬರೆಸಿಕೊಳ್ಳುವುದಕ್ಕೆ ತಯಾರಿರಬೇಕು. ಯುನಿಕೋಡ್ ಅನ್ನೋದು ಪ್ರಪಂಚದ ಎಲ್ಲಾ ಭಾಷೆಗಳನ್ನೂ ಒಳಗೊಂಡ ಒಂದು ಕೋಡ್. ನಿಮ್ಮ ಗಣಕಕ್ಕೆ ಯುನಿಕೋಡ್ ಸೌಲಭ್ಯ ಒದಗಿಸಕ್ಕೆ ಇಲ್ಲಿ ನೋಡಿ.

  • ಯುನಿಕೋಡಿನಲ್ಲಿ ಬರೆಯುವುದಕ್ಕೆ ಬಿಡುವ ಒಂದು ತಂತ್ರಾಂಶ ಹಾಕಿಕೊಳ್ಳಿ. ಏನ್ ಗುರು ಉಪಯೋಗಿಸುವುದು ನೇರ ಬರಹ ಅಥವಾ ಬರಹ ಡೈರೆಕ್ಟ್.

  • ನೇರ ಬರಹ ಉಪಯೋಗಿಸಿದರೆ ಸಿಸ್ಟಮ್ ಟ್ರೇನಲ್ಲಿರುವ ಬರಹ ಐಕನ್ ಮೇಲೆ ಒತ್ತಿ Language -> Kannada -> Unicode ಆರಿಸಿಕೊಳ್ಳಿ. ನಿಮ್ಮ ಮೆಚ್ಚಿನ ತಂತ್ರಾಂಶವನ್ನು ಉಪಯೋಗಿಸಿ ಗೂಗಲ್-ಗೆ(ಇಲ್ಲವೇ ಇನ್ನೊಂದು ಹುಡುಕು-ಪುಟಕ್ಕೆ) ಹೋಗಿ ನೇರವಾಗಿ ಕನ್ನಡದಲ್ಲಿ ಹುಡುಕು-ವಾಕ್ಯವನ್ನು ಬರೆಯಿರಿ, ಎಂಟರ್ ಒತ್ತಿ, ಅಷ್ಟೆ!


ಇತ್ತೀಚೆಗೆ kannadasearch.com ಅನ್ನುವ ಒಂದು ಕನ್ನಡದ ಹುಡುಕು ಪುಟ ಬೇರೆ ತಲೆಯೆತ್ತಿದೆ. ಇದನ್ನೂ ಉಪಯೋಗಿಸಬಹುದು.

ನಮಸ್ಕಾರ ಗುರು!

ಬನವಾಸಿ ಬಳಗ
ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಯಾವುದೇ ರೀತಿಯ ಚೌಕಾಸಿಯಿಲ್ಲದೆ ಕನಸುಕಂಡು, ಆ ಕನಸನ್ನು ಹೆಜ್ಜೆಹೆಜ್ಜೆಯಾಗಿ ನನಸು ಮಾಡುತ್ತಿರುವ ವೃತ್ತಿಪರ ಯುವ ಕನ್ನಡಿಗರ ಬಳಗವೇ ಬನವಾಸಿ ಬಳಗ.

ಇಂದು ಅನೇಕ ಕನ್ನಡಪರ ಸಂಘಟನೆಗಳು ಅಸ್ತಿತ್ವದಲ್ಲಿರುವಾಗ ಅವುಗಳ ನಡುವೆ ಬನವಾಸಿ ಬಳಗ ತನ್ನದೇ ಆದ ವಿಶಿಷ್ಟತೆಯಿಂದ ಭಿನ್ನವಾಗಿ ಕಾಣುತ್ತದೆ. ಬನವಾಸಿ ಬಳಗ - ವೃತ್ತಿಪರರು ಒಟ್ಟಾಗಿ ಕಟ್ಟಿಕೊಂಡ ಸಂಘಟನೆಯಾಗಿದೆ. ಈ ಸಂಘಟನೆಯ ಸದಸ್ಯರು ದೇಶ ವಿದೇಶಗಳಲ್ಲಿ ನೆಲೆಸಿದ್ದು ಮಾಹಿತಿ ತಂತ್ರಜ್ಞಾನವೂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಕೊಂಡ ವೃತ್ತಿಪರರಾಗಿದ್ದು, ತಮ್ಮ ವೃತ್ತಿಪರತೆಯನ್ನು ನಾಡುಕಟ್ಟುವ ಕೆಲಸದಲ್ಲಿ ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

ಪರಭಾಷಿಕರು ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲು ಪೂರಕವಾಗುವಂತೆ, ಬೆಂಗಳೂರಿನಲ್ಲಿರುವ ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕನ್ನಡ ಕಲಿ ಎನ್ನುವ ಕನ್ನಡಭಾಷೆಯನ್ನು ಕಲಿಸುವ ಕಾರ್ಯಕ್ರಮವನ್ನು ರೂಪಿಸಿ ಜಾರಿಗೆ ತರುತ್ತಿದ್ದಾರೆ. ಬೆಂಗಳೂರಿನ ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಕನ್ನಡಿಗರಿಗೆ ಉದ್ಯೋಗ ಸಿಗಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉದ್ಯೋಗ ಮಾರ್ಗದರ್ಶನ ಶಿಬಿರಗಳನ್ನು ಬನವಾಸಿ ಬಳಗ ನಡೆಸುತ್ತಾ ಬಂದಿದೆ. ಈ ಕಾರ್ಯಕ್ರಮ ಮೂಲಕ ಹೊಸದಾಗಿ ಪದವಿ ಮುಗಿಸಿ ಹೊರಬಂದ ಕನ್ನಡಿಗರಿಗೆ ಸಂದರ್ಶನಗಳನ್ನು ಎದುರಿಸುವ ಬಗ್ಗೆ, ಕೆಲಸ ಪಡೆಯಲು ಬೇಕಾದ ಕೌಶಲ್ಯಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ. ಇಂತಹ ಸುಮಾರು ಹತ್ತಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿದ ಹೆಗ್ಗಳಿಕೆ ಬನವಾಸಿ ಬಳಗದ್ದು.

ನಮ್ಮ ಹಿರಿಮೆ, ಇತಿಹಾಸ, ನಮ್ಮತನದ ಅರಿವನ್ನು ನಮ್ಮ ಕನ್ನಡಿಗರಲ್ಲಿ ಮೂಡಿಸಲು ಸಿಂಹಗನ್ನಡಿ ಎನ್ನುವ ವಿಶೇಷ ಕಾರ್ಯಕ್ರಮ ಸರಣಿಯನ್ನು ಬನವಾಸಿ ಬಳಗ ನಡೆಸುತ್ತಾ ಬಂದಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಪರಿಣಿತ ಕನ್ನಡಿಗರಿಂದ ಉಪನ್ಯಾಸಗಳನ್ನು ಕೊಡಮಾಡಲಾಗಿದೆ.

ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿಯ ಪ್ರವಾಹದಿಂದ ಬೆಳಗಾವಿಯ ಅನೇಕ ಹಳ್ಳಿಗಳು ಮುಳುಗಿ ತೊಂದರೆಗೆ ಒಳಗಾಗಿದ್ದಾಗ, ಬನವಾಸಿ ಬಳಗದ ವತಿಯಿಂದ ಸಪ್ತಸಾಗರವೆಂಬ ಹಳ್ಳಿಯ ನೂರು ಕುಟುಂಬಗಳಿಗೆ ಪರಿಹಾರ ವಿತರಿಸಲಾಯಿತು.

ಜಪಾನ್, ಅಮೇರಿಕಾ, ಇಸ್ರೇಲ್, ಯೂರೋಪು ಒಕ್ಕೂಟಗಳಂತಹ ಮುಂದುವರೆದ ದೇಶಗಳ ಮತ್ತು ಬಾಂಗ್ಲಾದಂತಹ ದೇಶಗಳ ವ್ಯವಸ್ಥೆಗಳನ್ನು ಹತ್ತಿರದಿಂದ ಅಧ್ಯಯನ ಮಾಡುತ್ತಿರುವುದು ಬನವಾಸಿ ಬಳಗದ ನಿಲುವುಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಅನುಕೂಲಕರವಾಗಿದೆ.

ಆಲೂರು ವೆಂಕಟರಾಯರು, ಕುವೆಂಪು, ಅ ನ ಕೃಷ್ಣರಾಯರಂತಹ ಹಿರಿಯರು ತೋರಿಸಿಕೊಟ್ಟ ಹಾದಿಯಿಂದಲೂ, ವಿಶ್ವೇಶ್ವರಯ್ಯನಂತಹ ಮಹನೀಯರು ಕಂಡ ಕನುಸುಗಳಿಂದಲೂ ಪ್ರೇರಿತರಾದ ಬನವಾಸಿ ಬಳಗ ನಾಡಿಗೆ ಕೊಡಮಾಡುತ್ತಿರುವ ಚಿಂತನಾ ಲಹರಿಯನ್ನು ಪ್ರತಿದಿನ ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ನಮ್ಮ ನಿಮ್ಮಲ್ಲಿನ ಕನ್ನಡತನ ಈ ಮೂಲಕ ಜಾಗೃತಿಯಾಗಲಿ ಅಂದು ಆಶಿಸುತ್ತೇವೆ...

ಸುದ್ದಿಯಲ್ಲಿ ಬನವಾಸಿ ಬಳಗ
ಕನ್ನಡಿಗರಿಗೆ ಉದ್ಯೋಗ ಮಾರ್ಗದರ್ಶನ ಶಿಬಿರಗಳು
http://thatskannada.oneindia.in/news/2006/03/16/banavasi_councelling.html
http://thatskannada.oneindia.in/news/2006/06/08/career.html
http://thatskannada.oneindia.in/sahitya/article/140605career.html
http://thatskannada.oneindia.in/sahitya/article/290606banavasi.html
http://thatskannada.oneindia.in/news/2005/06/30/workshop.html
http://thatskannada.oneindia.in/sahitya/article/280805career.html

ಕನ್ನಡ ಬಾರದವರಿಗೆ ಕನ್ನಡ-ಕಲಿ ಕಾರ್ಯಕ್ರಮಗಳು
http://www.kannadakali.org/
http://thatskannada.oneindia.in/sahitya/article/170506kannada.html

ಸಿಂಹಗನ್ನಡಿ - ಬೆಂಗಳೂರಿನಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಜಾಗೃತಿ
http://thatskannada.oneindia.in/news/2006/02/13/banavasi.html
http://thatskannada.oneindia.in/news/2006/02/10/balaga.html
http://thatskannada.oneindia.in/news/2006/05/18/simhagannadi.html
http://thatskannada.oneindia.in/news/2006/03/18/banavasi_simhagannadi.html

ಇತರ ಸುದ್ದಿಗಳು/ಬರಹಗಳು
http://thatskannada.oneindia.in/category/response/120405sampige.html (ಕನ್ನಡಿಗನ ಆದ್ಯಕರ್ತವ್ಯಗಳು)http://thatskannada.oneindia.in/cine/kuteera/071204banavasi.html (ಕನ್ನಡ ಸಿನೆಮಾ)http://thatskannada.oneindia.in/category/response/150506petition.html (ಎಫ್. ಎಂ. ಮನವಿ)http://thatskannada.oneindia.in/sahitya/article/241105belgaum.html (ಬೆಳಗಾವಿ ನಮ್ಮದು)http://thatskannada.oneindia.in/sahitya/debate/110105mart5.html (ಫ್ಯಾಮಿಲಿ ಮಾರ್ಟ್)http://thatskannada.indiainfo.com/sahitya/debate/070105mart_apology.html (ಫ್ಯಾಮಿಲಿ ಮಾರ್ಟ್ ತಪ್ಪೊಪ್ಪಿಗೆ)http://thatskannada.oneindia.in/chowchow/travel/010705biligiri.html (ಬಿಳಿಗಿರಿರಂಗನಬೆಟ್ಟ)http://thatskannada.oneindia.in/cine/controversy/130605dubbing.html (ಡಬ್ಬಿಂಗ್)http://thatskannada.oneindia.in/sahitya/article/240105srinivas.html (ವಲಸೆ)http://thatskannada.oneindia.in/sahitya/article/141105anand.html (ಭಾಷಾನೀತಿ)http://thatskannada.oneindia.in/category/response/151105sampige.html (ಹಿಂದಿ ಸವಾರಿ)http://thatskannada.oneindia.in/news/2006/02/22/aluru.html (ಅಲೂರ ವೆಂಕಟರಾಯರು)http://thatskannada.oneindia.in/news/2005/01/31/krv.html (ಕರವೇ ಸಮಾವೇಶ)http://thatskannada.oneindia.in/sahitya/article/060705globalisation.html (ಜಾಗತೀಕರಣದ ಬಗ್ಗೆ)http://thatskannada.oneindia.in/category/response/250805shashank.html (ಹಚ್ ಕಂಪನಿಗೆ ಬಿಸಿ)

ಸಾಮಾಜಿಕ ಕಳಕಳಿ
http://thatskannada.oneindia.in/news/2005/10/01/flood_relief.html
http://thatskannada.oneindia.in/news/2005/10/29/banavasi.html
http://www.imagestation.com/album/pictures.html?id=2118821666&code=18827360&mode=invite&DCMP=isc-email-AlbumInvite
http://www.imagestation.com/category.html?URI=%2Fcategory%2FTravel_%26_Vacations%2FAsia%2FIndia%2Fpopular.html

"ಎಲ್ಲ ಓಕೆ, ಈ ಬ್ಲಾಗ್ ಯಾಕೆ" ಅಂತೀರಾ?
ಪ್ರಪಂಚದ ಆಗುಹೋಗುಗಳನ್ನು ಕನ್ನಡದಲ್ಲಿ ತಿಳಿಸಿಕೊಡುವ ತಾಣಗಳಿಗೆ, ಬ್ಲಾಗುಗಳಿಗೆ ಇತ್ತೀಚಿಗೆ ಕಡಿಮೆಯೇನಿಲ್ಲ. ಆದರೆ ಅವುಗಳನ್ನು ಕನ್ನಡದ ಕಣ್ಣಿಂದ ನೋಡಿ, ಕನ್ನಡದ ಕಣ್ಣಿಗೆ ತೋರಿಸುವ ಬ್ಲಾಗುಗಳು ಇಲ್ಲವೇ ಇಲ್ಲ ಎಂದರೆ ಸುಳ್ಳಲ್ಲ. ಅಂತಹ ಒಂದು ಬ್ಲಾಗು ಇದು. ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳಿಗೂ ನಮಗೂ ಏನು ಸಂಬಂಧ? ನಾವು ಅವುಗಳ ಬಗ್ಗೆ ಯಾವ ನಿಲುವನ್ನು ತಾಳಬೇಕು? ಈ ಪ್ರಶ್ನೆಗಳನ್ನು ಕೇಳಿ, ಅವುಗಳಿಗೆ ಅತ್ಯಂತ ತರ್ಕಬದ್ಧವಾಗಿ ಹಾಗೂ ನಮ್ಮ - ಎಂದರೆ ಕನ್ನಡಿಗರ - ಏಳಿಗೆಯನ್ನು ಮನಸ್ಸಿನಲ್ಲಿಟ್ಟು ಉತ್ತರ ಹುಡುಕುವ ಒಂದು ಪ್ರಯತ್ನ ಇದು. ಪ್ರಪಂಚದ ಆಗುಹೋಗುಗಳನ್ನು ಕನ್ನಡದ ಕಣ್ಣಿನಲ್ಲಿ ಕಾಣಬೇಕಾ? ಕರ್ನಾಟಕದಲ್ಲಿ ಅಲುಗಾಡುವ ಪ್ರತಿಯೊಂದು ಎಲೆಯ ಹಿಂದೆ ಯಾವ ಕೈಯಿದೆ ಅಂತ ತಿಳಿಯಬೇಕಾ...ಇಲ್ಲವೇ ತಿಳಿಸಬೇಕಾ? ನಮ್ಮ ಏಳಿಗೆಗೆ ಯಾವುದು ಪೂರಕ, ಯಾವುದು ಮಾರಕ ಅಂತ ತಿಳೀಬೇಕಾ...ಇಲ್ಲವೇ ನಮ್ಮ ಜನಕ್ಕೆ ಹೇಳಿಕೊಡಬೇಕಾ? ನಮ್ಮ ಏಳಿಗೆಗೆ ಎಲ್ಲೆಲ್ಲಿ ಯಾವಯಾವ ಎಲೆ ಅಲುಗಾಡಬೇಕು ಅಂತ ತಿಳೀಬೇಕಾ...ಇಲ್ಲವೇ ತಿಳಿಸಿಕೊಡಬೇಕಾ? ಇಲ್ಲವೇ ಸುಮ್ಮನೆ ಹರಟಬೇಕಾ? ಹಾಗಾದರೆ enguru.blogspot.com ಗೆ ಸ್ವಾಗತ! ನಮ್ಮ ಸುತ್ತಲಿನ ಆಗುಹೋಗುಗಳನ್ನು ಕನ್ನಡದ ಕಣ್ಣಿನಿಂದ ನೋಡುವ ಈ ಬ್ಲಾಗಿನಲ್ಲಿ, ಹೊಸ ಹೊಸ ವಿಚಾರ ಧಾರೆಗಳು ಹರಿಯ ಬರುತ್ತಿವೆ. ಭಾಷೆ, ಜನಾಂಗ, ದೇಶ, ವಿಶ್ವಮಾನವತ್ವ, ಏಳಿಗೆ, ಜಾಗತೀಕರಣ... ಹೀಗೆ ಎಲ್ಲ ಆಯಾಮಗಳನ್ನು ಕನ್ನಡದ ಹಿತದೃಷ್ಟಿಯಿಂದ ಕಾಣುವ ಪ್ರಯತ್ನ ಮತ್ತು ತುಡಿತವನ್ನು ನಾವು ಇವುಗಳಲ್ಲಿ ಕಾಣಬಹುದು.


"ಏನ್ ಗುರು" ಮತ್ತು "ಕಾಫಿ" ಗಳ ಕತೆ
ನಮ್ಮನಮ್ಮಲ್ಲೇ ಹೋಗಿ-ಬನ್ನಿ ಯಾಕೆ ಅಂತ ಏನ್ ಗುರು ಅಂತ ಹೆಸರಿಟ್ಟಿದೆ. ಇಲ್ಲಿ ಗಂಡಸರನ್ನೇನು ಮನಸ್ಸಿನಲ್ಲಿಟ್ಟು ಗುರು ಎಂದಿಲ್ಲ. ಒಂಥರಾ ಎಫೆಕ್ಟ್ ಇರ್ಲಿ ಅಂತ ಆಡುಮಾತನ್ನೇ ಉಪಯೋಗಿಸಿದೆ. ಅಂದಹಾಗೆ ಕಾಫಿ ಅಂದರೆ ನಮಗೆ ಹುಚ್ಚು. ಅದೇ ನಮ್ಮ ಪ್ರೇರಕ ಶಕ್ತಿ. ಅದಿಲ್ಲದೆ ಈ ಬ್ಲಾಗೂ ಇಲ್ಲ, ಎಂಥದೂ ಇಲ್ಲ.
Related Posts with Thumbnails