Showing posts with label ಸಂಘಟನೆಗಳು. Show all posts
Showing posts with label ಸಂಘಟನೆಗಳು. Show all posts

ಕನ್ನಡ ನೆಲದಲ್ಲಿನ ಕೆಲಸ - ಕನ್ನಡಿಗರ ಹಕ್ಕು!


ನಾಳೆ ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಿಂದೊಂದು ಮೆರವಣಿಗೆ ಹೊರಡಲಿದೆ. ಇದು ಸ್ವಾತಂತ್ರ್ಯ ಉದ್ಯಾನದವರೆಗೂ ಸಾಗಲಿದ್ದು "ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ..." ಎಂಬ ಹಕ್ಕೊತ್ತಾಯವನ್ನು ಹೊತ್ತು ಸಾಗಲಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಏರ್ಪಡಿಸಿರುವ ಈ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಲಿದ್ದು ಕನ್ನಡಿಗರ ಬದುಕು ಹಸನುಗೊಳಿಸುವ ಸಲುವಾಗಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಇದೊಂದು ಮಹತ್ವದ ಹಕ್ಕೊತ್ತಾಯವಾಗಿದೆ.

ಈ ಹಕ್ಕೊತ್ತಾಯ ಅಸಹಜವೇನು?!

ನಮ್ಮ ನಾಡಲ್ಲಿರುವ ಸಂಪನ್ಮೂಲಗಳನ್ನು ಕಡಿಮೆ ಬೆಲೆಗೆ/ ಉಚಿತವಾಗಿ ಸರ್ಕಾರ ಕೊಡುವುದೇ ಇಲ್ಲಿನ ಜನರಿಗೆ ಕೆಲಸದ ಅವಕಾಶ ಸಿಗಬೇಕೆಂದು. ಆ ಮೂಲಕ ಜನರ ಬದುಕು ಆರ್ಥಿಕವಾಗಿ ಬಲಶಾಲಿಯಾಗಬೇಕೆಂದು. ಆದರೆ ಇಲ್ಲಿ ನಮ್ಮ ಜನ ಎಂದರೆ ಯಾರು ಎನ್ನುವುದರಲ್ಲೇ ಗೊಂದಲ ಹುಟ್ಟುಹಾಕಿದ ವ್ಯವಸ್ಥಿತ ಕ್ರಿಯೆ ನಡೆದಿದೆ. ಈ ಕಾರಣದಿಂದಾಗಿಯೇ ನಮ್ಮ ನಾಡಿಗೆ ಕೇಂದ್ರಸರ್ಕಾರಿ ಕಚೇರಿಗಳು, ಸಾರ್ವಜನಿಕ ಉದ್ದಿಮೆಗಳು ಬಂದಾಗ "ಓಹೋ ಆ ಸಂಸ್ಥೆ ಬಂತು... ಆಹಾ ಈ ಸಂಸ್ಥೆ ಬಂತು" ಎಂದು ಹಿಗ್ಗುವ ಹಾಗೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ! ಯಾಕೆಂದರೆ ಹೀಗೆ ಬರುವ ಉದ್ದಿಮೆಗಳು ಉದ್ದಿಮೆಯ ಜೊತೆಯಲ್ಲಿ ಸಾವಿರಾರು ಹೊರನಾಡಿನವರನ್ನು ನಮ್ಮ ನಾಡಿಗೆ ವಲಸೆ ಮಾಡಿಸಿದೆ. ನಮ್ಮ ಜನರ ಕೆಲಸದ ಅವಕಾಶಗಳನ್ನು ಕಳೆದು ಹಾಕುವುದರ ಜೊತೆಯಲ್ಲೇ ನಮ್ಮೂರಿನ ಜನಲಕ್ಷಣವನ್ನು ಇದು ಬದಲಿಸಿಹಾಕಿದೆ. ಭಾರತದ ಸಂವಿಧಾನದ ರೀತ್ಯಾ "ಕರ್ನಾಟಕದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು" ಎಂಬ ಈ ಹಕ್ಕೊತ್ತಾಯ ಅಸಂವಿಧಾನಿಕವಾದುದೂ, ರಾಷ್ಟ್ರೀಯವಾದಿಗಳ ರೀತ್ಯಾ ಇದು ಸಂಕುಚಿತ ಬುದ್ಧಿಯದ್ದೂ ಆಗಿ ಕಾಣಬಹುದು. ಆದರೆ ನ್ಯಾಯದ ದೃಷ್ಟಿಯಲ್ಲಿ ಅತ್ಯಂತ ಸಹಜವೂ, ಸರಿಯೂ ಆದುದಾಗಿದೆ. ಇಷ್ಟಕ್ಕೂ ನಮ್ಮೂರಿನ ಜನರಿಗೆ ಕೆಲಸ ಒದಗಿಸದ, ನಮ್ಮ ಜನರ ಬದುಕನ್ನು ಹಸನು ಮಾಡುವ ಉದ್ದೇಶವಿರದ ಯಾವುದೇ ಉದ್ದಿಮೆಯಾದರೂ ನಮ್ಮ ನಾಡಿಗೆ ಏಕೆ ಬೇಕು ಎಂಬುದು ಸರಳವಾದ ನೇರತರ್ಕವಾಗಿದೆ!

ಸರೋಜಿನಿ ಮಹಿಷಿ ವರದಿ ಮತ್ತು ಕೆಲಸದಲ್ಲಿ ಮೀಸಲು!

ಡಾ. ಸರೋಜಿನಿ ಮಹಿಷಿಯವರ ಮುಂದಾಳ್ತನದಲ್ಲಿ ಸ್ಥಳೀಯರಿಗೆ ಕೆಲಸದಲ್ಲಿ ಮೀಸಲಾತಿ ನೀಡುವ ಬಗ್ಗೆ ಒಂದು ಅಧ್ಯಯನ ನಡೆಸಿ ವರದಿಯನ್ನು ಕರ್ನಾಟಕ ರಾಜ್ಯಸರ್ಕಾರದ ವತಿಯಿಂದ ತರಿಸಿಕೊಳ್ಳಲಾಗಿತ್ತು. ವರದಿಯಲ್ಲಿ ಅಂದಿನ ಕಾಲಕ್ಕೆ ಹೊಂದುವಂತೆ ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಮೀಸಲು ಇರಬೇಕು ಎಂದೂ ಬರೆಯಲಾಗಿತ್ತು. ಈ ವರದಿ ಸಲ್ಲಿಕೆಯಾಗಿ ೨೮ ವರ್ಷಗಳೇ ಆದವು. ಇದುವರೆಗಿನ ಯಾವುದೇ ಸರ್ಕಾರಕ್ಕೂ ಈ ವರದಿಯನ್ನು ಜಾರಿಮಾಡಲು ಸಾಧ್ಯವಾಗಿಲ್ಲ. ಒಂದು ಜನಪರವಾದ ವರದಿಯನ್ನು ಇದುವರೆವಿಗೂ ಜಾರಿ ಮಾಡಲಾಗದಿರುವುದಕ್ಕೆ ರಾಜಕೀಯ ಇಚ್ಚಾಶಕ್ತಿ ಮತ್ತು ಚಾಣಾಕ್ಷತನದ ಕೊರತೆ ಕಾರಣವೆನ್ನದೇ ವಿಧಿಯಿಲ್ಲಾ! "ಕರ್ನಾಟಕ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಲಿ" ಎನ್ನುವುದು ಸರಿಯಾದ ಹಕ್ಕೊತ್ತಾಯವೇ ಆಗಿದೆ. ಇಲ್ಲವೇ ಸರ್ಕಾರಕ್ಕೆ ಈ ವರದಿಯನ್ನು ಜಾರಿ ಮಾಡಲು ತಾಂತ್ರಿಕವಾದ ಅಡ್ಡಿಗಳಿದ್ದರೆ ವರದಿಯನ್ನು ತಿರಸ್ಕರಿಸಲಿ.. ಇನ್ನು ಈ ವರದಿ ಇಂದಿನ ದಿನಕ್ಕೆ ಹೊಂದುವಂತಿಲ್ಲಾ ಎನ್ನುವುದಾದರೆ ಕೂಡಲೇ ತಜ್ಞರ ಸಮಿತಿಯನ್ನು ರಚಿಸಿ ಸಂವಿಧಾನದ ರೀತಿಯೇ ಸ್ಥಳೀಯರಿಗೆ ಕೆಲಸ ಕೊಡಿಸಿಕೊಡಬಲ್ಲ ನೀತಿಗಳನ್ನು ರೂಪಿಸಲು ಬೇಕಾದ ಸಲಹೆಗಳನ್ನು ಪಡೆದುಕೊಳ್ಳಲಿ. ಒಟ್ಟಿನಲ್ಲಿ ಆದಷ್ಟು ಬೇಗನೆ ಸರಿಯಾದ ತೀರ್ಮಾನ ಕೈಗೊಳ್ಳಲಿ. ಈ ಆಶಯದೊಡನೆ ನಾಳೆ ನಡೆಯಲಿರುವ ಮೆರವಣಿಗೆ ಯಶಸ್ವಿಯಾಗಲಿ. ಯಾರ ಬಗ್ಗೆಯೇ ಆಗಲಿ ನಿಜವಾದ ಕಾಳಜಿಯಿದ್ದರೆ ಅಂಥವರ ಆರ್ಥಿಕ ಸಬಲತೆಗಾಗಿ ದುಡಿಯುವುದು ಸೂಕ್ತವಾಗುತ್ತದೆ. ನಾಳಿನ ಪ್ರತಿಭಟನಾ ಕಾರ್ಯಕ್ರಮ ಕನ್ನಡಿಗರ ನಿಜವಾದ ಏಳಿಗೆಗೆ ಕಾರಣವಾಗಬಲ್ಲುದಾದ, ಅನಿಯಂತ್ರಿತ ವಲಸೆ ತಡೆ- ಬಡತನ ನಿರ್ಮೂಲನೆ - ಆರ್ಥಿಕ ಏಳಿಗೆಗಳಿಗೆ ಕಾರಣವಾಗಬಲ್ಲ ಮಹತ್ವದ ಕಾರ್ಯಕ್ರಮವಾಗಿದೆ. ಈ ಹೋರಾಟ ಗೆಲ್ಲಲಿ!

ಕೊನೆಹನಿ: ಜಪಾನಿನಲ್ಲಿನ ಕೆಲಸಗಳನ್ನು ಜಪಾನಿಯರಿಗೇ ಕೊಡಿ ಎನ್ನುವುದು, ಇಂಗ್ಲೇಂಡಿನಲ್ಲಿರುವ ಕಾರುಗಳ ನೇಮ್‌ಪ್ಲೇಟುಗಳನ್ನು ಇಂಗ್ಲೀಷಿನಲ್ಲಿ ಬರೆಯಲು ಬಿಡಿ ಎನ್ನುವುದು, ಜರ್ಮನಿಯಲ್ಲಿ ಎಲ್ಲಾ ಗ್ರಾಹಕಸೇವೆಗಳನ್ನು ಜರ್ಮನ್ ನುಡಿಯಲ್ಲಿ ಕೊಡಿ ಎನ್ನುವುದು ಅಸಹಜವಾಗುವುದಾದರೆ ಕನ್ನಡನಾಡಿನ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಕೆಲಸಗಳನ್ನು ಕೊಡಿ ಎನ್ನುವುದು ಕೂಡಾ ಅಸಹಜ ಎನ್ನಬಹುದು!

B-PAC: ಇದು ಕಾರ್ಪೊರೇಟ್ ರಾಜಕಾರಣ!

(ಫೋಟೋ ಕೃಪೆ: ಬಿ.ಪ್ಯಾಕ್ ಅಂತರ್ಜಾಲ ತಾಣ)
ಈ ಬಾರಿಯ ಚುನಾವಣೆಯಲ್ಲಿ ಬಿ.ಪ್ಯಾಕ್ ಎನ್ನುವ ಸರ್ಕಾರೇತರ ಸಂಸ್ಥೆಯೊಂದು ವಿಶೇಷಪಾತ್ರ ವಹಿಸಲು ಮುಂದಾಗಿರುವುದನ್ನು ಕಾಣಬಹುದಾಗಿದೆ. ಬಿ.ಪ್ಯಾಕ್ ಎಂದರೆ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ. ಹಾಗೆಂದರೆ ಬೆಂಗಳೂರು ರಾಜಕೀಯ ಕ್ರಿಯಾಸಮಿತಿ ಎನ್ನಬಹುದು. ಈ ಸಂಸ್ಥೆಯನ್ನು ಮಾಡಿಕೊಂಡಿರುವುದು ರಾಜ್ಯದ ಪ್ರಮುಖ ಉದ್ದಿಮೆಗಳಲ್ಲಿ ಮುಖ್ಯವಾದ ಪಾತ್ರ ಹೊಂದಿರುವ ‘ಕೆಲವು ಗಣ್ಯ’ರು! ಈ ಸಂಸ್ಥೆಯ ಅಂತರ್ಜಾಲ ತಾಣವನ್ನು ನೋಡಿದರೆ ವಿವರ ತಿಳಿಯುತ್ತದೆ. ಸದರಿ ಗಣ್ಯರು ಬೆಂಗಳೂರನ್ನು ಉದ್ಧಾರ ಮಾಡಬೇಕೆಂಬ ಆಶಯದಿಂದ ಕಟ್ಟಿಕೊಂಡಿರುವ ಈ ಸಂಸ್ಥೆಯ ಮುಖ್ಯಉದ್ದೇಶ ಇದರ ಹೆಸರೇ ಹೇಳುವಂತೆ "ರಾಜಕೀಯ" ಲಾಬಿ! ಈ ಸಂಸ್ಥೆಯ ಧ್ಯೇಯೋದ್ದೇಶಗಳು ಮತ್ತು ನಡೆಗಳು ಹೀಗಿವೆ.

ಬಿ. ಪ್ಯಾಕ್ ಉದ್ದೇಶಗಳು!

ಬೆಂಗಳೂರಿನ ಎಲ್ಲಾ ನಗರಪಾಲಿಕೆ ಸದಸ್ಯರುಗಳ ಆಯ್ಕೆಯಲ್ಲಿ, ಶಾಸಕರ ಆಯ್ಕೆಯಲ್ಲಿ, ಸಂಸದರ ಆಯ್ಕೆಯಲ್ಲಿ  ಸಾರ್ವಜನಿಕ ಆಡಳಿತದಲ್ಲಿ ಬಲಿಷ್ಠರಾದವರನ್ನು ಆರಿಸಿ ಬೆಂಬಲಿಸುವುದು. ಇವರು ಯಾವ ಪಕ್ಷಕ್ಕೆ ಸೇರಿದವರು ಎನ್ನುವುದು ಮುಖ್ಯವಲ್ಲಾ. ಬದಲಿಗೆ ಬಿ.ಪ್ಯಾಕ್ ಯೋಜನೆಗಳನ್ನು ಒಪ್ಪುವಂತವರಾಗಿದ್ದರೆ ಸಾಕು ಮತ್ತು ಪ್ರಮುಖವಾಗಿ ಕ್ರಿಮಿನಲ್‌ಗಳಾಗಿಲ್ಲದಿದ್ದರೆ ಸಾಕು.  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಹದಿನಾಲ್ಕು ಅಭ್ಯರ್ಥಿಗಳಿಗೆ ತಮ್ಮ ಟ್ರಸ್ಟಿನಿಂದ ಚುನಾವಣೆಯಲ್ಲಿ ಖರ್ಚು ಮಾಡಲು ತಲಾ ಐದು ಲಕ್ಷ ರೂಪಾಯಿಗಳನ್ನೂ ಕೊಡುತ್ತಿದ್ದಾರೆ. ಒಂದೇ ಕ್ಷೇತ್ರದಲ್ಲಿ ಇಬ್ಬರು ಬೆಂಬಲಿತ ಅಭ್ಯರ್ಥಿಗಳಿದ್ದರೆ ತಲಾ ಮೂರು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ.

ಈ ಗುಂಪಿನ (ಕಮಿಟಿಯ) ಹಿಂದೆ ಇರುವವರು ಮೂಲತಃ ಬೆಂಗಳೂರಿನಲ್ಲಿ ಉದ್ದಿಮೆ ಹೊಂದಿರುವ ಗಣ್ಯರುಗಳು. ಕಾರ್ಪೋರೇಟ್ ವಲಯದ ದಿಗ್ಗಜರುಗಳು. ಇವರುಗಳ ಉದ್ದೇಶವನ್ನು ಕೇಳಿ ಬೆಂಗಳೂರಿಗರು ಅತಿಯಾಗಿ ಹಿಗ್ಗುವಂತೇನೂ ಇಲ್ಲಾ! ಯಾಕೆಂದರೆ ಇದೇ ಅಂತರ್ಜಾಲ ತಾಣದಲ್ಲಿ ಬೆಂಗಳೂರಿನ ಬಗ್ಗೆ ಏನನ್ನು ಮಾಡಬೇಕೆಂದು ಬಯಸುತ್ತಿದ್ದಾರೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಭ್ರಷ್ಟಾಚಾರ ರಹಿತವಾದ ದಕ್ಷ ಆಡಳಿತದ ಪರವಾಗಿದ್ದೇವೆಂದು ಹೇಳುವ ಈ ತಂಡದವರು ಆಡಳಿತ ಸುಧಾರಣೆಯ ಅನೇಕ ಯೋಜನೆಗಳ ಜೊತೆಯಲ್ಲಿ ಮೂಲತಃ "ನಗರ ಆಳ್ವಿಕೆ (ಸಿಟಿ ಗವರ್ನೆನ್ಸ್)" ಎನ್ನುವ ಪರಿಕಲ್ಪನೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆ ಹಣವನ್ನು ಬೆಂಗಳೂರಿಗಾಗೇ ಬಳಸುವ ಉದ್ದೇಶವನ್ನು ಹೊಂದಿದ್ದಾರೆ. ನಗರದ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ರೊಫೆಶನಲ್ ತೆರಿಗೆ (೧೦೦%),  ಸ್ಟಾಂಪ್ ಡ್ಯೂಟಿ (೫೦%) ಮತ್ತು ರಸ್ತೆ ತೆರಿಗೆ(೫೦%)ಯನ್ನು ನಗರದ ಬಿಡಿಎ, ಬಿಬಿಎಂಪಿ ಹಾಗೂ ಇನ್ನಿತರ ಸಂಸ್ಥೆಗಳಿಗೇ ನೀಡಬೇಕೆನ್ನುವುದು ಇವರ ನಿಲುವು. 

ಇದು ತರವೇ?

ಈ ನಿಲುವುಗಳ ಹಿಂದೆ ಬೆಂಗಳೂರನ್ನು ಸಿಟಿ ಸ್ಟೇಟ್ ಮಾಡುವ ಒಂದು ಸ್ಪಷ್ಟ ಉದ್ದೇಶ ಕಾಣುತ್ತದೆ. ಇಡೀ ಕರ್ನಾಟಕದ ಒಟ್ಟು ಆದಾಯದಲ್ಲಿ ೬೦% ಬೆಂಗಳೂರಿನಲ್ಲೇ ಹುಟ್ಟುವುದರಿಂದ ಇವರು ಹೇಳುವುದು ಸರಿಯೆಂದೇ ಬೆಂಗಳೂರಿಗರಿಗೆ ತೋಚಬಹುದು. ಆದರೆ ಈ ನಡೆ ಇಡೀ ಕರ್ನಾಟಕದಿಂದ ಬೆಂಗಳೂರನ್ನು ಬೇರೆ ಮಾಡುವ ಅಪಾಯ ಹೊಂದಿದೆ. ರಾಜ್ಯಗಳಲ್ಲಿ ಸಂಗ್ರಹವಾಗುವ ಒಟ್ಟು ತೆರಿಗೆ ಹಣದ ಮೇಲೆ ಆಯಾ ರಾಜ್ಯಗಳಿಗೇ ಪೂರ್ತಿ ಹಕ್ಕು ಕೊಡಿ ಎನ್ನುವುದನ್ನು ಇದಕ್ಕೆ ಹೋಲಿಸಲಾಗದು. ಏಕೆಂದರೆ ರಾಜ್ಯವೊಂದರಲ್ಲಿ ಆ ರಾಜ್ಯದ ಸಂಪನ್ಮೂಲಗಳನ್ನು ಬಳಸಿ ಉತ್ಪಾದನೆ, ವ್ಯಾಪಾರ, ವಹಿವಾಟು, ಉದ್ದಿಮೆ ನಡೆಸಲಾಗುತ್ತದೆ. ಆ ಮೂಲಕ ತೆರಿಗೆ ಕೂಡಿಹಾಕಲಾಗುತ್ತದೆ. ಈ ತೆರಿಗೆಯಲ್ಲಿ ದೊಡ್ಡಪಾಲನ್ನು ಆ ರಾಜ್ಯದ ಅಭಿವೃದ್ಧಿಗಾಗಿ ಬಳಸಲು ರಾಜ್ಯ ಹೀಗೆ ಒತ್ತಾಯಿಸುತ್ತದೆ.

ಆದರೆ ಇದೇ ಮಾತನ್ನು ಬೆಂಗಳೂರಿನಂತಹ ನಗರದ ಬಗ್ಗೆ ಹೇಳಲಾಗದು. ಇಲ್ಲಿಗೆ ನೀರು ಮಂಡ್ಯದಿಂದ ಬರಬೇಕು.  ವಿದ್ಯುತ್ ಶಿವನಸಮುದ್ರದಿಂದ ಬರಬೇಕು. ಹಾಲು ಕೋಲಾರದಿಂದ ಬರಬೇಕು. ತರಕಾರಿ ಮತ್ತೊಂದರಿಂದ, ಜನರು ಮಗದೊಂದರಿಂದ... ಇದಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ರಾಜ್ಯಸರ್ಕಾರ ಮತ್ತು ಇಡೀ ರಾಜ್ಯದ ಕೊಡುಗೆಯ ಕಾರಣದಿಂದಲೇ ಬೆಂಗಳೂರು ಇಂದಿನ ಕಾರ್ಪೋರೇಟ್ ಬೆಂಗಳೂರಾಗಿ ಎದ್ದು ನಿಂತಿದೆ. ಇದಕ್ಕಾಗಿ ಎಲ್ಲಾ ಪ್ರದೇಶಗಳಿಂದಲೂ ಕೊಡುಗೆಯಿದೆ ಎನ್ನುವುದನ್ನು ಕಡೆಗಣಿಸಲಾಗದು. ರಾಜ್ಯಕ್ಕೆ ಇಂದು ಬೆಂಗಳೂರನ್ನು ಬೆಳೆಸಿದ ಹಾಗೆ, ಮತ್ತೊಂದು ಊರನ್ನೂ ಬೆಳೆಸುವ ಅವಕಾಶ ಇತ್ತು ಎನ್ನುವುದನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಬೆಂಗಳೂರನ್ನು ಕರ್ನಾಟಕದಿಂದ ಬೇರೆಯಾಗಿ ನೋಡಲಾಗದು ಎನ್ನುವ ಅರಿವಾಗುತ್ತದೆ. ಹಾಗಾಗಿ ಈ "ಸಿಟಿ ಸ್ಟೇಟ್" ಪರಿಕಲ್ಪನೆ ಸರಿಯೇ ಎಂಬುದು ಪ್ರಶ್ನಾರ್ಹವಾದುದಾಗಿದೆ. ಇಡೀ ರಾಜ್ಯವನ್ನೇ ಬೆಳೆಸಬೇಕಾದ ಹೊಣೆಗಾರಿಕೆ ಹೊಂದಿರುವ ಸರ್ಕಾರವು ತನ್ನ ಆದಾಯದ ದೊಡ್ಡಮೂಲವನ್ನೇ ಬಿಟ್ಟುಕೊಡಬೇಕೆನ್ನುವ ಮಾತನ್ನು ಒಪ್ಪಲಾಗದು!

ಬೆಂಬಲಿತರ ನಿಲುವೇನು?

ಇಷ್ಟಕ್ಕೂ ಈ ಸಂಸ್ಥೆಯವರು ಬೆಂಬಲ ನೀಡಿ ಶಿಫ಼ಾರಸ್ಸು ಮಾಡಿ, ಚುನಾವಣೆಯ ಕರ್ಚಿಗೆ ಹಣ ನೀಡುತ್ತಿರುವ ಅಭ್ಯರ್ಥಿಗಳು ಈ ಬಗ್ಗೆ ಏನನ್ನುತ್ತಾರೆ ಎನ್ನುವುದು ಕುತೂಹಲಕಾರಿಯಾದುದಾಗಿದೆ. ಯಾಕೆಂದರೆ ಸ್ಪಷ್ಟವಾಗಿಯೇ ಬಿ.ಪ್ಯಾಕ್‌ನವರು ತಮ್ಮ ನೀತಿಗಳನ್ನು ಒಪ್ಪಿದವರನ್ನು ಮಾತ್ರಾ ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ. ಇವರಿಂದ ಬೆಂಬಲ ಪಡೆದವರು ಇವರ ನಿಲುವುಗಳನ್ನು ಒಪ್ಪಿದ್ದಾರೆ ಎನ್ನುವುದಾದರೆ ಅದನ್ನು ನೇರವಾಗಿ ಜನರ ಮುಂದಿಡಬೇಕಾದ್ದು ನ್ಯಾಯವಾದುದಾಗಿದೆ. ಬೆಂಗಳೂರನ್ನು ಕರ್ನಾಟಕದಿಂದ ಬೇರೆಯ ರೀತಿಯಲ್ಲಿ ನಡೆಸಿಕೊಳ್ಳುವ ಉದ್ದೇಶವಿದೆ ಎನ್ನುವುದನ್ನು ಹೇಳಿಕೊಳ್ಳಲಿ. ಸಿಟಿ ಸ್ಟೇಟ್ ಪರಿಕಲ್ಪನೆಯು ಚರ್ಚೆಗೊಳಗಾಗಲಿ

ಇವೆಲ್ಲಕ್ಕೂ ಮಿಗಿಲಾಗಿ ಕಾರ್ಪೋರೇಟ್ ವಲಯದವರು ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಜನತೆಯ ಹೆಸರಲ್ಲಿ ಮೂಗುತೂರಿಸುವುದು, ತಮ್ಮ ಮೂಗಿನ ನೇರದ ಬೇಡಿಕೆಗಳನ್ನು ಮುಂದಿಟ್ಟು ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರುವುದು ಎಷ್ಟು ಸರಿ ಎಂಬುದನ್ನು ಜನರು ಯೋಚಿಸಬೇಕಾಗಿದೆ. ಈ ಗುಂಪಿನ ಆದ್ಯತೆಗಳೇನು, ಉದ್ದೇಶಗಳೇನು, ಕಾರ್ಯವೈಖರಿಯೇನು ಎನ್ನುವುದನ್ನೆಲ್ಲಾ ಸೂಚ್ಯವಾಗಿ ತಿಳಿಸುವ ಒಂದು ಫೋಟೋ ಇಲ್ಲಿದೆ... ನೋಡಿ!


ಈ ದಿಗ್ಗಜರು ನಡೆಸುತ್ತಿರುವ ಸಂವಾದ ಕಾರ್ಯಕ್ರಮದ ಈ ಫೋಟೋದಲ್ಲಿ ಗಮನಿಸಬೇಕಾದ ಅಂಶಗಳು ಎರಡು... ಒಂದಕ್ಷರ ಕನ್ನಡವೂ ಇದರಲ್ಲಿಲ್ಲ ಎನ್ನುವುದು ಮತ್ತು ಒಂದು ಸಂವಾದಕ್ಕೂ ಬೇರೆ ಬೇರೆ ಸಂಸ್ಥೆಗಳ ಪ್ರಾಯೋಜಕತ್ವ ಪಡೆದಿರುವುದು. ಇವರ ಕಲ್ಪನೆಯ ಬೆಂಗಳೂರಿನಲ್ಲಿ ಕನ್ನಡ ಕನ್ನಡಿಗರಿಗೆ ಸ್ಥಾನವೇನು ಮತ್ತು ರಾಜಕಾರಣದಲ್ಲಿ ಈ ಕಾರ್ಪೋರೇಟ್ ವಲಯದ ಉದ್ದೇಶಿತ ಹಿಡಿತವೇನು ಎಂಬುದು ಪ್ರಶ್ನೆಯಾಗಿ ಕಾಡುತ್ತದೆ. ಒಟ್ಟಾರೆ ಬಿ.ಪ್ಯಾಕ್ ಸಂಸ್ಥೆಯ ಅಜೆಂಡಾ ಬೆಂಗಳೂರನ್ನು ಕರ್ನಾಟಕದಿಂದ ಕಸಿದುಕೊಳ್ಳುವ ಹುನ್ನಾರದಂತೆ ತೋರಿದರೆ ಅಚ್ಚರಿಯಿಲ್ಲ!

‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?

(ಫೋಟೋ ಕೃಪೆ: kannada.oneindia.in - http://bit.ly/ww4Wn2)
ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ "ಚಿಂತನಗಂಗಾ"ದಿಂದ ಆಯ್ದ ಕೆಲಭಾಗಗಳನ್ನು ಸಂಘದ ನಿಲುವುಗಳೆಂದು ಒಂದು ಬರಹವನ್ನು ಪ್ರಕಟಿಸಿ, `ಇಂತಹ ನಿಲುವಿನ ಸಂಘವನ್ನು ಬೆಳೆಸುವುದು ಕನ್ನಡಿಗರಿಗೆ ಮುಳುಗುನೀರು ತರುತ್ತದೆ' ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿತ್ತು. ಈ ಬರಹಕ್ಕೆ ಸಂಘದ ಸದಸ್ಯರ,  ಪದಾಧಿಕಾರಿಗಳ ಮತ್ತು ಬೆಂಬಲಿಗರ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಬರಹವನ್ನು ಸಂಘದ `ಶತ್ರುವಿನ ಸಂಚು' ಎಂಬಂತೆ ಕಂಡ ಇವೆಲ್ಲಾ ಕಮೆಂಟುಗಳೇ ಸಂಘದ ಅನುಯಾಯಿಗಳಲ್ಲಿರುವ/ ಇಲ್ಲದಿರುವ ವೈಚಾರಿಕತೆ, ವಿಚಾರ ಸ್ವಾತಂತ್ರ ಮತ್ತು ಬೆಂಬಲಿಗರ ಮುಗ್ಧತೆಗಳನ್ನು ಬಿಂಬಿಸುವಂತಿವೆ. ಸಂಘ ಸಿದ್ಧಾಂತವಾದ "ಚಿಂತನಗಂಗಾ"ವನ್ನು ಓದದೆಯೇ ಸಂಘದ ಜೊತೆ ಕೈಗೂಡಿಸಿದ್ದವರಿದ್ದಾರೆ ಎನ್ನುವಂತೆ ಕೆಲವು ಪ್ರತಿಕ್ರಿಯೆಗಳಿದ್ದವು. ಸಂಘದ ನಿಲುವು ಇದೆಂದು ಒಪ್ಪಿಕೊಳ್ಳದಷ್ಟು ಮಾಯೆ ಮುಸುಕಿದವರೂ ಇದ್ದಾರೆ.

‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?

ಚಿಂತನಗಂಗಾ ಹೊತ್ತಗೆಯ ಮೊದಲಲ್ಲಿ ಹೀಗೆ ಬರೆಯಲಾಗಿದೆ:
ಸಾವಿರಾರು, ಅಷ್ಟೇಕೆ ಲಕ್ಷಾಂತರ ಜನರು ಈ ಗ್ರಂಥದಲ್ಲಿನ ಜೀವಂತ ವಿಚಾರಗಳಿಂದ ಪ್ರೇರಣೆ ಪಡೆದಿದ್ದಾರೆ ಎನ್ನುವ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪ್ರಾ. ಎಂ.ಎ. ವೆಂಕಟರಾಯರು ತಮ್ಮ ’ಪ್ರವೇಶ’ದಲ್ಲಿ ಹೇಳಿರುವಂತೆ "ರಾಷ್ಟ್ರನಿರ್ಮಾಣಕ್ಕಾಗಿ ಸಂಘವು ಎಂತಹ ಪರಿಪೂರ್ಣವಾದ, ಗುಣಾತ್ಮಕವಾದ, ದೇಶಾಭಿಮಾನದಿಂದ ತುಂಬಿ ತುಳುಕುವ, ಕಾರ್ಯಸಾಧ್ಯವಾದ, ಆದರ್ಶಪೂರ್ಣವಾದ ತತ್ವಗಳನ್ನೂ, ವಿಧಾನಗಳನ್ನೂ ಅನುಸರಿಸುತ್ತಿದೆ ಎಂಬುದನ್ನು ಇಲ್ಲಿ ಕಾಣಬಹುದು..."
ಇನ್ನು ಅರಿಕೆಯಲ್ಲಿ ಪ್ರಕಾಶಕರು ಚಿಂತನಗಂಗಾ ಬಗ್ಗೆ ಹೀಗೆ ಬರೆದಿದ್ದಾರೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಷಯ ಹೊಸದಾಗಿ ತಿಳಿಯ ಬಯಸುವವರಿಗೆ ಅದರಲ್ಲಿ ಅವರ ಬುದ್ಧಿ-ಹೃದಯಗಳನ್ನು ಬೆಳಗಲು ಸಾಕಷ್ಟು ಸಾಮಗ್ರಿ ಸಿಕ್ಕಿತು. ಸಂಘದ ವಿಷಯವಾಗಿ ಸಂದೇಹ- ಆಕ್ಷೇಪ ಇದ್ದವರಿಗೆ ಸಂಘದ ವಾಸ್ತವಿಕ ರೂಪ ಕಂಡು ಕಣ್ತೆರೆಯಿತು. ಸಮಾಧಾನ ಸಿಕ್ಕಿತು. ಸಂಘದ ಹೊರರೂಪ ಕಂಡಿದ್ದವರಿಗೆ ಅದರ ಆಂತರ್ಯದ ತಿರುಳು ತಿಳಿಯಿತು.
ಹಲವಾರು ವರ್ಷಗಳಿಂದ ಸಂಘದ ಕೆಲಸವನ್ನು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಕಾರ್ಯಕರ್ತರಿಗೆ ಸಹ ಆ ಗ್ರಂಥವು ಕಾರ್ಯದ ಕೈದೀವಿಗೆಯಾಯಿತು.
ಪ್ರತಿಕ್ರಿಯೆಯಲ್ಲಿ ಕೊನೆಕೊನೆಗೆ ಕೆಲವರಂತೂ ಇದು ಸಂಘದ ನಿಲುವೇ ಅಲ್ಲಾ, ಗುರೂಜಿಯವರ ಮಾತೇ ಅಲ್ಲ.. ಎನ್ನುವಂತಹ ಅರ್ಥದ ಮಾತುಗಳನ್ನೂ ಆಡಿದ್ದಾರೆ. ‘ಇದನ್ನು ಬರೆದವರೇ ಬೇರೆ, ಇದನ್ನು ಗುರೂಜಿ ನಿಧನರಾದ ಮೇಲೆ ಬಂದಿದ್ದು’ ಇತ್ಯಾದಿ ಮಾತುಗಳನ್ನಾಡಿದ್ದಾರೆ. ಆದರೆ ಹೊತ್ತಗೆಯ ಮೊದಲಲ್ಲೇ ಬರೆದಿರುವಂತೆ "ಬಂಚ್ ಆಫ್ ಥಾಟ್ಸ್" ಮೊದಲು ಪ್ರಕಟವಾದದ್ದು ೧೯೬೬ರಲ್ಲಿ. ಗುರೂಜಿಯವರ ೬೦ನೇ ವರ್ಷದ ಹುಟ್ಟುಹಬ್ಬದಂದು. ಇನ್ನಾದರೂ ಇದನ್ನು ಸಂಘದ ತತ್ವಸಿದ್ಧಾಂತದ ಪುಸ್ತಕ ಎನ್ನುವುದನ್ನು ಒಪ್ಪಬಹುದಲ್ಲವೇ? ಚಿಂತನಗಂಗಾ ಸಂಘದ ಸಿದ್ಧಾಂತವಲ್ಲದಿದ್ದರೆ ಸಮಸ್ಯೆಯೇ ಇಲ್ಲಾ... ಮತ್ಯಾವುದನ್ನು ಸಮಾಜ ಸಂಘ ಸಿದ್ಧಾಂತವೆಂದು ಅರಿತುಕೊಳ್ಳಬೇಕು ಎಂದು ತಿಳಿಸಿದರೆ ಸಾಕು!

ಸಂಘದ ಬಗ್ಗೆ ಯಾಕೆ ಬರೆದಿರಿ ಎಂದರೆ...!


ಇಡೀ ಬರಹದಲ್ಲಿ ಬರೆಯಲಾಗಿರುವ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಸಿದವರು ತಮ್ಮ ಸಹಮತಿಯನ್ನು ಇದುವರೆಗೂ ಹೇಳಿಲ್ಲ ಅಥವಾ ಅದು ಹೀಗಿರುವುದು ತಪ್ಪು ಎಂದೂ ಕೂಡಾ ಹೇಳುತ್ತಿಲ್ಲ. ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ ಎನ್ನುವ ಪ್ರಶ್ನೆಗೆ ಇದು ಕಾರಣವಾಗಿದೆ. ನಾವು ಎತ್ತಿರುವ ಪ್ರಶ್ನೆಗೆ ಉತ್ತರಿಸುವ ಬದಲು, ಹೀಗೆ ಪ್ರಶ್ನೆ ಮಾಡಿದ್ದನ್ನೇ ‘ಯಾಕೆ ಮಾಡಿದಿರಿ?’ ಎನ್ನುವ ಮಾತುಗಳು ಕೇಳಿಬಂದವು. ವಾಸ್ತವವಾಗಿ ನಾವು ಹೀಗೆ ಪ್ರಶ್ನಿಸಲು ಕಾರಣ, ಸಂಘ ತನ್ನ ಸೈದ್ಧಾಂತಿಕ ನಿಲುವುಗಳನ್ನು ತನ್ನ ಮುಖವಾಡವಾದ ಬಿಜೆಪಿ ಸರ್ಕಾರದ ಮೂಲಕ ಮಾಡಿಸುತ್ತಿರುವುದು ಮುಖಕ್ಕೆ ರಾಚುವಂತೆ ಕಾಣುತ್ತಿರುವುದು. ಇರುವ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕೃತ ವಿದ್ಯಾರ್ಥಿಗಳಿಗೆ ಕೊರತೆಯಿರುವಾಗ ಹೊಸದಾಗಿ ತೀವ್ರ ವಿರೋಧದ ನಡುವೆಯೂ ವಿಶ್ವವಿದ್ಯಾಲಯ ಸ್ಥಾಪಿಸಲು ಏನು ಕಾರಣ? ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲಾಗಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಎಷ್ಟೇ ವಿರೋಧವಿದ್ದರೂ ಪ್ರತಿಭಟನೆಯನ್ನು ಬಗ್ಗು ಬಡಿದು ಸ್ಥಾಪಿಸಿದ್ದೇಕೆ? ಇವೆಲ್ಲದರ ಹಿಂದೆ ಕೆಲಸ ಮಾಡುತ್ತಿರುವ ಮಿದುಳಾದರೂ ಸಂಘ ಸಿದ್ಧಾಂತದ್ದಲ್ಲವೇ? ಇದಕ್ಕೆಲ್ಲಾ ಕಲಶವಿಟ್ಟಂತೆ ನಿನ್ನೆ ಮುಗಿದ ಸಂಘದ ಶಿಬಿರದಲ್ಲಿ ಆರುಕೋಟಿ ಜನರ ಪ್ರತಿನಿಧಿ/ ಮುಖಂಡರಾದ ಮುಖ್ಯಮಂತ್ರಿಗಳೇ ಹೋಗಿ ಪಾಲ್ಗೊಂಡಿದ್ದೂ, ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದ್ದಾಗೆಲ್ಲಾ ಸಂಘದ ಕೇಂದ್ರ ಕಛೇರಿಯ ಕರೆಗೆ ಓಗೊಟ್ಟು ಎಡತಾಕಿದ್ದು ಕಾಣುತ್ತಿರುವಾಗ ಸಂಘದ ಬಗ್ಗೆ ಬರೆಯದೆ ಇರಬೇಕಿತ್ತಾದರೂ ಹೇಗೆ?

ಭಾಷಾವಾರು ಪ್ರಾಂತ್ಯ ಬೇಡ, ಚಿಕ್ಕ ರಾಜ್ಯಗಳಿರಲಿ ಎನ್ನುವ, ಮುಸ್ಲಿಮರು ಕ್ರೈಸ್ತರ ದೇಶದ ಬದ್ಧತೆಯನ್ನು ಪ್ರಶ್ನಿಸುವ ನಿಲುವಿನ ಸಂಘವು, ಸಾವಿರಾರು ಕನ್ನಡಿಗರನ್ನು ಸೇರಿಸಿ ಅವರ ತಲೆಯಲ್ಲಿ ತುಂಬುತ್ತಿರುವುದಾದರೂ ಏನನ್ನು? ಎಂಬ ಆತಂಕದ ಕಾರಣದಿಂದಲೇ ಆ ಬರಹವನ್ನು ಬರೆದದ್ದು! ಆರೆಸ್ಸೆಸ್ ಜೊತೆ ಕೈಗೂಡಿಸುವ ಕನ್ನಡಿಗನಿಗೆ, ಅದರ ಮೂಲತತ್ವವೇ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿರುವ, ರಾಜ್ಯಗಳ ಶಾಸನದ ಹಕ್ಕನ್ನೂ ನಿರಾಕರಿಸುವ ಸಿದ್ಧಾಂತ ಎಂದು ಎಚ್ಚರ ಮೂಡಿಸುವ ಕಾರಣದಿಂದಲೇ ಬರೆಯಲಾಗಿತ್ತು. ಇದು ನೇರಾನೇರ ಕನ್ನಡ ಕನ್ನಡಿಗ ಕರ್ನಾಟಕದ ಹಿತಕ್ಕೆ ಸಂಬಂಧಿಸಿದ್ದರಿಂದಲೇ ಬರೆದದ್ದು.

ಸಮಾಜದಲ್ಲಿ ಒಡಕಿನ ವಿಷ ತುಂಬುವ ‘ಮುಸ್ಲಿಂ, ಕ್ರೈಸ್ತರು ಭಾರತಕ್ಕೆ ನಿಷ್ಠರಲ್ಲಾ’ ಎನ್ನುವ ಮೂಲಕ ವಿಭಿನ್ನ ಧರ್ಮಗಳ ಕನ್ನಡಿಗರ ನಡುವೆ ಅಪನಂಬಿಕೆಯ ವಿಷಬೀಜ ಬಿತ್ತುವ ಕಾರಣದಿಂದಲೇ ಇಂದು ಸಿಂಧಗಿಯಲ್ಲಾದಂತಹ ಘಟನೆಗಳಾಗುತ್ತಿರುವುದು ಎನ್ನಿಸುತ್ತದೆ. ಸುಮ್ಮನೆ ಒಡಕಿನ ಸಿದ್ಧಾಂತ ಬೋಧಿಸಿ ಶಿಸ್ತಿನ ರೋಬೋಗಳನ್ನು ಸೃಷ್ಟಿಸಿ ಸಮಾಜದ ಒಳಗೆ ಬಿಟ್ಟು, ಅವುಗಳ ಕೆಲಸಕ್ಕೂ ಸಂಘಕ್ಕೂ ಸಂಬಂಧವಿಲ್ಲಾ ಎಂದು ನುಣುಚಿಕೊಳ್ಳುವ ಮನಸ್ಥಿತಿ ಸಂಘಕ್ಕಿಲ್ಲಾ ಎಂದೇ ಭಾವಿಸೋಣ. ಹಾಗಾಗಬೇಕಾದರೆ ಕಡೇಪಕ್ಷ ಸಂಘದವರು ಒಪ್ಪಬೇಕಾದ್ದು "ತಮ್ಮ ಸಿದ್ಧಾಂತವು ಗುರೂಜಿಯವರ ಚಿಂತನಗಂಗಾದ ಬರಹಗಳಿಗೆ ಒಪ್ಪುತ್ತದೆ" ಎನ್ನುವುದನ್ನು. ಇಲ್ಲವೇ "ಗುರೂಜಿಯವರು ಹೇಳಿರುವ ಮುಸ್ಲಿಮ್, ಕ್ರೈಸ್ತರ ಬಗೆಗಿನ ಅನಿಸಿಕೆಗಳು ತಪ್ಪು, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಒಳ್ಳೆಯದು, ಮೀಸಲಾತಿಗೆ ಪರವಾಗಿದ್ದೇವೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ - ಇದು ಸಂಘದ ಸಿದ್ಧಾಂತ" ಎಂದು ಘೋಷಿಸಲಿ ಸಾಕು. ಬಹಿರಂಗವಾಗಿ, ಚರ್ಚೆಗಳಲ್ಲಿ "ಇಲ್ಲಾ.. ಇಲ್ಲಾ.." ಅಂತನ್ನೋ ಬದಲು ನಮ್ಮ ಸಿದ್ಧಾಂತವನ್ನು ಇಲ್ಲಿ ಬರೆಯಲಾಗಿದೆ ನೋಡಿ ಎಂದು ಒಂದು ಅಧಿಕೃತ ನಿಲುವಿನ ಮೂಲವನ್ನು ತೋರಿಸಿದ್ದರೆ ಸಾಕಿತ್ತು. ಆದರೆ ತಮಾಶೆಯೆಂದರೆ ಹಾಗೆ ತೋರಿಸಿದ ನಂತರ ಚಿಂತನಗಂಗಾ ಹೊತ್ತಗೆಯ ಬರಹಗಳ ಹಲವು ಅಂಶಗಳನ್ನು ಅವರೇ ಅಲ್ಲಗಳೆಯಬೇಕಾಗುತ್ತದೆ. ಒಟ್ಟಾರೆ ಸಂಘದ ಅಧಿಕೃತ ಸಿದ್ಧಾಂತ ಏನೆಂದು ತಿಳಿಸಿಕೊಟ್ಟರೆ ಸಾಕು.

ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಮಾತ್ರಾ ಬೆಂಬಲಿಗರ/ ಪರಿವಾರದ ಮುಗ್ಧತೆ, ಕುರುಡು ಬದ್ಧತೆಗೆ ಕನ್ನಡಿ ಹಿಡಿದಂತಿದ್ದವು...

ಪ್ರತಿಕ್ರಿಯೆಗಳ ಸಾರ!
"ರಾಜಕೀಯ ಮಾಡ್ತಿದೀರಾ?... ನಿಮ್ಮ ಸಂಘಟನೆ ಹೆಸರು ಬದಲಾಯಿಸಿಕೊಳ್ಳಿ... ಮೊದಲು ಕನ್ನಡದ ಕೆಲಸ ಮಾಡಿ ತೋರಿಸಿ... ನೀವು ಕೆಂಪು ಬಣ್ಣದವರು... ದೇಶ ಒಡೆಯಬೇಡಿ... ದೇಶ, ಹಿಂದುತ್ವ, ಸಂಘದ ಬಗ್ಗೆ ಅಂಧತೆಯನ್ನು ಬೆಳೆಸಿಕೊಂಡು ಬಂದ ಕೆಂಬಣ್ಣದ ಭೂತ...ಲೇಖಕರಿಗೆ ಆಂಗ್ಲಭಾಷೆಯ ದಾಸ್ಯವು ನಮ್ಮದೇ ಸಂಸ್ಕೃತವನ್ನು ಒಪ್ಪಿಕೊಳ್ಳುವುದಕ್ಕಿಂತಾ ಮೇಲೆಂದು ತೋರುತ್ತದೆ...ಕೆಂಪು ಲೇಖಕರ ಹಿಡಿತದಿಂದ ನಲುಗದಿರಲಿ...RSS ಬಗ್ಗೆ ಬರೀತೀರಲ್ಲಾ KFD-PFI ಬಗ್ಗೆ ಬರೀತೀರಾ?...ಹಳದಿ ಕೆಂಪು ಈಗ ಚೀನಿಯರ ಸಂಕೇತವಾಗುತ್ತಿದೆ... Do you have guts to question urdu primary mode of communication... ನೀವೇನು ಕನ್ನಡದ ಕೆಲಸಾ ಮಾಡಿದ್ದೀರಾ? ತಾಕತ್ತಿದ್ದರೆ ಒಂದು ಕನ್ನಡ ಶಾಲೆ ಮಾಡಿ... "
ಹೀಗೇ... ಕೆಲವು ಪ್ರತಿಕ್ರಿಯೆಗಳಂತೂ ಶತ್ರುಗಳನ್ನು ತೋರಿಸಿ ಒಗ್ಗಟ್ಟು ತರುವ ಪ್ರಯತ್ನದಂತೆ ಇವೆ.
ನೀವು ಸಂಸ್ಕೃತ/ ಹಿಂದೀ ಒಪ್ಪದಿದ್ದರೆ ನಾಳೆ ಕನ್ನಡವೂ ಇರಲ್ಲ... ಇಂಗ್ಲೀಶ್ ಬಂದುಬಿಡುತ್ತದೆ ಎಂದು ಒಬ್ಬರೆಂದರೆ ಮತ್ತೊಬ್ಬರು ಈ ರಾಜ್ಯವನ್ನು ಮುಸ್ಲಿಮರು ಆಳಿದರೆ ನಾಳೆ ಕನ್ನಡವು ಧೂಳಿಪಟವಾಗುತ್ತದೆ  (ondantoo satya. karnatakadalli muslimara adalita bandare, marane dinave kannada dhooli patavagtade.)
ಎಂದಿದ್ದಾರೆ.

ಇವೆಲ್ಲಾ ತೋರಿಸುವುದಾದರೂ ಏನನ್ನು? ‘ಯಾವ ಚಿಂತನೆಗಳನ್ನು ಆರಿಸಿ ತೋರಿಸಲಾಗಿದೆಯೋ ಆ ಚಿಂತನೆಗಳು ಸರಿ - ಅದನ್ನು ನಾವು ಒಪ್ಪುತ್ತೇವೆ’ ಎನ್ನುವ ನೇರವಂತಿಕೆಯಾಗಲೀ, ‘ಇಲ್ಲಾ, ಅದು ತಪ್ಪು.. ಗುರೂಜಿಯವರ ಈ ನಿಲುವನ್ನು ಸಂಘ ಒಪ್ಪದು’ ಎನ್ನುವ ದಿಟ್ಟತನ/ ವೈಚಾರಿಕ ಸ್ವಾತಂತ್ರವಾಗಲೀ ಇಲ್ಲದಿರುವಂತೆ ತೋರುತ್ತದೆ. ಹಾಗಾಗಿ ವಿಷಯಾಂತರ ಮಾಡೋ ಮೂಲಕ ಉತ್ತರಿಸುವ ಪ್ರಯತ್ನಗಳಂತೆ ಇವು ಕಾಣುತ್ತವೆ.

ಬರಹದ ಆಶಯ

ನಿಜಕ್ಕೂ ಸಂಘ ಗುರೂಜಿಯವರ ಈ ಮಾತುಗಳನ್ನು/ ಸಿದ್ಧಾಂತವನ್ನು ಹೊಂದಿರುವುದಾದರೆ ಒಪ್ಪಿಕೊಳ್ಳಲಿ. "ನಾವು ಪ್ರತಿಪಾದಿಸುವುದು ಇದನ್ನೇ... ಭಾರತದಲ್ಲಿ ಒಂದೇ ಶಾಸಕಾಂಗವಿರಲಿ, ಮುಸ್ಲಿಮರು/ ಕ್ರೈಸ್ತರ ದೇಶಪ್ರೇಮ ಪ್ರಶ್ನಾರ್ಹ, ಮೀಸಲಾತಿ ಕೆಟ್ಟ ಪದ್ದತಿ ಮತ್ತು ಹಿಂದೀ ಭಾರತದ ಸಂಪರ್ಕ ಭಾಷೆಯಾಗಲಿ" ಎನ್ನುವುದನ್ನೇ ಎನ್ನಲಿ. ವಾಸ್ತವವಾಗಿ ನಾಲ್ಕನೆಯದನ್ನು ಈಗಾಗಲೇ ಹೇಳಿದ್ದಾರೆ. ಉಳಿದ ಮೂರನ್ನು ಅದು ಸತ್ಯವಾದರೆ ಒಪ್ಪಿಕೊಳ್ಳಲಿ. ಇಲ್ಲದಿದ್ದರೆ ಇನ್ಯಾವ ಸಿದ್ಧಾಂತ ಇವರನ್ನು ನಡೆಸುತ್ತಿದೆ ತಿಳಿಸಲಿ. ಈಗ ಜನರ ಮುಂದೆ ಇಂತಹ ನಿಲುವುಗಳನ್ನು ಇಟ್ಟುಕೊಂಡೇ ನೇರವಾಗಿ ರಾಜಕಾರಣಕ್ಕಿಳಿಯಲಿ ಎಂದದ್ದೂ ಕೂಡಾ... ‘ಬಿಜೆಪಿಯ ಮೂಲಕ ಹಿಂಬಾಗಿಲ ರಾಜಕಾರಣ ಮಾಡುವುದನ್ನು ಬಿಡಲಿ’ ಎನ್ನುವ ಕಾರಣದಿಂದಲೇ! ಅಥವಾ ಬಿಜೆಪಿಯೇ ತನ್ನ ಸಿದ್ಧಾಂತ ಸಂಘದ್ದು ಎಂದು ಹೇಳಿಕೊಂಡು ರಾಜಕಾರಣ ಮಾಡಲಿ. ಗುರೂಜಿಯವರ ಮಾತುಗಳ ಬಗ್ಗೆ ಸಮ್ಮತಿ ಅಥವಾ ತಿರಸ್ಕರಣೆಯನ್ನು ಸಾರ್ವಜನಿಕವಾಗಿ ಸಂಘವು ತಿಳಿಸುವುದು ಸಂಘದ ಬಗ್ಗೆ ಸಮಾಜಕ್ಕೆ ಇರುವ ಗೊಂದಲಗಳು ದೂರಾಗಲು ಖಂಡಿತಾ ನೆರವಾದೀತು! ಇಡೀ ರಾಷ್ಟ್ರಕ್ಕೇ ಬೆಳಕು ಕೊಡುತ್ತೇನೆನ್ನುವ, ಬಲಿಷ್ಠ ರಾಷ್ಟ್ರ ನಿರ್ಮಾಣವೇ ಪರಮಗುರಿಯೆನ್ನುವ ಸಂಘಕ್ಕೆ ಇಷ್ಟೂ ನೇರವಂತಿಕೆ ಇರದಿದ್ದರೆ ಹೇಗೆ?

ಕನ್ನಡ ಹೋರಾಟಗಳಿಗೀಗ ಗೆಲುವಿನ ಖುಶಿ ಕಾಲ!!


ಕಳೆದೊಂದು ವಾರ ಕನ್ನಡಪರ ಹೋರಾಟಗಳಿಗ ಸುಗ್ಗೀ ಕಾಲ, ಹಬ್ಬದ ಕಾಲ. ಕನ್ನಡ್ ಮಂದಿಗಾ ಒಳ್ಳೀ ಸುದ್ದೀ ಮಳಿ ಧೋ ಅಂತಾ ಹುಯ್ದಾಂಗ.. ಮುಂಗಾರಿನ ಸಿಂಚನ!! ಹೌದ್ರೀ... ಅಂಥದ್ ಏನಾತಪ್ಪಾ ಅಂತೀರೇನ್ರೀ... ಇಕಾ ನೋಡಿ!!!

ಶಾಲೀ ಮುಚ್ಚೂ ಮಂದಿಗಾ ತಡೆಯಾಜ್ಞೆ!

ಮೊದಲಾ ಏನಾತಪಾ ಅಂದ್ರಾ ನಮ್ ರಾಷ್ಟೀಯತಿ ಹರಿಕಾರ್ ಪಾರ್ಟಿ ಭಾಜಪಾದ ಮಂತ್ರಿಗೋಳಾಗಿರೋ ಕಾಗೇರಪ್ಪನೋರು ಕರ್ನಾಟಕದಾಗಿರೂ ಕನ್ನಡ್ ಮಾಧ್ಯಮದ ಶಾಲಿಗಳೊಳಗಾ ಐದಕ್ಕಿಂತ ಕಡೀಮಿ ಮಕ್ಳಿದಾರಂದ್ರಾ ಬಂದ್ ಮಾಡ್ತೇವಿ ಅಂತಂದ್ರಲ್ಲಪಾ... ಮುಂದಾ ಮಂದಿ ಕಂಡಾಪಟ್ಟಿ ಉಗ್ಯಾಕ್ ಹತ್ತಿದ್ದೇ ನೋಡ್ರಪಾ ‘ಅದೂ ಮುಚ್ಚೋಣಲ್ಲಾ...ವಿಲೀನಾ’ ಅಂತಂದ್ ಬುಟ್ರು! ಪತ್ರಿಕೆಯೊಂದ್ರಾಗಂತೂ  "ಇದು ಕೊಲಿ ಮಾಡಾಕ್ ಹತ್ತಿಲ್ಲಾ, ಸ್ವರ್ಗಕ್ ಕಳ್ಸಾಕ್ ಹತ್ತೀನಿ... ಅಂದಂಗಾತು" ಅನ್ನೂ ಓಲಿ ಬಂದಿತ್ರೀಪಾ. ಸರ್ಕಾರದ ಈ ಮಂಗ್ಯಾತನಾನ ಕರ್ನಾಟಕದಾಗಿನ ಹೆಚ್ಚೂ ಕಮ್ಮಿ ಎಲ್ಲಾ ಸಾಹಿತಿಗೋಳು ಬೈಯ್ಯಾಕಾ ಚಾಲೂ ಮಾಡುದ್ರುರೀ... ನವೆಂಬರ್ ಒಂದು ರಾಜ್ಯೋತ್ಸವಕ್ ಒಂದೀಟ್ ದಿನಕ್ ಮೊದ್ಲಾ, ಕರ್ನಾಟಕ ರಕ್ಷಣಾ ವೇದಿಕೆ ಮಂದಿ ಎಲ್ಲಾ ಜಿಲ್ಲಾದೊಳಗಾ ದೊಡ್ ಹೋರಾಟ ಮಾಡುದ್ರುರೀಪಾ...ಈಟಾದ್ರೂ ನಮ್ ಸರ್ಕಾರ್ ಜಗ್ಲಿಕ್ ಒಲ್ದಾತು! ಕಡೀಗ ಮೂರು ಮಂದಿ ಜ್ಞಾನಪೀಟ ಪ್ರಶಸ್ತಿ ಗೆದ್ದೋರು, ಮತ್ತೊಬ್ರು ರಾಷ್ಟ್ರಕವಿಗೋಳೂ ಕೋರ್ಟ್ ಬಾಗ್ಲ ಬಡ್ಯಾಕ್ ಮುಂದಾದ್ರು. ಈಗ ಹೈಕೋರ್ಟ್ ಸರ್ಕಾರಕ್ಕ ತುಸಾ ತಡೀರ್ರಲಾ...ಗಡಿಬಿಡಿ ಮಾಡ್ ಬ್ಯಾಡ್ರೀ ಅಂತಾ ಗಪ್ ಕುಂಡ್ರಾಕ್ ಆದೇಶ ಹೊರಡ್ಸೈತಿ!!! ಆಹಾ ಹಾಲ್ ಕುಡ್ದಂಗ್ ಆತಲ್ರೀಪಾ!!

ನಮ್ಮಮೆಟ್ರೋ ಮತ್ತು ಅಧಿಕಾರಿಗಳ ಉತ್ತರ!

ಈ ಕಡೀ ನಮ್ ಬೆಂಗಳೂರದಾಗ ನಮ್ಮ ಮೆಟ್ರೋ ಚಾಲೂ ಮಾಡಿ ಅದ್ರಾಗ ಹಿಂದೀನಾಗೂ ಅನೌನ್ಸ್ ಮಾಡ್ಲಿಕ್ ಹತ್ಯಾರಲಾ... ಅದು ನಿಲ್‍ಬೇಕಾ ಅಂತಾ, ನಮ್ ಕನ್ನಡ್ ಮಂದೀಗಾ ಕೆಲಸ ಕೊಡಾಬೇಕಂತಾ, ಮೆಟ್ರೋದಾಗ ಕನ್ನಡದಾಗ ಸೇವಿ ಸಿಗಬೇಕಂತಾ ಕರ್ನಾಟಕ ರಕ್ಷಣಾ ವೇದಿಕೆ ಮಂದಿ ದಿಸೆಂಬರ್ ೨ಕ್ಕ ಮೆಟ್ರೋ ಮುಂದಾ ಧರಣಿ ಕುಂತು ಒಂದು ಮನವಿ ಕೊಟ್ಟು ಬಂದಿದ್ರುರೀಪಾ..ಮೆಟ್ರೋ ಸಂಸ್ಥಿ ಮಂದಿ ಅದುಕ್ಕಾ ಒಂದು ಉತ್ರ ಬರ್ದು ಕಳುಸ್ಯಾರಾ. ನಾವ್ ಕೆಲಸಾ ಕೊಡೂ ಮಂದೀಗಾ ಕನ್ನಡ್ ಮಾತಾಡಕ್ಕ, ಬರೀಲಿಕ್ಕಾ, ಓದಲಿಕ್ಕಾ ಬರೋಣು ಕಡ್ಡಾಯ ಐತಿ, ಇಲ್ಲಿ ಗುತ್ತಿಗಿ ಮ್ಯಾಲ ಇರೋ ಸಂಸ್ಥಿಗಳೂ ಹಾಂಗ್ ಕನ್ನಡ್ ತಿಳಿದಿರೋ ಮಂದೀಗಾ ಕೆಲಸಾ ಕೊಡಾಕಬೇಕಂತ ಒಪ್ಪಂದ ಐತಿ, ಕನ್ನಡದ ಮಂದಿಗಾ ಕನ್ನಡದಾಗ ಸೇವಿ ಕೊಟ್ಟಾ ಕೊಡ್ತೀವ್ರೀ ಅಂತಾ ಪತ್ರ ಬರ್ದಾರ. ಇದರಾಗ ಎಶ್ಟ್ ಖರೀ ಐತನ್ನೋದು ಬ್ಯಾರೀ ಮಾತು. ಆದ್ರೂ ಹೀಂಗಾ ಬರವಣಿಗೀಲಿ ತಿಳಿಸ್ಯಾರಾ ಅಂದ್ರಾ ಆ ಮಟ್ಟಕ್ ಕಮಿಟ್ ಆದ್ರೂ ಅಂದಂಗೇ ಅಲ್ರೀ!!! ಹಾಂಗಾಗಿ ಇದೂ ಕನ್ನಡದೋರಿಗ್ ಛಲೋ ಸುದ್ದೀನೇ!!!

ಬೆಳಗಾವಿ ಪಾಲಿಕಿ ಸೂಪರ ಸೀಡ


ಇನ್ನು ನಮ್ ಬೆಳಗಾವಕ್ ಬರ್ರೀ... ಬರೀ ಪಟಾಕ್ಷಿ ಸದ್ದೇ ಸದ್‍ರೀಪಾ! ಅದಾ ಮತ್ತಾ... ಇರಲಾರ್ದ ಇರುವಿ ಬಿಟ್ಕೊಂಡಂಗ್ ನಮಗಾ ಆಳೂ ಮಂದಿ ಸಪೋರ್ಟ್ ಮಾಡ್ತಾರಾ ಅನ್ನೂ ಭ್ರಮೀ ಒಳಗಾ ಎಂಇಎಸ್ ಮೇಯರ್/ ಉಪಮೇಯರ್ ಕೂಡಾ ಕನ್ನಡ್ ರಾಜ್ಯೋತ್ಸವದ ದಿನ ಕರಾಳದಿನದಾಗ್ ಹೊಕ್ಕೊಂಡಿದ್ದು, ಅದುಕ್ ಕರ್ನಾಟಕ ರಕ್ಷಣಾ ವೇದಿಕೆ ಮಂದಿ ಮೇಯರ್ ಕಚೇರಿಗ್ ನುಗ್ಗಿ ಪ್ರತಿಭಟನಿ ಮಾಡಿದ್ದು...ಇದರ ಬೆನ್ ಹಿಂದಾ ರಗಡ್ ಒತ್ತಡ ಸರ್ಕಾರದ ಮ್ಯಾಲ್ ಬೀಳಕ್ ಚಾಲೂ ಅಗಿದ್ದು...ಕಡೀಕ ಪಾಲಿಕೆ ಸೂಪರ್ ಸೀಡ್ ಆಗೂ ಹಂತಕ್ ಬಂತ್ರಲಾ... ಅಲ್ಲಾ, ಈ ಎಂಇಎಸ್ ಮಂದಿ ಕರ್ನಾಟಕದಾಗಾ ಕುಂತು ಕಂಬಾರಪ್ನೋರಿಗೆ ಅಪಮಾನ ಮಾಡಿ, ರಾಜ್ಯೋತ್ಸವಕ್ಕ ಕಪ್ಪುದಿನಾ ಮಾಡಿ... ಸುಕಾಸುಮ್ನ್ ಕಿರಿಕ್ ಮಾಡಕ್ ಹತ್ತಿದ್ ನೋಡುದ್ರಾ ಸರ್ಕಾರ ಪಾಲಿಕೇನಾ ಸೂಪರ್ ಸೀಡ್ ಮಾಡಿ ಛಲೋ ಕೆಲ್ಸ ಮಾಡೈತಿ ಅನ್ಸೋದ್ರಾಗ್ ಅಚ್ಚರಿ ಏನಿಲ್ಲಾ ಬಿಡ್ರೀಪಾ..

ಹೀಂಗಾ... ಈ ಒಂದೆರಡು ವಾರದಾಗಾ ಕನ್ನಡದೋರ್ ಪಾಲಿಗೆ ಡೇಲಿ... ಖೀರ್ ಕುಡ್ದಂಗಾಗೈತಿ. ಇಂಥಾ ಹೋರಾಟ ನಡ್ಸಿರೋ ಎಲ್ಲಾ ಮಂದಿಗೂ.... ಇಕಾ... ಶರಣು, ಶರಣಾರ್ಥಿ!!

ಕನ್ನಡ ಗೆಳೆಯರ ಬಳಗ: ಬೆಳ್ಳಿಹಬ್ಬಕ್ಕೆ ನಲ್‌ಬರವು...





ಕನ್ನಡ ಗೆಳೆಯರ ಬಳಗ, ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಕನ್ನಡ ಕನ್ನಡಿಗ ಕರ್ನಾಟಕಗಳ ಪರವಾಗಿ ದುಡಿಯುತ್ತಿರುವ ಕನ್ನಡ ಸಂಘಟನೆಯಾಗಿದೆ. ಬೆಳ್ಳಿಹಬ್ಬದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ದಿನಾಂಕ ೨೭ನೇ ನವೆಂಬರ್ ೨೦೧೧ರ ಭಾನುವಾರದಂದು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಪುಸ್ತಕ ಬಿಡುಗಡೆ, ಕನ್ನಡ ಬೆಂಗಳೂರು : ಸುಂದರ ಬೆಂಗಳೂರು ಎನ್ನುವ ಚಿಂತನಾಗೋಷ್ಟಿ, ಕನ್ನಡ ಸಂಘಟನೆಗಳ ಸ್ನೇಹಸಂಗಮ ಮತ್ತು ಕಾರ್ಯಕರ್ತರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಲ್ಲಾ ಕನ್ನಡಪರ ಮನಸ್ಸುಗಳು ಸೇರಲೊಂದು ಒಳ್ಳೆಯ ಸಂದರ್ಭ ಇದಾಗಿದ್ದು, ಎಲ್ಲರನ್ನೂ ಕನ್ನಡ ಗೆಳೆಯರ ಬಳಗದ ಪರವಾಗಿ ಆಮಂತ್ರಿಸುತ್ತಿದ್ದೇವೆ. ಬನ್ನಿ, ಪಾಲ್ಗೊಳ್ಳಿ... ನಲ್ಬರವು...!

ABVP ನಿರ್ಣಯದಲ್ಲಿ ಮರೆತ ತಾಯ್ನುಡಿಯಲ್ಲಿ ಕಲಿಕೆ!


ನಿನ್ನೆ ಬೆಂಗಳೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮೂರು ದಿನಗಳ ಸಮಾವೇಶ ಮುಕ್ತಾಯವಾಯಿತು. ನಮ್ಮ ನಾಳಿನ ಭವಿಷ್ಯದ ರೂವಾರಿಗಳು ಕೈಗೊಳ್ಳಲಿರುವ ನಿರ್ಣಯಗಳ ಬಗ್ಗೆ ಕುತೂಹಲವನ್ನು ಈ ಸಮ್ಮೇಳನ ಹುಟ್ಟು ಹಾಕಿತ್ತು.

ನಿರ್ಣಯಗಳು

ಈ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಇವತ್ತಿನ (29.12.2010ರ) ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿ ಮೂಡಿಬಂದಿದೆ. ಆ ವರದಿಯಂತೆ ನಿರ್ಣಯಗಳಲ್ಲಿ ಕಂಡಿರೋದು 2ಜಿ ಸ್ಪೆಕ್ಟ್ರಂ ಹಗರಣ, ಶಿಕ್ಷಣದ ವ್ಯಾಪಾರಿಕರಣಕ್ಕೆ ವಿರೋಧ, ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ, ಜಗತ್ತಿನ ತಾಪಮಾನ ಏರಿಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯಂತಹ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಭಾಳ ಸಂತೋಷ. ದೇಶದ, ಪ್ರಪಂಚದ ಎಲ್ಲಾ ಆಗುಹೋಗುಗಳ ಬಗ್ಗೆ ಕಾಳಜಿ ಹೊಂದಿರೋದು ಸರಿ. ಆದರೆ ದೇಶದ ನಾನಾ ಭಾಗಗಳಿಂದ ಬಂದಿರೋ ಹತ್ತು ಸಾವಿರ ಪ್ರತಿನಿಧಿಗಳ ಈ ಸಭೆಯಲ್ಲಿ ಭಾರತೀಯರ ಕಲಿಕೆ ತಾಯ್ನುಡಿಯಲ್ಲಿ ಆಗಬೇಕು ಅನ್ನೋ ದಿಕ್ಕಲ್ಲಿ ಚರ್ಚೆ ನಡೆದಿದ್ರೆ ಚೆನ್ನಾಗಿರೋದಲ್ವಾ ಗುರೂ? ನಾಳಿನ ಭವಿಷ್ಯ ರೂಪುಗೊಳ್ಳೋಕೆ ನಮ್ಮ ವಿದ್ಯಾರ್ಥಿಗಳ ಕಲಿಕೆ ಮತ್ತು ದುಡಿಮೆಗಳು ಅತ್ಯುತ್ತಮವಾಗಬೇಕು. ಹೀಗಾಗಲು ತಾಯ್ನುಡಿಯಲ್ಲಿನ ಕಲಿಕೆಯೊಂದೇ ಸರಿಯಾದ ದಾರಿ, ಈ ದಿಕ್ಕಲ್ಲಿ ನಾಡಿನ ಕಲಿಕಾ ವ್ಯವಸ್ಥೆಗಳು ಸಾಗಬೇಕು ಅನ್ನೋ ಬಗ್ಗೆ ನಿರ್ಣಯಗಳಲ್ಲಿ ಒಂದಂಶವನ್ನು ಎಬಿವಿಪಿಯ ಹಿರಿತಲೆಗಳು ಸೇರಿಸುವುದು ಇಂದಿನ ಅಗತ್ಯವಾಗಿತ್ತು ಅಲ್ವಾ ಗುರೂ?

ಈ "ನೋ ಪಾರ್ಕಿಂಗ್" ಬೋರ್ಡು ಮಸ್ತಾಗಿದೆ ನೋಡಿ!



ಇವು ನಮ್ ಬೆಂಗಳೂರಲ್ಲೇ ಒಂದು ಬಡಾವಣೇಲಿ ಕಾಣೋ "ನೋ ಪಾರ್ಕಿಂಗ್" ಬೋರ್ಡುಗಳು ಗುರೂ! ಬೋ ಅಚ್ಚರಿ ಜೊತೇಗೆ ಖುಶಿ ಆಯ್ತು ಇವುನ್ನ ನೋಡಿ. ಯಾರಪ್ಪಾ ಈ ಕೆಲ್ಸ ಮಾಡಿರೋರು ಅಂತಾ ಇಚಾರ್ಸಮಾ ಅಂತಾ ಮನೆ ಯಜಮಾನ್ರುನ್ನ ಕೇಳುದ್ರೆ ಅವ್ರೇಳಿದ್ ಇಷ್ಟು.

ಬೆಂಗಳೂರಾಗೆ ಯಾವ ರೋಡಲ್ ನೋಡುದ್ರೂಮೆ ಎಲ್ಲಾರ್ ಮನೆ ಗೇಟಿನ್ ಮೇಲೆ ನೋ ಪಾರ್ಕಿಂಗ್ ಅನ್ನೋ ಬೋರ್ಡು ತಗುಲಾಕಿರ್ತಾರೆ. ಇಂಥಾ ಬೋರ್ಡಲ್ಲೂ ಕನ್ನಡತನದ ನೆನಪು ಮಾಡಿಕೊಡೋ ಕೆಲಸಾನಾ ಆ ಬಡಾವಣೇಲಿರೋ ಒಂದು ಸಂಸ್ಥೆಯೋರು ಮಾಡ್ತಾ ಔರಂತೆ.. ಓದ್ ವರ್ಸಾ ಆರಂಕುಸವಿಟ್ಟೊಡಂ ನೆನೆವುದೆನ್ನಮನಂ ಬನವಾಸಿ ದೇಸಮಂ, ಎಲ್ಲಾದರೂ ಇರು ಎಂತಾದರೂ ಇರು ಕನ್ನಡವಾಗಿರು ಅನ್ನೋ ಥರದ ಕವಿವಾಣಿಗಳ್ನ ಬಳ್ಸಿ ಇಂಥಾ ಬೋರ್ಡ್ ಮಾಡಿದ್ರಂತೆ. ಈ ಸಲ ಅದೇ ಬಡಾವಣೆಯಲ್ಲಿದ್ದ ಸಿ. ಅಶ್ವತ್ ಅವರನ್ನು ನೆನಪು ಮಾಡ್ಕೊಂಡು, ಜೊತೇಲಿ ವಿಷ್ಣೂನ ನೆನುಸ್ಕೊಳ್ಳೋ ಹಾಗೆ ಬೋರ್ಡ್ ಮಾಡವ್ರೆ!

ಬಸವನಗುಡಿಯಲ್ಲೊಂದು ಕನ್ನಡದ ಗುಡಿ!

ಬೆಂಗಳೂರು ದಕ್ಷಿಣದಲ್ಲಿ ಬಸವನಗುಡಿ ಇದೆ. ಇದರಲ್ಲಿ ನರಸಿಂಹರಾಜಾ ಕಾಲೋನಿ ಅನ್ನೋ ಪ್ರದೇಶಾನೂ ಇದೆ. ಇಲ್ಲಿ ಸುಮಾರು ವರ್ಷಗಳಿಂದ ಒಂದು ಗೆಳೆಯರ ಗುಂಪು ಸೇರ್ಕೊಂಡು ಸಂಗ ಮಾಡ್ಕಂಡವ್ರೆ. ಕಟ್ಟೆ ಬಳಗ ಅಂತಾ... ಈ ಕಟ್ಟೆಬಳಗದೋರು ಇಡೀ ಬಡಾವಣೆಯಲ್ಲಿ "ಗೇಟಿನ ಮುಂದೆ ಗಾಡಿ ನಿಲ್ಲುಸ್ಬೇಡಿ" ಅನ್ನೋ ಬೋರ್ಡುನ್ನ ಹಾಕವ್ರೆ, ಅದೂ ಪುಗಸಟ್ಟೆಯಾಗಿ. ಏನ್ ಪಸಂದಾಗ್ ಕಾಣ್ತೈತೆ ಗೊತ್ತಾ ಗುರೂ? ಬರ್ರಿ, ಒಂದ್ ದಪಾ ಎನ್.ಆರ್.ಕಾಲನಿ ಒಳಗಡೆ ಓಡಾಡಿ. ಇಂಥಾ ಕೆಲ್ಸಾನಾ ನಾವೂ ನಮ್ ನಮ್ ಬಡಾವಣೇಲಿ ಮಾಡಬೌದು ಅನ್ನೋ ಸಂದೇಶಾನಾ ಈ ಜನಾ ಕೊಡ್ತಾ ಅವ್ರೇ ಗುರೂ...

ರೈಲು ನೇಮಕಾತಿ : ಒಪ್ಪುಕೂಟದೆಡೆಗೊಂದು ಸರಿಹೆಜ್ಜೆ!!


ಆಹಾ! ಭಾರತ ದೇಶದಲ್ಲಿ ಅಪರೂಪಕ್ಕೊಂದು ಸಕ್ಕತ್ ಒಳ್ಳೇ ನಡೆ ಒಪ್ಪುಕೂಟಕ್ಕೆ ಒಪ್ಪೋ ಅಂಥಾ ದಿಕ್ಕಲ್ಲಿ ರೈಲ್ವೇ ಇಲಾಖೆಯಿಂದ ನಡೆದಿದೆ ಗುರು! ನಿನ್ನೆ ರೈಲು ಮಂತ್ರಿ ಶ್ರೀಮತಿ ಮಮತಾ ಬ್ಯಾನರ್ಜಿಯವರು ಇನ್ಮುಂದೆ ರೈಲು ಪರೀಕ್ಷೆಗಳನ್ನು ಸ್ಥಳೀಯ ಭಾಷೆಯಲ್ಲೂ ಬರೆಯ ಬಹುದು ಅಂದ್ರು. ಜೊತೆಗೆ ಒಂದೇ ಹೊತ್ತಿನಲ್ಲಿ ಇಡೀ ದೇಶದ ತುಂಬಾ ರೈಲು ನೇಮಕಾತಿ ನಡೆಯುತ್ತೆ ಅಂತಾನೂ ಅಂದ್ರು. ಇದೆಲ್ಲಾ ಆಗಿದ್ದು ಕನ್ನಡಿಗರ ಒಗ್ಗಟ್ಟಿನ ಹೋರಾಟದಿಂದಾನೇ ಅನ್ನೋದು ಸ್ಪಟಿಕದಷ್ಟು ಸ್ಪಷ್ಟ. ಎರಡು ವರ್ಷದ ಹೋರಾಟದ ಕಾರಣದಿಂದ ಬರೀ ಕರ್ನಾಟಕಕ್ ಮಾತ್ರಾ ಅಲ್ಲಾ... ಇಡೀ ಭಾರತಕ್ಕೆ ಉಪಕಾರ ಆಗೋ ಅಂಥಾ ಒಂದು ನಿಲುವಿಗೆ ಕೇಂದ್ರಸರ್ಕಾರ ಬಂದಿದೆ ಅಂದ್ರೆ ತಪ್ಪಾಗಲ್ಲ.
ರೈಲು ನೇಮಕಾತಿ ಅನ್ಯಾಯ ಬೆಳಕಿಗೆ ತಂದಿದ್ದು...
ರೈಲು ನೇಮಕಾತಿಯ ಅನ್ಯಾಯ ಮೊದಲಿಗೆ ಬಯಲಿಗೆ ಬಂದಿದ್ದು ಏನ್‍ಗುರುವಿನಲ್ಲೇ... ಆಗಸ್ಟ್ ೨೦೦೭ರಲ್ಲಿ ಇವರು ಜಾಹೀರಾತು ಕೊಟ್ಟಾಗಲೇ ಏನ್‍ಗುರುವಿನಲ್ಲಿ ಇದರ ಬಗ್ಗೆ ಬರೆದಿದ್ದೆವು. ನಂತರದ ದಿನಗಳಲ್ಲಿ ಈ ಅನ್ಯಾಯದ ವಿರುದ್ಧವಾಗಿ ದನಿಯೆತ್ತಿ ಹೋರಾಟದ ಕಣಕ್ಕೆ ಧುಮುಕಿದ್ದು ಕರ್ನಾಟಕ ರಕ್ಷಣಾ ವೇದಿಕೆಯೋರು. ನೇಮಕಾತಿ ಪರೀಕ್ಷೆಗೆ ಉತ್ತರದಿಂದ ಪುಗಸಟ್ಟೆ ರೈಲಲ್ಲಿ ಜನರನ್ನು ತುಂಬ್ಕೊಂಡು ಬಂದಾಗ ಈ ಹೋರಾಟ ಉಗ್ರ ಸ್ವರೂಪ ಪಡೀತು. ನೈಋತ್ಯ ರೈಲ್ವೇ ಕಛೇರಿಗೆ ಮುತ್ತಿಗೆ ಹಾಕಿದಾಗ ರೈಲು ಇಲಾಖೆ ಎಚ್ಚೆತ್ತುಕೊಂಡು ಇಡೀ ನೇಮಕಾತಿ ಪ್ರಕ್ರಿಯೇನಾ ಮುಂದೂಡ್ತು. ಇಂಥದೇ ಹೋರಾಟ ನಮ್ಮಿಂದಲೇ ಪ್ರೇರಣೆ ನಡೆದ ಹಾಗೆ ಮಹಾರಾಷ್ಟ್ರದಲ್ಲೂ... ಭಾರತದ ಬೇರೆಬೇರೆ ಕಡೆಗಳಲ್ಲೂ ನಡೀತು. ಆಮೇಲಾದ ರಾಜಕೀಯ ಬದಲಾವಣೆಗಳಲ್ಲಿ ಹೊಸ ಸರ್ಕಾರ, ಹೊಸ ಮಂತ್ರಿಗಳು ಬಂದ್ರು. ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು ಈಗ ಕನ್ನಡಿಗರ ಹೋರಾಟಕ್ಕೆ ಗೌರವ ನೀಡಿ ಒಂದೊಳ್ಳೆ ನಿರ್ಧಾರ ಘೋಷಿಸಿದ್ದಾರೆ. ಇದರಂತೆ ಇನ್ಮುಂದೆ ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೀಬಹುದು. ಎಲ್ಲಾ ಕಡೆ ಒಟ್ಗೆ ಪರೀಕ್ಷೆ ನಡ್ಸೋದ್ರಿಂದ ಬೇರೆ ರಾಜ್ಯದಿಂದ ಇಲ್ಲಿಗೆ ಬರೋರ ಸಂಖ್ಯೆ ಕಮ್ಮಿ ಆಗೋ ಸಾಧ್ಯತೆ ಇದೆ. ಅಲ್ಲದೆ ಸ್ಥಳೀಯರಿಗೆ ಆದ್ಯತೆ ನೀಡೋಕೂ ರೈಲ್ವೇ ಮುಂದಾಗಿರೋದು ಸರಿಯಾದ ಒಪ್ಪುಕೂಟದೆಡೆಗಿನ ಹೆಜ್ಜೆಯಾಗಿದೆ.
ಬರೀ ರೈಲಲ್ಲ! ಎಲ್ಲ ನೇಮಕಾತಿಗಳೂ ಹೀಗಾಗಬೇಕು

ಇದು ಬರೀ ರೈಲು ಇಲಾಖೆಯಲ್ಲಾದ ಬದಲಾವಣೆಯಲ್ಲ. ಇದರಿಂದ ಕೇಂದ್ರಸರ್ಕಾರದ ಕೆಲಸಗಳಲ್ಲಿ ಇನ್ಮುಂದೆ ಸ್ಥಳೀಯರಿಗೆ ಆದ್ಯತೆ ಕೊಡಬೇಕು, ಆಯಾ ಪ್ರದೇಶಗಳ ಭಾಷೆಗಳಲ್ಲೇ ಪರೀಕ್ಷೆ ಬರೆಯೋ ಜನರ ಹಕ್ಕುನ್ನ ಮಾನ್ಯ ಮಾಡಬೇಕು. ಬ್ಯಾಂಕಿರಲಿ, ಸೈನ್ಯವಿರಲಿ ಎಲ್ಲಾ ಕಡೆಯ ಪರೀಕ್ಷೆಗಳು ಆಯಾ ರಾಜ್ಯಗಳ ಭಾಷೆಯಲ್ಲಿ ನಡೀಬೇಕು. ನಮ್ಮೂರಿನ ಕೆಲಸಗಳು ನಮ್ಮ ಮಣ್ಣಿನ ಮಕ್ಕಳಿಗೇ ಸಿಗಬೇಕು ಅಂತನ್ನೋ ಕೂಗಿಗೆ ಬಲ ಬಂದಂಗಾಗಿದೆ ಅಲ್ವಾ ಗುರು!

ಕೊನೆಹನಿ : ಬೆಂಗಾಲಿ ತಾಯ್ನುಡಿಯ ಮಮತಾ ಬ್ಯಾನರ್ಜಿ ಪ್ರಾದೇಶಿಕ ಪಕ್ಷಕ್ಕೆ ಸೇರಿದವರಾದ್ದರಿಂದಲೇ ಇಂಥಾ ಒಂದು ಒಪ್ಪುಕೂಟದ ಒಳಿತಿನ ತೀರ್ಮಾನ ಸಾಧ್ಯವಾಗಿದ್ದು ಅಂತನ್ನೋ ಮಾತನ್ನು ತಳ್ಳಿಹಾಕಕ್ ಆಗುತ್ತಾ ಗುರು?

ಬೆಳಗಾವಿ ರಾಜಕಾರಣ ಮತ್ತು ಭಾಜಪ

ನಿನ್ನೆ ಬೆಳಗಾವಿಯಲ್ಲಿ ಪಾಲಿಕೆ ಕಟ್ಟಡದ ಮೇಲೆ ಬಾವುಟ ಹಾರಿಸೋ ವಿಷಯವಾಗಿ ಗದ್ದಲ ನಡೀತು ಆಂತಾ ಇವತ್ತಿನ ಕನ್ನಡಪ್ರಭದ ಮುಖಪುಟದಲ್ಲಿ ವರದಿಯಾಗಿದೆ. ನಿನ್ನೆ ಬೆಳಗಾವಿಯಲ್ಲಿ ನಡೆದ ಘಟನೆಯಿಂದ ನಾಡಿಗೆ ಒಳ್ಳೇದೇನಪ್ಪಾ ಆಗಿದೆ ಅಂದ್ರೆ ಇದರಿಂದ ಬೆಳಗಾವಿಯ ಹಾಲಿ ಸಂಸದ ಮತ್ತು ಶಾಸಕರೊಬ್ಬರ ಬಣ್ಣ ಬಯಲಾಗಿದೆ. ಇಷ್ಟಕ್ಕೇ ಇದು ನಿಲ್ಲದೆ ನಾಡಿನ ಅಧಿಕಾರದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ ಯಾವ ನಿಲುವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಿದೆ ಅನ್ನೋ ಕುತೂಹಲಕ್ಕೂ ಕಾರಣವಾಗಿದೆ.

ಬಾವುಟದ ವಿವಾದ ಬರೀ ನೆಪ!

ಬೆಳಗಾವಿ ಪಾಲಿಕೆ ಮೇಲೆ ಯಾವ ಬಾವುಟ ಹಾರ್ತಿತ್ತು? ಯಾವುದು ಹಾರ್ತಿದೆ? ಯಾವ್ದು ಹಾರಬೇಕು? ಅನ್ನೋದನ್ನೆಲ್ಲಾ ಪಕ್ಕಕ್ಕಿಟ್ಟು ನಮ್ಮ ಸಂಸದರ ನಡವಳಿಕೆ ಬಗ್ಗೆ ಮಾತ್ರಾ ನೋಡೋಣ ಗುರು! ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರೋ ಸುರೇಶ್ ಅಂಗಡಿ ಎಂಬ ಹುಟ್ಟಿನಿಂದ ಕನ್ನಡಿಗರಾದ ಸಂಸದರು ಈ ಸಂದರ್ಭದಲ್ಲಿ ನಡೆದುಕೊಂಡ ರೀತಿಯನ್ನು ನೋಡೋಣ. ಕುಮಾರಗಂಧರ್ವ ರಂಗಮಂದಿರದ ಸಮೀಪದಲ್ಲಿ ಹೊಸದಾಗಿ ಕಟ್ಟಿರೋ ಪಾಲಿಕೆ ಕಛೇರಿ ಮೇಲೆ ಎಂ.ಇ.ಎಸ್ಸಿನ ಕೇಸರಿ ಬಾವುಟವನ್ನು ಹಾರಿಸಬೇಕೆಂದು ಒತ್ತಾಯಿಸಿ ಕೆಲ ಎಂ.ಇ.ಎಸ್ ಬೆಂಬಲಿಗರು ರಸ್ತೆ ತಡೆ ನಡುಸ್ತಿದ್ದಾಗ ಅಲ್ಲಿಗೆ ಬಂದ ಸಂಸದ ಅಂಗಡಿಯವರು ಆ ಜನಗಳ ಬೆಂಬಲವಾಗಿ ನಿಂತಿದ್ದಷ್ಟೇ ಅಲ್ಲದೆ ಮರಾಠಿಯಲ್ಲಿ ಭಾಷಣವನ್ನೂ ಮಾಡಿದ್ದಾರೆ. ಇದೇ ಸಭೆಯಲ್ಲಿ ಕನ್ನಡ ವಿರೋಧಿ ಘೋಷಣೆಗಳು ಮೊಳಗಿದವು ಅನ್ನೋದು ಕೂಡಾ ಪತ್ರಿಕೆಗಳಲ್ಲಿ ವರದಿಯಾಗಿದೆ. ಎಂ.ಇ.ಎಸ್ಸಿನೋರು ಬಾವುಟ ಹಾರುಸ್ತೀವಿ ಅಂತ ಬಂದಾಗ ಈ ಮಹಾಶಯ ಹೀಗೆಲ್ಲಾ ನಡ್ಕೊಂಡಿದ್ದು ಸರೀನಾ? ಹೇಳಿ ಗುರು...

ಮತಕ್ಕಾಗಿ ಈ ದೊಂಬರಾಟವೇ!

ಈಗ ಲೋಕಸಭಾ ಚುನಾವಣೆ ಹತ್ತಿರ ಬಂತು. ಎಂ.ಇ.ಎಸ್ ಜೊತೆ ಭಾಜಪಾ ಇಲ್ಲಿ ಸದಾ ಸಹಯೋಗೀನೆ. ಸದಾಕಾಲ ವಿಧಾನ ಸಭೆ, ನಗರಪಾಲಿಕೆ, ಎ.ಪಿ.ಎಂ.ಸಿ ಯಾರ್ಡು ಇಂಥಹವುಗಳಲ್ಲೆಲ್ಲಾ ಎಂ.ಇ.ಎಸ್ ಗೆಲುವಿಗೆ ಇವರ ಬೆಂಬಲ... ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅವರ ಬೆಂಬಲ ಅನ್ನೋ ಗುಮಾನಿ ಇದೆ. ಕನ್ನಡ-ಕರ್ನಾಟಕ-ಕನ್ನಡಿಗರ ವಿಷಯದಲ್ಲಿ ಎಂ.ಇ.ಎಸ್ ಎಂಥದೇ ಧೋರಣೆ ಹೊಂದಿದ್ದರೂ ಇವರಿಬ್ಬರ ಈ ಮೈತ್ರಿಗೆ ಧಕ್ಕೆ ಬಂದಿಲ್ಲ ಅನ್ಸುತ್ತೆ. ಎಂ.ಇ.ಎಸ್ ನೋರು ಬೆಳಗಾವಿನ ಮಹಾರಾಷ್ಟ್ರಕ್ಕೆ ಸೇರುಸ್ಬೇಕು ಅಂದಿದ್ಕೆ ಇಡೀ ಕರ್ನಾಟಕವೇ ಅವರ ವಿರುದ್ಧ ಒಗ್ಗೂಡಿದಾಗಲೂ ಈ ಸಂಬಂಧಾನ ಉಳುಸ್ಕೊಂಡೇ ಬಂದಿರೋ ಮಹಾನುಭಾವರು ಇವರು ಅಂತಿದಾರೆ ಜನ. ಕನ್ನಡ ರಾಜ್ಯೋತ್ಸವಾನ ಕಪ್ಪುದಿನ ಅಂತ ಇವರು ಆಚರಿಸಿದ್ರೂ, ಮರಾಠಿ ಮಹಾಮೇಳಾವ ಅಂತ ಮಾಡಿ ಬೆಳಗಾವೀನ ಕಿತ್ಕೋತೀವಿ ಅಂದಾಗ್ಲೂ... ಎಂದಿಗೂ ಜಗ್ಗದ ಬಗ್ಗದ ಕುಗ್ಗದ ಸಂಬಂಧ ಇವರದ್ದು ಅನ್ನೋ ಹಾಗಿದೆ. ಇದನ್ನು ನೋಡ್ತಿದ್ರೆ ಬಹುಷಃ ಬೆಳಗಾವಿ ಪಾಲಿಕೆ ಚುನಾವಣೆ, ವಿಧಾನಸಭಾ ಚುನಾವಣೆಗಳಲ್ಲಿ ಎಂ.ಇ.ಎಸ್ ಮಣ್ಣು ಮುಕ್ಕಿದ್ದಕ್ಕೆ ದುಃಖಿಸಿದ ಏಕೈಕ ಕನ್ನಡಿಗ ಈ ನಮ್ಮ ಸಂಸದರು ಅನ್ಸುತ್ತೆ. ಈ ಕಣ್ಣೀರಿನ ಹಿಂದಿರೋದು ತಾವು ಎಂ.ಇ.ಎಸ್ ಬೆಂಬಲವಿಲ್ಲದೆ ಸೋತೇನೇ ಎನ್ನೋ ಆತಂಕ ಅಂತಾ ಅನ್ಸಲ್ವಾ ಗುರು! ಇವರ ಈ ಬುದ್ಧಿ ಬೆಳಗಾವಿ ಜನಕ್ಕೆ ಗೊತ್ತೇ ಇರುತ್ತೆ, ಅದಕ್ ತಕ್ಕ ಉತ್ತರಾನೂ ಚುನಾವಣೇಲಿ ಮತದಾರ ಕೊಡೋದು ಖಂಡಿತ.

ಏನಂತೀರಾ ಸದಾನಂದಗೌಡ್ರೇ?

ನೇರವಾಗಿ ನಾಡವಿರೋಧಿಗಳ ಜೊತೆಯಲ್ಲಿ ಕೈ ಜೋಡಿಸಿರೋ ತನ್ನ ಪಕ್ಷದ ಹಾಲಿ ಸಂಸದರಾದ ಶ್ರೀ ಸುರೇಶ್ ಅಂಗಡಿ ಮತ್ತು ಹಾಲಿ ಶಾಸಕ ಶ್ರೀ ಸಂಜಯ್ ಪಾಟೀಲ ಅವರ ವಿರುದ್ಧವಾಗಿ ಯಾವ ಕ್ರಮಾ ತೊಗೋತೀರಾ ಈಗ? ಎಂ.ಇ.ಎಸ್ ಬಗ್ಗೆ ತಮ್ಮ ಪಕ್ಷದ ನಿಲುವೇನು? ಈ ಪ್ರತಿಭಟನಾ ಸಭೇಲಿ ಕರ್ನಾಟಕದ ಮತ್ತು ಕನ್ನಡಿಗರ ವಿರುದ್ಧವಾಗಿ ಘೋಷಣೆ ಕೂಗ್ತಿದ್ರೂ ತಮ್ಮ ಸಂಸದರು ಚಕಾರ ಎತ್ತದ ಬಗ್ಗೆ ಏನಂತೀರಾ? ಕರ್ನಾಟಕದಿಂದ ಬೆಳಗಾವಿಯನ್ನು ಬೇರೆ ಮಾಡ್ತೀವಿ ಅನ್ನೋರ ಜೊತೆ ಸರಸವಾಡ್ತಿರೋ ನಿಮ್ಮ ಪಕ್ಷದ ಸಂಸದರ ಬಗ್ಗೆ ಏನು ಶಿಸ್ತುಕ್ರಮಕ್ಕೆ ಮುಂದಾಗ್ತೀರಾ? ನಿಮ್ಮ ಪಕ್ಷದ ಮುಂದಿನ ನಡೆಯ ಬಗ್ಗೆ ನಾಡಿನ ಕನ್ನಡಿಗರು ಕುತೂಹಲದಿಂದ ಕಾಯ್ತಿದಾರೆ ಗೌಡ್ರೇ... ನೀವೇನು ಅಂಗಡಿಯವರಿಗೆ ಟಿಕೆಟ್ ನಿರಾಕರುಸ್ತೀರೋ? ಅಥ್ವಾ ಸುಮ್ಮನಿದ್ದು ಎಂ.ಇ.ಎಸ್ಸು - ಬಿಜೆಪಿಗಳ ಸಂಬಂಧಾನ್ನ ಸಮರ್ಥಿಸಿಕೊಳ್ತೀರೋ?

ಕರ್ನಾಟಕ ರಕ್ಷಣಾ ವೇದಿಕೆಯ ಉದ್ಘೋಷ : "ಕರ್ನಾಟಕದಿಂದ ಭಾರತ"

2009ರ ಜನವರಿ 17 ಮತ್ತು 18ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿತ್ತು. ಈ ಸಮಾವೇಶದಲ್ಲಿ ನಾಡಿನ ಮೂಲೆಮೂಲೆಗಳಿಂದ ಕನ್ನಡಿಗರು ಬಂದು ಭಾಗವಹಿಸಿದ್ದು ಈ ಬಾರಿ ಹೊರನಾಡುಗಳಿಂದಲೂ ಕನ್ನಡಿಗರು ಬಂದಿದ್ದುದು ವಿಶೇಷವಾಗಿತ್ತು. ಈ ಸಮಾವೇಶದಲ್ಲಿ "ಉದ್ಯೋಗ ಮತ್ತು ಉದ್ಯಮಶೀಲತೆ" ಎನ್ನುವ ಒಂದು ವಿಚಾರ ಸಂಕಿರಣವೊಂದು ನಡೆಯಿತು. ಈ ವಿಚಾರ ಸಂಕಿರಣದಲ್ಲಿ ನಾಡಿನ ಏಳಿಗೆಯಲ್ಲಿ ಉದ್ದಿಮೆಗಾರಿಕೆಯ ಮಹತ್ವದ ಬಗ್ಗೆ ವಿಷಯಮಂಡನೆಯಾಯ್ತು.

ಕರ್ನಾಟಕದಿಂದ ಭಾರತ!

ಕನ್ನಡಿಗರ ಈ ದೊಡ್ಡ ಸಮಾವೇಶದ ಘೋಷವಾಕ್ಯ "ಕರ್ನಾಟಕದಿಂದ ಭಾರತ" ಎನ್ನುವುದಾಗಿದೆ.ಈ ಸಂದರ್ಭದಲ್ಲಿ ಹೊರತಂದಿರುವ ಕೈಪಿಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕದಿಂದ ಭಾರತ ಎನ್ನುವುದನ್ನು ಹೀಗೆ ಅರ್ಥೈಸುತ್ತದೆ.
ಪ್ರತಿಯೊಂದು ಪ್ರದೇಶಕ್ಕೂ ಇರುವ ಅನನ್ಯತೆಯನ್ನು ಕಾಪಾಡಿಕೊಂಡು, ಪ್ರತಿಪ್ರದೇಶವನ್ನೂ ಒಂದೇ ತೆರನಾಗಿ ಕಾಣುವ, ಪ್ರತಿರಾಜ್ಯದ ಏಳಿಗೆಗೂ ಪೂರಕವಾಗುವ ವ್ಯವಸ್ಥೆಗಳನ್ನು ಹೊಂದಿದ ಭಾರತ ನಮ್ಮ ಕನಸು. ಇಂತಹ ಭಾರತದಲ್ಲಿಯೇ ಕರ್ನಾಟಕ ಬಲಿಷ್ಟವಾಗುವುದು. ಇಂತಹ ಬಲಿಷ್ಟ ಕರ್ನಾಟಕ, ಬಲಿಷ್ಟ ತಮಿಳುನಾಡು, ಬಲಿಷ್ಟ ಮಹಾರಾಷ್ಟ್ರ... ಹೀಗೆ ಪ್ರತಿಯೊಂದು ರಾಜ್ಯವೂ ಬಲಿಷ್ಟವಾಗುವುದರಿಂದಲೇ ಭಾರತ ಬಲಿಷ್ಟವಾಗಲು ಸಾಧ್ಯ. ಆ ಕಾರಣದಿಂದಲೇ ಈ ಸಮಾವೇಶಕ್ಕೆ "ಕರ್ನಾಟಕದಿಂದ ಭಾರತ" ಎನ್ನುವ ಘೋಷವಾಕ್ಯವನ್ನು ನೀಡಲಾಗಿದೆ.
ಕರ್ನಾಟಕ ರಾಜ್ಯವನ್ನು ಭಾರತ ಒಕ್ಕೂಟದಲ್ಲಿ ನಡೆಸಿಕೊಳ್ಳಲಾಗುತ್ತಿರುವ ಬಗೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ ಈ ಕೈಪಿಡಿಯಲ್ಲಿ ಸಮಾನ ಗೌರವದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ಏಳಿಗೆ ಸಾಧ್ಯ ಎಂಬುದನ್ನು ಪ್ರತಿಪಾದಿಸಲಾಗಿದೆ. ಹಿಂದಿ ಹೇರಿಕೆ ತಡೆ, ಅನಿಯಂತ್ರಿತ ವಲಸೆ ನಿಯಂತ್ರಣ ಕಾಯ್ದೆ, ರಾಷ್ಟ್ರೀಯ ಜಲನೀತಿ... ಮುಂತಾದವುಗಳ ಅಗತ್ಯದ ಬಗ್ಗೆ ವಿವರಿಸಲಾಗಿದೆ.

ಕರ್ನಾಟಕದ ಏಳಿಗೆಯ ಕನಸಿನೊಂದಿಗೆ ಹೀಗೆ ಸಾವಿರಾರು ಕನ್ನಡಿಗರು ಒಂದೆಡೆ ಸೇರಿ ನಾಡು ಕಟ್ಟುವ ಪಣ ತೊಡುವುದು ನಾಡಿನ ಹಿತದೃಷ್ಟಿಯಿಂದ ಬಲು ಒಳ್ಳೆಯ ಬೆಳವಣಿಗೆ ಗುರು!

ಮೊದಲು ಮಹಾರಾಷ್ಟ್ರದ ಒಳಗೆ ಏಕೀಕರಣವಾಗಲಿ!

ಬೆಳಗಾವಿಯ ವಿಧಾನಸಭಾ ಅಧಿವೇಶನಕ್ಕೆ ಸಡ್ಡು ಹೊಡ್ದು ಮಹಾರಾಷ್ಟ್ರ ಏಕೀಕರಣ ಸಮಿತಿಯೋರು ಮಾಡಕ್ ಮುಂದಾಗಿರೋ ಮಹಾಮೇಳಾವಕ್ಕೆ ಯಾರು ಬರ್ತಿದಾರೆ ಅನ್ನೋದು ಸಖತ್ ಬಿಸಿಸುದ್ದಿ ಆಗೋಗಿದೆ ಗುರು. 12.01.2009ರ ’ದಟ್ಸ್ ಕನ್ನಡ’ ದಲ್ಲಿ ಮಹಾಮೇಳಾವಕ್ಕೆ ಛಗನ್ ಭುಜಬಲ್, ಆರ್.ಆರ್.ಪಾಟೀಲ್, ರಾಜ್ ಠಾಕ್ರೆ ಇವ್ರೆಲ್ಲಾ ಬರ್ತಾರೆ ಅನ್ನೋ ಸುದ್ದಿ ಬಂದಿದೆ.

ಮಹಾರಾಷ್ಟ್ರದಲ್ಲೇ ಸರಿಮಾಡ್ಕೊಳ್ಳೋದು ಬೇಜಾನ್ ಇದೆ.

ತಡೆಯಿಲ್ಲದ ವಲಸಿಗರ ಸಮಸ್ಯೆಯಿಂದ ಕೆಲಸದ ಅವಕಾಶ ಇಲ್ದಿರೋ ಮರಾಠಿಗಳು, ಭಯೋತ್ಪಾದನೆಯಿಂದ ತಬ್ಬಿಬ್ಬಾಗಿರೋ ಮುಂಬೈ, ಸಾಯ್ತಾ ಇರೋ ಮರಾಠಿ ಚಿತ್ರರಂಗ, ಬೇರೆಯಾಗ್ತೀವಿ ಅಂತಿರೋ ವಿದರ್ಭ, ನಾಗಪುರದಂಥಾ ನಗರದಲ್ಲಿ ಗಂಟಲು ಕಟ್ಕೊಂಡಿರೋ ಮರಾಠಿ ನುಡಿ.... ಅಣ್ಣಂದೀರಾ, ಇವೆಲ್ಲಾ ಬಿಟ್ಟು ಇದ್ಯಾಕೆ ಬೆಳಗಾವಿ ಕಡೆ ಗುಳೇ ಹೊರ್ಟಿದೀರಾ? ಅಂತ ಇವತ್ತು ಅಲ್ಲೀ ಮಂದಿ ಕೇಳಬೇಕಾಗಿದೆ ಗುರು! ಹಿಂದೆ ಇದ್ದಿದ್ರಲ್ಲಿ ರಾಜ್ ಠಾಕ್ರೆ ಈ ಬಗ್ಗೆಯೆಲ್ಲಾ ದನಿ ಎತ್ತಿ ಒಕ್ಕೂಟ ವ್ಯವಸ್ಥೆಯಲ್ಲಿ ಆಗಬೇಕಾದ ರಿಪೇರಿ ಬಗ್ಗೆ, ತಡೆಯಿಲ್ಲದ ವಲಸೆಯಿಂದ ಉದ್ಯೋಗಾವಕಾಶಗಳು ಮರಾಠಿಗರ ಕೈ ತಪ್ತಿರೋ ಬಗ್ಗೆ ಮಾತಾಡಿದ್ರು. ಇನ್ನು ಛಗನ್ ಭುಜಬಲ್, ರಾಮದಾಸ್ ಕದಂ, ಆರ್.ಆರ್.ಪಾಟೀಲ ಇವ್ರೆಲ್ಲಾ ಈಗ ಇದ್ಕಿದ್ ಹಂಗೆ ಬೆಳಗಾವಿ ವಿಷ್ಯಕ್ ಯಾಕಪ್ಪಾ ಬರ್ತಾ ಇದಾರೆ ಅಂದ್ರೆ ಅಚ್ಚರಿಯಾಗಲ್ವಾ ಗುರು? 1986ರಲ್ಲಿ ’ಗಡಿ ಲಡಾಯಿ’ ಅನ್ನೋ ಹೆಸರಲ್ಲಿ ಗಲಭೆ ಮಾಡ್ಸೇ ಶರದ್ ಪವಾರ್ ದೊಡ್ಡ ರಾಜಕಾರಣಿಯಾಗ್ ಬೆಳುದ್ರು. ನಾವೂ ಹಾಗೇ ಆಗಬಹುದು ಅಂದ್ಕೊಂಡಿದಾರೋ ಏನೋ? ನಿಜಾ ಅಂದ್ರೆ, ಮಹಾರಾಷ್ಟ್ರಾದಲ್ಲಿ ಮೊದಲು ಏಕೀಕರಣ ಮಾಡ್ಕೊಬೇಕಾಗಿದೆ ಯಾಕಂದ್ರೇ ಅಲ್ಲೇ ನೂರಾರು ಸಮಸ್ಯೆಗಳಿವೆ...

ಮರಾಠಿಗರ ನಿಜವಾದ ಏಳಿಗೆ ಯಾವುದ್ರಿಂದ?

ಸಂಸ್ಕೃತಿ, ನುಡಿ, ಆಚಾರ ವಿಚಾರ ಉಳುಸ್ಕೊಂಡು, ಜನರ ಆರ್ಥಿಕ ಬೆಳವಣಿಗೆ ಆಗೋ ಅಂಥಾ ಉದ್ದಿಮೆಗಳನ್ನು ಕಟ್ಕೊಂಡು, ಅದ್ರಲ್ಲಿ ತಮ್ಮ ಜನಕ್ಕೇ ಕೆಲಸ ಸಿಗೋ ಹಾಗೆ ಮಾಡ್ಕೊಂಡು, ಪ್ರಪಂಚದಲ್ಲೇ ಮುಂದುವರೆದ ಜನಾಂಗ, ಸಮೃದ್ಧಿ ಮತ್ತು ಸುಖದ ನಾಡು ಅನ್ನುಸ್ಕೊಂಡು, ನೆಮ್ಮದಿಯಾಗಿ ಇರೋದೇ ಯಾವುದೇ ಒಂದು ನಾಡಿನ ಏಳಿಗೆ ಅನ್ನೋದ್ರ ಅರ್ಥ. ಇದನ್ನು ಸಾಧಿಸಕ್ಕೆ ಇವತ್ತು ಇರೋ ಹತ್ತು ಹಲವು ಸಮಸ್ಯೆಗಳಲ್ಲಿ ವಲಸೆ ಅನ್ನೋದು ದೊಡ್ಡದು. ಒಂದು ನಾಡಿನಲ್ಲಿ ಅದರತನವನ್ನೇ ಮುದುರಿ ಬಿಸಾಕೋ ಈ ವಲಸೆಗೆ ತಡೆ ಹಾಕೋದು ಹ್ಯಾಗೇ? ಆಯಾ ನಾಡಿನ ಜನರ ನಿರುದ್ಯೋಗ ಸಮಸ್ಯೆನ ಇಲ್ಲವಾಗ್ಸೋದು ಹ್ಯಾಗೇ? ಆಯಾ ಪ್ರದೇಶದಲ್ಲಿ ಆಯಾ ನುಡಿ, ನಡೆ, ಸಂಸ್ಕೃತಿಗಳ ಸಾರ್ವಭೌಮತ್ವಕ್ಕೆ ಅಡ್ಡಿ ಮಾಡ್ತಿರೋ ಅಂಶಗಳ್ನ ನಿವಾರ್ಸೋದು ಹ್ಯಾಗೇ? ಅನ್ನೋದ್ರ ಕಡೆ ದುಡೀಬೇಕಾಗಿದೆ. ಈ ದಿಕ್ಕಲ್ಲಿ ಹೊರಟಿದ್ದ ರಾಜ್ ಠಾಕ್ರೆ ಕನ್ನಡದೋರ ಬೆಂಬಲಾನೂ ಗಳಿಸಿದ್ರು ಅನ್ನೋದೂ ಸುಳ್ಳಲ್ಲ. ತಮ್ಮ ನಾಡಿನಲ್ಲಿ ತಮ್ಮತನಾನ ಉಳುಸ್ಕೊಳಕ್ ಮುಂದಾಗಿರೋ ಭಾರತದ ಮೂಲೆಮೂಲೆಯಲ್ಲಿರೋ ಎಲ್ಲಾ ಭಾಷಿಕರನ್ನೂ ಒಂದು ಮಾಡಿ ಅದರ ಮೂಲಕ ಒಕ್ಕೂಟ ವ್ಯವಸ್ಥೆಗೆ ಸರಿಯಾದ ಸರ್ಜರಿ ಮಾಡೋ ಕಡೆ ಗಮನ ಕೊಡೋದ್ ಬಿಟ್ಟು ಇದೇನು ಗುರು... ಇವರ ಚೆಲ್ಲಾಟ? ಕೆಲಸವಿಲ್ಲದ ಮಹಾರಾಷ್ಟ್ರದ ರಾಜಕಾರಣಿಯೆಂಬ ಬಡಗಿ... ಬೆಳಗಾವಿಯಲ್ಲಿರೋ ಮರಾಠಿಗರೆಂಬ ತಮ್ಮ ಮಕ್ಕಳ ಇನ್ನೇನೋ ಕೆತ್ತೋಕ್ಕೆ ಮುಂದಾಗಬಾರ್ದು ಗುರು!

ಕಡೆಗೂ ದಕ್ಕಿದೆ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ!!


ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿರೋ ಬಿಸಿ ಸುದ್ದಿ ಇದೀಗ ಬಂದಿದೆ. ಕನ್ನಡಿಗರ ಬಹುದಿನದ ಬೇಡಿಕೆ ಈ ಮೂಲಕ ಈಡೇರಿದೆ. ಎಲ್ಲ ಕನ್ನಡಿಗರಿಗೆ ಅಭಿನಂದನೆಗಳು. ಇದೀಗ ಕರ್ನಾಟಕ ರಾಜ್ಯೋತ್ಸವಕ್ಕೆ ಹೊಸ ಮೆರುಗು ಬಂದಂತಾಗಿದ್ದು ಕನ್ನಡನಾಡಿನಲ್ಲಿ ಇಂದು ಹರ್ಷದ ಹೊಳೆ ಹರಿದಾಡಿದೆ. ಈ ಸಮ್ಮಾನ ಕನ್ನಡ ನುಡಿಯ ಬೆಳವಣಿಗೆಗೆ ಪೂರಕವಾಗಲಿದೆ ಅನ್ನುವುದು ಎಷ್ಟು ಮಹತ್ವದ ಸುದ್ದಿಯಾಗಿದೆಯೋ ಒಕ್ಕೂಟ ವ್ಯವಸ್ಥೆಗೆ ಒಂದು ಗೌರವವನ್ನೂ ಇದು ತಂದುಕೊಟ್ಟಿದೆ ಎನ್ನುವುದೂ ಅಷ್ಟೇ ಮಹತ್ವದ ಸುದ್ದಿಯಾಗಿದೆ ಗುರು!
ಕನ್ನಡಿಗರ ಈ ಬೇಡಿಕೆಯು ಮೊದಲಿಗೆ ಸಾಹಿತ್ಯ ವಲಯಕ್ಕೆ ಸೀಮಿತವಾಗಿದ್ದನ್ನು, ಜನಾಂದೋಲನವನ್ನಾಗಿ ರೂಪಿಸಿ ನಿರಂತರವಾಗಿ ಫೆಬ್ರವರಿ 2006ರಿಂದ ಹೋರಾಟವನ್ನು ನಡೆಸಿಕೊಂಡು ಬಂದ ಕರ್ನಾಟಕ ರಕ್ಷಣಾ ವೇದಿಕೆಗೆ, ಮತ್ತದರ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರಿಗೆ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. ಕನ್ನಡಿಗರ ಒಗ್ಗಟ್ಟಿನ ಈ ಹೋರಾಟ ನಮಗೆ ಕಲಿಸುತ್ತಿರುವ ಪಾಠ ಅತ್ಯಂತ ಮಹತ್ವದ್ದಾಗಿದೆ. ನಾಡಿನೆಲ್ಲ ಕನ್ನಡ ಬಂಧುಗಳಿಗಿದೋ ನಮ್ಮ ಮನದುಂಬಿದ ಅಭಿನಂದನೆಗಳು!!

ಹಾಗೆಯೇ ನಮ್ಮ ತೆಲುಗು ಬಾಂಧವರಿಗೂ ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವುದರ ಅಭಿನಂದನೆಗಳು.

KARNATIQUE ನಲ್ಲೂ ಓದಿ: BREAKING NEWS: Kannada Identified as Classical Language

ಅಕ್ಕನ ಚಾಳಿ ಮನೆಮಂದಿಗೆಲ್ಲ ಹರಡೋದು ಹೇಗೆ?

ಇದೇ ತಿಂಗಳ ೨೯ರಿಂದ ೩೧ರ ವರೆಗೆ ಅಮೇರಿಕದ ಶಿಕಾಗೋನಲ್ಲಿ ೫ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡಿಯಲಿದೆ. ಇದಕ್ಕೆ ಇಡೀ ಪ್ರಪಂಚದಿಂದ ಕನ್ನಡಿಗರು ಬಂದು ಸೇರ್ತಿದಾರೆ. ಕರ್ನಾಟಕದಿಂದಲೂ ಅನೇಕ ಪ್ರತಿನಿಧಿಗಳು ಹೋಗ್ತಿದಾರೆ. ಇಷ್ಟೆಲ್ಲ ತಿಳುವಳಿಕಸ್ತ ಕನ್ನಡಿಗರು ಸೇರುವುದು ಒಂದು ಬಹಳ ಒಳ್ಳೇ ವಿಷಯವೇ ಗುರು. ಕನ್ನಡಿಗರು ಒಟ್ಟಿಗೆ ಸೇರುವುದೇ ಕಡಿಮೆ ಅನ್ನೋ ಕೆಟ್ಟ ಹೆಸರು ಪಡ್ಕೊಂಡಿರುವಾಗ ಇಂಥಾ ಸಮ್ಮೇಳನಗಳಿಂದ ಆ ಕೆಟ್ಟ ಹೆಸರು ಹೋಗಬಹುದೇನೋ.ಈ ವರ್ಷದ ಅಕ್ಕ ಸಮ್ಮೇಳನದಲ್ಲಿ ಕನ್ನಡದ ಹೆಣ್ಣು-ಗಂಡುಗಳ ಕಣ್ಬೇಟೆಯಿಂದ ಹಿಡಿದು ಕನ್ನಡ ಸಾಹಿತ್ಯ ಮತ್ತು ಉದ್ಯಮಿಗಳ ಸಮ್ಮೇಳನಾನೂ ಇದೆ ಅಂತ ಕೇಳುದ್ರೆ ಸಕ್ಕತ್ ಖುಷಿಯಾಗುತ್ತೆ ಗುರು. ಒಂದು ರೀತಿಯಲ್ಲಿ ನವರಸಗಳೆಲ್ಲಾ ಈ ಸಮ್ಮೇಳನದಲ್ಲಿ ಹೇರಳವಾಗಿ ಸಿಗುತ್ತವೆ ಅನ್ನಿಸುತ್ತೆ! ನಾಡು-ನುಡಿ-ನಾಡಿಗರ ಏಳಿಗೆಯ ಹಾದಿಯಲ್ಲಿ ಇಂಥಾ ಸಮ್ಮೇಳನಗಳ ಪಾತ್ರವಾದರೂ ಏನು? ಇವುಗಳು ಇನ್ನೂ ಹೆಚ್ಚು ಹೆಚ್ಚು ಉಪಯುಕ್ತ ಅನಿಸಿಕೊಳ್ಳುವುದಕ್ಕೆ ಏನೇನಾಗಬೇಕು ಅಂತ ನೋಡೋಣ್ವಾ?


ಕರ್ನಾಟಕದ ಏಳಿಗೆ ಅಂದ್ರೆ ಏನು ಅನ್ನೋದರ ಬಗ್ಗೆ ಒಮ್ಮತ ಬೇಕು
ಕರ್ನಾಟಕದ ಏಳಿಗೆ ಎಂದರೆ ಏನು ಎನ್ನುವುದರ ಬಗ್ಗೆ ಸಮ್ಮೇಳನ-ಹೋಗುಗರಲ್ಲಿ ಒಮ್ಮತ ಬರಬೇಕು. ಕರ್ನಾಟಕದ ಏಳಿಗೆ ಅಂದರೆ ಏನು? ಅದಕ್ಕೂ ಅಮೇರಿಕ-ಯೂರೋಪುಗಳ ದೇಶಗಳ ಏಳಿಗೆಗೂ ವೆತ್ಯಾಸವೇನು? ಒಂದೇ ಸಮನಾಗಿರುವುದೇನು? ಎಂಬೀ ವಿಷಯಗಳ ಬಗ್ಗೆ ಒಮ್ಮೆ ಈ ಸಮ್ಮೇಳನದಲ್ಲಿ ಸೇರುವಂತಹ ಬುದ್ಧಿವಂತ ಕನ್ನಡಿಗರಲ್ಲಿ ಒಮ್ಮತ ಬಂದುಬಿಟ್ಟರೆ ಕನ್ನಡಿಗರಿಗೆ ಐದೂವರೆಕೋಟಿ ಆನೆಗಳ ಬಲ ಬಂದಂತೆ. ಕರ್ನಾಟಕ ಏಳಿಗೆ ಹೊಂದಿದೆ ಅಂತ ಹೇಳ್ಬೇಕಾದ್ರೆ ಕೆಲವು ಮೂಲಭೂತವಾದ ಬದಲಾವಣೆಗಳು ಈ ನಾಡಿನಲ್ಲಿ ಆಗಿರಲೇಬೇಕು. ಅವುಗಳು ಆಗಿಲ್ಲದೆ ಕರ್ನಾಟಕ ಏಳಿಗೆ ಹೊಂದಿದಂತಲ್ಲ. ಮೊದಲಿಗೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು. ಕರ್ನಾಟಕಕ್ಕೆ ಭಾರತದ ಇತರ ರಾಜ್ಯಗಳಿಂದ ಮೋಸವಾಗುತ್ತಿರಬಾರದು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು. ಕನ್ನಡಿಗರಲ್ಲಿ ಕಲಿಕೆ / ಉದ್ದಿಮೆಗಳಿಗೆ ಕೊರತೆಯಿರಬಾರದು. ಕನ್ನಡಿಗರು ಜಾಗತಿಕ ಮಟ್ಟದಲ್ಲಿ ತಮ್ಮ ಬುದ್ಧಿವಂತಿಕೆಯಿಂದ ಒಟ್ಟಾಗಿ ಹೆಸರು ಮಾಡಬೇಕು (ಅಲ್ಲಿಲ್ಲಿ ಯಾರೋ ಒಬ್ಬಿಬ್ಬ ಕನ್ನಡಿಗರು ಹೆಸರು ಮಾಡಿದರೆ ಸಾಲದು!). ಮತ್ತೆ ಈ ಮೇಲಿನವೆಲ್ಲವೂ ಒಮ್ಮೆಗೇ ಆಗಿದ್ದರೆ ಮಾತ್ರ ಕರ್ನಾಟಕ ಏಳಿಗೆ ಹೊಂದಿದೆ ಎನ್ನಲು ಸಾಧ್ಯ. ಯಾವ ಒಂದು ಆಗಿಲ್ಲದಿದ್ದರೂ ನಾವು ಏಳಿಗೆ ಹೊಂದಿಲ್ಲವೆಂದೇ ಅರ್ಥ. ಯಾವ ಒಂದನ್ನು ಕೈಬಿಟ್ಟರೂ ಮಿಕ್ಕವುಗಳಲ್ಲಿ ಗೆಲುವಿಲ್ಲವೆನ್ನುವುದು ಹೊರದೇಶಗಳಲ್ಲಿ ಸಾಕಷ್ಟು ಓಡಾಡಿರುವವರಿಗೆ ಗೊತ್ತೇ ಇರುತ್ತದೆ. ಜರ್ಮನಿ ಜರ್ಮನ್ ಭಾಷೆಯನ್ನು ಬಿಟ್ಟಾಗಲಿ ತಮ್ಮದೇ ನಾಡಿನಲ್ಲಿ ಫ್ರೆಂಚಿಗರಿಗೆ ತಮಗಿಂತ ಹೆಚ್ಚಿನ ಸ್ಥಾನವನ್ನು ಕೊಟ್ಟಾಗಲಿ ಸರಿಯಾದ ಕಲಿಕೆ/ ಉದ್ದಿಮೆಗಳ ಏರ್ಪಾಡುಗಳಿಲ್ಲದೆಯಾಗಲಿ ಇವತ್ತಿನ ಸ್ಥಿತಿಗೆ ಬರಲಿಲ್ಲ. ಫ್ರಾನ್ಸೂ ಬರಲಿಲ್ಲ, ಇಸ್ರೇಲೂ ಬರಲಿಲ್ಲ, ಜಪಾನೂ ಬರಲಿಲ್ಲ, ಯಾವ್ ಬಡ್ಡೀಮಗನ್ ನಾಡೂ ಬರಲಿಲ್ಲ. ಕರ್ನಾಟಕವೂ ಬರಲ್ಲ. ಇದು ಅಕ್ಕ ಸಮ್ಮೇಳನಕ್ಕೆ ಹೋಗೋ ಕನ್ನಡಿಗರಿಗೆ ಅರ್ಥವಾಗಬೇಕಾದ ಮೊದಲನೇ ವಿಷಯ. ಈ ಸತ್ಯವನ್ನು ಅವರು ಎಂದಿಗೂ ಮರೀಬಾರ್ದು.

ಏಳಿಗೆಯ ಹಾದಿಯ ಮೈಲಿಗಲ್ಲುಗಳನ್ನು ಗುರುತಿಸಬೇಕು

ಏಳಿಗೆ ಅಂದರೆ ಏನು ಅನ್ನುವುದರ ಬಗ್ಗೆ ಒಮ್ಮತ ಬಂದಮೇಲೆ ಇನ್ನು ಆ ಏಳಿಗೆಯ ಹಾದಿಯಲ್ಲಿ ಯಾವ ಯಾವ ಮೈಲಿಗಲ್ಲುಗಳು ಯಾವಾಗ್ಯಾವಾಗ ದಾಟಬೇಕಾದವು ಅನ್ನುವುದರ ಬಗ್ಗೆ ಅಕ್ಕ ಸಮ್ಮೇಳನಗಳಲ್ಲಿ ಚರ್ಚೆ ಆಗಬೇಕು. ಕರ್ನಾಟಕಕ್ಕೆ ಭಾರತದ ಇತರ ರಾಜ್ಯಗಳಿಂದ ಏಕೆ ಮೋಸವಾಗುತ್ತಿದೆ? ಇದಕ್ಕೆಲ್ಲ ಮೂಲ ಕಾರಣವೇನು? ಕರ್ನಾಟಕಕ್ಕೂ ಭಾರತಕ್ಕೂ ನಿಜವಾದ ಸಂಬಂಧವೇನು? ನಮ್ಮ ಕಲಿಕೆಯೇರ್ಪಾಡಿನಲ್ಲಿ ಪ್ರಾಥಮಿಕ ಹಂತದಲ್ಲಿ ಇಡೀ ಪ್ರಪಂಚದಲ್ಲಿ ಯಾವುದಕ್ಕೂ ಕಡಿಮೆಯಿಲ್ಲವೆನ್ನುವಂತಹ ಕಲಿಕೆಯನ್ನ (ಅದು ಕನ್ನಡದಲ್ಲೇ ಅನ್ನೋದನ್ನ ಮತ್ತೆ ಹೇಳಲೇಬೇಕಾಗಿಲ್ಲ) ಯಾವಾಗ ನಾವು ಗಿಟ್ಟಿಸಿಕೊಂಡಿರಬೇಕು? ಹಾಗೇ ಪ್ರೌಢ, ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ಯಾವಾಗ? ಇವುಗಳೆಲ್ಲ ಈಡೇರಬೇಕಾದರೆ ನಮ್ಮ ಈಗಿನ ಕಲಿಕೆಯೇರ್ಪಾಡುಗಳಲ್ಲಿ ಯಾವಯಾವ ಬದಲಾವಣೆಗಳಾಗಬೇಕು? ಇವತ್ತು ಆ ಏರ್ಪಾಡುಗಳಲ್ಲಿರುವ ಕೊರತೆಗಳೇನು? ಕರ್ನಾಟಕದಲ್ಲಿ ಕನ್ನಡದ/ ಕನ್ನಡಿಗನ ಸಾರ್ವಭೌಮತ್ವಕ್ಕೆ ಅಡ್ಡಗಾಲು ಹಾಕಿಕೊಂಡು ಏನೇನು ನಿಂತಿದೆ? ಯಾರುಯಾರು ನಿಂತಿದ್ದಾರೆ? ಇವುಗಳನ್ನೆಲ್ಲ ಮೀರಿ ಮುಂದೆ ಹೋಗುವುದು ಹೇಗೆ? ಮತ್ತು ಯಾವಾಗ? ಇವುಗಳನ್ನೆಲ್ಲ ಆಗುಮಾಡಿಸಲು ಯಾವಯಾವ ಹೊಸಹೊಸ ಸಂಸ್ಥೆಗಳು ಹುಟ್ಟಬೇಕು? ಅವುಗಳನ್ನು ನಡೆಸುವವರು ಯಾರು? ಅದಕ್ಕೆ ದುಡ್ಡೆಷ್ಟು ಬೇಕು? ಎಲ್ಲಿಂದ ಬಂದೀತು? ಯಾವಾಗ? --- ಇಂತಹ ಪ್ರಶ್ನೆಗಳ್ನ ಅಕ್ಕ ಕೇಳಬೇಕು, ಕೇಳಿ ನಮ್ಮ ಏಳಿಗೆಯ ಹಾದಿಯ ಮೈಲಿಗಲ್ಲುಗಳ್ನ ಗುರುತಿಸಬೇಕು.

ಕನ್ನಡದ ಮಣ್ಣಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವ ಸಂಘಟನೆಗಳೊಡನೆ ಕೈಜೋಡಿಸಬೇಕು

ಅಕ್ಕ ಅಮೇರಿಕದಲ್ಲಿ ಮಾತ್ರ ತನ್ನ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವುದರಿಂದ ನಾಡಿನ ಮಣ್ದಿಟಗಳಲ್ಲಿ (ಮಣ್ಣಿಗೆ ಹತ್ತಿರವಾದ ದಿಟಗಳಲ್ಲಿ) ಪ್ರತಿದಿನವೂ ಮುಳುಗಿ ನಾಡಿನ ಏಳಿಗೆಗಾಗಿ ದುಡಿಯುತ್ತಿರುವ ಸಂಘಟನೆಗಳೊಡನೆ ಕೈಜೋಡಿಸದೆ ಕರ್ನಾಟಕದಲ್ಲಿ ಏಳಿಗೆಯನ್ನು ತರಲು ಕಷ್ಟವಾದೀತು. ಇವತ್ತಿನ ದಿನ ಸರ್ಕಾರವೊಂದೇ ನಾಡು-ನುಡಿ-ನಾಡಿಗರ ಬೆಳವಣಿಗೆಯ ಹೊಣೆ ಹೊರಲಾರದು. ಹಿಂದಿಯ ಭೂತ ಹಿಡಿದು ಕನ್ನಡವನ್ನೇ ಕಡೆಗಣಿಸುವ ಸರ್ಕಾರಗಳನ್ನಂತೂ ನಂಬುವುದಕ್ಕೇ ಅಸಾಧ್ಯ! ಕನ್ನಡಿಗರಿಗೆ ಉದ್ಯೋಗ ಹುಟ್ಟದಿದ್ದರೂ ಪರವಾಗಿಲ್ಲ ಬಿಹಾರಿಗಳಿಗೆ ಕೆಲಸ ಕೊಟ್ಟರೆ ಭಾರತ ಉದ್ಧಾರವಾಗುತ್ತದೆ ಎನ್ನುವ ಸರ್ಕಾರಗಳನ್ನೂ ನಂಬಲು ಅಸಾಧ್ಯ! ಆದ್ದರಿಂದ ಯಾವ ಯಾವ ಸಂಘಟನೆಗಳು ನಿಜವಾಗಿಯೂ ನಾಡು-ನುಡಿ-ನಾಡಿಗನ ಏಳಿಗೆಯನ್ನೇ ತಮ್ಮ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿವೆಯೋ ಅವುಗಳೊಡನೆ ಒಗ್ಗೂಡಿ ಕೆಲಸ ಮಾಡಿದರೆ ಅಕ್ಕನಿಗೆ ತನ್ನ ನಿಜವಾದ "ಚಾಳಿ"ಯನ್ನು "ಮನೆಮಂದಿ"ಗೆಲ್ಲ ಹರಡಲು ಸುಲಭವಾದೀತು. ಇವತ್ತಿನ ದಿನ ಇಂತಹ ಎಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರೇ ಎಲ್ಲರಿಗೂ ಮೊದಲು ಮನಸ್ಸಿಗೆ ಬರುವುದು. ಕರವೇ ನಾಡು-ನುಡಿ-ನಾಡಿಗರ ಏಳಿಗೆಗಾಗಿ ಎಡೆಬಿಡದೆ ದುಡಿಯುತ್ತಿರುವ ಒಂದು ಹಿರಿದಾದ ಸಂಘಟನೆ. ಹೀಗಿರುವಾಗ ಅಕ್ಕ-ಕರವೇಗಳು ಅಕ್ಕರೆಯಿಂದ ಒಟ್ಟುಗೂಡಿ ಯಾಕೆ ಕೆಲಸ ಮಾಡಬಾರದು? ಇವರಿಬ್ಬರೂ ಸೇರಿ ಚಿಂತಿಸಬೇಕು, ತಂತಮ್ಮ ಶಕ್ತಿ-ಸಾಮರ್ಥ್ಯಗಳನ್ನು ಬಳಸಿ ನಾಡಿನ ಏಳಿಗೆಯ ತೇರನ್ನು ಮುಂದೆ ತಳ್ಳಬೇಕು. ಇದೆಲ್ಲಾ ಮುಂದಿನ ದಿನಗಳಲ್ಲಿ ಆಗಲಿ ಅಂತ ಹಾರೈಸ್ತಾ ಈ ಬಾರಿಯ ಸಮ್ಮೇಳನಕ್ಕೆ ಒಳಿತು ಹಾರೈಸೋಣ! ಏನ್ ಗುರು?

ದಕ್ಷಿಣ ಭಾರತ ಚಿತ್ರೋದ್ಯಮ ಅಂದ್ರೆ ತಮಿಳು ಚಿತ್ರೋದ್ಯಮಾನಾ?

ಇತ್ತೀಚೆಗೆ ನಮ್ಮ ಮತ್ತು ತಮಿಳುನಾಡಿನ ನಡುವೆ ಹೊಗೇನಕಲ್ ವಿಚಾರದಲ್ಲಿ ಎದ್ದಿದ್ದ ಹೊಗೆ ಇನ್ನೂ ಮೂಗಿಂದ ಹೊರಗ್ ಹೋಗೇ ಇಲ್ಲ. ಆಗ್ಲೇ ಈ ಹೊಗೆಯ ಕಾರಣವಾಗಿದ್ದ ಬೆಂಕಿಗೆ ಬೇಡದ ಒಂದು ಅರ್ಥ (ಅನರ್ಥ ಅಂದರೂ ಸರಿ!) ಕಲ್ಪಿಸ್ಕೊಂಡು ತಮಿಳುನಾಡಿನ ಚಿತ್ರೋದ್ಯಮದೋರು ತುಪ್ಪವೇ ಸುರ್ದಂತಾಗಿದೆ ಗುರು!

ದಕ್ಷಿಣ ಭಾರತದ ಎಲ್ಲಾ ಭಾಷೆ ಚಲನಚಿತ್ರಗಳ ಯೋಗಕ್ಷೇಮ ಕಾಪಾಡುವ ಉದ್ದೇಶ ಮುಂದಿಟ್ಕೊಂಡು ವಿವಾದಿತ ಹೊಗೇನಕಲ್ ವಿಷಯದ ಕಾರಣ ಕೊಟ್ಕೊಂಡು ಕನ್ನಡ ಚಿತ್ರೋದ್ಯಮಿಗಳ ಮೇಲೆ ಅಸಂಬದ್ಧ ಕ್ರಮ ಕೈಗೊಂಡಿರೋದು ನೋಡಿದ್ರೆ ವ್ಯವಸ್ಥೆಯ ಉದ್ದೇಶವೇ ಸರಿ ಇಲ್ವೇನೋ ಅಂತ ಅನ್ಸತ್ತೆ ಗುರು!

ಈ ಮಂಡಳಿ ಯಾರದ್ದು? ಯಾರಿಂದ? ಯಾರಿಗೋಸ್ಕರ?
ಇಲ್ಲಿ ನೋಡಿದ್ರೆ ಈ ಮಂಡಳೀಲಿ ಯಾರ್ಯಾರೆಲ್ಲಾ ಇದಾರೆ ಅಂತ ಕಾಣತ್ತೆ:

Film producers, studio owners, film exhibitors, film distributors and others connected with the film industry are the members of this...

ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳ ಈ ಈ ಜನ್ರು ಸೇರಿ ಈ ಮಂಡಳಿ ರಚಿಸಿದಾರೆ ಗುರು. ಹಾಗಾಗಿ ಈ ಮಂಡಳಿ ಎಲ್ಲಾ ಭಾಷೆಯ ಚಿತ್ರೋದ್ಯಮಿಗಳ್ಗೂ ಸೇರಿದ್ದು. ಇವ್ರಿಂದ್ಲೇ ನಿರ್ಮಾಣವಾಗಿರೋ ಈ ಮಂಡಳಿ ಇವರ ಚಿತ್ರೋದ್ಯಮವನ್ನ ಎಲ್ಲೆಡೆ ಕಾಪಾಡುವ ಹಾಗೂ ಉದ್ದಾರ ಆಗಲು ಸಹಾಯ ಮಾಡುವ ಉದ್ದೇಶ ಇಟ್ಕೊಂಡಿದೆ ಅಂತ ಇಲ್ಲೇ ಕಾಣತ್ತೆ:


In brief, they are to encourage and develop the film industry in all its branches in South India and so far as possible to work in conjunction with other similar associations; to watch, protect and extend the rights and privileges of its members and of film trade in general; to encourage and facilitate film production, distribution and exhibition of films ; and to do various other things for the purpose of assisting the persons in this line of activity.

ಹಾಗಾಗಿ ಈ ಮಂಡಳಿ ಇರೋದೇ ದಕ್ಷಿಣ ಭಾರತ ಚಲನಚಿತ್ರೋದ್ಯಮಗಳ ಉದ್ದಾರಕ್ಕಾಗಿ ಅಂತ ಇಲ್ಲಿ ಅನ್ಕೊಬೇಕಿದೆ ಗುರು!

ಆದ್ರೆ ಮಂಡಳಿ ಮಾಡ್ತಿರೋದೇನು?
ಈ ಮಂಡಳಿಯ ಯೋಜನೆಯಡಿ ನಿಜಕ್ಕೂ ಯಾರಿಗೆ ಲಾಭ ಸಿಗ್ತಿದೆ? ಯಾವ್ಯಾವ ಭಾಷೆಯ ಚಿತ್ರಗಳ್ಗೆ ಹೊಸ ಹೊಸ ಮಾರುಕಟ್ಟೆಗಳಲ್ಲಿ ಪ್ರದರ್ಶನವಾಗಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ? ಯಾವ ಯಾವ ಭಾಷೆಯ ಚಿತ್ರೋದ್ಯಮಗಳಿಗೆ ಎಲ್ಲೆಲ್ಲಿ ಮಾರುಕಟ್ಟೆ ಹೆಚ್ಚಿಸುವಲ್ಲಿ ಸಹಾಯ ದೊರಕಿದೆ? ಹೀಗೆಲ್ಲಾ ಪ್ರಶ್ನೆ ಹಾಕೊಂಡು ನಮ್ಮ ಸುತ್ತ ನೋಡಿದ್ರೆ ಕರ್ನಾಟಕದಲ್ಲಿ ದಿನೇ-ದಿನೇ ಪರಭಾಷಿಕ ಚಿತ್ರಗಳ ಸಂಖ್ಯೆ ಎಷ್ಟು ಹೆಚ್ತಿದೆ, ಗುಣಮಟ್ಟ ಹಾಗೂ ಬೇಡಿಕೆಯ ಪ್ರಕಾರ ಕಡಿಮೆಯೇ ಅಲ್ಲದ ಕನ್ನಡ ಚಿತ್ರಗಳು ಹೊರರಾಜ್ಯಗಳ ಮಾರುಕಟ್ಟೆಯಲ್ಲಿ ಎಷ್ಟು ಕಷ್ಟ ಅನುಭವಿಸ್ತಿರೋದು ಕಾಣತ್ತೆ ಗುರು! ಇಲ್ಲೆಲ್ಲಾ ಈ ಮಂಡಳಿ ನಮ್ಮ ಚಿತ್ರೋದ್ಯಮಕ್ಕೆ ನಿಜಕ್ಕೂ ಏನ್ ಸಹಾಯ ಮಾಡಿದೆ ಗುರು! ಇದಕ್ಕೆ ಮಂಡಳಿ ಏನ್ ಮಾಡ್ದೇ ಇದ್ರೂ ಅಸಂಬದ್ದ ವಿಷಯಕ್ಕೆ ಮಾತ್ರ ಮೂಗು ತೂರ್ಸ್ತಿದೆ ಗುರು!

ವಿವಾದ ಕಾರಣವಷ್ಟೇ!
ಇಷ್ಟೆಲ್ಲಾ ಸಾಲ್ದು ಅಂತ ಹೊಗೇನಕಲ್ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತ ನಡೆದ ಪ್ರತಿಭಟನೆಗಳ್ನ ವಿರೋಧಿಸಕ್ಕೆ ಬಲಿ-ಪಶುವಾಗಿ ಕನ್ನಡದ ಹಲವಾರು ಚಿತ್ರೋದ್ಯಮಿಗಳ್ನ ಮಂಡಳಿಯಿಂದ ಅಮಾನತುಗೊಳಿಸಿದಾರೆ ಗುರು! ಇದಲ್ದೇ ಸಲ್ಲದ ವಾದವನ್ನೂ ಮಂಡಿಸಿದಾರೆ ತಮಿಳು ಮೂಲದೋರಾದ ಮಂಡಳಿ ಅಧ್ಯಕ್ಷರು. ಮಂಡಳೀಲಿ ಕನ್ನಡದ ಉದ್ಯಮಿಗಳು ಇರೋದ್ರಿಂದ ಮಂಡಳಿಗೆ ನಷ್ಟವೇ ಹೆಚ್ಚು ಅನ್ನೋ ಈ ನಿಲುವು ನಿಜಕ್ಕೂ ತರವಲ್ಲ ಗುರು! ವಿವಾದವಾಗಿರೋ ವಿಚಾರದಲ್ಲಿ ಒಂದು ರಾಜ್ಯ ಪ್ರತಿಭಟನೆ ಮಾಡಿದರೆ ಅದರ ಸ್ವಾರ್ಥದ ಲಾಭ ಪಡ್ಯಕ್ಕೆ ಇದನ್ನ ಉಪ್ಯೋಗ್ಸಿ ಕನ್ನಡ ಚಿತ್ರೋದ್ಯಮಿಗಳ್ನೇ ಹೊರಹಾಕಿದ್ರೆ ನಾವು ಮಂಡಳಿಯ ಅಸ್ತಿತ್ವವನ್ನೇ ಪ್ರಶ್ನಿಸಬೇಕು ಗುರು! ಸತ್ಯವನ್ನ ಕೇಳಲೇ ಬಯಸದ ಈ ಮಂಡಳಿ ಯಾರಿಗೆ ಬೇಕು ಗುರು?

ಇಷ್ಟಕ್ಕೂ ಮಂಡಳಿಯಿಂದ ಲಾಭ ಪಡೆಯದೇ ಕನ್ನಡ ಚಿತ್ರೋದ್ಯಮ ಇಷ್ಟೆಲ್ಲಾ ಸಾಧಿಸಿದೆ ಅಂದ್ರೆ ಇವರ ಸಹಾಯ ನಿಜಕ್ಕೂ ನಮಗೆ ಬೇಕೇ ಅನ್ನೋದೇ ಮುಖ್ಯ ಪ್ರಶ್ನೆ ಆಗೋಗಿದೆ ಗುರು!


ಅಂತರ್ಜಾಲಿಗ ಕನ್ನಡಿಗರಿಗೆ ಅಕ್ಕರೆಯ ಆಹ್ವಾನ!


ಅಂತರ್ಜಾಲಿಗ ಕನ್ನಡಿಗರೇ,
ನೀವು ಈಗ ಬೆಂಗಳೂರಿನಲ್ಲಿದ್ದು, ನಮ್ಮ ನಾಡುನುಡಿಗಳ ಏಳಿಗೆಗಾಗಿ ಮಿಡಿಯುತ್ತಿರುವ ಮನಸ್ಸು ಹೊಂದಿರುವವರೇ? ಹಾಗಾದರೆ, ನಾವೂ ನೀವು ಕೂಡಿ ನಾಡಿನ ಬಗ್ಗೆ ಇರೋ ಕಳಕಳಿಯನ್ನು ಹಂಚಿಕೊಳ್ಳೋಣ.
ಬನ್ನಿ, ಬನವಾಸಿ ಬಳಗ ನಿಮಗೆ ಅಕ್ಕರೆಯ ಆಹ್ವಾನ ನೀಡುತ್ತಿದೆ. ನಾವೆಲ್ಲರೂ ಇದೇ ಏಪ್ರಿಲ್ ತಿಂಗಳ 13ನೇ ತಾರೀಕಿನಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಎದುರು ಇರುವ ಮಿಥಿಕ್ ಸೊಸೈಟಿಯ ಸಭಾಂಗಣದಲ್ಲಿ ಬೆಳಗ್ಗೆ 11:00ಕ್ಕೆ ಭೇಟಿಯಾಗೋಣ. ಅಲ್ಲಿ ಬಿಸಿ ಬಿಸಿ ಕಾಫಿ ಕುಡೀತಾ, ಒಂದೆರಡು ಘಂಟೆ ಕಾಲ ವಿಚಾರ ವಿನಿಮಯ ಮಾಡ್ಕೊಳೋಣ.
ಹೌದಲ್ಲಾ, ನಾವು ಒಬ್ರುನ್ ಒಬ್ರು ನೋಡಿ ಒಂದು ವರ್ಷಕ್ಕಿಂತ ಜಾಸ್ತಿ ಸಮಯ ಆಯ್ತು. ನೆನಪಿದೆಯಾ? ಕಾವೇರಿ ನ್ಯಾಯ ಮಂಡಳಿ ತೀರ್ಪು ನಮ್ಮ ರಾಜ್ಯದ ವಿರುದ್ಧವಾಗಿ ಬಂದಾಗ ನಾಡ ಹಿತದ ಪರವಾಗಿ ಧ್ವನಿ ಎತ್ತಿ, ನಾಡು ನುಡಿಯ ಪ್ರಶ್ನೆ ಬಂದಾಗ ನಮಗಿರುವ ಕಳಕಳಿಯನ್ನು ನಾವೆಲ್ಲ ಒಂದಾಗಿ ತೋರಿಸಿದ್ದೆವು. ನಮ್ಮ ನಾಡು ನುಡಿಗೆ ಧಕ್ಕೆ ಬಂದಾಗ, ನಾಡಿನ ನೆಮ್ಮದಿಗೆ ಭಂಗ ಉಂಟಾದಾಗ ನಾವು ಬೀದಿಗಿಳಿದು "ಮೊದಲು ನಾನು ಕನ್ನಡಿಗ: ಆನಂತರವೇ ಇನ್ನೆಲ್ಲ" ಎಂದು ದನಿ ಎತ್ತಿದ್ದೆವು. ಅಂದು ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ನಾವೆಲ್ಲ ಸೇರಿದ್ದೆವಲ್ವಾ?
ಈಗ ಮತ್ತೆ ನಾವೆಲ್ಲಾ ಸೇರೋಣ. ನಾವೆಲ್ಲ ಸೇರಿ ನಮ್ಮ ತಾಯಿನಾಡಿನ ಏಳಿಗೆಗೆ ನಾವು ಯಾವ ರೀತಿ ಕಾಣಿಕೆ ನೀಡಬಹುದು? ಹೇಗೆ ಶ್ರಮಿಸಬಹುದು? ನಾವೆಲ್ಲ ಒಂದಾಗಬೇಕಾದ, ಕೂಡಿ ಕೆಲಸ ಮಾಡಬೇಕಾದ ಅಗತ್ಯ ಏನು? ನಾಡಿನ ಪ್ರತಿ ಕೈಗಳಿಗೂ ದುಡಿಯಲು ಕೆಲಸವೇನೋ ಬೇಕು? ಈ ಗುರಿಯತ್ತ ನಮ್ಮ ನಾಡು ಸಾಗುವಲ್ಲಿ ನಮ್ಮ ಪಾತ್ರವೇನು? ನಮ್ಮ ಊರಲ್ಲಿ ನಮ್ಮ ಭಾಷೇಲೇ ಎಲ್ಲ ರೀತಿಯ ಗ್ರಾಹಕ ಸೇವೆ ಲಭ್ಯವಾಗುತ್ತಿಲ್ಲ. ಹಾಗಿದ್ರೆ ಏನು ಮಾಡ್ಬೇಕು? ಈ ಎಲ್ಲದರ ಬಗ್ಗೆ ಮಾತಾಡೋಣ.
ಕನ್ನಡ-ಕನ್ನಡಿಗ-ಕನ್ನಡಿಗರ ಬಗ್ಗೆ ಇರುವ ಆಸೆ, ಕನಸು, ಗುರಿಗಳ ಬಗ್ಗೆ ಚರ್ಚಿಸೋಣ. ಹಾಗಿದ್ದರೆ ತಡ ಯಾಕೆ? ಬನ್ನಿ, ಜೊತೆಗೆ ಸಮಾನ ಮನಸ್ಸಿನ ಕನ್ನಡಿಗರನ್ನೂ ಕರೆ ತನ್ನಿ. ಒಂದು ಆತ್ಮೀಯ ಸಂವಾದ ಮಾಡೋಣ. ಇದು ಬನವಾಸಿ ಬಳಗದ ಪ್ರಸ್ತುತಿ.

ನಮ್ಮ ಸಮಸ್ಯೆಗೆಲ್ಲಾ ಕನ್ನಡ ಕೇಂದ್ರಿತ ರಾಜಕಾರಣವೇ ಪರಿಹಾರ!

ಅಬ್ಬಬ್ಬಾ! ಅಂತೂ ಇಂತೂ ತಮಿಳುನಾಡು ತನ್ನ ಮೊಂಡುತನಾನ ಬಿಟ್ಟು ಹೊಗೆನಕಲ್ ಯೋಜನೇನ ಮುಂದೂಡಿದೆ. ಸದ್ಯಕ್ ಎದೆ ಮೇಲೆ ಹತ್ತಿ ಕೂತಿದ್ದ ಭೂತ ಇಳಿದಂಗಾಗಿದೆ. ಆದ್ರೆ ಕನ್ನಡಿಗರು ಇಷ್ಟಕ್ಕೇ ಗೆದ್ವಿ ಅನ್ಕೊಂಡು ಸುಮ್ನಿದ್ರೆ ಆಗಲ್ಲ. ಈಗಾಗಿರೋದು ಮುಂದಾಗಬಹುದಾದ ಮಹಾ ಅನಾಹುತದ ಮುನ್ಸೂಚನೆ ಕೊಡ್ತಿಲ್ವಾ ಗುರು? ನಿಜವಾದ ಆಕ್ರಮಣ ಶುರು ಮಾಡೋ ಮೊದಲು ಶತ್ರುಗಳ ಬಲಾ ಅಳ್ಯಕ್ಕೆ ಚೂರು ಸ್ಯಾಂಪಲ್ ನೋಡಕ್ ಮುಂದಾಗೋ ಹಾಗೆ ನಮ್ಮ ಪ್ರತಿಕ್ರಿಯೆ ಹೆಂಗಿರಬೋದು ಅಂತ ಈಗ ನೋಡಿದಾರೆ. ಮುಂದಿನ ದಿನಗಳಲ್ಲಿ ಸರ್ಯಾಗಿ ಸಿದ್ಧತೆ ಮಾಡ್ಕೊಂಡೇ ಅವ್ರೂ ಮುಂದಾಗ್ತಾರೆ. ಅಷ್ಟರೊಳಗೆ ಕನ್ನಡಿಗರು ನಮ್ಮ ಬಲಾನ ಹೆಚ್ಚುಸ್ಕೊಳ್ಳಲೇ ಬೇಕು ಗುರು.

ಚಳವಳಿಗಳು ಜ್ವರದ ಮದ್ದು ಮಾತ್ರಾ!

ರೈಲ್ವೇ ನೇಮಕಾತಿ ವಿಷ್ಯಾನೆ ಇರಲಿ, ಬೆಳಗಾವಿ ಗಡಿ ವಿಷ್ಯಾನೆ ಇರಲಿ, ಕಾವೇರಿ ತೀರ್ಪೇ ಇರಲಿ, ಹೊಗೆನಕಲ್ ವಿಷ್ಯಾನೆ ಇರಲಿ ನಾವು ಪ್ರತಿ ಬಾರಿಯೂ ಬೀದಿಗಿಳಿದು ಹೋರಾಟವನ್ನು ಮಾಡಿದಾಗಲೇ ಚೂರು ಪಾರು ಪರಿಹಾರ ಸಿಕ್ಕಿರೋದು... ಸತ್ಯಾನೆ ಗುರು.
ಕಾವೇರಿ ಐತೀರ್ಪು ಇಂದಿಗೂ ಗೆಜೆಟ್ಟಲ್ಲಿ ಪ್ರಕಟವಾಗದೆ ಇರೋಕೆ ಅಂದು ನಾಡಿನಾದ್ಯಾಂತ ಭುಗಿಲೆದ್ದ ಚಳವಳಿಯೇ ಕಾರಣ. ರೇಲ್ವೇ ಇಲಾಖೆ ತನ್ನ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಿದ್ದೂ ಕನ್ನಡಿಗರ ಸಂಘಟಿತ ಹೋರಾಟದಿಂದಲೇ ಅನ್ನೋದ್ರಲ್ಲಿ ಅನುಮಾನ ಇಲ್ಲ. ಇದೀಗ ಕರುಣಾನಿಧಿಯವರು ಹೊಗೆನಕಲ್ ಯೋಜನೇನ ಮುಂದೂಡಕ್ಕೂ ಇದೇ ಕಾರಣ. ಕಳೆದ ಒಂದೆರಡು ತಿಂಗಳಿಂದ ನಡೀತಿದ್ದ ಶಾಂತಿಯುತ ನಿರಶನಗಳು ಮಾಡದ ಪರಿಣಾಮವನ್ನು ಕನ್ನಡಿಗರು ಬೀದಿಗಿಳಿದು ನಡೆಸಿದ ಹೋರಾಟ ಮಾಡಿರೋದು ಸತ್ಯಾ. ಆದ್ರೆ ಇಂಥಾ ಹೋರಾಟಗಳು ತಾತ್ಕಾಲಿಕ ಪರಿಹಾರ ಒದಗಿಸಿ ಕೊಡಲು ಮಾತ್ರಾ ಶಕ್ತ ಅನ್ನೋದು ಅವುಗಳಿಗೆ ಇರೋ ಮಿತಿ ಗುರು.

ರೋಗದ ಮೂಲಕ್ಕೆ ಮದ್ದು ಬೇರೆ ಇದೆ ಗುರು!

ಆದ್ರೆ ಪ್ರತಿ ಸಲವೂ ಹೀಗೆ ಹೋರಾಟ ಮಾಡೆ ನ್ಯಾಯ ದೊರಕುಸ್ಕೋತೀವಿ ಅನ್ನೋದಕ್ಕೆ ಆಗಲ್ಲ. ಯಾಕಂದ್ರೆ, ಹೋರಾಟಗಳಿಗಿಂತ ನ್ಯಾಯಾಲಯಗಳಲ್ಲಿ ಮಾಡೋ ವಾದಗಳು ಮುಖ್ಯ.
ಅದಕ್ಕಿಂತ ಮುಖ್ಯವಾದದ್ದು ರಾಜಕೀಯ ಬಲ. ಈ ಬಲದ ಮೂಲಕ ಕೇಂದ್ರ ಸರ್ಕಾರದ ಮೇಲೆ ಇಟ್ಕೊಳ್ಳೋ ಹಿಡಿತ ಮುಖ್ಯ.
ಆಯಕಟ್ಟಿನ ಜಾಗಗಳಲ್ಲಿ ಕೆಲ್ಸಮಾಡೋ ಅಧಿಕಾರಿಗಳಾಗಿ ನಮ್ಮವರಿದ್ದರೆ ಸತ್ಯಾನ ಹೆಕ್ಕಿ ತೆಗ್ಯೋಕೆ ಸಾಧ್ಯ. ಮಾಧ್ಯಮಗಳಲ್ಲಿ ನಮ್ಮ ನಿಲುವನ್ನು ಸರಿಯಾಗಿ ತೋರುಸ್ಬೇಕು ಅಂದ್ರೆ ಅಲ್ಲೂ ನಮ್ಮವರಿರಬೇಕು.
ನಮ್ಮ ನಾಡಿನ ಅರ್ಥಿಕ ಚಟುವಟಿಕೆಗಳ ಮೇಲಿನ ಹಿಡಿತ ನಮ್ಮದೇ ಆಗಿರಬೇಕು ಗುರೂ!

ತಮಿಳುನಾಡೋರು ಮಾಡಿರೋದು ಇದನ್ನೇ...

ತಮಿಳುನಾಡು ಹಿಂದಿನಿಂದ ಮಾಡ್ಕೊಂಡ್ ಬಂದಿರೋದು ಇದನ್ನೇ. ತನ್ನ ಪರವಾಗಿ ವಾದ ಮಾಡಕ್ಕೆ ಕರ್ನಾಟಕದೋರು ನಾರಿಮನ್ ಥರದ ಕನ್ನಡೇತರರನ್ನು ಅವಲಂಬಿಸ್ಬೇಕು. ಆದ್ರೆ ತಮಿಳುನಾಡಿನ ವಕೀಲರಾದ ಪರಾಶರನ್ ತಮಿಳರೇ ಗುರು. ಕೇಂದ್ರದ ಮೇಲೆ ಹಿಡ್ತ ಇಟ್ಕೊಂಡಿರೋರು ಕರ್ನಾಟಕದ ಸಂಸದರಲ್ಲ, ತಮಿಳುನಾಡಿನೋರು. ಕೇಂದ್ರದಲ್ಲಿ ಯಾವ್ದೇ ಸರ್ಕಾರ ಇರಲಿ, ಅದುನ್ನ ತನ್ನ ತಾಳಕ್ಕೆ ತಕ್ಕಂತೆ ಕುಣ್ಸೋ ತಾಕತ್ತಿರೋದು ತಮಿಳುನಾಡಿನ ರಾಜಕೀಯ ಪಕ್ಷಗಳಿಗೇ ಗುರು.
ಇದಕ್ಕೆ ಕಾರಣಾನೂ ಅಲ್ಲಿರೋ ಪಕ್ಷಗಳು ತಮಿಳರ, ತಮಿಳುನಾಡಿನ ಹಿತವನ್ನು ಕೇಂದ್ರದಲ್ಲಿ ಇಟ್ಕೊಂಡು ಕಟ್ಟಿರೋ ಪಕ್ಷಗಳು. ತಮಿಳರಿಗೆ ಅನ್ಯಾಯ ಮಾಡ್ತಿದಾರೆ, ತಮಿಳು ಸಂಸ್ಕೃತಿಯನ್ನ ಹಾಳುಮಾಡ್ತಿದಾರೆ ಅನ್ನೋದೆ ಒಬ್ರುಗೆ ಇನ್ನೊಬ್ರನ್ನ ಹಣಿಯೋಕೆ ಇರೋ ಅಸ್ತ್ರ. ಈಗ್ಲೇ ನೋಡಿ, ಜಯಮ್ಮ ಕರುಣಾನಿಧಿಯೋರು ನೆರೆ ರಾಜ್ಯಗಳ ಪರ ಪಕ್ಷಪಾತ ಮಾಡ್ತಾರೆ ಅಂತ ಆರೋಪಾ ಮಾಡ್ತಿದಾರೆ.
ಆದ್ರೆ ನಮ್ಮ ನಾಡಲ್ಲಿ ಪರಿಸ್ಥಿತಿ ಇದಕ್ಕೆ ಪೂರ್ತಿ ವಿರುದ್ಧವಾಗಿದೆ. ಈಗ ಹೇಳಿ, ನಾವು ತಮಿಳುನಾಡು ನಮ್ಮ ಮೇಲೆ ಅನ್ಯಾಯ ಮಾಡ್ತಿದೆ ಅಂತಾ ಹೋರಾಟವೊಂದನ್ನೇ ನೆಚ್ಕೊಂಡ್ರೆ ನ್ಯಾಯ ಸಿಗುತ್ತಾ?ಗುರು.

ಮುಂದಾಗಬೇಕಾಗಿರೋದು...

ಇವತ್ತಿನ ದಿನ ಯಾವ ಹೋರಾಟಗಾರರು ನಾಡು ನುಡಿ ಬಗ್ಗೆ ಪ್ರಾಮಾಣಿಕ ಕಾಳಜಿ ಇಟ್ಕೊಂಡು ಹೋರಾಟ ಮಾಡ್ತಿದಾರೋ ಅವರು ನಾಡಿನ ಉಳಿವಿಗಾಗಿ ರಾಜಕೀಯಕ್ಕೆ ಬರೋ ಮನಸ್ಸು ಮಾಡಬೇಕು. ಕನ್ನಡದ ಜನತೆ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧೆಗೆ ನಿಲ್ಲೋ ಅಭ್ಯರ್ಥಿಗಳಿಗೆ ನಾಡಿನ ಬಗ್ಗೆ ಇರೋ ಕಾಳಜಿ, ಬದ್ಧತೇನ ಸಾಣೆ ಹಿಡಿದು ನೋಡೇ ಮತ ಹಾಕ್ಬೇಕು. ಕನ್ನಡಿಗರು ದೊಡ್ಡ ಮತಬ್ಯಾಂಕ್ ಆಗಿ ನಾಡಿನ ಪರ ಕಾಳಜಿ ಇರೋರನ್ನೇ ಗೆಲ್ಲುಸ್ಬೇಕು. ಇದರಿಂದ ರಾಜಕೀಯವಾಗಿ ಬಲ ಗಳಿಸಿಕೋಬೇಕು. ಇದುನ್ನ ಮೊದಲನೆ ಹೆಜ್ಜೆ ಮಾಡ್ಕೊಂಡು ವ್ಯಾಪಾರ, ವಹಿವಾಟು, ಉದ್ಯೋಗ, ಉದ್ದಿಮೆ, ಆಡಳಿತ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡಿಗರ ಹಿಡಿತವನ್ನು ಸಾಧಿಸಬೇಕು. ಆಗ ನಮ್ಮ ಪಾಲಿಗೆ ನ್ಯಾಯನೂ ಸಿಗುತ್ತೆ. ನಮ್ಮ ಮೇಲಾಗ್ತಿರೋ ಅನ್ಯಾಯಗಳೂ ಕೊನೆಯಾಗುತ್ತೆ. ಏನಂತೀ ಗುರು?

ಹೊಗೇನಕಲ್ಲಿಂದ ಸವಾಲು: "ಕನ್ನಡಿಗರು ಷಂಡರಾ?"

ಕನ್ನಡಿಗರ ಮೇಲೆ ತಮಿಳರ ಕುತಂತ್ರ ಇವತ್ತಿಂದಲ್ಲ ನಿನ್ನೇದಲ್ಲ. ತಲೆತಲಾಂತರದಿಂದಲೂ ಇವರು ಕನ್ನಡಿಗರಿಗೆ ಕಿರುಕುಳ ಕೊಡ್ತಾನೇ ಇದಾರೆ. ಆದ್ರೆ ಅವತ್ತಿಗೂ ಇವತ್ತಿಗೂ ಎದ್ದ್ ಕಾಣ್ತಿರೋ ವ್ಯತ್ಯಾಸ ಏನಪ್ಪಾ ಅಂದ್ರೆ - ಅವತ್ತು ಅವರ ಕಿರುಕುಳ ನಿಲ್ಲಿಸಿ ಕರ್ನಾಟಕವನ್ನ ರಕ್ಷಿಸೋ ಗಂಡಸರು ಸರಿಯಾದ ಸ್ಥಾನಗಳಲ್ಲಿ ಇದ್ದರು; ಇವತ್ತು ಅಂತಾ ಗಂಡಸರು ಇದ್ದರೂ ಅವರಿಗೇ ಎಲ್ಲರೂ ತೊಂದರೆ ಕೊಡೋರೇ!

ಇತ್ತೀಚೆಗೆ ಕರ್ನಾಟಕಕ್ಕೆ ಸೇರಿದ ಹೊಗೇನಕಲ್ ನಡುಗಡ್ಡೆ ತಮಿಳ್ನಾಡಿಗೆ ಸೇರಿದೆ ಅನ್ನೋ ಸುಳ್ಳು ಹಬ್ಬಿಸಿ ಅಲ್ಲಿ ನೀರಾವರಿ ಮತ್ತು ವಿದ್ಯುತ್ ಯೋಜನೆಗಳಿಗೆ ತಮಿಳ್ನಾಡು ಕೈಹಾಕಿದೆ. ಔರೂ ನೋಡುದ್ರು - ಈ ಕನ್ನಡಿಗರು ಪೆದ್ದುಮುಂಡೇವು, ಷಂಡ್ರು, ಇವ್ರಿಗೆ ತಮ್ಮ ಹೆಂಡತೀನ ಹೊತ್ತುಕೊಂಡು ಹೋದ್ರೂ ಗೊತ್ತಾಗಲ್ಲ, ಗೊತಾಗ್ತಿದ್ರೂ ಏನೂ ಕಿಸಿಯಕ್ ಆಗಲ್ಲ, ನಮ್ಮ ತೀಟೆ ನಾವು ತೀರುಸ್ಕೊಳಮ ಅಂತ. ಕಾವೇರಿ ನದಿನೀರು ಹಂಚಿಕೆ ವಿಷಯ ಇನ್ನೂ ನ್ಯಾಯಾಲಯದಲ್ಲಿ ಇರುವಾಗ್ಲೇ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು ಅಂತ ಹೇಳ್ಕೊಳೋ ಈ ತಮಿಳ್ರು ಹೇಗೆ ಹೊಗೇನಕಲ್ ನಲ್ಲಿ ಯೋಜನೆಗೆ ಕೈ ಹಾಕುದ್ರು? ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ಇಲ್ಲದೇ ಇರೋ ಪರಿಸ್ಥಿತಿ ನೋಡಿ ತಮ್ಮ ತೀಟೆ ತೀರಿಸಿಕೊಳ್ಳೋ ಖದೀಮರು ಇವ್ರು!

ನಾವು ಇನ್ನು ಎಚ್ಚೆತ್ತುಕೊಳ್ಳಬೇಕಷ್ಟೆ! ತಮಿಳ್ನಾಡಿಂದ ನಮಗೆ ಏನೇನು ತೊಂದ್ರೆ ಆಗ್ತಿದೆ ಅಂತ ಅರ್ಥ ಮಾಡ್ಕೋಬೇಕು. ಯಾಕ್ ತೊಂದ್ರೆ ಆಗ್ತಿದೆ ಅಂತ ಅರ್ಥ ಮಾಡ್ಕೋಬೇಕು. ನಮ್ಮ ರಾಜಕಾರಣಿಗಳು ಕರ್ನಾಟಕವನ್ನ ಮಾರ್ಕೋತಿದಾರಲ್ಲ, ಇದನ್ನ ನಿಲ್ಲಿಸೋದು ಹೇಗೆ ಅಂತ ಅರ್ಥ ಮಾಡ್ಕೋಬೇಕು. ಇನ್ನೇನು ಕರ್ನಾಟಕದಲ್ಲಿ ಚುನಾವಣೆ ನಡ್ಯೋದ್ರಲ್ಲಿದ್ಯಲ್ಲ, ಕೇಳ್ಬೇಕು ನಮ್ಮ ರಾಜಕಾರಣಿಗಳ್ನ - "ಥೂ! ನಿಮ್ಮ ಜನುಮಕ್ಕೆ ನಾಚಿಕೆ ಆಗಬೇಕು! ಕಾವೇರಿ ತೀರ್ಪಲ್ಲಿ ನಮಗೆ ಕೆರ ತೊಗೊಂಡು ಹೊಡ್ದಿದಾರಲ್ಲ, ನಮ್ಮ ನೀರೆಲ್ಲಾ ತಮಿಳರಿಗೆ ಬರ್ದು ಕೊಟ್ಟಿದಾರಲ್ಲ, ಅದಕ್ಕೆ ನೀವ್ ಏನ್ ಮಾಡ್ತೀರಿ? ಹೊಗೇನಕಲ್ನ ತಮಿಳ್ನಾಡಿಗೆ ಸೇರಿಸಕ್ಕೆ ಹೊರ್ಟಿದಾರಲ್ಲ ತಮಿಳ್ರು, ಅದಕ್ಕೆ ಏನ್ ಕಿಸೀತೀರಿ?" ಅಂತ.

ಇಲ್ಲಾ ನಮ್ಮ ಟೀಷರ್ಟುಗಳ ಮೇಲೆ ಬರಿಸಿಕೊಳ್ಳಬೇಕು, ನಮ್ಮ ಮನೆ ಗೋಡೆಗಳ ಮೇಲೆ ಎಲ್ರುಗೂ ಕಾಣೋಹಂಗೆ ಬರುಸ್ಕೋಬೇಕು, ಅಂತರ್ಜಾಲದಲ್ಲೆಲ್ಲಾ ಒಪ್ಪಿಕೋಬೇಕು - "ಹೌದು! ನಾವು ಕನ್ನಡಿಗರು ಪೆದ್ದುಮುಂಡೇವು, ಷಂಡ್ರು" ಅಂತ. ಏನ್ ಗುರು?

ಜೊತೆಗೆ ಇದ್ನೂ ಓದಿ: ಹೊಗೇನಕಲ್ಲಿಗೇ ಹೊಗೆ!

ಕನ್ನಡಿಗರ ತೆಕ್ಕೆಗೆ ಬೆಳಗಾವಿ ಪಾಲಿಕೆ

ಚೆನ್ನಮ್ಮನ, ರಾಯಣ್ಣನ, ಮಲ್ಲವ್ವನ ಬೆಳಗಾವಿಯು ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಪಿಮುಷ್ಟಿಯಿಂದ ಬಿಡುಗಡೆ ಕಂಡಿದೆ. ಇದೀಗ ಅಲ್ಲಿನ ಮೇಯರ್ ಮತ್ತು ಉಪಮೇಯರ್ ಪಟ್ಟಗಳು, ಇತ್ತೀಚಿಗೆಂದೂ ತೋರಿರದ ಒಗ್ಗಟ್ಟು ತೋರಿದ್ದಕ್ಕೆ ಮತ್ತೆ ಕನ್ನಡಿಗರ ತೆಕ್ಕೆಗೆ ಒಲಿದು ಬಂದಿದೆ.

ಹದಿನೇಳು ವರುಷ ವನವಾಸದಿಂದ...

1984ರಲ್ಲಿ ಬೆಳಗಾವಿ ನಗರ ಪಾಲಿಕೆ ಅಸ್ತಿತ್ವಕ್ಕೆ ಬಂತು. ಆಗಿಂದ್ಲೂ ಇಲ್ಲಿನ ಮೇಯರುಗಳು ಎಂ.ಇ.ಎಸ್ ಪಕ್ಷದವರೇ. ಒಂದು ಸರ್ತಿ ಮಾತ್ರ 1991ರಲ್ಲಿ ಹಿರಿಯರಾದ ಸಿದ್ಧನ ಗೌಡ ಪಾಟೀಲರು ಆರಿಸಿ ಬಂದಿದ್ದರು. ಆಗ ರಾಜ್ಯದಲ್ಲಿ ಬಂಗಾರಪ್ಪನವರ ಸರ್ಕಾರವಿತ್ತು. ಹದಿನೇಳು ವರ್ಷಾ ಅಯ್ತು, ಮತ್ತೆ ಕನ್ನಡಿಗರೊಬ್ಬರು ಅಲ್ಲಿ ಮೇಯರ್ ಆಗಲು. ಇದೀಗ ಮತ್ತೆ ಕನ್ನಡತಿಯಾದ ಪ್ರಶಾಂತ ಬುಡವಿ ಅವರು ಆರಿಸಿ ಬಂದಿದಾರೆ. ಉಪಮೇಯರ್ ಆಗಿ ಕನ್ನಡಿಗರಾದ ಯೂನುಸ್ ಮೋಮಿನ್ ಅವರು ಆಯ್ಕೆಯಾಗಿ ಬಂದಿದ್ದಾರೆ.

ಬೆಳಗಾವೀಲಿ ಕನ್ನಡಿಗರ ಸಂಖ್ಯೆ ಹೆಚ್ಚಿತೇನು?

ಇಷ್ಟು ದಿನ ಇಲ್ಲದ್ದು ಈಗ ಕನ್ನಡದೋರು ಗೆದ್ದು ಬರಬೇಕು, ಎಲ್ರಿಗಿಂತ ಹೆಚ್ಚು ಮತ ಗಳಿಸಬೇಕು ಅಂದ್ರೆ, ಬೆಳಗಾವಿಯಲ್ಲಿ ಇದ್ದಕ್ಕಿದ್ದ ಹಾಗೆ ಕನ್ನಡಿಗರ ಜನಸಂಖ್ಯೆ ಹೆಚ್ಚಿ ಬಿಡ್ತೇನು? ಅದು ಸಾಧ್ಯವೇ ಇಲ್ಲ ಅಂತೀರಾ? ಹಿಂದಿನ ಚುನಾವಣೆಗಳಲ್ಲಿ ಇದ್ದ ಕನ್ನಡಿಗರ ಪ್ರಮಾಣವೇನು ಮಾಯಾಜಾಲದಂತೆ ಬದಲಾಗಲಿಲ್ಲ. ಆದರೆ ಕನ್ನಡಿಗ ಬದಲಾದ. ಬಹುದಿನಗಳಿಂದ ಮೈ ಮರೆವೆಯಿಂದ ಕೂಡಿದ್ದ ಕೊಳೆಯಾ ಕೊಚ್ಚಿ ಎದ್ದು ನಿಂತ. ನಿಜವಾಗ್ಲೂ ಆಗಿದ್ದು ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ. ಇದನ್ನು ಮಾಡಿದೋರು?

ಗೆಲುವಿನ ಕಾರಣ: ಹೋರಾಟ, ಜಾಗೃತಿ, ಸಂಘಟನೆ ಮತ್ತು ಒಗ್ಗಟ್ಟು

ಈ ಜಾಗೃತಿಯನ್ನು ಮಾಡಿದ್ದು ಕನ್ನಡಪರ ಸಂಘಟನೆಗಳು ಅಂತ ಅನೇಕ ಮಾಧ್ಯಮಗಳು ಬರೆದಿವೆ. ಆದರೆ ಇದನ್ನು ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆಯೆಂಬ ಗಂಡುಗಲಿ ನಾಡಭಕ್ತರ ಪಡೆ ಎಂದು ಬರೆಯಲು ಅದ್ಯಾಕೋ ಇವು ಹಿಂದೆ ಮುಂದೆ ನೋಡಿದ್ವು. ಬೆಳಗಾವಿಯ ಕನ್ನಡಿಗ ಎಲ್ಲ ಮುಗೀತು ಅಂತ ಕೈಚೆಲ್ಲಿ ಕುಳಿತಿದ್ದು, ಅಂದು 2005ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಿರ್ಣಯ ಮಂಡಿಸಿದಾಗ. ಇದರ ವಿರುದ್ಧ ಕರ್ನಾಟಕದ ಯಾವ ರಾಜಕೀಯ ಪಕ್ಷವೂ, ನಾಯಕ ಶಿಖಾಮಣಿಗಳೂ, ಕನ್ನಡ ಪರ ಸಂಘಟನೆಗಳೂ ದನಿ ಎತ್ತದೆ ಇದ್ದಾಗ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ.

ಬೆಂಗಳೂರಿಗೆ ಬಂದಿದ್ದ ಅಂದಿನ ಮೇಯರ್ ವಿಜಯ್ ಮೋರೆಯ ಮೂತಿಗೆ ಮಸಿ ಬಳಿದ ಘಟನೆ ಬೆಳಗಾವಿಯ ಕನ್ನಡಿಗರಿಗೆ ಹೊಸ ಶಕ್ತಿಯ ಸಂಚಯನವಾಗಲು ನೆಪವಾಯಿತು. ಆ ದಿನಗಳಲ್ಲಿ "ತಾಕತ್ತಿದ್ದರೆ ಬೆಳಗಾವಿಗೆ ಕಾಲಿಡಲಿ" ಎನ್ನುವ ನೇರ ಸವಾಲನ್ನು ದಿಟ್ಟವಾಗಿ ಎದುರಿಸಿ, ಬೆಳಗಾವಿಯಲ್ಲಿ ತೊಡೆ ತಟ್ಟಿ ನಿಂತು ಕನ್ನಡಿಗರನ್ನು ಸಂಘಟಿಸಿದ್ದು ರಕ್ಷಣಾ ವೇದಿಕೆಯ ನಾರಾಯಣ ಗೌಡ್ರು.

ಬೆಳಗಾವಿಯಲ್ಲಿ ಇತ್ತೀಚಿಗೆಂದೂ ಆಗಿಲ್ಲದ ವೇಗದಲ್ಲಿ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸಗಳು ಆರಂಭವಾದವು. ಕನ್ನಡವೇ ಸತ್ಯ ಕಾರ್ಯಕ್ರಮ ನಡೆಸಿ 25000ಕ್ಕೂ ಹೆಚ್ಚು ಕನ್ನಡಿಗರನ್ನು ಒಗ್ಗೂಡಿಸಿ ಹಳದಿ ಕೆಂಪು ಬಾವುಟಗಳನ್ನು ಬೆಳಗಾವಿಯಲ್ಲಿ ಪಟಪಟಿಸುವಂತೆ ಮಾಡಲಾಯಿತು. ಎ.ಪಿ.ಎಂ.ಸಿ ಚುನಾವಣೆ ಇರಲಿ, ಸಂಸದರ ಕನ್ನಡ ವಿರೋಧಿ ನಿಲುವಿರಲಿ ಅವುಗಳ ವಿರುದ್ಧ ದನಿ ಎತ್ತಿ ಹೋರಾಡಿದ್ದು, ವಿಧಾನ ಸಭಾ ಅಧಿವೇಶನಕ್ಕಾಗಿ ವಿಧಾನ ಸೌಧವನ್ನು ನಿರ್ಮಿಸಲು ಒತ್ತಾಯಿಸಿ ಅಮರಣಾಂತ ಉಪವಾಸ ನಡೆಸಿದ್ದು, ನಿಪ್ಪಾಣಿ, ಖಾನಾಪುರಗಳಂತಹ ಕೊನೆ ಊರಿನಲ್ಲೂ ಕನ್ನಡಿಗರನ್ನು ಸಂಘಟಿಸಿದ್ದು, ಕನ್ನಡಿಗರ ಈ ಒಗ್ಗಟ್ಟು ಮರಾಠಿಗರ ವಿರುದ್ಧವಲ್ಲಾ, ನಾಡು ಒಡೆಯುವ ದನಿ ಎತ್ತುವವರ ವಿರುದ್ಧ ಎಂದು ಬೆಳಗಾವಿಯ ಜನ ಸಾಮಾನ್ಯರಲ್ಲಿ ಮನವರಿಕೆ ಮಾಡಿಕೊಟ್ಟು ಬೆಳಗಾವಿ ಕನ್ನಡಿಗರದ್ದು ಎಂಬ ಭರವಸೆಯನ್ನು ಬೆಳಗಾವಿಯ ಕನ್ನಡಿಗರಲ್ಲಿ ಮೂಡಿಸಿದ್ದು... ಕರ್ನಾಟಕ ರಕ್ಷಣಾ ವೇದಿಕೆಯೇ. ಈ ದಿನ ಬೆಳಗಾವಿ ನಗರ ಪಾಲಿಕೆಯ ಮೇಲೆ ಕನ್ನಡದ ಹಳದಿ, ಕೆಂಪು ಬಾವುಟ ಹಾರಲು ಸಾಧ್ಯವಾಗಿರುವುದು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಜಾಗೃತಿ, ಸಂಘಟನೆಗಳೇ ಕಾರಣದಿಂದಲೇ.

ರಾಯಣ್ಣನ ತವರಲ್ಲಿ ಹೊತ್ತಿದ ಈ ಕಿಡಿ ನಾಡಲೆಲ್ಲ ಹಬ್ಬಲಿ

ಸಂಗೊಳ್ಳಿ ರಾಯಣ್ಣನ ತವರಲ್ಲಿ ಹೊತ್ತಿಕೊಂಡಿರುವ ಈ ಸ್ವಾಭಿಮಾನದ ಕಿಡಿ ಕನ್ನಡನಾಡಿನ ಮನೆ ಮನೆಗಳಲ್ಲಿ, ಮನ ಮನಗಳಲ್ಲಿ ಹೊತ್ತಿಕೊಳ್ಳುವ ದಿನ ದೂರವಿಲ್ಲ. ಕನ್ನಡತನ ಬಡಿದೆಬ್ಬಿಸುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ. ನಿಮ್ಮದೂ ಒಂದು ಹಾರೈಕೆ ಇರಲಿ ಗುರು...

ರೈಲ್ವೇ ಹುದ್ದೆಗಳ ವಿಷಯದಲ್ಲಿ ಕನ್ನಡಿಗರಿಗೆ ಮೋಸ - ಒಂದು ವಿಶ್ಲೇಷಣೆ

ಹುಬ್ಬಳ್ಳೀಲಿ ನೈಋತ್ಯ ರೈಲ್ವೆಯ "ಡಿ" ಗುಂಪಿನ ಹುದ್ದೆಗಳಿಗೆ ಬಿಹಾರಿಗಳು ಬಂದು ತುಂಬ್ಕೋತಿರೋದು, ಅದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾಗಿ ಪ್ರತಿಭಟನೆ ಮಾಡ್ತಿರೋದು - ಇದನ್ನೆಲ್ಲ ನೀವು ಮಾಧ್ಯಮಗಳಲ್ಲಿ ನೋಡೇ ಇರ್ತೀರಿ. ಮೇಲ್ನೋಟಕ್ಕೆ ಇದು ಅಂಥಾ ಹೇಳ್ಕೊಳೋ ಸುದ್ದಿಯೇನಲ್ಲ ಅನ್ನಿಸಬಹುದು. ಆದರೆ ನಿಜಕ್ಕೂ ನೋಡುದ್ರೆ ಇದೊಂದು ಘಟನೆಯಿಂದ ಕನ್ನಡಿಗನ ಮುಂದಿರೋ ಸವಾಲುಗಳಲ್ಲಿ ಎಷ್ಟೋಂದು ಅರ್ಥವಾಗುತ್ತವೆ.

ಔರು ಬಂದಿದ್ದು ಯಾಕೆ? ನಾವು ಬಿಟ್ಟಿದ್ದು ಯಾಕೆ?

ಬಿಹಾರಿಂದ ಈ ಹುದ್ದೆಗಳಿಗೆ ತುಂಬ್ಕೊಳಿ ಅಂತ ಬಿಹಾರಿಗಳಿಗೆ ಹೇಳ್ಕೊಟ್ಟು ಕಳಿಸೋದು ಅಥವಾ ಔರು ಬಂದು ತುಂಬ್ಕೊಳೋ ಪ್ರಯತ್ನ ಮಾಡೋದು ಭಾರತೀಯ ಸಂವಿಧಾನಕ್ಕೆ ಬಾಹಿರವೇನಲ್ಲ (ಔರಿಗೋಸ್ಕರ ವಿಶೇಷವಾದ ರೈಲುಗಳ್ನ ಹಾಕಿ ಲಾಲೂ ಯಾದವ್ ಕಳ್ಸಿದಾರೆ ಅನ್ನೋ ಕೆಲವರ ಊಹೆ ನಿಜವಾದ್ರೆ ಅದ್ ಬೇರೆ ವಿಷಯ). ಸಂವಿಧಾನಬಾಹಿರವಾಗದೆ ಇರೋದು ಸರೀನೋ ಅಲ್ಲವೋ, ಅನಿಯಂತ್ರಿತ ವಲಸೆ ತಡೆಗಟ್ಟೋ ಕಾನೂನೊಂದು ಬರಬೇಕೋ ಬೇಡವೋ ಅನ್ನೋ ಚರ್ಚೆ ಈಗ ಬೇಡ. ಒಟ್ನಲ್ಲಿ ಔರು ಬಂದ್ರು ಅಂದ್ಮೇಲ್ ಬಂದ್ರು. ನಮ್ಮ ಹುದ್ದೆಗಳ್ನ ಕಿತ್ಕೊಳಕ್ಕೆ, "ಈ ಪೆದ್ದಮುಂಡೇವ್ಗೆ ತಮ್ಮ ಅನ್ನ ಕಿತ್ಕೊಂಡ್ ಹೋಗ್ತಿದ್ರೂ ಗೊತ್ತಾಗಲ್ಲ, ನಾವಾರೂ ತಿಂಬೋಣ" ಅಂತ ಬಂದ್ರು.

ಆದ್ರೆ ಹಾಗೆ ಔರು ಬಂದಿದ್ದರ ಹಿಂದೆ ಏನೇನಿದೆ ಗೊತ್ತಾ? ಒರಿಗೋಸ್ಕರ, ಇಲ್ಲಿ (ಅಂದ್ರೆ ಕನ್ನಡದ ನಾಡಲ್ಲಿ) ಔರ ಭಾಷೇಲಿ ಮಾತ್ರ ಅರ್ಜಿ ತುಂಬಬೇಕು ಅಂತ ಹೇಳೋ ವ್ಯವಸ್ಥೆ ಇದೆ; ಔರಲ್ಲಿ ಒಬ್ಬನಾಗಿರೋ ಕೇಂದ್ರ ರೈಲ್ವೇ ಮಂತ್ರಿ ಇದಾರೆ; ಔರು ಬಂದು ಇಲ್ಲಿ ನಮ್ಮ ಹುದ್ದೆಗಳ್ನ ನುಂಗ್ಕೊಂಡು ಇಲ್ಲೇ ತಳ ಊರಿ ಇಲ್ಲೀ ನಾಡು-ನುಡಿ-ನಡೆಗಳ್ನ ಚಿಂದಿ-ಚಿತ್ರಾನ್ನ ಮಾಡ್ತಾ ಇದ್ರೂ ಔರ್ನ "ಇವರೂ ಭಾರತೀಯರಲ್ವೇ?" ಅಂತ ಕೇಳ್ಕೊಂಡು ಔರ್ನ ಔರ್ ಭಾಷೇಲೇ ಮಾತಾಡಿಸಿ ತಲೇಮೇಲೆ ಕೂರುಸ್ಕೊಳೋ ಮೂರ್ಖಶಿಖಾಮಣಿಗಳಾದ ನಾವಿದೀವಿ; ಇಡೀ ವೋಟ್ ಬ್ಯಾಂಕ್ ಕನ್ನಡಿಗರದೇ ಆಗಿದ್ದರೂ ಕನ್ನಡಿಗರಿಗೆ ಆಗ್ತಿರೋ ಅನ್ಯಾಯ ತಡಿಯಕ್ಕಾಗದೇ ಇರೋಂಥಾ ನರಸತ್ತ ಕನ್ನಡದ ರಾಜಕಾರಣಿಗಳಿದಾರೆ; ಔರ್ನ ದಿಲ್ಲೀದಾಸರಾಗಿ ಬಾಳಿಡೀ ಜೀತಕ್ಕೆ ಇಟ್ಕೊಂಡಿರೋಂಥಾ "ರಾಷ್ಟ್ರೀಯ" ಪಕ್ಷಗಳಿವೆ. ಇವೆಲ್ಲ ಇವೆ. ಅದಕ್ಕೇ ಔರು ಬಂದ್ರು, ನಾವು ಬಿಟ್ವಿ.

ರಾಜಕೀಯ ಪಕ್ಷಗಳು ಕಣ್ಣು ಬಿಟ್ಟಿವೆಯಾ?

ಈ ವಿಷಯದಲ್ಲಿ ಮೊದಲು ಎಚ್ಚೆತ್ತುಕೊಂಡು ಇದನ್ನ ತಡೀದೇ ಇರಕ್ಕಾಗಲ್ಲ ಅಂತ ಮುನ್ನುಗ್ದೋರು ಕರ್ನಾಟಕ ರಕ್ಷಣಾ ವೇದಿಕೆಯೋರು ಮಾತ್ರ. ಈ ವಿಷಯ ಏನು, ಇದರಿಂದ ಕನ್ನಡಿಗರಿಗೆ ಆಗ್ತಿರೋ ಮೋಸ ಏನು, ಇದರಿಂದ ನಾಡಿಗೆ ಹೇಗೆ ಕೆಡಕುಂಟಾಗ್ತಿದೆ, ಇದನ್ನ ತಡೆಗಟ್ಟೋದ್ರಲ್ಲಿ ತಮ್ಮ ಪಾತ್ರ ಏನು ಅಂತ ಅರ್ಥ ಮಾಡ್ಕೊಳಕ್ಕೆ ಬೇಕಾಗಿರೋ ಬುದ್ಧಿ ಯಾವ ರಾಜಕೀಯ ಪಕ್ಷಕ್ಕೂ ಮೊದಲು ಚಿಗುರಲಿಲ್ಲ. ವೇದಿಕೆಯೋರು ಈ ವಿಷಯದಲ್ಲಿ ಜಗ್ಗಲ್ಲ ಅಂದಾಗ, ಮಾಧ್ಯಮಗಳು ಒಂದೇತಪ್ಪ ಇದರ ಬಗ್ಗೆ ಬರೆದಾಗಲೇ ಚಿಗುರಿದ್ದು. ಒಟ್ನಲ್ಲಿ ಈ ವಿಷಯದಲ್ಲಂತೂ ವೇದಿಕೆಯೋರು ಕೊನೆಗೂ ಕರ್ನಾಟಕದ ರಾಜಕೀಯ ಪಕ್ಷಗಳಿಗೆ "ನೀವು ಕನ್ನಡದ ಪಕ್ಷಗಳಾಗಿ" ಅನ್ನೋ ಪಾಠಾನ ಅತ್ತು ಕರೆದು ಏಟು ತಿಂದು ಜೈಲಿಗೆ ಹೋಗಿ ಹೇಳ್ಕೊಟ್ಟಂಗಾಯ್ತು!

ಕನ್ನಡಿಗರು ಒಗ್ಗೂಡಿ ವಿರೋಧಿಸಬೇಕು

ಕೊನೆಗೆ ಈ "ಡಿ" ಹುದ್ದೆಗಳಲ್ಲಿ ಎಷ್ಟು ನಿಜಕ್ಕೂ ಕನ್ನಡಿಗರಿಗೇ ಸಿಗತ್ವೆ ಅನ್ನೋದು ಪ್ರಶ್ನೆ. ಕಾದು ನೋಡೋ ಬದ್ಲು "ಅಷ್ಟೂ ಕನ್ನಡಿಗರಿಗೇ ಕೊಟ್ರೆ ಸರಿ, ಇಲ್ದೇ ಇದ್ರೆ ಸುಮ್ನಿರಕ್ಕಿಲ್ಲ" ಅನ್ನೋ ಕೂಗ್ನ ಕನ್ನಡಿಗರೆಲ್ಲಾ ಕೂಗಬೇಕು, ವ್ಯವಸ್ಥೆಯಲ್ಲಿರೋ ಹುಳುಕುಗಳ್ನ ಉಪಯೋಗಿಸಿಕೊಂಡು ಬಿಹಾರಿಗಳ್ನ ಛೂ ಬಿಡೋರಿಗೆ ಕ್ಯಾಕರಿಸಿ ಉಗೀಬೇಕು. ಏನ್ ಗುರು?

"ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ" - ಕರವೇ

ಡಿ.1 ರಂದು ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ಆರನೆಯ ರಾಜ್ಯಮಟ್ಟದ ಸ್ವಾಭಿಮಾನಿ ಕನ್ನಡಿಗರ ಸಮಾವೇಶದ ಸುದ್ದಿ ಪತ್ರಿಕೆಗಳಲ್ಲಿ ರಾರಾಜಿಸ್ತಾ ಇದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಕನ್ನಡಿಗರು ಸೇರಿದ್ದ ಈ ಸಮಾವೇಶದಲ್ಲಿ ನಡೆದ ಮೆರವಣಿಗೆ ಇಡೀ ಪ್ರಪಂಚಕ್ಕೆ ಕನ್ನಡಿಗರ ಒಗ್ಗಟ್ಟಿನ ಬಲ ತೋರಿಸಿಕೊಟ್ಟಿದೆ. ಹಾಗೇ ಸಮಾವೇಶದ ನಿರ್ಣಯಗಳು ನಾಡು-ನುಡಿಯ ರಕ್ಷಣೆಗೆ ಆಗಲೇಬೇಕಾದ ಕೆಲಸಗಳನ್ನು ಸಾಮಾನ್ಯ ಜನರಿಗೂ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೂ, ಉದ್ದಿಮೆದಾರರಿಗೂ ನೆನಪಿಸಿವೆ.

ಈ ಸಮಾವೇಶದಿಂದ ಕೆಲಕಾಲ ಬೆಂಗಳೂರಿನ ರಸ್ತೆ ಸಂಚಾರ ಚೂರುಪಾರು ಅಸ್ತವ್ಯಸ್ತ ಆಗಿದೆ ಅನ್ನೋದೇನೋ ನಿಜ, ಆದ್ರೆ ಇದರಿಂದ ಕನ್ನಡನಾಡಿನ ಏಳಿಗೆಯ ದಾರಿ ಸುಗಮ ಆಗೋದು ಕಾಣ್ತಾ ಇರುವಾಗ ಇವೆಲ್ಲಾ ಓಕೆ ಗುರು!

ಸಮಾವೇಶದಲ್ಲಿ ನಾಡಕಟ್ಟೋ ಚರ್ಚೆ

ಈ ಸಮಾವೇಶಕ್ಕೆ ಕನ್ನಡನಾಡಿನ ಎಲ್ಲಾ ಜಿಲ್ಲೆಗಳಿಂದಲೂ ಬಂದಿದ್ದ ಕನ್ನಡಪರ ಹೋರಾಟಗಾರರಿಗೆ ದಾರಿ ತೋರಲು ಪಾಟೀಲ್ ಪುಟ್ಟಪ್ಪ, ದೇ ಜವರೇಗೌಡ, ಶಿಕ್ಷಣ ಕ್ರಾಂತಿ ಮತ್ತು ಅಧ್ಯಾತ್ಮದ ಮೂಲಕ ನಾಡಿಗರ ಸೇವೆ ಮಾಡುತ್ತಿರುವ ಅನೇಕ ಮಠಗಳ ಸ್ವಾಮೀಜಿಗಳು, ರೈತ ನಾಯಕರುಗಳು, ಚಿಂತಕರುಗಳು ಅಲ್ಲಿ ನೆರೆದಿದ್ದು ನಿಜಕ್ಕೂ ಒಳ್ಳೇ ಬೆಳವಣಿಗೆ ಗುರು.

"ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
" ಎನ್ನುವ ಸಂದೇಶ ಸಾರಿದ ಈ ಸಮಾವೇಶ ಕೈಗೊಂಡ ನಿರ್ಣಯಗಳ ಹಿಂದೆ ಕನ್ನಡಿಗರ ಉಳಿವು-ಏಳ್ಗೆಗಳ ಬಗ್ಗೆ ಸಾಕಷ್ಟು ಚಿಂತನೆಯಾಗಿ ಕನ್ನಡಿಗರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಬಗ್ಗೆಯ ಗೌರವ ಹೆಚ್ಚಿಸಿದೆ ಅಂದ್ರೆ ತಪ್ಪಲ್ಲ. ಇದು ಕರ್ನಾಟಕ ರಕ್ಷಣಾ ವೇದಿಕೆಯ ಬಗ್ಗೆ ಕನ್ನಡ ನಾಡು ತುಂಬು ಭರವಸೆಯಿಂದ ನೋಡುವಂತೆ ಮಾಡಿರೋದು ಮಾತ್ರಾ ಹದಿನಾರಾಣೆ ನಿಜಾ ಗುರು.

ಇಂಥಾ ಸಮಾವೇಶ ನಡ್ಯೋದ್ರಿಂದ ನಾಡಿನ ಮೂಲೆಮೂಲೆಗಳ ಜನ ಒಂದೆಡೆ ಒಂದೇ ಉದ್ದೇಶಕ್ಕಾಗಿ ಒಟ್ಟು ಸೇರಿ ಚರ್ಚೆ ಮಾಡಿ, ಹಾಗೆ ಒಂದಾಗಿ ಸೇರಿದ್ದ ಕಾರಣಕ್ಕೇ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುಸ್ಕೊಳೋದು ಸಾಧ್ಯ ಆಗುತ್ತೆ ಗುರು. ರಾಜಧಾನಿಯ ಬೀದಿ-ಬೀದಿಗಳಲ್ಲಿ ಕನ್ನಡಿಗರ ಈ ಪಡೆ ಮೆರವಣಿಗೆ ನಡೆಸಿದ್ದು ಕನ್ನಡ ವಿರೋಧಿಗಳಿಗೊಂದು ಎಚ್ಚರಿಕೆ ಸಂದೇಶಾನೂ ಕೊಟ್ಟಂಗಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಕನ್ನಡ ಹೋರಾಟಗಾರರು ಒಂದಾಗಿ ಬಂದು, ಎಷ್ಟೊಂದು ಕನ್ನಡವನ್ನು ಕಡೆಗಣಿಸಿರೋ ಅಂಗಡಿ ಮುಂಗಟ್ಟುಗಳು ದಾರಿ ತುಂಬಾ ಇದ್ರೂ ಅತ್ಯಂತ ಸಂಯಮದಿಂದ ಯಾವ ಅಹಿತಕರ ಘಟನೆ ನಡೆಯದ ಹಾಗೆ ನಡೆದುಕೊಂಡ ರೀತಿ ನಿಜಕ್ಕೂ ವೇದಿಕೆಯ ಒಳಶಿಸ್ತನ್ನು ತೋರಿಸ್ತಿದೆ.

ಚಿಂತನೆ ಒಂದೇ ಸಾಲದು, ಸಂಘಟನಾಶಕ್ತಿಯೂ ಬೇಕು

ಹೌದು, ಇವತ್ತಿನ ದಿನ ಕನ್ನಡನಾಡಿನ ಏಳಿಗೆಗೆ ದಾರಿ ತೋರುವ ಚಿಂತಕರುಗಳ ಅಗತ್ಯ ಎಷ್ಟಿದೆಯೋ ಅದನ್ನು ಈಡೇರಿಸಲು ಕರ್ನಾಟಕ ರಕ್ಷಣಾ ವೇದಿಕೆಯಂತಹ ಒಂದು ಸಂಘಟನೆಯ ಅಗತ್ಯವೂ ಅಷ್ಟೇ ಇದೆ ಗುರು. ನೆನಪಿಡಿ, ಕರ್ನಾಟಕದ ಇತಿಹಾಸದಲ್ಲಿ ವಿಶೇಷವಾಗಿ ಈ ಐವತ್ತೊಂದು ವರ್ಷಗಳಲ್ಲಿ ನಾಡಿಗರನ್ನೆಲ್ಲಾ ಕನ್ನಡ ಬಾವುಟದ ಅಡಿಯಲ್ಲಿ ಸಂಘಟಿಸಿದ ಪುರಾವೆಗಳಿಲ್ಲ. ಅದು ಈಗ ನಾರಾಯಣ ಗೌಡ್ರ ಮುಂದಾಳತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರಲ್ಲಿ ಆಗ್ತಾ ಇದೆ ಅನ್ನೋದು ಸಂತಸದ ಸುದ್ದಿ ಗುರು! ಕನ್ನಡಿಗರ ಆತ್ಮವಿಶ್ವಾಸ ಇಮ್ಮಡಿಸಿ ಒಂದೇ ಸೂರಿನಡಿಯಲ್ಲಿ ನಾಡಿನ ಮೂಲೆಮೂಲೆಗಳಿಂದ ಬಂದ ಒಂದು ಲಕ್ಷಕ್ಕೂ ಹೆಚ್ಚು ಕನ್ನಡಿಗರನ್ನ ಒಗ್ಗೂಡಿಸಿ ಕನ್ನಡದ ದೀಕ್ಷೆ ಕೊಡಿಸೋ ಈ ಒಂದು ಸಮಾವೇಶವನ್ನ ನಡೆಸಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ್ರಿಗೆ ಸಲಾಂ!
Related Posts with Thumbnails