ಇವರದ್ದು ಬರೀ ನಟನೆ ಗುರು!

ಮೊನ್ನೆ ಹೊಗೆನಕಲ್ ಹೋರಾಟಕ್ಕೆ ಬರ್ದೆ ಇರೋದ್ರ ಬಗ್ಗೆ ಡಾ.ವಿಷ್ಣುವರ್ಧನ್ ಅವ್ರು ತಮ್ ಮನ್ಸಾಗಿನ ಮಾತು ಹೇಳವ್ರೆ. ಪಾಪ, ನಿಜಾನೆ ಹೇಳ್ತಾ ಇದಾರೆ. ಇದರ ಅರ್ಥ ಇವ್ರು ಸಿನಿಮಾ ನಟರು ಅನ್ನೋದು ಬಿಟ್ರೆ ಬೇರ್ಯಾವ ಗುರುತೂ ಇಲ್ಲ. ಇವ್ರುನ್ನೇನಾದ್ರೂ ನಾಡುನುಡಿ ಕಾಪಾಡೊ ನಾಯಕತ್ವ ಇರೋರು ಅಂತ ಅಂದ್ಕೊಂಡ್ರೆ ತಪ್ಪಾಯ್ತುದೆ ಗುರು. ಸಿನಿಮಾದೋರು ಅಂದ್ರೆ ನಾಡುನುಡಿ ಓರಾಟಕ್ಕೆ ಬರ್ಲೇ ಬೇಕು ಅಂತ ನಾವೇನಾರಾ ಅನ್ಕಂಡಿದ್ರೆ ಮಹಾ ದಡ್ರಾಯ್ತೀವಿ.
ನಾಡುನುಡಿ ಬಗ್ಗೆ ಕಾಳಜಿ ಬರೀ ನಟನೆ!
ನಮ್ ಸಿನಿಮಾದೋರು ಎಂತಾ ಮಹನೀಯರು ಅಂದ್ರೆ ಇವ್ರು ಬಾಯಿ ಬಿಟ್ರೆ ನಾಡು-ನುಡಿ ಬಗ್ಗೆ ಮುತ್ತುಗಳು ಉದುರುತ್ವೆ. ತಮ್ಮ ಸಿನಿಮಾಗಳಲ್ಲಿ ಪುಂಖಾನುಪುಂಖವಾಗಿ ನಾಡಪ್ರೇಮದ ಬಗ್ಗೆ ಭಾಷಣ ಕೊರೀತಾರೆ. ತಾಯಿಗಾಗಿ ನಾಡಿಗಾಗಿ ಪ್ರಾಣ ಕೊಡ್ತೀವಿ ಅಂತ್ಲೂ ತಪ್ಪದೆ ಅಂತಿರ್ತಾರೆ. ಇದೇನ್ರಣ್ಣಾ ಸಿನಿಮಾದಲ್ಲಿ ಇಂಗಿಂಗಂದಿದ್ರೆ, ಈಗ ಕನ್ನಡದೋರ ಓರಾಟ ಅಂದ್ರೆ ತಲೆ ತಪ್ಪುಸ್ಕೊಂಡು ಮಾಯಾ ಆಗ್ಬುಟ್ರಲ್ಲಾ ಅಂತಂದ್ರೋ " ಅಯ್ಯೋ ಬಡ್ಡೇತ್ತವಾ, ಕಲೆಗೆ ಬಾಸೆ ಇಲ್ಲ, ಕಲಾವಿದ್ರನ್ನ ಇಂಗೆಲ್ಲಾ ನಾಡು ನುಡಿ ಅಂತ ಓರಾಟಕ್ ಎಳೀಬಾರ್ದು ಕಣ್ರಲಾ" ಅಂತ ಭಾಷಣ ಕುಟ್ತಾರೆ. ಜೊತೆಗೆ ಯಾವತ್ಗೂ ಅನಿವಾರ್ಯ ಆಗದ ಹೊರತು, ಹೊರಗಿಂದ ಒತ್ತಡ ಬೀಳದ ಹೊರ್ತು ತಾವಾಗೇ ನಾಡುನುಡಿ ಅಂತ ಹೋರಾಟಕ್ ಇಳ್ದಿರೋ ಮಾನುಬಾವ್ರು ಈಗ್ಯಾರೂ ಇದ್ದಂಗ್ ಇಲ್ಲ. ಇದೇನ್ ಇವತ್ತು ನಿನ್ನೆ ಕತೆ ಅಲ್ಲ ಅಥ್ವಾ ಯಾರೋ ಒಬ್ರು ಇಂಗವ್ರೆ ಅನ್ನೋಂಗೂ ಇಲ್ಲ.

ಕನ್ನಡದ ಹೆಸ್ರಲ್ಲೇ ಮಂತ್ರಿಗಳಾದೋರು!
ನಮ್ಮ ಕನ್ನಡ ಚಿತ್ರರಂಗದಾಗಿನ ಅದೆಷ್ಟೊ ಜನ ನಾಯಕ್ರುಗಳು ಕನ್ನಡ ಕನ್ನಡ ಅನ್ಕಂಡೇ ಉದ್ಧಾರ ಆಗ್ಬುಟ್ಟವ್ರೆ.
ಅಷ್ಟೇ ಅಲ್ಲ ಕನ್ನಡದವ್ರು ಅಂದ್ರೆ ಯಾವ್ದಕ್ಕೊ ಹೆದರದ ಧೀರರು. ಬನ್ನಿ ಒಟ್ಟಾಗಿ ಹೋರಾಟ ಮಾಡೋಣ ಅಂತ ಹಾಡ್ಕೊಂಡು ಸೈಕಲ್ ಹೊಡೀತಾರೆ. ಹೀಗ್ ಹೇಳ್ಕೊಂಡ್ ಹೇಳ್ಕೊಂಡೇ ಚುನಾವಣೆ ಗೆಲ್ತಾರೆ, ಸಂಸದರಾಗ್ತಾರೆ, ಮಂತ್ರಿಗಳೂ ಆಗ್ತಾರೆ. ಇಕೊಳ್ಳಿ, ಇವ್ರ್ ಒಂದು ವರ್ಸೆ ನೋಡಿ.ಅಬ್ಬಾ ಎಂಥಾ ನಾಡ ಪ್ರೇಮಾನಪ್ಪ ಇವ್ರುದ್ದು. ಸಿದ್ಧವೋ ಸಿದ್ಧವೋ ಕನ್ನಡಕ್ಕೆ ಸಾಯಲು ಅಂತ ಹಾಡ್ಕೊಂಡು ಕುಣಿದ ಈ ಮಹಾನುಭಾವರ ನಾಡಪ್ರೇಮಕ್ಕೇನು ಕೊರತೆ ಇಲ್ಲ. ಕನ್ನಡ ಕನ್ನಡ ಅಂತಾ ಅಂದಂದೆ ಜನ್ರಿಂದ ಚಪ್ಪಾಳೆ ಗಿಟ್ಟುಸ್ಕೊಂಡಿದ್ದೇನು, ಸೀಟಿ ಹೊಡುಸ್ಕೊಂಡಿದ್ದೇನು...ಇಕಾ ನೋಡುದ್ರಲ್ಲಾ, ಅದೇನೇನೋ ಆಗ್ತೀನಿ ಅನ್ನೋರು "ಮನುಷ್ಯ ಆದ್ರೆ, ನಾಡು ನುಡಿ ಕಾಪಾಡಕ್ಕೆ ಮುಂದಾಗಿ ಕನ್ನಡಿಗರ ಹೋರಾಟಕ್ಕೆ ಬತ್ತೀನಿ" ಅಂತ ಅನ್ಲಿಲ್ವಲ್ಲಾ ಅಂತಾ ನೀವು ಕ್ಯಾತೆ ತೆಗೀಬೇಡಿ. ಹೋರಾಟಕ್ಕೆ ಇಳ್ಯಲ್ಲ ಅನ್ನೋರು ಸಿನಿಮಾದಲ್ಲಿ "ಸಿದ್ಧವೋ ಬದ್ಧವೋ ಕನ್ನಡಕ್ಕೆ ಸಾಯಲು" ಅಂತನ್ನೋದು ಬರಿ ಅರಚಾಟ ಆಗುತ್ತೆ, ಮೊದ್ಲು ನಿಲ್ಲುಸ್ಲಿ ಅನ್ನೋ ನಿಮ್ಮ ಮಾತು ನಿಜಾನೆ, ಆದ್ರೂ "ಇಡೀ ಕನ್ನಡದ ಜನರೆಲ್ಲಾ ಇಷ್ಟು ವರ್ಷ ಮನೆ ಮಕ್ಕಳಿಗಿಂತ ಹೆಚ್ಚು ಜ್ವಾಪಾನ ಮಾಡಿ ಅನ್ನ, ಬಟ್ಟೆ, ಹೆಸರು ಸಂಪತ್ತು ಎಲ್ಲಾ ಕೊಟ್ಟವ್ರಲ್ಲಾ, ಈ ಜನರ ಸಮಸ್ಯೆ ನಮ್ದೂನೂವೆ ಅನ್ನೋ ಗ್ಯಾನಾನೆ ಇದ್ದಂಗಿಲ್ಲಾ ಕಣ್ರಪಾ ಇವ್ರುಗೆ. ಅದಿಕ್ಕೆಯಾ ಹಂಸಲೇಕಪ್ಪೋರು ದಿಲ್ಲಿನಾಗ್ ಕಾವೇರಿ ಓರಾಟಕ್ ಓಗಿದ್ದಾಗ ಇನ್ ಮ್ಯಾಕೆ ಯಾವನ್ಗೂನೂವೆ ನಾಡುನುಡಿ ಅಂತಾ ಹಾಡ್ ಬರ್ಕೊಡಕ್ಕಿಲ್ಲ ಅಂದ್ರು" ಅಂತಾ ಗೊಣಗಿ ಶಾಪ ಹಾಕ್ಬೇಡಿ. ಪಾಪ, ಅವ್ರೂ ಎಷ್ಟೇ ಆದ್ರೂ ಕನ್ನಡದವ್ರೇ ತಾನೆ!
ನಿಜಕ್ಕೂ ದಡ್ಡರು ಅಂದ್ರೆ ನಾವೇಯಾ...

ಅಲ್ಲಿ ಚೆನ್ನೈನಲ್ಲಿರೋ ಸಿನಿಮಾ ಜನರೆಲ್ಲಾ ಒಟ್ಗೆ ಸೇರ್ಕೊಂಡು ಕನ್ನಡದವ್ರ್ ಬಗ್ಗೆ ಥೂ ಛೀ ಅಂತ ಕಛಡವಾಗಿ ಮಾತಾಡ್ತಾ ಔರೆ, ಮನ್ಸಿಗ್ ಬಂದಂಗೆ ಸಂಗ ಸಂಸ್ತೆಗಳಿಂದ ಕನ್ನಡ ಸಿನಿಮಾದವ್ರ್ನ ತೆಗುದ್ ಬಿಸಾಕ್ತಾ ಇರೋದ್ನ ನೋಡ್ಕಂಡೂ ತುಟಿಕ್ ಪಿಟಿಕ್ ಅನ್ದೋರು ನಾಡಪರ ಓರಾಟಕ್ಕೆ ಮುಂದಾಯ್ತಾರೆ ಅಂತ ನಂಬ್ಕಂಡಿರೋ ನಾವೇ ಅಲ್ವರಾ ದಡ್ರು?
ಸಿನಿಮಾನೆ ಬ್ಯಾರೆ, ನಟನೇನೆ ಬ್ಯಾರೆ, ಜೀವನಾನೆ ಬ್ಯಾರೆ ಅಂತ ನಾವು ಅರ್ತ ಮಾಡ್ಕೊಂಬುಟ್ರೆ ಈ ಈರೋಗಳು ತಕ್ಕತೈ ಅಂತ ಕುಣುದ್ರೆ ಉಬ್ಬದೂ ಇಲ್ಲ, ಓರಾಟಕ್ಕೆ ಬರ್ಲಿಲ್ಲಾ ಅಂತ ಎದೆ ಎದೆ ಬಡ್ಕೊಳೋದೂ ಇಲ್ಲಾ... ಇವ್ರುನ್ನೂ ಒಟ್ಟೆಪಾಡಿಗೆ ಬಣ್ಣಕಟ್ಟೊ ಸಾಮಾನ್ಯದೋರು, ನಾಡುನುಡಿ ಕಾಪಾಡಕ್ಕೆ ಬೂಮಿಗ್ ಬಂದಿರೋ ದ್ಯಾವ್ರುಗಳಲ್ಲ ಅಂತ ನಮ್ ಜನ ಅರ್ತ ಮಾಡ್ಕೊಂಬುಟ್ರೆ ಓರಾಟಕ್ ಈ ನಟ ಬರ್ಲಿಲ್ಲ, ಆ ನಟ ಬರ್ಲಿಲ್ಲ ಅಂತ ಪ್ರತಿಭಟನೆ ಮಾಡಿ ನಮ್ ಮೂಗುನ್ನ ನಾವೇ ಕುಯ್ಕಳೋ ಕೆಲ್ಸ ಮಾಡೋದ್ ತಪ್ತದೆ. ಕನ್ನಡದೋರ್ ಒಗ್ಗಟ್ಟು ಮುರಿಯೋದೂ ತಪ್ತದೆ. ಏನಂದೀರಾ ಗುರು?

5 ಅನಿಸಿಕೆಗಳು:

Anonymous ಅಂತಾರೆ...

ರಿಡಿಫ್ನಲ್ಲಿ ಓದಿದ್ದು. ರಜನಿಕಾಂತ್ ಬಾಯಿಗೆ ಬಂದಂಗೆ ನಮ್ಮ ಕನ್ನಡ ಹೋರಾಟಗಾರರನ್ನ ಬೈತ ಇದ್ದರೆ, ನಮ್ಮ ಕನ್ನಡದ ಹೋರಾಟಕ್ಕೆ ಹೋದ ಸಿನಿಮ ನಟರು ಸಹ ಹೇಳಿದ ಮಾತುಗಳು ”ನಾವು ಈ ಪ್ರತಿಭಟನೆಗಳನ್ನು ಮಾಡಿದರು ಸಹ ಅದರಿಂದ ನಮ್ಮ ಮತ್ತು ತಮಿಳು ಸಿನಿಮ ರಂಗದ ಬಾಂಧವ್ಯ ಏನು ತೊಂದರೆ ಇಲ್ಲದೆ ಮುಂದುವರಿಯುತ್ತದೆ" ಅಂತ. "The Kannada actors stressed that even though they had participated in the protests, they would not let politics affect the professional relationship that they shared with their colleagues from the Tamil film industry."
ಅಲ್ಲಿಯ ಜನ ಬಾಯಿಗೆ ಬಂದಂಗೆ ನಮ್ಮ ಬಗ್ಗೆ ಮಾತಾಡುತ್ತಿದ್ದರೆ, ನಮ್ಮ ಪುಕ್ಕಲು ಜನ ಬಾಂಧವ್ಯ ಗೀಂಧವ್ಯ ಅಂತ ಕೂತ್ಕೊಂಡಿದರೆ ನೋಡಿ.

ಇದಕ್ಕೆ ಕಾರಣ ನಮ್ಮ ಸಿನಿಮದವರು ತಮಿಳು ತೆಲುಗು ಚಿತ್ರರಂಗದ ಮೇಲೆ ಇಟ್ಟುಕೊಂಡಿರುವ ಡಿಪೆಂಡೆಂನ್ಸಿ. ಯಾವುದೆ ಚಿತ್ರದ ರೆಕಾರ್ಡಿಂಗ್ ಕೇಳಿ ಚೆನ್ನೈ ನಲ್ಲಿ ಮಾಡಿಸಿರುತ್ತಾರೆ. ತಂತ್ರಜ್ಯರು ಹೈದರಬಾದ್ ಇಂದ ಕರೆಸಿರುತ್ತಾರೆ. ರಿಮೆಕ್ ಗಳಂತು ಕೇಳುವುದೇ ಬೇಡ. ಇದೆಲ್ಲಾ ನಿಲ್ಲಿಸಿ ಸ್ವಂತವಾಗಿ ಸಿನಿಮ ತೆಗೆದರೆ ತಮ್ಮ ಬಗ್ಗೆಯು, ನಾಡಿನ ಬಗ್ಗೆಯು ಅಭಿಮಾನವು ತನ್ತಾನೆ ಬರುತ್ತದೆ.

ಇನ್ನು ವಿಷ್ನು ಮತ್ತು ಅಂಬಿ ಕಚಡಾಗಳು ಅಷ್ಟೆ.

Anonymous ಅಂತಾರೆ...

summane chitranatarannu illada vicharaglige beedigeleuvudu sariyalla. cinemadalli nammadu sanna marukatte. karnatakadalli kannada chitragalu tamilu, telugu, hindi bhasheglee allade hollywood chitraglomdigoo sphardisabeku. bere bhashegala chitragalnnu illi tdeylu sadhyave. namma natar mele vina karan aakrosha beeruvudu sariyalla

Anonymous ಅಂತಾರೆ...

Hi,
Be realistic! No sense in blaming Vishnuvardhan.He does acting whatever the director says and say whatever writer writes.If you go by their words,dialogue writer should come on road to protest Hogenkal issue.So silly.Blame it on Directors who makes such films.
Finally it's left to Dr.Vishnu to dicide, he has his views.Don't force him.You don't have any right to question.You have not elected him by giving your vote.He is not a political leader.
Social responsibility is for everyone, not ONLY for Vishnu and Ambarish.

Harsha J

Anonymous ಅಂತಾರೆ...

ಹರ್ಷಾ ಅವರೆ,
ಇಲ್ಲಿ ಹೇಳಿರೋದೆ ನಾವು ನಟರನ್ನು ನತರಾಗಿನ್ೋಡ್ಬೇಕು ನಾಯಕರನ್ನಾಗಿ ಅಲ್ಲಾ ಅಂತಾ. ಆದರೆ ಸಿನಿಮಾದಲ್ಲೂ ನಾವು ನಾಡುನುಡಿ ಕಾಪಾಡಕ್ಕೆ ಬದ್ಧರೂ ಅನ್ನೋ ಅನ್ನೋ ಪೋಸ್ ಕೊಡೋದು ಬರೀ ಜನ್ರು ತಮ್ಮ ಸಿನಿಮಾ ನೋಡಲಿ ಅನ್ನೋ ಕಾರಣಕ್ಕೆ ಅನ್ನೋದು ಜನರ ಮುಗ್ಧತೇನಾ ದುರುಪಯೋಗ ಪಡಿಸಿಕೊಳ್ಳೋ ಉದ್ದೇಶದಿಂದ ತಾನೆ? ಇದರ ಹೊಣೆಬ್ರೀ ನಿರ್ದೇಶಕರದ್ದು ಮಾತ್ರಾ ಅನ್ನಬೇಡಿ. ಮಾತಾಡ್ ಮಾತಾಡ್ ಮಲ್ಲಿಗೆ ಥರದ ಸಿನಿಮಾದ ಕಾಸ್ಟ್ಯೂಮ್ ಕೂಡಾ ಹೀಗೇ ಇರಬೇಕು ಅಂತ ಡಾ.ವಿಷ್ಣುವರ್ಧನ್ ಮೂಗು ತೂರಿಸಿದ ಸುದ್ದಿ ಗಾಂಧಿನಗರದ ತುಂಬಾ ಓಡಾಡ್ತಿದೆ. ಅಂಥಾದ್ರಲ್ಲಿ ಎಂಥಾ ಹಾಡು, ಎಂಥಾ ಸಾಹಿತ್ಯ ಇರಬೇಕುಅ ನ್ನೋ ವಿಷ್ಯದಲ್ಲಿ ಈ ನಟರುಗಳು ಇನ್ನೋಸೆಂಟ್ ಅನ್ನೋದ್ನ ನಂಬಕ್ಕಾಗುತ್ತಾ? ಗುರು ಹೇಳ್ತಿರೋ ಹಾಗೆ ಈ ನಟರುಗಳಿಗೆ ತಮ್ಮ ಜನಪ್ರಿಯತೆಗಾಗಿ ಕನ್ನಡ, ಕಾವೇರಿ ಬೇಕು ಅಷ್ಟೆ.

ಪುಟ್ಟ PUTTA ಅಂತಾರೆ...

Meaningful lekhana!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails