ನಾಳಿನ ಅಂತರ್ಜಾಲಗಳಲ್ಲಿ ಕನ್ನಡವೇ ಮುಂದಾಗಲಿದೆ...ಗೊತ್ತಾ?

Juxt Consult ಅನ್ನೋ ಮಾರುಕಟ್ಟೆ ಸಮೀಕ್ಷೆ ಸಂಸ್ಥೆ ಬಿಡುಗಡೆ ಮಾಡಿರೋ ಒಂದು ಅಂಕಿಅಂಶದ ಪ್ರಕಾರ ಭಾರತದಲ್ಲಿ ಅಂತರ್ಜಾಲ ಬಳಸುವವರ ಸಂಖ್ಯೆ 7 ಕೋಟಿ ಇದ್ದು, ಅದರಲ್ಲಿ ಇಂಗ್ಲಿಷಲ್ಲಿ ಅಂತರ್ಜಾಲವನ್ನು ಬಳಸೋರ ಸಂಖ್ಯೆ 13% ಅಂದ್ರೆ ಸುಮಾರು 91 ಲಕ್ಷದಷ್ಟು ಮಾತ್ರವಿದ್ದು ಬಾಕಿ ಆರು ಕೋಟಿ ಒಂಬತ್ತು ಲಕ್ಷ ಜನರು ತಮ್ಮ ತಮ್ಮ ಭಾಷೆಗಳಲ್ಲೇ ಬಳಸ್ತಾರಂತೆ. ಅಂತರ್ಜಾಲದಲ್ಲಿ ಭಾರತೀಯ ಭಾಷೆಗಳಿಗೆ ಇರೋ ಈ ಪಾಟಿ ಬೇಡಿಕೆ ನೋಡಿ ಐ.ಬಿ.ಎಮ್, ಗೂಗಲ್, ಎಚ್.ಪಿ, ಮೈಕ್ರೋಸಾಫ್ಟ್ ನಂತಹ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಭಾಷೆಯಲ್ಲಿ ತಂತ್ರಾಂಶ ಅಭಿವೃದ್ಧಿಯತ್ತ ಅದ್ಯತೆ ಕೊಡ್ತಾ ಇದೆ ಅನ್ನೋ ಸುದ್ದಿ ಇತ್ತೀಚೆಗೆ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಬಂದಿತ್ತು ಗುರು.

ಮುಂದಿನ ದಿನಗಳನ್ನು ಬದಲಾಯಿಸಲಿರುವ ಅಂತರ್ಜಾಲ !
ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ 65 ಕೋಟಿ ಇದೆ. ಅದರಲ್ಲಿ 35 ಕೋಟಿ ಜನ ಅಂತರ್ಜಾಲ ಬಳಸಲು ಶಕ್ತರಿರುವ ಮಧ್ಯಮ ವರ್ಗದವರು. ಈ 35 ಕೋಟಿಯಲ್ಲಿ ಈಗ ಅಂತರ್ಜಾಲ ಬಳಸ್ತಾ ಇರೋರು ಬರೀ 7 ಕೋಟಿ ಜನ. ಅಂದ್ರೆ ಬರೀ 20% ಜನ. ಬಾಕಿ 80% ಜನರು ಅಂತರ್ಜಾಲದ ಗಾಡಿ ಏರಿದಾಗ, ಭಾರತೀಯ ಭಾಷೆಗಳಿಗೆ ಯಾವ ಮಟ್ಟದಲ್ಲಿ ಬೇಡಿಕೆ ಬರಬಹುದು ಅನ್ನೋದನ್ನ ನೀವೇ ಊಹೆ ಮಾಡಿ ಗುರು. ಇನ್ನೂ ಕೆಲವೇ ವರ್ಷಗಳಲ್ಲಿ ಆಡಳಿತ, ಕಲಿಕೆ, ಮನರಂಜನೆ ಸೇರಿದಂತೆ ದಿನ ನಿತ್ಯದ ಎಲ್ಲ ವಹಿವಾಟಿನಲ್ಲೂ ಅಂತರ್ಜಾಲ ಅವಿಭಾಜ್ಯ ಅಂಗವಾಗೋ ದಿನಗಳು ಬರ್ತಾ ಇವೆ. ಬಹುರಾಷ್ಟ್ರೀಯ ಕಂಪನಿಗಳು ಇದನ್ನು ಗಮನಿಸಿಯೇ ಇತ್ತ ಗಮನಹರಿಸುತ್ತಿರುವುದು. ಈ ಪ್ರಯತ್ನದಲ್ಲಿ ಕನ್ನಡ ಯಾವ ಕಾರಣಕ್ಕೂ ಹಿಂದೆ ಬೀಳಬಾರದು. ಅಂತರ್ಜಾಲದ ಬಳಕೆಯ ಎಲ್ಲ ಹಂತದಲ್ಲೂ ಕನ್ನಡಕ್ಕೆ ಅರ್ಹವಾಗಿ ಸಿಗಬೇಕಾದ ಸ್ಥಾನ ಸಿಗುವಂತೆ ಮಾಡುವುದು ನಮ್ಮೆಲ್ಲರ ಕೈಯಲ್ಲಿ ಇದೆ. ಅದು ಗೂಗಲ್ ನ್ಯೂಸ್ ಇರಲಿ, ಫೇಸ್-ಬುಕ್ ಇರಲಿ, ಇಲ್ಲವೇ ಯಾವುದೇ ಬ್ಯಾಂಕಿಂಗ್, ವಿಮೆ, ಸರ್ಕಾರಿ, ಖಾಸಗಿ ತಾಣಗಳಿರಲಿ, ಎಲ್ಲ ಕಡೆ ಕನ್ನಡದಲ್ಲಿ ಅಂತರ್ಜಾಲ ಸೇವೆ ನೀಡುವಂತೆಯೂ, ಮತ್ತು ಕನ್ನಡದಲ್ಲಿ ನೀಡುವ ಸೇವೆಯನ್ನು ಬಳಸುವುದರ ಮೂಲಕ ಕನ್ನಡಕ್ಕೆ ಬೇಡಿಕೆ ಕೊಡಿಸುವ ಕೆಲಸವನ್ನು ಅಂತರ್ಜಾಲದಲ್ಲಿರುವ ನಾವೇ ಮಾಡಬೇಕು. ಏನಂತೀರಾ ಗುರು?

3 ಅನಿಸಿಕೆಗಳು:

Anand MB ಅಂತಾರೆ...

Jai kannadaambe....

Kannada belesi, ulisi...

Anand MB
Bendakaalooru

prasadh ಅಂತಾರೆ...

ಮೊನ್ನೆ ಫೆಡೊರಾ-೧೨ನ ನಾನು ಅನುಸ್ಥಾಪಿಸಿದೆ ಆಗ ಅದರಲ್ಲಿದ್ದ ಭಾಷಾ ಆಯ್ಕೆಯಲ್ಲಿ ಹಿಂದಿ ಹಾಗು ತಮಿಳು ಇತ್ತು.. ಕನ್ನಡ ಉಹು.
ಫೇಸ್ ಬುಕ್, ಫೆಡೊರಾ ಇವುಗಳ ಮೊದಲು ನಮ್ಮ ದಿನಪತ್ರಿಕೆಗಳ ಅಂತರ್ಜಾಲ ತಾಣಗಳು ಮೊದಲು ಯುನಿಕೋಡ್‌ಗೆ ಬದಲಾಗಬೇಕು ಆಮೇಲೆ ಮಿಕ್ಕಿದ್ದು.
ಬಳಗದವರು ಈ ನಿಟ್ಟಿನಲ್ಲಿ ಏನು ಕಾರ್ಯ ಮಾಡುತ್ತಿದ್ದಾರೆ?

Kannada interface ಅಂತಾರೆ...

ನಂಗೆ Kannada interface ಬೇಕು. ಆದರೆ weird ಆಗಿರೋ ೧೮ನೇ ಸೆಚುರಿ ಕನ್ನಡದಲ್ಲಿ ಬೇಡ.

ನಾಳಿನ ಅಂದರೆ ಏನು? Of tomorrow?ಅದು ನಾಳೆಯ ಅಲ್ಲವೇ?

weird!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails