ಯುವಜನೋತ್ಸವ ಮರೆತ ಏಕತೆಯ ಮೂಲಮಂತ್ರ!

ನಮ್ಮದು ಕನ್ನಡಪರ ಸರ್ಕಾರ ಅಂತಾ ಗಂಟೆಗೊಮ್ಮೆ, ಗಳಿಗೆಗೊಮ್ಮೆ ಬಡ್ಕೊಳ್ಳೋ ಘನ ಕರ್ನಾಟಕ ರಾಜ್ಯಸರ್ಕಾರವೇ ಮಾಡಿರೋ ಈ ಕೆಲಸವನ್ನು ನೋಡಿ. ನಿನ್ನೆಯ (10.11.2010ರ) ವಿಜಯಕರ್ನಾಟಕದಲ್ಲಿ ಇಂಥದ್ದೊಂದು ಜಾಹೀರಾತನ್ನು ಹಾಕಲಾಗಿದೆ. ಇದರಲ್ಲಿ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ನಾಡಿನ ಯುವಕರಿಗೆ ಕರೆಕೊಡಲಾಗಿದೆ. ಆದರೆ ಈ ಯುವಜನೋತ್ಸವದಲ್ಲಿ ಭಾಷಣ ಸ್ಪರ್ಧೆ ಮತ್ತು ಏಕಾಂಕ ನಾಟಕ ಸ್ಪರ್ಧೆಗಳು ಹಿಂದಿ/ ಇಂಗ್ಲೀಷಿನಲ್ಲಿರಬೇಕಂತೆ! ಇಲ್ಲಿ ಬೇರೆಬೇರೆ ಹಂತಗಳಲ್ಲಿ ಗೆದ್ದು ಮುಂದೆ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಿ, ಅಲ್ಲೂ ಬಹುಮಾನ ಗೆಲ್ಲಿ, ಹೊರದೇಶದಲ್ಲಿ ನಿಮ್ಮ ಪ್ರತಿಭೆ ತೋರಿಸೋ ಅವಕಾಶ ಗಿಟ್ಟುಸಿಕೊಳ್ಳಿ ಅಂತಾ ನಮ್ಮ ಹಳ್ಳಿಹಳ್ಳಿಯಲ್ಲಿ ಕರೆಕೊಟ್ಟಿದ್ದುನ್ನ ನೋಡಿ ನಮ್ ಜನರೇನಾದ್ರೂ ಹಿಗ್ಗುದ್ರೆ ಬಾಯಿಗೆ ಮಣ್ಣಾಕ್ಕೊಂಡಂಗೇನೆ! ಏಕಂದ್ರೆ ನೀವು ನಾಟಕ ಮಾಡಬೇಕಾದ್ದು ಹಿಂದೀ/ ಇಂಗ್ಲಿಷಲ್ಲಿ ಅಂತಿದೆ ಈ ಜಾಹೀರಾತು. ಇದುನ್ ಹೊರಡ್ಸಿರೋದು ನಮ್ಮ ಕನ್ನಡನಾಡಿನ, ಕನ್ನಡಿಗರನ್ನು ಮುನ್ನಡೆಸುವ, ಜಗತ್ತಿನ ಕೆಡುಕುಗಳಿಂದ ಕನ್ನಡಿಗರನ್ನು ಕಾಯಬೇಕಾದ ಘನ ಕರ್ನಾಟಕ ರಾಜ್ಯಸರ್ಕಾರ!

ರಾಷ್ಟ್ರೀಯ ಅಂತಂದ್ರೆ ಹಿಂದೀ/ ಇಂಗ್ಲೀಷಾ?

ಹೌದೂ, ಭಾರತದ ಮೂಲೆಮೂಲೆಗಳ ಪ್ರತಿಭೆಗಳನ್ನು ಬೆಳಕಿಗೆ ತರಲು ಹೊರಟವರಿಗೆ ಭಾಷೆಯ ಮಿತಿ ಹಾಕುವಂತಹ ಈ ಕಟ್ಟಳೆಯಾದ್ರೂ ಯಾಕೆ ಬೇಕಿತ್ತು? ಇಲ್ಲಿ ಭಾರತದ ಎಲ್ಲಾ ನುಡಿಗಳಿಗೂ ಸ್ಥಾನ ಕೊಡಬೇಕಲ್ವಾ? ಇಲ್ಯಾಕೆ ಕನ್ನಡದಲ್ಲಿ ನಾಟಕ ಮಾಡುವುದು, ಭಾಷಣ ಮಾಡುವುದು ತಪ್ಪಾಗುತ್ತೆ? ವೈವಿಧ್ಯತೆ, ನಾನಾ ಭಾಗಗಳ ನಾನಾ ಸಂಸ್ಕೃತಿಯ ಜನರನ್ನು ಪರಸ್ಪರ ಪರಿಚಯಿಸಿ ರಾಷ್ಟ್ರೀಯ ಏಕತೆಯನ್ನು ಹೆಚ್ಚಿಸಲು ಈ ಯುವಜನೋತ್ಸವ ನಡೆಸಲಾಗುತ್ತದೆ ಅನ್ನುವ ಕೇಂದ್ರಸರ್ಕಾರದ ಮೂಲೋದ್ದೇಶವೇ ಇಂಗ್ಲೀಷ್/ ಹಿಂದೀ ಮಾತ್ರಾ ಬಳಸಿ ಅನ್ನುವ ಈ ನಿಲುವಿಂದ ಅರ್ಥಹೀನವಾಗುವುದಿಲ್ಲವೇ? ಎಲ್ಲಾ ಭಾಷೆಗಳಿಗೆ ಸಮಾನ ಗೌರವ ಕೊಡುತ್ತೇವೆ, ವೈವಿಧ್ಯತೆಯಲ್ಲಿ ಏಕತೆ ಸಾಧಿಸುತ್ತೇವೆ ಎನ್ನುವ ನಾಡಿನಲ್ಲಿ ಹೀಗಿರುವುದು ಸರಿಯೇ? ಇದು ಏಕತೆಗೆ ಪೂರಕವೇ? ಹಿಂದಿ/ ಇಂಗ್ಲೀಷ್ ಅರಿಯದ ಭಾರತೀಯರಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಹಕ್ಕೇ ಇಲ್ಲವೇ? ಏನಂತೀರಾ ಗುರೂ?

4 ಅನಿಸಿಕೆಗಳು:

Anush Infobase ಅಂತಾರೆ...

HUgi guru... Naavu enu maadona...? I have one imp thing. Tamil naadalli, studying in Kannda medium is a must for govt jobs antha maadidaare... namma uliu onde Bhaashe ulivu onde antha nambiro jana avru. I really appreciate. Why not we do something in this seriously.

Come out with some idea or method... ,like aprocaching Govt or some vedike..... Pls dear. Very shortly, I will download Baraha..and write in kannada

brunda ಅಂತಾರೆ...

idu ati aytu, hinde ee reeti iralilla atleast state media nalli andre paper, news etc kannada kannadigara para ittu. ee bjp sarkara banda mele pollu rashtiyate jasti agide
ellara hesarigu JI hacchi kareyodu bere yedyurappanoru. modiji, atalji ankondu thoo

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ಯಂತಾ ಪೆದ್ ಬೋಡ್ಡಿವ್ ಗುರು ಇವು? ನಾನ್ ಅಗ್ರಿಕಲ್ಚರ್ ಯೂನಿವರ್ಸಿಟೀ ನಲ್ಲಿದ್ದಾಗ ಯುಧ್ ಯಜ್ಞ ಅಂತ ನಾಟಕ ಮಾಡಿದ್ದೋ. ನ್ಯಾಶನಲ್ ಲೆವೆಲ್ಲಲ್ಲಿ ಫರ್ಸ್ಟ್ ಪ್ಲೇಸ್ ಗುರು. ಎಲ್ಲಾ ಬಾಸೇವು ೩೨ ನಾಟಕ ಇದ್ದೋ. ಒತ್ತರೆಯಿನ್ದ ಸಂಧೇವಾರ್ಗೂ ಇದ್ದೋ. ನಂ ಕನ್ನಡ ನಾಟ್ಕುಕ್ಕೆ ಫರ್ಸ್ಟ್ ಪ್ಲೇಸ್ ಗುರು. ೨ನೇ ಪ್ಲೇಸ್ ಹರ್ಯಾನದಿಂದ ಹಿಂದಿ ನಾಟಕ. ಅದೂನಂ ಕನ್ನಡ ನಾಗ್ಮಾಂಡಲ ನಾಟಕದ್ ಅನುವಾದ!!
ಇದ್ಯಾವ್ ಸೀಮೆ ಯುವ್ಜನೋತ್ಸವನೋ ಕಾಣೆ. ಎಲ್ಲಥ್ಕಿನ್ತ ನಂ ಸರ್ಕಾರದ್ ಗುಲಾಂ ಬುದ್ದಿಗ್ ಕ್ಯಾಕರ್ಸ್ ಹುಗೀಬೇಕು. ಥೂ..

ಸಂದೀಪ್ ಅಂತಾರೆ...

ಗುಲಾಮಗಿರಿ ಈ ಲೆವೆಲ್ಲಿಗೆ ಹೋಗುತ್ತೆ ಅಂತ ಯಾವತ್ತೂ ನೆನಸಿರಲಿಲ್ಲ. ಕನ್ನಡಕ್ಕೇ ಸ್ಥಾನವಿಲ್ಲದ ಈ ಯುವಜನೋತ್ಸವ ಯಾರ ಲಾಭಕ್ಕಾಗಿ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails