ಚೆನ್ನಾಗಿ ನಡೆದ "ಹೊತ್ತಗೆ ಬಿಡುಗಡೆ ಕಾರ್ಯಕ್ರಮ"


ಕಳೆದ ಶನಿವಾರ (೦೪.೦೮.೨೦೧೨) ಬೆಳಗ್ಗೆ ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ಬೀದಿಯಲ್ಲಿರುವ "ದಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್‌ಡ್ ಕಲ್ಚರ್" ಸಂಸ್ಥೆಯ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಬಳಗದ ಪ್ರಿಯಾಂಕ್ ಕತ್ತಲಗಿರಿ ಸಂಪಾದಿಸಿರುವ ಹೊಸ ಹೊತ್ತಗೆ "ಬೆಳಗಲಿ... ನಾಡ ನಾಳೆಗಳು" ಬಿಡುಗಡೆಯಾಯಿತು.

ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಶಿಕ್ಷಣ ತಜ್ಞರೂ, ಸಲಹೆಗಾರರೂ ಆದ ಡಾ. ನಿರಂಜನಾರಾಧ್ಯ, ಕನ್ನಡ ಸಾಹಿತ್ಯ ಪರಿಶತ್ತಿನ ಅಧ್ಯಕ್ಶರಾದ ಶ್ರೀ ಪುಂಡಲೀಕ ಹಾಲಂಬಿ, ಜನಶ್ರೀ ವಾಹಿನಿಯ ಸಂಪಾದಕರಾದ ಶ್ರೀ ಅನಂತ ಚಿನಿವಾರರವರು ಪಾಲ್ಗೊಂಡಿದ್ದರು. ಹೊತ್ತಗೆ ಬಿಡುಗಡೆಯ ನಂತರ ಬಳಗ ಮತ್ತು ಹೊತ್ತಗೆಯ ಕುರಿತಾಗಿ, ಬಂದಿದ್ದ ಅತಿಥಿಗಳು ಮಾತುಗಳನ್ನಾಡಿದರು.

ಈ ಹೊತ್ತಿನಲ್ಲಿ ಡಾ. ನಿರಂಜನಾರಾಧ್ಯರವರು ಶಿಕ್ಶಣ ವ್ಯವಸ್ಥೆಯ ಬಗ್ಗೆ, ಸರ್ಕಾರದ ಹೊಣೆಗಾರಿಕೆಗಳ ಬಗ್ಗೆ ಸೊಗಸಾಗಿ ಮಾತನ್ನಾಡಿದರು. ಶ್ರೀ ಅನಂತ ಚಿನಿವಾರರವರು ಕಲಿಕೆಯ ಮಹತ್ವದ ಬಗ್ಗೆ ಮಹತ್ವದ ಪ್ರಶ್ನೆಗಳನ್ನೆತ್ತಿದರೆ, ಶ್ರೀ ಪುಂಡಲೀಕ ಹಾಲಂಬಿಯವರು ಸಮಾನ ಶಿಕ್ಷಣದ ಅಗತ್ಯದ ಬಗ್ಗೆ ಪ್ರತಿಪಾದಿಸಿದರು. ಬನವಾಸಿ ಬಳಗದ ಆನಂದ್, ಕಡಿಮೆಯೆಂದರೆ ಮುಂದಿನ ಐವತ್ತು ವರ್ಷಗಳಾಚೆಗಿನ ದೂರದೃಶ್ಟಿಯಿಟ್ಟುಕೊಂಡು  ನಮ್ಮ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಅಗತ್ಯದ ಬಗ್ಗೆ ಗಮನ ಸೆಳೆದರು. ಈ ಕಾರ್ಯಕ್ರಮ ಚೆನ್ನಾಗಿ ನಡೆಯಲು ನೇರವಾಗಿ ಮತ್ತು ಬೆನ್ನೆಲುಬಾಗಿ ಪಾಲ್ಗೊಂಡ ಎಲ್ಲರಿಗೂ ನಮ್ಮ ಧನ್ಯವಾದಗಳು!

3 ಅನಿಸಿಕೆಗಳು:

harsha ಅಂತಾರೆ...

ಕಾರ್ಯಕ್ರಮ ತುಂಬಾ ಚೆನ್ನಾಗಿ ಇತ್ತು . ದಯವಿಟ್ಟು ವೀಡಿಯೊ ಗಳನ ಅಪ್ಲೋಡ್ ಮಾಡಿ.

ಶಿವಪ್ರಕಾಶ್ ಅಂತಾರೆ...

congrats priyank..

Shashi ಅಂತಾರೆ...

ಕಾರ್ಯಕ್ರಮ ತುಂಬ ಚೆನ್ನಾಗಿತ್ತು. ಶಿಕ್ಷಣ ವ್ಯವಸ್ತೆ ಅಲ್ಲಿ ಇರೋ ಕೊರತೆಗಳ ಬಗ್ಗೆ, ಮುಖ್ಯವಾಗಿ ಒಂದು ನೀತಿ ಇಲ್ಲದೆ ಇರೋದು ತಿಳಿದು ತುಂಬ ಬೇಸರ ಆಯಿತು. ಇನ್ನಾದರೂ ಸರಕಾರ ನಿದ್ದೆ ಇಂದ ಎದ್ದು ಇದರ ಬಗ್ಗೆ ಗಮನ ಹರಿಸುವುದು ಒಳ್ಳೆಯದು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails