ರೈಲ್ವೇ ಹುದ್ದೆಗಳ ವಿಷಯದಲ್ಲಿ ಕನ್ನಡಿಗರಿಗೆ ಮೋಸ - ಒಂದು ವಿಶ್ಲೇಷಣೆ

ಹುಬ್ಬಳ್ಳೀಲಿ ನೈಋತ್ಯ ರೈಲ್ವೆಯ "ಡಿ" ಗುಂಪಿನ ಹುದ್ದೆಗಳಿಗೆ ಬಿಹಾರಿಗಳು ಬಂದು ತುಂಬ್ಕೋತಿರೋದು, ಅದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾಗಿ ಪ್ರತಿಭಟನೆ ಮಾಡ್ತಿರೋದು - ಇದನ್ನೆಲ್ಲ ನೀವು ಮಾಧ್ಯಮಗಳಲ್ಲಿ ನೋಡೇ ಇರ್ತೀರಿ. ಮೇಲ್ನೋಟಕ್ಕೆ ಇದು ಅಂಥಾ ಹೇಳ್ಕೊಳೋ ಸುದ್ದಿಯೇನಲ್ಲ ಅನ್ನಿಸಬಹುದು. ಆದರೆ ನಿಜಕ್ಕೂ ನೋಡುದ್ರೆ ಇದೊಂದು ಘಟನೆಯಿಂದ ಕನ್ನಡಿಗನ ಮುಂದಿರೋ ಸವಾಲುಗಳಲ್ಲಿ ಎಷ್ಟೋಂದು ಅರ್ಥವಾಗುತ್ತವೆ.

ಔರು ಬಂದಿದ್ದು ಯಾಕೆ? ನಾವು ಬಿಟ್ಟಿದ್ದು ಯಾಕೆ?

ಬಿಹಾರಿಂದ ಈ ಹುದ್ದೆಗಳಿಗೆ ತುಂಬ್ಕೊಳಿ ಅಂತ ಬಿಹಾರಿಗಳಿಗೆ ಹೇಳ್ಕೊಟ್ಟು ಕಳಿಸೋದು ಅಥವಾ ಔರು ಬಂದು ತುಂಬ್ಕೊಳೋ ಪ್ರಯತ್ನ ಮಾಡೋದು ಭಾರತೀಯ ಸಂವಿಧಾನಕ್ಕೆ ಬಾಹಿರವೇನಲ್ಲ (ಔರಿಗೋಸ್ಕರ ವಿಶೇಷವಾದ ರೈಲುಗಳ್ನ ಹಾಕಿ ಲಾಲೂ ಯಾದವ್ ಕಳ್ಸಿದಾರೆ ಅನ್ನೋ ಕೆಲವರ ಊಹೆ ನಿಜವಾದ್ರೆ ಅದ್ ಬೇರೆ ವಿಷಯ). ಸಂವಿಧಾನಬಾಹಿರವಾಗದೆ ಇರೋದು ಸರೀನೋ ಅಲ್ಲವೋ, ಅನಿಯಂತ್ರಿತ ವಲಸೆ ತಡೆಗಟ್ಟೋ ಕಾನೂನೊಂದು ಬರಬೇಕೋ ಬೇಡವೋ ಅನ್ನೋ ಚರ್ಚೆ ಈಗ ಬೇಡ. ಒಟ್ನಲ್ಲಿ ಔರು ಬಂದ್ರು ಅಂದ್ಮೇಲ್ ಬಂದ್ರು. ನಮ್ಮ ಹುದ್ದೆಗಳ್ನ ಕಿತ್ಕೊಳಕ್ಕೆ, "ಈ ಪೆದ್ದಮುಂಡೇವ್ಗೆ ತಮ್ಮ ಅನ್ನ ಕಿತ್ಕೊಂಡ್ ಹೋಗ್ತಿದ್ರೂ ಗೊತ್ತಾಗಲ್ಲ, ನಾವಾರೂ ತಿಂಬೋಣ" ಅಂತ ಬಂದ್ರು.

ಆದ್ರೆ ಹಾಗೆ ಔರು ಬಂದಿದ್ದರ ಹಿಂದೆ ಏನೇನಿದೆ ಗೊತ್ತಾ? ಒರಿಗೋಸ್ಕರ, ಇಲ್ಲಿ (ಅಂದ್ರೆ ಕನ್ನಡದ ನಾಡಲ್ಲಿ) ಔರ ಭಾಷೇಲಿ ಮಾತ್ರ ಅರ್ಜಿ ತುಂಬಬೇಕು ಅಂತ ಹೇಳೋ ವ್ಯವಸ್ಥೆ ಇದೆ; ಔರಲ್ಲಿ ಒಬ್ಬನಾಗಿರೋ ಕೇಂದ್ರ ರೈಲ್ವೇ ಮಂತ್ರಿ ಇದಾರೆ; ಔರು ಬಂದು ಇಲ್ಲಿ ನಮ್ಮ ಹುದ್ದೆಗಳ್ನ ನುಂಗ್ಕೊಂಡು ಇಲ್ಲೇ ತಳ ಊರಿ ಇಲ್ಲೀ ನಾಡು-ನುಡಿ-ನಡೆಗಳ್ನ ಚಿಂದಿ-ಚಿತ್ರಾನ್ನ ಮಾಡ್ತಾ ಇದ್ರೂ ಔರ್ನ "ಇವರೂ ಭಾರತೀಯರಲ್ವೇ?" ಅಂತ ಕೇಳ್ಕೊಂಡು ಔರ್ನ ಔರ್ ಭಾಷೇಲೇ ಮಾತಾಡಿಸಿ ತಲೇಮೇಲೆ ಕೂರುಸ್ಕೊಳೋ ಮೂರ್ಖಶಿಖಾಮಣಿಗಳಾದ ನಾವಿದೀವಿ; ಇಡೀ ವೋಟ್ ಬ್ಯಾಂಕ್ ಕನ್ನಡಿಗರದೇ ಆಗಿದ್ದರೂ ಕನ್ನಡಿಗರಿಗೆ ಆಗ್ತಿರೋ ಅನ್ಯಾಯ ತಡಿಯಕ್ಕಾಗದೇ ಇರೋಂಥಾ ನರಸತ್ತ ಕನ್ನಡದ ರಾಜಕಾರಣಿಗಳಿದಾರೆ; ಔರ್ನ ದಿಲ್ಲೀದಾಸರಾಗಿ ಬಾಳಿಡೀ ಜೀತಕ್ಕೆ ಇಟ್ಕೊಂಡಿರೋಂಥಾ "ರಾಷ್ಟ್ರೀಯ" ಪಕ್ಷಗಳಿವೆ. ಇವೆಲ್ಲ ಇವೆ. ಅದಕ್ಕೇ ಔರು ಬಂದ್ರು, ನಾವು ಬಿಟ್ವಿ.

ರಾಜಕೀಯ ಪಕ್ಷಗಳು ಕಣ್ಣು ಬಿಟ್ಟಿವೆಯಾ?

ಈ ವಿಷಯದಲ್ಲಿ ಮೊದಲು ಎಚ್ಚೆತ್ತುಕೊಂಡು ಇದನ್ನ ತಡೀದೇ ಇರಕ್ಕಾಗಲ್ಲ ಅಂತ ಮುನ್ನುಗ್ದೋರು ಕರ್ನಾಟಕ ರಕ್ಷಣಾ ವೇದಿಕೆಯೋರು ಮಾತ್ರ. ಈ ವಿಷಯ ಏನು, ಇದರಿಂದ ಕನ್ನಡಿಗರಿಗೆ ಆಗ್ತಿರೋ ಮೋಸ ಏನು, ಇದರಿಂದ ನಾಡಿಗೆ ಹೇಗೆ ಕೆಡಕುಂಟಾಗ್ತಿದೆ, ಇದನ್ನ ತಡೆಗಟ್ಟೋದ್ರಲ್ಲಿ ತಮ್ಮ ಪಾತ್ರ ಏನು ಅಂತ ಅರ್ಥ ಮಾಡ್ಕೊಳಕ್ಕೆ ಬೇಕಾಗಿರೋ ಬುದ್ಧಿ ಯಾವ ರಾಜಕೀಯ ಪಕ್ಷಕ್ಕೂ ಮೊದಲು ಚಿಗುರಲಿಲ್ಲ. ವೇದಿಕೆಯೋರು ಈ ವಿಷಯದಲ್ಲಿ ಜಗ್ಗಲ್ಲ ಅಂದಾಗ, ಮಾಧ್ಯಮಗಳು ಒಂದೇತಪ್ಪ ಇದರ ಬಗ್ಗೆ ಬರೆದಾಗಲೇ ಚಿಗುರಿದ್ದು. ಒಟ್ನಲ್ಲಿ ಈ ವಿಷಯದಲ್ಲಂತೂ ವೇದಿಕೆಯೋರು ಕೊನೆಗೂ ಕರ್ನಾಟಕದ ರಾಜಕೀಯ ಪಕ್ಷಗಳಿಗೆ "ನೀವು ಕನ್ನಡದ ಪಕ್ಷಗಳಾಗಿ" ಅನ್ನೋ ಪಾಠಾನ ಅತ್ತು ಕರೆದು ಏಟು ತಿಂದು ಜೈಲಿಗೆ ಹೋಗಿ ಹೇಳ್ಕೊಟ್ಟಂಗಾಯ್ತು!

ಕನ್ನಡಿಗರು ಒಗ್ಗೂಡಿ ವಿರೋಧಿಸಬೇಕು

ಕೊನೆಗೆ ಈ "ಡಿ" ಹುದ್ದೆಗಳಲ್ಲಿ ಎಷ್ಟು ನಿಜಕ್ಕೂ ಕನ್ನಡಿಗರಿಗೇ ಸಿಗತ್ವೆ ಅನ್ನೋದು ಪ್ರಶ್ನೆ. ಕಾದು ನೋಡೋ ಬದ್ಲು "ಅಷ್ಟೂ ಕನ್ನಡಿಗರಿಗೇ ಕೊಟ್ರೆ ಸರಿ, ಇಲ್ದೇ ಇದ್ರೆ ಸುಮ್ನಿರಕ್ಕಿಲ್ಲ" ಅನ್ನೋ ಕೂಗ್ನ ಕನ್ನಡಿಗರೆಲ್ಲಾ ಕೂಗಬೇಕು, ವ್ಯವಸ್ಥೆಯಲ್ಲಿರೋ ಹುಳುಕುಗಳ್ನ ಉಪಯೋಗಿಸಿಕೊಂಡು ಬಿಹಾರಿಗಳ್ನ ಛೂ ಬಿಡೋರಿಗೆ ಕ್ಯಾಕರಿಸಿ ಉಗೀಬೇಕು. ಏನ್ ಗುರು?

5 ಅನಿಸಿಕೆಗಳು:

YUVRAJ ಅಂತಾರೆ...

Madhymadalli nodidaga tileetu, Karavedavara pratibhatane nantara ella rajakeeya mukandarigoo swalpa churuku muttida haage ide. Pratiyondu vishayadallu ide thara kannada para horada madidre khanditavaagi kannadiharige Jaya sigutte mattu kannada naadu uliyatte.
Eno onthara ee Railway D group vishayadalli Khushi tandide nanage, swalpa mattige Kannadigarige Geluvu mattau chaitanya tandu kottide ansutte.

Anonymous ಅಂತಾರೆ...

ee valse bandu namma kelsa kitkondirodu bari railways nalli alla. BEL, BHEL,HAL, NAL, Airports authority of India, ella kade bari bere rajyadavare kelsa madta iddare karnaatakadalli. ade BHEL trichy hogi nodi. alli tamilarna bitre yaru irolla. maximum 2% bere rajyadoru irtare.
ide nittinallu Bengalooru Intl airport nalli kooda kannadadavare kelsa madbeku, hagu kannada bhashena upyogisbeku along with english. matte airport ge kempegowdra hesru idbeku. aaga jagattige gottagutte.. ee nela , jala naadu kannadigarige seriddu anta.
eega iro airport nalli kannada kelsidre adu namma punya..:(

Lohith ಅಂತಾರೆ...

Houdu idena KRV avr horatt ne namag andre kannadigarege swalpa nemadi tand ide....adikara iro rajakarni galu yela muchkond kuth idare....Nav iglu yechetkolalela andre mugethu e rajkarni galu nam karnataka hanch hodru sumn kuth nodta irtare namard gal tara.........tap yenadru heledre kshamesi

Anonymous ಅಂತಾರೆ...

ರೇಲ್ವೆಯ ಡಿ ದರ್ಜೆ ನೌಕರರ ನೇಮಕಾತಿಗೆ ಸಂಬಂಧಿಸಿದಂತೆ ಇಲಾಖೆಗಾಗಿಯೇ ಇರುವ ರೇಲ್ವೆ ಸಂಸ್ಥೆ ನಿಯಮ ಮತ್ತು ಕಾರ್ಮಿಕ ಕಾನೂನು ಪುಸ್ತಕದ ೪೮ನೇ ಪುಟದಲ್ಲಿ ನಿಯಮಾವಳಿಗಳನ್ನು ಉಲ್ಲೇಖಿಸಲಾಗಿದೆ.

ಇದನ್ನು ಓದಿದರೆ [ಅಥವ ಇಲ್ಲಿ ಪ್ರಕಟಿಸಿದರೆ] ಕರವೇ ರೇಲ್ವೆ ಹೋರಾಟಕ್ಕೆ ವಿರುದ್ಧವಾಗಿರುವವರ ಕೈ ಮತ್ತು ಬಾಯಿ ಎಲ್ಲವೂ ತೆಪ್ಪಗಾಗುವುದರಲ್ಲಿ ಸಂದೇಹವಿಲ್ಲ.

ರೇಲ್ವೆ ಸುರಕ್ಷಾ ಪಡೆಯನ್ನು ಹೊರತುಪಡಿಸಿ ಡಿ ದರ್ಜೆ ನೌಕರರನ್ನು ನೇಮಕಾತಿ ಮಾಡಿಕೊಳ್ಳುವಾಗ ಸ್ಥಳೀಯ ವ್ಯಕ್ತಿಗಳನ್ನೇ ನೇಮಕ ಮಾಡಿಕೊಳ್ಳತಕ್ಕದ್ದು. ಇದರಲ್ಲಿ ರೇಲ್ವೆ ನೇಮಕಾತಿ ಮಂಡಳಿ ಮೂಗು ತೂರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಡಿ ದರ್ಜೆ ನೌಕರರ ನೇಮಕಾತಿಗಾಗಿ ಒಟ್ಟು ೨೦ಕ್ಕೂ ಹೆಚ್ಚು ಉಪವಿಧಿಗಳನ್ನು ಈ ನಿಯಮಾವಳಿ ಕೈಪಿಡಿಯಲ್ಲಿ ಹೇಳಲಾಗಿದೆ. ಈ ಕೈಪಿಡಿಯಲ್ಲಿರುವ ನಿಯಮಗಳಲ್ಲಿನ ಇನ್ನೂ ಕೆಲ ಅಂಶಗಳೆಂದರೆ

೧] ಖಾಲಿಯಾಗುವ ಕೆಲಸಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನೇಮಕಾತಿ ಮಾಡಿಕೊಳ್ಳತಕ್ಕದ್ದು
೨] ಸಾಮಾನ್ಯವಾಗಿ ಈ ನೇಮಕಾತಿಯನ್ನು ಆಯಾ ವಿಭಾಗ, ಲೋಕೋಷೆಡ್, ಕಾರ್ಯಾಗಾರ ಇತರೆ ಅಗತ್ಯವಿದ್ದ್ಡೆಡೆ
ವಿಭಾಗೀಯ ಮುಖ್ಯಸ್ಥರೇ ಮಾಡಿಕೊಳ್ಳಬಹುದು
೩] ನೇಮಕಾತಿ ಪ್ರಕ್ರಿಯೆಯನ್ನು ಇಂಗ್ಲೀಷ್, ಹಿಂದಿ ಮತ್ತು ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಮುಖ್ಯವಾಗಿ ನೀಡಬೇಕು
೪] ಇರುವ ಹುದ್ದೆಗಳು ಎಷ್ಟು, ವೇತನ ಎಷ್ಟು ಇತ್ಯಾದಿ ಅಗತ್ಯ ಮಾಹಿತಿಯನ್ನು ಸ್ಥಳೀಯ ಮಾಧ್ಯಮದದ್ಲ್ಲಿ
ಪ್ರಕಟಿಸುವುದರೊಂದಿಗೆ ಅರ್ಜು ನಮೂನೆಯನ್ನು ಅತ್ಯಂತ ಸರಳವಾಗಿ ಸ್ಥಳೀಯ ಭಾಷೆಯಲ್ಲಿ ರೂಪಿಸತಕ್ಕದ್ದು.
೫] ಪ್ರಕಟಣೆಗಳ ಪ್ರತಿಯನ್ನು ಸ್ಥಳೀಯ ಪ್ರಾದೇಶಿಕ ಉದ್ಯೋಗ ವಿನಿಮಯ ಕೇಂದ್ರಕ್ಕೂ ಮತ್ತು ಮೀಸಲಾತಿಯ
ಸ್ಥಾನಗಳೆಷ್ಟು ಎಂಬುದನ್ನು ಉಲ್ಲೇಖಿಸಬೇಕು
೬] ಈ ವಿವರಗಳನ್ನು ಸ್ಥಳೀಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಯಾಲಯಕ್ಕೂ ರವಾನಿಸಬೇಕು.

ಈ ವಿವರಗಳು ಇಷ್ಟು ದಿನ ರೇಲ್ವೆಯ ಅಂತರ್ಜಾಲ ತಾಣದಲ್ಲಿ ಇತ್ತು. http://irsme.nic.in/establishments ಆದರೆ ಇಂದಿನಿಂದ ತೆರೆ ಕಾಣದಂತೆ ತಡೆ ಹಿಡಿಯಲಾಗಿದೆ. ಇದು ರೇಲ್ವೆಯ ಎಲ್ಲಾ ವಿಭಾಗೀಯ ಅಂತರ್ಜಾಲ ತಾಣಗಳಲ್ಲೂ ಲಭ್ಯವಿತ್ತು ಅದರೆ ಇಂದಿನಿಂದ ಅದು ಕಾಣದಂತೆ ತಡೆಹಿಡಿಯಲಾಗಿದೆ! Indian Railways establishment volume 1 and 2[http://westcentralrailway.com/RTI_Personnel/Manuals/MANUALS.pdf]


ಕರವೇ ಈ ಎಲ್ಲಾ ವಿವರಗಳನ್ನು ಬಹಿರಂಗಗೊಳಿಸಿದೆ.

ram ಅಂತಾರೆ...

we shoul seal all the borders of those 5 hindi speaking states... we should introduce visas for them and we should also introduce identity cards for every citizen so that police can identify and take those people to task....and weer should continue with these kind of protests in order to give the pro hindi govt sitting in dehli should have sleepless nights
just the tamils did in 50's and 60's.... taayi bhuvaneshvarige jaivaagali.... sirigannadam gelege

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails