"ವೇಗ ನಿಯಂತ್ರಕ" ಏಳಿಗೇಗೆ ಬ್ರೇಕ್ ಹಾಕದಿರಲಿ!

ಕರ್ನಾಟಕದಲ್ಲಿರೋ ಸಮೂಹ ಸಾರಿಗೆ ವಾಹನಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ವೇಗ ನಿಯಂತ್ರಕಗಳನ್ನು ಅಳವಡಿಸೋದ್ನ ಕಡ್ಡಾಯ ಮಾಡಿ ಒಂದು ಆದೇಶ ಹೊರಡ್ಸಿರೋದ್ನ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ಇದೀಗ ರಾಜ್ಯ ಉಚ್ಛ ನ್ಯಾಯಾಲಯ ಹೊಸದಾಗಿ ಕರ್ನಾಟಕ ಸರ್ಕಾರಕ್ಕೆ ಛೀಮಾರಿ ಹಾಕಿ, ಕೂಡಲೇ ಆ ಆದೇಶ ಜಾರಿಗೆ ತರುವಂತೆ ನಿರ್ದೇಶನ ನೀಡಿದೆ. ವೇಗ ನಿಯಂತ್ರಕ ಕಾಯ್ದೆಯನ್ನು ಜಾರಿಗೆ ತಂದ್ರೂ ನಾಡಿನ ಬೆಳವಣಿಗೆಗೆ ಇದರಿಂದ ಹೊಡೆತ ಬೀಳದ ಹಾಗೆ ಎಚ್ಚರಿಕೆಯಿಂದ ನಡೆದುಕೊಳ್ಳೋ ಜವಾಬ್ದಾರಿ ಈಗ ನಮ್ಮ ರಾಜ್ಯ ಸರ್ಕಾರದ ಮೇಲಿದೆ.

ವೇಗ ನಿಯಂತ್ರಣ - ಕೇಂದ್ರ ಸರ್ಕಾರದ ಮೋಟಾರು ಕಾಯ್ದೆ

ರಸ್ತೆ ಸುರಕ್ಷತೆ ಕಾಪಾಡಲು ಕೇಂದ್ರ ಮೋಟಾರು ವಾಹನ ನಿಯಮ (ಸಂಖ್ಯೆ 118) ರ ಪ್ರಕಾರ ದೇಶದ ಪ್ರತಿ ರಾಜ್ಯ ಸರ್ಕಾರವು ತನ್ನ ವ್ಯಾಪ್ತಿಯಲ್ಲಿ ನೋಂದಣಿ ಹೊಂದುವ/ ಹೊಂದಿರುವ ಪ್ರತಿಯೊಂದು ಸಮೂಹ ಸಾರಿಗೆ ವಾಹನದಲ್ಲಿ ವೇಗ ನಿಯಂತ್ರಕವನ್ನು ಅಳವಡಿಸುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು:
Rule 118 makes it mandatory that the speed limit of motor vehicles is enforced manually by way of speed governors. It states that the State Government had to ensure that speed governors were installed in all commercial vehicles within its limits
ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಇಂತಹ ವೇಗಮಿತಿ ಅಗತ್ಯವಿದೆ ಅಂತನ್ನೋ ಕೇಂದ್ರದ ಯೋಚನೆ ಅಪಘಾತಗಳನ್ನು ತಡೆಯಲು ಸಫಲವಾಗಲಿದೆ. ಇಂಥಹ ಒಳ್ಳೇ ಉದ್ದೇಶದ ಯೋಜನೆ ಜಾರಿಗೆ ಬರೋದ್ರಿಂದ ನಮ್ಮ ಏಳಿಗೆಗೆ ಹೇಗೆ ಹೊಡೆತ ಬಿದ್ದೀತು ಅಂತೀರಾ? ಇರ್ಲಿ, ಮೊದಲು ಈ ಸ್ಪೀಡ್ ಗವರ್ನರ್ ಅಂದ್ರೇನು ಅಂತ ಒಸಿ ನೋಡ್ಮಾ.

ಏನಿದು ಸ್ಪೀಡ್-ಗೌರ್ನರ್ ಅಂದ್ರೆ?

ಈ ನಿಯಮವನ್ನು ಕಾರ್ಯರೂಪಕ್ಕೆ ತರಲು ಒಂದು ಹೊಸ ಬಗೆಯ ವಿದ್ಯುತ್-ಚಾಲಿತ ವೇಗ ನಿಯಂತ್ರಕವನ್ನು ಅಳವಡಿಸುವ ಯೋಚನೆ ಇದೆ. ಈ ಯಂತ್ರ ವಾಹನದ ವೇಗವನ್ನು ಒಂದು ನಿರ್ದಿಷ್ಟ ಮಿತಿಯನ್ನು ಮೀರಲು ಬಿಡಲ್ಲ. ಆ ಮಿತಿಯನ್ನು ಮೀರಲು ಪ್ರಯತ್ನ ಮಾಡಿದರೂ ಕೂಡ ಈ ಯಂತ್ರ ಇಂಜಿನ್‍ಗೆ ಇನ್ನು ಹೆಚ್ಚು ಇಂಧನ ಪೂರೈಕೆಯಾಗದಂತೆ ನೋಡಿಕೊಳ್ಳತ್ತೆ. ಇದರಿಂದ ವಾಹನ ಇನ್ನು ಹೆಚ್ಚು ವೇಗದಿಂದ ಚಲಿಸಲು ಅಸಾಧ್ಯವಾಗತ್ತೆ. ನಮ್ಮ ಈ ಸಂದರ್ಭದಲ್ಲಿ ಇಡಲಾಗಿರುವ ಈ ವೇಗದ ಮಿತಿ ಗಂಟೆಗೆ ೬೦ ಕಿ.ಮೀ ಆಗಿದೆ.

ಯಾಕೆ ಇದು ಕರ್ನಾಟಕದ ಏಳಿಗೆಗೆ ಹೊಡೆತ ಕೊಡುತ್ತೆ?

ಪಕ್ಕದ ತಮಿಳುನಾಡು ಸರ್ಕಾರ ಇಂಥಾ ಕಾಯ್ದೆ ಜಾರಿಗೆ ತರಕ್ಕೆ ಯಾವ ಕ್ರಮ ತೊಗೋತಿಲ್ಲಾ ಅಂತ ಅಲ್ಲಿ ನ್ಯಾಯಾಲಯದಲ್ಲಿ ದಾವೆ ನಡೀತಿದೆ. ಕರ್ನಾಟಕ ಬಿಟ್ಟು ಬೇರೆ ಅನೇಕ ರಾಜ್ಯಗಳಲ್ಲಿ ಇದು ಇನ್ನೂ ಯೋಜನೆಯ ಹಂತದಲ್ಲೇ ಇದೆ. ಇದರರ್ಥ ಕರ್ನಾಟಕದ ಗಾಡಿಗಳಿಗೆ ವೇಗ ನಿಯಂತ್ರಕ ಬೇಗ ಹಾಕಲಾಗುತ್ತೆ ಮತ್ತು ಬೇರೆ ರಾಜ್ಯಗಳಲ್ಲಿ ಇದು ಜಾರಿಯಾಗೋಕೆ ಸಾಕಷ್ಟು ಸಮಯದ ಅಂತರ ಉಂಟಾಗುತ್ತೆ. ಮೊದಲಿಗೆ ನಮ್ಮಲ್ಲಿ ಈ ಕಾಯ್ದೆ ಜಾರಿಗೆ ಬಂದು ಬೇರೆ ಕಡೆ ಬರೋದು ತಡ ಆದ್ರೆ ಏನಾಗುತ್ತಪ್ಪಾ ಅಂದ್ರೆ ಬರೀ ಕರ್ನಾಟಕದ ಗಾಡಿಗಳಿಗಲ್ಲ, ನಾಡಿನ ಏಳಿಗೆಗೇ ಇದು ಬ್ರೇಕ್ ಹಾಕಿಬಿಡುತ್ತೆ ಗುರು. ಹೇಗಂತೀರಾ? ಈ ಉದಾಹರಣೆಗಳನ್ನು ನೋಡಿ.

ಒಂದು ಸರಕು ಸಾಗಣೆ ವಾಹನ ’ವೇಗ ನಿಯಂತ್ರಕ’ ಇದ್ದಾಗ ಇಲ್ಲಿಂದ ದಿಲ್ಲಿಗೆ ಹೋಗಕ್ಕೆ ಒಂದು ವಾರ ತೆಗೆದುಕೊಳ್ಳುತ್ತೆ ಅಂತಲೂ ವೇಗ ನಿಯಂತ್ರಕ ಇಲ್ಲದ ಗಾಡಿ ನಾಕು ದಿನ ತೊಗೊಳ್ಳುತ್ತೆ ಅಂತಲೂ ಅಂದುಕೊಳ್ಳೋಣ. ಆಗ ಸಾಗಣೆ ಮಾಡುವವರು ಯಾವ ಗಾಡಿಯನ್ನು ಆರಿಸಿಕೊಳ್ತಾರೆ ಹೇಳಿ.

ಬೆಂಗಳೂರಿಂದ ಚೆನ್ನೈಗೆ ಹೋಗೋ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ವೇಗ ನಿಯಂತ್ರಕ ಹಾಕಿಸಿಕೊಂಡು ಎಂಟು ಗಂಟೆ ತೊಗೊಳ್ಳುತ್ತೆ, ಅದಿಲ್ಲದೇ ಇರೋ ತಮಿಳುನಾಡಿನ ಬಸ್ಸು ಬರೀ ಆರು ಗಂಟೆ ತೊಗೊಳ್ಳುತ್ತೆ ಅಂದರೆ ನಾವೂ ನೀವೂ ಯಾವ ಬಸ್ಸಲ್ಲಿ ಹೋಗ್ತೀವಿ? ಹೇಳಿ. ವೇಗ ನಿಯಂತ್ರಕಗಳಿರೋ ಕರ್ನಾಟಕದ ವಾಹನಗಳ ಬೇಡಿಕೆ ಬಿದ್ದು ಹೋಗುತ್ತೆ ಅಷ್ಟೆ. ಹೀಗಾಗೋದ್ರಿಂದ ಕರ್ನಾಟಕದಲ್ಲಿ ನೋಂದಣಿಯಾಗೋ ವಾಹನಗಳಿಗೆ ಬೇಡಿಕೆ ಇಳಿದು ನಮ್ಮ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತೆ.

ಎಲ್ಲ ಕಡೆ ಒಟ್ಗೆ ಜಾರಿಯಾಗ್ದಿದ್ರೆ ಕಾಯ್ದೆಯ ಉದ್ದೇಶವೇ ಈಡೇರೋಲ್ಲ!

ನಮ್ಮ ನಾಡಿನ ಲಾರಿಗಳೆಲ್ಲಾ ೬೦ ಕಿಮೀಗಿಂತ ಕಡಿಮೆ ವೇಗದಲ್ಲಿ ಚಲಿಸ್ತಿರಲಿ, ಆದರೆ ಅದೇ ರಸ್ತೆಯಲ್ಲಿ ಪಕ್ಕದಲ್ಲೇ ಚಲಿಸುತ್ತಿರೋ ಹೊರರಾಜ್ಯದ ಲಾರಿಗಳು ಇದಕ್ಕಿಂತ ವೇಗವಾಗಿ ಚಲಿಸಿದರೂ ಪರ್ವಾಗಿಲ್ಲ ಅನ್ನೋದು ಎಷ್ಟು ಸರಿ. ಇಷ್ಟರಮೇಲೆ ನಮ್ಮೂರ ಎಲ್ಲಾ ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಹಾಕಿದ್ವಿ ಅಂತಲೇ ಇಟ್ಕೊಳ್ಳಿ, ವೇಗ ನಿಯಂತ್ರಕಗಳಿಲ್ಲದ ಬೇರೆ ರಾಜ್ಯಗಳ ವಾಹನಗಳು ನಮ್ಮ ರಾಜ್ಯದ ಬೀದಿಗಳಲ್ಲಿ ಓಡಾಡ್ತಿದ್ರೆ ನಮ್ಮೂರಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸಿದ ಹಾಗೆ ಆಗಲ್ಲ ಅಲ್ವೇ. ಹೀಗೆ ರಸ್ತೆ ಸುರಕ್ಷತೆ ಎನ್ನುವ ಮೂಲ ಉದ್ದೇಶವೇ ಈಡೇರಲ್ಲ ಅಲ್ವಾ ಗುರು? ಇಲ್ಲಾ ಮೊದಲು ಇಲ್ಲಿ ಜಾರಿ ಆಗ್ಲಿ, ಉಳಿದ ಕಡೆ ಇಂದಲ್ದಿದ್ರೆ ನಾಳೆ ಜಾರಿ ಆಗುತ್ತೆ ಅನ್ನೋದಾದ್ರೆ ಆ ನಾಳೆಗೂ ಇಂದಿಗೂ ನಡುವೆ ಇರೋ ಅಂತರದಿಂದಾಗಿ ಸಾರಿಗೆ ವಹಿವಾಟಿನಲ್ಲಿ ಆಗೋ ನಷ್ಟಕ್ಕೆ ಕನ್ನಡ ನಾಡೇ ಯಾಕೆ ಮೊದಲು ಬಲಿಯಾಗಬೇಕು.

ರಸ್ತೆ - ಸುರಕ್ಷತೆ ಬೇಕು ಅಂದ್ರೆ ವ್ಯವಸ್ಥೆ ಹೇಗಿರ್ಬೇಕು?

ನಿಜವಾಗ್ಲೂ ರಸ್ತೆ ಮೇಲೆ ಸುರಕ್ಷತೆ ಕಾಪಾಡ್ಬೇಕು, ಮತ್ತದಕ್ಕೆ ಈ ವೇಗ ನಿಯಂತ್ರಕ ಸಹಾಯ ಮಾಡ್ಬೇಕು ಅಂದ್ರೆ ಈ ನಿಯಮ ಎಲ್ಲ ರಾಜ್ಯಗಳಲ್ಲಿ ಒಮ್ಮೆಲೇ ಜಾರಿಗೆ ಬರಬೇಕು. ಇದಕ್ಕೆ ಬೇಕಾದ ಕ್ರಮಗಳನ್ನು ಎಲ್ಲ ರಾಜ್ಯಗಳೂ ಕೂತು ಚರ್ಚಿಸಿ ತೊಗೋಬೇಕು. ಅದೆಲ್ಲಾ ಆಗೋತಂಕಾ ನ್ಯಾಯಾಲಯದ ಆದೇಶಾನ ಜಾರಿ ಮಾಡ್ದೆ ಇರಕ್ ಆಗಲ್ಲಾ ಅಂದ್ರೆ ಆದೇಶಾನ ಜಾರಿಗೆ ತರುವುದರ ಜೊತೆಜೊತೆಯೇ ಕರ್ನಾಟಕ ರಾಜ್ಯ ಸರ್ಕಾರ ಇನ್ನು ಮುಂದೆ ವೇಗ ನಿಯಂತ್ರಣ ಇಲ್ಲದ ಯಾವುದೇ ರಾಜ್ಯಗಳ ವಾಹನವನ್ನೂ ಕರ್ನಾಟಕದಲ್ಲಿ ಓಡಾಡೋಕ್ಕೆ ಬಿಡಲ್ಲ ಅನ್ನೋ ಹೊಸ ಕಾಯ್ದೇನ ಮಾಡಿ ಅದನ್ನೂ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಆಂಧ್ರದ, ತಮಿಳುನಾಡು ಸೇರಿದಂತೆ ಎಲ್ಲ ಹೊರರಾಜ್ಯಗಳ ಬಸ್ಸುಗಳೂ, ಲಾರಿಗಳೂ ಸೇರಿದಂತೆ ಎಲ್ಲಾ ಸಮೂಹ ಸಾರಿಗೆ ವಾಹನಗಳು, ಆದೇಶದಲ್ಲಿ ಸೂಚಿಸಿರೋ ಮಿತಿಗೆ ವೇಗ ನಿಯಂತ್ರಣ ಹಾಕಿಸ್ಕೊಂಡು ಬಂದ್ರೆ ಮಾತ್ರಾ ಕನ್ನಡ ನಾಡನ್ನು ಪ್ರವೇಶ ಮಾಡಬಹುದು. ಇಲ್ದಿದ್ರೆ ಇವುಗಳಿಗೆ ಪ್ರವೇಶವಿಲ್ಲಾ ಅಂತ ಮಾಡುದ್ರೆ ಮಾತ್ರಾ ನಮ್ಮ ನಾಡಲ್ಲಿರೋ ಸಾರಿಗೆ ಸಂಸ್ಥೆಗಳು ಉಳಿದಾವು. ಇಲ್ಲಾಂದ್ರೆ ಬರೀ ಒಂದು ವರ್ಷದಲ್ಲಿ ಎಲ್ಲಾ ಕಣ್ಮುಚ್ಕೋಬೇಕಾದೀತು, ಅಲ್ವಾ ಗುರು?

8 ಅನಿಸಿಕೆಗಳು:

Anonymous ಅಂತಾರೆ...

sir,,
wonderful !!

idu suddi antha yeshto janakke ansiroku sadhyailla ,, antha ondu suddi li , namma janarige anyaya aago ondu amsha idey annodanna yeshtu sogasagi heLiddira,, hats off guru!!

Anonymous ಅಂತಾರೆ...

absolutely right! idrindaane namma transport jana protest maadiddu. ide court navaru TN ge yaake cheemari haakalla?
adella bidi.. speed governer haako badlu, transport infrastrcuture develop madbeku. for ex, bengalooru mysooru 4 way ella halli hagu pattanada moolaka pass agutte.. yaava educated nan maga ee tara plan madtane. ellellu ooru idyo alli byepass kottu, orrigo hogodakke exit kodbeku. namma lorry galu first of all 40 kmph hogokagolla, ashtu load hakirtane,.. max load bere rule ide.. adanna check madtara? idella bittu, eno speed governer anta useless device yake hakbeku?
hagadre vehicles produce madbekadrene powerful vehicles madbardu anta rule tarli:)! kunilarada soole nela donku anda haage.. roads kodo badlu slow hogu anta rule!! it happens only here.. enta comedy??? :)
lakki

Prashanth Urala. G ಅಂತಾರೆ...

ನಿಮ್ಮ ಬರಹ ನಿಜಕ್ಕೂ ಸತ್ಯವಾದದ್ದು. ನಮ್ಮ ಏಳ್ಗೆಗೆ ನಾವೇ ಕಡಿವಾಣ ಹಾಕಿಕೊಳ್ಳೋದು ಏಷ್ಟು ಸಮಂಜಸ ????

ಸರಕಾರದಲ್ಲಿ ಕೆಲಸ ಮಾಡೋ ರಾಜಕಾರಣಿಗಳಿಗೆ ಈ ಆಲೋಚನೆ ಬರಲಿಲ್ಲವೇ ??? ಅಥವಾ ಇದು ಅವರ ಹೊಟ್ಟೆಯೆಂಬ ಗುಡಾಣವನ್ನ ಮತ್ತೋಂದಷ್ಟು ದಪ್ಪ ಮಾಡಿಕೊಳ್ಳೋ ಯೋಜನೆಯೋ ??? ಇದು ಒಟ್ಟಿನಲ್ಲಿ ನಮ್ಮ ಪ್ರಗತಿಗೆ ಹಾಕೋ ಬ್ರೇಕ್, ಮತ್ತೆ ಟ್ರಾಫಿಕ್ ಪೋಲೀಸರಿಗೆ, ಪುಢಾರಿಗಳಿಗೆ ಹಣತಿನ್ನುವ ಮತ್ತೊಂದು ಮಾರ್ಗವಾಗೋದು ಖಂಡಿತ.

Anonymous ಅಂತಾರೆ...

ಸಮಸ್ಯೆಗೆ ಪರಿಹಾರ ಹುಡುಕುವುದಕ್ಕಿಂತ ಮೊದಲು ಸಮಸ್ಯೆಯ ಮೂಲವನ್ನು ಹುಡುಕಬೇಕು. "ವೇಗ ನಿಯಂತ್ರಕ" ಒಂದು ಮೂರ್ಖತನದ ಕೆಲಸ. ಮಾಡಲೇ ಬೇಕು ಎಂದಾದರ ಆಯಾ ವಾಹನಗಳ ಕಂಪನಿಗಳಿಗೆ "ವೇಗ ನಿಯಂತ್ರಕ" ಅಳವಡಿಸುವಂತೆ ಸೂಚಿಸಲಿ. ಒಬ್ಬರಿಗೊಂದು ಇನ್ನೊಬ್ಬರಿಗೊಂದು ಕಾನೂನು ಯಾಕೆ? ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲಾ ವಾಹನಗಳು 60ರ ಮಿತಿಯಲ್ಲಿರಲಿ. ಇದರಲ್ಲಿ ಮಂತ್ರಿಗಳ ಇಂಪೋರ್ಟೆಡ್ ಕಾರುಗಳೂ ಇರಲಿ.
ನುಣುಪಾದ ಹೆದ್ದಾರಿಗಳನ್ನು ನಿರ್ಮಿಸಿ, 60 ಕಿ.ಮಿ. ಮೀರಬೇಡ ಎನ್ನುವುದು ಸಕ್ಕರೆ ಖಾಯಿಲೆಯವರ ಮುಂದೆ ಸಿಹಿತಿಂಡಿಗಳ ರಾಶಿಯನ್ನು ಇಟ್ಟು ತಿನ್ನಬೇಡ ಎಂದಂತೆ.

Anonymous ಅಂತಾರೆ...

ಗಿರೀಶ್ ಅವ್ರೇ.. ಇಲ್ಲಿ ಸಕ್ಕರೆ ಖಾಯಿಲೆಯಿರುವ ಇಬ್ಬರ ಬಗ್ಗೆ ಮಾತಿದೆ.. ಅದ್ರಲ್ಲಿ ಒಬ್ಬ ರೋಗಿಗೆ ಬೆಲ್ಲದಚ್ಚು ನೀಡಿ, ಇನ್ನೊಬ್ಬ ರೋಗಿಗೆ ಬೇವುಂಡಿಸಿದಹಾಗಿದೆ ಈ ಪರಿಸ್ಥಿತಿ. ಆದರೆ ಈ ವಾದದಲ್ಲೂ ಒಂದು ಅರ್ಥ-ವಿಪರ್ಯಾಸ ಇದೆ. ಸಕ್ಕರೆ ಖಾಯಿಲೆಯಿರೋರಿಗೆ ಬೇಕುಂಡಿಸಿದರೆ ಒಳ್ಳೇದೇನೋ ಆಗ್ಬೋದು ಅಂತ. ಆದ್ರೆ ಬೆಣ್ಣೆ-ಸುಣ್ಣದ ಇಂತಹ ಲೆಕ್ಕಾಚಾರ ಸರಿಯಲ್ಲ ಅನ್ನೋದನ್ನ ಇಲ್ಲಿ ಕಾಣ್ಬೇಕು. ಏನಂತೀರ?
ಕೇಂದ್ರ ಸರ್ಖಾರ ನಿಜವಾಗ್ಲೂ ಸುರಕ್ಷತೆ ಕಾಪಾಡಲು ಪ್ರತಿಯೊಂದು ರಾಜ್ಯಕ್ಕೂ ಇದು ಒಮ್ಮೆಲೆ ಅನ್ವಯ ಮಾಡಿಸಬೇಕು.

Anonymous ಅಂತಾರೆ...

ನಿಮ್ಮ ಮಾತು ಸರಿಯಾಗೇ ಇದೆ... ನನ್ನ ಬ್ಲಾಗಲ್ಲಿ ಈ ವಿಷಯದ ಬಗ್ಗೆ ಇನ್ನಷ್ಟು ಬರೆದಿದ್ದೇನೆ...

www.enidhi.net/2008/03/karnataka-truckers-strike-speed.html

Anonymous ಅಂತಾರೆ...

En guru jana saamanyaru maamul vishya ankollo suddina neevu KANNADAda KANNADAKAdalli nodi namage adarallina apayagalannu thilisuthiralla nimage vandanegalu-bmys

Dr Dayananda Mruthyunjayappa ಅಂತಾರೆ...

I understand the importance of speed governors.. If one dies due to overspeeding thats the end. He can never come back. If one is alive he can drive hundred times to Delhi.
The good idea of controlling the speed is not installing speed governors in the vehicles. Just implement the traffic rules effectively. Install the speed limit boards over road sides and install the electronic speed governors and cameras. Send hefty fines to over speeders. If they do not pay the fines, summon them to court. If they are arrogant enough not to come to the court cancel their Driving Licence.
This way people are also educated and creates awareness.
Even if the vehicles come from other states they have to follow the same traffic rules. You do not have to worry about going slow in national highways in comparison to other state vehicles. Gives equal opportunity to all.
So that this does not affect the development and opportunity of our state.. Olle Idea alva guru!!
I know this is not new.. Its being followed in western countries for a long time. Why not use the good things like this for our own good?!!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails