ಘಜನಿ ದಾಳಿ ಹಿಮ್ಮೆಟ್ಟಲಿ!

ಹಿಂದಿ ಚಿತ್ರಗಳಿಂದ ದೊರಕುವ ಮನರಂಜನೆ ಕನ್ನಡದ ಚಿತ್ರಗಳಿಗಿಂತ ಹೆಚ್ಚಿನದೇನಲ್ಲ ಎನ್ನುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಹಿಂದಿ ಚಿತ್ರಗಳನ್ನು ನೋಡುವುದರಿಂದ ನಾಡಿನಲ್ಲಿ ಹಿಂದಿ ಹೇರಿಕೆಗೆ ನಾವೇ ಮಣೆ ಹಾಕಿದಂತಾಗುತ್ತದೆ, ಹಿಂದಿಯವರು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕನ್ನಡಿಗರನ್ನು ತುಳಿಯಲು ಸುಲಭ ಮಾಡಿಕೊಟ್ಟಂತಾಗುತ್ತದೆ. ಈ ಮೂಲಕ ನಮ್ಮ ನಾಡಿಗೆ ನಾವೇ ದ್ರೋಹಬಗೆದಂತಾಗುತ್ತದೆ. ಆದ್ದರಿಂದ...

ಸ್ವಾಭಿಮಾನಿ ಕನ್ನಡಿಗರೇ! ಈ "ಘಜನಿ" ಚಿತ್ರವೇ ಮೊದಲಾಗಿ ಯಾವ ಹಿಂದಿ ಚಿತ್ರವನ್ನೂ ನೀವು ನೋಡುವುದಿಲ್ಲವೆಂದು ಆಣೆ ಮಾಡಿ! ನಿಮ್ಮ ಗೆಳೆಯರಿಗೂ ನೋಡಬೇಡಿರೆಂದು ಜಾಗೃತಿ ಮೂಡಿಸುತ್ತೀರೆಂದು ಆಣೆ ಮಾಡಿ!
ಇದೇ ತಿಂಗಳ 25ರಂದು ಹೊಸ ಹಿಂದಿ ಸಿನಿಮಾ "ಘಜನಿ" ನಿಯಮ ಮೀರಿ ಬಿಡುಗಡೆಯಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಚಲನ ಚಿತ್ರ ಹಂಚಿಕೆದಾರರು ಮತ್ತು ಪ್ರದರ್ಶಕರ ಜೊತೆ ಆಗಿದ್ದ ಒಡಂಬಡಿಕೆಯನ್ನು ಮುರಿದದ್ದಕ್ಕೆ ತುರ್ತು ಸಭೆ ಕರ್ದು ಮುಂದಿನ ವಾರದಿಂದ ಈ ಚಿತ್ರ ಪ್ರದರ್ಶನಾನ ಹಿಂದೆ ಒಪ್ಪಿದ ಹಾಗೆ ಒಪ್ಪಿದಷ್ಟು ಟಾಕೀಸಲ್ಲಿ ಓಡುಸ್ಬೇಕು ಅನ್ನೋ ಮಾತುಕತೆ ನಡೆದ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ ಗುರು!

ಮನರಂಜನೆ ರೂಪದ ಸಾಂಸ್ಕೃತಿಕ ದಾಳಿ!

ನಮ್ಮ ನಾಡಿನ ಉದ್ದಿಮೆ, ಭಾಷೆ, ಸಂಸ್ಕೃತಿಗಳನ್ನೆಲ್ಲಾ ಕಾಪಾಡಿಕೊಳ್ಳೋ ಮೂಲಭೂತ ಹಕ್ಕು ನಮಗಿದ್ದೇ ಇದೆ. ಇಂಥಾ ಹಕ್ಕನ್ನು ಮೊಟಕು ಮಾಡೋ ಪ್ರಯತ್ನಾನೆ ಈ ರೀತಿ ಎಗ್ಗು ಸಿಗ್ಗಿಲ್ಲದೆ ಬೇರೆ ಭಾಷೆ ಚಿತ್ರಾನ ನಮ್ಮೂರುಗಳಲ್ಲಿ ಬಿಡುಗಡೆ ಮಾಡೋದು. "ಇದು ಭಾರತ, ಯಾರು ಎಲ್ಲಿ ಬೇಕಾದರೂ ತಮ್ಮ ಸಿನಿಮಾನ ಬಿಡುಗಡೆ ಮಾಡ್ಬೋದು" ಅಂತ ಕಥೆ ಹೊಡೆಯೋರು ಅರ್ಥ ಮಾಡ್ಕೊಬೇಕಾದ್ದು ಏನಪ್ಪಾ ಅಂದ್ರೆ ಒಬ್ಬರ ಸಿನಿಮಾ ಬಿಡುಗಡೆ ಮಾಡೊ ಹಕ್ಕು ಒಂದು ಇಡೀ ಪ್ರದೇಶದ ನುಡಿ, ಸಂಸ್ಕೃತಿ ಮತ್ತು ಉದ್ದಿಮೆ, ಉದ್ಯೋಗಗಳ ಅಸ್ತಿತ್ವಕ್ಕೇ ಕೊಡಲಿ ಕಾವಾಗಿದ್ರೆ ಆ ಪ್ರದೇಶದ ಜನತೆ ಹೇಗೆ ಸುಮ್ಮನಿರಕ್ಕಾಗುತ್ತೆ? ಅನ್ನೋದು. ಹಲವು ಹತ್ತು ವರ್ಷಗಳ ಹಿಂದೆ ಭಾರತೀಯ ಚಿತ್ರರಂಗ ಅಂದ್ರೆ ತಮಿಳು, ತೆಲುಗು, ಮಲಯಾಳಂ, ಕನ್ನಡ, ತುಳು, ಮರಾಠಿ, ಗುಜರಾತಿ, ಅಸ್ಸಾಮಿ, ಒಡಿಯಾ, ಪಂಜಾಬಿ, ಕಾಶ್ಮೀರಿ, ಭೋಜಪುರಿ ಮೊದಲಾದ ಚಿತ್ರರಂಗಗಳಿಂದ ಸಮೃದ್ಧವಾಗಿತ್ತು. ಅಂದ್ರೆ ಆಯಾ ಪ್ರದೇಶಗಳ ಚಲನಚಿತ್ರ ಉದ್ಯಮ, ಅದರಿಂದ ಹುಟ್ಟಿಕೊಳ್ಳೋ ಉದ್ಯೋಗಗಳೂ ಸಮೃದ್ಧವಾಗಿದ್ದವು. ನಿಧಾನವಾಗಿ ಒಂದೊಂದೇ ಚಿತ್ರರಂಗಗಳನ್ನು ನುಂಗಿ ನೀರು ಕುಡಿಯುತ್ತಾ ಹಿಂದಿ ಚಿತ್ರರಂಗ ಉಳಿದವುಗಳ ಸರ್ವನಾಶ ಮಾಡಿದ್ದು ಇವತ್ತಿನ ದಿನ ಕಾಣ್ತಿದೆ. ಇವತ್ತು ಈ ಹಿಂದಿ ಮನರಂಜನೆಯೆಂಬ ಪೆಡಂಭೂತಕ್ಕೆ ಇನ್ನೂ ಪೂರ್ತಿ ಬಲಿಯಾಗದೇ ಇರೋ ಚಿತ್ರರಂಗಗಳು ಅಂದ್ರೆ ಬಹುಷಃ ಕನ್ನಡ, ತೆಲುಗು. ತಮಿಳು, ತುಳು ಮತ್ತು ಮಲಯಾಳಂಗಳು ಮಾತ್ರಾ. ಈ ಹಿನ್ನೆಲೆಯಲ್ಲಿ ನೋಡುದ್ರೆ ಈ ಭೂತದ ಮುಂದಿನ ಗುರಿಯೂ ತೆಲುಗು ಮತ್ತು ಕನ್ನಡ ಚಿತ್ರರಂಗಗಳೇ ಅನ್ನೋದೂ ತಿಳಿಯುತ್ತೆ. ಒಟ್ಟಾರೆ ಇದು ಸಿನಿಮಾ ಮೂಲಕ ಒಂದು ನಾಡಿನ ಅಭಿರುಚಿಯನ್ನೇ ಬದಲಾಯಿಸೋ, ಒಂದು ಜನರ ತಮ್ಮ ಭಾಷೆಯಲ್ಲೇ ಮನರಂಜನೆಯನ್ನು ಪಡೆದುಕೊಳ್ಳುವ ಉದ್ದಿಮೆಯನ್ನು ಕೊನೆಗೊಳಿಸೋ ಸಾಂಸ್ಕೃತಿಕ ದಾಳಿ ಆಗುತ್ತೆ ಗುರು!

ಮನರಂಜನೆಯ ರೂಪದ ಸಿಹಿ ವಿಷ
ಮೇಲುನೋಟಕ್ಕೆ ಇದು ಒಂದು ಭಾಷೆಯ ಸಿನಿಮಾ ಬಿಡುಗಡೆಯೆಂಬ ಸಣ್ಣ ವಿಷಯಕ್ಕೆ, ಭಾರತದ ಸಂವಿಧಾನ ಕೊಡಮಾಡಿರೋ ಹಕ್ಕಿನ ಪ್ರತಿಪಾದನೆಯಂತೆ ಕಂಡರೂ ಈ ದಾಳಿಯ ಪರಿಣಾಮ ಘೋರವಾಗಿದೆ. ಅದಕ್ಕೆ ಉದಾಹರಣೆ ಮುಂಬೈ ಮತ್ತು ಮಹಾರಾಷ್ಟ್ರದ ಇಂದಿನ ಸ್ಥಿತಿ. ಮನರಂಜನೆಯ ರೂಪದ ಈ ದಾಳಿ ಹಿಂದಿ ವಸಾಹತಿನ ಸ್ಥಾಪನೆಗೆ ಭದ್ರ ಬುನಾದಿ. ಈ ಮೂಲಕ ಕನ್ನಡಿಗರಿಗೆ ಹಿಂದಿ ಕಲಿಸೋದು, ಹಿಂದಿ ನಾಡಿನಿಂದ ಇಲ್ಲಿ ಬರೋ ವಲಸಿಗರಿಗೆ ಅತ್ಯಂತ ಅನುಕೂಲಕರ ವಾತಾವರಣ ಕಟ್ಟಿ ಕೊಡತ್ತೆ. ಈ ಮೂಲಕ ನಮ್ಮ ನಾಡಿನಲ್ಲೇ ನಮ್ಮ ನುಡಿಯ ಸಾರ್ವಭೌಮತ್ವವನ್ನು ಅಳಿಸುತ್ತಾ ಹೋಗುತ್ತೆ. ಇದರ ಮೂಲಕವೇ ನಮ್ಮೂರಿನ ಅಂಗಡಿ ಮುಂಗಟ್ಟುಗಳ ವ್ಯವಹಾರ ಭಾಷೆಯಾಗಿ ಹಿಂದಿಯೂ ಆರಂಭವಾಗುತ್ತೆ. ಇಲ್ಲೆಲ್ಲಾ ಕನ್ನಡಿಗರಿಗೆ ಕೆಲಸ ಬೇಕು ಅಂದ್ರೆ ತಮ್ಮದಲ್ಲದ ನುಡಿಯಾದ ಹಿಂದಿಯನ್ನು ಕಲಿತಿರಲೇಬೇಕಾದ ಅನಿವಾರ್ಯತೇನ ಹುಟ್ಟುಹಾಕುತ್ತೆ. ಕಡೆಗೆ ಮಾರುಕಟ್ಟೇಲಿ ಮೆರೀಬೇಕಾದ ಕನ್ನಡ ಅಡಿಗೆಮನೆಗೆ ಮೀಸಲಾಗುತ್ತೆ.. ಅಷ್ಟೆ.

ವಾಣಿಜ್ಯ ಮಂಡಳಿಯ ನಿಲುವನ್ನು ಬೆಂಬಲಿಸೋಣ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖ್ಯಸ್ಥರಾಗಿರೋ ಶ್ರೀಮತಿ ಜಯಮಾಲ ಅವರ ನೇತೃತ್ವದ ಮಂಡಲಿ ಇವತ್ತು ಸಭೆ ಕರೆದು ತೆಗೆದುಕೊಂಡಿರೋ ನಿರ್ಧಾರ ಯಾವ್ದೇ ಕಾರಣಕ್ಕೂ ಜಾರಿಯಾಗದೇ ಇರಬಾರದು. ಇಡೀ ಕನ್ನಡ ಚಲನ ಚಿತ್ರರಂಗ ಈ ದಿಕ್ಕಲ್ಲಿ ಒಟ್ಟಾಗಿ ಕೆಲಸಮಾಡಲಿ ಅಂತ ಹಾರೈಸೋಣ. ಇವತ್ತು ಘಜಿನಿ ಸಿನಿಮಾ ಅರವತ್ತು ಕಡೆ ಬಿಡುಗಡೆ ಆಗಿ ಒಂದು ವಾರ ಓಡಕ್ಕೆ ಅವಕಾಶ ಕೊಟ್ಟಿರೋ ಅಂತಹ ಘಟನೆಗಳೂ ಮರುಕಳಿಸಬಾರದು. ನಮ್ಮ ಮನರಂಜನೆ, ನಮ್ಮ ಉದ್ಯಮಗಳನ್ನು ಕಾಪಾಡಿಕೊಳ್ಳೋದು ನಮ್ಮ ಹಕ್ಕು ಅನ್ನೋದನ್ನು ಸರ್ಕಾರಗಳು ಮರೀಬಾರ್ದು ಗುರು!

ಕೊನೆಹನಿ : ಒಂದು ದೊಡ್ಡ ಕೆರೆ ಕಟ್ಟಿ ಅಲ್ಲಿ ನೂರಾರು ಥರದ ಮೀನುಗಳನ್ನಿಟ್ಟು ಯಾವ್ದು ಯಾವ್ದುನಾದ್ರೂ ತಿನ್ನಬಹುದು ಅಂದ್ರೆ ಕಡೆಗೆ ಅಲ್ಲಿ ಉಳಿಯೋದು ಬರೀ ಶಾರ್ಕ್ ಒಂದೇ ಅಲ್ವಾ? ಎಲ್ರೂ ಸಮಾನರು, ಎಲ್ಲರನ್ನು ಕಾಪಾಡಕ್ಕೇ ಈ ಕೆರೆ ಕಟ್ಟಿದೀವಿ ಅಂತ ಯಾರಾದ್ರೂ ಬಾಯಲ್ಲಿ ಅನ್ನುತ್ತಾ ಇಂಥಾ ನುಂಗೋ ಹಕ್ಕನ್ನು ಕೊಡೋದಕೆ ಮುಂದಾದ್ರೆ ಅದು ಸಮಾನತೆ ಆದೀತಾ ಗುರು?

15 ಅನಿಸಿಕೆಗಳು:

Anonymous ಅಂತಾರೆ...

ಹಿ೦ದಿಯವರು ಸಿನಿಮಾ ಮಾಡೋದು ನಿಲ್ಲಿಸಲ್ಲ. ಹಿ೦ದಿ ಸಿನಿಮಾ ದಕ್ಷಿಣದಲ್ಲೆಲ್ಲಾ ರಿಲೀಜ್ ಮಾಡೋದು ನಿಲ್ಲಿಸಲ್ಲ. ಇದೆಲ್ಲಾ ತಿಳಿದ ನಮ್ಮ ಕುಲಗೆಟ್ಟ ಆಡಳಿತಾಧಿಕಾರಿಗಳು ನುಡಿಯನ್ನು ಉಳಿಸಿ ಡಬ್ಬಿ೦ಗ್ ಗೆ ಅವಕಾಶ ಮಾಡಿಕೊಡಿ ಅ೦ತ ಬೊಡ್ಕೊ೦ಡ್ರೂ ನಮ್ಮ ಮಾತು ಕೇಳಲ್ಲ. ಹೀಗಾಗಿ ಹಿ೦ದಿ ಎನ್ನುವ ಸುನಾಮಿ ಇವತ್ತಲ್ಲ ನಾಳೆ ಕನ್ನಡಿಗನನ್ನು ನು೦ಗಿ ನೀರು ಕುಡಿಯತ್ತೆ.

ಕಾನ್ಸೆಪ್ಟ್ ಚೆನ್ನಾಗಿದೆ, ಕಥೆ ಸಕ್ಕತ್ತಾಗಿದೆ ಎಲ್ಲಾ ಚೆನ್ನಾಗಿದೆ ಹಾಗಾಗಿ ಜನ ನೋಡ್ತಾರೆ. ಜನಕ್ಕೆ ಆಯ್ಕೆ ಕೊಟ್ಟಿದ್ದೀರ ಅದಕ್ಕೆ ಜನ ಹಿ೦ದಿನಲ್ಲಿ ನೋಡ್ತಾರೆ. ಅದು ಬಿಟ್ಟು ಕನ್ನಡದಲ್ಲೇ ಡಬ್ ಮಾಡಿ ಹಾಕಿ, ಜನ ಯಾಕೆ ನೋಡಲ್ಲ? ಡಬ್ಬಿ೦ಗ್ ಅನ್ನೊದು ಕನ್ನಡ ಚಿತ್ರರ೦ಗದ ಬಲಿ ಅ೦ದುಕೊ೦ಡರೆ, ಡಬ್ಬಿ೦ಗ್ ವಿರುದ್ಧದ ಕಾನೂನು ಕನ್ನಡವನ್ನೇ ಬಲಿ ತೆಗೆದುಕೊಳ್ಳುತ್ತಿದೆ. ಜನ ಯಾವಾಗ ಬುದ್ಧಿ ಕಲಿತಾರೋ?

Anonymous ಅಂತಾರೆ...

nanu bellige iddini anta jana hindi nalli maatadsakke shuru madidare.

Kishore ಅಂತಾರೆ...

ಇ೦ದಿನಿ೦ದ ನಾನು ಹಿ೦ದಿ ಮಾತಾಡಲ್ಲ, ಹಿ೦ದಿ ಸಿನೆಮಾ ನೋಡಲ್ಲ. ಗೆಳೆಯರಿಗೆ ಹಿ೦ದಿ ಸಿನೆಮಾದಿ೦ದ ಆಗುವ ಅನಾಹುತಗಳ ಬಗ್ಗೆ ಹೇಳುತ್ತೇನೆ.

ಹೌದು ಡಬ್ಬಿ೦ಗ್ ಅನ್ನು ಕಾನೂನನ್ನಾಗಿ ಮಾಡಿ ಎಲ್ಲ ಪರಭಾಷೆ ಚಿತ್ರಗಳನ್ನು ಕನ್ನಡದಲ್ಲೇ ಬರುವ೦ತೆ ಮಾಡಬೇಕು. ಸ೦ಭ೦ದ ಪಟ್ಟ ಅಧಿಕಾರಿಗಳ ಮೇಲೆ ಒತ್ತಡ ತರೋಣ.

Anonymous ಅಂತಾರೆ...

ಡಬ್ಬಿಂಗ್ ಗೆ ಅನುಮತಿ ಕೊಟ್ಟರೆ ಒಳ್ಳೆಯದು. ಅದಕ್ಕಿಂತ ಮುಖ್ಯವಾಗಿ ನಮ್ಮ ಚಿತ್ರರಂಗದ ಗುಣಮಟ್ಟ ಇನ್ನೂ ಹೆಚ್ಚಾಗಬೇಕು. ಹಿಂದಿ, ತೆಲುಗು ಇತರ ಚಿತ್ರರಂಗಗಳಿಗಿಂತ ಒಳ್ಳೆಯ ಚಿತ್ರಗಳು ನಮ್ಮಲ್ಲೇ ಬಂದರೆ ಜನ ಬೇರೆ ಕಡೆ ಓಡುವುದು ತಪ್ಪುತ್ತೆ.

Anonymous ಅಂತಾರೆ...

guru, ee GHAJANI film english MEMENTO chitrada remake. 2000 isaviyalli tere kandu yashasvi aada chitra.
Kannadalli NAVAGRAHA bandre ee film copy antha moogeluva janarige idu kannige bidru kaanisolla.

kannadigarige REMAKE yeno ondhtara avamana,kilarime.. adre ade HINDI chitragalannu nodi, majority release agiro filmgalu ENGLISH film inda kadda sarakugale.

kannadigaru modalu TAMIL,TELUGU and HINDI inda remake maadodhu nillisi, direct ENGLISH inda remake madabeku. ENGLISH inda Indian nativity ge madokke barolla andre kalibeku, adannu bittu bereyavaru madli, adu click adre naavu kannada film madona, illandre beda anno shandatana beda.

Anonymous ಅಂತಾರೆ...

ನಿಮ್ಮ ಮಾತು ಖರೆ ಅದ ನೋಡ್ರಿ.... ನಾ ಅಂತು ಆ ಪಿಚ್ಚರ್ ನೊದ್ಲಿಕ್ಕೇ ಹೋಗಾಂಗಿಲ್ಲಾ ಮತ್ತ ನನ್ ಗೆಳೆಯರಿಗೂ ಹೋಗ್ ಬ್ಯಾಡಾ ಅಂತ ಹೇಳ್ತಿನಿ......

ಶ್ರೀನಿ
(www.compuinkannada.co.cc)

Anonymous ಅಂತಾರೆ...

@ ಕನ್ನಡಿಗ,
ಮೊದಲು ನಮ್ಮ ಸಿನಿಮಾಗಳನ್ನ ಬೇರೆ ಭಾಷೆಯ ಸಿನಿಮಾಗಳಿಗೆ ಹೋಲಿಸುವ ಕೀಳರಿಮೆ ಕನ್ನಡಿಗರು ಬಿಡ ಬೇಕು... ಗುಣಮಟ್ಟದಲ್ಲಿ ಕನ್ನಡ ಸಿನಿಮಾ ಯಾವುದರಲ್ಲೂ ಕಮ್ಮಿ ಇಲ್ಲ.. ಲಯನ್ ಜಗಪತಿ ಅವರು ಹೇಳಿದಂಗೆ ಕನ್ನಡಿಗರು ನಮ್ಮ ಸಿನೆಮಾಗಳ ಬಗ್ಗಿ ಕೀಳಾಗಿ ಯೋಚಿಸುವುದು ಬಿಡ ಬೇಕು...ರಿಮೇಕ್ ಅನ್ನೋದು ಎಲ್ಲರೂ ಮಾಡ್ತಿದ್ದಾರೆ, ಕನ್ನಡ ಸಿನಿಮಾ ಒಂದರಲ್ಲೇ ಅಲ್ಲ ಅನ್ನೋ ಸಾಮಾನ್ಯ ಪರಿಜ್ಞಾನ ನಮ್ಮ ಕನ್ನಡಿಗರು ತಿಳಯಬೇಕು. ಕನ್ನಡೇತರ ಸಿನೆಮಾಗಳ ಕುರುಡು ವ್ಯಾಮೋಹ ಬಿಟ್ಟು, ಕನ್ನಡ ಸಿನಿಮಾಗಳನ್ನ ಪ್ರೋತ್ಸಾಹಿಸ ಬೇಕು..

ಕ್ಲಾನ್ಗೊರೌಸ್

Holalkere rangarao laxmivenkatesh ಅಂತಾರೆ...

ಮಾನ್ಯರೆ,

ನಿಮ್ಮ ಕನ್ನಡದ ಬಗ್ಗೆ ಇರುವ ಕಳಕಳಿ ಎಲ್ಲರಿಗೂ ಇದ್ದಿದ್ದರೆ, ಎಷ್ಟು ಚೆನ್ನಾಗಿತ್ತು ? ಇನ್ನು ನಾವಿರುವ ಉದಾರೀಕೃತ, ವಿಶ್ವದಲ್ಲಿ, ಈ ತರಹದ ರಾಜ್ ಠಾಕ್ರೆ ವಿಚಾರ ಧಾರೆಗೆ ಎನೇನೂ ಬೆಲೆ ಇಲ್ಲ. ನಾವು ನಮ್ಮ ಕನ್ನಡದ ಚಿತ್ರಗಳ ಕ್ವಾಲಿಟಿಯನ್ನು ಉತ್ತಮಪಡಿಸಿ, ನಮ್ಮ ಚಿತ್ರಗಳನ್ನು ಬೇರೆಯವರೂ ನೋಡಿ ಆನಂದಿಸುವ ಮಟ್ಟದಲ್ಲಿ ತಯಾರಿಕೆ ಮಾಡಿ ಎದೆಮುಂದೆಮಡಿ ನಡೆಯಬೇಕೇ ವಿನಃ, ಹಿಂದಿ ತಮಿಳರಿಗೆ, ಚಿತ್ರತೋರಿಸಲು ಸಹಕರಿಸಬೇಡಿ. ಹಿಂದಿ ಚಿತ್ರನೋಡದಿರುವುದೇ ಉತ್ತಮ. ಇವೆಲ್ಲಾ ಸರಿಯೇ. ನಿಧಾನವಾಗಿ ಯೋಚಿಸಿ ! ಇನ್ನೊಂದು ವಿಚಾರ. ನಮ್ಮ ಕನ್ನಡಿಗರು, ಒಳ್ಳೆಯ ಚಿತ್ರಮಂದಿರಗಳನ್ನು ಕಟ್ಟಿಸಿ, ಮಾಲೀಕರಾಗಿ ಬೇರೆಯವರಿಗೆ, ಇಲ್ಲಾರಿ, ನಾವು ಬೇರೆ ಚಿತ್ರಗಳಿಗೆ ನಮ್ಮ ಚಿತ್ರಮಂದಿರವನ್ನು ಬಿಟ್ಟುಕೊಡಲಾರೆವು.. ನೊ. ಸಾರಿ ಎನ್ನುವಷ್ಟು ಶಕ್ತಿಪಡೆದರೆ, ಇದು ಸಾಧ್ಯ ! ನಮ್ಮ ರಾಜ್ಕುಕುಮಾರ್ ಇಂಥ ಒಂದು ಕೆಲಸವನ್ನೂ ಮಾಡದೆ, ತಮ್ಮ ಅಗಾಧಶಕ್ತಿಯನ್ನು ಪೊಲುಮಾಡಿದರು. ಶಿವಾಜಿಗಣೇಶನ್, ಎಂಜಿಆರ್, ಶಿವಾಜಿರಾವ್ ಇವ್ರನೆಲ್ಲಾ ನೋಡಿ ? ಜಯಲಲಿತಾನೇ ನೋಡಿ ! ಹೇಗೆ ತನ್ನ ನಿಲುವುಗಳನ್ನು ಕೇಂದ್ರಸರ್ಕಾರಕ್ಕೆ, ಹಾಕ್ತಾಳೆ ! ಕರುಣಾನಿಧಿಯೇನು ಕಡಿಮೆಯೇ ? ನಮ್ಮ ದೇವೇಗೌಡ್ರು, ಏನಾದ್ರು ಮಾಡ್ಬೊದಿತ್ತು. ಮಕ್ಕಳ್ ಬಿಟ್ಟು ಅವ್ರೈಗೆ ಯಾವ್ದೂ ಕಾಣ್ಸೋದೆ ಇಲ್ವಲ್ಲಾ. ನಿಮ್ಮಂತೋರು ಹೀಗೆಲ್ಲಾ ಹೇಳಿ ಕೆಟ್ಟೊರಾಗ್ತೀರ. ಇದ್ರಿಂದ ನಿಜವಾಗ್ಲೂ ಉಪಯೋಗವಂತೂ ಇಲ್ಲ. ಇವ್ರೆ... ನಮಸ್ಕಾರ.

rajashekar kc ಅಂತಾರೆ...

ನಮ್ಮ ರಾಜ್ಯದ ರಾಜಕೀಯ ನಾಯಕರು ಏನು ಮಾಡು ತಿದಾರೆ?
ಅವರಿಗೆ ತಮ್ಮ ಮತ್ತು ಸೀಟಿನ , ತಮ್ಮ ಮಕ್ಕಳು ಬಗ್ಗೆ ವ್ಯಾಮೋಹ ಜಾಸ್ತಿ .
ಇನ್ನು ನಾಡಿನ ಬಗ್ಗೆ ಯಾವ ರಾಜಕೀಯ ವ್ಯಕ್ತಿ ಯೋಚಿಸುಥಿಧಾರೆ?
ಎಲ್ಲ ಬ್ರಷ್ಟ್ರರು!

Anonymous ಅಂತಾರೆ...

houda

Anonymous ಅಂತಾರೆ...

ಸ್ವಾಮಿ ಬಾರೋ ಓಗಾನಾ ಅವರೆ,
ರಾಜಕುಮಾರವರು ರಾಜಕೀಯಕ್ಕೆ ಬರೋದು ಬಿಡೋದು ಅವರ ವಯಕ್ತಿಕ ವಿಚಾರ, ಬಹುಷಃ ಅವರು ಕೊನೆ ವರ್ಗು ಒಬ್ಬ ಒಳ್ಳೆ ನಟನಾಗಿ ಇರಲು ಇಚ್ಛೆ ಪಟ್ಟಿರಬಹುದು, ಅವರನ್ನ ಬೇರೊಂದು ಭಾಷೆಯ ನಟ/ನಟಿಯರಿಗೆ ಹೋಲಿಸುವುದು ಎಷ್ಟು ಸಮಂಜಸ ?...ಕನ್ನಡಕ್ಕೆ/ಕನ್ನಡಿಗರಿಗೆ ಅವರ ಕಲೆ ಇಂದಲೇ ಅಪಾರ ಕೊಡಿಗೆ ನೀಡಿದ್ದಾರೆ... ಪುನಃ ನೀವು ಕನ್ನಡ ಸಿನೆಮಾಗಳ ಗುಣಮಟ್ಟ ಹೆಚ್ಚಿಸಬೇಕು ಅಂತಿರಲ್ಲ... ಈ ಕೀಳರಿಮೆ ಮೊದಲು ಕನ್ನಡಿಗರು ಬಿಡ ಬೇಕು...ಎಲ್ಲಾ ಭಾಷೆಯಲ್ಲೂ ಕೆಲವು ಕಳಪೆ ಸಿನೆಮಾಗಳು ಬಂದೆ ಬರುತ್ತೆ, ಕನ್ನಡ ಸಿನಿಮಾಗಳಿಗೆ ವೆಚ್ಚ ಮಾಡೋ ಬಂಡವಾಳ ಇತರೆ ಸಿನಿಮಾಗಳಿಗೆ ಹೋಲಿಸಿದರೆ ಬಹಳ ಕಮ್ಮಿ...ಆದರು ತಕ್ಕಮಟ್ಟಿಗೆ ತಾಂತ್ರಿಕವಾಗಿ ಒಳ್ಳೆ ಸಿನೆಮಾಗಳು ಬರುತ್ತಲೇ ಇವೆ ... ಕನ್ನಡಿಗರು ಒಳ್ಳೇದನ್ನ ಪ್ರೋತ್ಸಾಹಿಸ ಬೇಕು, ಆಗ ನೋಡಿ ಇನ್ನು ಒಳ್ಳೆ ಸಿನೆಮಾಗಳು ಬರಲು ಶುರು ಆಗ್ತವೆ... ಆದರೆ ಯಾಕೋ ನಮ್ಮ ಕನ್ನಡಿಗರು ಹಿಂದಿ/ಇತರೆ ಭಾಷೆಯ ಸಿನಿಮಾಗಳನ್ನ ಮುಗಿ ಬಿದ್ದು ನೋಡುವ ಉತ್ಸಾಹ ಕನ್ನಡ ಸಿನಿಮಾಗಳಿಗೆ ತೋರೋಲ್ಲ...

ಒಬ್ಬೊಬ್ಬ ಕನ್ನಡಿಗನು ಇನ್ನೊಬ್ಬರನ್ನು ದೂಷಿಸದೆ ತಾವು ಕನ್ನಡಕ್ಕೆ ಏನು ಮಾಡಬಹುದು... ಹೇಗೆ ಇನ್ನೊಬ್ಬ ಕನ್ನಡಿಗನನ್ನು ಪ್ರೋತ್ಸಾಹಿಸ ಬಹುದು ಅನ್ನೋ ಚಿಂತನೆ ನಡಿಸಿದರೆ ಸಾಕು...ಕ್ರಿಯಾಶೀಲತೆ ಅನ್ನೋದು ತನ್ನತಾನೆ ಹುಟ್ಟಿಕೊಳ್ಳುತ್ತೆ... ಅದು ಬಿಟ್ಟು ನಾವು ರಾಜಕೀಯ ನಾಯಕರನ್ನ/ಸಿನಿಮಾ ನಟರನ್ನ ದೂಷಿಸುವುದು ನಮ್ಮ ಜವಾಬ್ದಾರಿಗಳಿಂದ ದೂರ ಸರಿದನ್ತಾಗುವುದಿಲ್ಲವೇ ...?
ನೀವು ಹೇಳಿದ ಹಾಗೆ ನಾವು ಇತರೆ ಸಿನಿಮಾಗಳಿಗೆ ನಮ್ಮ ಸಿನಿಮಾಗಳಿಗೆ ಸಿಗಬೇಕಾದ ಚಿತ್ರ ಮಂದಿರಗಳನ್ನ ಕೊಡುತ್ತಾ ಹೋದರೆ... ಕನ್ನಡಿಗರು ಸಿನಿಮಾ ಮಾಡೋದನ್ನೇ ಬಿಟ್ಟು ಬಿಡುತ್ತಾರೆ ಅಷ್ಟೆ...ಬೇರಾವ ರಾಜ್ಯಗಳಲ್ಲೂ ತಮ್ಮ ಸಿನಿಮಾಗಳನ್ನ ತೆಗೆದು ಇತರೆ ಸಿನಿಮಾಗಳಿಗೆ ಆದ್ಯತೆ ನೀಡುವುದಿಲ್ಲ...ಕನ್ನಡಿಗರೊಬ್ಬರೇ ಉಧಾರ ಮನುಸ್ಸು ತೋರುವುದರಿಂದ ಕನ್ನಡಕ್ಕೆ ಮಾರಕ ಹೊರತು ಪೂರಕವಲ್ಲ.

ಕ್ಲಾನ್ಗೊರೌಸ್

Anonymous ಅಂತಾರೆ...

@ ಕ್ಲಾನ್ಗೋರೌಸ್

ನೀವು ಹೇಳೋದೇನೋ ಸರಿ, ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವುದು ಅಷ್ಟೇನೂ ಸರಿಯಲ್ಲ. ಆದ್ರೂ ಡಾ.ರಾಜ್‌ಕುಮಾರ್‌ರವರು ತಮಗಿದ್ದ ಪ್ರಭಾವದಿಂದ ಅನೇಕ ಕೆಲಸಗಳನ್ನು ಸಾಧಿಸಲು ಸಾಧ್ಯ. ಗೋಕಾಕ್ ಚಳುವಳಿ ಅವರು ಇಳಿದನಂತರವೇ ಕಾವು ಪಡೆದುಕೊಂಡದ್ದು. ಅವರಿಗಿದ್ದ ಪ್ರಭಾವ ಅಂತಹದ್ದು. ಹಾಗಾಗಿ ಅವರು ಮನಸ್ಸು ಮಾಡಿದರೆ ಕರ್ನಾಟಕದಲ್ಲಿ ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗುವ ಹಾಗೆ ಖಂಡಿತಾ ಮಾಡಬಹುದಿತ್ತ್ತು. ಡಾ| ಮೋದಿ (ಸರಿ ನೆನಪಿಲ್ಲ) ಅವರು ಒಮ್ಮೆ ನೇತ್ರದಾನದ ಬಗ್ಗೆ ಮಾತಾಡುತ್ತಾ, ಡಾ.ರಾಜ್ ರಂತಹವರು ಮನಸ್ಸು ಮಾಡಿದರೆ ನೇತ್ರದಾನದ ಪ್ರಚಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಲು ಸಾಧ್ಯ ಎಂದಿದ್ದರು. ಡಾ. ಯು.ಆರ್.ಅನಂತಮೂರ್ತಿಯವರೂ ಇಂತಹದೇ ವಿಷಯದ ಬಗ್ಗೆ ಒಂದು ಲೇಖನವನ್ನು ಬರೆದಿದ್ದರು. ಡಾ.ರಾಜ್ ರವರು ಚಿತ್ರಗಳಲ್ಲಿ ನಟನೆಯಿಂದ ಉತ್ತಮ,ಸಂಭಾವಿತ ನಾಯಕನಾಗಿ ಜನರ ಪ್ರೀತಿಗಳಿಸಿದ್ದೇ ಹೊರತು ಅವರು ಸಾಮಾಜಿಕವಾಗಿ ನೀಡಿದ ಕೊಡುಗೆ ಬಹಳ ಕಡಿಮೆ. ಅವರ ಅಭಿಮಾನಿಗಳು ಇಡೀ ಕರ್ನಾಟಕದಲ್ಲೇ ಒಂದು ಶಕ್ತಿಯಾಗಿ ಬೆಳೆದರೂ ಅದನ್ನು ಸರಿಯಾಗಿ (ರಾಜಕೀಯವಾಗಿಯಲ್ಲ, ಮುಂದಾಳುವಾಗಿ) ಉಪಯೋಗಿಸದಿದ್ದುದು ನಿಜವಾಗಿ ಬೇಸರವೇ.

Anonymous ಅಂತಾರೆ...

@ ಹರಿಜೋಗಿ,
ನೀವು ಹೇಳಿದ ಗೋಕಾಕ್ ಚಳುವಳಿಯ ಉದಾಹರಣೆ ನಾನು ಒಪ್ಪುತ್ತೇನೆ, ಆದರೆ ನಮ್ಮ ಕನ್ನಡಿಗರೇ ಎಷ್ಟು ಜನ ರಾಜ್ ಮತ್ತು ಅವರ ಪರಿವಾರದ ಬಗ್ಗೆ ಅಪಪ್ರಚಾರ ಮಾಡ್ತಾರೆ ಗೊತ್ತಾ..? ಅದು ಪರಭಾಷಿಕರಿಗೆ.. ಇಲ್ಲದ ಸಲ್ಲದೆಲ್ಲ ಸುಳ್ಳು ವಿಚಾರಗಳನ್ನ ತುಂಬ್ತಾರೆ... ಒಂದು ಸಣ್ಣ ಉದಾಹರಣೆ ಹೇಳ್ತಿನಿ ಕೇಳಿ... ಒಬ್ಬ ತೆಲುಗುನವ ಶಂಕರ ನಾಗ್ ನ ರಾಜ್ ಕುಟುಂಬದವರೇ ಕೊಲ್ಲ್ಸಿದ್ದಂತೆ ..? ಅಂಥ ಕೇಳ್ತಾನೆ ... ಯಾರು ನಿಂಗೆ ಹೇಳಿದ್ದು ಅಂದ್ರೆ ... ಯಾರೋ ಕನ್ನಡಿಗರೇ ಹೇಳಿದ್ದು ಅಂದ... ಇಂತಹ ಕನ್ನಡಿಗರಿರುವಾಗ ಒಂದು ಪಕ್ಷ ಡಾಕ್ಟರ್ ರಾಜ್ ರಾಜಕೀಯಕ್ಕೆ ಇಳಿದಿದ್ದರು ಅವರು ಜೀವನ ಪರ್ಯಂತ ಗಳಿಸಿದ ಹೆಸರೆಲ್ಲಾ ಮಣ್ಣು ಪಾಲಾಗ್ತಿತ್ತು... ಆದರೆ ಇತರೆ ಭಾಷೆಗಳಲ್ಲಿ ಯಾರೊಬ್ಬ ನಟನ ಬಗ್ಗೆ ಈ ರೀತಿ ಅಪಪ್ರಚಾರ ಮಾಡುತ್ತಿರಲಿಲ್ಲ ... ಅವರಿಗೆ ತಮ್ಮ ಭಾಷೆ.. ತಮ್ಮ ಜನ ಮೊದಲು... ಆದರೆ ಕನ್ನಡಿಗರಿಗೆ...? ಕನ್ನಡ ಕನ್ನಡಿಗ ಅಂದರೆ ಮೊದಲು ಮಜ್ಜಿಗೆ ನಲ್ಲಿ ಕಲ್ ಹುಡುಕ್ತಾರೆ.... ಇದೆ ವ್ಯತ್ಯಾಸ... ನೀವೇ ಹೇಳಿ ... ಹೊಲಸು ರಾಜಕೀಯದಲ್ಲಿ ಡಾಕ್ಟರ್ ರಾಜ್ ಅವರನ್ನು ಎಲ್ಲಾ ಕನ್ನಡಿಗರು ಮನಸ್ ಪೂರ್ತಿಯಾಗಿ ಬೆಂಬಲಿಸುತ್ತಿದ್ದರಾ... ?. ಇದೇ ಡಾಕ್ಟರ್ ರಾಜ್....ಬೇರಾವ ಭಾಷೆಯಲ್ಲಿದ್ದಿದ್ದರು...ಇಲ್ಲಿ ಸಿಕ್ಕಿದ ಯಶಸ್ಸು...ಹೆಸರಿಗಿನ್ತಾ ಇನ್ನು ಹೆಚ್ಚು ದೇಶದಾದ್ಯಂತ ಹೆಸರು ಮಾಡುತ್ತಿದ್ದರು.... ಆದರೆ ಅವರನ್ನು ಕರ್ನಾಟಕ/ಅಭಿಮಾನಿ ಕನ್ನಡಿಗರು ಬಿಟ್ಟರೆ ಬೇರೆಯವರು ಅವರ ಕಲೆ/ಪ್ರತಿಭೆ ಮೆಚ್ಚುವುದಿರಲಿ.... ಅಪಪ್ರಚಾರ ಮಾಡುವುದೇ ಹೆಚ್ಚು....

ನಿಮ್ಮ ಪ್ರಕಾರ... ಡಾ|| ರಾಜ್ ಕನ್ನಡ/ಕನ್ನಡ ಚಿತ್ರ ರಂಗಕ್ಕೆ ಕೊಟ್ಟಿರೋ ಕೊಡುಗೆ ಕಮ್ಮಿ ಅಂತೀರಾ.. ?. ಇವತ್ತಿನವರ್ಗು ನಾನು ಕನ್ನಡ ಕರ್ನಾಟಕದ ಇತಿಹಾಸವನ್ನ ಡಾ|| ರಾಜ್ ನಟಿಸಿ/ನಿರ್ಮಿಸಿದ ಚಿತ್ರಗಳಿಂದ ಪಡೆದಿದ್ದೀನಿ ಹೊರೆತು ಶಾಲೆಯ ಹೊತ್ತಿಗೆಗಳಿಂದಲ್ಲ... ಅವರು ಮೂಡಿಸಿದ ಕನ್ನಡದ ಜಾಗೃತಿ ಇನ್ನಾವ ರಾಜಕೀಯ ನಾಯಕರೂ ಇವತ್ತಿನ ವರಗೆ ಮಾಡಿಲ್ಲ.... ಸಾಮಾಜಿಕವಾಗಿ ಅವರ ಕೊಡುಗೆ ತಮ್ಮ ಚಿತ್ರಗಳಿಂದಲೇ ಆಗುತ್ತಿತ್ತು... ನಿಮಗೆ ಗೊತ್ತೇ ಜೀವನ ಚೈತ್ರ ಚಿತ್ರ ಬಂದ ಮೇಲೆ ಎಷ್ಟು ಹಳ್ಳಿಗಳಲ್ಲಿ ಹೆಂಡ ಸಾರಾಯಿಯಾ ವಿರುದ್ದ ಜನ ತಿರುಗಿ ಬಿದ್ದರು ಅಂಥ ?... ಒಬ್ಬ ಸ್ವಾಭಿಮಾನಿ ಕನ್ನಡಿಗನಾಗಿ ಅವರು ತಮ್ಮ ಚಿತ್ರಗಳಿಂದಲೇ ಕನ್ನಡಕ್ಕೆ/ಕನ್ನಡಿಗನಿಗೆ, ನಾಡು ನುಡಿ ಸಂಸ್ಕೃತಿ, ಅಭಿಮಾನ, ಸರಳತೆ ಮುಂತಾದ ರೀತಿಯಲ್ಲಿ ಕೊಟ್ಟಿರುವ ಕೊಡುಗೆ ಅಪಾರ... ಇವುಗಳನ್ನ ಕನ್ನಡಿಗರು ಹೇಗೆ ಉಳಿಸಿ, ಬೆಳಸಿ, ಉದ್ದರಿಸುತ್ತಾರೆ ಅನ್ನೋದರ ಬಗ್ಗೆ ಯೋಚಿಸುವುದು ಕನ್ನಡ/ಕರ್ನಾಟಕ/ಕನ್ನಡಿಗ ಕ್ಕೆ ಒಳಿತು. ಅಷ್ಟು ಸರಳ ಜೀವನ ಶೈಲಿ ಇದ್ದ ಡಾ|| ರಾಜ್ ಅವರನ್ನೇ ಎಸ್ಟೋ ಕನ್ನಡಿಗರು ಹಿಯಾಳಿಸಿ, ಅಪಪ್ರಚಾರ ಮಾಡಿದ್ದಾರೆ.. ಇನ್ನು ಅವರು ರಾಜಕೀಯಕ್ಕೆ ಬಂದಿದ್ದರೆ ಏನ್ ಆಗುತ್ತಿತ್ತು ನೀವೇ ಊಹಿಸಿ ನೋಡಿ...

ಕ್ಲಾನ್ಗೊರೌಸ್

rama ಅಂತಾರೆ...

i am requesting you to know latest information about karnataka state dubbing
issue (kannada grahakara okkoota president chethan ganesh).
so please send the final judgement copy belongs to dubbing issue.

ಬನವಾಸಿ ಬಳಗ ಅಂತಾರೆ...

ಸಿಸಿಐ ತೀರ್ಪು ಇನ್ನೂ ಬಂದಿಲ್ಲ!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails