ಇಲ್ಲಿ ಯಾರ ಉದ್ಯೋಗ ಗುರಿಯಾಗಬೇಕು?

ಬಜೆಟ್ ನಂತರ ನಿರುದ್ಯೋಗ ನಿವಾರಣೆ ಗುರಿಯಿಟ್ಟುಕೊಂಡು ಕೈಗಾರಿಕಾ ಕ್ಷೇತ್ರದ ಬಗ್ಗೆ ರಾಜ್ಯ ಸರ್ಕಾರ ಸಮಾಲೋಚನೆ ಮಾಡ್ತಿರೋದು ಕಾಣುತ್ತಿದೆ. ಇತ್ತೀಚೆಗೆ ೨೦೦೯-೧೪ರ ಕಾಲಕ್ಕೆ ಅನ್ವಯಿಸುವಂತ ಹೊಸ ಕೈಗಾರಿಕಾ ನೀತಿಗೆ ಒಪ್ಪಿಗೆಯೂ ನೀಡಿದೆ. ಈ ನೀತಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಿ ಅದರಿಂದ ೧೦ ಲಕ್ಷ ಜನರಿಗೆ ಉದ್ಯೋಗವನ್ನ ಹುಟ್ಟಿಸಲಾಗುತ್ತೆ ಎಂದು ಘೋಷಣೆ ಹೊರಡಿಸಿದೆ. ಈ ವರದಿ ಮಾರ್ಚಿ ೧ರ ವಿಜಯ-ಕರ್ನಾಟಕದಲ್ಲಿ ಬಂದಿದೆ.

ಕರ್ನಾಟಕ ಸರ್ಕಾರದ ಈ ಹೆಜ್ಜೆ ಸ್ವಾಗತಾರ್ಹ. ಕರ್ನಾಟಕದಲ್ಲಿರುವ ನಿರುದ್ಯೋಗದ ಪಿಡುಗು ಮತ್ತು ರಾಜ್ಯದ ಜನರೇ ಅದರ ಅತಿಮುಖ್ಯ ಸಂಪನ್ಮೂಲವೆಂದು ಸರ್ಕಾರದ ಗಮನಕ್ಕೆ ಬಂದಿರುವ ಸೂಚನೆ ಇದರಿಂದ ಹೊರಬಿದ್ದಿದೆ. ಆದರೆ ಈ ಲಕ್ಷಾಂತರ ಕೋಟಿ ಬಂಡವಾಳ ಬಂದು, ಅದರಿಂದ ಲಕ್ಷಾಂತರ ಉದ್ಯೋಗಗಳು ರಾಜ್ಯದೊಳಗೆ ಹುಟ್ಟಿದರೂ ಅದರಲ್ಲಿ ಹೆಚ್ಚಿನ ಪಾಲು ಕನ್ನಡೇತರರಿಗೇ ಸಿಕ್ಕರೆ ಇಂತಹ ಅದೆಷ್ಟು ಕೋಟಿ ಬಂಡವಾಳ ಮತ್ತು ಅದೆಷ್ಟೋ ಲಕ್ಷ ಉದ್ಯೋಗಗಳು ಹುಟ್ಟಿದರೂ ರಾಜ್ಯದ ಆರ್ಥಿಕ ಏಳ್ಗೆ ಮಾತ್ರ ಕನಸಾಗೇ ಉಳಿದು ಹೋಗುವುದು ಖಚಿತ ಗುರು!

ಈ ಸಮಸ್ಯೆ ನಿವಾರಿಸಲು ಈಗಾಗಲೇ ಒಡಿಸ್ಸಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಆ ರಾಜ್ಯಗಳಲ್ಲಿ ಹುಟ್ಟುವ ಎಲ್ಲಾ ಉದ್ಯೋಗಗಳ ಸಿಂಹಪಾಲು ಆ ರಾಜ್ಯದೋರಿಗೇ ಸಿಗಬೇಕೆಂಬ ಕಾನೂನನ್ನೇ ವಿಧಿಸಿವೆ. ಕರ್ನಾಟಕದಲ್ಲೂ ಈ ರೀತಿಯ ಉದ್ಯೋಗ ನೀತಿಗಳ ಅನುಷ್ಠಾನ ಆಗಬೇಕಿದೆ. ಈ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಯ ಆದೇಶಗಳು ಕರ್ನಾಟದಲ್ಲಿ ಕೂಡಲೆ ಅನುಷ್ಠಾನ ಆಗಬೇಕಿವೆ. ಬೇಲಿಯೇ ಇಲ್ಲದ ಹೊಲದಂತೆ, ರಾಜ್ಯದೊಳಗೆ ಹುಟ್ಟುವ ಉದ್ಯೋಗಗಳು ಹೊರರಾಜ್ಯದವರ ಪಾಲಾಗದಂತೆ ರಾಜ್ಯ ಸರ್ಕಾರ ಕಾನೂನು ವಿಧಿಸಬೇಕು, ರಾಜ್ಯದ ಸಧೃಡ ಭವಿಷ್ಯ ನಿರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕು.

1 ಅನಿಸಿಕೆ:

Akshaya ಅಂತಾರೆ...

nija guru nija. nammalli astondu software engineers idrunu, bengalurinalli iro software company nalli bere state nore idare. kannadadore itara kannadigara bagge ee reethi manobhaava torsidre sari na guru. adastu bega sarojini mahishi varadi anushtaana agabeku.
horaata madiyaadaru sari adanna anushtaana aguvante nodkollabeku. count me in for the fight for justice.

nimmava,
Akshay

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails