ನಿಮ್ಮ ಓಟು ಯಾರಿಗೆ?


ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಳ ಅಂಗವಾಗಿ 2009ರ ಏಪ್ರಿಲ್ 23ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎಲ್ಲಾ ತಪ್ಪದೆ ಮತ ಚಲಾವಣೆ ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ಯಾರಿಗೆ ನಮ್ಮ ಮತ ನೀಡಬೇಕು? ನಮ್ಮ ರಸ್ತೆಗೆ ಡಾಂಬರು ಹಾಕಿಸಿ, ನಮ್ಮ ನಲ್ಲಿಗೆ ನೀರು ಬರಿಸುವವರನ್ನು ಆರಿಸಿದರೆ ಸಾಕು ಅಂದುಕೊಳ್ಳದೆ ಕೇಂದ್ರದಲ್ಲಿ ಕುಳಿತು ಸಂಸದನಾಗಿ ತನ್ನ ಕರ್ತವ್ಯಾನ ಸರೀಗ್ ಮಾಡಬಲ್ಲರಾ ನೋಡಿ ಅಂತಹವರಿಗೆ ಮತ ಕೊಡಬೇಕಾಗಿದೆ ಗುರು!
ದಿಲ್ಲಿಯಲ್ಲಿ ನಾಡಿನ ದನಿಯಾಗಬೇಕು!
ತಾನು ಯಾವ ಪಕ್ಷಕ್ಕೇ ಸೇರಿದ್ದರೂ ತನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಆಗಬೇಕಾದ ಕೆಲಸಗಳಿಗೆ ಚಾಲನೆ ನೀಡೋದು ನಮ್ಮ ಸಂಸದರ ಮೂಲಕರ್ತವ್ಯ ಅನ್ನೋದೇನೋ ಸರೀನೆ. ಇದರ ಜೊತೆಗೆ ಸಂಸತ್ತಿನಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳು ಬಂದಾಗ ರಾಜ್ಯಕ್ಕೆ ಅನ್ಯಾಯವಾಗದಂತೆ, ರಾಜ್ಯಕ್ಕೆ ಅನುಕೂಲವಾಗುವಂತೆ ಸಂಸತ್ತು ನಡೆದುಕೊಳ್ಳುವುದನ್ನು ಖಾತ್ರಿ ಪಡಿಸಿಕೊಳ್ಳುವುದೂ ಇವರ ಹೊಣೆಯಾಗಿದೆ. ನಮ್ಮ ಸಂಸದರುಗಳು ಲೋಕಸಭೆಯಲ್ಲಿ ಪಾಸ್ ಮಾಡಲಾಗುವ ಬಿಲ್ಲುಗಳ ಬಗ್ಗೆಯಾಗಲೀ, ಕೇಂದ್ರ ಸರ್ಕಾರ ನೀತಿ ನಿಯಮಾವಳಿ ರೂಪಿಸುವಾಗಾಗಲೀ ಸಕ್ರಿಯವಾಗಿ ತೊಡಗಿ ಯಾವ ರಾಜ್ಯಕ್ಕೂ ಹಾನಿಯಾಗದಂತೆ, ಎಲ್ಲರ ಏಳಿಗೆ ಸಾಧ್ಯವಾಗುವಂತೆ ನೀತಿಗಳು ರೂಪಿತವಾಗಲು ಶ್ರಮಿಸಬೇಕು. ಹಾಗಾಗಿ ನಾವುಗಳು ಸಮಾನ ಗೌರವದ ಒಕ್ಕೂಟ ವ್ಯವಸ್ಥೆಯ ಜಾರಿಗೆ ಶ್ರಮಿಸುವ ಅಭ್ಯರ್ಥಿಗಳು ಮತ್ತು ಪಕ್ಷಗಳನ್ನು ಆರಿಸಬೇಕು. ಇಂದಿನ ದಿವಸ ಎಲ್ಲರ ಏಳಿಗೆಯ ಬಗ್ಗೆ ಸರಿಯಾಗಿ ಮಾತಾಡಬಲ್ಲ, ದನಿಯೆತ್ತಬಲ್ಲ ಶಕ್ತಿ ಯಾವ ರಾಷ್ಟ್ರೀಯ ಪಕ್ಷಕ್ಕೂ ಇಲ್ಲವೆಂಬಂತೆ ತೋರುತ್ತಿದ್ದು, ಪ್ರಾದೇಶಿಕ ಹಿತ ಕಡೆಗಣಿಸುವ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳೇ ಮೇಲಾಗಿ ಕಾಣುತ್ತಿವೆ. ಇಂತಹ ಸನ್ನಿವೇಶದಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಂಡೇ ಏಕತೆ ಸಾಧಿಸಬಹುದು ಎಂದು ನಂಬುವ ಸರಿಯಾದ ಪ್ರಾದೇಶಿಕ ಪಕ್ಷವೊಂದು ನಮ್ಮ ನಾಡಲ್ಲಿ ಹುಟ್ಟುವವರೆಗೂ ಕಾಯುವ ಅನಿವಾರ್ಯತೆ ನಮಗಿದೆ. ಆದರೂ ಮತದಾನ ಪವಿತ್ರವಾಗಿದ್ದು ನಾಡಿನ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಬಲ್ಲ ಅಭ್ಯರ್ಥಿಗಳಿಗೇ ಮತ ನೀಡುವುದು ಸರಿಯಾದುದಾಗಿದೆ. ಬೆಳಗ್ಗೆ ಬೇಗಎದ್ದು ಹೋಗಿ ತಪ್ಪದೆ ಮತ ಚಲಾಯಿಸಿ. ಸಮಾಜವನ್ನು ಜಾತಿ ಧರ್ಮಗಳ ಹೆಸರಲ್ಲಿ ಒಡೆಯುವ, ಮತಕ್ಕಾಗಿ ಪರಭಾಷಿಕರ ಓಲೈಕೆಗೆ ಮುಂದಾದ ಅಭ್ಯರ್ಥಿಗಳಿಗೆ ಮತ ನೀಡದೆ ಯೋಗ್ಯರಿಗೆ ಮತ ನೀಡೋಣ ಗುರು!

5 ಅನಿಸಿಕೆಗಳು:

Anonymous ಅಂತಾರೆ...

yes. Please vote for the people who can represt our state culture lanuguage at the centre.
Do not consider cast relegion for voting..

Regards,
Pavani

Anonymous ಅಂತಾರೆ...

Please do not vote for Kumaraswamy's party. JDS is not the party which can protect Kannadiga's interests eventhough it says it is a regional party. Rememeber what this Kumaraswamy did when the Kannada film industry fought for the release of Non Kannada films in Karnataka only after 7 weeks it is release in other parts of India. Kumaraswamy Openheatedly supported distributors and exhibitors of non-kannada films in this issue. This shows his anti-kannada attitude. Even Mr.Devegowda does not respect Kannadigas sentiments. Please do not vote for JDS. I am of the opinion that KRV should enter politics and then we can vote for Sri Narayana Gowda's party.

Ashwin M Hiremath ಅಂತಾರೆ...

Encourage Entrepreneurs like Mr.Narayan Murthi to contest for the elections.They have taken an enterprise from nothing to everything(INFOSYS).Similarly a Country or a state is also like an enterprise and the citizens are the employees.We have seen them excel,hence lets all encourage such personalities.

My comment is more of Entrepreneurship and leadership.
Please correct me if i'm wrong.

Phadke ಅಂತಾರೆ...

ಇಂದಿನ ದಿವಸ ಎಲ್ಲರ ಏಳಿಗೆಯ ಬಗ್ಗೆ ಸರಿಯಾಗಿ ಮಾತಾಡಬಲ್ಲ, ದನಿಯೆತ್ತಬಲ್ಲ ಶಕ್ತಿ ಯಾವ ರಾಷ್ಟ್ರೀಯ ಪಕ್ಷಕ್ಕೂ ಇಲ್ಲವೆಂಬಂತೆ ತೋರುತ್ತಿದ್ದು, ಪ್ರಾದೇಶಿಕ ಹಿತ ಕಡೆಗಣಿಸುವ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳೇ ಮೇಲಾಗಿ ಕಾಣುತ್ತಿವೆ.Neevannodu BJP ge Congress ge Vote kodabedi anthallave?

ಕ್ಲಾನ್ಗೊರೌಸ್ ಅಂತಾರೆ...

ಅಶ್ವಿನ್ ಯೆಂ ಹಿರೆಮಟ್ ಅವರೇ,
ನಾರಾಯಣ್ ಮೂತ್ರಿ ಎಷ್ಟೇ ದೊಡ್ಡ ಸಾಮ್ರಾಜ್ಯ ಕಟ್ಟುದ್ರೂ ಏನ್ ಪ್ರಯೋಜನ ... ಎಷ್ಟು ಜನ ಕನ್ನಡಿಗರಿಗೆ ಕೆಲಸ ಕೊಟ್ಟಿದ್ದಾನೆ ಹೇಳಿ ?. ಸಾಫ್ಟ್ವೇರ್ ಬೇಡ ಹೌಸ್ ಕೀಪಿಂಗ್, ಸೆಕ್ಯೂರಿಟಿ ಇವೆಲ್ಲದರಲ್ಲೂ ಕನ್ನಡಿಗರು ಅಲ್ಪಸಂಕ್ಯಾತರು. ಶೇಕಡ ೧೦ % ಗಿಂತ ಕಮ್ಮಿ ಕನ್ನಡಿಗರು ಇನ್ಫೋಸಿಸ್ ನಲ್ಲಿ. ಇಂತೋರು ಕನ್ನಡಿಗರನ್ನ ಉದ್ದಾರ ಮಾಡೋದ್ರು ಬದ್ಲು ಉಡ್ದಾರ ಮಾಡ್ಕೊಂಡ್ ಅವ್ರೆ.

ಇಂತಿ
ಕ್ಲಾನ್ಗೊರೌಸ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails