ಕನ್ನಡ ಕಲೀತಾ ಇರೋ ವಿದೇಶೀಯರು!

ಎರಡು ತಿಂಗಳ ಹಿಂದೆ "ಅಲೈಯನ್ಸ್ ಫ್ರಾಂಸೈಸ್ ಡಿ ಬ್ಯಾಂಗಲೂರ್" ಅನ್ನೋ ಫ್ರೆಂಚು ನುಡಿ ಕಲಿಸೋ ಸಂಸ್ಥೆಯೋರು ಕನ್ನಡ ಕಲಿಸಲು ಮುಂದಾಗಿರೋ ಸುದ್ದೀನಾ ಏನುಗುರುನಲ್ಲಿ ಬರ್ದಿದ್ವಿ. ಇಗೋ ನೋಡಿ ಈ ವೀಡಿಯೋನಾ... (ಕೃಪೆ : ವಿಡಿಯೋ ಗಿರ್ಮಿಟ್)ಗುರು! ಅವ್ರು ವಿದೇಶದವ್ರು. ಅವರು ಫ್ರಾನ್ಸ್ ಅನ್ನೋ ದೇಶದಿಂದ ಬಂದಿರೋರು. ಅವರಿರೋದು ಯೂರೋಪಿಯನ್ ಒಪ್ಪುಕೂಟ(federation)ದಲ್ಲಿ. ಅವರಿಗೆ ಒಪ್ಪುಕೂಟದ ಧರ್ಮ ಗೊತ್ತು, ಅವರಿಗೆ ವಲಸಿಗರ ಧರ್ಮ ಗೊತ್ತು ಅಂತೆಲ್ಲಾ ಹೇಳದೆ ಈ ವೀಡಿಯೋದಿಂದ ಸ್ಪೂರ್ತಿ ಪಡೆದು ನಮ್ಮ ನಮ್ಮ ಸಂಸ್ಥೆಗಳಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸೋಕೆ ಮುಂದಾಗೋಣ್ವಾ ಗುರು?

6 ಅನಿಸಿಕೆಗಳು:

uff ಅಂತಾರೆ...

please dont show it to any hindi speaker. who knows he would be having a right to sue these people for teaching kannada. They would want the "national language - hidni" to be taught instead of kannada.

please cover up this story

ಕಿಶೋರ್ ಅಂತಾರೆ...

ಇದು ಬಹಳ ಸ೦ತೋಷದ ಸ೦ಗತಿ. ಹಿ೦ದ ಭಾಷಿಕರು ಇದರಿ೦ದ ಕಲಿಯುವುದು ತು೦ಬಾ ಇದೆ.
ಹಿ೦ದಿ ಪ್ರಚಾರ ಪರಿಷತ್ ಗಳಲ್ಲಿ ಹೀಗೆ ಕನ್ನಡವನ್ನು ಹೇಳಿಕೊಡಬೇಕು.

Sunil HH ಅಂತಾರೆ...

ಸೂಪರ್.... ಇದನ ನೋಡಿ ಆದರು ಬೇರೆ ಕಡೆ ಇಂದ ಬಂಧ ನಮ್ಮ ದೇಶದ ಬಂದುಗಳು ಕನ್ನಡ ಕಲಿಯೋಕೆ ಶುರು ಮಾಡಲಿ

Priyank ಅಂತಾರೆ...

ನಮ್ ಕಂಪನಿಲಿ ಕನ್ನಡೇತರರಿಗೆ ಕನ್ನಡ ಕಲಿಸಬೇಕು ಅನ್ನೋ ಆಸೆ ಇದೆ.
ಆದ್ರೆ, ಹೆಂಗೆ ಶುರು ಮಾಡದು ಅಂತ ಗೊತ್ತಾಗ್ತಿಲ್ಲ.
ನೀವು ಏನಾದರೂ ಸಹಾಯ ಮಾಡಿ ಗುರು ..

ಕುಮಾರವ್ಯಾಸ ಅಂತಾರೆ...

ಹಾಯ್ ಪಿಂಕ, ನನ್ನ ಹತ್ತಿತ ಒಂದು ಉಪಾಯ ಇದೆ, ನಿಮ್ಮ ಹತ್ತಿರ ಇಚ್ಛಾಶಕ್ತಿ ಇದೆಯಾ?

ದಿನಕ್ಕೊಂದು ಕಥೆ ಅಂತ ಒಂದು ಕಥೆ ಪುಸ್ತಕ ಇತ್ತು. ಅದು ಎಲ್ಲರ ಅಚ್ಚುಮೆಚ್ಚಿನದು. ಅದೇರೀತಿಯಲ್ಲಿ ನೀವು "ದಿನಕ್ಕೊಂದು ನುಡಿ" ಅಂತ ಒಂದು mail forwarding series ಪ್ರಾರಂಭ ಮಾಡಿ. ಅದರಲ್ಲಿ, ಒಂದು ವಿಷಯಕ್ಕೆ ಸಂಭಂದಪಟ್ಟಂತೆ ೫ - ೬ ಸರಳ ವಾಕ್ಯಗಳು ಮತ್ತು ಅದರ ಇಂಗ್ಲಿಷ್ ಅನುವಾದ ಇರಲಿ.

ಇದರಿಂದ ನಿಮ್ಮ ಕಂಪನಿಯ ಕನ್ನಡೇತರರಿಗೆ ಮಾತ್ರವಲ್ಲ ಎಲ್ಲಾ ಕಂಪನಿಯ ಆಸಕ್ತಿಯುತ ಕನ್ನಡೇತರರಿಗೆ ಒಂದು ಅವಕಾಶ ಸಿಕ್ಕಿದಹಾಗೆ ಆಗತ್ತೆ.

Anonymous ಅಂತಾರೆ...

There can't be better news about our language in the recent past. Soooooooooper

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails