ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಕೊಡ್ಸೋ ಹೊಣೆಗಾರಿಕೆ ಯಾರ‍್ದು?

2004ರಲ್ಲಿ ಎದ್ದು ತಣ್ಣಗಾಗಿದ್ದ ಬಿರುಗಾಳಿ ಇದೀಗ ಮಗಧೀರ ಅನ್ನೋ ತೆಲುಗು ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಮತ್ತೆ ಭುಗಿಲೆದ್ದಿದೆ ಗುರು! ಇದು ಭಾರತ, ಯಾರು ಎಲ್ಲಿ ಯಾವ ಭಾಷೆಯ ಚಿತ್ರಾನ್ನಾದ್ರೂ ಬಿಡುಗಡೆ ಮಾಡೋ ಹಕ್ಕಿದೆ ಇತ್ಯಾದಿಗಳನ್ನೆಲ್ಲಾ ತೆಲುಗು ಚಿತ್ರಬ್ರಹ್ಮರು ಮಾತಾಡ್ತಿರೋ ಸುದ್ದಿ ಮಾಧ್ಯಮಗಳಲ್ಲಿ ಕಾಣ್ತಾ ಇದೆ. ಆದ್ರೆ ಮೇಲಿನ ಸಿನಿಮಾ ಗೈಡ್‍ನ ನೋಡಿ... ಅದರಲ್ಲಿ ಬೆಂಗಳೂರಿನ ಟಾಕೀಸುಗಳಲ್ಲಿ ಎಷ್ಟ್ರಲ್ಲಿ ಕನ್ನಡ ಸಿನಿಮಾ ಇದೆ ಅಂತಾ ಗೊತ್ತಾಗುತ್ತೆ!

ಮೊದಲು ಕನ್ನಡದ ಸಿನಿಮಾಗಳಿಗೆ ಚಿತ್ರಮಂದಿರ ಸಿಗಬೇಕು!

ಕೆಲವಾರಗಳ ಹಿಂದೆ ತೆಲುಗಿನ ಮಗಧೀರ ಅನ್ನೋ ಚಿತ್ರ ಬೆಂಗಳೂರಿನ ಚಿತ್ರಮಂದಿರಗಳೂ ಸೇರಿದಂತೆ ರಾಜ್ಯದ 50ಕ್ಕೂ ಹೆಚ್ಚು ಕಡೆ ಬಿಡುಗಡೆಯಾಗಿದೆ. ಇದರಿಂದ ಕನ್ನಡದ ಅನೇಕ ಚಿತ್ರಗಳಿಗೆ ಚಿತ್ರಮಂದಿರದ ಕೊರತೆ ಎದುರಾಗಿರೋದೇ ಅಲ್ಲದೆ ಚೆನ್ನಾಗಿ ಓಡ್ತಾ ಇದ್ದ ಹಲವಾರು ಚಿತ್ರಗಳಿಗೆ ಎತ್ತಂಗಡಿಯ ಭಾಗ್ಯವೂ ದೊರಕಿದೆ. ಕನ್ನಡ ಚಿತ್ರಗಳಿಗೆ ನಮ್ಮೂರಲ್ಲೇ ಚಿತ್ರಮಂದಿರಗಳು ಸಿಗುತ್ತಿಲ್ಲಾ ಅನ್ನೋದು ಎಷ್ಟು ಸರಿ? 2004ರ ಹೊತ್ತಿಗೆ ಪರಭಾಷಾ ಚಿತ್ರ ಬಿಡುಗಡೆ ಬಗ್ಗೆ ಏಳು ವಾರಗಳ ಗಡುವು, ನಾಲ್ಕು ಪ್ರಿಂಟು, 21 ಕೇಂದ್ರಗಳು ಅನ್ನೋ ಕಡಿವಾಣಾನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಜಾರಿಗೊಳಿಸೋ ಮಾತಾಡಿದ್ರೂ ಕೂಡಾ ಪರಿಣಾಮಕಾರಿಯಾಗಿ ಜಾರಿ ಮಾಡಿದ್ನ ಕಾಣಲಿಲ್ಲ. ತೆಲುಗು ಚಿತ್ರರಂಗದೋರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾದ್ರೆ ತಮ್ಮ ಗಳಿಕೆಗೆ ಪೆಟ್ಟು ಬೀಳುತ್ತೆ ಅಂತಾ ಕುಯ್‍ಗುಟ್ತಿರೋದ್ನ ನೋಡುದ್ರೆ ಅಳಬೇಕೋ ನಗಬೇಕೋ ತಿಳೀತಿಲ್ಲಾ ಗುರು! ಕನ್ನಡ ಚಿತ್ರಗಳಿಗೆ ಮೂಲ ಮಾರುಕಟ್ಟೆಯೂ ಪರಭಾಷಾ ಚಿತ್ರಗಳಿಗೆ ಹೆಚ್ಚುವರಿ ಮಾರುಕಟ್ಟೆಯೂ ಆಗಿರುವ ನಮ್ಮ ನಾಡಲ್ಲಿ ನಮ್ಮ ಚಿತ್ರಗಳು ಚಿತ್ರಮಂದಿರದ ಕೊರತೆ ಎದುರಿಸಿ ಮುಗ್ಗರಿಸಿ ಬಿದ್ರೂ ಪರವಾಗಿಲ್ಲಾ, ಪರಭಾಷಾ ಚಿತ್ರಗಳ ಬಿಡುಗಡೆಗೆ ಕಡಿವಾಣ ಇರಬಾರದು ಅನ್ನೋದು ಯಾವ ಸೀಮೆ ನ್ಯಾಯಾ?


ಸರ್ಕಾರ ಮತ್ತು ವಾಣಿಜ್ಯ ಮಂಡಲಿ ಕಣ್‍ತೆರೆಯಲಿ!

ನೀವೇ ನೋಡಿ, ಇಡೀ ಬೆಂಗಳೂರಲ್ಲಿರೋ ಒಟ್ಟು ಚಿತ್ರಮಂದಿರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಚಿತ್ರಮಂದಿರಗಳನ್ನು ಪರಭಾಷೆಯ ಚಿತ್ರಗಳು ಆಕ್ರಮಿಸಿಕೊಂಡು ಕೂತಿವೆಯಲ್ಲಾ... ಹೀಗಾದ್ರೆ ಕನ್ನಡ ಸಿನಿಮಾಗಳ ಗತಿ ಏನು? ಲಕ್ಷಾಂತರ ರೂಪಾಯಿ ಸುರಿದು ಸಿನಿಮಾ ತೆಗೆದೋರು ಚಿತ್ರಮಂದಿರ ಸಿಗ್ತಿಲ್ಲಾ ಅಂತಾ ಪೇಪರ‍್ನಲ್ಲಿ ಜಾಹೀರಾತು ಹಾಕೋ ಗತಿ ಬಂತಲ್ಲಪ್ಪಾ? ಕನ್ನಡ ಚಿತ್ರರಂಗಾನ ಬುಡಸಮೇತ ಕೊಚ್ಚಿಕೊಂಡು ಹೋಗೋ ಪರಭಾಷಾ ಚಿತ್ರಪ್ರವಾಹಾನ ತಡೆಗಟ್ಟೋ ಅಣೆಕಟ್ಟೆಯಾಗಿ ನಿಲ್ಲಬೇಕಾದ್ದು ನಮ್ಮ ರಾಜ್ಯಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಲಸ. ಇವರು ಅದೇನು ಮಾಡ್ತಾರೋ ಗೊತ್ತಿಲ್ಲಾ, ಆದ್ರೆ ಕನ್ನಡನಾಡಿನ ಚಿತ್ರಮಂದಿರಗಳಲ್ಲಿ ಕನ್ನಡದ ಚಿತ್ರಗಳಿಗೆ ಮೊದಲ ಆದ್ಯತೆ, ಇದಾಗಿ ಮಿಕ್ಕುದ್ರೆ ಬೇರೆ ಭಾಷೆಯ ಚಿತ್ರಗಳಿಗೆ ಜಾಗ ಅನ್ನೋದನ್ನು ಜಾರಿಗೆ ತರಬೇಕಾಗಿದೆ ಅನ್ನೋದಂತೂ ಸರಿಯಾಗಿದೆ! ಅಲ್ವಾ ಗುರು?

6 ಅನಿಸಿಕೆಗಳು:

Anonymous ಅಂತಾರೆ...

ನಿಮ್ಮ ಮನಸ್ಸಿನಲ್ಲಿರೋ ಸಣ್ಣತನವನ್ನು ಮೊದಲು ತೆಗೆದು ಹಾಕಿ. ಕಲೆಗೆ ಭಾಷೆಯ ಗಡಿ ಇಲ್ಲ. ಹೊರನಾಡಿನ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾದರೆ ವಿವಿಧ ಭಾಷಿಕರ ನಡುವೆ ಭಾಷಾ ಸಾಮರಸ್ಯ ಹೆಚ್ಚುತ್ತದೆ. ಇದರಿಂದ ವಿವಿಧ ಭಾಷಿಕರು ನಮ್ಮ ನಾಡಿನಲ್ಲಿ ನೆಮ್ಮದಿಯಾಗಿ ವಾಸಿಸಬಹುದು.

-ಅತಿ ಬುದ್ದಿವಂತ

Amarnath Shivashankar ಅಂತಾರೆ...

namma ghana raajya sarkaarakke idara bagge gamana harisakke samaya ellide guru?
2004 nalli Dr.Rajkumar netrutvadalli dodda maTTada hOraaTave agittu..adare nantara adu taNNagaayitu.
chitrarangavanna bembalisalu horaTa namma karnataka rakshana vedike ge sikiddu kevala jailu shikshe, naanaa caseugaLu

Chalanachitra vaNijya manDalige yavude adhikaaravilla..alli tumbiruvavarellaru kaLLa, kaakaru.

karnataka dalli kannaDa-kannaDiga-karnataka anta enaadru horaaTa maDbeku andre adu kevala ka.ra.ve maatrave.
neeti geTTa raajya sarkaara kannaDa hOraaTagaararanna kaaraNa illade yavudo tamiLina kaviya hesaranna meresakke jailige haakttare?
inna nyaaya yaarida sigatte??

Muni ಅಂತಾರೆ...

ಸ್ವಾಮಿ ದೊಡ್ಡ ತನದ ದೊಡ್ಡ ಮನುಷ್ಯರೆ(Anonymous), ಮೊದಲು ನಮ್ಮ ಭ್ಹಾಷೆಯವರಿಗೆ ಪ್ರೊತ್ಸಾಹ ಸಿಗಲಿ ನ೦ತರ ಬೇರೆ ಭ್ಹಾಷೆಯವರ ಜೊತೆ ಸಾಮರಸ್ಯ ಬೆಳೆಸಿ.

ರಮೇಶ್ ರಾವ್ ಅಂತಾರೆ...

ಇಷ್ಟು ದಿವಸ ತಿರುವಳ್ಲುವರ್ ಪ್ರತಿಮೆ ಅನಾವರಣ ವಿರುದ್ಧ ಹೋರಾಡಿದ ಕನ್ನಡಿಗರಿಗೆ "ಸಣ್ಣತನದ " ಹಣೇಪಟ್ಟಿ ಕಟ್ಟಿಯಾಯಿತು, ಈಗ ಕನ್ನಡದ ಚಿತ್ರಗಳಿಗೆ ಚಿತ್ರಮಂದಿರದ ಭಾಗ್ಯ ದೊರಕಲಿ ಎಂದು ಹೇಳುವವರು "ಸಣ್ಣತನ" ದ ಬುದ್ದಿ ಇರುವವರು ಎಂದು ಹೇಳಲು ಶುರು ಮಾಡಿದ್ದಾರೆ. ಭೇಷ್! ಮುಂದೊಣ್ದು ದಿನ ಕನ್ನಡ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ಬಂದರೆ, ಆಗಲೂ ಸಹ "ಸಣ್ಣತನ" ದ ಹಣೇಪಟ್ಟಿ ಕಟ್ಟಿ ಮೂಲೆಗೆ ಕೂರಿಸುತ್ತಾರೆ. ಈ ಸಮಯದಲ್ಲಿ ಅಣ್ಣವರ ಹಾಡು ನೆನಪಿಗೆ ಬರ್ತ ಇದೆ -

ನಗುವುದೋ ಅಳುವುದೋ ನೀವೇ ಹಾಳಿ,
ಇರುವುದೋ ಬಿಡುವುದೋ ಈ ಊರಿನಲಿ,
ಈ ಜನರ ಮದ್ಯೆ ನಾನು ಹೇಗೆ ಬಾಳಲಿ!

Anonymous ಅಂತಾರೆ...

Muni ಮತ್ತು ರಮೇಶ್ ರಾವ್ ಅವರುಗಳೆ,

ಕ್ಷಮೆ ಇರಲಿ. ಈ ಸಂದರ್ಭದಲ್ಲಿ ನಮ್ಮ ನಾಡಿನ ಗಣ್ಯವ್ಯಕ್ತಿಗಳು, ಪತ್ರಕರ್ತರು ಯಾವ ರೀತಿ ಕನ್ನಡಿಗರಿಗೆ ಬಿಟ್ಟಿ ಉಪದೇಶ ಮಾಡಿ ಕಿವಿ ಮೇಲೆ ಹೂ ಇಡಬಹುದು ಅಂತ ತೋರಿಸುವುದಕ್ಕೋಸ್ಕರ ಮೇಲೆ ಆ ರೀತಿ ಬರೆದಿದ್ದೇನೆ. ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯವೂ ಆಗಿದೆ.

ಏನ್‌ಗುರು ನನ್ನ ಮಚ್ಚಿನ ಬ್ಲಾಗುಗಳಲ್ಲಿ ಒಂದು.

-ಅತಿ ಬುದ್ದಿವಂತ

lakki ಅಂತಾರೆ...

ade kannada chitragalanna yaake chennai, coimbatore and hyderabad nalli release madabaardu? alli kanndaigaru ilava?
sannantana kannadigaraddalla, hora raajya davaradu..
this is the only state in this country which shelters brothers/sisters from all other states, provides news papers in their own language , provides entertainment in their own language.. finally the local people do not get entertainment in the local language and also cannot do business in local language...
this is the heights..!!!! yaavaga namma janakke buddi barutto gottilla

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails