ಗೂಗಲ್ ನ್ಯೂಸ್ ಅಲ್ಲಿ ಕನ್ನಡ ಯಾಕಿಲ್ಲ ?

ನೂರಾರು ಭಾಷೆಗಳಲ್ಲಿ ಮಿಂಚೆ (ಈಮೇಲ್), ಚಾಟ್, ಹುಡುಕಾಟ ಮುಂತಾದ ಸೌಲಭ್ಯ ಕಲ್ಪಿಸಿ ಜಗತ್ತಿನ ಕೋಟ್ಯಾಂತರ ಜನರಿಗೆ ಅವರವರ ಭಾಷೆಯನ್ನೇ ಬಳಸಿ ಅಂತರ್ಜಾಲದ ಲಾಭ ಸವಿಯಲು ಗೂಗಲ್ ಸಂಸ್ಥೆಯವರು ಈಗ ಜಗತ್ತಿನ ಸುದ್ದಿಗಳನ್ನೆಲ್ಲಾ ಓದುಗನೊಬ್ಬ ಅವನ ಭಾಷೆಯಲ್ಲೇ ಒಂದೆಡೆ ಪಡೆಯಲು ಸಾಧ್ಯವಾಗುವಂತೆ ಗೂಗಲ್ ನ್ಯೂಸ್ ಅನ್ನೋ ಪ್ರಾಡಕ್ಟ್ ಮಾಡಿದ್ದಾರೆ ಗುರು. ಈಗಾಗಲೇ ಭಾರತದ ಹಲವು ಭಾಷೆಗಳಲ್ಲಿ ಈ ಸೇವೆ ಲಭ್ಯವಾಗಿದ್ರೂ ಕನ್ನಡಕ್ಕಿನ್ನೂ ಈ ಅನುಕೂಲ ಸಿಕ್ಕಿಲ್ಲ ಗುರು ! ಇದಕ್ಕೆ ಕಾರಣಗಳೇನು ಮತ್ತು ಇದನ್ನ ಸರಿ ಮಾಡೋಕೆ ನಾವೇನ್ ಮಾಡಬೌದು ಅಂತ ನೋಡೊಣ ಬಾ ಗುರು.

ತಾಣಗಳಲ್ಲಿ ಯೂನಿಕೋಡ್ ಬಳಸಲ್ಲ !
ಯೂನಿಕೋಡ್ ಎಂಬುದು ಕಂಪ್ಯೂಟರ್ ಒಳಗೆ ಜಗತ್ತಿನ ನೂರಾರು ಲಿಪಿಗಳಲ್ಲಿ ಬರೆಯಲು ಉಪಯೋಗಿಸುವ ತಂತ್ರಾಂಶ. ಈ ತಂತ್ರಾಂಶ ಬಳಸಿ ಕನ್ನಡದಲ್ಲಿ ಬರದಿರೋದನ್ನ ಕಂಪ್ಯೂಟರ್ ಒಳಗೆ ಆರಾಮಾಗಿ ಓದೋಕೆ, ಹುಡುಕೋಕೆ ಸಾಧ್ಯವಾಗತ್ತೆ. ಆದರೆ ಇಂದು ಹೆಚ್ಚಿನ ಕನ್ನಡ ಪತ್ರಿಕೆಗಳ ಪೋರ್ಟಲ್ ಗಳಲ್ಲಿ ಯೂನಿಕೋಡ್ ಅಳವಡಿಕೆಯಾಗದ ಕಾರಣ, ಕನ್ನಡದಲ್ಲಿ ಸುದ್ಧಿ ವರದಿ ಮಾಡೋ ಹಲವಾರು ತಾಣಗಳಿದ್ರೂ, ಗೂಗಲ್ ನ್ಯೂಸ್ ಬಳಸಿ ಕನ್ನಡದಲ್ಲಿ ಸುದ್ಧಿ ಹುಡುಕಿದರೆ ಏನೂ ಸಿಗ್ತಿಲ್ಲ ಗುರು.

ಹುಡುಕೋಕೆ ಕನ್ನಡ ಬಳಸಲ್ಲ !
ಅಲ್ಲೊಂದು ಇಲ್ಲೊಂದು ಕನ್ನಡ ತಾಣಗಳಲ್ಲಿ ಯೂನಿಕೋಡ್ ಬಳಕೆಯಾಗ್ತಿದ್ರೂ ಅವು ಗೂಗಲ್ ನ್ಯೂಸ್ ಅಲ್ಲಿ ಕಾಣ್ತಿಲ್ಲ! ಇದಕ್ಕೆ ಕಾರಣ ಅಂತರ್ಜಾಲದಲ್ಲಿ ಸುದ್ಧಿ ಹುಡುಕೋವಾಗ ಕನ್ನಡ ಬಳಸದೇ ಇರೋದು. ಇತ್ತೀಚಿನ ಒಂದು ಮಾಹಿತಿಯ ಪ್ರಕಾರ ದಿನವೊಂದರಲ್ಲಿ ಗೂಗಲ್ ಮೂಲಕ ಆಗುವ ಬಿಲಿಯಗಟ್ಟಲೆ ಹುಡುಕಾಟಗಳಲ್ಲಿ (searches) ಕನ್ನಡ ಪದಗಳನ್ನ ಉಪಯೋಗ್ಸಿ ಮಾಡೋ ಹುಡುಕಾಟಗಳು ಸಾವಿರಕ್ಕೂ ಕಡಿಮೆಯಂತೆ. ಲಕ್ಷಗಟ್ಟಲೆ ಕನ್ನಡಿಗರು ಅಂತರ್ಜಾಲದಲ್ಲಿ ಮಾಹಿತಿ ಹುಡುಕೋರಾಗಿದ್ರೂ ಒಂದು ದಿನಕ್ಕೆ ಒಂದು ಸಾವಿರ ಜನರೂ ಕನ್ನಡ ಬಳಸಿ ಮಾಹಿತಿ ಹುಡುಕುತ್ತಿಲ್ಲ ಅಂದ್ರೆ ಗೂಗಲ್ ಕಂಪನಿಯೋರು ತಮ್ಮ ನ್ಯೂಸ್ ತಾಣದಲ್ಲಿ ಕನ್ನಡದ ಆಯ್ಕೆನಾ ಅದ್ಯಾಕ್ ಕೊಟ್ಟಾರೂ ನೀನೇ ಹೇಳ್ ಗುರು.

ಏನ್ ಪರಿಹಾರ ?
ಇದನ್ನ ಬದಲಾಯಿಸೋದು ಅಂತರ್ಜಾಲದಲ್ಲಿರುವ ಕನ್ನಡಿಗರ ಕೈಲೇ ಇದೆ.
  • ಅಂತರ್ಜಾಲದಲ್ಲಿರುವ ಎಲ್ಲ ಕನ್ನಡ ವರದಿ ತಾಣಗಳಿಗೆ ಯುನಿಕೋಡ್ ಬಳಸುವಂತೆ ಮನವಿ ಮಾಡುವುದು.
  • ಕನ್ನಡ ಯುನಿಕೋಡಿನಲ್ಲಿ ಬರೋ ತಾಣಗಳನ್ನು ಓದಿ ಪ್ರೋತ್ಸಾಹಿಸೋದು.
  • ಅಂತರ್ಜಾಲದಲ್ಲಿ ಮಾಹಿತಿ/ಸುದ್ದಿ ಹುಡುಕಲು ಕನ್ನಡ ಲಿಪಿ ಬಳಸೋದು, ನಮ್ಮ ಗೆಳೆಯರಿಗೂ ಹಾಗೇ ಮಾಡಲು ಹೇಳೋದ್ರ ಮೂಲಕ ಕನ್ನಡದಲ್ಲಿ ಸುದ್ದಿ ಹುಡುಕಾಟಕ್ಕೆ ಬೇಡಿಕೆ ಬರುವಂತೆ ಮಾಡಬೇಕು ಗುರು.
ಅದು ಆದಾಗ ಗೂಗಲ್ ಕನ್ನಡದಲ್ಲಿ ಈ ಸೇವೆ ಖಂಡಿತ ಕೊಡುತ್ತೆ. ಇದ್ಯಾವುದನ್ನ ಮಾಡದೇ ಸುಮ್ಕೆ ಕುಂತಿದ್ರೆ , ಅಂತರ್ಜಾಲದಲ್ಲಿ ಎಲ್ಲಾ ರೀತಿಯ ಸೇವೆ ಬೇರೆಲ್ಲ ಭಾಷೆಲಿ ಬರ್ತಾನೇ ಇರುತ್ತೆ, ನಾವು ಮಾತ್ರ ಕನ್ನಡದಲ್ಲಿ ಯಾಕಿಲ್ಲ ಅಂತಾ ಗೋಳಾಡೋದೆ ಆಗುತ್ತೆ. ಹಾಗಿದ್ರೆ ಇದನ್ನ ಬದಲಾಯ್ಸೋಕೆ ಮುಂದಾಗೋಣ್ವಾ ಗುರು?

13 ಅನಿಸಿಕೆಗಳು:

Bharath H M ಅಂತಾರೆ...

ಹೌದು ಗುರು, ಆದಷ್ಟು ಬೇಗ ನಾವೆಲ್ಲಾ ಈ ಬದಲಾವಣೆ ಮಾಡ್ಬೇಕು..

Anonymous ಅಂತಾರೆ...

ಯೂನಿಕೋಡ್ ಬಳಸುವ ಕನ್ನಡ ಸುದ್ದಿ ತಾಣಗಳು ೨ ಇರೋದು. ೧)ದಟ್ಸ್‌ಕನ್ನಡ ೨)ಪ್ರಜಾವಾಣಿ.

ಕನ್ನಡಪ್ರಭ, ಉದಯವಾಣಿ, ವಿಜಯಕರ್ಣಾಟಕ ಪತ್ರಿಕೆಗಳೂ ಯೂನಿಕೋಡ್ ನಲ್ಲಿ ಮಾಹಿತಿ ನೀಡಲು ಶು ಮಾಡಿದರೆ ಮಾತ್ರ ಕನ್ನಡದಲ್ಲಿ ಕಂಟೆಂಟ್ ಜಾಸ್ತಿಯಾಗುತ್ತೆ.

-ಗುರು

Priyank ಅಂತಾರೆ...

@Anonymous,
ಅವೆರಡೆ ಅಲ್ಲ, ಇನ್ನೂ ಕೆಲವು ಇವೆ.
kannadaratna.com
ourkarnataka.com/tippuexpress
ourkarnataka.com/lankesh

ಇವು ಹೆಚ್ಚು ಪ್ರಸಿದ್ಧಿ ಅಲ್ಲ.

ಶೆಟ್ಟರು (Shettaru) ಅಂತಾರೆ...

ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ನೀವೂ ಭಾಗವಹಿಸಿ ಮತ್ತು ನಿಮ್ಮ ಗೆಳೆಯರಿಗೂ ತಿಳಿಸಿ

ಆತ್ಮೀಯರೆ,

ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.

ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.

ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.

http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..

ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.

ಧನ್ಯವಾದಗಳೊಂದಿಗೆ

ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು

NS ಅಂತಾರೆ...

ಯುನಿಕೋಡ್‌ ಬಳಸಲು ನಿರಾಕರಿಸುವವರು, ಕತ್ತೆ ಬಡವರು, ಮುಠ್ಠಾಳರು!

Anonymous ಅಂತಾರೆ...

googlekannada.com use maadi

Anonymous ಅಂತಾರೆ...

ivannu use maadi and nimma snehitarige kalisi..
http://www.sanjevani.com
www.kannadaprabha.com
www.prajavani.net
www.thatskannada.com
http://www.udayavani.com
http://suddimoola.epapertoday.com/epaper/?yr=2010&mth=1&d=12
http://prajapragathi.epapertoday.com/epaper/?yr=2010&mth=1&d=12
http://janathamadhyama.epapertoday.com/epaper/?yr=2010&mth=1&d=11
http://kannada.samachar.com/
http://eesanje.com/
http://www.samyukthakarnataka.com/
http://www.vijaykarnatakaepaper.com/epaper/
http://www.vikrantakarnataka.com/
http://www.kannadaratna.com/
http://www.sahilnews.org/kannada/national_news/index.1.html
http://www.gulfkannadiga.com/today.html

http://nadoja.epapertoday.com/epaper/?yr=2010&mth=1&d=13
http://www.ourkarnataka.com/kannada/jai_kannadamma/devi_mahatme.htm
http://www.ourkarnataka.com/pattanga/pattanga_main.htm
http://www.kar.nic.in/samskruthi/Homepage/home.htm
http://www.ourkarnataka.com/tippuexpress/
http://www.ourkarnataka.com/lankesh/

http://www.tarangaonline.com/taranga/index1.asp
http://www.roopatara.com/roopatara/index1.asp
http://www.adikepatrike.com/index.php

http://in.kannada.yahoo.com/
http://msn.webdunia.com/kannada/index.htm

http://chitravarte.com/

Vinod Kumar. N ಅಂತಾರೆ...

ಸಖತ್ತಾಗಿ ಹೇಳಿದ್ದೀರ NS

sham ಅಂತಾರೆ...

ಯೂನಿಕೋಡಿನಲ್ಲಿ ಕನ್ನಡ ಅಕ್ಷರಗಳು ಮಿಳಿತ ಆಗಲೇಬೇಕು ನಿಜ. ಈ ಕ್ರಿಯೆಯನ್ನು ನಮ್ಮ, ಅನೇಕ, ಸುದ್ದಿ ಸಂಸ್ಥೆಗಳು ಮಾಡುತ್ತಿಲ್ಲ, ನಿಜ. ಯಾಕೆಂದರೆ, ಆ ಸಂಸ್ಥೆಗಳಿಗೆ ಯೂನಿಕೋಡಿನ ದೂರಗಾಮಿ ಪ್ರಯೋಜನಗಳು ಗೊತ್ತಿಲ್ಲ. ನಿಜ. ಕೆಲವರಿಗೆ ಗೊತ್ತಿದೆ ಆದರೆ ಮಾಡುವುದಿಲ್ಲ, ನಿಜ. ಗೊತ್ತಿದ್ದೂ ಮಾಡುವುದಿಲ್ಲ ನಿಜ್ಜ.

ಯಾಕೆಂದರೆ ಆಸ್ಥೆಯಿಲ್ಲ.

ಆಸ್ಥೆ ಎನ್ನುವುದು ಎಂಥ ಪದ!

ಆಸ್ಥೆಗೆ ಅರವಳಿಕೆ ಬಂದಿದೆ. ಯಾಕೆಂದರೆ, ಕೆಲವರು ಮೊದಲು ಇಂಗ್ಲಿಷ್ ಪತ್ರಿಕೆ ಓದಿ ಆನಂತರ ಟೈಂ ಇದ್ದರೆ ಕನ್ನಡ ಪತ್ರಿಕೆ ತಿರುವಿ ಹಾಕುತ್ತಾರೆ, ನಿಜ್ಜ.

ಗೂಗಲ್ಲಿಗೆ ಕನ್ನಡದ ಮೇಲೆ ದ್ವೇಷ ಏನೂ ಇಲ್ಲ. ಯಾವ ಭಾಷೆಯಲ್ಲಿ ಜನ ಹೆಚ್ಚು ಇಷ್ಟ ಪಡುತ್ತಾರೋ ಮತ್ತು ಯಾವ ಭಾಷೆ ಅಂತರ್ ಜಾಲದಲ್ಲಿ ಫಳಫಳಿಸುತ್ತದೋ ( reflect) ಅದನ್ನು ಗೂಗಲ್ಲು ತಂತಾನೆ ಸ್ವೀಕರಿಸುತ್ತದೆ. ಅದು ಒಂದು ಇಂಜಿನ್ನು. ನಿಮ್ಮ ಮನಸ್ಸು ಅಲ್ಲ.

ದಟ್ಸ್ ಕನ್ನಡದಲ್ಲಿ ನಾನು ಟ್ರೂ ಟೈಪ್ ಫಾಂಟುಗಳೊಂದಿಗೆ 7 ವರ್ಷ ಏಗಿದ್ದೇನೆ. ಇತ್ತೀಚೆಗೆ ಯೂನಿಕೋಡ್ ಬಳಸಲು ಆರಂಭಿಸಿದ್ದೇವೆ. ಮಾನ್ಯ ಓದುಗರು ಗಮನಿಸಿರಬಹುದು. ಆದರೆ ವಿಚಾರ ಅದಲ್ಲ.

ಬರೀ ಕನ್ನಡ ಅಕ್ಷರಗಳನ್ನು ಕುಟ್ಟಿ ನ್ಯೂಸ್ ಸ್ಟೋರಿ ಮಾಡಿ ಅಪ್ ಲೋಡಿದ ಮಾತ್ರಕ್ಕೆ ತನ್ನ ಕೆಲಸ ಮುಗಿಯಿತು ಎಂದು ಭಾವಿಸುವ ಪತ್ರಕರ್ತರು ಮತ್ತು ಮೀಡಿಯಾ ಹೌಸುಗಳು ಇಂಟರ್ ನೆಟ್ ಪತ್ರಿಕೋದ್ಯಮದ ಕಡೆ ತಲೆ ಇಟ್ಟೂ ಮಲಗಬಾರದು. ಹಾಗೆ ಮಾಡಿದ್ದೇ ಆದರೆ ಅವರ ಶ್ರಮ ವ್ಯರ್ಥ ಮತ್ತು ಅವರು ಸೈಬರ್ ಕನ್ನಡದ ಹಿತ ಶತ್ರುಗಳು ಎನಿಸುತ್ತಾರೆ. ಪಾಪ ಈ ವಿಷಯ ಅವರಿಗೇ ಗೊತ್ತಿಲ್ಲ.

ಈಚೆಗೆ ವಿಷ್ಣುವರ್ಧನ್ ತೀರಿಕೊಂಡ ದಿನ ನಾನು ನನ್ನ ಸಹೋದ್ಯೋಗಿಗಳಿಗೆ ಬೆಳಗಿನ ಜಾವ ಒಂದು ಈ ಮೇಲ್ ಬರೆದು ಇವತ್ತಿನ ಇಡೀ ದಿನದ ಅಂತರ್ ಜಾಲ ಉತ್ಪನ್ನವನ್ನು ವಿಷ್ಣುಗೆ ಮುಡಿಪಾಗಿಡಿ ಎಂದು ಕಿವಿಮಾತು ಕೊಟ್ಟಿದ್ದೆ. ನಾನೂ ಕಂಪ್ಯೂಟರ್ ಮಂದೇ ಇದ್ದೆ. ಅಂತೆಯೇ ಕೆಲಸ ಸಾಗಿತು.

ಮಾರನೆ ದಿನ, ಅದರ ಮಾರನೆ ದಿನ ಮತ್ತದರ ಮಾರನೆದಿನ ನಮ್ಮ ವೆಬ್ ಲಾಗಿನ್ ವರದಿ ನೋಡಿದಾಗ ನನಗೆ ಆಶ್ಚರ್ಯವೇನೂ ಆಗಲಿಲ್ಲ. ಯಾಕೆಂದರೆ, ನನಗೆ ಗೊತ್ತಿತ್ತು. ಇವತ್ತು ಕುಂಭಮೇಳ ಆಗಿ, ಸಂಚಾರ ದಟ್ಟಣೆ ಆಗಿ ಪುಟಗಳು ಬೌನ್ಸ್ ಆಗುತ್ತವೆ ಅಂತ. ಪ್ರತಿದಿನ ನಮ್ಮ ಚಾನಲ್ಲಿಗೆ ಭೇಟಿ ಕೊಡುವ ಕನ್ನಡ ಪ್ರೇಮಿಗಳಿಗಿಂತ ಎಷ್ಟೋ ಪಾಲು ಹೆಚ್ಚು ಮಂದಿ ಆ ಮೂರು ದಿನ ಬಂದು ಹೋಗಿದ್ದರು. ಎಲ್ಲಿಂದಲೋ, ಯಾತಕ್ಕೋ ಬಂದು ಹೋಗಿದ್ದರು. ಅಂದಹಾಗೆ, ಇದು ಸಿನಿಮಾ ಪ್ರೇಮ ಅಲ್ಲ. ವಿಷ್ಣುವರ್ಧನ್ ಮೇಲಿನ ಪ್ರೀತೀನೂ ಅಲ್ಲ.


ಅವರೆಲ್ಲ ಎಲ್ಲಿಂದ, ಯಾತಕ್ಕೋಸ್ಕರ ಬಂದಿದ್ದರು ಎಂದು ಯಾರಾದರೂ ತಿಳಿಸುವುದಾರೆ, ನನ್ನ ಇವತ್ತಿನ ಈ ಪ್ರತಿಕ್ರಿಯೆ ಚೂರು ಸಾರ್ಥಕ.

ಶಾಮ್, http://thatskannada.oneindia.in

Jayalaxmi ಅಂತಾರೆ...

ಲೇಖನ ಪ್ರಸ್ತುತ ಮತ್ತು ಚೆನ್ನಾಗಿದೆ.

hivitla.tk ಅಂತಾರೆ...

ಗುರೂ ನಾನಂತೂ ಹಿಂದೂ ಮುಂದೂ ನೋಡದೆ ಕನ್ನಡ ಯುನಿಕೋಡ್ ಬಳಸಿ ವೆಬ್ ತಾಣವೊಂದನ್ನು ರಚಿಸಿದೆ.. www.hivitla.tk ಏನಂತೀರಿ ಸಾರ್..!?

ಅನಾನಿ ಅಂತಾರೆ...

kannada.webdunia.com ಸಹ ಯೂನಿಕೋಡ್ ಬಳಸುವ ಪ್ರಮಖ ವೆಬ್ ತಾಣವಾಗಿದೆ.

ಜಾಕಾಸ್ ಹುಡ್ಗ... ಅಂತಾರೆ...

http://justkannada.in ದಲ್ಲು ಕೊಡ ಯೂನಿಕೋಡ್ ಬಳಸಿದ್ದಾರೆ..ನೋಡಿ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails