ಸನ್ಮಾನ್ಯ ಲೋಕಾಯುಕ್ತರೇ...ಕನ್ನಡದಲ್ಲಿ ಮಾತಾಡಿ ಅನ್ನೋದು ಬ್ಲ್ಯಾಕ್‍ಮೇಲಾ?ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!’
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!
(ಮೇಲೆ ಬರೆದಿರೋ ಪದಗೋಳು ನಮ್ ಎಂಡ್ ಕುಡುಕ ರತ್ನಂದು. ಅಂದ್ರೆ ಜೆ.ಪಿ.ರಾಜರತ್ನಂ ಅವ್ರುದ್ದು.)

ನ್ಯಾಯಮೂರ್ತಿಗಳ ಈ ಸಿಟ್ಟು ನ್ಯಾಯಾನಾ?

ಗೌರವಾನ್ವಿತರಾದ ಶ್ರೀ ಸಂತೋಷ್ ಹೆಗ್ಡೆಯವರನ್ನು ಭಾಳ ಒಳ್ಳೇ ಪ್ರಾಮಾಣಿಕ ನ್ಯಾಯಮೂರ್ತಿಗಳು ಅಂತಾನೇ ನಮ್ಮ ಕರ್ನಾಟಕ ರಾಜ್ಯ ಸರ್ಕಾರದೋರು ಕನ್ನಡನಾಡಿನ ಸೇವೆ ಮಾಡಲಿ ಅಂತಾ ಲೋಕಾಯುಕ್ತ ಪಟ್ಟದಲ್ಲಿ ಕೂಡಿಸಿರೋದು. ಆ ಸ್ಥಾನಕ್ಕೆ ಅವರು ಘನತೆ ಗೌರವ ತಂದುಕೊಡೋ ಹಾಗೇ ನಡ್ಕೊತಿದಾರೆ ಅಂತಾ ಇಡೀ ನಾಡು ಮೆಚ್ಚಿಕೊಳ್ತಿದೆ. ಅಂದ್ರೆ ಅವ್ರು ಭ್ರಷ್ಟಾಚಾರ ತೊಡೆದು ಹಾಕಕ್ಕೆ ನಿಂತಿರೋ ದೇವರ ಹಾಗೆ ನಮ್ ಜನರ ಕಣ್ಣಗೆ ಕಾಣುಸ್ತಾ ಇದಾರೆ ಅಂದಂಗಾಯ್ತು. ಇರಲಿ ಬಿಡಿ, ಅವ್ರು ಜನುಕ್ಕೆ ದೇವರ ಥರಾ ಕಾಣಕ್ಕೂ ಮೇಲೆ ಬರೆದ ರತ್ನನ್ ಪದುಕ್ಕೂ ಅಂಥಾ ಸಂಬಂಧ ಏನಿಲ್ಲಾ, ಹಂಗೇ ನೆನಪಾಯ್ತು ಅಷ್ಟೆ.

ಮೊನ್ನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಒಂದು ಸಮಾರಂಭದಲ್ಲಿ ಘನತೆವೆತ್ತ ನ್ಯಾಯಮೂರ್ತಿಗಳು ಭಾಷಣಾ ಮಾಡೋವಾಗ ಅದ್ಯಾವನೋ ಐನಾಸಿ ಕನ್ನಡದಲ್ಲಿ ಮಾತಾಡಿ ಅಂದುಬುಟ್ಟಾ ಅಂತಾ ಗೌರವಾನ್ವಿತರು, ಭಾರಿ ಅಪಮಾನಕ್ಕೊಳಗಾದವರಂತೆ "ನಾನ್ ಯಾವನ್ಗೂ ಹೆದ್ರಲ್ಲಾ, ನಾನು ನಿಮಗಿಂತಾ ಪಸಂದಾಗ್ ಕನ್ನಡಾ ಮಾತಾಡ್ತೀನಿ, ನಾನೂ ಕನ್ನಡಿಗ, ಆದ್ರೂ ನಾನು ಇಲ್ಲಿ ಇಂಗ್ಲಿಷಲ್ಲೇ ಮಾತಾಡೋದು. ಅದು ನನ್ನ ಹಕ್ಕು, ಇಲ್ಲಿರೋ ಹಲವರಿಗೆ ಕನ್ನಡ ಬರಲ್ಲಾ, ಅದುಕ್ಕೇ ಇಂಗ್ಲೀಷ್ ಮಾತಾಡ್ತೀನಿ" ಅಂದ್ರಂತೆ. ಹೀಗಂತಾ ಇಂಡಿಯನ್ ಎಕ್ಸ್‍ಪ್ರೆಸ್ ಸಮೂಹದ ಒಂದು ಪತ್ರಿಕೆಯಲ್ಲಿ ವರದಿ ಮೂಡಿ ಬಂದಿದೆ.

ಕರ್ನಾಟಕದ ಆಡಳಿತ ಭಾಷೆ ಕನ್ನಡ ಅನ್ನಕ್ಕಾಗುತ್ತಾ?

ಕರ್ನಾಟಕದಲ್ಲಿ ಹಲವರಿಗೆ ಕನ್ನಡ ಬರಲ್ಲಾ, ಅದುಕ್ಕೇ ವಿಧಾನಸಭೇ ಕಲಾಪ, ಮುಖ್ಯಮಂತ್ರಿ ಸ್ಪೀಚು ಎಲ್ಲಾ ಇಂಗ್ಲೀಷಲ್ಲಿ ಇರಲಿ ಅನ್ನೋ ಮನಸ್ಥಿತಿ ಸರೀನಾ? ಹಾಗಾದ್ರೆ ಕರ್ನಾಟಕ ಅಂದ್ರೇನು? ಇಲ್ಲಿನ ಆಡಳಿತ ಭಾಷೆ ಕನ್ನಡಾ ಅಂದ್ರೇನು? ಕನ್ನಡ ನಾಡಲ್ಲಿ ಹಲವರಿಗೆ ಕನ್ನಡ ಬರಲ್ಲಾ ಅಂತಾ ನಮ್ಮ ಸರ್ಕಾರ ಇಂಗ್ಲೀಷಲ್ಲಿ ಆಡಳಿತ ಮಾಡೋದಕ್ ಆಗುತ್ತಾ? ಅದು ಸರೀನಾ? ಹಾಗೇನೇ ನ್ಯಾಯಮೂರ್ತಿಗಳುನ್ನ ಕನ್ನಡದಲ್ಲಿ ಮಾತಾಡಿ ಅಂತಾ ಕೇಳಿದ ವ್ಯಕ್ತಿಗೆ ಇಂಗ್ಲೀಷ್ ಬರ್ತಿಲ್ದೆ ಹಾಗೆ ಕೇಳಿರಬಹುದಲ್ವಾ? ಬರ್ತಾ ಇದ್ರೂ ಏನಂತೆ? ಬದೇ ಇರೋರಿಗೆ ಅನುಕೂಲ ಆಗಲೀ ಅಂತಾ ಕೇಳಿರಬೌದಲ್ವಾ? ಅದುಕ್ಕೇ ಬ್ಲಾಕ್‍ಮೇಲೂ ಅನ್ನೋ ಖಾರದ ಮಾತಾಡಿ ನಾ ಎದ್ ಹೋಗ್ತೀನಿ ಅಂದುಬುಟ್ರೆ ಹೆಂಗೇ ಗುರ್ರೂ? ಇಷ್ಟಕ್ಕೂ ಬೆಂಗಳೂರು ಮಹಾನಗರ ಪಾಲಿಕೆಯ ಅಭ್ಯರ್ಥಿಗಳು, ಮತದಾರರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತಾಡಿ ಅಂತಾ ಕೇಳೋದು ಅಪರಾಧಾನಾ?

ಸಂಕುಚಿತತೆ ಅನ್ನೋದ್ರ ಅರ್ಥ ತಿಳಿಯದ ಮಾಧ್ಯಮ!

ಈ ಘಟನೆಗೆ ಇಂಡಿಯನ್ ಎಕ್ಸ್‍ಪ್ರೆಸ್ ಸಮೂಹದ ಪತ್ರಿಕೆ ಕೊಟ್ಟಿರೋ ಹೆಡ್ಡಿಂಗು "ಪೆರೋಕಿಯಲ್ ಡಿಮಾಂಡ್ ಆಂಗರ್ಸ್ ಹೆಗ್ಡೆ" ಅಂತಾ. ಪೆರೋಕಿಯಲ್ ಅಂದ್ರೆ ನಿಘಂಟಲ್ಲಿ ನಾನಾ ಅರ್ಥಗಳಿದ್ರೂ ಇಲ್ಲಿ ಬಳಕೆ ಆಗಿರೋದು "ಪ್ರಾದೇಶಿಕ ಸಂಕುಚಿತತೆ" ಅನ್ನೋ ಅರ್ಥದಲ್ಲಿ ಅಂತನ್ನೋದು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿ ಅಂದ್ರೆ ಅದೆಂಗೆ ಸಂಕುಚಿತ ಮನೋಭಾವದ ಬೇಡಿಕೆ ಆಗುತ್ತೆ? ಅಂತಾ ಈ ಪತ್ರಿಕೆಯೋರುನ್ನಾ ಯಾರಾನಾ ಒಸಿ ಕೇಳಬೇಕಾಗಿದೆ ಅಲ್ವಾ ಗುರೂ! ಯಾವುದಾದ್ರೂ ರಾಜ್ಯದ ಜನಾ ನಮ್ಮ ಮೇಲೆ ಬೇರೆ ಭಾಷೆ ಹೇರಬೇಡಿ ಅನ್ನೋದೇ ದೊಡ್ಡ ಅಪರಾಧ ಅನ್ನೋಹಾಗೆ ಇವ್ರು ನಡ್ಕೋತಾ ಇರೋದನ್ನು ಒಪ್ಪಕ್ಕಾಗುತ್ತಾ ಗುರೂ?

6 ಅನಿಸಿಕೆಗಳು:

ಮಾಯ್ಸ ಅಂತಾರೆ...

ಇದಕ್ಕೆ ತಕ್ಕ ಪರಿಹಾರವನ್ನು ಸ್ವೀಡನ್ ದೇಶದಲ್ಲಿ ಈ ಕೆಳಗಿನ ಕೊಂಡಿಯಂತೆ ಕಂಡುಕೊಂಡಿದ್ದಾರೆ.

http://www.thelocal.se/25692/20100323/

ಇಲ್ಲಿ ಸ್ವೀಡಿಶ್ ನುಡಿಯನ್ನು ಕಾಯಲು "The Language Defence Network (Nätverket Språkförsvaret)" ರಚಿಸಿಕೊಂಡಿದ್ದಾರೆ.

ಈ ಮೇಲಿನ ಅಧಿಕಾರಿಯ ಹಾಗೆ ಆ ದೇಶದಲ್ಲಿ ಅಂತಹ ಹೇಳಿಕೆ ಕೊಟ್ಟಿದ್ದರೆ, ಕಾನೂನಿನಂತೆ ಶಿಕ್ಶೆ ಕೊಡಬಹುದು.

Vadiraj Rao ಅಂತಾರೆ...

BJP governement in Karnataka is taken a path of Bihar....

Made a mistake by voting BJP.... Is there anyone who will answer the power cut problem in Karnataka.? NO..... i guess...

No Decipline what so ever.... no timing... worst administration ever in karnataka.

vijayashankar metikurke ಅಂತಾರೆ...

ವಿಜಯಶಂಕರ್ ಮೇಟಿಕುರ್ಕೆ. ಇದೇ ಸುದ್ದಿಯನ್ನು ಟೈಮ್ಸ್ ಅನ್ನೊ ಇಂಗ್ಲೀಶ್ ಪತ್ರಿಕೆ ಕೂಡ ಎನೊ ಮಹ ಸಾಧಿಸಿರೋರ ತರಹ ಕನ್ನಡ ಜಿಂಗೋಯಿಸ್ಮ್ ಕಂಡೆಮ್ಣ್ಡ್ ಬೈ ಲೋಕಾಯುಕ್ತ ಅಂತ ಹಾಕಿದಾರೆ. ಕನ್ನಡದಲ್ಲಿ ಪ್ರಶ್ನೆ ಕೇಳೋದು ಜಿಂಗೋಯಿಸ್ಮ್ ಅಂತ ಅಂದ್ರೆ ನಾವು ಏನು ಅರಾಬಿಕ್ ನಲ್ಲಿ ಅಥವ್ ಸ್ವಾಹಿಲಿನಲ್ಲಿ ಕೇಳಬೇಕಾ?. ಅಂತು ಕನ್ನಡಿಗರೆ ಕನ್ನಡಿಗರಿಗೆ ಶತ್ರುಗಳು ಅನ್ನೋದು ನಿರ್ಧಾರವಾಯಿತು. ರಾಜ ರಾಜೇಶ್ವರಿ ನೀನೆ ಕಾಪಾಡು.

Anonymous ಅಂತಾರೆ...

Today, I heard Advertisment of "Santoor soap" in Telagu (Big FM, in the morning) ....what is going on in namma bengaluru ....

ಶ್ವೇತ ಅಂತಾರೆ...

Thoo ishtu dodda educated anisikolllo vayya ee thara nadkondre en helodu. illiro janakke kannada baralla andre ivnu kannadadalli maatadidre avru kaltukotaare. adu bittu avra juttu hidkothini andre henge.
namma deshadalli ashte ee reeti anisutte. french deshada prime minister amarikakke bandidaane, french nalle maataaduttiroodu. illiyavarige french baralla antenu english mataduttilla.

Unknown ಅಂತಾರೆ...

ನ್ಯಾಶ್ನಲ್ ಇಂಟ್ರ್ನ್ಯಾಶ್ನಲ್ ಲೆವೆಲ್ನಾಗೆ ಪೇಮಸ್ಸಾಗ್ಬೇಕಂದ್ರೆ ಇಂಗೆಲ್ಲ ಮಾತಾಡ್ಲೇಬೇಕು ಬುಡಪ್ಪೋ.. ನಿಂಗೆಲ್ಲ ಗೊತ್ತಾಗಕಿಲ್ಲ ಅವೆಲ್ಲಾ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails