ಕೆಂಪೇಗೌಡ ವಿಮಾನ ನಿಲ್ದಾಣ: ಬದಲಾದ ಹೆಸರು ಮೂಡಿಸಿದ ಪ್ರಶ್ನೆಗಳು!

( BIALನ ಚಿಹ್ನೆ ಹೀಗಾಗಬಹುದೇ? - ಕಾಲ್ಪನಿಕ ಚಿತ್ರ)
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಇನ್ನೇನು "ಕೆಂಪೇಗೌಡ ಅಂತರರಾಷ್ತ್ರೀಯ ವಿಮಾನ ನಿಲ್ದಾಣ" ಎಂದಾಗಲಿದೆ ಎನ್ನುವ ಸುದ್ದಿ ಇತ್ತೀಚಿಗೆ ಪ್ರಕಟವಾಗಿದೆ. ನಮ್ಮೂರಿನ ವಿಮಾನ ನಿಲ್ದಾಣದ ಹೆಸರನ್ನು ನಮಗೆ ಬೇಕಾದಂತೆ ಇಟ್ಕೊಳ್ಳೋ ಅವಕಾಶ ಸಿಕ್ಕಿದ್ದು ಸಂತಸದ ವಿಷಯ ಅನ್ನೋದರಲ್ಲಿ ಎರಡು ಮಾತಿಲ್ಲ. ಈ ಹೆಸರಿಡುವಂತೆ ದನಿ ಎತ್ತಿ ದೊಡ್ಡ ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಂಡ ಕರ್ನಾಟಕ ರಕ್ಷಣಾ ವೇದಿಕೆಗೆ ಇದೊಂದು ಹುಮ್ಮಸ್ಸಿನ ಯಶಸ್ಸು! ಅಭಿನಂದನೆಗಳು!!

ಹೆಸರಿಡಲು ಇರುವ ಅಡ್ಡಿಗಳು!

ನಮಗೆ ಬೇಕಾದ ಹೆಸರುಗಳನ್ನು ನಮ್ಮೂರಿನ ವಿಮಾನ ನಿಲ್ದಾಣಕ್ಕೆ ಇಡಲು ಅದೆಷ್ಟು ಸಮಯ ಬೇಕಾಯಿತು? ಅದೆಷ್ಟು ತೊಡಕುಗಳು ಎನ್ನುವುದನ್ನು ಗಮನಿಸಿ ನೋಡಿದಾಗ ಈ ತೊಡಕುಗಳು ಬರೀ ವಿಮಾನ ನಿಲ್ದಾಣದ ಹೆಸರಿಡುವಲ್ಲಿ ಮಾತ್ರಾ ಆಗಿಲ್ಲಾ ಎನ್ನುವುದು ಕಾಣುತ್ತದೆ. ನಮ್ಮೂರಿನ ಹೆಸರುಗಳ ಬದಲಾವಣೆಯ ಕಥೇನೇ ನೋಡಿ. ಬೆಂಗಳೂರಾಗಲು ನಾವಿನ್ನೂ ಎಷ್ಟು ಕಾಯಬೇಕೋ ಎನ್ನಿಸುವಂತಿದೆ. "ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವಾ ಹೂಡಿ" ಬರುವಂತೆ ಆಗಾಗ ಬರುವ ಪತ್ರಿಕಾ ವರದಿಗಳು ನಮ್ಮಲ್ಲಿ ಆಶಾಭಾವನೆಗೆ ಕಾರಣವಾಗುತ್ತಿದೆಯಷ್ಟೇ ಹೊರತು ಇನ್ನೂ ಆಸೆ ಫಲಿಸುತ್ತಿಲ್ಲಾ ಎನ್ನುವಂತಿದೆ... ಪರಿಸ್ಥಿತಿ. ಮೂಲತಃ ಇರುವ ತೊಡಕುಗಳಲ್ಲಿ ಪ್ರಮುಖವಾದದ್ದು.. ನಮ್ಮ ಜನರಲ್ಲಿ ಇನ್ನೂ ಎಚ್ಚರವಾಗಿರದ ಕನ್ನಡತನ! ನಮ್ಮವರೇ ಇಲ್ಲಿನ ಕಟ್ಟಡ, ಯೋಜನೆ, ಬೀದಿ, ಅಣೇಕಟ್ಟೆ, ಉದ್ಯಾನವನ, ಬಡಾವಣೆಗಳಿಗೆ ಹೆಸರಿಡುವಾಗ ಸೂಚಿಸೋದು ಕನ್ನಡೇತರರ ಹೆಸರನ್ನೇ ಅನ್ನುವ ಹಾಗಿದೆ. ಮಹಾತ್ಮಗಾಂಧಿ ರಸ್ತೆ, ಕಸ್ತೂರ್ ಬಾ ರಸ್ತೆ, ಇಂದಿರಾಗಾಂಧಿ ವೃತ್ತ, ದೋನಿ ವೃತ್ತ,  ರಾಜಾಜಿನಗರ, ಜಯಪ್ರಕಾಶನಗರ, ರಾಜೀವ್ ಗಾಂಧಿನಗರ, ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೇಕಟ್ಟೆ, ಇಂದಿರಾಗಾಂಧಿ ಉದ್ಯಾನವನ, ನೆಹರೂ ತಾರಾಲಯ, ದೀನದಯಾಳ ಉಪಾಧ್ಯಾಯ ರಸ್ತೆ, ಅಟಲ್ ಸಾರಿಗೆ, ವಿವೇಕಾನಂದನಗರ, ರಾಮಕೃಷ್ಣ ನಗರ, ಶಾರದಾದೇವಿನಗರ... ಹೀಗೆ! ಅಂದರೆ ರಾಷ್ಟ್ರೀಯ(?) ನಾಯಕರುಗಳ ಹೆಸರನ್ನು ಇಡಲೇಬಾರದು ಎನ್ನುವುದು ನಮ್ಮ ನಿಲುವಲ್ಲ! ಎಲ್ಲೋ ಅಪರೂಪಕ್ಕೊಂದು ಹೀಗೆ ಇಟ್ಟಿದ್ದರೆ ಪರ್ವಾಗಿರಲಿಲ್ಲ! ಆದರೆ ಹಾಗಾಗದೆ ಏನೇ ಹೊಸದು ಬಂದರೂ ಪರಭಾಷಿಕರ ಹೆಸರಲ್ಲೇ ಬರೋದು ಒಳ್ಳೇದಲ್ಲಾ ಅನ್ನೋದು ನಮ್ಮ ನಿಲುವು. ಇನ್ನೂ ನಮ್ಮ ಕನ್ನಡದ ಸಮಾಜವನ್ನೇ ಬೆಳಗಿದ ಅನೇಕ ಕನ್ನಡಿಗ ನಾಯಕರುಗಳ ಹೆಸರುಗಳೇ ಪ್ರಮುಖವಾಗಿ ಬಳಕೆಯಲ್ಲಿ ತಂದಿಲ್ಲದಿರುವಾಗ ಇದ್ಯಾಕಪ್ಪಾ ಈ ಪ್ರವಾಹ ನಮ್ಮ ಮೇಲೆ ಎನ್ನಿಸುತ್ತದೆ! ಇನ್ನು ಎರಡನೆಯ ಅಡ್ಡಿ, ಹೀಗೆ ಹೆಸರನ್ನು ನಾವು ಇಡಬೇಕೆಂದುಕೊಂಡರೂ ಅದಕ್ಕೆ ಒಪ್ಪಿಗೆ ಕೊಡಬೇಕಾದವರು ದೆಹಲಿ ದೊರೆಗಳು! ತಪ್ಪು ಉಚ್ಚರಣೆಯ ನಮ್ಮೂರ ಹೆಸರುಗಳನ್ನು ಬದಲಾಯಿಸಲು ನಮಗೆ ಸ್ವಾತಂತ್ರವಿಲ್ಲ! ನಮ್ಮೂರ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕೆಂದರೆ ಕೇಂದ್ರ ಅನುಮತಿ ಕೊಡಬೇಕು! ಇದೆಲ್ಲಾ ನೋಡಿದಾಗ ಭಾರತದಲ್ಲಿ ರಾಜ್ಯಗಳಿಗೆ ಇಂಥಾ ವಿಷಯಗಳಲ್ಲಾದರೂ ಸ್ವಲ್ಪ ಅಧಿಕಾರ ಇರಬೇಕು ಅನ್ನಿಸೋಲ್ವಾ ಗುರೂ!

12 ಅನಿಸಿಕೆಗಳು:

Anonymous ಅಂತಾರೆ...

ಕನ್ನಡಿಗರೆ ಆದ, ಇಡಿ ರಾಷ್ಟ್ರಕ್ಕೆ ಹಲವಾರು ಉಪಯುಕ್ತ ಕೆಲ್ಸ ಮಾಡಿದ ಸರ್ ಎಂ ವಿಶ್ವೇಶ್ವರಯ್ಯನವರ ಹೆಸರು ಯಾಕೆ ಯಾರಿಗೂ ನೆನಪು ಬರಲ್ಲಾ? ಕೆಂಪೆಗೌಡರ ಹೆಸರಿನಲ್ಲಿ ಬಸ್ ನಿಲ್ದಾಣ , ನಗರ, ರಸ್ತೆ ಎಲ್ಲ ಆಗಲೆ ಇಲ್ಲವಾ ಗುರು? ಅವರ ಬೆಂಬಲಕ್ಕೆ ಅವರ ಪಂಗಡದವರು ಯಾರೂ ಮುಂದೆ ಬಂದು ಹೋರಾಟ ಮಾಡಲಿಲ್ಲ ಅನ್ನುವುದು ಕಾರಣವೆ ಗುರು?

Manju ಅಂತಾರೆ...

howdu.. bereya hesarannu idabekitthu.. Sir M. V hesaru thumbaa sukthavaagitthu.. athava DVG avara hesaru kooda idabahudaagitthu. Hegidru DVG avara hesralle 'Devenahalli' ide :-)

kashan ಅಂತಾರೆ...

Metro ge sir M V hesaru idakke agalve ? Itre chennagiratte.

ಆನಂದ್ ಅಂತಾರೆ...

ಸರ್ ಎಂ.ವಿಶ್ವೇಶ್ವರಯ್ಯನವರ ಹೆಸರಷ್ಟೇ ಅಲ್ಲಾ... ಇಡಬೇಕೆಂದರೆ ಮೈಸೂರು ಅರಸರುಗಳ ಹೆಸರೂ ಇಡಬಹುದಿತ್ತು. ಟಿಪ್ಪು ಹುಟ್ಟಿದ ಜಾಗ ದೇವನಹಳ್ಳಿ, ಹೈದರಾಲಿಯ ಕೋಟೆ ದೇವನಹಳ್ಳಿ, ಹೀಗೆ ಯಾರ ಹೆಸರಿಟ್ಟಿದ್ದರೂ ಓಕೆ. ಯಾಕೆಂದರೆ ಇವರೆಲ್ಲಾ ಕನ್ನಡಿಗರು (ಕನ್ನಡಿಗರಲ್ಲದಿದ್ದರೂ ನಾಡಿಗೆ ಕೊಡುಗೆ ಕೊಟ್ಟಿದ್ದರೆ ಸಾಕು). ಹಾಗೇ ಕೆಂಪೇಗೌಡರೂ ಕೂಡಾ ಕನ್ನಡಿಗರು ಮತ್ತು ಯಲಹಂಕದ ನಾಡಪ್ರಭುಗಳು, ಬೆಂಗಳೂರು ಕಟ್ಟಿದವರು. ಹಾಗಾಗಿ ಕೆಂಪೇಗೌಡರ ಹೆಸರು ಇಡಬಾರದಿತ್ತು ಎನ್ನುವುದು ಸರಿಯಲ್ಲ. ಅವರು ಗೌಡರಾದ್ದರಿಂದ ಇದು ಒಕ್ಕಲಿಗರ ಲಾಬಿ ಎನ್ನುವುದು ಕೂಡಾ ಸರಿಯಲ್ಲ. ಕರವೇ ನಿಲುವೂ ಕೂಡಾ ಬೆಂಗಳೂರಿನ ವಿಮಾನನಿಲ್ದಾಣಕ್ಕೆ ಕೆಂಪೇಗೌಡರ ಹೆಸರು, ಬೆಳಗಾವಿಯದ್ದಕ್ಕೆ ರಾಣಿ ಚೆನ್ನಮ್ಮನ ಹೆಸರು, ವಿಜಾಪುರದ್ದಕ್ಕೆ ಬಸವಣ್ಣನ ಹೆಸರು, ಮಂಗಳೂರಿನದ್ದಕ್ಕೆ ರಾಣಿ ಅಬ್ಬಕ್ಕನ ಹೆಸರೂ ಇಡಬೇಕೆನ್ನುವುದೇ ಆಗಿದೆ.

ತೆರಿಕೆ ಕೊಟ್ಟ ಹೆಮ್ಮೆ ಅಂತಾರೆ...

ಇದು ತುಂಬಾ ಒಳ್ಳೆಯ ಸುದ್ದಿ. ಈ ಕೆಲಸದಿಂದ ನಮ್ಮ ಬಡವರು ತುಂಬಾ ಉಪಯೋಗವಾಗುತ್ತೆ.

ನಾವು ಕೊಡುವ ತೆರಿಗೆಯಿಂದ ದಯವಿಟ್ಟು ರಸ್ತೆಗೊಂದು ವಿಶ್ವೇಶ್ವರಯ್ಯ, ಬಸವಣ್ಣ, ಕೆಂಪೇಗೌಡರ ಬಂಗಾರದ ದೊಡ್ಡ ದೊಡ್ಡ ಪ್ರತಿಮೆಗಳನ್ನು ನಿಲ್ಲಿಸಿ.

ಇನ್ನೊಂದು ಉಪಾಯ.. ೫ ವರ್ಷಕ್ಕೊಮ್ಮೆ ಬೇರೆ ಬೇರೆ ಮಹನೀಯರ ಹೆಸರನ್ನು ಇಡೋದು. ಆ ಮೇಲೆ 'ಬೆಂಗಳೂರು ಏರ್ಪೋರ್ಟಿನ' ನಾಮಚಾರಿತ್ರ್ಯಂ ಎಂಬ ಸ್ಮರಣ-ಸಚಿಕೆ ತಂದು ಒಂದು ಉತ್ಸವ ವಿಜ್ರುಮ್ಭಾನೆಯಿಂದ ಮಾಡೋಣ.!

Anonymous ಅಂತಾರೆ...

ತೆರಿಗೆ ಕೊಟ್ಟ ಹೆಮ್ಮೆ...
ನಿಮ್ಮ ವ್ಯಂಗ್ಯ ತುಂಬಿದ ಪ್ರತಿಕ್ರಿಯೆ ಸಕ್ಕತ್ತಾಗಿದೆ. ಆದರೆ ನಿಮ್ಮ ಮಾತಿನಂತೆ ಬಡವರಿಗೆ ಉಪಯೋಗಕಾರಿಯಾಗಿಲ್ಲದೆ ಇರುವುದೆಲ್ಲಾ ಬೇಡಾ ಎಂದು ನೋಡಿದರೆ ಈ ರಸ್ತೆ, ಕಾರು, ರೈಲು, ವಿಮಾನ, ಮಾಲ್, ಕಾಂಪ್ಲೆಕ್ಸ್, ಸಿನಿಮಾ ಇವ್ಯಾವುವೂ ಬೇಕಾಗಿಲ್ಲ! ಇಲ್ಲಿ ಬರೀ ಆಸ್ಪತ್ರೆ ಮತ್ತು ಧರ್ಮಚತ್ರಗಳಿದ್ದರೆ ಸಾಕಾಗುತ್ತೆ. ಈ ನಾಡಲ್ಲಿ ಕಾರ್ಖಾನೆಗಳೂ ಬೇಕಾಗಿಲ್ಲ! ಅವೆಲ್ಲಾ ಬಡವರಿಗೆ ಕೆಲಸ ಕೊಟ್ಟರೂ ಅವು ತಯಾರಿಸುವ ಉತ್ಪನ್ನಗಳು ಬಡವರಿಗೆ ಉಪಯೋಗವಾಗವು. ಉದಾಹರಣೆಗೆ ಟಯೋಟಾ ಕಾರು. ತೆರಿಗೆ ಹಣ ಬರೀ ಬಡವರಿಗೆ ಉಪಯೋಗವಾಗಬೇಕು ಎನ್ನುವುದು ಸರಿಯೇ ಯೋಚಿಸಿ.

ಸುಂದರ್

ತೆರಿಕೆ ಕೊಟ್ಟ ಹೆಮ್ಮೆ ಅಂತಾರೆ...

"ಸುಂದರ್" ನಿಮ್ಮ ಮಾತು ಎಷ್ಟು ಸೂಕ್ತ.

ಒಳ್ಳೆಯ ರೈಲು ವ್ಯವಸ್ಥೆ, ಕಾರು ಓಡಿಸಲು ಗುಂಡಿ-ರಹಿತ ರಸ್ತೆ, ಅಗಲವಾದ ವಿಮಾನ ನಿಲ್ದಾಣ ಗಳಿಂದ ಏನು ಹೆಮ್ಮೆ ಹಾಗು ಗೌರವ ಸಿಗುತ್ತೆ ನಮ್ಮ ಹಿರಿಯ ಹಾಗು ಬೃಹದ್-ದೇಶಕ್ಕೆ.

ಕಾರ್ಖಾನೆಗಳು ಬರಲಿ ಆದರೆ ಒಳ್ಳೆಯ 'ಕಾರ್ಮಿಕರ' ಪಕ್ಷಪಾತಿ ಕಾನೂನು ಬೇಡ. ಕಾರ್ಮಿಕರಿಂದ ಏನು ಹೆಮ್ಮೆ? ಗೌರವ? ನಮಗೆ ಅಂಬಾನಿ, ಮಲ್ಯರ ಮೇಲೆ ಇರುವ ಹೆಮ್ಮೆ, ಗೌರವ, ನಿಮ್ಮ ನಮ್ಮಂತಹ ಯಕಶ್ಚಿತ್ ತೆರಿಗೆದಾರರಿಂದ ದಕ್ಕುವುದೇ?

ಅದಕ್ಕೆ .. ನಿಮ್ಮ ಮಾತು ಸರಿ ಎಂದು ಒಪ್ಪುವೆನು. ಬಡವರು ಹಾಗು ಬಡತನ ಇದ್ದೆ ಇರುತ್ತೆ. ಆದರೆ ನಮಗೆ ಕೆಂಪೇಗೌಡರ ಹೆಸರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಟ್ಟೋ ಹೆಮ್ಮೆ, ಗೌರವ, ಅಭಿಮಾನ ಕ್ಕೆ ಏನು ಸಮ!

ಅಂದಹಾಗೆ ನನಗೆ ನನ್ನ ತೆರಿಗೆ ಹಣವನ್ನೂ ಮಠಕ್ಕೆ, ಪ್ರತಿಮೆಗಳಿಗೆ, ಪಾರ್ಕುಗಳಿಗೆ, ಹೆಸರು ಬದಲಾಯಿಸಲು, ದೊಡ್ಡದಾಗಿ ಜಂಬೂಸವಾರಿಯಾ ದಸರಾ ಇದಕ್ಕೆಲ್ಲ ಸದುಪಯೋಗ ಮಾಡೋ ನಮ್ಮ ಭವ್ಯ ಭಾರತದ ಎರಡೂ ಬಗೆಯ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೂ ಹೆಮ್ಮೆ ಇದೆ.

ಅದಕ್ಕೆ ನನಗೆ ತೆರಿಗೆ ಕೊಟ್ಟ ಹೆಮ್ಮೆ.!

Anonymous ಅಂತಾರೆ...

ತೆರಿಗೆ ಕೊಟ್ಟ ಹೆಮ್ಮೆ!
ಹೆಸರು ಬದಲಾಯಿಸಲು ಹಣ ಖರ್ಚಾಗುವುದಾ? ಆದರೂ ಎಷ್ಟಾದೀತು? ಸ್ವಾಮಿ... ಕೆಂಪೇಗೌಡ ಹೆಸರಿಡುವುದೇ ಹೆಮ್ಮೆ! ಅದೊಂದೇ ಹೆಮ್ಮೆ ಅಂತಾ ಯಾರಂದಿದ್ದಾರೆ? ನಮ್ಮ ತೆರಿಗೆ ಹಣ ಎಲ್ಲದಕ್ಕೂ ಖರ್ಚಾಗಬೇಕು.. ಅಂದರೆ ಆಸ್ಪತ್ರೆ, ಕಾರ್ಖಾನೆ, ಜಂಬೂ ಸವಾರಿ... ಎಲ್ಲಾದಕ್ಕೂ! ಯಾಕೆಂದರೆ ಮನುಷ್ಯನಿಗೆ ಬರೀ ಹೊಟ್ಟೆ ತುಂಬುವುದರಿಂದಲೇ ಬದುಕು ಪೂರ್ಣವಾಗುವುದಿಲ್ಲ. ಸರ್ಕಾರ ಒಳ್ಳೊಳ್ಳೆ ರಸ್ತೆ ಹಾಕಿದರೆ ಅದು ನೇರವಾಗಿ ಸಾಗಣೆ, ಸಾಗಣೇ ವೆಚ್ಚ, ಸಮಯದಲ್ಲಿ ಪೂರೈಕೆ, ಬೇಡಿಕೆ ಈಡೆರಿಕೆಗಳನ್ನು ನಡೆಸುತ್ತದೆ. ಇದರಿಂದಾಗಿ ಉತ್ಪನ್ನಗಳ ತಯಾರಿಕಾ ವೆಚ್ಚವು ಕಡಿಮೆಯಾಗಿ ಮಾರುಕಟ್ಟೆಯ ಬೇಡಿಕೆ ಹೆಚ್ಚುತ್ತದೆ. ಇದರಿಂದಾಗಿ ಉತ್ಪಾದನೆ, ಅದರಿಂದಾಗಿ ಉದ್ಯೋಗಾವಕಾಶ ಮತ್ತು ಬದತನ ನಿರ್ಮೂಲನೆ ಸಾಧ್ಯವಾಗುತ್ತದೆ. ಇದು ನನ್ನ ಗ್ರಹಿಕೆ! ಅದಕ್ಕೇ ನಮಗೆ ವಿಮಾನ ನಿಲ್ದಾಣವೂ ಬೇಕು, ಮೂಲಭೂತ ಸೌಕರ್ಯಗಳೂ ಬೇಕು, ಸರ್ಕಾರ ನಾ ಕಟ್ಟುವ ತೆರಿಗೆಯನ್ನು ಇದಕ್ಕೆ ಬಳಸುವುದು ನನಗೆ ಒಪ್ಪಿಗೆ.
ಮನೆಯಲ್ಲಿ ತರುವ ಸಾಮಾನುಗಳ ಪಟ್ಟಿಯನ್ನು ನೋಡಿ, ನಮ್ಮ ಹೊಟ್ಟೆ ತುಂಬಿಸಿಕೊಳ್ಳಲು ತರುವುದು ಬಹುಶಃ ಇಡೀ ಕರ್ಚಿನ ೧೦%ಕ್ಕಿಂತಾ ಹೆಚ್ಚಿರದು. ಉಳಿದದ್ದೆಲ್ಲಾ ಅದಕ್ಕೆ ಪೂರಕವಾಗಿದ್ದರೂ ಇರದಿದ್ದರೂ ಮಾಡುವ ಮಕ್ಕಳ ನಾಮಕರಣ, ಮನರಂಜನೆ, ಬಟ್ಟೆ, ಪ್ರವಾಸ ಇತ್ಯಾದಿಗಳಿಗೆ ಮಾಡುವ ಕರ್ಚೇ ಆಗಿದೆ! ಹಾಗೇ ಒಂದು ದೇಶಕ್ಕೂ...

ಸುಂದರ್

ತೆರಿಕೆ ಕೊಟ್ಟ ಹೆಮ್ಮೆ ಅಂತಾರೆ...

ಕರೆಕ್ಟ್ ಸುಂದರ ಅವರೆ.

ಅದಕ್ಕೆ ನಮ್ಮ ದೇಶದಲ್ಲಿ ಯಾವ ತೊಂದರೆಯೇ ಇಲ್ಲ. ನಾವು ಸಾಂಸ್ಕೃತಿಕ ಶ್ರೀಮಂತರು.

ಕೆಂಪೇಗೌಡರ ಒಂದು ದೊಡ್ಡ ಪ್ರತಿಮೆಯನ್ನು ಈ ಸಂತೋಷಕ್ಕೆ ನಮ್ಮ ಸರಕಾರ ಕಡಮೆ ಅಂದ್ರೂ ಒಂದೆರಡು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿಸಲಿ. ಅದೇ ಮುಖ್ಯ.!

ನೀವ್ ಹೇಳೋದು ಸರಿ.. ೧೦೦% ಫುಲ್ ಒಪ್ಪಿಗೆ.

Anonymous ಅಂತಾರೆ...

ತೆರಿಗೆ...
ನೀವು ಸರ್ಕಾರ ವಿಮಾನ ನಿಲ್ದಾಣದ ಹೆಸರಿಡುವುದನ್ನು ಮಠಗಳಿಗೆ ಕೊಡುವ ಹಣಕ್ಕೆ ಹೋಲಿಸುವುದು ತರವಲ್ಲ. ಮಠಕ್ಕೆ ದುಡ್ಡು ಕೊಡೋದ್ರು ಬಗ್ಗೆ ನನ್ನ ಸಹಮತವಿಲ್ಲ. ಆದರೆ ನಾಡಿನ ಜನರಲ್ಲಿ ಅಭಿಮಾನ ತುಂಬಲು, ಆ ಮೂಲಕ ಒಗ್ಗಟ್ಟು ಮೂಡಿಸಲು ಮತ್ತು ಆ ಮೂಲಕ ಉದ್ಧಾರವಾಗಲು ನಮ್ಮವರ ಹೆಸರುಗಲನ್ನು ಬಳಸುವುದು ಸರಿಯಾಗಿದೆ ಎನ್ನಿಸುತ್ತದೆ. ಹೆಸರು ಬದಲಾವಣೆ ನಿಮಗೆ ಮುಖ್ಯವಾದ ವಿಚಾರ ಅನ್ನಿಸದಿರಬಹುದು, ಬಡವರಿಗಾಗಿ ಎಂದು ನನಗೆ ಸಬ್ಸಿಡಿ ಕೊಡುವುದು ವೇಸ್ಟ್ ಅನ್ನಿಸುತ್ತೆ. ಕೆಲವರಿಗೆ ಪ್ರಪಂಚದ ಬದವರೆಲ್ಲಾ ಒಂದೇ ಎನ್ನಿಸುತ್ತದೆ, ನನಗೆ ಕನ್ನಡಿಗರು ಒಂದು ಎನ್ನಿಸುತ್ತದೆ! ಕನ್ನದಿಗರ ಬದತನ ಅಳಿಸಬೇಕು ಅನ್ನಿಸುತ್ತದೆಯೇ ಹೊರತು ಪ್ರಪಂಚದ ಬಡವರೆನ್ನೆಲ್ಲಾ ಉದ್ಧರಿಸಬೇಕು ಅನ್ನಿಸಲ್ಲ! ಲೋಕೋ ಭಿನ್ನ ರುಚಿಃ! ಏನಂತೀರಾ?

Anonymous ಅಂತಾರೆ...

ಅದೇ ಮುಖ್ಯ ಅಲ್ಲಾ! ಅದೂ ಮುಖ್ಯ!!

ಸುಂದರ್

ತೆರಿಕೆ ಕೊಟ್ಟ ಹೆಮ್ಮೆ ಅಂತಾರೆ...

ನೀವ್ ಹೇಳೋದು ಸರಿ.. ೧೦೦% ಫುಲ್ ಒಪ್ಪಿಗೆ.

ನಾನು ಬೇರೆ ದೇಶಕ್ಕೆ ಹೋಗಲಾ ಅಂತ ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails