ಅಸ್ಸಾಂ: ಸಮಸ್ಯೆಯ ಮೂಲ ಸರಿಯಾಗಿ ಗುರುತಿಸಬೇಡವೇ?

(ಫೋಟೋ ಕೃಪೆ: NDTV ವೀಡಿಯೋ)
ಇಂದು (೧೯.೦೮.೨೦೧೨) ಎನ್‍ಡಿಟಿವಿಯಲ್ಲಿ ಕಾಂಗ್ರೆಸ್ಸಿನ ಮುಖ್ಯಸ್ಥೆಯಾದ ಶ್ರೀಮತಿ ಸೋನಿಯಾಗಾಂಧಿಯವರು ಮಾಡಿದ ಒಂದು ಭಾಷಣದ ವೀಡಿಯೋ ಪ್ರಸಾರವಾಗ್ತಾಯಿದೆ. ಈಶಾನ್ಯ ರಾಜ್ಯಗಳ ಜನರು ದೇಶದ ಬೇರೆ ಬೇರೆ ಭಾಗಗಳಿಂದ ದಿಕ್ಕೆಟ್ಟು ತವರಿಗೆ ಮರಳುತ್ತಿರುವ ಸಂದರ್ಭದಲ್ಲಿ ಅವರ ಈ ಮಾತುಗಳು ಮಹತ್ವದ್ದಾಗಿವೆ. ಇವರು ಮಾತನ್ನಾಡುತ್ತಾ ಮೊದಲಿಗೆ "ಅಸ್ಸಾಮಿನಲ್ಲಿ ಏನಾಗುತ್ತಿದೆಯೋ ಅದು ಬಹಳ ದುಃಖದ ವಿಷಯ" ಎಂದಿದ್ದಾರೆ. ಅಸ್ಸಾಮಿನಲ್ಲಿ ವಲಸಿಗರ ವಿರುದ್ಧವಾಗಿ ಸ್ಥಳೀಯರು ಬಂಡೆದ್ದು ನಡೆಸಿದ ಗಲಭೆ ಸರಿಯಲ್ಲವೆನ್ನುವುದು ಇವರ ಮಾತಿನ ಅರ್ಥವೇ ಎಂಬ ಗೊಂದಲ ಇದರಿಂದುಂಟಾಗುತ್ತದೆ. ಮಾತನ್ನು ಮುಂದುವರೆಸುತ್ತಾ ಇವರು "ಈ ದೇಶ ಎಲ್ಲಾ ಭಾರತೀಯರದ್ದು, ಇಲ್ಲಿ ಯಾರಿಗೆ ಎಲ್ಲಿಗೆ ಹೋಗಿಬೇಕಾದರೂ ನೆಲೆಸುವ ಸ್ವಾತಂತ್ರ್ಯವಿದೆ" ಎಂದಿದ್ದಾರೆ. ತುಂಬಾ ಸೊಗಸಾಗಿ ಏಕತೆಯ ಮಂತ್ರದಂತೆ ಕೇಳುವ ಈ ಮಾತುಗಳು ನಿಜವಾಗಿಯೂ ಸದ್ಭಾವನೆಯನ್ನು ಮೂಡಿಸಬಲ್ಲುದೇ? ನಿಜಕ್ಕೂ ಮೂಲ ಸಮಸ್ಯೆಯನ್ನು ಇಲ್ಲವಾಗಿಸುವುದೇ? ಎನ್ನಿಸುತ್ತಿದೆ!

ಸಮಸ್ಯೆಯ ಮೂಲ ಎಲ್ಲಿದೆ?

"ಯಾರು ಎಲ್ಲಿಯಾದರೂ ಹೋಗಿ ನೆಲೆಸಬಹುದು" ಎನ್ನುವ ಮಾತನ್ನು ಹಿಡಿದುಕೊಂಡು ಹೋಗಿ ಇದ್ದಕ್ಕಿದ್ದಂತೆ ಕರ್ನಾಟಕದಿಂದ ಒಂದಿಪ್ಪತ್ತು ಲಕ್ಷ ಜನರು ಗೋವಾ ರಾಜ್ಯಕ್ಕೆ ವಲಸೆ ಹೋಗಿಬಿಟ್ಟರು ಎಂದುಕೊಳ್ಳೋಣ. ಏನಾಗುತ್ತದೆ ಆಗ? ಗೋವಾದ ಜನಸಂಖ್ಯೆ ಇರೋದೇ ೧೪ ಲಕ್ಷ. ಇಲ್ಲಿಂದ ೨೦ ಲಕ್ಷ ಜನರು ಅಲ್ಲಿಗೆ ವಲಸೆ ಹೋದರೆ ಗೋವಾದ ಜನಲಕ್ಷಣ(Demography)ದ ಕಥೆ ಏನಾಗುತ್ತದೆ? ಗೋವಾದಲ್ಲಿ ಇವತ್ತು ಕೊಂಕಣಿ ಭಾಷೆಯಿದೆ. ನಾಳೆ ಗೋವಾದ ಆಡಳಿತ ಭಾಷೆ ಯಾವುದಾಗುತ್ತದೆ? ಕೊಂಕಣಿಯ ಮೇಲೆ ಏನು ಪರಿಣಾಮವಾಗುತ್ತದೆ? ಗೋವಾದಲ್ಲಿಯೂ ಎಲ್ಲಾ ನಾಡುಗಳಲ್ಲಿರುವಂತೆಯೇ ಯೋಗ್ಯರೂ, ಅಯೋಗ್ಯರೂ, ಓದಿದವರೂ, ಓದದವರೂ, ಸೋಮಾರಿಗಳೂ, ಕೈಲಾಗದವರೂ ಇದ್ದಾರಲ್ಲವೇ? ವಲಸಿಗರಂತೂ ಸಾಮಾನ್ಯವಾಗಿ ಸ್ಥಳೀಯರಿಗಿಂತಾ ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಯುವವರಾಗಿರುತ್ತಾರೆ ಎನ್ನುವುದನ್ನಂತೂ ಬಲ್ಲವಷ್ಟೇ? ಅದು ಅಮೇರಿಕೆಯಾದರೂ, ಬೆಂಗಳೂರಾದರೂ ಸಾಮಾನ್ಯವಾಗಿ ಇದು ರೂಢಿಯಲ್ಲಿರುವುದೇ ಆಗಿದೆ. ಹೀಗಿದ್ದಾಗ ವಲಸಿಗರಿಂದ ಗೋವನ್ನರ ಬದುಕು, ಸಂಸ್ಕೃತಿ, ಭಾಷೆಗಳಿಗೆ ಧಕ್ಕೆ ಬರುತ್ತದೋ ಇಲ್ಲವೋ?

ಸಮಸ್ಯೆ ರಾಷ್ಟ್ರೀಯತೆಯ ಮುಸುಕಲ್ಲಿ ಮರೆಯಾದೀತೇ?

ಕಾಂಗ್ರೆಸ್ಸೆಂಬ ರಾಷ್ಟ್ರೀಯ ಪಕ್ಷಕ್ಕೇನೋ ಗೋವನ್ನರೂ ಕನ್ನಡಿಗರೂ ಒಂದೇ ಇರಬಹುದು. ಇಲ್ಲಿಂದ ೨೦ ಲಕ್ಷ ಜನರು ಗೋವಾಕ್ಕೆ ಗುಳೆ ಹೋದರೆ ಏನೂ ಅನ್ನಿಸದೆಯೂ ಇರಬಹುದು. ಆದರೆ ಗೋವನ್ನರಿಗೆ? ವಲಸಿಗರಿಂದ ಗೋವಾದ ಅನನ್ಯತೆಗೆ ಒದಗುವ ಧಕ್ಕೆ ಎಂಥದ್ದು ಎನ್ನುವುದನ್ನು ಯಾರಾದರೂ ಊಹಿಸಬಹುದು. ಇಂತಹ ಅನಿಯಂತ್ರಿತ ವಲಸೆಗೆ ಕಡಿವಾಣ ಬೇಕಲ್ಲವೇ? ಹುಸಿ ರಾಷ್ಟ್ರೀಯತೆಯ ಪ್ರತಿಪಾದಕರಿಗೆ, ಗೋವಾಕ್ಕೆ ನುಗ್ಗಿ ಅಲ್ಲಿನ ಭಾಷೆ, ಸಂಸ್ಕೃತಿ, ಅಲ್ಲಿನವರ ಬದುಕಿಗೆ ಧಕ್ಕೆ ಉಂಟು ಮಾಡುವವರು ಭಾರತೀಯರಾಗಿಬಿಟ್ಟರೆ ಪರ್ವಾಗಿಲ್ಲಾ...ಹಾಗೆ ಮಾಡುವವರು ಬೇರೆ ದೇಶದವರಾಗಿ ಮಾತ್ರಾ ಇರಬಾರದು ಎನ್ನಿಸಬಹುದೇನೋ? ಈ ಸಮಸ್ಯೆಗೆ ಶ್ರೀಮತಿ ಸೋನಿಯಾಗಾಂಧಿಯವರ ಆಶಯದಂತೆ ಪರಿಹಾರವೇನು? ಗೋವನ್ನರು ತಮ್ಮ ನಾಡಿಗೆ ಆಗಿರುವ ಕನ್ನಡಿಗರ ಅನಿಯಂತ್ರಿತ ವಲಸೆ ಬಗ್ಗೆ ದನಿ ಎತ್ತಬಾರದು ಮತ್ತು ಸೌಹಾರ್ದತೆಯಿಂದ ಅವರೊಡನೆ ಬಾಳಬೇಕು ಎನ್ನುವುದೇ? ನಿಜವಾಗಿ ನೋಡಿದರೆ ಈಗ ಯಾವುದರಿಂದಾಗಿ ಈ ಸಮಸ್ಯೆ ಹುಟ್ಟಿಕೊಂಡಿವೆಯೋ ಆ ಮೂಲಕಾರಣವನ್ನೇ ಪರಿಹಾರ ಎಂದು, ಹುಸಿ ರಾಷ್ಟ್ರೀಯತೆಯ ಸಿಹಿಯನ್ನು ಮೇಲೆ ಹಚ್ಚಿ ಶಿಫಾರಸ್ಸು ಮಾಡುತ್ತಿರುವಂತಿದೆ!

ಅಸ್ಸಾಮ್ ಆಗಿರಲೀ, ಗೋವಾ ಆಗಿರಲೀ,  ಕರ್ನಾಟಕವೇ ಆಗಿರಲೀ... ನಿಜವಾದ ಸಮಸ್ಯೆಯ ಮೂಲ ಯಾವುದು ಎನ್ನುವುದನ್ನು ಗುರುತಿಸದೇ ಹೋದಲ್ಲಿ ಸರಿಯಾದ ಪರಿಹಾರ ಸಿಗುವುದಾದರೂ ಸಾಧ್ಯವೇ? ರಾಷ್ಟ್ರೀಯ ಭಾವೈಕ್ಯವೆನ್ನುವ ಮಾತಿನ ಹೊದಿಕೆಯಿಂದ ನಿಜವಾದ ಸಮಸ್ಯೆಗೆ ಪರಿಹಾರ ಸಾಧ್ಯವೇ? ಯಾವುದೇ ಒಂದು ಪ್ರದೇಶದ ಅನನ್ಯತೆ, ಭಾಷೆ, ಸಂಸ್ಕೃತಿಗಳಿಗೆ ಧಕ್ಕೆ ತರುವ ಅನಿಯಂತ್ರಿತ ವಲಸೆ ಒಂದು ಸಮಸ್ಯೆಯೇ ಅಲ್ಲವೇ? ನಾಡಿನ ಜನರ ಉದ್ಯೋಗ ಕಸಿದುಕೊಳ್ಳುವ ಅನಿಯಂತ್ರಿತ ವಲಸೆಯೆನ್ನುವ ತಡೆಯಿರದ ಅವಕಾಶವು, ಭಾರತದ ಇಂದಿನ ವ್ಯವಸ್ಥೆಯಲ್ಲಿರುವುದೇ ಇವತ್ತಿನ ಸಮಸ್ಯೆಗೆ ಮೂಲವೆನ್ನಿಸದೇ? ನಿಜಕ್ಕೂ ಅಂತರರಾಜ್ಯ ವಲಸೆಗೆ ಕಡಿವಾಣ ಬೇಕಾಗಿದೆ ಗುರೂ!

5 ಅನಿಸಿಕೆಗಳು:

Priyank ಅಂತಾರೆ...

"ಇಡೀ ಇಂಡಿಯಾದಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಿ ನೆಲೆಸಬಹುದು" ಎಂಬ ಸಂವಿಧಾನಬದ್ದ ಮಾತುಗಳಿಂದ, ಹೆಚ್ಚಿನ ವಲಸೆಯಿಂದಾಗಬಹುದಾದ ಸಂಘರ್ಷಗಳನ್ನು ತಡೆಹಿಡಿಯಲು ಸಾಧ್ಯವಿಲ್ಲ. ಇಂತಹ ಸಂಘರ್ಷಗಳು ಆಗದಂತೆ, ಸಂವಿಧಾನದ ಮೂಲಕವೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದನಿಸುತ್ತದೆ ಗುರು. ಆಳುವವರು ಈ ತೊಂದರೆಗಳನ್ನು ಗುರುತಿಸಿ ಪರಿಹರಿಸುವ ಮನಸ್ಸು ಮಾಡಬೇಕಷ್ಟೇ.

A Mimbari ಅಂತಾರೆ...

Again a wrong way to look and use the situation.!

I do agree with demographic effects of mass immigration to a region.... However, it also opens up some good opportunities too.

1. If each and every governmental and public communications in Karnataka are made mandatory in Kannada only, then the large number of incoming immigrants will have to learn Kannada, Thus number of Kannada speakers will increase. We Kannadas have failed to do this. We still use English a lot in our governmental, administrative and public communication.

2. By providing more and more education to Kannada people, we enhance them to go out of the state, get jobs or start a business in other states. Ex. If number of students successfully finishing MSc in Karnataka, then they can go to other states and become teachers, researchers etc etc etc. Karnataka has a large number of nurses from Kerala, because we don't study nurse in the number required for us.

3. "ಕರ್ನಾಟಕದಿಂದ ಒಂದಿಪ್ಪತ್ತು ಲಕ್ಷ ಜನರು ಗೋವಾ ರಾಜ್ಯಕ್ಕೆ ವಲಸೆ ಹೋಗಿಬಿಟ್ಟರು ಎಂದುಕೊಳ್ಳೋಣ. ಏನಾಗುತ್ತದೆ ಆಗ? ಗೋವಾದ ಜನಸಂಖ್ಯೆ ಇರೋದೇ ೧೪ ಲಕ್ಷ. ಇಲ್ಲಿಂದ ೨೦ ಲಕ್ಷ ಜನರು ಅಲ್ಲಿಗೆ ವಲಸೆ ಹೋದರೆ ಗೋವಾದ ಜನಲಕ್ಷಣ(Demography)ದ ಕಥೆ ಏನಾಗುತ್ತದೆ? ಗೋವಾದಲ್ಲಿ ಇವತ್ತು ಕೊಂಕಣಿ ಭಾಷೆಯಿದೆ. ನಾಳೆ ಗೋವಾದ ಆಡಳಿತ ಭಾಷೆ ಯಾವುದಾಗುತ್ತದೆ?"

Good example. We Kannada people should do this. We can go in large number to small states and catch hold of all the business there. Konkani's have done the same in Karnataka. Check out the banking sector.!

Anonymous ಅಂತಾರೆ...

India belongs to all Indians..So is the world belongs to all human beings. Dont try to limit yourself to one language, religion or region. Be a global citizen..Think Global, Act Global.

Anonymous ಅಂತಾರೆ...

"India belongs to all Indians..So is the world belongs to all human beings"

So India belongs to Bangladeshis. :)

Atakkuntu Lekkakkilla ಅಂತಾರೆ...

http://www.bbc.co.uk/news/world-asia-india-19353411

North-east Indian migrants returning to Bangalore

Thousands of Kannada people are fleeing Karnataka. There is no one to care. A Kannada farmer died yesterday in Tumkur. But BBC, NDTV, etc etc are worried about "North-east Indian migrants returning to Bangalore"

Where were these people when we were beaten in Bombay and Madras.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails