ಎರಡು ತಿಂಗಳ ಹಿಂದೆ "ಅಲೈಯನ್ಸ್ ಫ್ರಾಂಸೈಸ್ ಡಿ ಬ್ಯಾಂಗಲೂರ್" ಅನ್ನೋ ಫ್ರೆಂಚು ನುಡಿ ಕಲಿಸೋ ಸಂಸ್ಥೆಯೋರು ಕನ್ನಡ ಕಲಿಸಲು ಮುಂದಾಗಿರೋ ಸುದ್ದೀನಾ ಏನುಗುರುನಲ್ಲಿ ಬರ್ದಿದ್ವಿ. ಇಗೋ ನೋಡಿ ಈ ವೀಡಿಯೋನಾ... (ಕೃಪೆ : ವಿಡಿಯೋ ಗಿರ್ಮಿಟ್)
ಗುರು! ಅವ್ರು ವಿದೇಶದವ್ರು. ಅವರು ಫ್ರಾನ್ಸ್ ಅನ್ನೋ ದೇಶದಿಂದ ಬಂದಿರೋರು. ಅವರಿರೋದು ಯೂರೋಪಿಯನ್ ಒಪ್ಪುಕೂಟ(federation)ದಲ್ಲಿ. ಅವರಿಗೆ ಒಪ್ಪುಕೂಟದ ಧರ್ಮ ಗೊತ್ತು, ಅವರಿಗೆ ವಲಸಿಗರ ಧರ್ಮ ಗೊತ್ತು ಅಂತೆಲ್ಲಾ ಹೇಳದೆ ಈ ವೀಡಿಯೋದಿಂದ ಸ್ಪೂರ್ತಿ ಪಡೆದು ನಮ್ಮ ನಮ್ಮ ಸಂಸ್ಥೆಗಳಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸೋಕೆ ಮುಂದಾಗೋಣ್ವಾ ಗುರು?
ನೋಡ್ರಣ್ಣೋ... ಬರಲಿದೆ ಹಿಂದಿ ಹೇರಿಕೆಯ ಹೊಸ ಅಸ್ತ್ರ!!!
26.8.09

ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವರಾದ ಶ್ರೀ ಕಪಿಲ್ ಸಿಬಾಲ್‍ಗೆ ನಿಜವಾಗ್ಲೂ ಇದ್ಯಾಕೆ ಇಂಥಾ ಬುದ್ಧಿ ಬಂತೋ ದೇವರಿಗೇ ಗೊತ್ತು! ಅಲ್ಲಾ ಮೊನ್ನೆ ಮೊನ್ನೆ ‘ಇಡೀ ಭಾರತಕ್ಕೆ ಒಂದೇ ಬೋರ್ಡು, ಇನ್ಮುಂದೆ ನಿಮ್ ಎಸ್ಸಿಸ್ಸೆಲ್ಸಿ ಬೋರ್ಡು ಬೋರ್ಡಿಗ್ ಇರಲ್ಲ’ ಅಂದೋರು ಆಮೇಲಿಂದಾ ‘ನಾ ಅಂದಿದ್ ಆ ಅರ್ಥದಲ್ ಅಲ್ಲಾ’ ಅಂತಂದು ಕೈತೊಳಕೊಂಡಿದ್ರು. ಈಗ ನೋಡುದ್ರೆ ಇಡೀ ಭಾರತದ ಮೂಲೆ ಮೂಲೆಯಲ್ಲಿರೋ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲುಸ್‍ಬೇಕು ಅಂತಾ ಹೊಸ ರಾಗಾ ಹಾಡ್ತಾವ್ರಲ್ಲಪ್ಪಾ ಅಂತ ಜನ ಬೆಪ್ಪಾಗ್ ಕುಂತವ್ರೇ ಗುರು!
ಏಕತೆಗೆ ಹಿಂದೀ ಬೇಕನ್ನೋ ಹುಸಿ ರಾಷ್ಟ್ರೀಯತೆ!
ಈ ವಯ್ಯಾ ಹೇಳಿರೋದುನ್ನೇ ಒಸೀ ನೋಡಿ. ಸಾಂಸ್ಕೃತಿಕ ಏಕತೆಗೆ ತಾಯ್ನುಡಿಯಂತೆ, ರಾಷ್ಟ್ರೀಯ ಏಕತೆಗೆ ಹಿಂದಿಯಂತೆ, ಇಂಗ್ಲೀಷು ಜಾಗತಿಕವಾಗಿ ಅನುಕೂಲ ಮಾಡಕ್ಕಂತೆ! ಅಂದ್ರೆ ಇವರ್ ಪ್ರಕಾರ ಕನ್ನಡದೋರು ಹಿಂದಿ ಕಲೀದಿದ್ರೆ ಭಾರತದ ಏಕತೆಗೆ ಧಕ್ಕೆ ತಗುಲುತ್ತೆ ಅಂದಂಗಾಯ್ತಲ್ಲಾ ಗುರು! ಈಗಾಗಲೇ ಹಿಂದಿ ನಮ್ಮ ಕೆಲಸ ಬೊಗಸೆ ಬದುಕುಗಳನ್ನು ಮೂರಾಬಟ್ಟೆ ಮಾಡಕ್ ಮುಂದಾಗಿರೋದನ್ನು ನೋಡ್ತಿದೀವಿ. ಇನ್ನು ಶಾಲೇಲಿ ಹಿಂದಿ ಕಡ್ಡಾಯ ಮಾಡುದ್ರೆ ಇದು ನಮ್ ಮಕ್ಕಳಿಗೆ ಕಲಿಕೇನ ತೊಡಕು ಮಾಡಕ್ಕೂ ಒಂದು ಕಾಣಿಕೆ ಸಲ್ಸುತ್ತೆ ಅಷ್ಟೆ. ಅಷ್ಟುಕ್ಕೂ ಯಾಕೆ ಬೆಂಗಾಲಿಗಳು, ಕನ್ನಡಿಗರು, ತಮಿಳ್ರು, ಮರಾಠಿಗ್ರು, ಗುಜರಾತಿಗಳು, ಸಿಂಧಿಗಳು, ಪಂಜಾಬಿಗಳು, ತೆಲುಗ್ರು... ಅಯ್ಯೋ ಪಟ್ಟಿ ದೊಡ್ದಿದೆ, ಒಟ್ನಲ್ಲಿ ಭಾರತೀಯರು ಹಿಂದೀ ಕಲೀಬೇಕು? ಒಂದು ಭಾಷೆ ಇದ್ರೆ ಮಾತ್ರಾ ಏಕತೆ ಅನ್ನೋ ಮನಸ್ಥಿತಿ ಭಾರತಾನಾ ಒಗ್ಗೂಡ್ಸಲ್ಲಾ, ಬದಲಾಗಿ ಒಡ್ಯುತ್ತೆ. ಪ್ರತಿ ಪ್ರದೇಶದ ಅನನ್ಯತೆ ಕಾಪಾಡಕ್ಕೆ ಸಿದ್ಧವಿಲ್ಲದ ವ್ಯವಸ್ಥೆ ಬೇಗ ಕುಸಿಯುತ್ತೆ ಗುರು! ಹಾಗಾಗ್‍ಬಾರ್ದು ಅನ್ನೋದೇ ನಮ್ಮ ಕಳಕಳಿ. ಇದೇ ಭಾರತೀಯರೆಲ್ಲರ ಕಳಕಳಿ. ಅಲ್ಲಾ! ನಮ್ಮ ಮೇಲೆ ಯಾವ ತೆರನಾದ ಹೇರಿಕೇನೂ ಇಲ್ಲದೇನೇ, ಬರೀ ನಮ್ಮತನಾನೇ ಇಟ್ಕೊಂಡು ನಾವೆಲ್ಲಾ ರಾಷ್ಟ್ರೀಯ ಏಕತೆ ಸಾಧಿಸಕ್ ಆಗಲ್ವಾ? ಆಗಲ್ಲಾ ಅಂದ್ರೆ ಹೀಗೆ ಹಿಂದೀನಾ ಕಡ್ಡಾಯ ಮಾಡೋ ಹೇರಿಕೆಯಿಂದ ಆದೀತಾ? ಮುಂದಿನ ಪರಿಣಾಮಗಳ ಅರಿವಿಲ್ಲದೆ ಅಂಥಾ ದೊಡ್ ಸ್ಥಾನದಲ್ ಇರೋರು ಹಿಂಗ್ ಹೇಳಿಕೆ ಕೊಡೋದು ಸರೀನಾ ಗುರು? ಇದ್ಯಾವ ಸೀಮೆ ರಾಷ್ಟ್ರೀಯ ಏಕತೆಯೆಡೆಗೆ ಇಡ್ತಿರೋ ಹೆಜ್ಜೆ ಗುರು?
ಇದರ ಹಿಂದಿರೋ ನಿಜ ಉದ್ದೇಶ?
ಇವ್ರು ಹೇಳಿದಂಗೇ ಒಂದು ಭಾಷೆ ಇಡೀ ಭಾರತಾನ ಒಗ್ಗೂಡ್ಸುತ್ತೆ ಅನ್ನೋದಾದ್ರೆ, ಸಚಿವರು ಹಿಂದೀ ಅದೆಂಗೇ ಒಗ್ಗೂಡ್ಸುತ್ತೆ ಅನ್ನೋ ಪ್ರಶ್ನೆಗೂ ಉತ್ರ ಕೊಡಬೇಕಾಗುತ್ತೆ. ನೀವು ಭಾರತದ ಬೇರೆ ರಾಜ್ಯಗಳಿಗೆ ಹೋಗೋದಾದ್ರೆ ಅಲ್ಲಿ ಹಿಂದಿಯಲ್ಲಿ ವ್ಯವಹರಿಸಬಹುದು ಅಂತಾರೇನೊ? ಹಾಗಾದ್ರೆ ಏನಾದೀತು ಅಂತಾ ಒಂದ್ಸಲ ಯೋಚಿಸಿ, ಬೆಂಗಳೂರಿಗೆ ಬರೋ ಕನ್ನಡೇತರರೆಲ್ಲಾ ಹಿಂದಿ ಕಲಿತು ಬರ್ತಾರೆ, ಅವರ ಜೊತೆ ಸಂಪರ್ಕಕ್ಕೆ ಬರೋ ಬೆಂಗಳೂರಿನ ಕನ್ನಡಿಗರೆಲ್ಲಾ ರಾಷ್ಟ್ರೀಯ ಏಕತೆ ಕಾಪಾಡಕ್ಕೇ ಅಂತಾ ಹಿಂದೀಲಿ ವ್ಯವಹರುಸ್ತಾರೆ. ಅಂದ್ರೆ ನಮ್ಮೂರಿನ ಅಂಗಡೀಲಿ ಸೇಲ್ಸ್‍ಮ್ಯಾನ್ ಆಗಿ ಕೆಲಸ ಮಾಡಕ್ಕೂ ಹಿಂದೀ ಬರಬೇಕಾಗುತ್ತೆ. ಬೀದಿಕಸ ಗುಡ್ಸೋ ಜಾಡಮಾಲಿಗೂ, ಮನೆಗೆ ಪೇಪರ್, ಹಾಲು ಹಾಕೋನಿಗೂ ಹಿಂದಿ ಬರಬೇಕಾಗುತ್ತೆ. ಹಾಗೆ ಬರಬೇಕು ಅಂದ್ರೆ ಆರುಕೋಟಿ ಕನ್ನಡಿಗರಿಗೆಲ್ಲಾ ಹಿಂದೀನ ಕಲುಸ್ಬೇಕಾಗುತ್ತೆ. ಈಗ ಕಪಿಲ್ ಸಿಬಾಲ್ ಸಾಹೇಬ್ರು ಮಾಡಕ್ ಹೊಂಟಿರೋದೂ ಇಂಥಾದ್ದೇ ನಡೆ ಅಲ್ವಾ? ಇದರರ್ಥ ಇಡೀ ಭಾರತಾನಾ ಹಿಂದಿ ಮಾತಾಡೊರಿಗೆ ಸ್ವರ್ಗ ಮಾಡಬೇಕು, ಹಿಂದಿ ತಾಯ್ನುಡಿಯೋರು ಎಲ್ಲಿಗ್ ಹೋದ್ರೂ ತೊಂದ್ರೆ ಇಲ್ಲದೆ ಬದುಕೋ ಹಾಗಾಗಬೇಕು ಅಂತನ್ನೋ ಒಂದೇ ಉದ್ದೇಶ ಅಲ್ವಾ ಕಾಣೋದು? ಅಥ್ವಾ ‘ಆರು ಕೋಟಿ ಕನ್ನಡಿಗರೆಲ್ಲಾ ಕರ್ನಾಟಕದಿಂದ ಹೊರಗೇ ಹೋಗಿ ಬದುಕ್ತಾರೆ ಅಂತೇನಾದ್ರೂ ಇವರಿಗೆ ಬರ್ಕೊಟ್ಟಿದೀವಾ?’ ಅಂತಾ ಕೇಳಬೇಕಾಗಿದೆ. ಇಡೀ ಭಾರತದ ಜನಸಂಖ್ಯೆಯ 20% ಜನರಿಗಾಗಿ ಉಳಿದ 80% ಜನರ ಮೇಲೆ ಒಂದು ಭಾಷೆ ಕಲೀಬೇಕು ಅಂತನ್ನೋ ನಿಯಮಾನ ಅದೆಂಗೆ ರಾಷ್ಟ್ರೀಯ ಏಕತೆಯ ಕ್ರಮ ಅನ್ನಕ್ಕಾಗುತ್ತೇ ಗುರು!
ನಾಡಿನ ಒಗ್ಗಟ್ಟು ಮುರಿಯುವ ತುಷ್ಟೀಕರಣ ನಿಲ್ಲಲಿ!
25.8.09
ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ತೆರವಾಗಿದ್ದ ಐದು ಸ್ಥಾನಗಳಿಗೆ ನಡೆದ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಕೊಳ್ಳೇಗಾಲದಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿದೆ. ಕೊಳ್ಳೇಗಾಲದಲ್ಲಿ ವಿವಿಧ ತಮಿಳು ಸಂಘದ ಪ್ರತಿನಿಧಿಗಳು ಅಲ್ಲಿನ ತಮಿಳು ಭಾಷಿಕರನ್ನು ಬಿಜೆಪಿಗೆ ಬೆಂಬಲಿಸಿ ಮತನೀಡುವಂತೆ ಮನವೊಲಿಸುತ್ತಿದ್ದ ಬಗ್ಗೆ ಒಂದು ವರದಿ ಎಕ್ಸ್‍ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಬೆಂಗಳೂರಿನಲ್ಲಿ ವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡಿದ್ದರಿಂದ ಸಂತುಷ್ಟಗೊಂಡ ಬೆಂಗಳೂರು, ಮೈಸೂರು, ಶಿವಮೊಗ್ಗ, ಚಾಮರಾಜನಗರ ತಮಿಳು ಸಂಘಗಳ ಪ್ರಮುಖರು ಇಲ್ಲಿಗೆ ಬಂದು ಬಿಜೆಪಿಯ ಪರವಾಗಿ ಮತ ಬೇಡಿದ್ದಲ್ಲದೆ, ಸಂಬಂಧಿಗಳಿಂದ ಬಿಜೆಪಿಗೆ ಮತಹಾಕುವಂತೆ ಶಿಫಾರಸ್ಸು ಮಾಡಿದರು ಅನ್ನುತ್ತಿದೆ ಈ ವರದಿ.
ವಲಸಿಗರನ್ನು ಪ್ರತ್ಯೇಕಿಸುವ ಮತ ರಾಜಕಾರಣ!
ಒಂದು ನಾಡಿನಲ್ಲಿ ನೆರೆ ರಾಜ್ಯಗಳಿಂದ, ಹೊರನಾಡುಗಳಿಂದ ಜನತೆ ವಲಸೆ ಬಂದು ಬದುಕುವುದು ಸಹಜವಾಗಿದ್ದು, ಆಯಾ ನಾಡಿನ ಮುಖ್ಯವಾಹಿನಿಯಲ್ಲಿ ಕಾಲಾನಂತರ ಬೆರೆತು ಆಯಾ ನಾಡಿಗರೇ ಆಗುವುದು ಸಹಜ. ಆದರೆ ಇಂತಹ ವಲಸಿಗರನ್ನು ಮತಗಳಿಕೆಯ ಉದ್ದೇಶದಿಂದ, ಮುಖ್ಯವಾಹಿನಿಯಿಂದ ಹೊರಗಿಟ್ಟು ಪ್ರತ್ಯೇಕತೆಯ ಬೀಜ ಬಿತ್ತಿ ತುಷ್ಟೀಕರಿಸುವ ಕೆಲಸಕ್ಕೆ ನಾಡಿನ ರಾಜಕೀಯ ಪಕ್ಷಗಳು ಕೈ ಹಾಕುತ್ತಿರುವುದು ಸರಿಯಲ್ಲ. ಜನರನ್ನು ಒಡೆದು ಆಳುವ ಇಂತಹ ಕ್ರಮಗಳು ನಮ್ಮ ನಾಡಿನ ಏಳಿಗೆಗೆ, ನಾಡಿಗರ ಒಗ್ಗಟ್ಟಿಗೆ ಮಾರಕವಾಗಿದೆ ಗುರು!

ಸಾರ್ವಜನಿಕ ಸ್ಥಳಗಳ ಹೆಸರಿಡಲೊಂದು ನಿಯಮ!
23.8.09
ಸಾರ್ವಜನಿಕ ಸ್ಥಳಗಳಿಗೆ ಹೊಸದಾಗಿ ಹೆಸರಿಡಬೇಕಾದ್ರೆ ಅಥವಾ ಇರೋ ಹೆಸರು ಬದಲಾಯಿಸಬೇಕಾದ್ರೆ ಅನುಸರಿಸಬೇಕಾಗಿರೊ ನಿಯಮಾವಳಿಗಳ್ನ ಕರ್ನಾಟಕ ಸರ್ಕಾರ ಪ್ರಕಟಿಸಿದೆ ಅನ್ನೋ ಸುದ್ದಿ ಬಂದಿದೆ ಗುರು! ಇದು ಸರಿಯಾದ ರೀತೀಲಿ ನಾಡಿನ ಸ್ವಂತಿಕೆ ತೋರಿಸಕ್ಕೆ ಇರೋ ಒಳ್ಳೇ ವ್ಯವಸ್ಥೆ ಆಗೋದಾದ್ರೆ ಸಕ್ಕತ್ ಒಳ್ಳೇದು.
ಹೊಸ ಹೆಸರು ಇಡೋವಾಗ...
ಯಾವುದೇ ಒಂದು ರಸ್ತೆ, ಬಡಾವಣೆ, ಬೀದಿ, ಪಾರ್ಕು, ವೃತ್ತಗಳಿಗೆ ಹೊಸದಾಗಿ ಹೆಸರು ಇಡೋವಾಗ ಆಯಾ ಪ್ರದೇಶದ ಗಣ್ಯರ ಹೆಸರಿಡ್ತೀವಿ ಅನ್ನೋ ನಿಲುವು ಸರಿಯಾಗಿದೆ. ಹಾಗೇ ತಾನೆ ಹೆಚ್ಚಿನ ಪ್ರದೇಶಗಳಿಗೆ ಹೆಸರು ಬಂದಿರೋದು... ದೊರೆಸಾನಿ ಪಾಳ್ಯ, ಮಾರೇನಹಳ್ಳಿ, ಮುನಿಯಪ್ಪ ಬ್ಲಾಕ್, ಬೈಯ್ಯಪ್ಪನಹಳ್ಳಿ... ಹೀಗೆ. ನಮ್ಮೂರ ಜಾಗಗಳಿಗೆ ನಮ್ಮ ಹಿರಿಯರ ಹೆಸರುಗಳನ್ನು ಇಡೋದು ಒಂದು ರೀತಿಯಲ್ಲಿ ಅವರಿಗೆ ನಾವು ತೋರಿಸೋ ಗೌರವಾನೆ ಆಗಿದೆ. ಆದರೆ ಈ ಕ್ರಮ ಈಗಾಗ್ಲೆ ಇರೋ ಹೆಸರುಗಳನ್ನು ಬೇಡದೆಯೇ ಬದಲಿಸೋ ಕ್ರಮವಾಗದ ಹಾಗೆ ಈ ವ್ಯವಸ್ಥೆ ಜೋಪಾನವಾಗಿ ಇರಬೇಕು. ಆಲಮಟ್ಟಿ ಜಲಾಶಯಕ್ಕೆ ಆ ಹೆಸರೇ ಸೂಕ್ತವಾಗಿದ್ದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಹೆಸರಿನ ಅಗತ್ಯವೇನಿತ್ತು? ಮುಂದಿನ ದಿನಗಳಲ್ಲಿ ಅದು ಶಾಸ್ತ್ರಿ ಅಣೆಕಟ್ಟು ಅಂತಲೋ ಎಲ್.ಬಿ.ಎಸ್ ಅಣೆಕಟ್ಟೆ ಅಂತಲೋ ಆಗೋದಕ್ಕಿಂತಲೂ ಆಲಮಟ್ಟಿ ಅಣೆಕಟ್ಟೆ ಅನ್ನೋ ಹೆಸರೇ ಒಳ್ಳೆಯದಲ್ವಾ?
ಇರೋ ಹೆಸರು ಬದಲಾಯಿಸೋ ಬಗ್ಗೆ!
ಈಗಾಗಲೇ ಇರೋ ಹೆಸರುಗಳನ್ನು ಆದಷ್ಟೂ ಹಾಗೇ ಉಳುಸ್ಕೋಬೇಕು. ಈ ವರದಿಯಲ್ಲಿ ಬರ್ದಿರೋ ಹಾಗೆ ಎರಡೆರಡು ಮರಿಯಪ್ಪನ ಪಾಳ್ಯ ಇದೆ, ಅದಕ್ಕಾಗಿ ಒಂದರ ಹೆಸರನ್ನು ಬದಲಾಯಿಸೋಣ ಅನ್ನೋ ನಿಲುವು ಸರಿಯಿಲ್ಲ. ಅದರ ಬದಲು ದಾಸರಹಳ್ಳಿಗೆ ಇದ್ದಹಾಗೆ ಟಿ.(ತುಮಕೂರು) ದಾಸರಹಳ್ಳಿ, ಮಾಗಡಿ ರಸ್ತೆ ದಾಸರಹಳ್ಳಿ ಅನ್ನೋ ಹೆಸರುಗಳು ಉತ್ತಮವಾಗಿದೆ. ಯಾವುದೇ ಪ್ರದೇಶ/ ಸ್ಮಾರಕಕ್ಕೆ ಇರೋ ಹೆಸರನ್ನು ಅದರ ಐತಿಹಾಸಿಕ ಮಹತ್ವವನ್ನು ಕಡೆಗಣಿಸೋ ಹಾಗೆ ಬದಲಾಯಿಸೋದು ಮಾತ್ರಾ ಆಗಬಾರದು. ಅಂದ್ರೆ ಮೇಟಗಳ್ಳಿಯನ್ನು ಮಥುರಾನಗರ ಮಾಡೋದಾಗಲೀ, ಸೂಳೆಕೆರೆಯನ್ನು ಶಾಂತಿಸಾಗರ ಮಾಡೋದಾಗ್ಲಿ, ಆನೆಪಾಳ್ಯವನ್ನು ಗಜೇಂದ್ರನಗರ ಎನ್ನುವುದಾಗಲೀ, ಮಂಡ್ಯವನ್ನು ಮಾಂಡವ್ಯ ನಗರ ಅಂತ ಬದಲಾಯಿಸೋದಾಗ್ಲೀ ಒಳ್ಳೇದಲ್ಲ ಗುರು!
ಯಾವ ಹೆಸರಿಡಬೇಕು?
ನಮ್ಮ ನಾಡಿನ ತುಂಬಾ ಇರೋ ಬಡಾವಣೇಗಳ/ ರಸ್ತೆಗಳ ಹೆಸರುಗಳನ್ನೇ ನೋಡಿ. ಮಹಾತ್ಮಗಾಂಧಿ ರಸ್ತೆ, ಕಸ್ತೂರ್ ಬಾ ರಸ್ತೆ, ದೀನದಯಾಳ ಉಪಾಧ್ಯಾಯ ರಸ್ತೆ, ರವೀಂದ್ರನಾಥ ಟ್ಯಾಗೂರ್ ನಗರ, ಜಯಪ್ರಕಾಶ ನಗರ, ಇಂದಿರಾ ನಗರ, ಸಂಜಯ ನಗರ, ಶಾಸ್ತ್ರಿ ನಗರ, ರಾಜೀವ್ ಗಾಂಧಿ ಆಸ್ಪತ್ರೆ, ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆ... ಹೀಗೆ ತುಂಬಿಸಿಬಿಟ್ಟಿದ್ದೀವಿ. ರಾಷ್ಟ್ರನಾಯಕರಿಗೆ ಗೌರವ ತೋರುಸ್ಬೇಕು ಅಂತಾ ಆಯಾ ಜಾಗದ ಹೆಸರು ಬದಲಿಸೋ ಹವ್ಯಾಸ ಒಳ್ಳೇದೇನಲ್ಲಾ ಗುರು. ಜಯಪ್ರಕಾಶ ನಾರಾಯಣರಿಗೆ ಗೌರವ ಕೊಡಬೇಕು ಅಂತಾ ಪುಟ್ಟೇನಳ್ಳಿ ಹೆಸರನ್ನು ಜೆ.ಪಿ ನಗರ 7ನೇ ಹಂತ ಅಂತಾ ಮಾಡೋದು ಎಷ್ಟು ಸರಿ? ಒಟ್ಟಿನಲ್ಲಿ ಕನ್ನಡದ ಹೆಸರುಗಳನ್ನೇ, ಕನ್ನಡಿಗರ ಹೆಸರುಗಳನ್ನೇ ಕನ್ನಡನಾಡಿನ ಎಲ್ಲ ಕಡೆ ಇಡೋದೆ ಈ ಏರ್ಪಾಡಿನ ಗುರಿಯಾಗಿರಬೇಕು.
ಕೊನೆಹನಿ: ಇಂದಿನ ಮಹಾರಾಷ್ಟ್ರದ ಅನೇಕ ಊರುಗಳ ಮೂಲ ಹೆಸರು ಕನ್ನಡದ್ದು, ಆ ಕಾರಣದಿಂದ ಆ ಪ್ರದೇಶಗಳು ಹಿಂದೆ ಕನ್ನಡನಾಡಿನ ಭಾಗವೇ ಆಗಿದ್ದವು ಎಂದು ಸಾಧಿಸಬಹುದು ಎಂಬುದಾಗಿ ಅನೇಕ ಹಿರಿಯ ಸಂಶೋಧಕರುಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ನಮ್ಮೂರಿನ ಹೆಸರುಗಳು ಕನ್ನಡದಲ್ಲಿರಬೇಕಾದ್ದು ಐತಿಹಾಸಿಕವಾಗಿಯೂ ಮಹತ್ವದ್ದೇ ಆಗಿದೆ ಅನ್ಸಲ್ವಾ ಗುರು?

ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಕೊಡ್ಸೋ ಹೊಣೆಗಾರಿಕೆ ಯಾರ‍್ದು?
18.8.09
2004ರಲ್ಲಿ ಎದ್ದು ತಣ್ಣಗಾಗಿದ್ದ ಬಿರುಗಾಳಿ ಇದೀಗ ಮಗಧೀರ ಅನ್ನೋ ತೆಲುಗು ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಮತ್ತೆ ಭುಗಿಲೆದ್ದಿದೆ ಗುರು! ಇದು ಭಾರತ, ಯಾರು ಎಲ್ಲಿ ಯಾವ ಭಾಷೆಯ ಚಿತ್ರಾನ್ನಾದ್ರೂ ಬಿಡುಗಡೆ ಮಾಡೋ ಹಕ್ಕಿದೆ ಇತ್ಯಾದಿಗಳನ್ನೆಲ್ಲಾ ತೆಲುಗು ಚಿತ್ರಬ್ರಹ್ಮರು ಮಾತಾಡ್ತಿರೋ ಸುದ್ದಿ ಮಾಧ್ಯಮಗಳಲ್ಲಿ ಕಾಣ್ತಾ ಇದೆ. ಆದ್ರೆ ಮೇಲಿನ ಸಿನಿಮಾ ಗೈಡ್‍ನ ನೋಡಿ... ಅದರಲ್ಲಿ ಬೆಂಗಳೂರಿನ ಟಾಕೀಸುಗಳಲ್ಲಿ ಎಷ್ಟ್ರಲ್ಲಿ ಕನ್ನಡ ಸಿನಿಮಾ ಇದೆ ಅಂತಾ ಗೊತ್ತಾಗುತ್ತೆ!
ಮೊದಲು ಕನ್ನಡದ ಸಿನಿಮಾಗಳಿಗೆ ಚಿತ್ರಮಂದಿರ ಸಿಗಬೇಕು!
ಕೆಲವಾರಗಳ ಹಿಂದೆ ತೆಲುಗಿನ ಮಗಧೀರ ಅನ್ನೋ ಚಿತ್ರ ಬೆಂಗಳೂರಿನ ಚಿತ್ರಮಂದಿರಗಳೂ ಸೇರಿದಂತೆ ರಾಜ್ಯದ 50ಕ್ಕೂ ಹೆಚ್ಚು ಕಡೆ ಬಿಡುಗಡೆಯಾಗಿದೆ. ಇದರಿಂದ ಕನ್ನಡದ ಅನೇಕ ಚಿತ್ರಗಳಿಗೆ ಚಿತ್ರಮಂದಿರದ ಕೊರತೆ ಎದುರಾಗಿರೋದೇ ಅಲ್ಲದೆ ಚೆನ್ನಾಗಿ ಓಡ್ತಾ ಇದ್ದ ಹಲವಾರು ಚಿತ್ರಗಳಿಗೆ ಎತ್ತಂಗಡಿಯ ಭಾಗ್ಯವೂ ದೊರಕಿದೆ. ಕನ್ನಡ ಚಿತ್ರಗಳಿಗೆ ನಮ್ಮೂರಲ್ಲೇ ಚಿತ್ರಮಂದಿರಗಳು ಸಿಗುತ್ತಿಲ್ಲಾ ಅನ್ನೋದು ಎಷ್ಟು ಸರಿ? 2004ರ ಹೊತ್ತಿಗೆ ಪರಭಾಷಾ ಚಿತ್ರ ಬಿಡುಗಡೆ ಬಗ್ಗೆ ಏಳು ವಾರಗಳ ಗಡುವು, ನಾಲ್ಕು ಪ್ರಿಂಟು, 21 ಕೇಂದ್ರಗಳು ಅನ್ನೋ ಕಡಿವಾಣಾನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಜಾರಿಗೊಳಿಸೋ ಮಾತಾಡಿದ್ರೂ ಕೂಡಾ ಪರಿಣಾಮಕಾರಿಯಾಗಿ ಜಾರಿ ಮಾಡಿದ್ನ ಕಾಣಲಿಲ್ಲ. ತೆಲುಗು ಚಿತ್ರರಂಗದೋರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾದ್ರೆ ತಮ್ಮ ಗಳಿಕೆಗೆ ಪೆಟ್ಟು ಬೀಳುತ್ತೆ ಅಂತಾ ಕುಯ್‍ಗುಟ್ತಿರೋದ್ನ ನೋಡುದ್ರೆ ಅಳಬೇಕೋ ನಗಬೇಕೋ ತಿಳೀತಿಲ್ಲಾ ಗುರು! ಕನ್ನಡ ಚಿತ್ರಗಳಿಗೆ ಮೂಲ ಮಾರುಕಟ್ಟೆಯೂ ಪರಭಾಷಾ ಚಿತ್ರಗಳಿಗೆ ಹೆಚ್ಚುವರಿ ಮಾರುಕಟ್ಟೆಯೂ ಆಗಿರುವ ನಮ್ಮ ನಾಡಲ್ಲಿ ನಮ್ಮ ಚಿತ್ರಗಳು ಚಿತ್ರಮಂದಿರದ ಕೊರತೆ ಎದುರಿಸಿ ಮುಗ್ಗರಿಸಿ ಬಿದ್ರೂ ಪರವಾಗಿಲ್ಲಾ, ಪರಭಾಷಾ ಚಿತ್ರಗಳ ಬಿಡುಗಡೆಗೆ ಕಡಿವಾಣ ಇರಬಾರದು ಅನ್ನೋದು ಯಾವ ಸೀಮೆ ನ್ಯಾಯಾ?
ಸರ್ಕಾರ ಮತ್ತು ವಾಣಿಜ್ಯ ಮಂಡಲಿ ಕಣ್‍ತೆರೆಯಲಿ!
ನೀವೇ ನೋಡಿ, ಇಡೀ ಬೆಂಗಳೂರಲ್ಲಿರೋ ಒಟ್ಟು ಚಿತ್ರಮಂದಿರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಚಿತ್ರಮಂದಿರಗಳನ್ನು ಪರಭಾಷೆಯ ಚಿತ್ರಗಳು ಆಕ್ರಮಿಸಿಕೊಂಡು ಕೂತಿವೆಯಲ್ಲಾ... ಹೀಗಾದ್ರೆ ಕನ್ನಡ ಸಿನಿಮಾಗಳ ಗತಿ ಏನು? ಲಕ್ಷಾಂತರ ರೂಪಾಯಿ ಸುರಿದು ಸಿನಿಮಾ ತೆಗೆದೋರು ಚಿತ್ರಮಂದಿರ ಸಿಗ್ತಿಲ್ಲಾ ಅಂತಾ ಪೇಪರ‍್ನಲ್ಲಿ ಜಾಹೀರಾತು ಹಾಕೋ ಗತಿ ಬಂತಲ್ಲಪ್ಪಾ? ಕನ್ನಡ ಚಿತ್ರರಂಗಾನ ಬುಡಸಮೇತ ಕೊಚ್ಚಿಕೊಂಡು ಹೋಗೋ ಪರಭಾಷಾ ಚಿತ್ರಪ್ರವಾಹಾನ ತಡೆಗಟ್ಟೋ ಅಣೆಕಟ್ಟೆಯಾಗಿ ನಿಲ್ಲಬೇಕಾದ್ದು ನಮ್ಮ ರಾಜ್ಯಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಲಸ. ಇವರು ಅದೇನು ಮಾಡ್ತಾರೋ ಗೊತ್ತಿಲ್ಲಾ, ಆದ್ರೆ ಕನ್ನಡನಾಡಿನ ಚಿತ್ರಮಂದಿರಗಳಲ್ಲಿ ಕನ್ನಡದ ಚಿತ್ರಗಳಿಗೆ ಮೊದಲ ಆದ್ಯತೆ, ಇದಾಗಿ ಮಿಕ್ಕುದ್ರೆ ಬೇರೆ ಭಾಷೆಯ ಚಿತ್ರಗಳಿಗೆ ಜಾಗ ಅನ್ನೋದನ್ನು ಜಾರಿಗೆ ತರಬೇಕಾಗಿದೆ ಅನ್ನೋದಂತೂ ಸರಿಯಾಗಿದೆ! ಅಲ್ವಾ ಗುರು?
ರಾಷ್ಟ್ರೀಯ ಏಕತೆಗೆ ದಾರಿ ಯಾವುದಯ್ಯಾ?
7.8.09
ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಸಹಮತದ ಬೆಂಬಲವನ್ನು ನಮ್ಮ ಬಿ.ಜೆ.ಪಿ ಸರ್ಕಾರ ಅನೇಕ ಗಣ್ಯರ ಹೇಳಿಕೆಗಳ ಮೂಲಕ ಗಳಿಸಿಕೊಳ್ತಾಯಿದೆ. ಈ ಗಣ್ಯರ ಪಟ್ಟಿಗೆ ಹೊಸ ಸೇರ್ಪಡೆ ನಮ್ಮ ನಾಡಿನ ಗೌರವಾನ್ವಿತ ನಿವೃತ್ತ ನ್ಯಾಯಾಧೀಶ, ಮಾಜಿ ರಾಜ್ಯಪಾಲ, ರಾಜ್ಯಸಭಾ ಸದಸ್ಯ ನ್ಯಾ.ಮಾ. ರಾಮಾಜೊಯಿಸ್. ಇವರ ಹೇಳಿಕೆ ಪ್ರತಿಮೆ ಸ್ಥಾಪನೆಗೆ ಬೆಂಬಲವಾಗಿರುವವರ, ರಾಜ್ಯಸರ್ಕಾರದ, ಸರ್ಕಾರ ನಡೆಸುತ್ತಿರುವ ಬಿಜೆಪಿಯ, ಮತ್ತದರ ಚಿಂತನಾ ಮನೆಯ ಸಿದ್ಧಾಂತದ ಸಾರವಾಗಿರುವುದು ಸ್ಪಷ್ಟವಾಗಿ ಕಾಣ್ತಿದೆ. ಪ್ರತಿಮೆ ಅನಾವರಣ ಮಾಡಿದ ಯಡ್ಯೂರಪ್ಪನವರ ಭಾಷಣವೂ ಇದನ್ನೇ ಧ್ವನಿಸುತ್ತಾ ಇದೆ.ನಿಜ ರಾಷ್ಟ್ರೀಯತೆಯೋ? ಹುಸಿ ರಾಷ್ಟ್ರೀಯತೆಯೋ?
ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಸಿನಿಕ/ ಅಸಹಜ/ ಕಾಲ್ಪನಿಕ ಅಭಿಪ್ರಾಯಗಳಿಂದ ತುಂಬಿರುವ ಸಿದ್ಧಾಂತ ಪ್ರತಿಪಾದಿಸುತ್ತಿರುವ ಇವರುಗಳು ಹೇಳಿರೋ ಮಾತುಗಳ್ನೇ ನೋಡಿ. ಇದರ ಸಾರ ಏನಪ್ಪಾ ಅಂದ್ರೆ "ಇದೀಗ ಕನ್ನಡಪರರು ತಿರುವಳ್ಳುವರ್ ಪ್ರತಿಮೆ ವಿಷಯದಲ್ಲಿ ವಿರೋಧ ತೋರುವುದು ಕನ್ನಡದ ಅಭಿಮಾನದ ಹೆಸರಲ್ಲಿ ರಾಷ್ಟ್ರೀಯತೆಗೆ, ರಾಷ್ಟ್ರೀಯ ಏಕತೆಗೆ, ರಾಷ್ಟ್ರೀಯ ಭ್ರಾತ್ವತ್ವಕ್ಕೆ ಮಾರಕವಾಗಿರುವ ನಡವಳಿಕೆಗಳು." "ನಾವು ಮೊದಲು ಭಾರತೀಯರು. ಆಮೇಲೆ ಕನ್ನಡಿಗರು, ತಮಿಳರು, ತೆಲುಗರು..." ಇತ್ಯಾದಿ. ಭಾರತವೆನ್ನುವ ಈ ಮನೆಯಲ್ಲಿ ವಾಸಮಾಡುವ ಸೋದರರಾದ ತಮಿಳರು, ಕನ್ನಡಿಗರ ನಡುವೆ ಎಂತಹ ಒಡಕೂ ಇಲ್ಲ, ಇದ್ದರೂ ನಾವೆಲ್ಲಾ ಸೋದರರಾದ್ದರಿಂದ ಕನ್ನಡಿಗರು ಅವುಗಳ ಬಗ್ಗೆ ಅಪಸ್ವರ ಎತ್ತಬಾರದು. ಯಾರ ಕೋಣೆಗೆ ಯಾರಾದರೂ ಹೋಗಿ ವಾಸ ಮಾಡಬಹುದು. ಒಬ್ಬನ ತಟ್ಟೆಗೆ ಇನ್ನೊಬ್ಬ ಕೈಹಾಕುತ್ತಿದ್ದರೂ ಸಹಿಸಿಕೊಳ್ಳಬೇಕು.
ಇದರಂತೆ ನಮ್ಮೂರಿನ ರೈಲ್ವೇ ಕೆಲಸಗಳು ಕನ್ನಡಿಗರಿಗೆ ಸಿಗದಿದ್ದರೂ ಸರಿಯೇ, ಬಿಹಾರಿಗಳಿಗೆ ಸಿಕ್ಕರೂ ಸರಿಯೇ. ಯಾಕಂದರೆ ಅವರೂ ಭಾರತೀಯರು. ರೈಲ್ವೇ ಡಿ ದರ್ಜೆ ಕೆಲಸಗಳಿಗೆ ಹಿಂದಿಯಲ್ಲಿ ಅರ್ಜಿ ಬರೆಯಬೇಕಾದ್ದು ಕಡ್ಡಾಯವಾದರೂ, ಹಿಂದಿಯವನಿಗಿಂತ ಚೆನ್ನಾಗಿ ಹಿಂದಿ ಬರಲಾರದ ಕಾರಣದಿಂದಾಗಿ ಆ ಕೆಲಸಗಳು ನಮ್ಮ ಜನರ ಕೈತಪ್ಪಿದರೂ ಸರಿಯೇ. ಏಕಂದರೆ ಉತ್ತರದ ಹಿಂದಿಯವನೂ ಭಾರತೀಯನಲ್ಲವೆ. ಬೆಳಗಾವಿ ಕರ್ನಾಟಕದಲ್ಲಿದ್ದರೂ ಮಹಾರಾಷ್ಟ್ರದಲ್ಲಿದ್ದರೂ ಒಂದೇ. ಯಾಕಂದರೆ ಅದೂ ಭಾರತವೇ. ಕಾವೇರಿ ನೀರು ಕನ್ನಡದವರಿಗಿಲ್ಲದೆ ತಮಿಳುನಾಡಿಗೆ ಬಿಟ್ಟರೂ ಸರಿಯೇ. ಅದೂ ಭಾರತವೇ. ಆದ್ರೆ ತಮಾಷೆ ನೋಡಿ. ಇಂತಹ ಬೋಧನೆ ರಾಷ್ಟ್ರೀಯತೆಯ ಸಿದ್ಧಾಂತ ಪ್ರತಿಪಾದಕರಿಗೆ ನೆಲೆ ಕೊಟ್ಟ ಕನ್ನಡದವರ ಮೇಲೆ ಹೇರಲಾಗುತ್ತದೆಯೇ ಹೊರತು ಇವರನ್ನು ತಿರಸ್ಕರಿಸುತ್ತಾ ಬಂದಿರುವ ತಮಿಳರ ಮೇಲಲ್ಲ. ಇಡೀ ಭಾರತವನ್ನು ಭಾಷಾವಾರು ಪ್ರಾಂತ್ಯವಾಗಿಸಿರುವುದು ದೊಡ್ಡತಪ್ಪು ಎಂಬುದು ಇವರ ಅನಿಸಿಕೆ. ಪರಸ್ಪರರ ನಡುವಿನ ಭಿನ್ನತೆಗಳನ್ನೂ, ಭಿನ್ನಾಭಿಪ್ರಾಯಗಳನ್ನು ಬಚ್ಚಿಟ್ಟುಕೊಳ್ಳುತ್ತಾ ಸಾಂಸ್ಕೃತಿಕ ವಿನಿಮಯದ ಕ್ರಮಗಳನ್ನು ಮಾಡುವುದು ಭಾರತದ ಏಕತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಿದ್ದಾರೆ ಇವರು.
ಸಮ ಗೌರವದ ಒಕ್ಕೂಟವೇ ರಾಷ್ಟ್ರೀಯ ಸೌಹಾರ್ದಕ್ಕೆ ದಾರಿ!
ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮತ್ವ, ತಮಿಳುನಾಡಲ್ಲಿ ತಮಿಳಿನ ಸಾರ್ವಭೌಮತ್ವ, ಭಾರತದ ಪ್ರತಿ ರಾಜ್ಯಕ್ಕೂ ಸಮಾನ ಗೌರವ, ಎಲ್ಲಾ ವಿವಾದಗಳ ಪರಿಹಾರಕ್ಕೂ ಸೂತ್ರಬದ್ಧವಾದ ನೀತಿಗಳು, ವಿವಾದಗಳನ್ನು ಬಗೆಹರಿಸಲು ಪಕ್ಷಪಾತವಿಲ್ಲದ-ಸಂಸದರ ಸಂಖ್ಯೆಯ ಆಧಾರದ ಮೇಲೆ ವಾಲಲಾರದ ನ್ಯಾಯತಕ್ಕಡಿ ವ್ಯವಸ್ಥೆ, ಒಬ್ಬರ ಬಗ್ಗೆ ಒಬ್ಬರಿಗೆ ಗೌರವ ಹೆಚ್ಚಿಸುವ ಹಾಗೂ ಒಬ್ಬರ ಮೇಲೊಬ್ಬರು ಅತಿಕ್ರಮಣ ನಡೆಸದ ಸಾಮಾಜಿಕ ವ್ಯವಸ್ಥೆಗಳು ಭಾರತವನ್ನು ಬಲಿಷ್ಠಗೊಳಿಸಲು, ಭಾರತದ ಏಕತೆಯನ್ನು ಕಾಪಾಡಲು ಇರುವ ಏಕೈಕ ಸಾಧನವೆನ್ನುವುದನ್ನು ಇವರ ಸಿದ್ಧಾಂತ ಮರೆತು ಬಿಟ್ಟಿದೆ ಗುರು! ಹುಸಿ ರಾಷ್ಟ್ರೀಯತೆಯ ಪ್ರತಿಪಾದಕರು ಇದನ್ನು ಅರಿತು ತಿದ್ದಿ ನಡೆಯೋದು ಒಳ್ಳೇದಲ್ವಾ ಗುರು? ಒಟ್ನಲ್ಲಿ ಎಲ್ಲ ಭಾರತೀಯರ ಹಿತ, ಸ್ವಾಭಿಮಾನ, ತಮ್ಮತನಗಳನ್ನು ಉಳಿಸಿಕೊಳ್ಳಲು, ಸಮಾನತೆಯ ಸಮಗೌರವದ ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುವ ಸಿದ್ಧಾಂತಕ್ಕೆ ಮಣೆ ಹಾಕಲು ನಾಡಿನ ಜನತೆ ಮುಂದಾಗಬೇಕಿದೆ ಗುರು!
ಪುಗಸಟ್ಟೆ ಉಪದೇಶ ನಮಗೆ ಮಾತ್ರಾ ಕೊಡೋದು ಮಾನವತೇನಾ?
2.8.09
“ಕನ್ನಡಿಗರು ಸಹಿಷ್ಣುಗಳು, ನಾವು ಈ ರೀತಿ ನಡ್ಕೊಂಡ್ರೆ ನಮ್ಮ ಇಮೇಜಿಗೆ ಧಕ್ಕೆ ಬರುತ್ತೆ, ಕನ್ನಡಿಗರಿಗೆ ಪರಂಪರೆಯಿಂದ ಬಂದಿರೋ ಒಳ್ಳೇ ಹೆಸರು ಹಾಳಾಗುತ್ತೆ, ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತೆ.... ನಮ್ಮ ಔದಾರ್ಯ, ಪರಸ್ಪರ ಸೋದರ ಬಾಂಧವ್ಯ ತೋರುಸ್ಬೇಕು"... ಈ ಸಲ ತಿರುವಳ್ಳುವರ್ ವಿಷಯಕ್ಕೆ ಕೇಳಿಬರುತ್ತಿರೋ ಮಾತುಗಳಿವು. ಹಿಂದೆ ನೂರಾರು ಘಟನೆಗಳಲ್ಲಿ ಈ ಮಾತುಗಳು ಕೇಳಿ ಬಂದಿತ್ತು. ಸದಾ ಇಂಥಾ ವಿಶ್ವಮಾನವತ್ವದ, ಉದಾತ್ತತೆಯ, ಆದರ್ಶದ ಬುದ್ಧಿಮಾತುಗಳನ್ನು ಕೇಳೋ ಭಾಗ್ಯ ಕನ್ನಡದೋರಿಗೆ ಬಿಟ್ಟು ಇನ್ಯಾರಿಗೆ ತಾನೆ ಇದೆ ಹೇಳಿ ಈ ಪರಪಂಚದಲ್ಲಿ?!!ಹಿಂದಿನದ್ನೂ ಒಸಿ ನೆನಪಿಸಿಕೊಳ್ಮಾ!
ಈ ಹಿಂದೆ ರೈಲ್ವೇಯಲ್ಲಿ ಕೆಲಸಗಳು ಖಾಲಿ ಇದ್ದಾಗ ಬಿಹಾರಿಂದ ಬಿಟ್ಟಿ ರೈಲು ಹಾಕಿ ಜನ್ರುನ್ ತುಂಬಿಕೊಂಡು ಬಂದಿದ್ದನ್ನು ವಿರೋಧ ಮಾಡಿದಾಗಲೂ ಇಂಥವೇ ಮಾತುಗಳನ್ನು ಕೇಳಿದ್ವಿ. ಬ್ಯಾಂಕುಗಳಲ್ಲಿ ಕನ್ನಡ ಬಳಸ್ತಿಲ್ಲಾ ಅಂದಾಗ, ಹಿಂದಿ ಹೇರಿಕೆಯನ್ನು ವಿರೋಧಿಸಿದಾಗ, ಕರ್ನಾಟಕದಲ್ಲಿ ಕನ್ನಡದಲ್ಲಿ ನಮಗೆ ಗ್ರಾಹಕ ಸೇವೆ ಸಿಗಬೇಕು, ಕನ್ನಡದಲ್ಲಿ ನಾಮಫಲಕಗಳಿರಬೇಕು.... ಹೀಗೆ ಯಾವುದೇ ಸಂದರ್ಭದಲ್ಲಾಗಿರಲಿ ಕನ್ನಡದವರಿಗೆ ಪುಗಸಟ್ಟೆ ಉಪದೇಶಾಮೃತದ ಸುರಿಮಳೆ ಗ್ಯಾರಂಟಿ.
ನಾವು ಕೇಳ್ತೀವಿ ಅಂತಾ ಬುದ್ಧಿ ಹೇಳಕ್ ಬರ್ತಾರೆ!
“ಹೌದಲ್ವಾ? ಮಾನವತೆಗೆ ಮೀರಿದ್ದು ಯಾವುದಿದೆ? ಈ ಗಡಿ, ನುಡಿ, ಪ್ರತಿಮೆ ಇವೆಲ್ಲಾ ವಿಷಯಗಳಿಗಾಗಿ ಕಚ್ಚಾಡೋದು ಮಾನವತೆಗೆ ಎಸಗೋ ಅಪಚಾರ...." ಅಂತಾ ನಾವೆಲ್ಲಾ ನಂಬೋ ಹಾಗೇ ಸಾಗುತ್ತೆ ಈ ವಾದಸರಣಿ. ಇವರು ಹೇಳೋದೇ ನಿಜವಾದರೇ ಯಾವುದೇ ದೇಶಕ್ಕೆ ಗಡಿ ರಕ್ಷಣಾ ಪಡೆಯೂ ಬೇಕಿಲ್ಲ, ಸೈನ್ಯವೂ ಬೇಕಿಲ್ಲ. ನಮ್ಮತನದ ಮೇಲಾಗೋ ಆಕ್ರಮಣವನ್ನು ವಿರೋಧಿಸಿ ತಡೀತೀವಿ ಅನ್ನೋ ಸ್ವಾಭಿಮಾನಕ್ಕೂ, ಬೇರೆಯೋರ ಬಗ್ಗೆ ತೋರಿಸೋ ಆಕ್ರಮಣಕಾರಿ ಮನೋಭಾವದ ಸಣ್ಣ ಮನಸ್ಸಿಗೂ ನಡುವಿನ ವ್ಯತ್ಯಾಸಾನಾ ಈ ಮಂದಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಮರೆತು ಬಿಡ್ತಾರೆ. ಇಂಥಾ ಮಾತುಗಳು ’ಕಡಿಯೋ ಮೊದಲು ಕುತ್ತಿಗೆಗೆ ಹಚ್ಚೋ ಬೆಣ್ಣೆ’ ಅಂತಾ ಗುರುತಿಸಲಾರದಷ್ಟು ಕುರಿಗಳಲ್ಲ ನಮ್ಮ ಜನಾ ಗುರು!
ಒಳ್ಳೇತನಾನ ದೌರ್ಬಲ್ಯ ಮಾಡೋ ಉಪದೇಶ!
ನೀವು ಒಳ್ಳೇವ್ರಾಗಿರಿ ನಿಮ್ಮ ಪಾಲಿನ ಕೆಲಸಾನೆಲ್ಲಾ ಬೇರೆಯೋರಿಗೆ ಕೊಡ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಊರಲ್ಲೇ ನಿಮ್ಮನ್ನು ಪರಕೀಯರನ್ನಾಗಿ ಮಾಡ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಕೈಯ್ಯಿಂದ್ಲೇ ನಿಮ್ಮ ನದಿ ನೀರುನ್ನ ಕಿತ್ಕೊಂಡು ಹೋಗ್ತಿದ್ರು, ನೀವು ಒಳ್ಳೇವ್ರಾಗಿರಿ ನಿಮ್ಮ ಪಾಲಿನ ಯೋಜನೆಗಳನ್ನು ನೆರೆಯವರು ಕಸಗೋತಿದ್ರು.... ಹೀಗೆ ಒಳ್ಳೇವ್ರು ಒಳ್ಳೇ ಇಮೇಜು ಅಂತಾ ಎಲ್ಲಾನು ಸಹಿಸ್ಕೊಂಡು ಸ್ವಾಭಿಮಾನಾನ ಬಲಿಕೊಡಿ ಅನ್ನೋ ಉಪದೇಶಾ ಸದಾ ಕನ್ನಡದೋರಿಗೇ ಕೊಡೋಹಾಗ್ ಕಾಣೂತ್ತಲ್ಲಾ ಗುರು! ನಿಜವಾಗ್ಲೂ ಯಾರಿಗಾದ್ರೂ ಯಾಕೆ ಬೇಕಾಗಿದೆ ಜಗಳಾ? ಯಾರಿಗಾದ್ರೂ ಯಾಕೆ ಬೇಕು ಹೋರಾಟ? ಜೈಲಿನ ಕಂಬಿ ಎಣಿಸಾಟ? ಪೊಲೀಸರ ಬೂಟು ಲಾಟಿ ಏಟು ತಿನ್ನಾಟ? ನಿಜವಾಗ್ಲೂ ಸಮಾನ ಗೌರವಾ ಕೊಡಬೇಕು ಅನ್ನೋ ಪಾಠದ ಅಗತ್ಯ ಇವತ್ತು ಕನ್ನಡದೋರಿಗೆ ಅಜೀರ್ಣ ಆಗೋಷ್ಟು ಆಗೋಗಿದೆ. ಇರಲಿ, ಸಹನೆಯಿಂದ ಇರೋಣ, ಸಣ್ಣ ಮನಸ್ಸು ಬೇಡ... ಆದ್ರೆ ಈ ತಿರುವಳ್ಳುವರ್ ವಿಷ್ಯದಲ್ಲೇ ತಮಿಳುನಾಡು ಸಮಾನ ಗೌರವ ಕೊಡಕ್ಕೆ ಸಿದ್ಧಾನಾ? ಅವರೂ ಸರ್ವಜ್ಞಂಗೊಳ್ಳೆ ಜಾಗ ಕೊಟ್ಟು, ಹೊಗೇನಕಲ್ ವಿಷಯದಲ್ಲಿ ಜಂಟಿ ಗಡಿ ಸಮೀಕ್ಷೆಗೆ ಒಪ್ಪಿ, ಸುಮ್ನೆ ಶಾಸ್ತ್ರೀಯ ಭಾಷೆ ಪಟ್ಟಕ್ಕೆ ತೊಡರುಗಾಲು ಹಾಕೋದ್ನ ನಿಲ್ಸಿ ಸೌಹಾರ್ದತೆ ತೋರುಸ್ಲಿ ಅಂತಾ ಅವರಿಗೊಂದು ಮಾತ್ನ ಈ ವಿಶ್ವಮಾನವರು ಹೇಳ್ತಾರಾ ಗುರು?
ಬೆಂಗಳೂರಲ್ಲಿ ವಳ್ಳುವರ್ ಪ್ರತಿಮೆ... ಸುತ್ತಮುತ್ತ!
26.7.09
ಇವತ್ತಿನ (26.07.2009ರ) ಪ್ರಜಾವಾಣಿಯ 7ನೇ ಪುಟದಲ್ಲಿ ಒಂದು ಅಂಕಣ ತಿರುವಳ್ಳುವರ್ ವಿರೋಧಿಸಿ ಸಣ್ಣವರಾಗೋದ್ ಬ್ಯಾಡಾ ಅಂತ ಮುದ್ರಣವಾಗಿದೆ. ಹೌದು, ಶ್ರೀ ಪದ್ಮರಾಜ ದಂಡಾವತಿಯವರು ಹೇಳಿದ ಈ ಮಾತು ಕಣ್ಣಿಗೆ ತಂಪಾಗಿಯೂ, ಕಿವಿಗೆ ಇಂಪಾಗಿಯೂ ಇದೆ. ಆದ್ರೆ ಈ ವಳ್ಳುವರ್ ಪ್ರತಿಮೇನಾ ವಿರೋಧಿಸೋದು ಸಣ್ಣತನಾ ಅನ್ನೋ ಭರದಲ್ಲಿ ಪದ್ಮರಾಜ್ ಅವರು ಇಡೀ ಕನ್ನಡ ಕುಲಕೋಟಿಗೆ ಹಲವಾರು ಹಣೆಪಟ್ಟಿಗಳನ್ನು ಅಂಟಿಸಿದ್ದಾರೆ. ಮತ್ತು ಮತ್ತದೇ ಕಾಗಕ್ಕಂಗೆ ನರಿಯಣ್ಣ ಸಕ್ಕತ್ತಾಗಿ ಹಾಡ್ತಿ ಹಾಡು ಅಂದು ರೊಟ್ಟಿ ಎಗುರಿಸಿದಂಥಾ ಡೈಲಾಗನ್ನೂ ಹೊಡ್ದಿದಾರೆ.
ಕನ್ನಡಿಗರ ಹೆಸರು ಕೆಡುತ್ತೆ! ಅನ್ನೋ ಪುಂಗಿ
ಇದು ಮಾಮೂಲಿ ಕಣ್ರಿ. ಕರ್ನಾಟಕದಲ್ಲಿ ಕನ್ನಡಿಗರು ಭಾಳಾ ಸಹಿಷ್ಣುಗಳು. ನಗುಮೊಗದವರು. ಭಾಳಾ ಒಳ್ಳೇವ್ರು, ಎಲ್ಲಾ ಭಾಷೆಗಳೂ ಇಲ್ಲಿ ನಡ್ಯುತ್ತೆ, ಇವ್ರು ನೀರು ಕೇಳಿದ್ರೆ ಮಜ್ಜಿಗೆ ಕೊಡ್ತಾರೆ ಅಂತಾ ಹೊಗಳೀ ಹೊಗಳೀ ಹೊನ್ನಶೂಲಕ್ಕೇರಿಸೋದನ್ನು ಹಿಂದಿನಿಂದ್ಲೂ ನೋಡ್ತಾನೇ ಬಂದಿದೀವಿ. ಈ ಮಾತು ನಮ್ಮ ಹಕ್ಕೊತ್ತಾಯದ ಕೂಗನ್ನು ಅಡಗಿಸೋ ತಂತ್ರ ಮಾತ್ರಾ ಅಂತ ಜನ ಈಗಾಗ್ಲೆ ಅರ್ಥ ಮಾಡ್ಕೊಂಡಿದಾರೆ. ಇನ್ನೂ ಈ ತಂತ್ರ ನಡ್ಯುತ್ತೆ ಅಂದ್ಕೊಳ್ಳೋದು ಸರಿಯಲ್ಲ. ಇರಲಿ, ನಿಜಕ್ಕೂ ಈಗ ವಳ್ಳುವರ್ ಪ್ರತಿಮೆ ಬೆಂಗಳೂರಲ್ಲಿ ತಲೆಯೆತ್ತಬೇಕಾ? ಬೇಡವಾ? ಅನ್ನೋದನ್ನು ವಿಚಾರ ಮಾಡೋಣ.
ತಿರುವಳ್ಳುವರ್ ಬಗ್ಗೆ ಗೌರವ ಇಲ್ದಿದ್ರೆ ಮಾನವತೆಗೇ ಗೌರವ ಇಲ್ದಂಗೆ!
ಹೌದ್ರೀ, ತಮಿಳು ನಾಡಿನ ದಾರ್ಶನಿಕ ವಳ್ಳುವರ್ (ಇದು ಒಬ್ಬರಲ್ಲಾ, ಅನೇಕರು ಅಂತಾ ನಮ್ಮ ಬಿ.ಜಿ.ಎಲ್ ಸ್ವಾಮಿಗಳು ತಮ್ಮ ತಮಿಳು ತಲೆಗಳ ನಡುವೆ ಹೊತ್ತಿಗೆಯಲ್ಲಿ ಬರ್ದಿದಾರೆ) ಎರಡು ಸಾವಿರ ವರ್ಷಗಳ ಹಿಂದೆಯೇ ಬರೆದಿರೋ ಕುರುಳ್ ಹೆಸರಿನ ಪದ್ಯಗಳು, ನಮ್ಮ ಸರ್ವಜ್ಞನ ವಚನದಂತೆಯೇ ಸಮಾಜದ ಒಳಿತಿನ ಪಾಠ ಕಲಿಸೋ ಮಹಾನ್ ನುಡಿಮುತ್ತುಗಳು. ಇಂಥಾ ದಾರ್ಶನಿಕರು ಜಗತ್ತಿನ ನಾನಾ ಭಾಗಗಳಲ್ಲಿ ನಾನಾ ಕಾಲಘಟ್ಟಗಳಲ್ಲಿ ಆಗಿಹೋಗಿದ್ದಾರೆ ಮತ್ತು ಇವರುಗಳು ಎಲ್ಲಾ ಕಟ್ಟುಪಾಡುಗಳನ್ನು ಮೀರಿದ್ದಾರೆ. ವಳ್ಳುವರ್, ಕಬೀರ್, ತ್ಯಾಗರಾಜ, ತುಳಸಿದಾಸ, ಶರೀಫಜ್ಜ.... ಅಯ್ಯೋ ಒಬ್ರಾ ಇಬ್ರಾ ಆ ಪಟ್ಟಿ ದೊಡ್ಡದಿದೆ ಬಿಡಿ. ಇವರನ್ನು ಅಪಮಾನಿಸೋದಿರಲಿ, ಇಂಥವರಿಗೆ ಗೌರವ ಕೊಡ್ದೇ ಇರೋದೂ ಕೂಡಾ ಸಣ್ಣತನವೇ. ಹಾಗಾದರೆ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆಗೆ ವಿರೋಧಿಸೋದು ಸಣ್ಣತನಾನೇ ಅಲ್ವಾ?
ವಿಷಯ ಪ್ರತಿಮೆಯದ್ದಲ್ಲ! ಸಮಾನ ಗೌರವದ್ದು!!
ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆ, ವಳ್ಳುವರ್ ಅವರಿಗೆ ತೋರಿಸೋ ಗೌರವ ಅನ್ನೋದನ್ನು ಪಕ್ಕಕ್ಕಿಟ್ಟು ಇನ್ನೊಂದೆರಡು ವಿಷಯ ಇತ್ಯರ್ಥ ಮಾಡ್ಕೋಬೇಕಿದೆ. ಯಾಕಂದ್ರೆ ಈ ಪ್ರತಿಮೆಯ ಸ್ಥಾಪನೆ ಮಾಡ್ತಿರೋರಿಗೂ, ಬೇಡ ಅಂತಿರೋರಿಗೂ ಇದು ಬರೀ ಒಬ್ಬ ದಾರ್ಶನಿಕನ ಗೊಂಬೆ ಆಗಿಲ್ಲ. ಒಂದು ಸಂಸ್ಕೃತಿಯ, ತಿಕ್ಕಾಟದ ಇತಿಹಾಸದ, ನಾಡಿನ ಸ್ವಾಭಿಮಾನದ ಮತ್ತು ಸಾರ್ವಭೌಮತ್ವ ಸ್ಥಾಪನೆಯ ಪ್ರತೀಕಗಳಾಗಿವೆ ಅನ್ನೋದಾಗಿದೆ.
- ಶತಶತಮಾನಗಳಿಂದ ತಮಿಳು ಮತ್ತು ಕನ್ನಡಿಗರ ನಡುವೆ ಕಾವೇರಿ ಹಂಚಿಕೆ ವ್ಯಾಜ್ಯ ಇನ್ನೂ ಬಗೆಹರಿದಿಲ್ಲ. ಅದರ ತೀರ್ಪು ನ್ಯಾಯಯುತವಾಗಿದೆ ಅಂತಾ ಇನ್ನೂ ಕನ್ನಡಿಗರು, ಕರ್ನಾಟಕ ಸರ್ಕಾರ ಒಪ್ಪಿಲ್ಲ. ಈ ವ್ಯಾಜ್ಯ ಪರಿಹಾರದ ವಿಷಯದಲ್ಲಿ ಟ್ರಿಬ್ಯೂನಲ್ ಜನ ಬಂದಾಗ ತಮಿಳುನಾಡು, ಇವರಿಗೆ ಭರ್ಜರಿ ಕಾಣಿಕೆಗಳ್ನ ಕೊಟ್ಟು ವಶೀಲಿ ಮಾಡೋ ಯತ್ನ ಮಾಡುದ್ರು ಅಂತಾ ಕರ್ನಾಟಕವೇ ಆರೋಪ ಮಾಡಿತ್ತು.
- ಪ್ರತಿಮೆ ಸ್ಥಾಪಿಸಿ ಸೌಹಾದ್ರತೆ ಹೆಚ್ಚಿಸೋ ಮಾತಾಡೋರು ಹೊಗೇನಕಲ್ ನಡುಗಡ್ಡೆಯಲ್ಲಿ ಜಂಟಿ ಸರ್ವೇಗೆ ಒಪ್ಸಿ/ ಒಪ್ಪಿ ಸೌಹಾರ್ದತೆ ಹೆಚ್ಚಿಸೋ ಮಾತಾಡಬೇಕಿತ್ತಲ್ವಾ ಗುರು?
- ಕನ್ನಡಕ್ಕೆ ಶಾಸ್ತ್ರೀಯ ಭಾಷೆಗೆ ಅಡ್ಡಗಾಲು ಹಾಕ್ಕೊಂಡು ಸೌಹಾರ್ದತೆ ತೋರುಸ್ತಿರೋ ತಮಿಳುನಾಡಿನ ದೊಡ್ಡತನದ ಮುಂದೆ ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಬೇಡ ಅಂದ್ರೆ ಕನ್ನಡಿಗರು ಚಿಕ್ಕವರಾಗಲ್ವಾ?
- ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಅನ್ನೋ ಕೂಗನ್ನು ಎಬ್ಸಿದ್ದು, ಶ್ರೀರಾಮಪುರದಲ್ಲಿ ಕೇಂದ್ರಸರ್ಕಾರದ ಪೊಲೀಸ್ ಠಾಣೆ ಇಡೀ ಅಂದಿದ್ದು, ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಡಿ.ಎಂ.ಕೆಯ ಕಪ್ಪು ಕೆಂಪು ಬಾವುಟ ಹಾರಿಸೋದು ಸೌಹಾರ್ದತೆ ಹೆಚ್ಚಿಸೋ ನಡವಳಿಕೆಯೇನು?
- ಬೆಂಗಳೂರನ್ನು ಕಟ್ಟಿದೋರು ನಾವು ನಮಗೆ ಇಲ್ಲಿನ ಅರ್ಧದಷ್ಟಾದರು ವಿಧಾನಸಭಾ ಸೀಟುಗಳ ಮೇಲೆ ಹಕ್ಕಿದೆ ಅನ್ನೋದು ಸೌಹಾರ್ದತೆ ಹೆಚ್ಚಿಸೋ ನಡವಳಿಕೆಯೇನು?
ಇವೆಲ್ಲಾ ಒಂದು ತೂಕವಾದರೆ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ, ಕನ್ನಡದ ಕಣ್ಮಣಿ ಡಾ.ರಾಜ್ ಅಪಹರಣವಾದಾಗ (ಮಾಡಿಸಿದಾಗ ಅನ್ನೋ ಗುಮಾನಿ ಇದೆ) ವೀರಪ್ಪನ್ (ಕಡೆಯಿಂದ) ಮುಂದಿರಿಸಿದ್ದ ಬೇಡಿಕೆಗಳ ಪಟ್ಟಿ ನೋಡಿದರೆ ಸಾಕು ಈ ಅಪಹರಣ ಒಬ್ಬ ಜುಜುಬಿ ಕಾಡುಗಳ್ಳನದೋ ಅಥವಾ ಇದರ ಹಿಂದಿನ ಷಡ್ಯಂತ್ರ ಬೇರೆ ಇದೆಯೋ ಅನ್ನೋದು ತಿಳ್ಯಲ್ವಾ ಗುರು?
- ಕರ್ನಾಟಕದ ಪಾಲಿಗೆ ಬರಬೇಕಾದ ಆಟೋಮೊಬೈಲ್ ಸಂಶೋಧನಾ ಕೇಂದ್ರ, ಅನೇಕ ಉದ್ದಿಮೆಗಳು, ಹೊಸ ಉದ್ದಿಮೆ ಕಾರಿಡಾರು, ಅನೇಕ ರೈಲು ಯೋಜನೆಗಳು... ಒಂದಾ ಎರಡಾ ತಮಿಳುನಾಡು ದಕ್ಕಿಸಿಕೊಂಡಿದ್ದು? ಪ್ರತಿಯೊಂದು ವಿಷಯದಲ್ಲೂ ಕನ್ನಡನಾಡಿನ ದೊಡ್ಡಣ್ಣನಂತೆ ತಮಿಳುನಾಡು ವರ್ತಿಸೋ ರೀತಿ ಕಾಣ್ತಿದ್ದಾಗ ಈ ಪ್ರತಿಮೆ ಸ್ಥಾಪನೆ ಬರೀ ಸೌಹಾರ್ದತೆ ಹೆಚ್ಚಿಸೋ ಕ್ರಮವಾದೀತೇ ಅನ್ನೋ ಅನುಮಾನ ಹುಟ್ಟಲ್ವಾ ಗುರು? ಇರಲಿ, ತಿರುವಳ್ಳುವರ್ ಪ್ರತಿಮೆ ಖಂಡಿತಾ ನಮ್ಮೂರಲ್ಲಿ ಬರಲಿ. ಆದರೆ ಅದೇ ಸಮಯದಲ್ಲಿ ಅದೇ ದಿವಸ, ಅದೇ ಹೊತ್ತಲ್ಲಿ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಬೆಂಗಳೂರಿನ ವಳ್ಳುವರ್ ಪ್ರತಿಮೆ ಇಟ್ಟಿರೋ ಅಂಥದ್ದೇ ಪ್ರಮುಖವಾದ ಸ್ಥಳದಲ್ಲಿ ಸರ್ವಜ್ಞನ ಪ್ರತಿಮೆ ಅನಾವರಣ ಮಾಡೋದು ಈ ವಿಷಯದಲ್ಲಿ ಸಮ ಗೌರವದ ಕ್ರಮವಾಗುತ್ತೆ ನಿಜಾ. ಆದ್ರೆ ಇಷ್ಟು ಸಾಕಾ? ನಮ್ಮ ಸರ್ಕಾರ ಇದೇ ಸ್ಪೂರ್ತಿಯಿಂದ ಉಳಿದ ವಿಷಯಗಳ ಬಗ್ಗೇನೂ ತಮಿಳುನಾಡಿನ ಜೊತೆ ಮಾತುಕತೆಯಾಡೀತಾ? ಈಗ ಈ ಪ್ರತಿಮೆ ನೆಪದಲ್ಲಿ ಅವೆಲ್ಲಾ ವಿಷಯಗಳ ಬಗ್ಗೆ ಮಾತುಕತೆ ನಡೆಸಬಹುದಿತ್ತಲ್ವಾ? ಅದುಬಿಟ್ಟು ಕನ್ನಡಿಗರು ಜಗಳಗಂಟರು, ಅಸಹಿಷ್ಣುಗಳು, ಕೆಟ್ಟೋರು ಅನ್ನುಸ್ಕೋಬಾರ್ದು ಅದಕ್ಕೇ ಇದುಕ್ ಒಪ್ಕೊಳ್ಳೋಣ ಅಂದ್ರೆ ಹೆಂಗೇ ಗುರು?
ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳಸುತ್ತೆ!
23.7.09
ಮೊನ್ನೆ ಮೊನ್ನೆ ಸುವರ್ಣ ಚಾನೆಲ್ಲಿನಲ್ಲಿ "ಶ್ವೇತನಾಗ" ಅನ್ನೋ ಸಿನಿಮಾ ಬಂತು, ಅದು ಮೊದಲು ತೆಲುಗಲ್ಲಿ ತೆಗೆದು ಆಮೇಲೆ ಕನ್ನಡಕ್ಕೆ ಡಬ್ ಮಾಡಲಾದ ಚಿತ್ರ ಅಂತಾ ಅದನ್ನು ಪ್ರಸಾರ ಮಾಡ್ದೋರೂ, ನಿರ್ಮಾಪಕರೂ ಎಲ್ಲಾರ ಮೇಲೂ ಕನ್ನಡ ಚಿತ್ರರಂಗದ ದಿಗ್ಗಜರುಗಳು, ಮೈಮೇಲೆ ಮುರ್ಕೊಂಡು ಬಿದ್ದ ಸುದ್ದಿ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ. ಇವರುಗಳು ಅರ್ಥಮಾಡ್ಕೊಬೇಕಿರೋದ್ ಏನಪ್ಪಾ ಅಂದ್ರೆ ಇವರ ಈ ನಿಲುವು ಕಾನೂನು ಬಾಹಿರವಾಗಿರೋದ್ ಮಾತ್ರಾ ಅಲ್ದೆ ಇಡೀ ನಾಡಿಗೆ ಮಾರಕವಾಗಿದೆ ಅನ್ನೋದಾಗಿದೆ.
ಡಬ್ಬಿಂಗ್ ಇತಿಹಾಸ
ಹಿಂದೆ ಕನ್ನಡ ಚಿತ್ರರಂಗ ತನ್ನೆಲ್ಲಾ ಕೆಲ್ಸಗಳಿಗಾಗಿ ಚನ್ನೈ ಮೇಲೆ ಅವಲಂಬಿತವಾಗಿದ್ದಾಗ, ಕನ್ನಡ ಸಿನಿಮಾ ತೆಗೆಯೋ ನಿರ್ಮಾಪಕರು ಶ್ರಮ ಪಡೋ ಬದಲು ಡಬ್ಬಿಂಗ್ ತಂತ್ರಜ್ಞಾನಾನ ಬಳಸಿ ತೆಲುಗು, ತಮಿಳು ಸಿನಿಮಾಗಳನ್ನು ಕನ್ನಡದಲ್ಲಿ ತರಕ್ ಮುಂದಾದ್ರು. ಇದು ಹೀಗೇ ನಡುದ್ರೆ ಮುಂದೆ ಕನ್ನಡ ಚಿತ್ರಗಳು ಅಂದ್ರೆ ಹಿಂದಿ, ತಮಿಳು, ತೆಲುಗು ಚಿತ್ರಗಳ ಡಬ್ಬಾ (ಡಬ್ಬ್ ಆಗಿರೋದು) ಅಂತಾ ಆಗಿಬಿಡುತ್ತೆ ಅನ್ನೋ ಬೆದರಿಕೆ ಹುಟ್ಕೊಳ್ತು. ಆಗ ಡಬ್ಬಿಂಗ್ ವಿರೋಧಿ ಚಳವಳಿ ನಡೀತು. ಅವತ್ತು ಶುರುವಾದ ಈ ನಿಷೇಧ ಇಲ್ಲೀತನಕ ಬಂದಿದೆ.
ಇವತ್ತೇನಾಗಿದೆ?
ಇವತ್ತು ಕನ್ನಡ ಚಿತ್ರರಂಗ ಸ್ಟುಡಿಯೋ, ತಂತ್ರಜ್ಞರು, ಕಲಾವಿದರು, ನಿರ್ದೇಶಕರು, ಧ್ವನಿಮುದ್ರಣ ಕೇಂದ್ರ, ತಂತ್ರಜ್ಞಾನ, ಹಂಚಿಕೆ, ಚಿತ್ರಮಂದಿರ... ಹೀಗೆ ಎಲ್ಲಾ ವಿಭಾಗದಲ್ಲಿ ತನ್ನ ಕಾಲ ಮೇಲೆ ತಾನು ನಿಂತಿದೆ. ಇವತ್ತು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ್ರೆ ಕನ್ನಡ ಚಿತ್ರರಂಗ ಮುಳುಗ್ ಹೋಗುತ್ತೆ ಅನ್ನೋ ಪರಿಸ್ಥಿತಿ ನಿಜವಾಗ್ಲೂ ಇಲ್ಲ. ಸ್ಪರ್ಧೆ ಎದ್ರುಸಕ್ ಆಗ್ದಿರೋ, ತಾವು ರಿಮೇಕ್ ಮಾಡೊ ಅವಕಾಶ ಕಳ್ಕೊಳೋ ಭಯದಿಂದ ಕೆಲ ಪಟ್ಟಭದ್ರರು ಇಂಥಾ ವಿರೋಧಕ್ ಮುಂದಾಗಿದಾರೆ ಅನ್ಸುತ್ತೆ ಗುರು! ಅಲ್ಲಾ ಇವರು ಕನ್ನಡದೋರುನ್ನ ಏನಂದ್ಕೊಂಡಿದ್ದಾರೆ? ಡಬ್ ಆಗಿರೋ ಸಿನಿಮಾ ಬಂದ್ರೆ ಮೂಲ ಕನ್ನಡ ಚಿತ್ರಗಳನ್ನು ನೋಡೋರಿರೋದಿಲ್ಲಾ ಅಂತಾನಾ? ಪಕ್ಕದ ತಮಿಳುನಾಡು, ತೆಲುಗು ಚಿತ್ರರಂಗದಲ್ಲಿ ಡಬ್ಬಿಂಗ್ ಇಲ್ವಾ? ಅಲ್ಲಿ ಟಿವಿ ಧಾರಾವಾಹಿಗಳಿರಲಿ, ನ್ಯೂಸನ್ನೂ ಬಿಡದೆ ಡಬ್ ಮಾಡ್ತಾರೆ. ಭಾರತ ಬೇಡಾ ಅಂದ್ರೆ ಜಪಾನಿಗೆ ಹೋಗಿ ನೋಡಿ, ಅಲ್ಲಿ ಪಾಪ್ ಹಾಡುಗಳು, ಬಾಂಡ್ ಸಿನಿಮಾಗಳನ್ನೂ ಬಿಡದೇ ಡಬ್ ಮಾಡ್ತಾರೆ. ಆ ಚಿತ್ರರಂಗಗಳೆಲ್ಲಾ ಏನ್ ಸತ್ತು ಹೋಗಿವೆಯಾ?
ಈಗ ಡಬ್ಬಿಂಗ್ ಬೇಡಾ ಅನ್ನೋ ಈ ಕೂಗಿಗೆ ಹೊಸದಾಗಿ ಇನ್ಮೇಲೆ ಟಿವಿ, ರೇಡಿಯೋ ಜಾಹೀರಾತುಗಳನ್ನು ಡಬ್ ಮಾಡಬಾರದು ಅನ್ನೋ ಅತಿರೇಕವೂ ಸೇರ್ಕೊಂಡಿದೆ. ಹಿಂದೇನೋ ಈ ಡಬ್ಬಿಂಗ್ ನಿಂತಾಗ ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ಬಂದವು. ಆದ್ರೆ ನಿಧಾನವಾಗಿ ಕನ್ನಡದೋರು ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲಿ ನೋಡಕ್ ಶುರು ಹಚ್ಕೊಂಡ್ರು. ಇದರ ಪರಿಣಾಮ ಇವತ್ತಿನ ದಿವಸ ಕನ್ನಡ ಚಿತ್ರಗಳಿಗೆ ಬೆಂಗಳೂರಿನ ಅರ್ಧಕ್ಕರ್ಧ ಚಿತ್ರ ಮಂದಿರಗಳು ಟಾಟಾ ಹೇಳಿವೆ. ಇದರ ಪರಿಣಾಮವಾಗಿ, ವಲಸಿಗನಿಗೆ ಮಾತ್ರಾ ತನ್ನ ಭಾಷೆ ಚಿತ್ರಾನಾ ತನ್ನ ಭಾಷೇಲೇ ನೋಡೋ ಸೌಭಾಗ್ಯ ಸಿಕ್ಕಿದೆ. ಕನ್ನಡದವ್ರು ಮಾತ್ರಾ ಚಿತ್ರರಂಗದ ಈ ಹಟದಿಂದ ಅರ್ಧಂಬರ್ಧ ಅರ್ಥ ಮಾಡ್ಕೊಂಡಾದ್ರೂ ತಮಿಳು, ತೆಲುಗು, ಹಿಂದಿ ಸಿನಿಮಾಗಳ್ನ ನೋಡ್ತಾ ನೋಡ್ತಾ, ತಾವು ಆ ಭಾಷೆ ಕಲ್ತು, ಆಯಾ ಭಾಷಿಕ ಪ್ರದೇಶದಿಂದ ಇಲ್ಲಿಗೆ ಬಂದಿರೋ ವಲಸಿಗನಿಗೆ ಕನ್ನಡದ ಅಗತ್ಯ ಇಲ್ಲದಂಗೆ ಮಾಡ್ತಿದಾರೆ.
ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳ್ಸುತ್ತೆ!
ಡಬ್ ಮಾಡಕ್ ಅವಕಾಶ ಸಿಕ್ತಿದ್ ಹಾಗೇ ಇಲ್ಲಿಗೆ ಸುನಾಮಿ ಹಾಗೆ ಅನೇಕ ಕೆಟ್ಟ ಕೊಳಕು, ಥಳಕು ಬಳುಕು, ಒಳ್ಳೇ ಸಿನಿಮಾಗಳು ನುಗ್ಗಬಹುದು. ಅದ್ಯಾವ್ದು ನಮ್ಮ ನೆಲದ ಸೊಗಡಿನ, ನಮ್ಮ ಆಚರಣೆ, ನಂಬಿಕೆಗಳನ್ನು ತೋರುಸ್ದಿದ್ರೆ ಹೆಚ್ಚು ಕಾಲ ಉಳಿಯಲಾರವು. ಹಾಗೆ ನಮ್ಮತನಾನ ಬೇರೆ ಸಂಸ್ಕೃತಿಯ ಚಿತ್ರಗಳು ತೋರ್ಸೋದು ಅಸಾಧ್ಯಾನೆ ಅನ್ನಿ. ಇನ್ನೊಂದು ಹತ್ತಿಪ್ಪತ್ತು ವರ್ಷ ಕರ್ನಾಟಕದಲ್ಲಿ ಬರೀ ಕನ್ನಡದ ಚಿತ್ರಗಳೇ ಓಡೋದಾದ್ರೆ, ಆಮೇಲೆ ಅದ್ಯಾವ ಭಾಷೆಯ ಸಿನಿಮಾನೇ ಆಗಿದ್ರೂ ನಮಗೆ ಕನ್ನಡದಲ್ಲಿ ಇಲ್ದಿದ್ರೆ ನೋಡಕ್ ಆಗಲ್ಲಾ ಅನ್ನೋ ಸ್ಥಿತಿ ಹುಟ್ಟೋದು ಖಂಡಿತಾ. ಹಾಗಾದಲ್ಲಿ ಕನ್ನಡದ ಕಲಾವಿದರಿಗೆ, ಚಿತ್ರರಂಗಕ್ಕೆ ಬಲ ಬಂದ ಹಾಗಾಗುತ್ತೆ. ಇವತ್ತು ಡಬ್ಬಿಂಗಿಗೆ ಒಪ್ಪೋದ್ರಿಂದ ಕನ್ನಡ ಚಿತ್ರರಂಗ ಬೆಳ್ಯುತ್ತೆ ಅಂತಾ ಇದನ್ನು ವಿರೋಧ್ಸೋರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.
ಮಾತಿಗ್ ಮೊದಲು ಡಾ. ರಾಜ್ ಹೆಸರು ತೊಗೊಂಡು ಡಬ್ ಮಾಡೋರನ್ನು ಕೊಲೆ ಮಾಡಿದೋರ್ನ ನಡುಸ್ಕೊಳ್ಳೋ ಹಂಗೆ ನಡುಸ್ಕೊಳ್ಳೋ ಬದ್ಲು ಒಂದು ಸರಿಯಾದ ಚರ್ಚೆ ನಡ್ಸಿ ಇಡೀ ಚಿತ್ರರಂಗ ಡಬ್ಬಿಂಗ್ ಒಪ್ಕೊಳ್ಳೋದು ನಾಡಿಗೂ ಕ್ಷೇಮ ಮತ್ತು ಹೀಗೆ ವಿರೋಧುಸ್ತಾ ಇರೋರ ಮುಖವೂ ಉಳ್ಯುತ್ತೆ. ಇಲ್ಲಾ ಅಂದ್ರೆ ಯಾರಾದ್ರೂ ಕೋರ್ಟಿನ ಮೆಟ್ಟಿಲು ಹತ್ತಿದರೆ ಮಂಗಳಾರತಿ ಗ್ಯಾರಂಟಿ! ಏನಂತೀ ಗುರು?

ಹಿಂದೀ ಶೂಲಕ್ಕೆ ಬಲಿಯಾಗದಿರಲಿ ಬಿ.ಎಂ.ಟಿ.ಸಿ!!
22.7.09

ಬೆಂಗಳೂರಿನ ಬಸ್ಸುಗಳಲ್ಲಿ ನೀವೇನಾದ್ರು ಪ್ರಯಾಣ ಮಾಡೋದಾದ್ರೆ ಇನ್ಮುಂದೆ ನೀವು ಕಣ್ಮುಚ್ಕೊಂಡು ನಿದ್ದೆ ಮಾಡ್ಬೋದು. ಗಳಿಗೆಗೊಂದ್ಸಲ ಈಗ ಬಸ್ಸೆಲ್ಲಿದೆ ಅಂತಾ ಬೆಚ್ಚಿಬಿದ್ದು ಎದ್ದು ನೋಡೋ ಗೋಳು ತಪ್ಪುತ್ತೆ. ಈಗ ಈ ಮಾಹಿತೀನಾ ಬಸ್ಸಲ್ಲೇ ತಿಳಿಸಿಕೊಡೋ ಯೋಜನೇನಾ ಜಾರಿಗೆ ತರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಂ.ಮ.ಸಾ.ಸಂ) ಮುಂದಾಗಿದೇ ಅನ್ನೋ ಸುದ್ದೀನಾ ಕನ್ನಡಪ್ರಭದೋರು 17.07.2009ರ ಸಂಚಿಕೆಯ 5ನೇ ಪುಟದಲ್ಲಿ ಹಾಕಿದ್ದಾರೆ! ಆದ್ರೆ ಈ ಸುದ್ದಿಯ ಸಿಹಿಗಡುಬು ಗಂಟಲಲ್ಲೇ ಕಚ್ಕೊಂಡು ಸಿಹೀನ ಸವಿಯಕ್ ಆಗ್ದಂಗೆ ಮಾಡಿರೋದು ಇದು ಮೂರು ಭಾಷೇಲಿರುತ್ತೆ ಅನ್ನೋ ಸುದ್ದಿ!!
ಗಂಟಲಲ್ಲಿ ಸಿಕ್ಕೊಂಡ ಕಡುಬು!
ಜನಕ್ಕೆಲ್ಲಾ ಸಹಾಯ ಆಗಬೇಕೂಂತಾ ಈ ಯೋಜನೆ ಮಾಡಿರೋದು ಒಳ್ಳೇದೆ. ಆದರೆ ಇದರಂತೆ ಇನ್ಮೇಲೆ ಬಸ್ಸು ಎಲ್ಲಿಗೆ ಬಂದಿದೆ? ಮುಂದಿನ ನಿಲ್ದಾಣ ಯಾವ್ದು? ಇತ್ಯಾದಿ ಮಾಹಿತಿಗಳನ್ನು ಮೂರು ಮೂರು ಭಾಷೆಗಳಲ್ಲಿ ಹೇಳುಸ್ತಾರಂತೆ! "ಕನ್ನಡದೋರಿಗೆ ಕನ್ನಡ, ಕನ್ನಡ ಬರದೇ ಇರೋರಿಗೆ ಇಂಗ್ಲಿಷ್ ಸಾಲದಾ? ಇನ್ನು ಮೂರನೇ ಭಾಷೆ ಯಾಕೆ? ಹಾಗೆ ಮೂರನೇ ಭಾಷೆ ಇದ್ದರೂ ಅದ್ಯಾವ್ದಾಗಿರುತ್ತೆ?" ಅನ್ನೋ ಪ್ರಶ್ನೆಗಳು ನಮ್ಮ ಜನರ ತಲೇಲಿ ಹುಟ್ಕೊಳ್ಳೋಕೆ ಮೊದಲೇ "ಆ ದೇವಭಾಷೆ ಇನ್ಯಾವುದೂ ಅಲ್ಲಾ, ಹಿಂದಿ" ಅಂದಿದೆ ಬಿ.ಎಂ.ಟಿ.ಸಿ.
"ಇದೇನು ಗುರು? ಬೆಂಗಳೂರಲ್ಲಿ ಕನ್ನಡದೋರನ್ನು ಬಿಟ್ಟರೆ ಬರೀ ಹಿಂದಿಯೋರೇ ಹೆಚ್ಚಿರೋದಾ? ಬೆಂಗಳೂರಲ್ಲಿರೋ ತಮಿಳ್ರು, ತೆಲುಗ್ರು, ಮಾರವಾಡಿಗಳು, ಮರಾಠಿಗರು... ಎಲ್ಲಾ ಏನು ಪಾಪ ಮಾಡಿದ್ರು? ಯಾಕೆ ಆ ಭಾಷೆಗಳಲ್ಲೂ ಪ್ರಕಟಣೆ ಇರಬಾರದು? ಯಾಕೆ ಹಿಂದೀಲಿ ಮಾತ್ರಾ ಇರಬೇಕು" ಅಂತೆಲ್ಲಾ ನಮ್ಮ ಜನರು ಕೇಳದೆ "ಭಾರತದ ಒಗ್ಗಟ್ಟಿಗಾಗಿ ಹಿಂದಿಯಲ್ಲಿ ಇರಬೇಕಾದ್ದೇ ಸರಿ" ಅಂತ ಒಪ್ಕೊಳ್ಳೋ ಹಾಗೇ ಹುಸಿ ರಾಷ್ಟ್ರೀಯತೆಯ ಹುಳಾನಾ ಕನ್ನಡದೋರ ತಲೇಲಿ ಸ್ವಾತಂತ್ರ ಬಂದಾಗಿಂದ ಸಕತ್ತಾಗಿ ಬಿಡಲಾಗುತ್ತಿದೆ.
ಹಿಂದಿಯನ್ನು ಬಲ್ಲ ಕನ್ನಡೇತರರು ಅಲ್ಪ-ಸ್ವಲ್ಪ ಕನ್ನಡ ಕಲಿತು, ಮುಖ್ಯ ವಾಹಿನಿಗೆ ಬರಲು ನೆರವಾಗಬಹುದಾದ ಈ ಬಸ್ಸುಗಳನ್ನು ಹಿಂದಿಗೇ ಮಣೆ ಹಾಕಲು ಉಪಯೋಗಿಸಲು ಹೊರಟಿರುವ ಈ ಸಂಸ್ಥೆಗೆ ಗ್ರಾಹಕರಾಗಿ ನಾವು ಬುದ್ಧಿ ಹೇಳಬೇಕು ಗುರು. ನೀವೇ ಯೋಚಿಸಿ ನೋಡಿ, ಇವತ್ತು ಬೋರ್ಡು, ಅನೌನ್ಸುಮೆಂಟು ಬರೋದಾದ್ರೆ, ಇನ್ಮುಂದೆ ಬೆಂಗಳೂರಿನ ಬಿ.ಎಂ.ಟಿ.ಸಿಯಲ್ಲಿ ಚಾಲಕ/ ನಿರ್ವಾಹಕರ ಕೆಲಸ ಬೇಕು ಅಂದ್ರೆ ಹಿಂದಿಯನ್ನು ಕಲಿತರಬೇಕಾದ್ದು ಕಡ್ಡಾಯ ಅನ್ನೋ ವ್ಯವಸ್ಥೆ ಹುಟ್ಕೊಳುತ್ತೆ. ವಲಸಿಗ ನಾಡಿನ ಮುಖ್ಯವಾಹಿನಿಯಲ್ಲಿ ಸೇರೋಕೆ ತೊಡಕಾಗಿರೋ ಈ ಯೋಜನೇನಾ ಸರ್ಕಾರ ತಕ್ಷಣ ಕೈಬಿಡದಿದ್ರೆ ನಾಳೆ ನಮ್ಮೂರ ನಗರಪಾಲಿಕೆ ಆಡಳಿತದಲ್ಲೂ ಹಿಂದಿಯನ್ನು ತ್ರಿಭಾಷಾ ಸೂತ್ರದ ನೆಪದಲ್ಲಿ ತೂರಿಸೋದ್ರಲ್ಲಿ ಅನುಮಾನಾ ಇರಲ್ಲ.
ನಾಳೆ ಏನಾದೀತು?
ಮುಂದೆ ತ್ರಿಭಾಷಾ ಸೂತ್ರವನ್ನು ಒಪ್ಪಿರೋದ್ರಿಂದ ನಾವು ಹಿಂದೀಲೂ ಹಾಕ್ತೀವಿ. ಇದ್ರಿಂದ ನಿಮಗೇನು ತೊಂದರೆ? ಕನ್ನಡದಲ್ಲೂ ಹೇಳ್ತಿದೀವಲ್ಲಾ? ಅನ್ನೋ ವಾದ ಕೇಳೋ ದಿನ ಬಂದೀತು! ಇನ್ಮೇಲೆ ವಿದ್ಯುತ್ ಬಿಲ್ಲು, ನೀರಿನ ಬಿಲ್ಲು, ಆಸ್ತಿ ತೆರಿಗೆ ಅರ್ಜಿ, ಬೆಂಗಳೂರು ಮಹಾನಗರ ಪಾಲಿಕೆ ಕಛೇರಿಗಳು, ವಿಧಾನ ಸೌಧ, ಗ್ರಾಮ ಪಂಚಾಯ್ತಿ ಎಲ್ಲಾ ಕಡೆ ತ್ರಿಭಾಷಾ ಸೂತ್ರಾನ ಜಾರಿ ಮಾಡ್ಬೇಕು ಅನ್ನೋ ದಿನವೂ ಬಂದೀತು! ಘನ ಕರ್ನಾಟಕ ರಾಜ್ಯ ಸರ್ಕಾರವು, ನಾಡಿಗೆ ಮುಳುವಾಗಿರೋ ತ್ರಿಭಾಷಾ ಸೂತ್ರಕ್ಕೆ ಈಗಲೂ ಎಳ್ಳೂನೀರು ಬಿಡದಿದ್ರೆ... ಬೆಂಗಳೂರಿಗರು ಕನ್ನಡಕ್ಕೆ ಎಳ್ಳುನೀರು ಬಿಡಬೇಕಾಗುತ್ತೆ!! ಆದ್ರಿಂದ ನಾವೂ ನೀವು ಎಲ್ಲಾ ಸರ್ಕಾರಕ್ಕೆ ನೀವು ಇಡಕ್ ಹೊರಟಿರೋ ಈ ತಪ್ಪು ಹೆಜ್ಜೇನಾ ಹಿಂತೊಗೊಳ್ಳಿ ಅನ್ನಬೇಕಾಗಿದೆ ಗುರು! ತ್ರಿಭಾಷಾ ಸೂತ್ರದ ಸೋಗಿನ ಹಿಂದಿ ಶೂಲಕ್ಕೆ ಬಲಿಯಾಗದಿರಲಿ ಬಿಎಂಟಿಸಿ ಅನ್ನಬೇಕಾಗಿದೆ.
ಕೊನೆಹನಿ : ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ವಿಶೇಷವಾಗಿ ರೈಲ್ವೇಯಲ್ಲಿ ಮೊದಲು ತ್ರಿಭಾಷಾ ಸೂತ್ರಾ ಇದೆಯಾ? ಊಹೂಂ... ಸೂತ್ರಾ-ಪಾತ್ರಾ ಇವೆಲ್ಲಾ ರಾಜ್ಯಸರ್ಕಾರಕ್ಕೆ ಮಾತ್ರಾನಾ, ಕೇಂದ್ರಕ್ಕೆ ಅನ್ವಯವಾಗ್ತಿಲ್ಲ. ಇಷ್ಟಕ್ಕೂ ಸರಿಯಾದ ಒಕ್ಕೂಟದಲ್ಲಿ ಯಾಕೆ ತ್ರಿಭಾಷಾ ಸೂತ್ರಾ ಬೇಕಾಗಿದೆ? ಕನ್ನಡನಾಡಲ್ಲಿ ಕನ್ನಡಿಗರಿಗೆ ಕನ್ನಡವೂ, ಕನ್ನಡ ಬರದೇ ಇದ್ದೋರಿಗೆ ಇಂಗ್ಲೀಷು ಸಾಲದಾ? ಹಿಂದೆ ಸಂಸದರೊಬ್ಬರು ಹಿಂದಿ ಹೇರಿಕೆ ಬಗ್ಗೆ ಮಾತಾಡ್ತಾ "ದೊಡ್ದ ಬೆಕ್ಕಿಗೆ ದೊಡ್ಡ ಕಿಂಡಿ, ಸಣ್ಣ ಬೆಕ್ಕಿಗೆ ಸಣ್ಣಕಿಂಡಿ ಯಾಕೆ? ನ್ಯಾಷನಲ್ ಲೆವೆಲ್ಲಿಗೆ ಹಿಂದಿ, ಇಂಟರ್ ನ್ಯಾಷನಲ್ ಲೆವೆಲ್ಲಿಗೆ ಇಂಗ್ಲೀಷ್ ಯಾಕೆ? ಇಂಗ್ಲಿಷ್ ಅನ್ನೋ ದೊಡ್ಡ ಕಿಂಡಿ ಸಾಕು" ಅಂದಿದ್ರಂತೆ ಗುರು!
ಟ್ವಿಟರ್ ನಲ್ಲಿ
ಫೇಸ್ಬುಕ್ ನಲ್ಲಿ