ಉದ್ಧಾರಕ್ಕೆ ಭಾಷೆ ಬೇಕು ನಿಜ, ಆದ್ರೆ ಯಾವ್ ಭಾಷೆ?

ಮೊನ್ನೆ ಬೆಂಗಳೂರಿನ ಕೇಂದ್ರೀಯ ಸದನದಲ್ಲಿ ಕೇಂದ್ರ ನಗರಾಭಿವೃದ್ದಿ ಮತ್ತು ವಸತಿ ಇಲಾಖೆಯ ಒಂದು ವಿಚಾರ ಸಂಕಿರಣದಲ್ಲಿ ಭಾರತದ "ಪ್ರಗತಿಯಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತೆ" ಅಂತ ಯಾರೋ ಹೇಳಿದಾರೆ ಅಂತ ಇದೇ ತಿಂಗಳ 17ನೇ ತಾರೀಕಿನ ವಿ.ಕ.ದಲ್ಲಿ ಸುದ್ದಿ ನೋಡಿ "ಕೊನೆಗೂ ಭಾಷೆ ಪ್ರಾಮುಖ್ಯಾನ ಜನ್ರು ಅರ್ಥ ಮಾಡ್ಕೋತಿದಾರಪ್ಪಾ" ಅನ್ನೋ ಖುಷಿ ಆಗಿದ್ದೇನೋ ನಿಜ. ಆದ್ರೆ ಅದನ್ನ ಹೇಳಿದ ಅಯೋಗ್ಯನ ತಲೇಲಿ ಭಾರತಕ್ಕೆ "ಭಾಷೆ" ಅನ್ನೋದರ ಅರ್ಥವೇ "ಹಿಂದಿ" ಅನ್ನೋ ಪ್ರಜಾಪ್ರಭುತ್ವ-ವಿರೋಧಿ ನಿಲುವು ಕೂತಿದೆ, ಅದು ಆ ವಯ್ಯನ ಲೆಕ್ಕದಲ್ಲಿ ಭಾರತದ ರಾಷ್ಟ್ರಭಾಷೆ ಅಂತ ಇಡೀ ಸುದ್ದಿ ಓದಿದ ಮೇಲೇ ಗೊತ್ತಾಗಿದ್ದು. ಈ ಹಿಂದೀ ಬಗ್ಗೆ ಇರೋ ಗೊಂದಲ ಭಾರತದ ಜನಕ್ಕೆ ಯಾವಾಗ್ ಹೋಗತ್ತೋ ನಾ ಕಾಣೆ ಗುರು! (ಹೆಂಗ್ ಹೋದಾತು, ಇನ್ನೂ ಅದೇ ಸುಳ್ನ ಸಾರಿ ಸಾರಿ ಹೇಳೋರಿರುವಾಗ ಅಂತೀರಾ?!)...

ಹಿಂದಿ ರಾಷ್ಟ್ರಭಾಷೆ ಅನ್ನೋ ಮಹಾ ಸುಳ್ಳು

ಹಿಂದಿ ರಾಷ್ಟ್ರಭಾಷೆ ಅನ್ನೋದೇ ಒಂದು ದೊಡ್ಡ ಸುಳ್ಳು. ಹಿಂದಿ ರಾಷ್ಟ್ರಭಾಷೆ ಅಂಥ ನಂಬಕೊಂಡಿರೋರು ಇವರೊಬ್ರೇ ಅಲ್ಲ, ಭಾರತದಲ್ಲಿ ಬಹಳ ಜನ ಇದಾರೆ. ಆದರೆ ಇವೆಲ್ಲ ಸುಳ್ಳು. ಹಿಂದಿಗೆ ಭಾರತೀಯ ಸಂವಿಧಾನ ಕೇಂದ್ರದ "ಅಧಿಕೃತ ಭಾಷೆ" ಅನ್ನೋ ಸ್ಥಾನಮಾನ ಕೊಟ್ಟಿದೆಯೇ ಹೊರತು ಹೆಚ್ಚೇನೂ ಇಲ್ಲ (ಹಾಗ್ ಕೊಟ್ಟಿರೋದೂ ನಮ್ಮ ಸಂವಿಧಾನದ ಒಂದು ಕಟುಸತ್ಯ ಅನ್ನೋದು ಬೇರೆ ವಿಶ್ಯ). ಒಂದು ಸುಳ್ಳನ್ನ ಸಾವಿರ ಸಲಿ ಹೇಳಿದ್ರೆ ಸತ್ಯ ಆಗುತ್ತೆ ಅನ್ನೋ ಹಾಗೆ ಈ ಹಿಂದಿ-ಪಕ್ಷಪಾತಿಗಳು, ಕನ್ನಡದ್ರೋಹಿಗಳು ಇವತ್ತಿಗೂ ಇಲ್ಲದ ಪ್ರಚಾರ, ಇಲ್ಲದ ಸ್ಥಾನಮಾನಾನ ಹಿಂದಿಗೆ ಕೊಡ್ತಾನೇ ಇದಾರೆ ಅನ್ನೋದು ಭವ್ಯಭಾರತದ ಒಳಹುಳುಕು. ಈ ಹುಳುಕಿನಿಂದ ಕನ್ನಡಿಗರದಷ್ಟೇ ಅಲ್ಲ, ಭಾರತದಲ್ಲಿ ಹಿಂದಿಯೇತರ ಜನರೆಲ್ಲರ ಬಾಳು ನರಕವಾಗಿಹೋಗಿ, ತಂತಮ್ಮ ನಾಡಿನಲ್ಲೇ ಹೊರಗಿನವರಾಗಿಹೋಗಿದ್ದಾರೆ ಗುರು! ಇದು ನಮ್ಮ ಭವ್ಯಭಾರತದ ಹಿರಿಮೆ!

ಯಾವ್ ಭಾಷೆ ಸ್ವಾಮಿ?


ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾದ ಭಾರತ ಉದ್ಧಾರ ಆಗೋದು ಹೇಗೆ? ಬಲಿಷ್ಠ ಕರ್ನಾಟಕ, ಬಲಿಷ್ಠ ತಮಿಳುನಾಡು, ಬಲಿಷ್ಠ ಗುಜರಾತ - ಹೀಗೆ ಬಲಿಷ್ಠ ರಾಜ್ಯಗಳಿಂದ ಭಾರತ ಬಲಿಷ್ಠ ಆಗುತ್ತೆಯೇ ಹೊರತು ಹಿಂದೀನ ರಾಷ್ಟ್ರಭಾಷೆ ಮಾಡೋದ್ರಿಂದ ಅಲ್ಲ. ಭಾರತ ಉದ್ಧಾರ ಆಗೋಕೆ ಭಾಷೆಗೂ ಒಂದು ಮುಖ್ಯ ಸ್ಥಾನ ಇದೆ ಅನ್ನೋ ಇವರ ಮಾತನ್ನ ಎಲ್ಲರೂ ಒಪ್ತಾರೆ, ಆದ್ರೆ ಯಾವ ಭಾಷೆ? ಆಯಾ ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡೋಕೆ ಆಗೋವಂತ ಅಲ್ಲಿನ ಸ್ಥಳೀಯ ಭಾಷೇನೋ ಇಲ್ಲ ಯಾವುದೇ ಸಂಬಂಧವಿರದ ಹಿಂದಿಯಿಂದಾನೋ?

ಹೇರಿಕೆ ಅಲ್ಲ ಉತ್ತೇಜನ !

ರಾಜ್ಯದಲ್ಲಿ ಸದ್ಯಕ್ಕೆ "ಹಿಂದಿ ಹೇರಿಕೆಯ ವಾತಾವರಣ ಇಲ್ಲ, ಆದರೆ ಹಿಂದಿಗೆ ಉತ್ತೇಜನ ನೀಡುವ ವ್ಯವಸ್ಥೆ ಇದೆ" ಅನ್ನೋ ಮೂರ್ಖರು ಕೂಡ ಇದ್ದಾರೆ! ಅವರಿಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ, ಮಾರುಕಟ್ಟೆಯಲ್ಲಿ, ಗ್ರಾಹಕಸೇವೆಯಲ್ಲಿ, ಮನರಂಜನೆಯಲ್ಲಿ - ಪ್ರತಿಯೊಂದರಲ್ಲೂ ನಡೀತಿರೋ ಹಿಂದಿ ಹೇರಿಕೆ ನೋಡೋಕಾಗದೆ ಇರೋ ಜಾಣ ಕುರುಡು. ಇದೇ ರೀತಿ ಹಿಂದಿ/ಹಿಂದಿಯವರ ಹೇರಿಕೆ ನಡೀತಾ ಇದ್ರೆ ಇವತ್ತು ಮುಂಬೈನಲ್ಲಿ ಆದಂತೆ ನಾಳೆ ಎಲ್ಲ ಹಿಂದಿಯೇತರ ರಾಜ್ಯದಲ್ಲೂ ಆದೀತು. ಅದು ಖಂಡಿತವಾಗ್ಯೂ ಒಕ್ಕೂಟ ವ್ಯವಸ್ಥೆಯ ಆರೋಗ್ಯಕ್ಕೆ ಒಳ್ಳೇದಲ್ಲ ಗುರು!

ಅರ್ಥ ಮಾಡ್ಕೋ ಗುರು!

ಇದು ನಮ್ಮ ಕನ್ನಡ ನಾಡು. ಇಲ್ಲಿ ಸಾವಿರಾರು ವರ್ಷದಿಂದ ಬಾಳಿ ಬದುಕ್ತಾ ಇರೋರು ನಾವು, ಅಂದ್ರೆ ಕನ್ನಡಿಗರು, ಇಲ್ಲಿ ನಾವಾಡೋ ನುಡಿ ಕನ್ನಡ. ನಾವು ಉದ್ಧಾರ ನಮಗೆ ಗೊತ್ತಿಲ್ಲದೆ ಇರೋ ಹಿಂದಿ ಕಲಿಯೋದ್ರಿಂದ ಸಾಧ್ಯ ಅಂಥ ಹೇಳೋದು ತಮಾಷೆಯಷ್ಟೇ ಅಲ್ಲ, ಎಲ್ಲಾ ಹಿಂದಿಯೇತರ ಜನಾಂಗಗಳ ಕಡೆಗಣಿಕೆ. ಇಡೀ ಭಾರತಕ್ಕೆ ನಿಧಾನವಾಗಿ ಹಿಂದಿ ಅನ್ನೋ ವಿಷ ಉಣಿಸಿ ವಿವಿಧತೆ ನಿಧಾನವಾಗಿ ಅಳಿಸಿ, ಆಮೇಲೆ ನಮ್ಮನ್ನ ಉದ್ಧಾರ ಮಾಡೋದೇನ್ ಬಂತು ಮಣ್ಣು?

ಭಾರತಕ್ಕೆ ಹೊಂದುವ ಸರಿಯಾದ ಭಾಷಾ ನಿಯಮ

ನಿಜವಾಗಲೂ ಯೋಚಿಸಿ ನೋಡಿದರೆ ಭಾರತದ ಪ್ರತಿಯೊಂದು ಭಾಷೆಯೂ ರಾಷ್ಟ್ರಭಾಷೆಯಾಗಬೇಕು. ಯಾವುದೋ ಆಯ್ಕೆಯ ಒಂದೆರಡಲ್ಲ. ಯೂರೋಪು ಒಕ್ಕೂಟದಲ್ಲಿ ಕೇಂದ್ರ-ಸರ್ಕಾರ ಒಗ್ಗೂಡಿರುವ ಎಲ್ಲಾ ರಾಜ್ಯಗಳ ಭಾಷೆಗಳಲ್ಲೂ ಕೆಲಸ ಮಾಡಕ್ಕೆ ತಯಾರಿರುವಾಗ ಭಾರತಕ್ಕೆ ಯಾಕೆ ಹಿಂದಿ ಅನ್ನೋ ಒಂದೇ ಭಾಷೆ ಮೇಲೆ ಒಲವು? ಈ ಒಲವು ಪ್ರಜಾಪ್ರಭುತ್ವಕ್ಕೆ ಎಷ್ಟು ಹೊಂದುವಂಥದ್ದು? ಈ ಒಲವು ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗರು ಸಾರ್ವಭೌಮರಾಗಿರಬೇಕೆಂಬ ಪ್ರತಿಯೊಬ್ಬರ ಸಹಜವಾದ ಆಶಯಕ್ಕೆ ಎಷ್ಟು ಪೂರಕ? ಕೇಂದ್ರ-ಸರ್ಕಾರದ ಕೆಲಸಗಳೆಲ್ಲ ಒಂದೇ ಭಾಷೇಲಿ ಆಗಬೇಕು ಅನ್ನೋ ಚಿಂತನೆಯಾದರೂ ಎಷ್ಟು ಸರಿ? ಇವತ್ತಿನ ದಿನ ತಂತ್ರಜ್ಞಾನದ ಬಳಕೆಯಿಂದ ಪ್ರತಿಯೊಂದು ಭಾಷೆಯಲ್ಲೂ ಆಡಳಿತ ಮಾಡುವುದು ಕಷ್ಟವೂ ಏನಿಲ್ಲ. ಮಾಡಕ್ಕೆ ಮನಸ್ಸಿರಬೇಕಷ್ಟೆ. ಏನ್ ಗುರು?

5 ಅನಿಸಿಕೆಗಳು:

Anonymous ಅಂತಾರೆ...

ಗುರುಗಳೇ,
ಚಲೋ ಬರ್ದಿರಿ.. ನಮ್ಮ ಮಂದಿಗೆ ಅದ್ರಾಗು ನಮ್ಮ ಉತ್ತರ ಕರ್ನಾಟಕದ ಮಂದಿಗೆ ಹತ್ತಿರು ಹಿಂದಿ ರೋಗ ಬಿಡ್ಸಾಕ್ ಸ್ವಲ್ಪ ಟೈಮ್ ಹಿಡಿತೆತ್ರಿ. ನಾನು ಅಲ್ಲಿಯವನೆ ರೀ .. ನಾನು ಹಂಗ ಇದ್ದೆ ರೀ.. ಆದ್ರ ನಿಮ್ಮ ಬ್ಲಾಗ್ ನೋಡ್ಕೊಂತ ನೋಡ್ಕೊಂತ ಹಿಂದಿ ಭೂತದ ಪರಿಣಾಮ ಅರ್ಥ ಆಗೆತ್ರಿ..
ಎಲ್ಲಕಿಂತ ದೊಡ್ಡ ತ್ರಾಸ್ ಆಗಾತಿದ್ದು ಹಿಂದಿ ಸಿನಿಮಾ ಗಳಿಂದ ರೀ .. ಅದರಿಂದಾಗೆ ನಮ್ಮ ಮಂದಿ ಗೆ ಅರ್ಧ ಹಿಂದಿ ಹುಚ್ಚು ಹಿಡಿದಿದ್ದು.. ಇದಕ್ಕ ಒಂದು ಪರಿಹಾರ ಅಂದ್ರ ನಮ್ಮ ಕನ್ನಡ ಸಿನೆಮಾಗಳು ನಮ್ಮ ಮಂದಿದ ಎಲ್ಲ ಮನರಂಜನೆ ಅಗತ್ಯ ಪೂರ್ತಿ ಮಾಡ್ಬೇಕ್ರಿ ..
ಸ್ವಲ್ಪ ಪಕ್ಕದ ಆಂಧ್ರ ನೋಡಿದ್ರ ನನಗ ಹಂಗ ಅನ್ಸುದ್ರಿ .. ಅಲ್ಲೂ ಹಿಂದಿ ಶಾಲಿನಾಗ್ ಐತಿ ,, ಆದ್ರ ಅಲ್ಲಿ ಮಂದಿ ತೆಲುಗು ಬಿಟ್ಟು ಬೇರೆ ಪಿಚ್ಚರ ನೋಡುದಿಲ್ಲ.. ಯಾಕಂದ್ರ ಅವರ ಮನರಂಜನಿದ ಎ ಟು ಝೆಡ್ ತೆಲುಗು ನ ಪೂರ್ತಿ ಮಾಡ್ಲಿಕತ್ತೆತಿ.. ನಮ್ಮ ಸಿನಿಮಾ ಗಳು ಆ ಲೆವೆಲ್ಲಿಗ ಬರಬೇಕ್ರಿ ..
ಸಿನಿಮಾ ದಷ್ಟು ಸ್ಟ್ರಾಂಗ್ ಮಾಧ್ಯಮ್ ಇನ್ನೊಂದಿಲ್ರಿ , ಹಿಂಗಾಗಿ ನಮ್ಮ ಮಂಡಿಗ ಕನ್ನಡಿಗ ಅಂತ ಗುರ್ತಿಸಿಕೊಳ್ಳು ಹಂಗ ಮಾಡಬೇಕು ಅಂದ್ರ ಕಮರ್ಷಿಯಲ್ ಸಿನಿಮಾದ ಲಿಮಿಟ್ ನಾಗ್ ಚಲೋ ಚಲೋ ಸಿನಿಮಾ ಬಂದು ಮಂದಿ ತಲಿ ನಾಗ್ ಕನ್ನಡಿಗ, ಕರ್ನಾಟಕ ಅನ್ನು ಪ್ರಜ್ಞೆ ಬರಬೇಕ್ರಿ ..

ನಿಮ್ಮ ಪ್ರಯತ್ನ ಬಾಳ ಚಲೋ ಐತ್ರಿ .. ನನ್ನ ದೊಸ್ತರಿಗೂ ಇದನ್ನ ಕಳಸೆನಿ ಇಲ್ಲಿ...

Anonymous ಅಂತಾರೆ...

My personal feeling is simple: if KA/MH had joined TN in the anti-Hindi protests then things would have worked out even better. Outsiders would have been forced to learn Marathi/Kannada here would have been no large scale demographic change. The harder it is to survive in a place if you don’t know the local language, the less demographic change that place sees. The more hostile a place is to those who don’t know the local language, the more reluctant migrants are to come to it, or settle down in it. That is why Kolkata and Chennai remain what they are. And that is why Mumbai and Bangalore do not. The more difficult it is to live in a place if you don’t know the local language, the more reluctant migrants are to come to it.

However bitter the above sounds, it is the truth.

anisikegalu ಅಂತಾರೆ...

Hindiyuu saha bharatada ondu bhasheyee horatu adu Rashtrabhashe aaglu saadhyavillla. idella dehliylli kulitu aaluvavara bhavane. maatrubhashey jotege english annu samparka bhaheyaagi maadabeku. janaru iveradallade bere bhasheyannu aasktiyind kalitre avrige upayogaviruttae.

Anonymous ಅಂತಾರೆ...

kannadigarige 50% udogya avakasha .. illi noDi ..

http://thatskannada.oneindia.in/news/2008/02/22/BIAL-set-to-open-march-30.html

suddi habbisi .. contract tagoLLi .. kelasagaLu bereyavara paalaagalikke bidabedi ..

Sri

IrsuMursu ಅಂತಾರೆ...

vasi ilnodi gurugaLe namma miss worldu yen heLthaaLe antha!

http://www.youtube.com/watch?v=TbAHD-c6AQA&feature=related

swalpa ugdideeni, hange neevu swalpa ugiri...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails