ಹೆಸರಲ್ಲೇ ಎಲ್ಲಾ ಇದೆ !

ಕಳೆದ ತಿಂಗಳು ವಿ.ಕ ಮಂಗಳೂರು ಆವೃತ್ತಿಯಲ್ಲಿ ತುಳುವಿನಲ್ಲಿರುವ ಕೆಲವು ಊರುಗಳ ಹೆಸರುಗಳನ್ನು ಬದಲಾಯಿಸಿ, ಅವುಗಳನ್ನು ತುಳುವಿನಿಂದ ದೂರ ಮಾಡುತ್ತಿರುವ ಬಗ್ಗೆ ಸುಧಾಕರ ತಿಂಗಳಾಡಿ ಅನ್ನೋರು ಬರೆದ ಒಂದು ಸುದ್ದಿ ಬಂದಿತ್ತು. ಒಂದೂರಿನ ಹೆಸರಿನ ಹಿಂದೆ ಒಂದು ಭಾಷೆ, ಒಂದು ಸಂಸ್ಕೃತಿಯ ಪ್ರಭಾವ ಯಾವತ್ತೂ ಇದ್ದು, ಅದನ್ನು ಬದಲಾಯಿಸಿ, ವೈವಿಧ್ಯತೆಯನ್ನು ಅಳಿಸುವ ಯಾವ ಪ್ರಯತ್ನವೂ ಸಲ್ಲದು ಗುರು. ಒಂದು ಪ್ರದೇಶದ ಜನರ ಬದುಕು, ಏಳ್ಗೆ ಮತ್ತು ಸಂಸ್ಕೃತಿಗಳ ಮೇಲೆ ಮಾರಕವಾಗೋ ಯಾವ ನಿರ್ಣಯ, ನೀತಿಗಳನ್ನಾಗಲೀ ಯಾರು ತೊಗೋಬಾರದು ಗುರು.

ಹೆಸರಲ್ಲೇನಿದೆ?

ಒಂದೂರಿನ ಹೆಸರು ರಚನೆಯಾಗಿದ್ದರ ಹಿಂದೆ ಆ ಮಣ್ಣಿನ ಗುಣ ದಟ್ಟವಾಗಿ ಪ್ರಭಾವ ಬೀರಿರುತ್ತದೆ, ಅದು ತುಳು ಇರಬಹುದು, ಇಲ್ಲವೇ ಕನ್ನಡ, ಕೊಡವ, ತಮಿಳು, ಹಿಂದಿ, ಫ್ರೆಂಚ್, ಜರ್ಮನ್ನೇ ಹೀಗೆ ಯಾವುದೇ ಭಾಷೆ ಆಗಿರಬಹುದು, ಈ ಮಾತು ಜಗತ್ತಿನ ಎಲ್ಲ ಭಾಷೆಗೂ ಅನ್ವಯಿಸುತ್ತೆ. ಪ್ರತಿ ಪ್ರದೇಶದ ಊರುಗಳ ಹೆಸರುಗಳು ಆಯಾ ಪ್ರದೇಶದ ಭಾಷೆ, ಇತಿಹಾಸ, ಪರಂಪರೆಯೊಂದಿಗೆ ತಳುಕು ಹಾಕಿಕೊಂಡಿರುತ್ತವೆ. ತುಳುವಿನ ಪೊಸಕೊಂಡ -> ಹೊಸ ಗದ್ದೆಯಾಗೋದೋ, ಇಲ್ಲಾ ಕನ್ನಡದ ಆನೆಪಾಳ್ಯ -> ಗಜೇಂದ್ರ ನಗರವಾಗೋದೋ, ಕೋತಿ ಬಂಡೆ -> ಮಾರುತಿ ಮಂದಿರವಾಗೋದೋ, ಇಲ್ಲವೇ ಬೆಂಗಳೂರು -> ಬ್ಯಾಂಗಲೋರ್ ಆಗೋದೋ, ಎಲ್ಲವೂ ಮೂಲದಿಂದ ನಮ್ಮನ್ನು ಬೇರ್ಪಡಿಸುವ ಕೆಟ್ಟ ಪ್ರಯತ್ನವೇ. ಏನಂತೀಯಾ ಗುರು?

49 ಅನಿಸಿಕೆಗಳು:

Anonymous ಅಂತಾರೆ...

ಇಲ್ಲಿ ತುಂಬಾ ಎಡವಟ್ಟಿದೆ.

ಆ ಬರಹಗಾರರು ಬರಹದಲ್ಲಿ consistency/ಸಮಹರಿವು ತೋರಿಸಿಲ್ಲ.

ಒಂದು ಕಡೆ ಪಾಡಿ(ಕನ್ನಡದ ಹಾಡಿ), ಅಡ್ಕ, ಪದವು(ಕನ್ನಡದ್ದೇ ಪದ), ಗುಡ್ಡೆ(ಕನ್ನಡದ್ದು ಗುಡ್ಡ), ಪಲ್ಕೆ, ಬೈಲ್(ಬಯಲು ಕನ್ನಡದ್ದು) ತುಳುವಿನ ಹೆಸರುಗಳೆಂದು, ಹಳ್ಳಿ, ಹಾಡಿ, ಬೈಲು ಕನ್ನಡದ ಹೆಸರುಗಳೆಂದು ಹೇಳಿರುವುದು ನಗೆಪಾಟಲಿಗೆ ಈಡಾಗುವಂತಹದ್ದು. ಬೈಲ್ ತುಳು ಮತ್ತು ಬೈಲು ಕನ್ನಡ ಅಂದರೆ ಏನರ್ಥ? ಹಾಗೆ ಪಾಡಿ ಮತ್ತು ಹಾಡಿ ಎರಡೂ ಕನ್ನಡವೇ.!

ಇನ್ನು ಅವರು ಕನ್ನಡವನ್ನು ’ಹೇರಿದ’ ಹೆಸರು ಎಂದು ಹೇಳಲು ಕೊಡುವ ಉದಾಹರಣೆಗಳು/ಎತ್ತುಗೆಗಳನ್ನು ಗಮನಿಸಿರಿ, ’ಕುಕ್ಕದ ಕಟ್ಟೆ’ ಮತ್ತು ’ಮಾವಿನ ಕಟ್ಟೆ’, ಪೊಸಕೊಂಡ(ಹೊಸಗದ್ದೆ) ಮುಂತಾದವವು.

ಅವರು ’ಕುಕ್ಕದ ಕಟ್ಟೆ’ ಎಂಬುದು ಚಂದದ ಹೆಸರೆಂದು ಹೇಳಿದ್ದಾರೆ, ಹಾಗಾದರೆ ’ಮಾವಿನ ಕಟ್ಟೆ’ ಹೆಸರಲ್ಲಿ ಚಂದವಿಲ್ಲವೇ?

ಮಂಗಳೂರಿಗೆ ತುಳುವಿನರು ಕುಡ್ಲವೆಂದು, ಕೊಂಕಣಿಯವರು ಕೊಡಿಯಾಲ ಎಂದು ಕರೆಯುವರು ಆದರೆ ಶಾಸನಗಳ ಪ್ರಕಾರ ಉಲ್ಲೇಖವಿರುವ ಹಳೆಯ ಹೆಸರು ಮಂಗಳಾಪುರ/ಮಂಗಳೂರೇ.

ಇದೇ ರೀತಿ ಗಮನಿಸಿದರೆ ’ಮಾವಿನ ಕಟ್ಟೆ’ಗೆ ಮೊದಲ ಹೆಸರು ಏನಿತ್ತು ಎಂದು ಅಧ್ಯಯನ ಮಾಡಿದರೆ ಒಳ್ಳೇದು. ಏಕೆಂದರೆ ಕೆಲವು ತುಳುವರು ತುಳುನಾಡೆಂಬ ರಾಜ್ಯವನ್ನು ಬಯಸಿ, ಅವರು ಕನ್ನಡಿಗರಿಗಿಂತ ಭಿನ್ನವೆಂದು ಹೇಳಿಕೊಂಡು, ಕನ್ನಡದ ಹೆಸರುಗಳನ್ನೇ ತುಳುವಿಗೆ ಮಾಡಿಹರು. ಇಂದಿಗೂ ಹಲ ತುಳುವರು ಮುಂಬೈ ಮುಂತಾದೆಡೆ ಹೋದಾಗ ತಾವು ತುಳುವರೆಂದು ಕನ್ನಡಿಗರಲ್ಲವೆಂದೂ ಹೇಳಿಕೊಂಡು, ಅವರಿಗೆ ಕನ್ನಡ ಬರುವುದೇ ಇಲ್ಲವೆಂದೂ ಹೇಳಿಕೊಳ್ಳುವರು. ಈ ತರಹದ ’ಕೆಲ’ ಮಂದಿ, ಕನ್ನಡ ಮತ್ತು ತುಳುವಿನ ನಡುವಣದ ಬೆಸೆಗೆಯನ್ನು ಹರಿಯಲು ಸಂಚು ಹೂಡಿದ್ದಾರೆ.

ಇನ್ನು ಹೆಸರಿನ ವಿಷಯಕ್ಕೆ ಬಂದರೆ ’ಕುಕ್ಕದ ಕಟ್ಟೆ’ಯಲ್ಲಿ ’ಕಟ್ಟೆ’ಯಾವ ಭಾಷೆಯದ್ದು? ಆ ಬರಹಗಾರರು ’ಕಟ್ಟೆ’ಯನ್ನು ತುಳುವಿನ ಪದ ಎಂದು ಸಾಬೀತು ಮಾಡಲಾರರು. ಕಟ್ಟೆ ಎಂಬುದು ಕನ್ನಡದ ಪದ ತಾನೆ. ’ಕಾಮನ ಕಟ್ಟೆ’ ಎಂಬ ಊರು ಗುಜರಾತಿನಲ್ಲಿದೆ, ಅಲ್ಲಿಂದ ಮಂಡ್ಯದ ಚುಂಚನ ಕಟ್ಟೆ, ಚಿಕ್ಕಮಗಳೂರಿನ ಬಸರೀಕಟ್ಟೆ, ಇನ್ನೂ ಹಲವೂರುಗಳ ಹೆಸರು ’ಕಟ್ಟೆ’ ಇಂದ ಕೊನೆಯಾಗುವುವು. ಅಲ್ಲೆಲ್ಲ ಇರುವ ’ಕಟ್ಟೆ’ ಕನ್ನಡದ್ದೇ ಆಗಿರುವಾಗ ’ಕುಕ್ಕದ ಕಟ್ಟೆ’ಯಲ್ಲಿ ಮಾತ್ರ ತುಳುವಿನದ್ದೇ? ಈಗ ನೋಡಿ ’ಮಾವಿನ ಕಟ್ಟೆ’ಯನ್ನೇ ತುಳುವರು ತಮ್ಮ ಮಾತಿನಲ್ಲಿ ’ಕುಕ್ಕದ ಕಟ್ಟೆ’ ಎಂದು ಕರೆದುಕೊಂಡಿದ್ದಾರೆ ಎಂದೇ ಹೇಳಬಹುದು.

ಇನ್ನು ಪೊಸಕೊಂಡ. ಮತ್ತೆ ಇಲ್ಲೂ ಅದೇ ’ಕೊಂಡ’ ಎಂಬುದು ತುಳುವಿನಲ್ಲಿ ಮಾತ್ರ ಇರುವ ಪದವೆಂದು ಬರಹಗಾರರು ಸಾಬೀತು ಮಾಡಲಾರರು, ಕೊಂಡ ಕನ್ನಡದ್ದೇ ಪದ. ’ಕೊಂಡ ಹಾಯಿ’ ಎಂಬುದು ತೆಂಕಣ ಕರ್ನಾಟಕದ ಜಿಲ್ಲೆಗಳಾದ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ತುಮಕೂರುಗಳಲ್ಲಿ ಬಳಸಲಾಗುವ ಸಾಮಾನ್ಯಪದ. ’ಬೆಂಕಿ ಕೊಂಡ’, ಗದ್ಡೆಯ ಹಾಗೇ ತಾನೆ ಇರುವುದು. ಕೊಂಡ ಎಂಬುದೂ ಕನ್ನಡದ್ದೇ ಪದ. ಗೋಲ್ಕೊಂಡ(ಗೊಲ್ಲಕೊಂಡ)ಇಂದ ಕೊಂಡ ಎಂಬ ಬುಡಕಟ್ಟು(ಗದ್ದೆ ಮಾಡಿಕೊಂಡವರು)ಇನ ಹೆಸರಲ್ಲೂ ಕನ್ನಡದಲ್ಲೆ ಕೊಂಡ ಇರುವುದು. ಪೊಸ ಇದೂ ಕನ್ನಡವೇ ತಾನೆ.

ಇಲ್ಲಿ ಬರಹಗಾರರ ವಾದದಲ್ಲಿ ತುಂಬಾ ಕೊರತೆಗಳು ಎಡವಟ್ಟುಗಳಿವೆ. ಅವರು ಎಂದೂ ತುಳುನಾಡಲ್ಲಿ ಬರೀ ತುಳು ಬುಡಕಟ್ಟಿನವರೇ ಮೂಲವಾಗಿ ಇದ್ದರು ಎಂದು ಸಾಬೀತು ಮಾಡಲಾರರು. ಅಲ್ಲಿ ಕನ್ನಡ ಮತ್ತು ತುಳು ಮಂದಿ ಹಿಂದಿನಿಂದಲೂ ಒಟ್ಟಿಗೆ ಇದ್ರು. ಸಾಮಾನ್ಯವಾಗೇ ಇಂದ ಸನ್ನಿವೇಶಗಳಲ್ಲಿ ಆ ಆ ಭಾಷಿಕರು ಊರುಗಳ ಹೆಸರನ್ನು ತಮ್ಮ ತಮ್ಮನುಡಿಯಲ್ಲೇ ಕರೆದುಕೊಳ್ಳುವರು. ಆದುದರಿಂದ ಊರುಗಳಿಗೆ ಎರಡೆರಡು, ಮೂರುಮೂರು ಹೆಸರುಗಳು ಇರುವುದುಂಟು. ಅಬ್ಬಕ್ಕ ತುಳು ಅರಸಿ, ಆದರೆ ಅಕ್ಕ ಎಂಬುದು ಕನ್ನಡದ ಪದವಲ್ಲವೇ? ಕನ್ನಡದ ಹೆಸರು ಬರಹದಲ್ಲಿ ಬಳಸಲು, ಕನ್ನಡದ ಅರಸರು ಮತ್ತು ಕನ್ನಡ ನುಡಿ ಆ ನೆಲವನ್ನು ಆಳಿಕೊಂಡು ಬಂದಿರುವುದು ಕಾರಣವಿರಬಹುದು. ಬ್ರಿಟೀಶ್ ಕಾಲದಲ್ಲೂ ಅಲ್ಲಿ ಆಡಳಿತ ಕನ್ನಡದಲ್ಲೇ ಇತ್ತು.

ಹಾಗೆ ನೋಡಿದರೆ ಕನ್ನಡಿಗರ ತಾಳ್ಮೆ ಮೆಚ್ಚಬೇಕು. ಈ ’ತುಳುನಾಡು’(ಇದು ಪ್ರಶ್ನಿಸಬೇಕಾದ ಹೆಸರು) ಎಂದು ಕರೆದುಕೊಳ್ಳುವ ನೆಲದಲ್ಲಿ ಎಂದೂ ಬರೀ ತುಳುವರು ಇರಲೇ ಇಲ್ಲ. ಅಲ್ಲಿ ಎಂದಿನಿಂದಲೂ ಕನ್ನಡ ಮತ್ತು ತುಳುವರೂ ಇಬ್ಬರೂ ಇದ್ದರು ಹಾಗೂ ಆ ನೆಲವನ್ನು ಆಳಿದ ಹೆಚ್ಚಿನರಸರು ಕನ್ನಡಿಗರೇ. ಅದಕ್ಕೆ ಆ ಜಿಲ್ಲೆಗಳಿ ದಕ್ಷಿಣ ಕನ್ನಡ ಎಂದೇ ಹೆಸರು ಬಂದಿರೋದು. ಇನ್ನು ಕಾಸರಗೋಡಲ್ಲಿರುವ ’ಗೋಡು’ ಕನ್ನಡದ್ದೇ ತಾನೆ. ಬೆಂಗಳೂರ ಹತ್ತಿರ ಕುಂಬಳಗೋಡಿಲ್ಲವೇ!

ಆದರೆ ಆನೆಪಾಳ್ಯ = ಗಜೇಂದ್ರನಗರ, ಕೋತಿ ಬಂಡೆ=> ಮಾರುತಿ ಮಂದಿರವಾಗ್ತಾ ಇರೋದು ಇತ್ತೀಚಿನ ಸಂಸ್ಕೃತ ಮತ್ತು ಕೆಲ ಸಂಸ್ಕೃತಗಾರರ ಜಾಣತನ ಮತ್ತು ಸಂಚು. ಮೈಸೂರಲ್ಲೂ ಹಲ ಹಳ್ಳಿಗಳು, ರಾಮಕೃಷ್ಣ ನಗರ, ಮಥುರಾನಗರ, ವಿವೇಕಾನಂದ ನಗರ, ನಿವೇದಿತಾ ನಗರ, ಎಂದು ಹೆಸರು ಬದಲಾಯಿಸಿಕೊಂಡಿವೆ. ಮಂಡ್ಯದ ಕಾಳಮುದ್ದೇನ ಹಳ್ಳಿ ’ಭಾರತೀ ನಗರ’ವಾಗಿದೆ. ಕ್ಯಾತನಗೆರೆ ’ಚಾಮುಂಡೇಶ್ವರಿ ನಗರ’ವಾಗಿದೆ.

ಏನ್ಗರು! ಇದರ ಬಗ್ಗೆ ಕನ್ನಡಿಗರು ನಿಗಾ ಹರಿಸದಿದ್ದರೆ, ಮೈಸೂರು => ಮಹಿಷನಗರ, ಮಂಡ್ಯ=> ಮಾಂಡವ್ಯ ನಗರ, ಬೆಂಗಳೂರು=>ವೆಂಕಟನಗರ, ಬೆಳಗಾವಿ=>ಶ್ವೇತಗ್ರಾಮ ,ಕರ್ನಾಟಕ => ಕರ್ಣಾಟ, ತುಮಕೂರು = ಕಲ್ಪವೃಕ್ಷನಗರ, ಚಿಕ್ಕಮಗಳೂರು=>ಅನುಜಾಪುರ, ಚನ್ನಪಟ್ಟಣ=ಸುಂದರನಗರ, ಚನ್ನರಾಯಪಟ್ಟಣ=ಸುಂದರರಾಜನಗರ, ಹೆಬ್ಬೆರಳು=ಅಂಗುಷ್ಟಗ್ರಾಮ ಎಂದು ಸಂಸ್ಕೃತಈರಣಗೊಳ್ಳೋದರಲ್ಲಿ ಅನುಮಾನವೇ ಇಲ್ಲ.

ಕೊನೆಯದಾಗಿ : ತುಳುವರು, ಕೊಂಕಣಿಗಳ ಹಾಗೆ ವಲಸೆ ಬಂದವರು ಎಂದು ತೋರಲು ಬೇಕಾದಷ್ಟು ಗಟ್ಟಿವಾದಗಳಿವೆ. ತುಳುವು, ತೆಲುಗು ಮತ್ತು ಕೊಂಡದಂತಹ ನುಡುದ್ರಾವಿಡ central-dravidian ನುಡಿಗಳಿಗೆ ಹೋಲುವುದೇ ಹೊರತು, ಕನ್ನಡ ಮತ್ತು ತಮಿಳಿನಂತಹ ತೆಂಕಣದ್ರಾವಿಡನುಡಿಗಳಿಗಲ್ಲವಂತೆ. ಹೆಚ್ಚಿನ ತುಳುವರು ನಮ್ಮ ನೆಲಕ್ಕೆ ತಮಿಳು ಮಂದಿ ವಲಸೆ ಬಂದ ಹಾಗೆ ತೋಟದ ಕೆಲಸಗಾರರು, ಗದ್ದೆ ಕೆಲಸಗಾರರಂತೆ. ಇಂದಿಗೂ ತುಳುವರು ತುಳುನಾಡಿನ ಮೂಲ ನಿವಾಸಿಗಳು ಎಂದು ಸಾಬೀತಾಗಿಲ್ಲ.

ಆದರೆ ಕನ್ನಡನೆಲದಲ್ಲಿ ಕನ್ನಡಿಗರು ಮೂಲನಿವಾಸಿಗಳೆಂದು ತೋರಲು ಬೇಕಾದಷ್ಟು ಪರಾವೆಗಳಿದ್ದು, ಮಹಾಭಾರತ, ಕವಿರಾಜಮಾರ್ಗದಂತಹ ಕಾವ್ಯವೇ ಕನ್ನಡಿಗರನ್ನು ಗುರುತು ಹಚ್ಚಿವೆ ಮತ್ತು ಅವರ ನೆಲವನ್ನು ಸೂಚಿಸಿವೆ.

ಇನ್ನೂ ಪಂಚದ್ರಾವಿಡ ನುಡಿಗಳು ಎಂಬುದು ತಪ್ಪು ತಿಳುವಳಿಗೆ. ದ್ರಾವಿಡ ನುಡಿಗಳು ಇಪ್ಪತ್ತಕ್ಕಿಂತಲೂ ಜಾಸ್ತಿ ಇವೆ. ಹಾಗೂ ಪಂಚದ್ರಾವಿಡ ಭಾಷೆ ಎಂಬ ಕಲ್ಪನೆ ಇತ್ತೀಚಿನದ್ದು ಇಲ್ಲವೇ ಕೆಲವೇ ಕೆಲವರದ್ದು. ತುಳುವಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ/ತಮಿಳು/ತೆಲುಗು/ಮಳಯಾಳಂ ಬಿಟ್ಟು ಬೇರೆ ದ್ರಾವಿಡನುಡಿಯ ಮಂದಿಯೂ ಇದ್ದಾರೆ. ಒರಿಯ, ಬಂಗಾಳಿ, ಗುಜರಾತಿ, ಮರಾಟಿಗಳಲ್ಲಿ ದ್ರಾವಿಡ ನುಡಿಗಳ ಹೇರಳ ಅಂಶಗಳಿವೆ.

ವಿಜಯಕರ್ನಾಟಕದಲ್ಲಿ ಹಿಂದೆ ಇದೇ ರೀತಿಯ ಲೇಖನಗಳು ಬಂದಿದ್ದವು. ಹಲ ಕನ್ನಡದ ಪದಗಳ ಮೂಲ ತುಳು ಎಂದು ಸುಳ್ಳು ಸುಳ್ಳೇ ಬರೆದಿದ್ದರು, ಉದಾಹರಣ: ಕೂಳ/ಖೂಳ ಮುಂತಾದವು.

ಈ ಸಂಗತಿಯನ್ನು ಬರೀ ಮಂಗಳೂರಿನ ಆವೃತ್ತಿಯಲ್ಲಿ ಯಾಕೆ ಪ್ರಕಟಿಸಿದ್ದು? ಅದಕ್ಕೆ ಪ್ರತಿ ವಿಷಯ ಮಂಡನೆಯನ್ನು ಬರೀ ಮಂಗಳೂರಿನವರಷ್ಟೆ ಮಾಡಲೆಂದೇ? ಇದು ಸರಿಯೇ? ಇಂತಹ ವಿಷಯಗಳನ್ನು ಇಡೀ ಕರ್ನಾಟಕದ ಮಂದಿಗೆ ತಿಳಿಸಬೇಕಲ್ಲವೇ? ಹಾಗೂ ಅದರ ಸರಿ ತಪ್ಪುಗಳನ್ನು ಚರ್ಚೆ ನಡೆಸದೇ, ವಿವೇಚಿಸದೇ ಲೇಖನಗಳನ್ನು ಪ್ರಕಟಿಸಿ ಬಿಡಬಹದೇ?

Unknown ಅಂತಾರೆ...

ಬಹಳಷ್ಟು ವಿಚಾರಗಳು ತಿಳಿದವು.

Anonymous ಅಂತಾರೆ...

ನಿಮ್ಮ ಬರಹವೇ ಅಂಕನವೇನೋ ಅನ್ನುವ ಹಾಗಿದೆ.. ತುಂಬ ಚೆನ್ನಾಗಿ ವಿಷಯವನ್ನು ಪ್ರಸ್ತಾಪಿಸಿದ್ದಿರ.
ನಾನು ಕೆಲ ಕೊಂಕಣಿ ಹಾಗು ತುಳು ಜನರು ತಾವು ಕನ್ನದವರಲ್ಲವೆಂದು ಹೇಳುವುದನ್ನು ಕೇಳಿದ್ದೇನೆ ಅವರ ಜೊತೆ ವಾದಿಸಿದ್ದೇನೆ. ಇಂಥ ಸನ್ನತನಗಳೇ ನಮ್ಮ ಇವತ್ತಿನ ಪ್ರಾರಬ್ಧಕ್ಕೆ ಕಾರಣ.

Anonymous ಅಂತಾರೆ...

ಮಾಯ್ಸ ಅವರೇ, ನಿಮ್ಮ ಮಾತು ನಿಜ. ಏನ್ ಗುರು ಇಂತಹ ಲೇಖನ ಯಾಕೆ ಬರೆದರು ಎಂದು ಯೋಚಿಸುತ್ತಾ ಇದ್ದೆ, ಅಷ್ಟರಲ್ಲಿ ನಿಮ್ಮ ಉಲ್ಲೇಖಿತ ಬರಹವನ್ನು ಕಂಡು ಬಹಳ ಸಂತಸ ಹಾಗು ತಿಳುವಳಿಕೆ ಕೂಡ ಆಯಿತು. ನಾನು ಹಲವಾರು ತುಳುವರನ್ನ ನೋಡಿದ್ದೇನೆ, ಅವರಿಗೆ ಕರ್ನಾಟಕಕಿಂತ ತುಳು, ತುಳುವರೆ ಒಲವು ಹೆಚ್ಚು. mangalore ನ mangaluru ಅಂತ ಮಾಡುವ ಪ್ರಸ್ತಾಪ ಬಂದಾಗ ಕೂಡ, ಅವರಿಗೆ ಇಂಗ್ಲಿಷ್ ಹೆಸರೇ ಇರಲಿ ಅಥವಾ ಕೂಡಲ ಅಂತ ಮಾಡುವ ಅಂತ ಹೇಳ್ತಾರೆ. ಕೆಲವರಂತೂ ಮನೆಹಾಲಿ (ಮಲೆಯಾಳಿ) ಗಳ ಜೊತೆ ಸೇರಿ, ಮಂಗಳಾಪುರಂ ಅಂತ ಮಾಡಲಿ ಎಂದರು !!

ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಪ್ರಕಾಶ್ ರೈ, ದೀಪಿಕಾ ಪಡುಕೋಣೆ ಇವರೆಲ್ಲ ಕನ್ನಡದವರು ಎಂದು ಎಷ್ಟು ಸಂತೋಷ ಪಡುತ್ತೇವೆ, ಆದರೆ ಇವರಲ್ಲಿ ಯಾರಿಗೂ ಕನ್ನಡಕ್ಕೆ ಒಲವು ಇಲ್ಲ, ಯಾರಿಗೂ ನೆಟ್ಟಗೆ ಕನ್ನಡ ಬರೋಲ್ಲ. ಅದೇ ಬೇರೆ ರಾಜ್ಯದವರೆಲ್ಲರು ಬಂದು ಅವರ ಬೆಳೆ ಬೇಯಿಸಿಕೊಂಡು ಇಲ್ಲೇ ಗೂಟ ಹೊಡಿತಾರೆ, ಕೇಳಿದರೆ ಕರ್ನಾಟಕದಲ್ಲಿದ್ದು ನಿಮಗೆ xyz ಭಾಷೆ ಬರಲ್ವ ಅಂತ.

ಮರಾಠಿಗರಿಗೆ ಶಿವಾಜಿ ಪುತ್ಥಳಿ ಬೇಕು, ಕೊಂಗರಿಗೆ ತಿರುವುಲ್ಲವರ್ ದು ಬೇಕು, ಆದರೆ ಕನ್ನಡಿಗರು ಆಳಿದ ಇಂದಿನ ಮುಕ್ಕಾಲು ಭಾರತದಲ್ಲಿ ಹೋಗಲಿ ಕರ್ನಾಟಕದಲ್ಲೇ ಕನ್ನಡಿಗರ ಪುತ್ಥಳಿಗಳು ಭೂತಕನ್ನಡಿ ಹಿಡಿದರು ಸಿಗುವುದಿಲ್ಲ. ರಾಣಿ ಚೆನ್ನಮ್ಮ ಹುಟ್ಟಿದ ಊರಲ್ಲಿ ಇಂದು ಮರಾಠಿಗರು ಮೆರೆಯುತಿದ್ದಾರೆ, ಆ ಊರಲ್ಲಿ ಶಿವಾಜಿಯ ಪುತ್ಥಳಿ ಇದೆ, ಆದರೆ ಚೆನ್ನಮ್ಮನ ಪುತ್ಥಳಿಗೆ ಆ ಮರಾಠಿಗರು ಅವಕಾಶ ನೀಡುತ್ತಿಲ್ಲ. ನಾಳೆ ಮಂಗಳೂರು, ಉಡುಪಿಯಲ್ಲೂ ಕೂಡ ಹೀಗೆ ಮಾಡುವುದಿಲ್ಲ ಎಂದು ನಂಬೋದು ಹೇಗೆ?

ಕರ್ನಾಟಕದಲ್ಲಿ ಕನ್ನಡ ಇನ್ನೂ ಆಡಳಿತ ಭಾಷೆ ಆಗದಿರಲು ಕಾರಣ ಇಂತಹವರೇ.

ಏನ್ ಗುರು? ದಯವಿಟ್ಟು ಇಂತಹ ಕಳಪೆ ಲೇಖನಗಳನ್ನ ನಿಮ್ಮ ತಾಣದಲ್ಲಿ ಹಾಕಬೇಡಿ.

Anonymous ಅಂತಾರೆ...

ಮಾಯ್ಸ ಅವರೇ,
ಕನ್ನಡಿಗರು ಮೂಲನಿವಾಸಿಗಳೆಂದು ತೋರಿಸಲು ನಿಮಗೆಷ್ಟು ಪುರಾವೆ ನೀಡಲು ಸಾಧ್ಯವಿದೆಯೋ ಅಷ್ಟೇ ಪುರಾವೆಗಳನ್ನು ತುಳುವರೂ ನೀಡಬಲ್ಲರು. ಈ ಬಗ್ಗೆ ನಿಮ್ಮ ಜೊತೆ ಚರ್ಚಿಸಲು ನಾನು ಅರ್ಹನಲ್ಲ.. ಬೇಕಾದರೆ ಅದಕ್ಕಾಗಿ ಬೇಕಾದಷ್ಟು ಹೆಸರನ್ನು ಸೂಚಿಸಬಲ್ಲೆ. ನಾವು ತುಳುವರು ಕನ್ನಡ-ತುಳು ಎರಡನ್ನೂ ಸಮಾನವಾಗಿ ಸ್ವೀಕರಿಸಿದವರು. ಸುಮ್ಮನೆ ಎನೋ ಹೇಳಲು ಹೋಗಿ ತುಳು-ಕನ್ನಡದ ನಡುವೆ ಕಂದಕ ತೋಡುವ ಕೆಲಸ ಮಾಡುತ್ತಾ ಇದ್ದೀರಿ..
ಈಗ ಊರಿನ ಹೆಸರಿನ ಬಗ್ಗೆ ಬರೋಣ.. ನಾನು ವಿ.ಕ.ದ ಲೇಖನ ನೋಡಿಲ್ಲ/ಓದಿಲ್ಲ.. ಆದರೆ ಈ ಬಗ್ಗೆ ನಾನೇ ಅನೇಕ ಬಾರಿ ಲೇಖನ ಬರೆಯಬೇಕೆಂದಿದ್ದೆ..ಕಾಲ ಕೂಡಿ ಬಂದಿರಲಿಲ್ಲ. ಈಗ ನೀವೇ ಹೇಳಿದ ಹಾಗೆ ಮೈಸೂರು - ಮಹಿಷಾಪುರ, ಮಂಡ್ಯ-ಮಾಂಡವ್ಯನಗರ ಆಗಬಾರದು ಅದು ಸಂಸ್ಕೃತಗಾರರ ಜಾಣತನ, ಸಂಚು. ಅದೇ ಅಭಿಪ್ರಾಯ ಆಶಯ ನಮ್ಮದೂ (ತುಳುವರದ್ದು). ಉದಾಹರಣೆಗೆ ಪೂಪಾಡಿಕಲ್ಲ್ - ಹೂಹಾಕುವಕಲ್ಲು, ತಾರೆತೋಟ-ತೆಂಗಿನತೋಟ,coconut garden, ರಥಬೀದಿ (ಕನ್ನಡ) - ಕಾರ್ ಸ್ಟ್ರೀಟ್, ಪೊಸಕಂಡ(ಕೊಂಡ ಅಲ್ಲ)-ಹೊಸಗದ್ದೆ.. ಕಟ್ಟೆ - ಕಟ್ಟಾ, ಗುಡ್ಡೆ - ಗುಡ್ಡಾ (ಮಂಗಳೂರು - ಮ್ಯಾಂಗಲೂರ್ ಆದಹಾಗೆ) ಇತ್ಯಾದಿ ಪ್ರಯೋಗಗಳು ಇವೆ. ಇವುಗಳನ್ನು ಮೂಲರೂಪದಲ್ಲಿ ಬಳಸಿದರೆ ಚೆನ್ನ ಎಂದು ನಮ್ಮ ಆಶಯ. ಅದುಬಿಟ್ಟು ಸಂಚು ಎಂದರೆ ಅದರ ಅರ್ಥ ಬೇರೆಯೇ ಆಗುತ್ತದೆ.

Anonymous ಅಂತಾರೆ...

ಮಾಯ್ಸ ಅವರೇ,
ಮತ್ತೊಂದು ವಿಷಯ ಒಂದು ಭಾಷೆಯಲ್ಲಿರುವ ಪದ ಇನ್ನೊಂದು ಭಾಷೆಯಲ್ಲಿ ಇರಬಾರದು ಅಂತೇನಿಲ್ಲ. ಅನೇಕ ಕನ್ನಡಪದಗಳೂ ತಮಿಳು ತೆಲುಗಿನಲ್ಲಿವೆ. ಕೆಲವುಸಲ ಪದ ಒಂದೇ ಆಗಿದ್ದರೂ ಅರ್ಥ ಬೇರೆ ಇರುತ್ತದೆ. ತುಳುನಾಡಿನಲ್ಲಿ ’ಪ್ರಬಲ’ರು ಇಲ್ಲದಿದ್ದದ್ದು ಹಾಗೂ ಕನ್ನಡ ಅರಸರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಕನ್ನಡದ ಬಳಕೆ ಹೆಚ್ಚಾಗಿದ್ದಿರಬಹುದು ಅಷ್ಟೆ.

Anonymous ಅಂತಾರೆ...

@ಹರಜೋಗಿ..

ಏನ್ ತಮಾಶೆನ?

"ಇವುಗಳನ್ನು ಮೂಲರೂಪದಲ್ಲಿ ಬಳಸಿದರೆ ಚೆನ್ನ ಎಂದು ನಮ್ಮ ಆಶಯ."
ನನ್ನ ಕಮೆಂಟನ್ನು ಮೊದಲು ಸರಿಯಾಗಿ ಓದಿರಿ. ಮೂಲ ರೂಪ ಯಾವುದು ಎಂದು ಬರಿ ಹೇಳಿಕೆಗಳಿಂದ ತೀರ್ಮಾನವಾಗದು. ಅದಕ್ಕೆ ಮಂಗಳೂರು/ಕುಡ್ಲ/ಕೊಡಿಯಾಲ ಮಾತು ಹೇಳಿರೋದು. ಮಂಗಳೂರು ಎಂಬುದು ಶಾಸನದಲ್ಲೇ ಉಲ್ಲೇಖವಾಗಿದ್ದರೂ ಇನ್ನೂ ತುಳು ಮಂದಿ ಕುಡ್ಲ ಎಂಬು ಬಳಸ್ತಿಲ್ವ? ಈ ಮೂಲ ರೂಪ ಕುಡ್ಲ ಎಂದು ಮಾತಿನಲ್ಲಿ ಹೇಳಿದ್ರೆ ಆಗಲ್ಲ. ಯಾವುದು ಮೂಲ ರೂಪ? ಅದು ಹೇಗೆ ನಿಶ್ಚಿತವಾಗಿ ಅದೇ ಮೂಲ ರೂಪ ಎಂದು ಸಾಬೀತಾಯಿತು? ಅದನ್ನು ಮೊದಲು ತೋರಿಸಬೇಕು.. ಸುಮ್ನೆ ಬಾಯಲ್ಲಿ ಹೇಳಿದ್ರೆ ಆಗಲ್ಲ.

ಆ ಬರಹಕ್ಕೆ ಬೆಸೆತ ಏನ್ಗುರು ಕೊಟ್ಟಿದ್ದಾರೆ. ಆ ಎಡವಟ್ಟಿನ ಬರಹ ಓದಿ ಪ್ರತಿಕ್ರಿಯಸಬೇಕಿತ್ತು.. ಮೊದಲು ಅದನ್ನೋದಿ..

ಅರ್ಹನಲ್ಲ ಎಂದು ವಿಷಯ ಹೇಳದೇ ತಿಪ್ಪೇ ಸಾರಿಸಿದ್ದೇಕೆ? ತುಳು-ಕನ್ನಡದ ನಡುವಣ ಕಂದಕ ನನ್ನ ಕಮೆಂಟಿಗಿಂತ ತಲೆಬುಡ ಸರಿಯಿಲ್ಲದ ಆ ಬರಹದಲ್ಲಿದೆ.. ಮೊದಲು ಅದನ್ನು ಓದಿ..

ನಾನು ಬರೆದ ಸಂಗತಿಗಳಿಗೆ ತಕ್ಕ ತರ್ಕಗಳಿವೆ. ಕೇವಲ ತುಳುವರು ಮಾತ್ರ ಅಲ್ಲಿಯ ಮೂಲ ನಿವಾಸಿಗಳು ಎಂಬುದಕ್ಕೆ ಏನು ಪುರಾವೆ? ಸುಮ್ಮನೆ ಬಾಯಿ ಮಾತಲ್ಲಿ ಹುಟ್ಟಿಸಿದ ಕತೆಗಳನ್ನು ಬಿಟ್ಟು.

ಆ ಮೂಲ ಬರಹವನ್ನು ಓದದೇ ಕಮೆಂಟು ಬರೆದ ನಿಮ್ಮ ಜಾಣತನ, ಪ್ರಜ್ಞೆ ಹಾಸ್ಯಾಸ್ಪದ.


"ತುಳುನಾಡಿನಲ್ಲಿ ’ಪ್ರಬಲ’ರು ಇಲ್ಲದಿದ್ದದ್ದು ಹಾಗೂ ಕನ್ನಡ ಅರಸರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಕನ್ನಡದ ಬಳಕೆ ಹೆಚ್ಚಾಗಿದ್ದಿರಬಹುದು ಅಷ್ಟೆ."
ಇದೇನು ಅಷ್ಟೇ ಅನ್ನುವಷ್ಟು ಕೇವಲ ವಿಷಯವೇ. ಕದಂಬರಿಂದ ಹಿಡಿದು-ಟಿಪ್ಪುವಿನ ವರೆಗೂ ಸತತ ಕನ್ನಡದ ಅರಸರು ಆಳಿದ್ದಾರಲ್ಲ.

"ಮತ್ತೊಂದು ವಿಷಯ ಒಂದು ಭಾಷೆಯಲ್ಲಿರುವ ಪದ ಇನ್ನೊಂದು ಭಾಷೆಯಲ್ಲಿ ಇರಬಾರದು ಅಂತೇನಿಲ್ಲ. "
ಭಾಷಾವಿಜ್ಞಾನದ ಬಗ್ಗೆ ತಿಳಿದು ಮಾತಾಡಬೇಕು. ಇರಬಹುದು. ಆದರೆ ಕನ್ನಡಕ್ಕೆ ಯಾವ ಪದವೂ ತುಳುವಿನಿಂದ ಬಂದಿಲ್ಲ. ಕಟ್ಟೆ, ಕೊಂಡ, ಮುಂತಾದವು ಕನ್ನಡದ ಹೆಸರುಗಳೇ. ಇನ್ನು ಕಟ್ಟೆ ಎಂದು ಊರು ಹೆಸರು ಇಡೋದು ಕನ್ನಡಿಗದ್ದೇ.

Anonymous ಅಂತಾರೆ...

ಅಣ್ಣಾ,
ನಾನು ನಿಮ್ಮಷ್ಟು ಓದಿಲ್ಲ, ಆದರೂ... ಯಾರೋ ಬರೆದ ಲೆಖನಕ್ಕೆ ಎಲ್ಲ ತುಳು ಭಾಷೆ ಮಾತಾಡೊ ಕನ್ನಡಿಗರ ಮನಸ್ಸು ನೋಯಿಸಬಾರದಲ್ವ?
ನೀವು ಒಳ್ಳೆ ಮನಸ್ಸಿನಿ೦ದ ಹುಡುಕಿದರೆ, ತುಳು ಭಾಷೆಯನ್ನು (ಮನೆಯಲ್ಲಿ) ಮಾತಾಡೊ ಕೆಚ್ಚೆದೆಯ ಕನ್ನಡಿಗರು ಸಿಗುತ್ತಾರೆ! ನೀವು ಆ ಭಾಷೆಯನ್ನು ಅಥವ ಮಾತಾನಾಡುವವರನ್ನು ದೂರ ಇರಿಸಿ ಕರ್ನಾಟಕ/ಕನ್ನಡದ ಎಳ್ಗೆಗೆ ಹೋರಾಡಲು ಸಾಧ್ಯವಿಲ್ಲ!

Anonymous ಅಂತಾರೆ...

ಮಾಯ್ಸ ಅವರೇ,
ಕುಡ್ಲ ಎಂಬುದು ಮಂಗಳಾಪುರಕ್ಕಿಂತಲೂ ಹಿಂದಿನ ಹೆಸರು. ಮಂಗಳಾದೇವಿಯ ದೇವಸ್ಥಾನ ಇದ್ದುದರಿಂದ ಮಂಗಳಾಪುರ ಎಂಬುದು ಅನ್ವರ್ಥವಾಗಿ ಬಂದಿರೋದು. ಕನ್ನಡದ ಆಳ್ವಿಕೆಗೆ ಒಳಪಟ್ಟಿದ್ದರಿಂದ ಶಾಸನಗಳು ಸಹಜವಾಗಿಯೇ ಕನ್ನಡದಲ್ಲಿರುವುದರಿಂದ ಮಂಗಳೂರು ಅಂತ ಬರೆದಿರುತ್ತಾರೆ. ನಾಥಪಂಥದ ಬಗೆಗಿನ ಇತಿಹಾಸದಲ್ಲಿ ಮಂಗಳೂರನ್ನು ಕುಡ್ಲ ಎಂದೇ ಪ್ರಸ್ತಾಪಿಸಲ್ಪಟ್ಟಿದೆ. ನಾಥಪಂಥದ ಸಾಧುಗಳು ಮಂಗಳಾದೇವಿಯನ್ನು ಪ್ರತಿಷ್ಟಾಪಿಸಿದ್ದು.. ಆ ಬಳಿಕ ಅದು ಮಂಗಳೂರು ಎಂದು ಹೆಸರುವಾಸಿಯಾದದ್ದು.
ನೀವೆಷ್ಟು ನಾನು ಬರೆದುದನ್ನು ಸರಿಯಾಗಿ ಓದಿದ್ದೀರಿ..? ಕೊಂಡ ಅಲ್ಲ ಕಂಡ ಅಂತ (ಸಾರಿ)ಬರೆದಿದ್ದೇನೆ; ನಿಮಗೆ ತಿಳೀಲಿಲ್ಲ. ನಾನು ’ಹರ’ಜೋಗಿ ಅಲ್ಲ ಹರಿಜೋಗಿ.. ಭಾಷಾ ವಿಜ್ಝ್ನಾನದ ಬಗ್ಗೆ ತಿಳಿದವರು ಯಾರೂ ಒಂದು ಭಾಷೆಗೆ ಬೇರೆ ಭಾಷೆಯಿಂದ ಪದ ಬಂದಿಲ್ಲ ಅಂತ ಹೇಳೊದಿಲ್ಲ.. ಬಂದೇ ಬಂದಿರುತ್ತದೆ..ಹಾಗಾದರೇನೆ ಒಂದು ಭಾಷೆ ಬೆಳೆಯೋದು.. ತುಳುವಿನಿಂದ ಬಂದಿಲ್ಲ ಅಂತ ನೀವು ಹೇಳಿದರೆ ನಿಮಗೆ ತಿಳಿದಿರೋದೆ ’ಕಮ್ಮಿ’..
’ಕನ್ನಡ ಆಳ್ವಿಕೆಯಿಂದ..ಅಷ್ಟೆ.." ಅಂತ ಹೇಳಿರೋದು ಸತ್ಯ. ಈಗ ನಮ್ಮ ರಾಷ್ಟ್ರ ಭಾಷೆ ಹಿಂದಿ (ನಾವು ಹಾಗೇ ತಿಳಿದುಕೊಂಡಿದ್ದೇವೆ) ನೋಡಿ. ಕೇಂದ್ರ ಸರಕಾರದ ಇಲಾಖೆಗೆ ಸಂಬಂಧ ಪಟ್ಟ ಯಾವುದೇ ಫಲಕಗಳನ್ನು ಹಿಂದಿಯಲ್ಲೂ (ಕರ್ನಾಟಕದಲ್ಲೂ) ಹಾಕಿರ್ತಾರೆ. ಅಂದ ಮಾತ್ರಕ್ಕೆ ಅದು ಹಿಂದಿ ಪ್ರದೇಶ ಆಗಿರಬೇಕೆಂದೇನೂ ಇಲ್ಲ. ಹಿಂದಿ ಅಫಿಶಿಯಲ್ ಆಗಿ ಬಳಕೆಯಲ್ಲಿ ಇರಬಹದು ’ಅಷ್ಟೆ!’
ಮತ್ತೂ ಒಂದು ವಿಷಯ.. ಕೆಲವು ಪ್ರಸಿದ್ಧ ಊರುಗಳಿಗೆ, ಹೆಸರುಗಳಿಗೆ ಒಂದೊಂದು ಭಾಷೆಯಲ್ಲಿ ಒಂದೊಂದು ರೀತಿಯ ಹೆಸರುಗಳನ್ನು ಬಳಸುತ್ತಾರೆ.. ಕೆಲವು ಅಪಭ್ರಂಶಗಳೂ ಇರುತ್ತವೆ. ಉದಾಹರಣೆಗೆ ಡೆಲ್ಲಿ, ದಿಲ್ಲಿ, ದೆಹಲಿ, ಮುಂಬ್ಯೈ, ಬಾಂಬೆ, ಬೊಂಬಾಯಿ, ಅಂಗ್ರೀಜಿ, ಆಂಗ್ಲರು, ಇಂಡಿ (ಭಾರತದ ಫ್ರೆಂಚ್ ಹೆಸರು) ಇತ್ಯಾದಿ; ಇದು ತಪ್ಪೆಂದು ಹೇಳುವುದಿಲ್ಲ.. ಬದಲಾಗಿ ಅಕ್ಷ್ರರ, ಪದಗಳನ್ನು ಬೇರೆ ಭಾಷೆಗೆ ತರ್ಜುಮೆಗೊಳಿಸಿ ಬೇರೆಹೆಸರಿನಿಂದ ಕರೆಯುವುದು ’ಸೂಕ್ತ’ ಅಲ್ಲ. ಹಾಂ ನೆನೆಪಿಗೆ ಬಂತು.. ಬೆಂಗಳೂರುನಲ್ಲೇ ಇದಕ್ಕೆ ಒಂದು ಉದಾಹರಣೆಯಿದೆಯಲ್ಲಾ.. ಬಸವನಗುಡಿ = ಬುಲ್ ಟೆಂಪಲ್.. ಇಂತಹದು ಬೆಂಗಳೂರಿನಲ್ಲೇ ತುಂಬಾ ಇದೆ.. ಅದು ಕನ್ನಡ-ಇಂಗ್ಳಿಷ್..ವ್ಯತ್ಯಾಸ ಆಷ್ಟೆ.. ಇದು ಒಂದಕ್ಕೆ ನೀವು ಸೃಷ್ಟೀಕರಣ ಕೊಟ್ಟರೆ ಸಾಕು
ಹರಿಜೋಗಿ
ಪಾಠಶಾಲೆ, ಗುರುಮಠದಲ್ಲಿ ತುಳುವಿನ ಲಿಪಿಯ ಬಳಕೆ

Anonymous ಅಂತಾರೆ...

ಪುರಾವೆ ಇಲ್ಲದ ಬರಿ ಹೇಳಿಕೆಗಳು!

ಇನ್ನು ರಾಷ್ಟ್ರಭಾಷೆ ಎಂಬ ಭ್ರಾಂತಿಯಂತೆ ತುಳುವಿನ ಸಂಗತಿಗಳ ಕುರಿತೂ ಹಲವು ಭ್ರಾಂತಿಗಳಿವೆ. ಎರಡನ್ನೂ ಖಂಡಿಸಬೇಕು.

ಪಾಠಶಾಲೆ ಮತ್ತು ಗುರುಮಠ ಇವೆರೂ ತುಳು ಶಬ್ದಗಳಲ್ಲವಲ್ಲ. ಲಿಪಿಯ ಮೇಲೆ ಭಾಷೆಯಲ್ಲ. ತುಳುವನ್ನು ಕನ್ನಡಲಿಪಿಯಲ್ಲಿ ಬರೆದರೂ ಅದು ತುಳುಭಾಷೆಯೆ. ಇನ್ನು ತುಳುಲಿಪಿಯ ಬಗ್ಗೆ ಬರಿಯ ಊಹಾಪೋಹಗಳೇ ಹೊರತು ನಿಕ್ಕುವ ಸಂಗತಿಗಳಿಲ್ಲ. ಕನ್ನಡಲಿಪಿ ಕದಂಬರಕಾಲದಿಂದ ಬಂದಿದೆ. ತುಳುಲಿಪಿ ಮತ್ತು ಭಾಷೆ ಯಾರ ಕಾಲದಲ್ಲಿ ಕಲಿಸಲಾಗಿತ್ತು, ರಚಿಸಲಾಗಿತ್ತು?

ಹರಜೋಗಿ ಮುಂತಾದ ಅಚ್ಚತಪ್ಪುಗಳಿಗೆ ಮನ್ನಿಪು. ಹಾಗೆ ’ಕೊಂಡ’ ಎಂದು ಚರ್ಚೆಯ ಮೂಲ ಬಿಂದುವಾದ ಬರಹದಲ್ಲಿ ಬಂದಿದೆ.

"ನೀವು ಆ ಭಾಷೆಯನ್ನು ಅಥವ ಮಾತಾನಾಡುವವರನ್ನು ದೂರ ಇರಿಸಿ ಕರ್ನಾಟಕ/ಕನ್ನಡದ ಎಳ್ಗೆಗೆ ಹೋರಾಡಲು ಸಾಧ್ಯವಿಲ್ಲ!"
ವಿಷಯ ಅದಲ್ಲ. ಸುಳ್ಳು ಹೇಳಿಕೆಗಳಿಂದ ಸಾಮರಸ್ಯ ಕದಡುವ ಬರಹ ಅದು. ಅದನ್ನು ಖಂಡಿಸಿದ್ದೀವಿ. ಅದೂ ಅಲ್ಲದೇ ಆ ಬರಹ ತುಳು ಭಾಷಿಕರು ಕನ್ನಡಿಗ ಮೇಲೆ ಆಪಾದನೆ ಮಾಡುವ ಹಾಗೆ ಬರೆದಿರುವ ಬರಹ. ಕೆಲ ತುಳು ಮಂದಿಯಿಂದ ಹಲ ತುಳುವರು ಇಕ್ಕಟಿಗೆ ಸಿಲುಕುವ ಸನ್ನಿವೇಶ!

Anonymous ಅಂತಾರೆ...

ಮಾಯ್ಸ ಅವರೇ,
ನಾವು ಏನು ಹೇಳಿದರೂ ಪುರಾವೆ ಇಲ್ಲದ ಹೇಳಿಕೆಗಳು.. ನಿಮ್ಮ ಬರಹವನ್ನು ನೀವೆ ಒಮ್ಮೆ ಓದಿ.. ಎಷ್ಟು ’ಇರಬಹುದು,ಅಂತೆ,ಕಂತೆ’ಗಳಿವೆ ಎಂಬುದನ್ನು. ಭಾಷೆಯನ್ನು ಆಡುವವರ ಜನರ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸುವುದಾದರಿ ಬೆಂಗಳೂರಿನಲ್ಲಿ ಗಣನೀಯವಾಗಿ ತಮಿಳು, ತೆಲುಗು ಭಾಷಿಕರು ಎಂದಿನಿಂದಲೂ ಇದ್ದರು ಹಾಗೆಂದು ಬೆಂಗಳೂರನ್ನು ಕನ್ನಡದ ನೆಲವಲ್ಲವೆಂದರೆ ನೀವು ಒಪ್ಪುತ್ತೀರಾ? ನಿಮಗೆ ಪಂಚದ್ರಾವಿಡ ಭಾಷೆಯ ತರ್ಕ ಇತ್ತೀಚಿನದೆಂದು ಅನಿಸುತ್ತದೆ.. ಹಾಗೆಯೇ ತುಳುನಾಡು (ಹೌದು) ಪ್ರದೇಶದಲ್ಲೂ ಪರಭಾಷಿಕರು ಬಂದಿದ್ದು ಇತ್ತೀಚೆಗೆಯೇ ಎಂದು ನಾನು ಹೇಳುತ್ತೇನೆ. ಯಾಕೆಂದರೆ ಈ ’ಇತ್ತೀಚೆಗೆ’,’ಇರಬಹುದು’ ಇತ್ಯಾದಿ ಪದಗಳನ್ನು ಅವರವರ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳಲು ಬಹಳ ಸುಲಭ.

ನಾನು ಗುರುಮಠ, ಲಿಪಿ ಇತ್ಯಾದಿ (ಸಹಿಯ ಬಳಿಕ) ಬರೆದದ್ದು copy & pasteನ ಅವಾಂತರ.. ಅದು ಈ ಪ್ರತಿಕ್ರಿಯೆಗೆ ಸಂಬಂಧಿಸಿದಲ್ಲ.. ಕ್ಷಮಿಸಿ.

ಈ ಊರಿನ ಹೆಸರಿನ ಆವಾಂತರ ಆಗುವುದು ನಮ್ಮ ಭಾಷೆಯ ಬಗ್ಗೆ ಕೀಳರಿಮೆ ಹಾಗೂ ಬೇರೆ ಭಾಷೆಯ ಬಗ್ಗೆ ಮೇಲರಿಮೆಯಿಂದ. ತುಳುಭಾಷಿಕ ಕೆಲ ವಿಪರೀತ ಬುದ್ಧಿವಂತರೇ ಇಂತಹ ತರ್ಜುಮೆ ಮಾಡಿರೋದು.. ಕನ್ನಡದಲ್ಲಿ ಭಾಷಣ ಮಾಡುವಾಗ, ಲೇಖನ ಬರೆಯುವಾಗ ಇಂತಹ ಪ್ರಯೋಗಗಳು ಹುಟ್ಟಿಕೊಳ್ಳುವುದು! ಹಾಗೆಯೇ ಕನ್ನಡದ ಹೆಸರುಗಳನ್ನು ಕನ್ನಡದ ಇಂಗ್ಲೀಷ್,ಸಂಸ್ಕೃತ ಪ್ರೇಮಿಗಳು ಬದಲಾಯಿಸಿರೋದು.. ಇದರಲ್ಲಿ ಇನ್ನೊಂದು ಭಾಷಿಕರ ಕೈವಾಡ ಇದೆ ಎನ್ನುವುದು ಸುಳ್ಳು. ಮೂಲ ಲೇಖನದಲ್ಲಿ ಈ ಮಾತು ಸ್ಪಷ್ಟವಾಗಿ ವ್ಯಕ್ತವಾಗಿದೆ. ಅದರಲ್ಲೊಂದು ಸಾಲು ಇದೆ.. ’ತುಳು ಭಾಷೆಯ ಸಂಸ್ಕೃತಿಯನ್ನು, ಅನನ್ಯತೆಯನ್ನು ಉಳಿಸಿಕೊಳ್ಳುತ್ತಾ, ಕನ್ನಡದ ಕಾಯಕ ಮಾಡೋಣ’

ಅದಕ್ಕೇ ನಾನು ನಿಮ್ಮ ಸೃಷ್ಟೀಕರಣ ಕೇಳಿದ್ದು ಬಸವನಗುಡಿ-ಬುಲ್ ಟೆಂಪಲ್ ಬಗ್ಗೆ. ನೀವು ಅದನ್ನು ಯಾವರೀತಿ ಸ್ವೀಕರಿಸುತ್ತೀರಿ ಎಂದು. ನಿಮಗೆ ಬುಲ್ ಟೆಂಪಲ್ ಒಪ್ಪಿಗೆಯಾದರೆ ಮತ್ತೆ ಮಾತಿಲ್ಲ.. ಇಲ್ಲದಿದ್ದರೆ ವಿ.ಕ.ದ ಲೇಖನದ ಆಶಯವನ್ನು ನೀವು ಒಪ್ಪಿಕೊಂಡಂತೆಯೇ ಅಲ್ಲವೇ..?

ಹರಿಜೋಗಿ

Anonymous ಅಂತಾರೆ...

@ಹರಿಜೋಗಿ+
ಏನಾರ ಹೇಳಿಕೊಳ್ರಿ... ಯಥಾಪ್ರಕಾರ ಅದದೇ!

@ಆಸಕ್ತರು.. ತಪ್ಪು ತಿಳಿವಳಿಕೆಯನ್ನು ತಿದ್ದುಕೊಳ್ಳಲು ಮಾಹಿತಿ ಇಲ್ಲಿ.

೧)ಪಂಚದ್ರಾವಿಡ ಅನ್ನೋದು ಕಲ್ಪಿತ ತಪ್ಪು ವಿಂಗಡಣೆ. ಪ್ರಸ್ತುತ ದ್ರಾವಿಡ ನುಡಿಗಳು ೨೩.
http://ccat.sas.upenn.edu/~haroldfs/sars238/encybrit.html
ಇದು Encyclopædia Britannica ಹೇಳೋದು.

ಇನ್ನು ದ್ರಾವಿಡ ಪದಗಳು ಉತ್ಪತ್ತಿ ಬಗ್ಗೆ
http://dsal.uchicago.edu/dictionaries/burrow/

ನುಡಿವಾರು ಜನಸಂಖ್ಯೆಯಲ್ಲಿ( ಹಳೆಯ Census)
1)Telugu, 52,986,000;
2)Tamil, 44,400,000;
3)Kannada (Kannada), also called Kanarese, 27,900,000; 4)Malayalam (Malayalam), 27,500,000;
5)Gondi, 2,460,100;
6)Tulu (Tulu), 1,427,000;
7)Kurukh (Kurukh), 1,358,000
.
.
.
ನೋಡಿ, ಗೊಂಡಿ ಭಾಷಿಕರು ತುಳುವರಿಗಿಂತ ಹೆಚ್ಚುಕಮ್ಮಿ ಇಮ್ಮಡಿ. ತುಳುವಿಗೆ ಆರನೇ ಸ್ತಾನ. ಈಗ ಪಂಚದ್ರಾವಿಡ ತಿಯರಿ ಲಾಗ ಹಾಕಿತಲ್ಲ.! ಕುರುಖ್ ಮಂದಿ ತುಳುವರಷ್ಟೇ ಇದ್ದಾರೆ ಹೆಚ್ಚು ಕಮ್ಮಿ. ಇನ್ನೂ ಊಟಿಯಲ್ಲಿರುವ ಬಡಗ, ತೋದ, ಇರುಳ ಇವೆಲ್ಲವೂ ದ್ರಾವಿಡನುಡಿಗಳು.

ಅದರಲ್ಲಿ ಈ ಸಾಲುಗಳನ್ನು ಗಮನಿಸಿರಿ
Kannada has an orthography of its own and an important ancient and modern literature.

Tulu (Tulu), a South Dravidian language having no developed written literature.
ತುಳು ಭಾಷೆಗೆ ಲಿಖಿತ ಸಾಹಿತ್ಯವು ಗಣನೀಯವಾಗಿಲ್ಲ, ಲೆಕ್ಕಿಸ ತಕ್ಕುದ್ದಲ್ಲ.(ಇದರ ಮೇಲೆ ನಿಮ್ಮ ಅಭಿಪ್ರಾಯಗಳನ್ನು ನೀವೇ ಮಾಡಿಕೊಳ್ಳಿರಿ)

2)
The Kannada–Telugu script is based on Calukya (6th century) inscriptions;
the Grantha script, used in Tamil Nadu for Sanskrit since the 6th century, was accommodated for Malayalam and Tulu.

’ತುಳು ಲಿಪಿ’ ಎಂಬು ಕೆಲವರು ಕರೆಯುತ್ತಿರುವುದು, ತಮಿಳರು ಸಂಸ್ಕೃತವನ್ನು ಬರೆಯಲು ಬಳಸಿದರೆ ಗ್ರಂಥ ಲಿಪಿ. ಅದೇ ಲಿಪಿ ಇಂದು ಮಳಯಾಳಂ ಬರೆಯಲು ಬಳಕೆಯಾಗುತ್ತಿದೆ. ಮಳಯಾಳಕ್ಕೆ ಸಮೀಪವಿರುವ ಕೆಲಕಡೆ ತುಳುವನ್ನು ಗ್ರಂಥಲಿಪಿಯಲ್ಲಿ ಬರೆದಿದ್ದರೆ ಅದು ದೊಡ್ಡ ಅದ್ಭುತವಲ್ಲ.

೩)ಇನ್ನು ಬಸವನಗುಡಿ vs Bull Temple. ಇದು common sense. ಬಸವನ ಪೂಜೆ ಮಾಡುವವರು ಯಾರು? ಕನ್ನಡಿಗರೋ, ಇಂಗ್ಲೀಶರೋ? ಬಸವನಗುಡಿಯಲ್ಲಿರುವ ಬರಹಗಳು ಯಾವ ಭಾಷೆಯಲ್ಲಿದೆ? ಬಸವನಗುಡಿಯ ಸುತ್ತಲು ಇರುವ ಮಂದಿ ಯಾವ ಭಾಷಿಕರು? ಬಸವನಗುಡಿಯಲ್ಲಿ ಇರುವುದು ದೊಡ್ಡ ಬಸವಣ್ಣನ ಕಲ್ಲಿನಬೊಂಬೆ, ಕನ್ನಡ ನೆಲದ ಎತ್ತಿನ ತಳಿಯೋ ಇಲ್ಲವೇ ಇಂಗ್ಲೇಂಡಿನ Bullಲೋ?
ಇದನ್ನು ವಿವೇಚಿಸಿ ಪ್ರಾಜ್ಞರೇ ತೀರ್ಮಾನ ತೆಗೆದುಕೊಳ್ಳ ತಕ್ಕದ್ದು.

ಮೂಲ ಬರಹದಲ್ಲಿ ಖಂಡನೀಯ ವಿಷಯಗಳಿಗೆ ಕೊಟ್ಟಿರುವ ಕಾರಣಗಳು ಸಾಕಾವಿವೆ. ಹಾಗೂ "ಕೊನೆಯದಾಗಿ" ಎಂದು ಬರೆದಿರುವುದು ಇನ್ನೂ ಪೂರ್ತಿ ತೀರ್ಮಾನಗೊಳ್ಳದ ಸಂಗತಿಗಳು ಅದಕ್ಕೆ ’ಅಂತೆ’ಯ ಪ್ರಯೋಗ.

ಇತಿಶ್ರೀ!

Anonymous ಅಂತಾರೆ...

ಆ ಬರಹದಲ್ಲಿರುವ ಮಿಕ್ಕ ಎಡವಟ್ಟುಗಳ ಪಟ್ಟಿ

೧)"ಬಹುಷಃ" ಅಲ್ಲ "ಬಹುಶಃ"
೨)’ತುಳು ಸಾವಿರಾರು ವರ್ಷಗಳ ಇತಿಹಾಸವುಳ್ಳ ಮತ್ತು ಕನ್ನಡದಷ್ಟೇ ಪ್ರಾಚೀನವಾದ, ಕನ್ನಡದಷ್ಟೇ ಶ್ರೀಮಂತವಾದ ಭಾಷೆ.’
ಹೌದಾ? ಹೇಗೆ? ಕನ್ನಡದಷ್ಟೇ ಶ್ರೀಮಂತ ಅಂದರೆ ಹೇಗೆ? ಇತಿಹಾಸವೆಷ್ಟೆಷ್ಟು?ಸಾಹಿತ್ಯಿಕ ಪ್ರಾಚೀನತೆ ಎಷ್ಟೆಷ್ಟು?
೩)"ಕನ್ನಡದಂತೆ ತುಳು ಕೂಡ ಪ್ರಮುಖ ಪಂಚದ್ರಾವಿಡ ಭಾಷೆಗಳಲ್ಲಿ ಒಂದು"
ಜನಸಂಖ್ಯೆಯಲ್ಲಿ ಹೆಚ್ಚಿಗೆ ಇರುವ ಗೊಂಡಿ ಎಂಬ ದ್ರಾವಿಡ ನುಡಿಗಿಂತ ಪ್ರಮುಖವೇ? ಕುರುಖ್, ಕೊಡವ ಇವರ ಕತೆ ಏನು?
ಯಾರು ದ್ರಾವಿಡ ಭಾಷೆಗಳಲ್ಲು ಐದೇ ಐದು ಎಂದು ತೀರ್ಮಾನಿಸಿದ್ದು ಹೇಗೆ?
೪)"ತುಳುನಾಡಿನ ತುಳುಭಾಷೆಯಲ್ಲಿ ಹುಟ್ಟಿದ ಹೆಸರುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವುದೇಕೆ?"
ಅ) ’ತುಳುನಾಡು’ ಎಲ್ಲಿ ಹೇಗೆ ಬಂತು ಈ ಗುರುತು? ಬ್ರಿಟೀಶರೂ ಕೂಡ ಅದನ್ನು ಕನ್ನಡ ಜಿಲ್ಲೆ ಎಂದೇ ಕರೆದರಲ್ಲ. ಮತ್ತೆ ಪುನಃ ಪ್ರಶ್ನೆ ಅಲ್ಲಿಯ ಮೂಲ ನಿವಾಸಿಗಳು ಬರೀ ತುಳುವರು ಹೇಗೆ? ಹವ್ಯಕರು, ಕುಂದಾಪುರದವರು, ಕೋಟದವರು, ಮುಂದಾವರು ಇವರೆಲ್ಲ ಕನ್ನಡ ತಾನೆ ಮಾತಾಡೋದು. ಇವರು ತುಳುವರಲ್ಲವಲ್ಲ. ಕೊಂಕಣಿಗಳು, ಬ್ಯಾರಿ ಇವರ ಕತೆ?
ಆ) ತುಳುಭಾಷೆಯಲ್ಲೇ ಹುಟ್ಟಿದ ಹೆಸರುಗಳು ಅವು ಹೇಗೆ? ಕಾಯೆರ್‍ ಮತ್ತು ಕಾಸರ. ಕಾಯೆರ್‍ ಮಳಯಾಳಂ ಅಲ್ವ? ನೇಯರ್‍/ನೇಸರದ ಹಾಗೆ ಅಲ್ವ

೫)"ರಕ್ಷಣೆ ನಾವೂ ಅರ್ಧಕೋಟಿ ತುಳವರೇ ಮಾಡಬೇಕಾಗಿದೆ"
ತುಳು ಭಾಷಿಕರು ಅರ್ಧ ಕೋಟಿ ಇದ್ದಾರ?
2001ರ Census 17,22,768(ಹತ್ತಿರ ಹದಿನೇಳು ಲಕ್ಷ)[ತಪ್ಪಿದ್ದರೆ ತಿಳಿಸಿರಿ] ಎಂದು ಹೇಳುವುದು. ಅರ್ಧ ಕೋಟಿ ಎಂದರೆ 50 ಲಕ್ಷ. 2001 ರಿಂದ 2009ರಷ್ಟರಲ್ಲಿ ತುಳುವರಲ್ಲಿ ~120% ಜನಸಂಖ್ಯೆಯ ವೃದ್ಧಿ? ಕೊಂಕಣಿಗಳೇ ೨೫ಲಕ್ಷ ಮಂದಿ ಅಂತ Census ಹೇಳತ್ತಲ್ಲ.!

ಏನೋಪ್ಪ.. ನಾನು ಸುಳ್ಳು ಹೇಳಿದ್ದರೆ ಮನ್ನಿಸಿ! ಇಲ್ಲಿ ಯಾರ ಮನನೋಯಿಸುವ ಉದ್ದೇಶವಿಲ್ಲ. ಆದರೆ ಸುಳ್ಳು ಹೇಗೆ ಸುಂದರವಾಕ್ಯದಲ್ಲಿ ಬರೆದರೂ ಸುಳ್ಳೇ!

Anonymous ಅಂತಾರೆ...

ಮಾಯ್ಸ ಅವರೇ,
ಅಂಕಿ ಅಂಶ ಕೊಟ್ಟದ್ದಕ್ಕೆ ಧನ್ಯವಾದಗಳು.
ಪಂಚದ್ರಾವಿಡ ಎಂದರೆ ದ್ರಾವಿಡ ಭಾಷೆಗಳಲ್ಲಿನ ಪ್ರಮುಖ ಐದು ಭಾಷೆ ಎಂಬುದು. ಗೊಂಡಿ ಭಾಷೆಯ ಬಗ್ಗೆ ನನಗೆ ಗೊತ್ತಿಲ್ಲ. ಆದರೂ ಅದು ಸಾಮಾನ್ಯವಾಗಿ ಎಲ್ಲೂ ಪ್ರಸ್ತಾಪಿಸಲ್ಪಟ್ಟಿಲ್ಲ. ಹಾಗಾಗಿ ಅದು ಪ್ರಮುಖ ಭಾಷೆ ಅಥವ ಇತರ ಭಾಷೆಯಷ್ಟು ’ಸ್ವತಂತ್ರ’ ಇಲ್ಲದಿರಬಹುದೇನೋ. ಜನಸಂಖ್ಯೆ ನೀವು ಹೇಳಿದ್ದು ೮ ವರ್ಷಗಳಷ್ಟು ಹಿಂದಿನದು.. ೪೦ಲಕ್ಷ ’ತುಳು ಭಾಷೆ ಆಡುವವರು’ (ಮಾತೃಭಾಷಿಕರಲ್ಲ) ಇದ್ದಾರೆ ಅಂದ ಓದಿದ ನೆನಪು. ಮತ್ತೆ ಕೊಂಕಣಿ ಗೋವಾ, ಮಹಾರಾಷ್ಟ್ರ, ಗುಜರಾತ್ ನಲ್ಲೂ ಇದೆಯಲ್ಲ.

ಕುಂದಾಪುರ (ಬ್ರಹ್ಮಾವರದಿಂದ ಉತ್ತರಕ್ಕೆ) ತುಳುನಾಡಿನ ವ್ಯಾಪ್ತಿ ಬರುವುದಿಲ್ಲ. ಕೊಂಕಣಿಗಳು, ಬ್ಯಾರಿಗಳೆಲ್ಲ ವಲಸೆಬಂದವರು; ಆದರೂ ಅವರು ತುಳುವರು (ತುಳುನಾಡಿನ ಬಗ್ಗೆ ಮಾತಾಡುವಾಗ; ಕರ್ನಾಟಕದಲ್ಲಿರುವವರೆಲ್ಲರೂ ಕನಡಿಗರೇ ಅಲ್ವೆ?). ಬ್ರಿಟೀಷರು ಮೊನ್ನೆ ಮೊನ್ನೆ ಬಂದವರು. ಅವರು ಕನ್ನಡ ಅಂದದ್ದಲ್ಲ ಕೆನರಾ ಅಂದಿದ್ದು. ಮತ್ತೆ ಅವರು ಕರ್ನಾಟಕ ಎಂದು ಎಲ್ಲೂ ಹೇಳಿಲ್ಲ.. ಮದ್ರಾಸ್ /ಮೈಸೂರು ಅಂದಿದ್ದರು..

ಮತ್ತೆ ಮತ್ತೆ ನೀವು ಪದಗಳ ಬಗ್ಗೆ ಚರ್ಚಿಸುತ್ತೀರಿ.. ತುಳುವಿಗೆ (ದ್ರಾವಿಡ ಭಾಷೆಯಾದದ್ದರಿಂದ) ಮಲಯಾಳ, ತಮಿಳು, ಕನ್ನಡ, ತೆಲುಗು ಪದಗಳ ಸ್ವಾಮ್ಯತೆ ಇದೆ. ಕನ್ನಡದ್ಲೂ ಹೀಗೇ ಇದೆಯಲ್ಲಾ..? ಹೆಚ್ಚಿನ ಕ್ರಿಯಾಪದಗಳೆಲ್ಲಾ ತಮಿಳಿನ ಹೋಲಿಕೆ ಇದೆ..ಕೊಡು(ಕೊಡ್), ಇಡು(ಇಡ್), ಹಾಡು(ಪಾಡ್).. ಹಾಗೆಯೇ ಕಾಯೆರ್ ತುಳುವಿನಲ್ಲೂ ಬಳಕೆ ಇರುವ ಪದ.

ಮೂಲತಃ ಇದು ಊರಿನ ಹೆಸರುಗಳ ಬಗೆಗಿನ ಚರ್ಚೆ. ಅದಕ್ಕಾಗಿ ನಾನು ಪ್ರಶ್ನಿಸಿದ್ದು ಬುಲ್ ಟೆಂಪಲ್ ಎಂಬ ಬಳಕೆ ಸರಿಯೋ ತಪ್ಪೋ ಎಂದು. ಅದನ್ನು ಯಾರು ಪೂಜಿಸುತ್ತಾರೆ ಎಂದು ಕೇಳಿದ್ದಲ್ಲ. ಆ ಪ್ರಯೋಗ ಸಾಧುವೇ ಎಂಬುದು. ಮೂಲ ಲೇಖನದ ಪ್ರಶ್ನೆಯೂ ಅದೇ.. ನಿನ್ನೆ ತಾನೆ ಬೆಂಗಳೂರಿಗೆ ಹೋಗಿದ್ದೆ.. ಮತ್ತೊಂದು ಅಂತಹದೇ ಹೆಸರು ನೋಡಿದೆ.. ಕಾಟನ್ ಪೇಟೆ (ಅರಳೇ ಪೇಟೆ). ಬಹುಷ ತರ್ಜುಮೆ ಮಾಡುವಾಗ ’ಪೇಟೆ’ಗೆ ಇಂಗ್ಲಿಷ್ ನಲ್ಲಿ ಏನು ಹೇಳುವುದು/ಬರೆಯುವುದ ಅಂತ ಗೊತ್ತಾಗಲ್ಲಿಲ್ಲವೇನೋ..! ಬಹಳ ಹಿಂದೆ ನೀವು ಕುಂಬಳಗೋಡು ಬಗ್ಗೆ ಪ್ರಸ್ತಾಪಿಸಿದ್ದೀರಿ. ಆ ಕಡೆನೂ (ಮೈಸೂರು ರಸ್ತೆ) ನಾನು ಹೋಗಿದ್ದೆ; ಅಲ್ಲಿ ಕೆಲವು ಫಲಕಗಳಲ್ಲಿ ಕುಂಬಳ’ಗೂಡು’ ಅಂತಾನೂ ಇದೆ (ಒಂದಂತೂ ಶಾಲೆಯ ಫಲಕ); ನನಗೂ ಗೂಡು ಸರಿ ಅನಿಸುತ್ತದೆ. ಮತ್ತೂ ಕೆಲವು ಪ್ರಯೋಗಗಳಿವೆ.. ಟಿ.ದಾಸರಹಳ್ಳಿ, ಆರ್.ಟಿ.ನಗರ .. ಮುಂದೊಂದು ದಿನ Tidasarahalli, Artinagar ಆದರೆ ಆಶ್ಚರ್ಯವೇನೂ ಇಲ್ಲ ಅಲ್ವೆ?.

ನಾನೂ ನನಗೆ ತಿಳಿದಿದ್ದನ್ನು ಹೇಳಿದ್ದೀನೆ. ನನಗೂ ಯಾರ ಮನನೋಯಿಸುವ ಉದ್ದೇಶವಿಲ್ಲ. ಆರೋಗ್ಯಕರ ಚರ್ಚೆಯಾದರೇನೆ ವಿಷಯಗಳು ಹೊರಬೀಳುವುದು ಅಲ್ವೆ?

ಹರಿಜೋಗಿ

Anonymous ಅಂತಾರೆ...

ರೀ ಏನ್ಗುರು.

ಗೊತ್ತಿಲ್ದೇ ಮಾತಾಡೋರ್‍ ಕಮೆಂಟುಗಳನ್ ಯಾಕೆ publish ಮಾಡ್ತೀರಿ?

ಆ ಮೂಲ ಬರಹವೂ ಕೂಡ ಯಾರೋ ಗೊತ್ತಿಲ್ದೇ ಬರೆದಿರೋ ಅಧಿಕಪ್ರಸಂಗ. ಅದರ ಬೆಲೆ ಕಸದಬುಟ್ಟಿಯಲ್ಲಿ ತಿಪ್ಪೇ ಆಗೋದಷ್ಟೆ!

ಇನ್ ಮುಂದೆ ಇಂತದ್ದನ್ನು ignore ಮಾಡಿ, ಬಿಟ್ಟಾಕಿ.....

Anonymous ಅಂತಾರೆ...

ಅಂತೂ ಬಹಳ ಜೋರಾದ ಚರ್ಚೆ.. ಚೆನ್ನಾಗಿದೆ.
ಮೂರ್ತಿ

Unknown ಅಂತಾರೆ...

"ತುಳು ಭಾಷೆಗೆ ಲಿಖಿತ ಸಾಹಿತ್ಯವು ಗಣನೀಯವಾಗಿಲ್ಲ, ಲೆಕ್ಕಿಸ ತಕ್ಕುದ್ದಲ್ಲ."

ತುಳುವಿನಲ್ಲಿ ಸಮೃದ್ಧವಾಗಿರುವ ಮೌಖಿಕ ಸಾಹಿತ್ಯವನ್ನು ಪರಿಗಣಿಸದೆ ಕೇವಲ ಲಿಖಿತ ಸಾಹಿತ್ಯ ಒಂದರಿಂದಲೇ ಭಾಷೆಯ ಮಹತ್ವವನ್ನು ಅಲ್ಲಗಳೆಯ ಹೊರಟಂತಿದೆ. ತುಳು ಎಂಬುದು ಒಂದು ಜೀವಂತ ಭಾಷೆ. ಅದು ಕೆಳವರ್ಗದವರ ಭಾಷೆ. ಮಣ್ಣಿನ ಭಾಷೆ.
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದಂತಾಯಿತು ತಮ್ಮ ವಾದ ಲಹರಿ ಮಾಯ್ಸನ್. ಅಷ್ಟು ಪುಟಗೋಸಿ ಲೇಖನಕ್ಕೆ ಇಷ್ಟು ವಾದ ಬೇಡ. :)

ಗುರು ಬಾಳಿಗ

ರಾಕೇಶ್ ಶೆಟ್ಟಿ ಅಂತಾರೆ...

'ಈ ರೀತಿ ತುಳು ಹೆಸರುಗಳನ್ನೂ ಕನ್ನಡಕ್ಕೆ ಬಳಸಿಕೊಳ್ಳುವುದು ನಮ್ಮ ದಾಸ್ಯ ಮನೋಭಾವನೆಯನ್ನು ತೋರುತ್ತದೆ'

ಮೊದಲಿಗೆ ಈ ರೀತಿಯಾ ಪದ ಬಳಕೆ ಮಾಡಿರುವ ಹಾಗೂ ಒಂದು ಕೆಟ್ಟ ಶಿರ್ಶಿಕೆಯನ್ನ ನೀಡಿರುವ ಆ ಸುಧ್ಕರಾವರ ಮಾತುಗಳೇ ಅಸಹ್ಯ ಹುಟ್ಟಿಸುವಂತಿವೆ.ಅದರ ಜೊತೆಗೆ ಈ ಮಾಯ್ಸ.


@ ಮಾಯ್ಸ,

>>ಅವರು ’ಕುಕ್ಕದ ಕಟ್ಟೆ’ ಎಂಬುದು ಚಂದದ ಹೆಸರೆಂದು ಹೇಳಿದ್ದಾರೆ, ಹಾಗಾದರೆ ’ಮಾವಿನ ಕಟ್ಟೆ’ ಹೆಸರಲ್ಲಿ ಚಂದವಿಲ್ಲವೇ?
ಚಂದದ ಬಗ್ಗೆ ಯಾರ್ ಕೇಳಿದ್ದು?,ವಿಷಯವನ್ನ ನಿನಗೆ ಬೇಕಾದಾ ಹಾಗೆ ತಿರುಗಿಸಿಕೊಳ್ಳುವ ಮೊದಲು,
'ಕಟ್ಟೆ' ಪದ ಕನ್ನಡದ್ದೇ ಸರಿ. 'ಕುಕ್ಕು' ತುಳುವಿನದ್ದು ಅಂತ ಹೇಳೋಕೆ ಮರ್ತೊಯ್ತಾ?
ಹಾಗೆ 'ಪೊಸ ಕೊಂಡ'ದಲ್ಲಿ 'ಕೊಂಡ' ಕನ್ನಡ ಅಂದಿದ್ಯ ಸರಿ. 'ಪೊಸ' ಏನು? ಯಾಕ್ ಅದು ಮರ್ತೊಯ್ತಾ?


>> ಇಂದಿಗೂ ಹಲ ತುಳುವರು ಮುಂಬೈ ಮುಂತಾದೆಡೆ ಹೋದಾಗ ತಾವು ತುಳುವರೆಂದು ಕನ್ನಡಿಗರಲ್ಲವೆಂದೂ ಹೇಳಿಕೊಂಡು, ಅವರಿಗೆ ಕನ್ನಡ ಬರುವುದೇ ಇಲ್ಲವೆಂದೂ ಹೇಳಿಕೊಳ್ಳುವರು. ಈ ತರಹದ ’ಕೆಲ’ ಮಂದಿ, ಕನ್ನಡ ಮತ್ತು ತುಳುವಿನ ನಡುವಣದ ಬೆಸೆಗೆಯನ್ನು ಹರಿಯಲು ಸಂಚು ಹೂಡಿದ್ದಾರೆ.

.ಆ 'ಕೆಲ'ಮಂದಿಗೂ ನಿನ್ನ ಮಾತಿಗೂ ನನಗ್ಯಾವ ವ್ಯತ್ಯಾಸ ಕಾಣುತ್ತಿಲ್ಲ. ಆ 'ಕೆಲ' ಮಂದಿಯ ನಡುವೆ ನೀನು ಒಬ್ಬನಾಗಬೇಡ.ಒಳ್ಳೆಯ ಮಾತನಾಡ ಬರದಿದ್ದರೆ ಹೋಗ್ಲಿ, ಕಂದಕ ತೋಡಲು ಪ್ರಯತ್ನಿಸಬೇಡ.

ಈ ವಿಷಯ ಕೇವಲ ಊರಿನ ಹೆಸರುಗಳಲ್ಲಿ ತುಳು ವಿನ ಜಾಗದಲ್ಲಿ ಕನ್ನಡ ಬಂದು ಕೂತಿರುವುದರ ಬಗ್ಗೆ ಆಷ್ಟೇ ಇದೆ.ನೀನ್ ಯಾಕೆ ತುಳುವರು ಎಲ್ಲಿಂದ ಬಂದ್ರು ಅನ್ನೋದೆಲ್ಲ ಮಾತಾಡ್ತಾ ಇದ್ದೀಯಾ?.ಪ್ರತ್ಯೇಕ ತುಳುನಾಡು ಬೇಕು ಅನ್ನೋ ಜನ , ಇಲ್ಲ ಸಲ್ಲದ ಮಾತುಗಳನ್ನಾಡಿ ದ್ವೇಷ ಮೂಡಿಸುವಂತ ನಿನ್ನಂತಹ ಬರಹಗಳು,ಮತ್ತೆ ಆ ಸುಧಾಕರ ಆ ವಿಷಯಕ್ಕೆ ಕೊಟ್ಟಿರುವ ಶೀರ್ಷಿಕೆ, ಮತ್ತಿಲ್ಯಾರೋ ನೆಟ್ಟಗೆ ತುಳು,ಕನ್ನಡ ಯಾವ್ದು ಬಾರದ ಶಿಲ್ಪ ಶೆಟ್ಟಿ,ಐಶ್ವರ್ಯ ರೈ ಗಳ ಬಗ್ಗೆ ಮಾತನಾಡುವುದು ನೀವೆಲ್ಲ ವಿಕೃತಿಗಳೇ.ಕನ್ನಡ ನಾಡು ಕಟ್ಟಲು ಬರದಿದ್ದರೆ ದೂರ ನಿಲ್ಲು, ಹತ್ತಿರವಿರುವ ಮನಸುಗಳನ್ನ ನಿನ್ನ ಈ ದ್ವೇಷ ಪೂರಿತ ಬರಹದಿಂದ ಮತ್ತೆ ದೂರ ಮಾಡಬೇಡ. ಇಲ್ಯಾರೋ ಒಂದಿಬ್ಬರು ನೀ ಬರೆದಿರುವುದೆಲ್ಲ ಸತ್ಯ ಅಂದುಕೊಂಡಿದ್ದಾರಲ್ಲ ಅದೇ ಕಳವಳಕಾರಿ ವಿಷಯ.

ಕಾಸರಗೋಡಿನ ಪದ ಬಿಡಿಸಿ ಹೇಳ್ತಿಯಾ? ಒಮ್ಮೆ ಇದನ್ನ ಓದಿ ನೋಡು.
http://janaganamanadina.wordpress.com/2010/03/14/%E0%B2%AE%E0%B2%B9%E0%B2%BE%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%95%E0%B3%8D%E0%B2%95%E0%B3%86-%E0%B2%AC%E0%B3%86%E0%B2%B3%E0%B2%97%E0%B2%BE%E0%B2%B5%E0%B2%BF%E0%B2%95/

>>ಈ ಸಂಗತಿಯನ್ನು ಬರೀ ಮಂಗಳೂರಿನ ಆವೃತ್ತಿಯಲ್ಲಿ ಯಾಕೆ ಪ್ರಕಟಿಸಿದ್ದು? ಅದಕ್ಕೆ ಪ್ರತಿ ವಿಷಯ ಮಂಡನೆಯನ್ನು ಬರೀ ಮಂಗಳೂರಿನವರಷ್ಟೆ ಮಾಡಲೆಂದೇ? ಇದು ಸರಿಯೇ? ಇಂತಹ ವಿಷಯಗಳನ್ನು ಇಡೀ ಕರ್ನಾಟಕದ ಮಂದಿಗೆ ತಿಳಿಸಬೇಕಲ್ಲವೇ? ಹಾಗೂ ಅದರ ಸರಿ ತಪ್ಪುಗಳನ್ನು ಚರ್ಚೆ ನಡೆಸದೇ, ವಿವೇಚಿಸದೇ ಲೇಖನಗಳನ್ನು ಪ್ರಕಟಿಸಿ ಬಿಡಬಹದೇ?

ಈ ವಿಷಯವನ್ನ ಹೋಗಿ ಭಟ್ಟರನ್ನ ಕೇಳು.


ಏನ್ಗುರು ಈ ವಿಷಯವನ್ನ ಪ್ರಕಟಿಸಿದ್ದು ಒಳ್ಳೆಯದೇ ಆಯಿತು.ಕನ್ನಡಿಗರೊಂದಿಗೆ ಬೆರೆತು ಬಾಳುತ್ತಿರುವ ತುಳು,ಕೊಂಕಣಿಗರ ಬಗ್ಗೆ ಅನಗತ್ಯ ಸಂಶಯ,ದ್ವೇಷ ಬೇಡ, ಹಾಗೇನಾದರು ಪದೇ ಪದೇ ಅವರ committment ಬಗ್ಗೆ ಅನಗತ್ಯ ಸಂಶಯ ಪಡುತಿದ್ದರೆ, ಮುಂದೆ ಅನಾಹುತವಾಗುವುದಂತು ನಿಶ್ಚಿತ.
ಸಾಕಾ? ಇಲ್ಲ ಇನ್ನ ಬೇಕಾ ಮಾಯ್ಸ?
over to you...

- ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು ಮಂಕು ತಿಮ್ಮ||'

ಮಾಯ್ಸ ಅಂತಾರೆ...

<"ಈ ವಿಷಯ ಕೇವಲ ಊರಿನ ಹೆಸರುಗಳಲ್ಲಿ ತುಳು ವಿನ ಜಾಗದಲ್ಲಿ ಕನ್ನಡ ಬಂದು ಕೂತಿರುವುದರ ಬಗ್ಗೆ ಆಷ್ಟೇ ಇದೆ.ನೀನ್ ಯಾಕೆ ತುಳುವರು ಎಲ್ಲಿಂದ ಬಂದ್ರು ಅನ್ನೋದೆಲ್ಲ ಮಾತಾಡ್ತಾ ಇದ್ದೀಯಾ?">

ಯಾಕೆ ಅಂದರೆ ಅದಕ್ಕೆ ತಕ್ಕ ಪುರಾವೆ ಕೊಡುವ ಸಂಗತಿಗಳು ಇವೆ. ಬೇಕಾದರೆ ಬನವಾಸಿ ಬಳಗ, ಇತ್ತೀಚೆಗೆ ನಡೆಸಿದ ಸಿಂಪೋಸಿಯಂ ಅಲ್ಲಿ ಮಾತಾಡಿದ ಶಂಕರಬಟ್ಟರ ಒಂದು ಹೊತ್ತಗೆಯಲ್ಲಿ ಆ ವಿಶಯವಿದೆ.

ನಡು-ದ್ರಾವಿಡ ತೆಲುಗು, ಗೊಂಡ ನುಡಿಗೆ ಹತ್ತಿರವಾದ ಪದಗಳ, ವ್ಯಾಕರಣಾಂಶಗಳ ಬಳಕೆ ತುಳುವಿನಲ್ಲಿದೆಯಂತೆ. ತೆಂಕಣ-ದ್ರಾವಿಡ ನುಡಿಗಳಾದ ತಮಿಳು-ಕನ್ನಡದಲ್ಲಿ ಹಾಗಿಲ್ಲ. ಇನ್ನು ಹಲವು ಲಕ್ಷಣಗಳು ತುಳುವನ್ನು ತೆಂಕಣ-ದ್ರಾವಿಡ ನುಡಿಕೂಟಕ್ಕೆ ಸೇರಿಸುವುದಿಲ್ಲ. ಅತಃ ಈ ಭಾಷಾವಿಜ್ಞಾನದ ಕಾರಣದಿಂದ ತುಳುವರೂ ಕೊಂಕಣಿಗರ ಹಾಗೆ ಬಡಗಿನಿಂದ ಬಂದವರು ಎಂಬ ತಿಯರಿ ಇದೆ. ಅದಕ್ಕೆ ಭಾಷಾವಿಜ್ಞಾನಿಗಳ ಮಾತನ್ನು ಉದ್ಧರಿಸಿದ್ದೀನಿ. ಅದು ನಾನು ಹೊಸದಾಗಿ ಹುಟ್ಟಿಸಿದ್ದಲ್ಲ.

<"ಪ್ರತ್ಯೇಕ ತುಳುನಾಡು ಬೇಕು ಅನ್ನೋ ಜನ">
ಅವರಿಲ್ವ? ತುಳುನಾಡ ಹೋರಾಟ ಸಮಿತಿ ಅಂತ ಇದೆಯಲ್ಲ. ಆ ತಥ್ಯವನ್ನೇ ಇಲ್ಲಿ ಹೇಳಿದ್ದು. ಅಂತವರೂ ಇದ್ದಾರೆ.

ಇನ್ನು ಕನ್ನಡಿಗರ ದಬ್ಬಾಳಿಕೆ ಎಂದು ಪ್ರಚಾರ ನಡೆಸಿ, ಕನ್ನಡಿಗರ ಹೆಸರಿಗೆ ಮಣ್ಣು ಬಳೀತಿರೋರು ಯಾರು? ಹಾಗೇ ಈ ಬರಹ ಹೊರತಂದ ಸುದ್ದಿಯೋಲೆಯ ಸಂಪಾದಕರು ತುಳು ಮಾತೃಭಾಷಿಕರಾಗಿರೋದು ಕಾಕತಾಳೀಯ!?

ಯಾವೋನಾದರು ಕನ್ನಡಿಗ ತುಳುವರ ಬಗ್ಗೆ ಸುಳ್ಳು ಸುಳ್ಳೇ ಹುಟ್ಟಿಸಿ ತಿಯ್ಯಾಟ ಬರಹ ಬರೆದ್ದಿದ್ದಾನೆಯೇ? ಮೊದಲ ಕಲ್ಲು ಎತ್ತಲಿಂದ?

ರಾಕೇಶ ಶೆಟ್ಟರು ವಿಷಯವಾಗಿ ಹೆಚ್ಚೇನು ಬರೆಯದೇ ನನ್ನು ತೀಯ್ಯಲು ಹೆಣಗಿದ ಹಾಗಿದೆ. ಆ ಬರಹದಲ್ಲಿ ತುಳುವನ್ನು ಮೆರೆಸಲು ಕನ್ನಡವನ್ನು ತಿಯ್ಯಾಟಕ್ಕೆ ಎಳೆದಂತೆ.! ಹರಜೋಗಿಗಳ ಸುಳ್ಳು ಮಾಲಿಕೆಗಳೊಂದು ತೆರವಾದರೆ, ಇವರ ವಿಶಯವಿಲ್ಲ ಪರದಾಟ ಇನ್ನೊಂದು ಬಗೆ.

ರಾಕೇಶ ಶೆಟ್ಟಿಯವರೇ ನಿಮ್ಮ ವೈಯಕ್ತಿಕ ತಾಣದೆಡೆ ನಾನು ಮೂಸು ನೋಡುವುದಿಲ್ಲ.

ಏನ್ಗುರು ತಾಣದಲ್ಲಿ ನನಗೆ ಅನಿಸಿಕೆ ಬರೆಯಲು ಹುರುಪಿದೆಯಂದು ಬರೆಯುವೆನು. ನನ್ನ ಅನಿಸಿಕೆ, ನನ್ನ ಅನಿಸಿಕೆ! ಅದನ್ನು ಹೊರತರುವುದು ಬಿಡುವುದು ಏನ್ಗುರುವಿನ ಅನುವಿಗೆ ಬಿಟ್ಟಿದ್ದು. ನೀವು ಯಾವ ದೊಣೆನಾಯಕ?!

"Over to you"ಅನ್ನು ಕನ್ನಡದಲ್ಲಿ "ಈಗ ನಿಮ್ಮ ಸರತಿ"ಅನ್ನುತ್ತಾರೆ...

ತುಳು-ಕನ್ನಡಿಗ, ಕೊಂಕಣಿ-ಕನ್ನಡಿಗ, ಹಿಂದಿ-ಕನ್ನಡಿಗ, ತೆಲುಗು-ಕನ್ನಡಿಗ, ತಮಿಳು-ಕನ್ನಡಿಗ ಇವೆಲ್ಲ ಅರ‍್ಥಹೀನ ಪದಗಳು. ಅವಕ್ಕೆ ಕಾರಣಗಳು ಸ್ವಪ್ರಕಾಶ!
ಆದರೂ ನಮ್ಮ ನಮ್ಮ ಬೇರೆತನಗಳ ನಡುವೆಯೂ ಸಹಜೀವನ ಸಾಧ್ಯ, ಆದರೆ ಅದಕ್ಕೆ ತಿಯ್ಯಾಟ, ಕುಟಿಲತೆ ಮಾರ‍್ಗವಲ್ಲ...

ಒಂದು ಹೆಸರಿಗೆ ಕನ್ನಡ ದಿನಪತ್ರಿಕೆ, ಕರ‍್ನಾಟಕದ ಒಂದು ಪ್ರಾಂತ್ಯದಲ್ಲಿ ಇಂತಹ ತಿಯ್ಯಾಟ ಬರಹವನ್ನು ಪ್ರಕಟಿಸಿರುವುದರ ವಿರುದ್ಧ, ಕಾರಣ ಸಮೇತ ನನ್ನ ಅನಿಸಿಕೆಗಳಾಗಿತ್ತು. ಸನ್ಮಾನ್ಯ ರಾಕೇಶ ಶೆಟ್ಟಿಯವರಿಗೆ ಎಂದು ಬರೆದಿಲ್ಲ..

ಮಾನ್ಯ ಗುರುಬಾಳಿಗರ ಮಾತಿಗೆ ಮಾನ್ಯತೆ ತೋರಿಸಿದ್ದೆನು. ತುಳುವಿನಲ್ಲಿ ಲಿಖಿತ ಸಾಹಿತ್ಯ ಗಣನೀಯವಾಗಿಲ್ಲ ಎಂಬುದು ನನ್ನ ಮಾತಲ್ಲ. ಬ್ರಿಟಾನಿಕದ ಮಾತದು. ಹಾಗೇ ಇನ್ನು ಮೌಖಿಕ ಸಾಹಿತ್ಯ ಹೇರಳವಾಗಿರುವ ಸೋಲಿಗ, ಬಡಗ, ಹಾಲಕ್ಕಿ, ಕುರುಬ, ತೋದ, ಇರುಳ, ಸಂಕೇತಿ, ಲಂಬಾಣಿ, ಒಕ್ಕಲಿಗ ಹೀಗೆ ಅನೇಕ ಕರ‍್ನಾಟಕದಲ್ಲಿ ನೆಲೆಸಿರುವ ಬುಡಕಟ್ಟುಗಳಿಗೆ ಕರ‍್ನಾಟಕ ಸರಕಾರಗಳು ಅಕಾಡೆಮಿ ಸ್ಥಾಪಿಸಿವೆಯೇ?
ಇಷ್ಟಕ್ಕೂ ತುಳುಜನಸಂಖ್ಯೆ ೧೭-೧೯ ಲಕ್ಷದ ಹತ್ತಿರವಷ್ಟೆ. ಅದನ್ನು ೫೦ಲಕ್ಷ, ಅರ್ಧಕೋಟಿ ಎಂದು ಬರೆದರೆ ಹೇಗೆ? ೫ ಕೋಟಿ ಕರ‍್ನಾಟಕದ ಜನಸಂಖ್ಯೆಯಲ್ಲಿ ೨೦ಲಕ್ಷ ಅಂದರೆ ೪%, ಅದೇ ೫೦ಲಕ್ಷ ಅಂದರೆ ೧೦%, ಸರಿಸುಮಾರು ಎರಡುವರೆ ಪಟ್ಟು ಹೆಚ್ಚುವರಿ!.

ಅಷ್ಟಕ್ಕೂ ಕುರುಬರು ೧೨% ದಿಟಕ್ಕೂ ಇದ್ದಾರಂತೆ ಅವರ ಕುರುಬಕನ್ನಡಕ್ಕೆ ಅಕಾಡೆಮಿಯೆಲ್ಲಿ? ಇಲ್ಲವೇ ಕನ್ನಡ ಸಾಹಿತ್ಯ ಪರಿಷತ್ತೋ ಇತರೇ ಸಂಸ್ಥೆಗಳಲ್ಲಿ ಈ ಕವಲುನುಡಿಯಗಳ ಅಧ್ಯಯನವೆಲ್ಲಿ? ತುಳು ಅಕಾಡೆಮಿ, ತುಳು ವಿಶ್ವ ಸಮ್ಮೇಳನ ಇಷ್ಟೆಲ್ಲ ೪% ತುಳು ಅಲ್ಪಸಂಖ್ಯಾತರಿಗೆ ಉತ್ತೇಜನ ಕೊಟ್ಟಿರುವುದು ಬೇರೆ ಪಂಗಡಗಳಿಗೆ ಸೈತವೇ!

ರಾಕೇಶ ಶೆಟ್ಟಿರೆ, ನಿಮ್ಮನ್ನು ಕುರಿತು ನಾನು ಬರೆದಿಲ್ಲ. ನಿಮ್ಮ ಏಕವಚನ ಪ್ರಯೋಗಕ್ಕೆ ನಾನೇನು ನಿಮ್ಮ ಗೆಳೆಯನಲ್ಲ! ಇಲ್ಲವೇ ನನಗೆ ಅಗೌರವಕ್ಕೆ ಹೀಗೆ ಬರೆದಿರೇನೋ.. :) ಅಷ್ಟಕ್ಕೂ ನಿಮ್ಮ ಅಗೌರವಕ್ಕಾದರೂ ನನ್ನ ಬಳಿ ಬೆಲೆಯೇನು! :)

ಏನ್ಗುರುಗೆ ನನ್ನ ಅನಿಸಿಕೆಗಳನ್ನು ಹೊರತಂದುದಕ್ಕೆ ನನ್ನಿ..

ನಾನು ಕನ್ನಡಿಗ ಏಕೆಂದರೆ ನನ್ನ ತಾಯಿನುಡಿಯಿಂದೇ, ಜನಾಂಗೀಯವಾಗಿ ಕನ್ನಡ. ನಾನು ನಾನಾ ಪ್ರಾಂತೀಯರಚನಾ ಕಾರಣಗಳಿಂದ ಕರ‍್ನಾಟಕಕ್ಕೆ ಸೇರಿಕೊಂಡು ತನ್ನ ಗುರುತಿನ ಇಬ್ಬಂದಿಯಲ್ಲಿ ಸಿಲುಕಿಕೊಂಡಿರುವವನಲ್ಲ! ನನ್ನ ವಂಶದವರ ನೆಲ ಸುಮಾರು ೧೫೦೦ ವರುಶದಿಂದ ಕನ್ನಡವಲ್ಲದ ಬೇರೆಭಾಷೆಯ ಆಡಳಿತಕ್ಕೆ ಸಿಲುಕಿಲ್ಲ. ಅದಕ್ಕೆ ನನ್ನ ಹೆಮ್ಮೆ ಇದೆ.. ಇದೇ ನನ್ನ ಅನಿಸಿಕೆ ವ್ಯಕ್ತಪಡಿಸಲು ಕಾರಣ.

ರಾಕೇಶ್ ಶೆಟ್ಟಿ :) ಅಂತಾರೆ...

ಮಾಯ್ಸ
<>

ತಾವು ಯಾವ ಹೊಸದಾಗಿ ಏನನ್ನು ಹುಟ್ಟಿಸಿಲ್ಲವೆಂದು ನಮಗೆ ಗೊತ್ತಿದೆ;)
ಸರಿನಪ್ಪ ನಾವು 'ಬಡಗಿನಿಂದ ಬಂದವರು' ಅಂತಲೇ ಇಟ್ಕೋ,ಅದಕ್ಕೆನಿಗಾ?

<<<"ಪ್ರತ್ಯೇಕ ತುಳುನಾಡು ಬೇಕು ಅನ್ನೋ ಜನ">
ಅವರಿಲ್ವ? ತುಳುನಾಡ ಹೋರಾಟ ಸಮಿತಿ ಅಂತ ಇದೆಯಲ್ಲ. ಆ ತಥ್ಯವನ್ನೇ ಇಲ್ಲಿ ಹೇಳಿದ್ದು. ಅಂತವರೂ ಇದ್ದಾರೆ. >>

ಇಲ್ಲ ಅಂತ ನಾನೆಲ್ಲಿ ಹೇಳಿದೆ,ಹೀಗೆ ದ್ವೇಷ ಕಾರುವ ಬರಹ ಬರೆಯುವ ತಮಗೂ ಅವರಿಗೂ ಯಾವುದೇ ವ್ಯತ್ಯಾಸವಿಲ್ಲ ಅಂದೇ ಅಷ್ಟೇ!

>> ಯಾವೋನಾದರು ಕನ್ನಡಿಗ ತುಳುವರ ಬಗ್ಗೆ ಸುಳ್ಳು ಸುಳ್ಳೇ ಹುಟ್ಟಿಸಿ ತಿಯ್ಯಾಟ ಬರಹ ಬರೆದ್ದಿದ್ದಾನೆಯೇ? ಮೊದಲ ಕಲ್ಲು ಎತ್ತಲಿಂದ?

ತಾವೇ ಉದಾಹರಣೆಗೆ ಇದ್ದಿರಲ್ಲ, ಇನ್ಯಾರು ಯಾಕೆ ಬೇಕು? ಆ ಬರಹದಲ್ಲಿ ಅವನು ಕೇಳಿದ್ದಾದರು ಏನು? ನಮ್ಮ ತನವನ್ನ ಕಿತ್ಕೊಬೇಡಿ ಅಂತ ಅಷ್ಟೇ.ಅದ್ಯಾವ ದೊಡ್ಡ ಅಪರಾದ ಗುರು?
ನಿಮಗೆ 'ಬ್ಯಾಂಗಲೂರ್' ಅನ್ನ 'ಬೆಂಗಳೂರು' ಅನ್ನಿ ಅನ್ನೋಕೆ ಹೇಗೆ ಹಕ್ಕಿದೆಯೋ,ಹಾಗೆ ತುಳುವರು 'ಮಂಗಳೂರು' ಅನ್ನು 'ಕುಡ್ಲ' ಅಂದ್ರೆ ತಮ್ಗ್ಯಾಕೆ ನೋವು? ಅಂದ ಹಾಗೆ ಅದು 'ಪೊಸಕೊಂಡ' ಅಲ್ಲ 'ಪೊಸಖಂಡ' ಅಂತ. 'ಖಂಡ' ಅಂದ್ರೆ ಅಂದ್ರೆ ಕನ್ನಡದಲ್ಲಿ 'ಗದ್ದೆ' ಅಂತ ಅರ್ಥ.

>>ರಾಕೇಶ ಶೆಟ್ಟರು ವಿಷಯವಾಗಿ ಹೆಚ್ಚೇನು ಬರೆಯದೇ ನನ್ನು ತೀಯ್ಯಲು ಹೆಣಗಿದ ಹಾಗಿದೆ. ಆ ಬರಹದಲ್ಲಿ ತುಳುವನ್ನು ಮೆರೆಸಲು ಕನ್ನಡವನ್ನು ತಿಯ್ಯಾಟಕ್ಕೆ ಎಳೆದಂತೆ.! ಹರಜೋಗಿಗಳ ಸುಳ್ಳು ಮಾಲಿಕೆಗಳೊಂದು ತೆರವಾದರೆ, ಇವರ ವಿಶಯವಿಲ್ಲ ಪರದಾಟ ಇನ್ನೊಂದು ಬಗೆ.
ನಿಮ್ಮ ಪ್ರತಿಕ್ರಿಯೆಯಲ್ಲಿ, ತಾವು ವಿಷಯವನ್ನ ೪-೫ ಸಾಲಿಗೆ ಸೀಮಿತಗೊಳಿಸಿ,ಉಳಿದ ಸಾಲಿನಲ್ಲಿ 'ತುಳು'ವರನ್ನ 'ಕಟಕಟೆ'ಗೆ ನಿಲ್ಲಿಸಲು ಸಾಕಷ್ಟು ಪ್ರಯಾಸ ಪಟ್ಟಿದ್ದಿರಾ ಪಾಪ.. ;), ಇನ್ನ ನಾನು ನೀನ್ ಯಾವ ವಿಷಯದ ಬಗ್ಗೆ ಪ್ರಯಾಸ ಪಟ್ಟಿದ್ದೆಯೋ ಅದಕ್ಕಷ್ಟೇ ಉತ್ತರಿಸುವ ಪ್ರಯತ್ನ ಪಟ್ಟಿದ್ದೇನೆ.


>> ರಾಕೇಶ ಶೆಟ್ಟಿಯವರೇ ನಿಮ್ಮ ವೈಯಕ್ತಿಕ ತಾಣದೆಡೆ ನಾನು ಮೂಸು ನೋಡುವುದಿಲ್ಲ.
ಓಕೆ, ಥಾಂಕ್ಸ್ ;)

ರಾಕೇಶ್ ಶೆಟ್ಟಿ ಅಂತಾರೆ...

>>ತುಳು-ಕನ್ನಡಿಗ, ಕೊಂಕಣಿ-ಕನ್ನಡಿಗ, ಹಿಂದಿ-ಕನ್ನಡಿಗ, ತೆಲುಗು-ಕನ್ನಡಿಗ, ತಮಿಳು-ಕನ್ನಡಿಗ ಇವೆಲ್ಲ ಅರ‍್ಥಹೀನ ಪದಗಳು. ಅವಕ್ಕೆ ಕಾರಣಗಳು ಸ್ವಪ್ರಕಾಶ!
ಆದರೂ ನಮ್ಮ ನಮ್ಮ ಬೇರೆತನಗಳ ನಡುವೆಯೂ ಸಹಜೀವನ ಸಾಧ್ಯ, ಆದರೆ ಅದಕ್ಕೆ ತಿಯ್ಯಾಟ, ಕುಟಿಲತೆ ಮಾರ್ಗವಲ್ಲ
ನಾನು ಅದನ್ನೇ ಹೇಳ ಹೊರಟಿದ್ದು.ಸಹ ಬಾಳ್ವೆ ಸಾಧ್ಯ.ಆದರೆ ವ್ಯಂಗ್ಯ,ತಾವೇ ದೊಡ್ಡವರು ತಮ್ಮದೇ ನಡೆಯಬೇಕು ಅನ್ನೋ ಹಮ್ಮು ಹಾಗೆ ಬಾಳಲು ಬಿಡುವುದಿಲ್ಲ.ತಾವು ಕನ್ನಡವನ್ನ ಕನ್ನಡಿಗರನ್ನ ಹೋಗಲಿ ಬರೆದರೆ ನನಗೂ ಸಂತೋಷ. ಆದರೆ ಆ ಭರದಲ್ಲಿ ತುಳುವರಿಗೆ ಸುಖಾ ಸುಮ್ಮನೆ ನೋವಾಗುವಂತೆ ಬರೆಯುವುದು ಸರಿಯೇ?

>>ಒಂದು ಹೆಸರಿಗೆ ಕನ್ನಡ ದಿನಪತ್ರಿಕೆ, ಕರ‍್ನಾಟಕದ ಒಂದು ಪ್ರಾಂತ್ಯದಲ್ಲಿ ಇಂತಹ ತಿಯ್ಯಾಟ ಬರಹವನ್ನು ಪ್ರಕಟಿಸಿರುವುದರ ವಿರುದ್ಧ, ಕಾರಣ ಸಮೇತ ನನ್ನ ಅನಿಸಿಕೆಗಳಾಗಿತ್ತು. ಸನ್ಮಾನ್ಯ ರಾಕೇಶ ಶೆಟ್ಟಿಯವರಿಗೆ ಎಂದು ಬರೆದಿಲ್ಲ....
ತಾವು ಪತ್ರಿಕೆಯ ವಿರುದ್ಧ ಬರೆದಿದ್ದರೆ ನಾನು ಉತ್ತರಿಸುತ್ತಿರಲಿಲ್ಲ,ಆದ್ರೆ ನಿಮ್ಮ ಪ್ರತಿಕ್ರಿಯೆಯಲ್ಲಿ ಒಂದು ಪ್ರಾಂತ್ಯದ ಹಾಗು ಪ್ರಾಂತಿಯಿರ ವಿರುದ್ಧ ದ್ವೇಷ ಕಾರುವ ಬರಹವಿದ್ದುದ್ದಕ್ಕೆ ನಾನು ಬರೆದಿದ್ದು.

>>ಮಾನ್ಯ ಗುರುಬಾಳಿಗರ ಮಾತಿಗೆ ಮಾನ್ಯತೆ ತೋರಿಸಿದ್ದೆನು. ತುಳುವಿನಲ್ಲಿ ಲಿಖಿತ ಸಾಹಿತ್ಯ ಗಣನೀಯವಾಗಿಲ್ಲ ಎಂಬುದು ನನ್ನ ಮಾತಲ್ಲ. ಬ್ರಿಟಾನಿಕದ ಮಾತದು. ಹಾಗೇ ಇನ್ನು ಮೌಖಿಕ ಸಾಹಿತ್ಯ ಹೇರಳವಾಗಿರುವ ಸೋಲಿಗ, ಬಡಗ, ಹಾಲಕ್ಕಿ, ಕುರುಬ, ತೋದ, ಇರುಳ, ಸಂಕೇತಿ, ಲಂಬಾಣಿ, ಒಕ್ಕಲಿಗ ಹೀಗೆ ಅನೇಕ ಕರ‍್ನಾಟಕದಲ್ಲಿ ನೆಲೆಸಿರುವ ಬುಡಕಟ್ಟುಗಳಿಗೆ ಕರ‍್ನಾಟಕ ಸರಕಾರಗಳು ಅಕಾಡೆಮಿ ಸ್ಥಾಪಿಸಿವೆಯೇ?
ಇಷ್ಟಕ್ಕೂ ತುಳುಜನಸಂಖ್ಯೆ ೧೭-೧೯ ಲಕ್ಷದ ಹತ್ತಿರವಷ್ಟೆ. ಅದನ್ನು ೫೦ಲಕ್ಷ, ಅರ್ಧಕೋಟಿ ಎಂದು ಬರೆದರೆ ಹೇಗೆ? ೫ ಕೋಟಿ ಕರ‍್ನಾಟಕದ ಜನಸಂಖ್ಯೆಯಲ್ಲಿ ೨೦ಲಕ್ಷ ಅಂದರೆ ೪%, ಅದೇ ೫೦ಲಕ್ಷ ಅಂದರೆ ೧೦%, ಸರಿಸುಮಾರು ಎರಡುವರೆ ಪಟ್ಟು ಹೆಚ್ಚುವರಿ!.

ಗೊತ್ತಿಲ್ಲ ಅದಕ್ಕೆ ಕೇಳ್ತಾ ಇದ್ದೀನಿ.ಈ ಅಕಾಡೆಮಿಗಳನ್ನ ಭಾಷಾವಾರು ಸ್ಥಾಪಿಸುತ್ತಾರೋ? ಇಲ್ಲ ಜಾತಿವಾರೋ?

>> ಅಷ್ಟಕ್ಕೂ ಕುರುಬರು ೧೨% ದಿಟಕ್ಕೂ ಇದ್ದಾರಂತೆ ಅವರ ಕುರುಬಕನ್ನಡಕ್ಕೆ ಅಕಾಡೆಮಿಯೆಲ್ಲಿ? ಇಲ್ಲವೇ ಕನ್ನಡ ಸಾಹಿತ್ಯ ಪರಿಷತ್ತೋ ಇತರೇ ಸಂಸ್ಥೆಗಳಲ್ಲಿ ಈ ಕವಲುನುಡಿಯಗಳ ಅಧ್ಯಯನವೆಲ್ಲಿ? ತುಳು ಅಕಾಡೆಮಿ, ತುಳು ವಿಶ್ವ ಸಮ್ಮೇಳನ ಇಷ್ಟೆಲ್ಲ ೪% ತುಳು ಅಲ್ಪಸಂಖ್ಯಾತರಿಗೆ ಉತ್ತೇಜನ ಕೊಟ್ಟಿರುವುದು ಬೇರೆ ಪಂಗಡಗಳಿಗೆ ಸೈತವೇ!
ತಮಗೆ 'ತುಳು'ವಿನ ಮೇಲೆ ಅದ್ಯಾಕಿಷ್ಟು ಮಾತ್ಸರ್ಯ ಗೊತ್ತಿಲ್ಲ ಕಣಪ್ಪ..

ರಾಕೇಶ್ ಶೆಟ್ಟಿ ಅಂತಾರೆ...

>>ರಾಕೇಶ ಶೆಟ್ಟಿರೆ, ನಿಮ್ಮನ್ನು ಕುರಿತು ನಾನು ಬರೆದಿಲ್ಲ. ನಿಮ್ಮ ಏಕವಚನ ಪ್ರಯೋಗಕ್ಕೆ ನಾನೇನು ನಿಮ್ಮ ಗೆಳೆಯನಲ್ಲ! ಇಲ್ಲವೇ ನನಗೆ ಅಗೌರವಕ್ಕೆ ಹೀಗೆ ಬರೆದಿರೇನೋ.. :) ಅಷ್ಟಕ್ಕೂ ನಿಮ್ಮ ಅಗೌರವಕ್ಕಾದರೂ ನನ್ನ ಬಳಿ ಬೆಲೆಯೇನು! :)
ನಮ್ಮ ಕಡೆ (ಅಂದ್ರೆ ಮಂಗಳೂರು ಅಲ್ಲಪ್ಪ,ಹಾಸನ್ ಕಡೆ) ದೊಡ್ಡವರನ್ನು 'ನೀನು' ಅಂತಾನೆ ಕರಿತಿವಿ ಅದು ನಮಗೆ 'ಅಗೌರವ' ಅನ್ನಿಸಕ್ಕಿಲ್ಲ.


>> ನಾನು ಕನ್ನಡಿಗ ಏಕೆಂದರೆ ನನ್ನ ತಾಯಿನುಡಿಯಿಂದೇ, ಜನಾಂಗೀಯವಾಗಿ ಕನ್ನಡ. ನಾನು ನಾನಾ ಪ್ರಾಂತೀಯರಚನಾ ಕಾರಣಗಳಿಂದ ಕರ‍್ನಾಟಕಕ್ಕೆ ಸೇರಿಕೊಂಡು ತನ್ನ ಗುರುತಿನ ಇಬ್ಬಂದಿಯಲ್ಲಿ ಸಿಲುಕಿಕೊಂಡಿರುವವನಲ್ಲ! ನನ್ನ ವಂಶದವರ ನೆಲ ಸುಮಾರು ೧೫೦೦ ವರುಶದಿಂದ ಕನ್ನಡವಲ್ಲದ ಬೇರೆಭಾಷೆಯ ಆಡಳಿತಕ್ಕೆ ಸಿಲುಕಿಲ್ಲ. ಅದಕ್ಕೆ ನನ್ನ ಹೆಮ್ಮೆ ಇದೆ.. ಇದೇ ನನ್ನ ಅನಿಸಿಕೆ ವ್ಯಕ್ತಪಡಿಸಲು ಕಾರಣ.

ಇದು ದುರಾಭಿಮಾನ ಅಷ್ಟೇ! ನಿನ್ನ ನೀನು ಪ್ರೀತಿಸಿಕೋ, ಇನ್ನೊಬ್ಬರ ಬಗ್ಗೆ ಕೇವಲವಾಗಿ ಬರೆಯುವ ಹಕ್ಕು ನಿನಗೆನಿದೆ?, ಏಕೀಕರಣ ಮಾಡುವಾಗ ತಮ್ಮಂತಹ ವಿಶಾಲ (ಷಾದ) ಮನಸಿನವರು ಇದ್ದಿದ್ದರೆ ಹಾಗೆ ಆಗುತಿತ್ತೇನೋ?
ಅಷ್ಟಕ್ಕೂ ತಮ್ಮ ಕಾಮಾಲೆ ಕಣ್ಣಿಗೆ ಕರ್ನಾಟಕದ ಏಕಿಕರಣಕ್ಕೆ ಹೋರಾಡಿದ ತುಳುವರು ಕಾಣಿಸುವುದಿಲ್ಲ ಬಿಡಿ

>>ಏನ್ಗುರು ತಾಣದಲ್ಲಿ ನನಗೆ ಅನಿಸಿಕೆ ಬರೆಯಲು ಹುರುಪಿದೆಯಂದು ಬರೆಯುವೆನು. ನನ್ನ ಅನಿಸಿಕೆ, ನನ್ನ ಅನಿಸಿಕೆ! ಅದನ್ನು ಹೊರತರುವುದು ಬಿಡುವುದು ಏನ್ಗುರುವಿನ ಅನುವಿಗೆ ಬಿಟ್ಟಿದ್ದು. ನೀವು ಯಾವ ದೊಣೆನಾಯಕ?!

ತಪ್ಪು ತಮ್ಮದಲ್ಲ ಬಿಡಿ .

'ಏನ್ಗುರು' ಗೆ ಕೇಳಬೇಕು.
ಅಲ್ಲ ಗುರು ಕನ್ನಡ,ಕನ್ನಡಿಗರ,ಕರ್ನಾಟಕದವರ ಬಗ್ಗೆ ಬರೆಯುವ ಈ ತಾಣದಲ್ಲಿ ಇಂತ ದ್ವೇಷ ಕಾರುವ ಪ್ರತಿಕ್ರಿಯೆಗಳನ್ನ ಬಿಟ್ಟಿದ್ದು ಸರಿ ನಾ?

>> "Over to you"ಅನ್ನು ಕನ್ನಡದಲ್ಲಿ "ಈಗ ನಿಮ್ಮ ಸರತಿ"ಅನ್ನುತ್ತಾರೆ...

ಒಹ್! ಹೌದಾ?..ನಂಗ್ ಗೊತ್ತೇ ಇರ್ಲಿಲ್ಲ ಥ್ಯಾಂಕ್ಸ್ ;)

ಮಾಯ್ಸ,
ಕಡೆದಾಗಿ ಒಂದು ಮಾತು.ನೀನು ಬಹಳಷ್ಟು ವಿಷಯಗಳನ್ನ ತಿಳಿದಿದ್ದಿಯ,ನಿನಗೆ ಒಳ್ಳೆ ಓದು ಇದೆ ಅಂತ ಗೊತ್ತು.ಆದ್ರೆ ಅದನ್ನ ಆದರೆ ಒಳ್ಳೆಯ ಕೆಲ್ಸಕ್ಕೆ ಬಳಸು.

ನಮಸ್ಕಾರ,ಒಳ್ಳೆಯದಾಗಲಿ.

Amerikannadiga ಅಂತಾರೆ...

ಮಾಯ್ಸ ಅವರೆ. ನಿಮ್ಮ ಕನ್ನಡ ಪ್ರೇಮ ಮೆಚ್ಚಬೇಕಾದ್ದೇ. ಆದರೆ ಕನ್ನಡದ ಮಹಿಮೆ ಹೇಳೋದಕ್ಕಿ೦ತ ನೀವು ತುಳುವರನ್ನ ಕೀಳುಗಾಣಿಸೋದಕ್ಕೆ ಹೆಚ್ಚು ಒತ್ತು ಕೊಟ್ಟ ಹಾಗೆ ಕಾಣ್ಸತ್ತೆ. ನೀವು ಹೇಳಿದ್ದು ಸರಿ ಇರಬಹುದು ಆದರೆ ಬೇರೆಯವರ ವಾದವನ್ನು ಗಮನಿಸಿದರೆ ಉತ್ತಮ.
ಏನಾದ್ರು ಹೇಳಿ ಅದದೇ ಅ೦ದರೆ ನಿಮ್ಮ ವಾದದ ಔಚಿತ್ಯ ಕಳೆದುಹೋಗತ್ತೆ. ರಾಕೇಶ್ ಅವರು ತುಳುವನ್ನು ಮೆರೆಸಲು ಕನ್ನಡವನ್ನು ತಿಯ್ಯಾಟಕ್ಕೆ ಎಳೆಯುತ್ತಿದ್ದಾರೇನೊ ಅ೦ದಿರಿ. ದಯವಿಟ್ಟು ನೀವು ಬರೆದ ಧಾಟಿಯನ್ನು ಗಮನಿಸಿ.
ಮೌಖಿಕವಾಗಿ ಸಮೃದ್ಧವಾಗಿರುವ ತುಳು ಭಾಷೆಗೆ ಅಕಾಡೆಮಿ ಇದೆ. ಅದು ಭಾಷೆಗೋಸ್ಕರ ಇರೊ ಅಕಾಡೆಮಿ. ಬುಡಕಟ್ಟಿಗಲ್ಲ. ಭಾಷೆಗೋಸ್ಕರ ದುಡಿದವರಿಗೆ ಸಮ್ಮಾನವೂ ನಡೆಯುತ್ತದೆ. ಬೇರೆ ಭಾಷೆಗಳಿಗೆ ಅಕಾಡೆಮಿ ಸ್ಥಾಪಿಸೋದು ಸರ್ಕಾರದ ನಿರ್ಣಯ.
ತುಳು ಜನಸ೦ಖ್ಯೆ ದಕ್ಷಿಣ ಕನ್ನಡದ ಜನಸ೦ಖ್ಯೆ. ಕರ್ನಾಟಕದವರೆಲ್ಲರು ಕನ್ನಡಿಗರಲ್ಲವೆ? ಅದೇ ಥರ. ನಾನು ಮ೦ಗಳೂರಿನವನೆ. ಆದರೆ ನಾನು ನಿಮ್ಮಷ್ಟೇ ಕನ್ನಡಿಗ.
ನೀವು ಶುದ್ಧ ಕನ್ನಡದವರೆ ಇರಬಹುದು. ಹೆಮ್ಮೆ ಇರಬೇಕಾದ್ದೆ. ಆದರೆ ನೀವು ಗುರುತಿನ ಇಬ್ಬ೦ದಿಯಲ್ಲಿಲ್ಲ ಸರಿ. ಆದರೆ ಬೇರೆಯವರ ಮನಸ್ಸು ನೋಯಿಸುವುದು ಥರವಲ್ಲ. ಅಲ್ಲವೇ?
ನೀವು ಬರೆದ ವಿಷಯ ಇಷ್ಟವಾಯಿತು ಆದರೆ ಕೆಲವು ವಿಷಯಗಳ ಬಗ್ಗೆ ನನ್ನ ಅಭಿಪ್ರಾಯ ಅಷ್ಟೆ.

ಮಾಯ್ಸ ಅಂತಾರೆ...

ಮಾನ್ಯ ರಾಕೇಶ ಶೆಟ್ಟಿಯವರೆ,

ನನಗೆ ತುಳುವಿನ ಮೇಲೆ ಚೂರು ಮತ್ಸರವಿಲ್ಲ. ಮತ್ಸರ ಅಂದರೆ ಹೊಟ್ಟೆಕಿಚ್ಚು, ತುಳುವನ್ನು ಕಂಡು ಹೊಟ್ಟೆಕಿಚ್ಚು ಪಡಲು ಕಾರಣವಾದರೂ ಏನಿದೆ? ಸುಮ್ಮನೇ ವಿಷಯ ತಿಳಿಯದೆ ಹರಟ ಬೇಡಿರಿ.

ನಿಮಗೆ ಗೊತ್ತಿಲ್ಲದ ಮೇಲೆ, ಬಂದು ಯಾಕೆ ಮಾತಿಗಿಳಿಯುತ್ತೀರಿ. ನಿಮ್ಮ ವಾದಕ್ಕೆ "ಮನನೋವು" ಒಂದೇ ಆಧಾರ. ಏನಾದರು ವಿಷಯವಾಗಿ ಹೇಳಿದ್ದುಂಟೇ. ಅಸಂಬಧ್ಧ ಪ್ರಲಾಪ. ಬಹುಶಃ ನೀವೇ ಕರೆದು ಕೆಲವರ ಕೈಲ್ಲಿ, ಅದೇ "ಮನನೋವು" ಕಮೆಂಟು ಹಾಕಿಸಿಕೊಂಡು ಬಲ ತೋರಿಸೆಳಸಿರಬೇಕು; ಇದು ಊಹೆ.

ತುಳುವನ್ನಾಗಲಿ, ತುಳು ಜನಾಂಗೀಯರನ್ನಾಗಲಿ ನಾನು ಕೀಳುಗಳೆದಿಲ್ಲ. ಬರೀ ಆ ಬರಹದಲ್ಲಿರುವ ದೋಷಗಳನ್ನು ಹೇಳಿದ್ದೀನಿ. ಇದು ಹೇಗೆ ದುರಭಿಮಾನ? ಆ ಬರಹದ ದೋಷಗಳ ಪಟ್ಟೆ ಕೊಡಲ್ಪಟ್ಟಿದೆಯಲ್ಲ. ೨೦ ಲಕ್ಷ ಇರುವವರನ್ನು ೫೦ ಲಕ್ಷ ಎಂದರೆ, ತುಳುವಿನಲ್ಲಿ ಕನ್ನಡದಷ್ಟೇ ಸಾಹಿತ್ಯವಿದೆ ಎಂದು ಸುಳ್ಳು ಹೇಳಿದರೆ, ಅದನ್ನು ಸುಳ್ಳೆಂದು ತೋರಿಸಿದ್ದೀನಿ. ಒಂದು ವೇಳೇ ದಿಟವಾಗಲೂ ೫೦ ಲಕ್ಷ ತುಳು ಜನಾಂಗೀಯರಿದ್ದರೆ, ಇಲ್ಲವೇ ಕನ್ನಡ ಸಾಹಿತ್ಯದಷ್ಟು ತುಳು ಸಾಹಿತ್ಯವಿದ್ದರೆ ತೋರಿಸಿರಿ, ನಮ್ಮ ಜ್ಞಾನವೃದ್ಧಿಗೆ ಪಾತ್ರರಾಗಿರಿ.

ತುಳುವಿನಲ್ಲಿ ಕನ್ನಡ, ತಮಿಳು, ಮಳಯಾಳಂ, ತೆಲುಗು, ಮರಾಠಿಯ ಗಣನೀಯವಾದ ಪ್ರಮಾಣ ಸಾಹಿತ್ಯವಾಗಲಿ, ಮೌಖಿಕ ಸಾಹಿತ್ಯವಾಗಲಿ ಇಲ್ಲ. ಇದಕ್ಕೆ Britannica ಓದಿ ಪುರಾವೆ ಸಿಗುವುದು.

ಇನ್ನು ಕರ‍್ನಾಟಕ ಏಕೀಕರಣ ನಡೆದುದು ಕನ್ನಡದ ಆಧಾರದಲ್ಲಿ, ಅದಕ್ಕೂ ತುಳುವಿಗೂ ನನಗೆ ನಂಟು ಕಾಣದು. ಅಲ್ಲಿ ಕನ್ನಡಿಗರು ಒಂದಾದುದು. ತುಳುವರು ಬಂದು ಸೇರಿರುವುದು ಬಹು ಸಂತೋಷ, ಆದರೆ ಅದು ಉಪಕಾರವಲ್ಲ! ತುಳುವರು ಕನ್ನಡ ಮಾತಾಡಿದರೆ ಸಂತೋಷದ ವಿಷಯ, ಹೊಗಳತಕ್ಕದ್ದು ಆದರೆ ಅದು ಕನ್ನಡಕ್ಕೆ ಉಪಕಾರವೆಂದು ಋಣ ಇಟ್ಟುಕೊಳ್ಳವಂತಹದ್ದಲ್ಲ. ಋಣಕ್ಕೂ ಸಂತೋಷಕ್ಕೆ ವ್ಯತ್ಯಾಸವಿದೆ. ಕನ್ನಡಿಗರಾದ ನಮಗೆ ತುಳುವರ ಬಗ್ಗೆ ಸಂತೋಷವಿದೆ, ಋಣವಿಲ್ಲ!

ಇನ್ನು ಮಂಗಳೂರಿಗಿಂತ ಕುಡ್ಲ ಹಳೆಯ ಪದವೆಂದು ಸಾಧಿಸಿರಿ. ನೀವು ಹೇಳುವಂತೆ ತುಳು ಹೆಸರುಗಳು ಮೂಲ, ಕನ್ನಡ ಹೆಸರುಗಳು ತರ್ಜುಮೆ ಎಂಬುದಕ್ಕೆ ಪುರಾವೆ ಏನು? ಸಿಗುವ ಸಕಲ ಶಾಸನಗಳೂ ಮಂಗಳೂರು, ಮಂಗಳಾಪುರ ಎಂದೇ ಕಡೆಯುವುದು; ಸಂಗೊಳ್ಳಿ -> ಸಾಂಗ್ಲಿ, ಅಕ್ಕಲಕೋಟೆ -> ಅಕ್ಕಲ್ ಕೋಟ್, ಸೊಲ್ಲಾಪುರ->ಸೋಲಾಪುರ‍್ ಇದಕ್ಕೆಲ್ಲ ಶಾಸನಗಳು ಕನ್ನಡ ಪದವೇ ಮೂಲ ಎಂದು ಪುರಾವೆ ತೋರುವ ಹಾಗೆ. ಇನ್ನು ಕುಡ್ಲ, ಕಡಲು ಪದದ ಇನ್ನು ರೂಪ ಎಂಬ ಮಾತಿದೆ.

ಇನ್ನು ತಮ್ಮ ವಿಷಯಗ್ರಾಹ್ಯಮಿತಿಯಿಂದ ಆದ ಇನ್ನೊಂದು ಜಾತಿವಾದಿ ಎಂಬ ತೆಗಳಾಟ.

ನಾನು ಬರೆದುದು


ಕುರುಬಕನ್ನಡ ಅನ್ನುವುದು ಕನ್ನಡ ಒಂದು ಕವಲುನುಡಿ. ಒಂದು ವಿಶೇಷ ಬಗೆ. ಅದರ ಬಗ್ಗೆ ಬೇಕಾದಷ್ಟು ಸಂಶೋಧನೆಗಳು ನಡೆದಿವದೆ. ಜೇನುಕುರುಬ, ಹಾಲುಕುರುಬ, ನೀಲಗಿರಿ ಕುರುಂಬ ಹೀಗೆ ಇವರೂ ತುಳುವರ ಹಾಗೇ ಕನ್ನಡನೆಲದವರೇ, ಕನ್ನಡದ ಕವಲಾದ ಕುರುಬಕನ್ನಡ ಮಾತಾಡುವವರು. ಹೀಗೆ ಸೋಲಿಗರು, ಹಾಲಕ್ಕಿಯವರು, ಬಡಗರು ವಿಶೇಷವಾದ ಕನ್ನಡದ ಕವಲುಗಳನ್ನು ಆಡುವವರು. ಅದರ ಅಧ್ಯಯನಕ್ಕೆ ಅಕಾಡೆಮೆ ಎಲ್ಲಿ? ಕುರುಬಕನ್ನಡಿಗರು ೧೨% ಇದ್ದಾರೆ. ವಿವರಣೆ!

<"ಕಡೆದಾಗಿ ಒಂದು ಮಾತು.ನೀನು ಬಹಳಷ್ಟು ವಿಷಯಗಳನ್ನ ತಿಳಿದಿದ್ದಿಯ,ನಿನಗೆ ಒಳ್ಳೆ ಓದು ಇದೆ ಅಂತ ಗೊತ್ತು.ಆದ್ರೆ ಅದನ್ನ ಆದರೆ ಒಳ್ಳೆಯ ಕೆಲ್ಸಕ್ಕೆ ಬಳಸು.">
ಅದನ್ನೇ ಮಾಡುತ್ತಿದ್ದೇನೆ. ತಾವು ಸಹ ತಮ್ಮ ಗ್ರಹಣ, ಜ್ಞಾನ ಹಾಗು ವಿಚಾರಶಕ್ತಿಯ ಮಿತಿ ಹಿಗ್ಗಿಸಲೆತ್ನಿಸಲು ಶ್ರಮಿಸಿ, ವಿಷಯಸಂಪನ್ನರಾಗಿ ಮಾತಾಡಿರಿ.

ಹಾಸನದವದ ಕಡೆ ಯಾರೂ ಅಪರಿಚಿರತರನ್ನು ಏಕವಚನದಲ್ಲಿ ಸಂಭೋದಿಸುವ ಪರಿ ಇಟ್ಟುಕೊಂಡಿಲ್ಲ. ಅಲ್ಲಿ ಏಕವಚನ ಪ್ರಯೋಗ ಅಸಭ್ಯತೆ! ಇನ್ನು ತುಳುವಿನ ಬಗ್ಗೆ ನನ್ನ ಖಳನಾಯಕನ ಹಾಗಿ ತೋರಿಸಲು ಇಲ್ಲ ಸಲ್ಲದ ಹೇಳಿ, ತೆಗಳುತ್ತಿದ್ದೀರಿ.

ಮಿತಿಜ್ಞಾನದಿಂದ ಏಕವಚನಸಂಬೋಧನೆ, "ದುರಭಿಮಾನಿ" ಮುಂತಾದ ಜರೆ ಬಳಸಿ ಅಸಭ್ಯವಚನ ನಡೆಸಬೇಡಿರಿ.

ನೀವು ಮತ್ತೆ ಬಂದು ಬರೆದು ಅದಕ್ಕೆ ನಾನು ಮರುಬರೆಯದಿದ್ದರೆ, ಆ ನಿಮ್ಮ ಬರೆತ, ಸ್ಪಂದಿಸಯೋಗ್ಯವಲ್ಲ ಎಂದೇ.

ನನ್ನ ಮೇಲೆಯ ವೃಥಾರೋಪಿಸಿದ ಅಪಾದನಾನೀವಾರಣ ಕಾರಣವಾಗಿ ಇಷ್ಟು ಬರೆಯಬೇಕಾಗಿತು.

ನಾನು ಯಾರ ಮನಸ್ಸು ನೋಯಿಸಲು ಬಯಸುವುದಿಲ್ಲ, ಹಾಗೆಂದು ಮಾತುಗೆ ಮುಂಚೆ ಮನನೊಂದುಕೊಂಡರೆ, ಹೇಳಬೇಕಾದ ದಿಟವನ್ನು ಹೇಳದೇ "ಕನ್ನಡಿಗ ದಬ್ಬಾಳಿಕೆ, ದುರಭಿಮಾನ" ಎಂಬ ಮಾನಹಾನಿಯನ್ನು ಸಹಿಸುವುದಿಲ್ಲ.

ನಲವು
-ಮಾಯ್ಸ

ರಾಕೇಶ್ ಶೆಟ್ಟಿ ಅಂತಾರೆ...

ತಾವು ನನ್ನ ಮೊದಲ್ನೇ ಕಮೆಂಟಿನ ಮೊದಲ ಸಾಲನ್ನು ಮತ್ತೊಮ್ಮೆ ಓದಿ, ನಾನು ಲೇಖನದ ಕೆಲ ಅಂಶಗಳನ್ನು ಒಪ್ಪುವುದಿಲ್ಲ.ಆದರೆ ಕನ್ನಡ ತುಳುವಿಗಿಂತ ಮೊದಲೇ ಅಲ್ಲಿತ್ತು ಅನ್ನೋ ಕಾರಣಕ್ಕೆ ಈಗ ಅಲ್ಲಿ ಬಳಕೆಯಲ್ಲಿರುವ ತುಳು ಶಬ್ದಗಳು ಕನ್ನದಮಯವಾಗಬೇಕಿಲ್ಲ ಅನ್ನುವುದು ನನ್ನ ಧೋರಣೆ.

>> ನಾನು ತುಳುವನ್ನಾಗಲಿ ತುಳುವರನ್ನಾಗಲಿ ಕೀಳುಗಾಣಿಸುವ ಒಂದಕ್ಕರವನ್ನು ಬರೆದಿಲ್ಲ. ಬರೆದಿರುವುದು ಈ ಬರಹದಂತಹದ್ದನ್ನು ಬರೆದು ಸೌಹಾರ್ದವಾಗಿರುವ ತುಳು+ಕನ್ನಡರಲ್ಲಿ ಇಲ್ಲ ತಿಕ್ಕಾಟ ಹಚ್ಚವವರರ ಬಗ್ಗೆ.
ನನ್ನ ಮಾತಿಲ್ಲಿ ಒಂದೆಡೆ ತುಳು ಬಗ್ಗೆ ಇಲ್ಲವೇ ತುಳುವ ಜನಾಂಗಿಯರ ಬಗ್ಗೆ ಕೀಳಾಡಿರಲು ಸಾಧ್ಯವೇ ಇಲ್ಲ ಯಾಕೆಂದರೆ ನಾನು ಯಾವ ದ್ರಾವಿಡ ನುಡಿಯನ್ನು ಎಂದೂ ಕೀಳುನೋಡಿಲ್ಲ. ಆದರೆ ಕನ್ನಡದ ಬಗ್ಗೆ ಇಲ್ಲದ ಆರೋಪ ಮಾಡುವವರ, ನಟನೆ ಮಾಡುವವರ, ಸೋಗು ಹಾಕುವವರ ಬಗ್ಗೆ ನನ್ನ ಜತೆ ಕೆಲವರು ದನಿಗೂಡಿಸಿದ್ದರೆ.ನನಗೆ ತುಳುವಿನ ಮೇಲೆ ಚೂರು ಮತ್ಸರವಿಲ್ಲ. ಮತ್ಸರ ಅಂದರೆ ಹೊಟ್ಟೆಕಿಚ್ಚು, ತುಳುವನ್ನು ಕಂಡು ಹೊಟ್ಟೆಕಿಚ್ಚು ಪಡಲು ಕಾರಣವಾದರೂ ಏನಿದೆ? ಸುಮ್ಮನೇ ವಿಷಯ ತಿಳಿಯದೆ ಹರಟ ಬೇಡಿರಿ.

ಮತ್ತೂಮ್ಮೆ ತಾವು ಬರೆದಿದ್ದನ್ನ್ನುಓದಿ ,ಮತ್ತೆ ಅದಕ್ಕೆ ದನಿಗೂಡಿಸಿ ಹೌದಾ ನಮಗಿದು ಗೊತ್ತೇ ಇರಲಿಲ್ಲಾ ಎಂದ ಮುಗ್ದರು,ಹಾಗೆ ತುಳುವರು ಅಂದರೆ ಯಾರೋ ಕಿತ್ತೋಗಿರೋ ಸಿನೆಮ ಮಂದಿಯವರನ್ನೆಲ್ಲ ಉದಾಹರಿಸೋ ಚೆಲುವ ಅವ್ರು? ಇದೆಲ್ಲಾ ಏನು? ಇದೆಲ್ಲ ಕಂದಕ ಸೃಷ್ಟಿಗೆ ಕಾರಣವಾಗುತ್ತದೆ ಅಷ್ಟೇ.

ಇನ್ನ ತುಳುವರ ಬಗ್ಗೆ ತಮಗೆ ಏನು ಇಲ್ಲ ಎಂದಿರಿ ,ತಮ್ಮ 'ಉಟ್ಟು ಕನ್ನಡಿಗ' ಅಭಿಮಾನಕ್ಕೆ ನಮ್ಮ ಬಳಿ ಪುರಾವೆಯಿದೆ.ನೋಡಿ ಕೊಳ್ಳಿ ಇಲ್ಲಿ ತಮ್ಮ ಬರಹಗಳಲ್ಲಿ ಯಾವ ದನಿಯಿದೆ ಎಂದು ಓದಿದವರಿಗೆ ಅರ್ಥವಾಗುವುದು. ಅಲ್ಲಿ ತಮ್ಮ ಒಂದು ಕಮೆಂಟಿನಲ್ಲಿ ಹೀಗೆ ಬರೆದಿದ್ದಿರಾ,ಅದೇ ತಮ್ಮ ಪ್ರೀತಿಯನ್ನ ತೋರಿಸುತ್ತದೆ ನೋಡೋಣವಾಗಲಿ
"ಸೀರಿಯಸ್ಸಾಗಿ,

ನಾನು ತುಳು, ಕೊಡವ ಹಾಗು ಕೊಂಕಣಿ ರಾಜ್ಯಗಳೆಂಬ ಕರ್ನಾಟಕದಿಂದ ಬೇರ್‍ಪಟ್ಟ ರಾಜ್ಯಗಳ ಸ್ಥಾಪನೆಗೆ ಬೆಂಬಲಿಗ.! ಆಗಲಾದ್ರೂ ಕರ್ನಾಟಕ, ಕನ್ನಡ ನಾಡಾಗುವುದು! ಹರವಿಗಿಂತ ತಿರುಳು ದೊಡ್ಡದು, ಮುಖ್ಯ!"
http://sampada.net/blog/msprasad/28/06/2009/22037

ರಾಕೇಶ್ ಶೆಟ್ಟಿ ಅಂತಾರೆ...

>> ಮಾನ್ಯ ರಾಕೇಶ ಶೆಟ್ಟಿಯವರ ಏಕವಚನ ಪ್ರಯೋಗ ತುಳುಸಂಸ್ಕೃತಿಯೇ ಮಾನ್ಯ Amerikannadiga ? ಇಲ್ಲ ರಾಕೇಶ ಶೆಟ್ಟಿ ನಿಮ್ಮ ನೆಂಟರೇ?
ತಮ್ಮ ಭಾಷೆಯ ಬಗ್ಗೆ ಹೇಳಿಕೊಳ್ಳುವ ನೆಪದಲ್ಲಿ, ತಾವೇ ದೊಡ್ಡವರು ಉಳಿದವರೆಲ್ಲ ಚಿಕ್ಕವರು ಎಂದು ಹೇಳಿಕೊಳ್ಳುವುದು ಕನ್ನಡ ಸಂಸ್ಕೃತಿಯೇ? , ಇನ್ನ ಏಕವಚನ ಪ್ರಯೋಗದ ಬಗ್ಗೆ ಹೇಳುವುದಾದರೆ, ಹೀಗೆ ತಮ್ಮ ಭಾಷಾಭಿಮಾನದ(?) ಬಗ್ಗೆ ತಮ್ಮೊಂದಿಗೆ ನಾನು ವಾದಕ್ಕಿಳಿದಿರುವುದು ಇದೆ ಮೊದಲೇನಲ್ಲ.ಮೊದಲು ನಾನು ನಿನ್ನನ್ನು ಸಂಬ್ಹೊಂದಿಸುತ್ತ ಬಂದಿರುವು ಏಕವಚನದಲ್ಲೇ.ಈಗ ತಮಗೆ ನಾನು ಯಾರು ಎಂದು ಮರೆತು ಹೋಗಿರಬಹುದು ಆದರೆ ನನಗೆ ಮರೆಯುವ ಅಭ್ಯಾಸವಿಲ್ಲವಾದ್ದರಿಂದ ಹಾಗೆಯೇ ಮುಂದುವರೆಸುತಿದ್ದೇನೆ.

>> ಕರ‍್ನಾಟಕದಲ್ಲಿರುವವರೆಲ್ಲ ಕನ್ನಡಿಗರೆಂದು ಏನ್ಗುರುವಿನ ಬರಹಗಳಂತೂ ಹೇಳಲ್ಲ!
ನಾನು ಕನ್ನಡಿಗ ಅಂತ ಹೇಳಿಕೊಳ್ಳಲು ಯಾರಿಗೂ ಯಾರು certification ಕೊಡಬೇಕಾದ ಅವಶ್ಯಕತೆಯಿಲ್ಲ.ಸಂ ಸುಮ್ನೆ ನೀನ್ ಮಾತಾಡೋ ಮಾತಿಗೆ 'ಏನ್ಗುರು' ಏಕೆ ಮಧ್ಯದಲ್ಲಿ ತರುವುದು?

>>ಇನ್ನು ಕರ‍್ನಾಟಕ ಏಕೀಕರಣ ನಡೆದುದು ಕನ್ನಡದ ಆಧಾರದಲ್ಲಿ, ಅದಕ್ಕೂ ತುಳುವಿಗೂ ನನಗೆ ನಂಟು ಕಾಣದು. ಅಲ್ಲಿ ಕನ್ನಡಿಗರು ಒಂದಾದುದು. ತುಳುವರು ಬಂದು ಸೇರಿರುವುದು ಬಹು ಸಂತೋಷ, ಆದರೆ ಅದು ಉಪಕಾರವಲ್ಲ! ತುಳುವರು ಕನ್ನಡ ಮಾತಾಡಿದರೆ ಸಂತೋಷದ ವಿಷಯ, ಹೊಗಳತಕ್ಕದ್ದು ಆದರೆ ಅದು ಕನ್ನಡಕ್ಕೆ ಉಪಕಾರವೆಂದು ಋಣ ಇಟ್ಟುಕೊಳ್ಳವಂತಹದ್ದಲ್ಲ. ಋಣಕ್ಕೂ ಸಂತೋಷಕ್ಕೆ ವ್ಯತ್ಯಾಸವಿದೆ. ಕನ್ನಡಿಗರಾದ ನಮಗೆ ತುಳುವರ ಬಗ್ಗೆ ಸಂತೋಷವಿದೆ, ಋಣವಿಲ್ಲ!

ನಮಗೂ ಅಷ್ಟೇ ಕನ್ನಡ,ಕನ್ನಡಿಗರ ಬಗ್ಗೆ ಅಭಿಮಾನವಿದೆ.ಋಣವಿಲ್ಲ! ಯಾರು ಯಾರ ಋಣದಲ್ಲಿ ಇರಬೇಕಾಗಿಲ್ಲ.ಪರಸ್ಪರ ಗೌರವ ಕೊಟ್ಟರೆ ಸಾಕು.ಯಾವುದೋ ಒಂದು ಭಾಷೆ ಕಾಲಾಂತರದಲ್ಲಿ ನಶಿಸಿಯು ಹೋಗಬಹುದು ಬಲಾಡ್ಯವು ಆಗಬಹುದು ಹಾಗಂತ ಅದು ನಶಿಸಿ ಹೋಗುತ್ತಿರುವ ಭಾಷೆಯ ಮೇಲೆ ಸವಾರಿ ಮಾಡಬಹುದು ಅನ್ನುವುದನ್ನು ಒಪ್ಪಲು ಸಾಧ್ಯವಿಲ್ಲ.

>> ಇನ್ನು ಮಂಗಳೂರಿಗಿಂತ ಕುಡ್ಲ ಹಳೆಯ ಪದವೆಂದು ಸಾಧಿಸಿರಿ. ನೀವು ಹೇಳುವಂತೆ ತುಳು ಹೆಸರುಗಳು ಮೂಲ, ಕನ್ನಡ ಹೆಸರುಗಳು ತರ್ಜುಮೆ ಎಂಬುದಕ್ಕೆ ಪುರಾವೆ ಏನು? ಸಿಗುವ ಸಕಲ ಶಾಸನಗಳೂ ಮಂಗಳೂರು, ಮಂಗಳಾಪುರ ಎಂದೇ ಕಡೆಯುವುದು; ಸಂಗೊಳ್ಳಿ -> ಸಾಂಗ್ಲಿ, ಅಕ್ಕಲಕೋಟೆ -> ಅಕ್ಕಲ್ ಕೋಟ್, ಸೊಲ್ಲಾಪುರ->ಸೋಲಾಪುರ‍್ ಇದಕ್ಕೆಲ್ಲ ಶಾಸನಗಳು ಕನ್ನಡ ಪದವೇ ಮೂಲ ಎಂದು ಪುರಾವೆ ತೋರುವ ಹಾಗೆ. ಇನ್ನು ಕುಡ್ಲ, ಕಡಲು ಪದದ ಇನ್ನು ರೂಪ ಎಂಬ ಮಾತಿದೆ.

ನೋಡಿ ಮಿ!ಮಾಯ್ಸ ಮೊದಲು ಅಲ್ಲಿ ಕನ್ನಡವೇ ಇತ್ತು ಅನ್ನೋದನ್ನ ಒಪ್ಪುವ.ಆದರೆ ಈಗ ಅಲ್ಲಿನ ಜನರ ಆಡುಭಾಷೆಯಲ್ಲಿರುವ ಪದವನ್ನ ಯಾಕೆ ಬದಲಾಯಿಸಬೇಕು ಅನ್ನೋದು ಪ್ರಶ್ನೆ?, ಇತಿಹಾಸದ ಗೋರಿಯ ಮೇಲೆ ಸೌಹಾರ್ದದ ಸೌಧ ಕಟ್ಟಬೇಕೆ ಹೊರತು, ಗೊರಿಯನ್ನೇ ಕಟ್ಟಬಾರದು.

ಇನ್ನ ನನ್ನ ಪ್ರತಿಕ್ರಿಯೆಗೆ 'ಮನ ನೋವೆ'ಕಾರಣ ಅಂದಿರಿ.ನಿಜ ಅದೇ ಕಾರಣ.ಹುಟ್ಟಿನಿಂದ ಇಂದಿನವರೆಗೂ ನಮಗೆಂದು ಕನ್ನಡ ಪರಕೀಯ ಅನ್ನಿಸಿಯೇ ಇಲ್ಲ, ಎಗ್ಗ ಯಾವನೋ ಒಬ್ಬ ಬಂದು ಮಾತಾಡಿದರೆ ಇನ್ನೇನಾಗುತ್ತದೆ?
ಈ ವಿಷಯದ ಬಗ್ಗೆ ಇಷ್ಟು ಸಾಕು ಅನ್ನಿಸುತ್ತದೆ.ಕಡೆಯದಾಗಿ ಮತ್ತೆ ಅದೇ ಮಾತನ್ನು ಹೇಳುತ್ತೇನೆ,

'ಅತಿಯಾದರೆ ಅಮೃತ ಕೂಡ ವಿಷ' , ಈ ಮಾತು ಆ ವರದಿ ಬರೆದವನಿಗೂ ಹಾಗೆ ತಮಗೂ ಅನ್ವಯವಾಗುತ್ತದೆ.

@ಏನ್ಗುರು
ಈ ವಾದ ಸರಣಿ,ಒಂದು ತುದಿಯಲ್ಲಿರುವ ಈ ಕನ್ನಡಾಭಿಮಾನಿಯಂತೆ ಮತ್ತೊಂದು ತುದಿಯಲ್ಲಿರುವ ತುಳು ನಾಡು ಬೇಕು ಅನ್ನುವವರು ಓದಿದರೆ ಅವರ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ.ಮತ್ತೆ ಅದನ್ನ ಅವರು ಉಳಿದವರ ಮೇಲು ಸುಲಭವಾಗಿ ಹೇರಲು ಸಾಧ್ಯವಿದೆ.ಭಾರತದ ಇತಿಹಾಸದಲ್ಲಿ ಜಾಸ್ತಿ ಓದಿಕೊಂಡ ಮಹಾನುಭಾವನೋಬ್ಬನ ಮಾತುಗಳೇ ಪಾಕಿಸ್ತಾನ ಜನನಕ್ಕೆ ಕಾರಣವಾಗಿದ್ದು ನೆನಪಿರಲಿ.ಆದರಿಂದ ಇಂತ ಪ್ರತಿಕ್ರಿಯೆಗಳನ್ನ ಅಳಿಸಿ ಹಾಕಿದರೆ ಒಳ್ಳೆಯದು.

ನಮಸ್ಕಾರ

ರಾಕೇಶ್ ಶೆಟ್ಟಿ ಅಂತಾರೆ...

@ಬಡವರವಾದಿ

ತಾವು ಕನ್ನಡ ಕಲಿತು ಏನ್ ಮಾಡಿದ್ರಿ? ಮಾಡ್ತಾ ಇದ್ದಿರೋ ಅದನ್ನೇ ತುಳು ಕಲಿತವರು ಮಾಡ್ತಾರೆ.
ಕರ್ನಾಟಕದಲ್ಲಿ ಕನ್ನಡಕ್ಕೆ ಕೊಡು ಬೆಳೆಯನ್ನೇ ಈ ನೆಲದ ಅನ್ಯ ಭಾಷೆಗಳಿಗೆ ಕೊಡುವುದನ್ನ ಕಲಿಯಿರಿ ಮೊದಲು.

k.mahendranath salethoor.M.A ಅಂತಾರೆ...

pancha dravida bhashegalalli dakshinathyadalli kannadadashte prabhalyate tuluvigide ,adre tuluvina likhita kavya korateyanne mundittukondu tuluvannu allagaleyuvudu sariyalla.thuluvinalliddashtu kavyamaya sandhi pad danagalu janapadeeya,maukhika sahitya kannadakkintha bhinnavagive kevala oorannu mundittu,katte baavi yendu heluvudakkintha aradhana samskritiya jeevaalada tulunadina identity-ananyateyannu gamanisi.ashte alla kannadadalli pampana kavyavagali,arebhattana shasanavagali,halmidiyagali thuluvalli sigadirabahudu .adare tuluvaru moola nivasigaralla,avaru valasigaru yembudakke neevu sakashtu adhara needabeku .kevala adhara ide yendiddeeri .aa adharavannu illi samarthisi.yavude bhasheyalli kodukoluvike samanya .kannadadalloo marati urdu angla ,arabic,hindi bhasheya kodukoluvike iruvaga thuluvalliddare tappenu? kevala oora hesarinindale ondu samskritiyannu aleyalu sadhyavilla

ಮಾಯ್ಸ ಅಂತಾರೆ...

"pancha dravida bhashegalalli dakshinathyadalli kannadadashte prabhalyate tuluvigide ,adre tuluvina likhita kavya korateyanne mundittukondu tuluvannu allagaleyuvudu sariyalla."

ನೋಡಿ. ನಾನು ಕೇವಲ ಒಂದು ಅಕೆಡೆಮಿಕ್ ವಾದ ಮುಂದಿಟ್ಟಿದ್ದೇನೆ. ಸಾವಧಾನವಾಗಿ ನನ್ನ ಅನಿಸಿಕೆ ಹಾಗು ಅರಿಕೆಯನ್ನು ಗ್ರಹಿಸಿರಿ. "ಪಂಚ ದ್ರಾವಿಡ" ದಾಕ್ಷಿಣಾತ್ಯ ಬ್ರಾಹ್ಮಣ ಪಂಗಡಗಳ ಕುರಿತು ಬಳಕೆಯಾಗಿದೆ ಹೊರತು ನುಡಿಗಳ ಬಗ್ಗೆ ಅಲ್ಲ.

कर्णाटकाश्च तैलङ्गा द्राविडा महाराष्ट्रकाः,
गुर्जराश्चेति पञ्चैव द्राविडा विन्ध्यदक्षिणे ||
सारस्वताः कान्यकुब्जा गौडा उत्कलमैथिलाः,
पञ्चगौडा इति ख्याता विन्ध्स्योत्तरवासिनः ||

ಕಲ್ಹಣನ ರಾಜತರಂಗಿಣಿಯ ಶ್ಲೋಕವಿದು. http://www.vedah.net/manasanskriti/Brahmins.html#Major_Brahmin_Castes


ಗಮನಿಸಿ ದಯವಿಟ್ಟು, ಗುಜರಾತ ಹಾಗು ಮಹಾರಾಷ್ಟ್ರ ಕೂಡ 'ಪಂಚ-ದ್ರಾವಿಡ'ದಲ್ಲಿ ಬರುವುದು. ಮಲಯಾಳಂ ನುಡಿಯನ್ನೂ ಕೂಡ ಆ ಮೂಲ ಹೆಸರಿಸುವುದಿಲ್ಲ. ದಯವಿಟ್ಟು ಯಾವ ಕಾವ್ಯ, ಇಲ್ಲವೇ ಶಾಸನ 'ಪಂಚ ದ್ರಾವಿಡ' ನುಡಿಗಳ ಬಗ್ಗೆ ಹೇಳುವುದು ತಿಳಿಸಿ. ಇದೊಂದು ಅಕೆಡೆಮಿಕ್ ಕೋರಿಕೆ.

"thuluvinalliddashtu kavyamaya sandhi pad danagalu janapadeeya,maukhika sahitya kannadakkintha bhinnavagive kevala oorannu mundittu,katte baavi yendu heluvudakkintha aradhana samskritiya jeevaalada tulunadina identity-ananyateyannu gamanisi."

ಒಂದು ಊರಿಗೆ ಹಲ-ಹೆಸರುಗಳು ಇರುವುದು ಸಾಮಾನ್ಯ. ತುಳುವಿನಲ್ಲಿ ಒಂದು ಹೆಸರು ಇರುವ ಹಾಗೆ ಕನ್ನಡದಲ್ಲೂ ಹೆಸರುಗಳು ಇರಬಹುದಲ್ಲ. ಕನ್ನಡ-ದಲ್ಲಿ ಬರೆದಾಗ ಕನ್ನಡದಲ್ಲಿರುವಂತೆ ಬರೆಯುವುದು ತಾನೇ. ಉದಾಹರಣೆಗೆ 'ಹೊಸೂರು' ಕನ್ನಡದಲ್ಲಿ, 'ಒಚೂರು' ತಮಿಳಲ್ಲಿ. ಇನ್ನೊಂದು 'ದೆಹಲಿ' ಕನ್ನಡಲ್ಲಿ, 'ದಿಲ್ಲಿ' ಹಿಂದಿಯಲ್ಲಿ ಹಾಗು 'Delhi'/'ಡೆಲಿ' ಇಂಗ್ಲೀಶಲ್ಲಿ. ಸರಕಾರೀ ಬೋರ್ಡುಗಳು ಕನ್ನಡಲ್ಲಿ ಇದ್ದಾರೆ ಕನ್ನಡ ಹೆಸರುಗಳು.

ಇನ್ನು ತುಳುವಿನಲ್ಲಿ ಕೇವಲ ಮೌಖಿಕ ಸಾಹಿತ್ಯವಿದ್ದು, ಗ್ರಾಂಥಿಕ ವಿರಳ ಎಂಬುದು ಪಂಡಿತರ ಅನಿಸಿಕೆ.

"ashte alla kannadadalli pampana kavyavagali,arebhattana shasanavagali,halmidiyagali thuluvalli sigadirabahudu .adare tuluvaru moola nivasigaralla,avaru valasigaru yembudakke neevu sakashtu adhara needabeku .kevala adhara ide yendiddeeri aa adharavannu illi samarthisi."

ತುಳುವು, ತೆಲುಗು ಮತ್ತು ಕೊಂಡದಂತಹ ನುಡುದ್ರಾವಿಡ central-dravidian ನುಡಿಗಳಿಗೆ ಹೋಲುವುದೇ ಹೊರತು, ಕನ್ನಡ ಮತ್ತು ತಮಿಳಿನಂತಹ ತೆಂಕಣದ್ರಾವಿಡನುಡಿಗಳಿಗಲ್ಲವಂತೆ. ಹೆಚ್ಚಿನ ತುಳುವರು ನಮ್ಮ ನೆಲಕ್ಕೆ ತಮಿಳು ಮಂದಿ ವಲಸೆ ಬಂದ ಹಾಗೆ ತೋಟದ ಕೆಲಸಗಾರರು, ಗದ್ದೆ ಕೆಲಸಗಾರರಂತೆ. ಇಂದಿಗೂ ತುಳುವರು ತುಳುನಾಡಿನ ಮೂಲ ನಿವಾಸಿಗಳು ಎಂದು ಸಾಬೀತಾಗಿಲ್ಲ.

ಹಾಗೆ ಅವರು ವಲಸೆ ಬಂದವರು ಎಂದೂ ಸಾಬೀತಾಗಿಲ್ಲ. ಆ 'ವಲಸೆ' ಊಹೆಗೆ ತುಳು ತನ್ನ ಅಕ್ಕ ಪಕ್ಕದ 'ದಕ್ಷಿಣ ದ್ರಾವಿಡ' ನುಡಿ ಕುಟುಂಬಕ್ಕೆ ಸೇರದೆ, 'ನುಡು ದ್ರಾವಿಡ' ನುಡಿ ಕುಟುಂಬಕ್ಕೆ ಹತ್ತಿರವಾಗಿರುವುದು ಭಾಷಾವಿಜ್ಞಾನದಂತೆ.

".yavude bhasheyalli kodukoluvike samanya .kannadadalloo marati urdu angla ,arabic,hindi bhasheya kodukoluvike iruvaga thuluvalliddare tappenu? kevala oora hesarinindale ondu samskritiyannu aleyalu sadhyavilla""

ಊರಿನ ಹೆಸರುಗಳು ಅಷ್ಟು ಮುಖ್ಯವಾಗಿರದಿದ್ದರೆ, ಆ ಇಡೀ ಬರಹದ ಹುರುಳು ಮುಖ್ಯವಲ್ಲ ತಾನೇ?! ತುಳುವಿನಲ್ಲಿ ಎರವಲುಪದಗಳಿವೆ ಎಂದು ಒಪ್ಪಿದ ಮೇಲೆ, ಕಟ್ಟೆ ಮುಂತಾದವು ಕೇವಲ ತುಳುಮೂಲದ್ದು ಎಂದು ಆ ಬರಹದ ಎಸಕರು ಹೇಳಿರುವುದು ವಿವಾದ ಹಾಗು ಅದಕ್ಕೆ ಪ್ರತಿವಾದ

ತುಳು ನುಡಿಗರು ಇರುವ ನೆಲ ಮೂಲ ನಿವಾಸಿಗಳೂ ಕನ್ನಡಿಗರೂ ಕೂಡ ತಾನೇ. ಅದಕ್ಕೆ ಆಧಾರ ಆ ಪ್ರದೇಶದಲ್ಲಿ ಹೇರಳವಾಗಿ ಸಿಗುವ ಶಾಸನಗಳು, ಕನ್ನಡ-ನುಡಿಗರು ಮುಂತಾದವು.!

"ತುಳು ಸ್ಥಳ ನಾಮಗಳ ಮೇಲೆ ಕನ್ನಡ ದಬ್ಬಾಳಿಕೆ" ಅಂದರೆ ಅರ್ಥವೇನು? ಅದಕ್ಕೆ ಆ ಬರಹದಲ್ಲಿ ನೀಡಿದ ಕಾರಣಗಳು ಸೂಕ್ತವಲ್ಲ ಎಂದಷ್ಟೇ ಮಾತಿಲ್ಲಿ.

Prashanth shetty ಅಂತಾರೆ...

ಸ್ವಾಮಿ ಮಾಯ್ಸ ಅವರೇ, ಒಂದು ಭಾಷೆಯ ಮೇಲೆ ಅಭಿಮಾನ ಇದೆ ಎಂದ ಮಾತ್ರಕ್ಕೆ ಇನ್ನೊಂದು ಭಾಷೆಯನ್ನು ಕೀಳಾಗಿ ಕಾಣುವುದು ಸಲ್ಲ (ನಿಮ್ಮ ಮಾತಿನ ವರಸೆ ನೋಡಿ ಹಾಗೆನಿಸಿತು). ನನ್ನ ಪ್ರಕಾರ ಯಾವುದೇ ಒಂದು ರಾಜ್ಯಭಾಷೆ ಅಲ್ಲಿನ ಜನರೆಲ್ಲರ ಮಾತೃ ಭಾಷೆಯಾಗಬೇಕೆಂದಿಲ್ಲ. ನಮ್ಮ ಹಿರಿಯರನೇಕರಿಗೆ ಕನ್ನಡದ ಅರಿವಿಲ್ಲ, ಹಾಗೆಂದು ಅವರೆಲ್ಲ ಕನ್ನಡಕ್ಕೆ ದ್ರೋಹ ಬಗೆದವರೇ? ತುಳು ನಮ್ಮ ಮಾತೃ ಭಾಷೆ, ಅದನ್ನು ನಾವು ಆರಾಧಿಸುತ್ತೇವೆ... ನಮಗೆ ತಿಳಿದ ರೀತಿಯಲ್ಲಿ. ಹಾಗೆಯೇ ಕನ್ನಡವನ್ನು ಗೌರವಿಸುತ್ತೇವೆ. ನನ್ನ ಪ್ರಕಾರ ಒಂದು ಪ್ರಾಣವಾಯುವಾದರೆ ಇನ್ನೊಂದು ಜೀವಜಲ..

Anti-Chameleon. ಅಂತಾರೆ...

http://ibnlive.in.com/news/kannada-shines-in-border-villages/240530-60-115.html

Tomorrow, ¤¤¤¤¤¤ will say this is also Kannada imposition! But if one checks, a lot of the lower class/caste people in Goa and North Kanara are Kannada speakers.

K Mahendranath Salethoor ಅಂತಾರೆ...

tulunadigaru valasigarru yendaadare avaru yellinda valase bandarembudannu neevu spashtavagi bimbisabeku..neevu teludu konda bhashege samparkisi tuluvannu ponisiddeeri .aadare telugu bhasheyalli adhikavagi tulu kannada bhashegala lepavide .idakke yenanteera guru?.neevu taulaanikavagi bhasheyannu talehakiddu sariyalla yendu nannanisike.ashte alla tuluvinavaru valasigaragiddare avara tuluvina moola yelli?kannadavanne avaru yake aaydukondilla?.tulu lipiyannu malayalam hattirada lipiyendu kelavu prajnara abhipraya.adare kannadavannu navu shasana,talegarigala aadharadindale aleyuvudu.adare tuluvige antha ullekhagalu sigadiddaroo vijayanagarada kaladinda ,ratnakaravarniya vaibhavadinda gurutisalaguttide.adare tulu swatantra bhasheyagirale beku,kannadadante.neevu kannadigarige yeshtu pramukyate needutteero ashte navu taulavaru tuluvige bele needutteve.bhasha vijnanadalloo pradeshika thuluvina vyatyasavannu tiliyabahudashte.ashte alla daivada nudigattinalli,pad dana sandhigalalli tuluvina pracheenateyannu gamanisabahudu...ottinalli yavude lekhana neevu bareyuvaga adarinda yeshtu janakke tondareyaguttade yembudannu gamanisi baredare aa lekhanakke moulya doreyabahudu.antheyeeevagale tv madyamadavaru namma thulunadina daivee samskritiyannu haliyuttiruvudu vishada.patrikeyalloo kelavomme namma samskritiyannu halugedavuttiddare.inthaha sandharbadalli nimma lekhana swalpa thuluvarige gojaluntumadide.dayavittu adharasahita thuluvalasigara bagge thilisi

ಮಾಯ್ಸ ಅಂತಾರೆ...

@K Mahendranath Salethoor
ನನ್ನ ಹಾಗು ನನ್ನ ಗೆಳೆಯನ ಅನಿಸಿಕೆಯನ್ನು ಏನ್ಗುರು ಹೊರತರಲಿಲ್ಲ. ನಿಮ್ಮ ಪ್ರಶ್ನೆಗಳಿಗೆ ಅಲ್ಲಿ ಉದ್ದವಾದ ಉತ್ತರವಿದೆ. ಬಹುಶಃ ತುಳುವ ವಲಸೆ 'ಥಿಯರಿ' ತುಂಬಾ 'controversial' ಅನ್ನಿಸುತ್ತೆ. ಆದರೆ ಆ ಬಗೆಯ ಒಂದು ಥಿಯರಿ ಇದೆ.

ಅದಿರಲಿ.. ಈ 'ತುಳು-ನಾಡು' ಎಂಬ ಪದ ಮೊದಲು ಯಾವ ಶಾಸನ ಇಲ್ಲವೇ ಕಾವ್ಯದಲ್ಲಿ ಬಳಕೆಯಾಗಿದೆ?

ಕನ್ನಡದಲ್ಲಿರುವ ಕವಿರಾಜಮಾರ್ಗದಲ್ಲಿ ಹೇಳಿರುವನ್ನೇ ಕನ್ನಡ ನಾಡು ಕಾವೇರಿಯಿಂದ ಗೋದಾವರಿಯ ವರೆಗೂ ಇತ್ತಂತೆ. ಹಾಗೆ ಆ ತುಳುನಾಡಿನ ಹರವನ್ನು ಯಾವ ಶಾಸನ ಇಲ್ಲವೇ ಕಾವ್ಯ ತಿಳಿಸುವುದು?

ಅಂದ ಹಾಗೆ .. ಈ ಚರ್ಚೆಯನ್ನು ಕೆಲ-ಹಲವರು 'sportive'ಆಗಿ ತೆಗೆದುಕೊಳ್ಳುತ್ತಿಲ್ಲ, ನೀವೂ ಸಹ.!

ಮಾಯ್ಸ ಅಂತಾರೆ...

@K Mahendranath Salethoor

"ಪಂಚ ದ್ರಾವಿಡ ಭಾಷೆಗಳಲ್ಲಿ ದಕ್ಷಿನಥ್ಯದಲ್ಲಿ ಕನ್ನಡದಷ್ಟೇ ಪ್ರಭಾಲ್ಯತೆ ತುಳುವಿಗಿದೆ"

ಪಂಚ-ದ್ರಾವಿಡ ಎಂಬ ಬಳಕೆ ಬ್ರಾಹ್ಮಣ ಪಂಗಡಗಳ ಗುರಿತು ಏನು ನಾನು ಕಲ್ಹಣನ ರಾಜತರಂಗಿಣಿಯ ಶ್ಲೋಕದ ಆಧಾರ ತೋರಿಸಿದ್ದೀನಿ.

ಅಂತೆ ತಾವು ಅದು ಯಾವ ಕಾವ್ಯ ಇಲ್ಲವೇ ಶಾಸನ 'ಪಂಚ ದ್ರಾವಿಡ'ದಲ್ಲಿ ತುಳು ಇದೆ ಎಂದು ಹೇಳುವುದು ತುಸು ಉಲ್ಲೇಖಿಸಿ.!
.
.
.
.

ಇನ್ನು 'ತುಳು ವಲಸೆ' ಥಿಯರಿಯಲ್ಲಿ ಆಸಕ್ತಿ ಇರುವವರು 'ತುಳು' ಹಾಗು 'ಗೊಂಡ'/'ತೆಲುಗು'/'ಕುಡುಖ್' ನಡುವಣ ಇರುವ ಸಾಮ್ಯತೆಗಳನ್ನು ಒರೆ ಹಚ್ಚಿ ನೋಡಬಹುದು. ಅತಃ ಇಂದು  ತುಳು ಏನು ಕರೆದುಕೊಳ್ಳುವವರು 'ಗೊಂಡ'/'ಕುಡುಖ್' ಬುಡಕಟ್ಟಿನ ಒಂದು ಕವಲು ಹಾಗು ಅವರ ಮೂಲ ನಿವಾಸ ಗೊಂಡಾರಣ್ಯ, ಅಂದರೆ ಇಂದಿನ ಚತ್ತೀಸಗಡ ಎಂಬುದು ಒಂದು ಥಿಯರಿ .

ಇನ್ನೊಂದು ಆಧಾರ ಎಂದು ಹೇಳುವ ಅಂಶ, ತುಳು ಭಾಷಿಕರು 'ಳ'ಕಾರವನ್ನು ಬಳಸದೆ ಇರುವುದು. ಇದು ತೆಲುಗು/ಗೊಂಡ ಮುಂತಾದ  ಸೆಂಟ್ರಲ್ ದ್ರವೀಡಿಯನ್ ನುಡಿಗಳಲ್ಲಿ ಆದ ಪರಿವರ್ತನೆ. ಮೂಲತಃ ತೆಲುಗಲ್ಲೂ ಳ ಕಾರ ಬರೆದರೂ ಅದನ್ನು ಹಲವರು 'ಲ' ಎಂದೇ ತುಳುವಿನ ಹಾಗೆ ಉಚ್ಚರಿಸುವರು. ಆದರೆ ಕನ್ನಡ, ತಮಿಳು ಹಾಗು ಮಲಯಾಳಂ ಅಲ್ಲಿ ನಾಲಗೆ ಹೊರಳಿಸುವ (ಎರಡು) ರ ಹಾಗು ಳ ಗಳು ಇದ್ದೆ ಇವೆ ಮೊದಲಿನಿಂದಲೂ ಬರವಣಿಗೆ ಹಾಗು ಉಳಿಕೆ ಎರಡರಲ್ಲಿಯೂ ಕೂಡ!

ಮಾಯ್ಸ ಅಂತಾರೆ...

https://en.wikipedia.org/wiki/Mogaveera#Early_Historical_Period

To note " Mogaveeras follow the Moolasthana system of Tulu lineages (Bari system). The origin of Moolasthana notion dates back to some ca.700-600 BC or earlier corresponding with the migration of Tulu tribes in the Pirak region of NW Indian subcontinent."

"Pirak is an archaeological site belonging to the Indus Valley Civilization located in Balochistan, Pakistan."

And I didn't write that wiki page.! :D

ಮಾಯ್ಸ ಅಂತಾರೆ...

http://books.google.se/books?id=5PPCYBApSnIC&lpg=PR17&dq=dravidian%20languages&pg=PP1#v=onepage&q&f=false

"A Comparative Grammar of the Dravidian Or South-Indian Family of Languages By Robert Caldwell"

A well known reference about Dravidian languages and comparative linguistics. It also speaks about the similarities between Tulu and Gond.

ಮಾಯ್ಸ ಅಂತಾರೆ...

ಅದಿರಲಿ.. ಈ 'ತುಳು-ನಾಡು' ಎಂಬ ಪದ ಮೊದಲು ಯಾವ ಶಾಸನ ಇಲ್ಲವೇ ಕಾವ್ಯದಲ್ಲಿ ಬಳಕೆಯಾಗಿದೆ?

Please answer!

Deekshith Shetty ಅಂತಾರೆ...

ಮಾಯ್ಸ ಅವರೇ, ಮೊದಲು ತುಳುನಾಡಿನ ಬಗ್ಗೆ ಮಾತನಾಡುವ ಮೊದಲು ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. 'ತುಳುನಾಡು' ಅನ್ನೋ ಪದ ಯಾವ ಶಾಸನದಲ್ಲಿದೆ ಅಂತ ಕೇಳ್ತಾ ಇದ್ದೀರಿ..? ತುಳುನಾಡು ಅನ್ನೋ ಪದ ಬರೀ ತುಳು ಮಾತ್ರವಲ್ಲ, ಕೇರಳದ ಶಾಸನಗಳಲ್ಲೂ ಉಲ್ಲೇಖವಿದೆ. ಪ್ರಾಚೀನ ಗ್ರೀಕ್ ನಾಟಕದಲ್ಲಿ ಕೂಡ ತುಳುವಿನ ಉಲ್ಲೇಖವಿದೆ. ಅದನ್ನು ಕನ್ನಡ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ ನೀವು ಅಷ್ಟೇ. ನಿಮಗೆ ತುಳುನಾಡಿನ, ತುಳು ಭಾಷೆಯ, ತುಳು ಸಂಸ್ಕೃತಿಯ ಬಗ್ಗೆ ಗೊತ್ತಿಲ್ಲ. ಆದರೆ ನಮಗೆ ಕನ್ನಡದ ಬಗ್ಗೆ ಗೊತ್ತು. ಹಾಗಾಗಿ ನಾವು ಎರಡನ್ನೂ ಹೋಲಿಕೆ ಮಾಡಿ ನೋಡಬಲ್ಲೆವು. ನನ್ನ ಪ್ರಕಾರ ಕನ್ನಡದಲ್ಲಿ ಅಂತ ವಿಶೇಷವಾದ್ದು ಏನೂ ಇಲ್ಲ. ತೆಲುಗು, ತಮಿಳಿನಂತೆಯೇ ನಿಮ್ಮ ಆಚರಣೆಗಳು. ಆದರೆ ತುಳು ಸಂಸ್ಕೃತಿಯಲ್ಲಿ ಅನೇಕ ವಿಶಿಷ್ಟ, ಶ್ರೀಮಂತ ಸಂಸ್ಕೃತಿಯ ಅಚಾರ-ವಿಚಾರಗಳಿವೆ. ಇವು ವಿಶ್ವದ ಎಲ್ಲೂ ಕಾಣಸಿಗುವುದಿಲ್ಲ. ಯಕ್ಷಗಾನ, ಭೂತಕೋಲ, ಆಟಿ ಕಳೆಂಜ, ಕಂಗೀಲು ನಲಿಕೆ, ಕಂಬಳ, ಪಿಲೆವೇಶ, ನಾಗಮಂಡಲ, ಕೋರಿ ಕಟ್ಟ ಇವೆಲ್ಲವೂ ತುಳು ಸಂಸ್ಕೃತಿಗಳು. ಹಾಗೆಯೇ ಪ್ರಾಚೀನ, ಕಾರಣಿಕದ ದೇವಸ್ಥಾನಗಳ ತವರೂರು ತುಳುನಾಡು. ಕನ್ನಡಿಗರು ತುಳುನಾಡ ದೇವರುಗಳನ್ನು ಪೂಜಿಸುತ್ತಾರೋ ಹೊರತು (ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು, ಉಡುಪಿ ಕೃಷ್ಣ, ಕಟೀಲು etc .) ತುಳುವರು ಕನ್ನಡಿಗರ ದೇವಸ್ಥಾನಗಳಿಗೆ ಭೇಟಿ ಕೊಡುವುದು ಕಮ್ಮಿ. ಹಾಗೆಯೇ ಯಕ್ಷಗಾನದಂತಹ ಅಪ್ಪಟ ತುಳುವಿನ ಕಲೆಯನ್ನು ಕನ್ನಡ ನಾಡಿನ ಗಂಡುಕಲೆ ಅಂತ ಹೇಳುವುದು ನೀವೇ. (ಕನ್ನಡದಲ್ಲಿ ಯಕ್ಷಗಾನ ನಡೆಯುತ್ತದೆಯಾದರೂ ಅದನ್ನು ನಡೆಸುವವರು ತುಳುವರೆ.. ಅದು ಬರೀ ಕನ್ನ್ನಡದ ಪ್ರೀತಿಗೆ ಹೊರತು, ಅದ್ರಲ್ಲಿ ನಿಮ್ಮಂಥ ಸ್ವಾರ್ಥವೂ ಇಲ್ಲ.. ತನ್ನದೆನ್ನುವ ಅಹಂ ಕೂಡ ಇಲ್ಲ.) ತುಳು ಭಾಗವತೋ, ದೇವಿ ಮಹಾತ್ಮೆ, ತುಳು ಮಹಾಭಾರತೋ ಇವೆಲ್ಲವೂ 10ನೇ ಶತಮಾನದ ತುಳು ಪುಸ್ತಕಗಳು.

ಮಾಯ್ಸ ಅಂತಾರೆ...

"ತುಳುನಾಡು ಅನ್ನೋ ಪದ ಬರೀ ತುಳು ಮಾತ್ರವಲ್ಲ, ಕೇರಳದ ಶಾಸನಗಳಲ್ಲೂ ಉಲ್ಲೇಖವಿದೆ. ಪ್ರಾಚೀನ ಗ್ರೀಕ್ ನಾಟಕದಲ್ಲಿ ಕೂಡ ತುಳುವಿನ ಉಲ್ಲೇಖವಿದೆ."

ಅವು ಯಾವುವು? ದಯವಿಟ್ಟು ಆ ಸಾಲುಗಳನ್ನು ಉಲ್ಲೇಖಿಸಿ.!

"ಮೊದಲು ತುಳುನಾಡಿನ ಬಗ್ಗೆ ಮಾತನಾಡುವ ಮೊದಲು ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ"
ಅದೇ ಮಾಡುತ್ತಿರುವೆನು. ತುಳುನಾಡು ಎಂಬ 'ರಾಜ್ಯ' 'ರಾಷ್ಟ್ರ' ಎಂದು ಯಾವಾಗ ಇತ್ತು? ಅದನ್ನಾಳಿದ ಅರಸರು ಯಾರು? ತುಸು ತಿಳಿಸಿ.

ಹಿಂದೆ ಪಂಚ-ದ್ರಾವಿಡ ಎಂಬುದರ ಬಗ್ಗೆ ಕೆಲವರಿಲ್ಲಿ ತಪ್ಪು ಮಾಹಿತಿಕೊಟ್ಟಿದ್ದರು. ಅವರಿನ್ನೂ ಆ ಬಗ್ಗೆ ವಿವರಿಸಿಲ್ಲ.

" ನನ್ನ ಪ್ರಕಾರ ಕನ್ನಡದಲ್ಲಿ ಅಂತ ವಿಶೇಷವಾದ್ದು ಏನೂ ಇಲ್ಲ. ತೆಲುಗು, ತಮಿಳಿನಂತೆಯೇ ನಿಮ್ಮ ಆಚರಣೆಗಳು. "
ಅದು ಹೇಗೆ? ತುಸು ವಿವರಿಸಿರಿ? ಈ ಬಗ್ಗೆ ತಮ್ಮ ಅಧ್ಯಯನವೇನು.. ತಾವು ಯಾವ ಯಾವ ಆಚರಣೆಗಳ ಬಗ್ಗೆ ತುಲನೆ ಮಾಡುತ್ತಿದ್ದೀರಿ?

"ದೇವಿ ಮಹಾತ್ಮೆ, ತುಳು ಮಹಾಭಾರತೋ ಇವೆಲ್ಲವೂ 10ನೇ ಶತಮಾನದ ತುಳು ಪುಸ್ತಕಗಳು."
ಅವನ್ನು ಬರೆದವರು ಯಾರು? ಈ ಎರಡು ಗ್ರಂಥಗಳಲ್ಲದೆ ಮಿಕ್ಕ ಗ್ರಂಥಗಳಿವೆಯೇ?

Aravind M.S ಅಂತಾರೆ...

<>

ಇದರಿಂದ ಗೊತ್ತಾಗುತ್ತೆ ತುಳುವರ ಕನ್ನಡಾಭಿಮಾನ ಎಷ್ಟು ಅಂತ.

ಅಂದ ಹಾಗೆ ಬೇಲೂರು, ಹಳೇಬೀಡು, ಬಾದಾಮಿ ಐಹೊಳೆಯಂಥಾ ಐತಿಹ್ಯ ಇರೋ ದೇವಸ್ಥಾನ ಎಷ್ಟಿವೆ ತುಳುನಾಡಿನಲ್ಲಿ ?

ಯಲ್ಲಾಪುರ ಅಂತಾರೆ...

http://www.youtube.com/watch?v=s8PCgUD4hJQ

ಇಲ್ಲಿ ಕರ್ನಾಟಕದ ಯಲ್ಲಾಪುರದಲ್ಲಿ ತುಳು ಮಾತಾಡ್ತಾರಂತೆ!

ಮಾಯ್ಸ ಅಂತಾರೆ...

ಇನ್ನು 'ಯಕ್ಷಗಾನ'ದ ಬಗ್ಗೆ ಕೆಲವು ಮಾಹಿತಿ ಚಿಕ್ಕದಾಗಿ.  'ಯಕ್ಷಗಾನ' ಎಂಬುದು 'ಜಕ್ಕಳ/ಯಕ್ಕಳಗಾನ' ಎಂಬುದರ 'ಸಂಸ್ಕ್ರಿತೀಕರಿಸಿದ' ರೂಪ. ಇದನ್ನು ಆಡು ಮಾತಿನಲ್ಲಿ ಹಿಂದಿನಿಂದಲೂ 'ಬಯಲಾಟ' ಎಂದೇ ಕರೆಯುತ್ತಿರುವುದು.
Yakshagana is the recent (200 years) scholastic name for what are known as kēḷike, āṭa, bayalāṭa, bayalāṭa, daśāvatāra (Kannada: ಕೇಳಿಕೆ, ಆಟ, ಬಯಲಾಟ, ದಶಾವತಾರ).

ಇದರಲ್ಲಿ ಮುಖ್ಯವಾಗಿ ನಾಲು ಬಗೆ.
೧. ನಾಗಮಂಗಲ-ಹಾಸನ-ಅರಸೀಕೆರೆ  ಹೇಮಾವತೀ ಸೀಮೆಯ  ಬಯಲಾಟ 
೨. ಉತ್ತರ ಕರ್ನಾಟಕದ ಬಯಲಾಟ ( ಶ್ರೀ ಕೃಷ್ಣ ಪಾರಿಜಾತ ಅಂತಲೋ ಏನೋ ಕರೀತಾರೆ )
೩. ಉತ್ತರ ಕನ್ನಡ ಜಿಲ್ಲೆಯ ಬಡಗತಿಟ್ಟು  ಹಾಗು ಬಡಬಡತಿಟ್ಟು  ( ಇಲ್ಲಿ ಹಿಂದೂಸ್ತಾನಿ ರಾಗಗಳ ಬಳಕೆ ಹೆಚ್ಚು ಅಂತೆ )
೩. ದಕ್ಷಿಣ ಕನ್ನಡ ಹಾಗು ಕಾಸರಗೋಡಿನ ತೆಂಕುತಿಟ್ಟು ( ಕೇರಳದ ಕಥಕಳಿ ಹೋಲುವ ಉಡುಗೆಗಳು )

ಇವಿಷ್ಟೂ ಮುಖ್ಯವಾಗಿ ಕನ್ನಡ ಭಾಷೆಯಲ್ಲೇ ನಡೆಯುವುವು.  

ಇನ್ನೊಂದು ಕುತೂಹಲದ ವಿಷಯ ಅಂದರೆ 'ಯಕ್ಷಗಾನದ' ಅತಿ ಹಳೆಯ ಗ್ರಂಥ ಬರೆದಾತ ಇದ್ದಿದ್ದು ಮಂಡ್ಯ ಜಿಲ್ಲೆಯಲ್ಲಿ !

ಮಾಯ್ಸ ಅಂತಾರೆ...

@Aravind M.S

" ಐಹೊಳೆಯಂಥಾ ಐತಿಹ್ಯ ಇರೋ ದೇವಸ್ಥಾನ ಎಷ್ಟಿವೆ ತುಳುನಾಡಿನಲ್ಲಿ ?"
ನೋಡಿ ನೀವು ಕೇಳಿದ ಈ ಪ್ರಶ್ನೆಯು 'ತುಳುನಾಡು' ಎಂಬ ಸೀಮೆ/ಪ್ರದೇಶ ಇದೆ ಎಂದು ಹೇಳುವಂತೆ ಭಾಸವಾಗುತ್ತದೆ.

ಆದರೆ 'ತುಳುನಾಡು' ಎಂಬುದು ಇತ್ತೀಚಿಗೆ ಕೆಲವರು ಹುಟ್ಟುಹಾಕಿರುವ ಪದ. ಅದಕ್ಕೆ ಐತಿಹಾಸಿಕ, ಭೌಗೋಳಿಕ, ರಾಜಕೀಯ, ಆರ್ಥಿಕ, ಇಲ್ಲವೇ ಇತರ ಕಡೆಯ ಮಹತ್ವವಾಗಲಿ, ಅಸ್ತಿತ್ವವಾಗಲಿ ಇಲ್ಲ.!

ಹಾಗೆ 'ತುಳು' ಎಂಬುದು ಒಂದು ಭಾಷೆಯಲ್ಲ. ಬ್ರಾಹ್ಮಣರ ತುಳುವಿಗೂ, ಮೊಗವೀರರ ತುಳುವಿಗೂ, ಗೌಡರ ತುಳುವಿಗೂ, ಬಂಟರ ತುಳುವಿಗೂ ತುಂಬಾ ವ್ಯತ್ಯಾಸವಿದೆ,  

ಹಾಗೆ ಇಲ್ಲಿ ನೋಡಿ.
http://mudiraja.com/mudiraju_bunts.html

Raja ಅಂತಾರೆ...

Tulu literature
1. Devi Mahatme :

Devi Mahatme, which is the Tulu translation of the Sanskrit holy verse ‘Saptashati’, is the oldest Tulu work available till now. The palm leaves’ manuscripts of this work were discovered by Dr Venkataraja Puninchitthaaya at the house of Sri Thenkillaaya in puttur. The period of this work can be traced back to 1200 A.D. The use of the ‘sd’ sound, the use of ‘Rala’ letters and the use of many cases are some of the specialties of the tulu used here. The use of the passive voice, which cannot be found in the present day tulu is another uniqueness of this verse.

2. Mahabharatho :

A poet called Arunabda, who lived at Kodavoor in Udupi, somewhere around 1383 A.D. is the composer of this work. Dr. Venkataraja Punchitthaya discovered its palm leaves’ manuscript at Sri Laxminarayana Kekunnaaya’s house at Mundya in mudnoor village of Puttur Tq. D.K. Among the 1757 stanzas of this verse, 883 stanzas have been in octaves. Many traditional vrutta like ‘Thotaka’ Thotaka Dheerga’ ‘mallika male’ etc have been used in this verse. The story of Adiparva of Mahabharatha is its subject. The mention of 26 sound instruments of the tulu region,various children’s games, magical dolls of the marriage altar, flexible umbrellas, supply of cool water, the offering dates as ‘naivedyam’ to God and Bhoota worship are some of the special features of this work.

3. Sri Bhagavatho :

Shri Vishnu Thunga is the author of this work. On the basis of his horoscopic verse, his period can be traced back to around 1737. The recent studies have fixed his period around 1370.This palm leaf manuscript too was discovered by Dr Venkataraja Punchitthaya at the house of Sri Narayana Saralaya in Madhoooru.

Dr Kabbinale Vasanta Bharadvaj opines that ‘Sri Bhagavatgho’ must be the title of this book, as it is often used in the title verses. According to him, the author of this work lived at Heroor near Udupi. The 1988 stanzas of this long verse are divided into 49 chapters, which are grouped into 3 skandas. Compared to the Kannada and Sanskrit versions of Bhagavatha, this work is very short. The absence of ‘Phalashruthi’ at the end indicates that this work has not been available in full.

4. Kaveri :

Only a part of this work has been found in the manuscripts collection of Calicut University. The period of this work is considered to be the end of the 14th century. The author of this work remains unknown. The greatness of Kaveri which is incorporated within Skanda Purana is its subject. The work is socially remarkable from the point of view of metre, language use, and the use of figures of speech. One of the poet’s statements about the people, who criticize poetry, reflects the literary atmosphere of those days. Also the poet’s statement that his poetry is like the sugar cane, which gets sweeter, the longer you munch it, becomes paradoxical as the later parts of the work have not been available. The palm leaves’ manuscripts of this verse were found at Vitla palace of Vitla seeme, in Bantwala taluk. Presently it is preserved at Sri Dharmasthala Manjunatheshwara cultural research centre. At the cover leaf, the title is written as ‘Tulu Baraha – Tulu Bhashe Ramayana’. The work is edited by Dr. S.R.Vighnaraja. The work has fifteen chapters, which narrate the history of Ikshvaku family. The 10th, 11th and 12th chapters narrate the story of Ramayana in brief. Dr. Kabbinale Vasantha Bharadvaj opines that this work is a part of’Sri Bhagavatho’, authored by Vishnu Thunga.

Raja ಅಂತಾರೆ...

6. Tulu Karna Parva : -

The author of this work is Immadi Harihara, the king of Vijaya Nagara. He is also called Hariyappa. This shows that the rulers of Vijaya Nagara, not only belonged to the ‘Tuluva’ family, but they also had Tulu as their language. The defeat of Karna by Arjuna is the subject of this verse. On the basis of one of the opening verses of this work, its period can be traced back to around 1385. The verse is written in partial sestets. It makes use of other vrutta as well. It is very special that invoking Ganapathi, the author offers to him Bananas, leaf Appas, sugarcane, ‘Undaliges’ and jack fruit too as Naivedyam. The remembrance of his predecessors by the poet also suggests the existence of the tulu poetic tradition prior to the poet.

- Dr. Kabbinale Vasantha Bharadwaj
from-http://shivallibrahmins.com

Deekshith Shetty ಅಂತಾರೆ...

ಮಾಯ್ಸ ಅವರೇ, ತುಳುವ ಮಣ್ಣಿನಲ್ಲಿ ಹುಟ್ಟಿದ ನಾವು ಅದು ನಿಮಗಿಂತ ಎಷ್ಟು ಶ್ರೇಷ್ಠ ಅನ್ನೋದನ್ನ ಬಲ್ಲೆವು. ಆದರೆ ತುಳುವರು ತುಳುನಾಡಿನ ಇತಿಹಾಸ, ಅದರ ಲಿಪಿ, ತುಳುನಾಡಿನ ದೇವಪುರುಷರ, ದೈವಗಳ, ಪಾಡ್ದನಗಳ, ವೀರರ ಕಥೆಯನ್ನು ತಿಳಿದಿಲ್ಲ...! ಇದಕ್ಕೆ ಕಾರಣ ನಮಗೆ ಕಲಿಯಲು, ತಿಳಿದುಕೊಳ್ಳಲು ಅವಕಾಶವಿಲ್ಲ. ಶಾಲಾ ಕಾಲೇಜುಗಳಲ್ಲಿ ನಮಗೆ ಕನ್ನಡ ನಾಡಿನ ಇತಿಹಾಸ, ಕಥೆಗಳನ್ನು ಕಳಿಸಿದ್ದಾರೋ ಹೊರತು ತುಳುವಿನದ್ದಲ್ಲ. ನಮಗೆ ನಮ್ಮದೇ ಆದ ಸ್ವಂತ ರಾಜ್ಯ ಇಲ್ಲ. ಹಾಗಂತ ನಾವು ಕೈಲಾಗದವರು ಅಂತ ಅಂದುಕೊಳ್ಳಬೇಡಿ.. ನಾವು ಸುಮ್ಮನಿರುವುದು ನಮಗೆ ಕನ್ನಡ ಮೇಲೆ ಇರುವ ಪ್ರೀತಿ, ಅಭಿಮಾನವೇ ಹೊರತು ತುಳುವಿನಲ್ಲಿ ಏನೂ ಇಲ್ಲವೆಂದಲ್ಲ. ನೀವು ಕನ್ನಡದ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದೀರಿ. ತುಂಬಾ ಸಂತೋಷ. ಹಾಗಂತ ಬೇರೆ ಭಾಷೆಯ ಬಗ್ಗೆ ಕೀಳಾಗಿ ಕಾಣುವ ಮೊದಲು ನಿಮ್ಮಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ತುಳುವರು. ವಿದ್ಯಾವಂತರು. ಬುದ್ಧಿವಂತರು. ತುಳುವರು ದೇವರುಗಳಿಗಿಂತ ದೈವಗಳನ್ನು ಶ್ರೇಷ್ಠ ಅಂತ ನಂಬಿಕೊಂಡವರು. ನಾವು ಏನೇ ತಪ್ಪು ಮಾಡಿದರೂ, ಒಳ್ಳೇದು ಮಾಡಿದರೂ ನಮ್ಮನ್ನು ದೈವಗಳು ಪ್ರಶ್ನಿಸುತ್ತಾರೆ. ತಿದ್ದುತ್ತಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಒಂದುಮಾತು ಹೇಳುತ್ತಾರೆ. "ನಾನು ಏನು ಕೆಲಸ ಮಾಡಿದರೂ ಅದ್ರಲ್ಲಿ ತಪ್ಪಿರಲಿ, ಒಳ್ಳೆಯದಿರಲಿ ಆ ಮಂಜುನಾಥ ಸ್ವಾಮಿ ಪ್ರಶ್ನಿಸುವುದಿಲ್ಲ. ಆದರೆ ಅಣ್ಣಪ್ಪ ಪಂಜುರ್ಲಿ ದೈವ ಕೇಳುತ್ತಾನೆ." ಹಾಗಾಗಿ ತುಳುವರು ಯಾವತ್ತು ಧರ್ಮ (ತುಳು ಸಂಸ್ಕೃತಿ) ವನ್ನು ಬಿಟ್ಟು ಬಿಡುವುದಿಲ್ಲ. ಅದಕ್ಕೆ ಆ ಸ್ಥಳಕ್ಕೆ "ಧರ್ಮಸ್ಥಳ" ಅನ್ನೋ ಹೆಸರು ಬಂದಿರುವುದು. ಇಂತಹ ಶ್ರೇಷ್ಠವಾದ, ಪವಿತ್ರವಾದ, ದೇವಭಾಷೆಯಾದ (ದೈವಗಳು, ದೇವರುಗಳು ಮಾತಾಡುವ) ತುಳುವನ್ನು ಅವಮಾನಿಸುವ ದುಸ್ಸಾಹಸಕ್ಕೆ ಕೈ ಹಾಕಬೇಡಿ. ನಿಮ್ಮ ಕನ್ನಡಿಗರ ಬೇರೆಯವರಿಗೆ ಕೊಡುವ ಮರ್ಯಾದೆ, ಅವರ ನಡವಳಿಕೆಗಳು ನಮಗೆ ಗೊತ್ತು. ಸುಮ್ಮನೆ ನಮ್ಮನ್ನು ಕೆಣಕಬೇಡಿ....!
ಅರವಿಂದ್ ಅವರೇ, ತುಳುವರು ಕನ್ನಡಾಭಿಮಾನಿಗಳು ಅಲ್ಲದಿದ್ದರೆ ಯಾವತ್ತೋ ನಾವು ಬೇರೆ ರಾಜ್ಯ ಕಟ್ಟಿಕೊಳ್ಳುತ್ತಿದ್ದೆವು. ನಾವು ತುಳುವನ್ನು ಎಷ್ಟು ಪ್ರೀತಿಸುತ್ತೀವೋ, ಅಷ್ಟೇ ಕನ್ನಡವನ್ನೂ ಪ್ರೀತಿಸುತ್ತೇವೆ. ಆಡಳಿತ ಭಾಷೆಯಾಗಿ ಕನ್ನಡವನ್ನೇ ಉಪಯೋಗಿಸುತ್ತೇವೆ. ಹಾಗೆಯೇ, ಬೇಳೂರು, ಐಹೊಳೆಯಂತಹ ದೇವಸ್ಥಾನಗಳು ತುಳುನಾಡಿನಲ್ಲಿ ಇರಬೇಕಂತ ಏನೂ ಇಲ್ಲ. ಆದರೂ ಸಾವಿರ ಕಂಬದ ಬಸದಿ, ಜೈನರ ಅರಮನೆಗಳು, ಅವುಗಳಂತೆಯೇ ಇವೆ. ಅದಕ್ಕಿಂತ ಶ್ರೇಷ್ಠವಾದ ದೇವಸ್ಥಾನಗಳು ನಮ್ಮಲ್ಲಿವೆ. ಅದಕ್ಕೆ ತುಳುವರಿಗಿಂತ ಹೆಚ್ಚಾಗಿ ಕನ್ನಡಿಗರೇ ಬರುತ್ತಾರೆ. ಹಾಗೆಯೇ ಹಂಪಿಯನ್ನು ಆಳಿದ ವಿಜಯನಗರ ಸಾಮ್ರಾಜ್ಯದ ಒಡೆಯ ಕೃಷ್ಣದೇವರಾಯ ಒಬ್ಬ ಅಪ್ಪಟ ತುಳುವ. ನೆನಪಿರಲಿ........!!!

Aravind M.S ಅಂತಾರೆ...

ಇದರಿಂದ ಗೊತ್ತಾಗುತ್ತೆ ತುಳುವರ ಕನ್ನಡಾಭಿಮಾನ ಎಷ್ಟು ಅಂತ.

ಅಂದ ಹಾಗೆ ಬೇಲೂರು, ಹಳೇಬೀಡು, ಬಾದಾಮಿ ಐಹೊಳೆಯಂಥಾ ಐತಿಹ್ಯ ಇರೋ ದೇವಸ್ಥಾನ ಎಷ್ಟಿವೆ ತುಳುನಾಡಿನಲ್ಲಿ ?

Aravind M.S ಅಂತಾರೆ...

ದೀಕ್ಷಿತ ಶೆಟ್ಟರೆ,

ಕೊಲ್ಲೂರು ತುಳುವರ ದೇವಸ್ಥಾನ ಯಾವಾಗ ಆಯಿತು ? ಕೊಲ್ಲೂರಿನ ಪ್ರದೇಶದಲ್ಲಿ ಇರೋದು ಕನ್ನಡ ಮಾತ್ರ, ಕೋಟ ಶೈಲಿಯದು.

ಧರ್ಮಸ್ಥಳ, ಉಡುಪಿ ಮುಂತಾದ ದೇವಸ್ಠಾನ ಮುಖ್ಯವಾಗಿ ಅವುಗಳ ವ್ಯಾಪಾರೀ ತಂತ್ರದಿಂದ ಬಿಕರಿ ಆಗ್ತಿದೆ ಅಂತ ೨೦ ವರ್ಷ ಅಲ್ಲೇ ಬೆಳೆದ ನನ್ನ ಅನುಭವ. ಜನ ಅಲ್ಲಿನ ಕಡಲು, ಬೆಟ್ಟದ ತಪ್ಪಲು ನೋಡಲಾರಂಭಿಸಿದ ಮೇಲೆ ಅನಿವಾರ್ಯವಾಗಿ ದ.ಕ ದೇವಸ್ಥಾನಗಳಿಗೆ ಹೋಗೋದು ಶುರು ಆದದ್ದು.

ಅದು ಬಿಟ್ಟರೆ ಹೋಗೋದು ನಮ್ಮ ಘಾಟಿ ಸುಬ್ರಹ್ಮಣ್ಯ, ಮೇಲುಕೋಟೆ, ಶ್ರೀರಂಗನಾಥ, ಮೈಸೂರು ಚಾಮುಂಡೇಶ್ವರಿ, ಮಂಡ್ಯದ ಬಳಿಯ ವರಾಹಸ್ವಾಮಿ, ಹಾಸನಾಂಬ, ರಾಮನಾಥಪುರ, ಇನ್ನೆಷ್ಟೋ.

ಹರಕೆ, ನಂಬಿಕೆ ವಿಷಯ ಬಿಟ್ಟರೆ ಜನ ಎಲ್ಲಿಂದಲೂ ಹೋಗೋದು ಹೊಯ್ಸಳ, ಚಾಲುಕ್ಯ ದೇವಸ್ಥಾನಗಳಿಗೇ ಎಂಬುದು ಸಾಮಾನ್ಯ ತಿಳುವಳಿಕೆಯ ವಿಷಯ.

ಯಕ್ಷಗಾನ ನೋಡಲು ಸಾಧಾರಣ ದ.ಕ ದವರನ್ನು ಬಿಟ್ಟು ಅಷ್ಟಾಗಿ ಯಾರೂ ನೋಡೋಲ್ಲ. ಇದನ್ನ ಯಕ್ಷಗಾನದ ಧುರೀಣರೇ ಒಪ್ಪಿರುವರು ಹಲ ಕಡೆ. ಮತ್ತು ಯಕ್ಷಗಾನ, ಭೂತದ ಕೋಲ, ಇತ್ಯಾದಿ ಎಲ್ಲಾ ಮಲಯಾಳದ ಕಥಕ್ಕಳಿಯಿಂದ ಹರಿದು ಬಂದಿರೋದು ಅನ್ನೋದು ಹೊಸ ವಿಷಯವಲ್ಲ.

ಕನ್ನಡಕ್ಕೆ ತಮಿಳು, ತೆಲುಗಿನಿಂದ ಬೇರಾದ ವಿಶಿಷ್ಟ ಸಂಸ್ಕೃತಿ ಇಲ್ಲವೆ ? ಕರ್ನಾಟಕ ಸಂಗೀತವನ್ನೇ ಮರೆತಿರಲ್ಲ. ಡೊಳ್ಳು ಕುಣಿತ / ವೀರಗಾಸೆ, ಗೀಗೀ ಪದ, ಹಾಲಕ್ಕಿ ಕುಣಿತ, ಮೈಸೂರ ಹೆಸರಾಂತ ಕುಸ್ತಿ / ವಜ್ರಮುಷ್ಟಿ ಕಾಳಗ, ಇನ್ನೂ ಹಲವು.

ಮಾಯ್ಸ ಅಂತಾರೆ...


"ತುಳುನಾಡು ಅನ್ನೋ ಪದ ಬರೀ ತುಳು ಮಾತ್ರವಲ್ಲ, ಕೇರಳದ ಶಾಸನಗಳಲ್ಲೂ ಉಲ್ಲೇಖವಿದೆ. ಪ್ರಾಚೀನ ಗ್ರೀಕ್ ನಾಟಕದಲ್ಲಿ ಕೂಡ ತುಳುವಿನ ಉಲ್ಲೇಖವಿದೆ."

ಅವು ಯಾವುವು? ದಯವಿಟ್ಟು ಆ ಸಾಲುಗಳನ್ನು ಉಲ್ಲೇಖಿಸಿ.!


"ಮೊದಲು ತುಳುನಾಡಿನ ಬಗ್ಗೆ ಮಾತನಾಡುವ ಮೊದಲು ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ"
ಅದೇ ಮಾಡುತ್ತಿರುವೆನು. ತುಳುನಾಡು ಎಂಬ 'ರಾಜ್ಯ' 'ರಾಷ್ಟ್ರ' ಎಂದು ಯಾವಾಗ ಇತ್ತು? ಅದನ್ನಾಳಿದ ಅರಸರು ಯಾರು? ತುಸು ತಿಳಿಸಿ.

ಹಿಂದೆ ಪಂಚ-ದ್ರಾವಿಡ ಎಂಬುದರ ಬಗ್ಗೆ ಕೆಲವರಿಲ್ಲಿ ತಪ್ಪು ಮಾಹಿತಿಕೊಟ್ಟಿದ್ದರು. ಅವರಿನ್ನೂ ಆ ಬಗ್ಗೆ ವಿವರಿಸಿಲ್ಲ.


" ನನ್ನ ಪ್ರಕಾರ ಕನ್ನಡದಲ್ಲಿ ಅಂತ ವಿಶೇಷವಾದ್ದು ಏನೂ ಇಲ್ಲ. ತೆಲುಗು, ತಮಿಳಿನಂತೆಯೇ ನಿಮ್ಮ ಆಚರಣೆಗಳು. "
ಅದು ಹೇಗೆ? ತುಸು ವಿವರಿಸಿರಿ? ಈ ಬಗ್ಗೆ ತಮ್ಮ ಅಧ್ಯಯನವೇನು.. ತಾವು ಯಾವ ಯಾವ ಆಚರಣೆಗಳ ಬಗ್ಗೆ ತುಲನೆ ಮಾಡುತ್ತಿದ್ದೀರಿ?

ಈ ಮೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಇಲ್ಲವೇ ಅದು ತೋಚುವ ಹಾಗೆ ಬರೆದಿಲ್ಲ.

ಇನ್ನು ಇಂಗ್ಲಿಷಿನಲ್ಲಿ ಬರೆದ ಪಟ್ಟಿ ಬಿ.ಜಿ.ಎಲ್ ಸ್ವಾಮಿಯವರ "ತಮಿಳು ತಲೆಗಳ ನಡುವೆ" ಪುಸ್ತಕವನ್ನೂ ನೆನೆಪಿಸುವುದು.

ಇನ್ನು ಒಬ್ಬರು ತೀರ ದೇವರು ದಿಂಡರು ಏನು ಕೋಮು/ಧರ್ಮವನ್ನೂ ಭಾಷೆಯ ಬಗ್ಗೆ ತರುವುದು ಯಾಕೋ ಮುಜುಗರ. ಅದಕ್ಕೆ ಉತ್ತರಿಸುವ ಅವಶ್ಯಕತೆ ನನಗೆ ಕಾಣುತ್ತಿಲ್ಲ. ಏನ್ಗುರು ಇಂತಹ 'ಕೋಮು'ವಾದದ ಸಾಲುಗಳ ಬಗ್ಗೆ ತುಸು ಎಚ್ಚರ ವಹಿಸಿರೀ ಎಂದು ಕೋರಿಕೆ.

ಇನ್ನು 'ತುಳು-ನಾಡು' ಎಂದು ಇಲ್ಲಿ ಕೆಲವರು ಹೇಳುವ ಪ್ರದೇಶದ ಮೂಲ ನಿವಾಸಿಗಳು ಕೇವಲ ತುಳು ಭಾಶಿಕರಲ್ಲ ಇಲ್ಲವೇ ತುಳು ಭಾಷಿಕ ಬಹುಸಂಖ್ಯಾತರಲ್ಲ (ಇತಿಹಾಸದಲ್ಲೂ ಇದ್ದಿದ್ದಿಲ್ಲ).

ಕರ್ನಾಟಕದ ಬಹುಸಂಖ್ಯಾತ ಭಾಷಿಕರು ಕನ್ನಡಿಗರು ಅದಕ್ಕೆ ಅದನ್ನು ಕನ್ನಡ-ನಾಡು ಎನ್ನುವರು. ಆದರೆ ಕರಾವಳಿಯ ಬಹುಸಂಖ್ಯಾತರು ತುಳುವನ್ನು ಮನೆಮಾತಾಗಿ ಬಳಸಲ್ಲ.!

ಉಡುಪಿ ಹಾಗು ದಕ್ಷಿಣ 'ಕನ್ನಡ' ಜಿಲ್ಲೆಯಲ್ಲಿ ಕನ್ನಡ ತಾಯ್ನುಡಿಯಾಗಿರುವ ಬೇಕಾದಷ್ಟು ಮಂದಿ ಇದ್ದಾರೆ. ಅವರ ಹಕ್ಕುಗಳ ಪ್ರಶ್ನೆ ಇಲ್ಲಿ.

ಯಾರೋ ವಿಕಿಪಿಡಿಯ ತುಂಬಾ ಕೆಳಗಿನಂತಹ ನಿರಾಧಾರ ವಾಕ್ಯಗಳನ್ನು ತುಂಬಿದ್ದಾರೆ.!

"The people who first settled here were called Tuluvas. Bunts, Kulala, Mogaveera, Billava, Devadiga s are the major communities of the Tuluva ethinic group."
https://en.wikipedia.org/wiki/Dakshina_Kannada

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails