ರಾಜಕಾರಣ ಮಾಡಕ್ಕೆ ಕನ್ನಡ ಬೇಕಿಲ್ವಂತೆ!

ರಾಣಿ ಸತೀಶ್ ಎಂಬ ರಾಜ್ಯದ ಮಹಾನ್ ರಾಜಕಾರಣಿ ಉದುರ್ಸಿರೋ ಆಣಿಮುತ್ತು ಕೇಳ್ರಪ್ಪೋ. "ರಾಜಕಾರಣದಲ್ಲಿ ಬರಬೇಕಾದ್ದು ಭಾಷೆ ಅಲ್ಲ: ರಾಜಕಾರಣಿಗಳಿಗೆ ಕನ್ನಡ ಬರ್ದಿದ್ರೂ ಪರ್ವಾಗಿಲ್ಲ" ಅಂದವ್ರೆ ಅಂತಾ 07.04.2009ರ ವಿಜಯಕರ್ನಾಟಕದ ಎರಡನೇ ಪುಟದಲ್ಲಿ ವರದಿಯಾಗಿದೆ! ಈ ಮಾತುಗಳ್ನ ಎಲ್ಲೋ ಕೇಳ್ದಂಗೈತೆ ಅನ್ಕೋತಾ ಇದೀರಾ? ನಮ್ಮ ಕಲಾವಿದರು ಇದುವರೆಗೂ ಆಗಾಗ ಬಳುಸ್ತಿದ್ದ "ಕಲಾವಿದರಿಗೆ ಭಾಷೆಯಿಲ್ಲ" ಅನ್ನೋದ್ರ ಮುಂದುವರಿದ ರೂಪಾ ಇದು ಅನ್ನುಸ್ತಿಲ್ವಾ? ಗುರು!!

ಭಾಷಾ ಆಯಾಮ ಮತ್ತು ಪ್ರಜಾಪ್ರಭುತ್ವ

ಜನರಿಂದ ಜನರಿಗಾಗಿ ಅಂತ ಇರೋ ಈ ಜನಪ್ರತಿನಿಧಿ ಆಯ್ಕೆಯ ರಾಜಕಾರಣದಲ್ಲಿ ಜನರಿಂದ ಆಯ್ಕೆ ಆಗೋ ನಾಯಕರಿಗೆ ಜನರ ಭಾಷೇನೇ ತಿಳಿದಿಲ್ಲಾ ಅಂದಮೇಲೆ ಅವರ ಸಮಸ್ಯೆ ತಿಳಿದೀತೇ? ಯಾವುದೇ ಜನಾಂಗದ ಸಂಸ್ಕೃತಿ, ನಂಬಿಕೆ, ಜೀವನಶೈಲಿ, ಮೌಲ್ಯಗಳು ಇದನ್ನೆಲ್ಲಾ ಅರೀಬೇಕು ಅಂದ್ರೆ ಆಯಾ ಜನರ ನುಡಿ ಕಲೀಬೇಕು ಅನ್ನೋದು ಸಾಮಾನ್ಯಜ್ಞಾನ. ಅಂಥದ್ರಲ್ಲಿ ಆ ಜನರನ್ನು ಪ್ರತಿನಿಧುಸ್ತೀನಿ ಅನ್ನೋರಿಗೆ ಆಯಾ ಜನರ ಭಾಷೆ ಬರ್ದಿದ್ರೆ ಅದೆಂಗ್ ಸುಗಮವಾಗಿ ಕೆಲಸ ಮಾಡಕ್ಕಾಗುತ್ತೇ ಗುರು! ತಮ್ಮ ಪಕ್ಷ ನಿಲ್ಸಿದೇ ಅನ್ನೋಕಾರಣಕ್ಕೆ ಪರಭಾಷಿಕ ಅಭ್ಯರ್ಥಿಗಳನ್ನು ಸಮರ್ಥಿಸೋ ಭರದಲ್ಲಿ ರಾಜಕಾರಣಿಗಳು ಹಿಂಗ್ ಎಡವಟ್ಟು ಹೇಳಿಕೆ ಕೊಡ್ತಿದಾರೆ ಅಂತ ಜನರು ಬಾಯಿಗ್ ಸಿಕ್ಕಂಗ್ ಬಯ್ಯೋ ಮೊದಲು ಇವ್ರು ತಿದ್ಕೋಬೇಕು ಬೇಕು ಗುರು! ತಿದ್ಕೋಬೇಕು!!

13 ಅನಿಸಿಕೆಗಳು:

ಅಜೇಯ ಅಂತಾರೆ...

ಈಕೆ ಮಾಜಿ ಕನ್ನಡ ಮತ್ತು ಸಂಸಕೃತಿ ಮಂತ್ರಿ. ಎಂಥ ದುಃಸ್ತತಿ!

ಸುದೀಪ್ ಅಂತಾರೆ...

ರಾಣಿ ಸತೀಶ್ ಗೆ ಬಹುಷಯ ಈ ಬುದ್ದಿವಾದದ ಮಾತುಗಳನ್ನು ಅನುವಾದ ಮಾಡಿ ತಮಿಳಲ್ಲೋ ತೆಲುಗಲ್ಲೋ ಬರೆದುಕೊಟ್ರೆ ಅದಕ್ಕೂ ಜೈ ಅ೦ತಾರೆ. ನಾಡು ನುಡಿಯ ಬಗ್ಗೆ ಕಾಳಜಿ ಇಲ್ಲದೆ ಇರುವ ಇ೦ತಹ ಅಭಿಮಾನ ಶೂನ್ಯರೂ ಸಹ ನಮ್ಮ ರಾಜ್ಯದ ರಾಜಕಾರಣದಲ್ಲಿರುವುದು ಕನ್ನಡಿಗರ ದುರ್ದೈವ.

Unknown ಅಂತಾರೆ...

ಕನ್ನಡದ ಬಗ್ಗೆ ಅಸಡ್ಡೆಯ ಮಾತುಗಳನ್ನಾಡಿರೋ ಈ ರಾಣಿ ಸತೀಶ್ ಒಂದು ಕಾಲದಲ್ಲಿ 'ಕನ್ನಡ ಮತ್ತು ಸಂಸ್ಕೃತಿ ಸಚಿವೆ' ಆಗಿದ್ದವಳು!! ಇಂಥವರನ್ನ ತಗೊಂಡು ಕನ್ನಡದ ಮಿನಿಸ್ಟರ್ ಮಾಡಿರೋದು ಎಂಥ ಅನಾಹುತ ಗುರು!!

Anonymous ಅಂತಾರೆ...

ಇವರು ರಾಜಕಾರಣ ಮಾಡಲಿಕ್ಕೆ ಬುದ್ಧಿ ಕೂಡ ಬೇಕಿಲ್ಲ ಅಂತ ನಂಬಿರೋ ಜನ ..... ಏನಂತೀರಾ ಗುರು ??

ಗುರುಪ್ರಸಾದ

ಅಆಇಈ ಅಂತಾರೆ...

ನಿಮಗೆ ಬರೀ ನೆಗೆಟಿವ್ವೇ ಕಾಣಿಸುತ್ತದೋ ಕಣ್ಣಿಗೆ, ಹೇಗೆ? ಅದೇ ಸುದ್ದಿಯಲ್ಲಿ ಸಾಂಗ್ಲಿಯಾನ ಅವರು "ಇಂಗ್ಲೀಷ್ ನಲ್ಲಿ ನಾಲ್ಕಾರು ಮಾತುಗಳನ್ನು ಬಿಟ್ಟರೆ ಉಳಿದದ್ದೆಲ್ಲ ಕನ್ನಡದಲ್ಲೇ ಮಾತನಾಡಿದರು" ಎಂದಿರುವುದು ನಿಮಗೆ ಕಾಣಿಸಲಿಲ್ಲವೋ ಹೇಗೆ? ಅದರ ಬಗ್ಗೆ "ವಲಸಿಗರು ಕನ್ನಡ ಕಲಿಯುತ್ತಿದ್ದಾರೆ" ಎಂದು ಒಂದು ಪಾಜಿಟಿವ್ ಸ್ಟೋರಿ ಕೊಡಬಹುದಿತ್ತಲ್ಲ ಗುರು?

Akshaya ಅಂತಾರೆ...

worst case scenario andre namma karnataka mantri galu maatra madadu ee tara kantri kelsa. bere rajyada rajakaranigalu ee tara kelsa madodanna idu vargu naanontu nodilla

Anonymous ಅಂತಾರೆ...

ಸ್ವಾಭಿಮಾನ ಇಲ್ದೆ ಇರೋ ನರಸತ್ತ ಜನ

Priyank ಅಂತಾರೆ...

ದಡ್ಡ ರಾಜಕಾರಣಿ ಗುರು !

Anonymous ಅಂತಾರೆ...

ಅಆಇಈ ಅವ್ರೇ,

ಆ ಯಪ್ಪ ಇಲ್ಲಿ ಬಂದು ಮೂವತ್ತೋ ನಲವತ್ತೋ ವರ್ಷಗಳಾಗಿವೆ, ಅಷ್ಟರಮೇಲೂ ಕನ್ನಡ ಕಲಿತದ್ದು ವಲಸಿಗರು ಕಲಿತರು ಅನ್ನೋ ಪಾಸಿಟಿವ್ ಕಥೆಯಾಗೋ ಅಷ್ಟು ಯೋಗ್ಯತೆ ಹೊಂದಿಲ್ಲ ಬಿಡಿ. ಅದೂ ಅಲ್ಲದೆ ಅಲ್ಲಿದ್ದ ಕನ್ನಡಿಗರೆಲ್ಲಾ ಧನ್ಯರಾದಂತೆ ಅಷ್ಟೇ ಕನ್ನಡಕ್ಕೆ ’ಸಾಕು ಸಾಕು’ ಅಂದ್ರೂ ಅಂತಲೂ ಇದೆಯಲ್ಲಾ ಆ ವರದೀಲಿ!ರಾಣಿ ಸತೀಶ್ ಅವ್ರು ಸಾಂಗ್ಲಿಯಾನಾ ಅವರಿಗೆ ಕನ್ನಡ ಬರಲ್ಲ ಅಂದಿದ್ದು ತಪ್ಪು ಮಾಹಿತಿ ಅಂತೀರಾ ಹಾಗಾದ್ರೆ. ಆ ಯಜಮಾನರ ಕನ್ನಡ ಒಮ್ಮೆ ಕೇಳುದ್ರೆ ಸಾಕು, ಓಡ್ ಹೋಗಬೇಕಾಗುತ್ತೆ...ಹ ಹ್ಹ ಹ್ಹಾ!ಇನ್ನೂ ಚಿರಂಜೀವಿ ಸಿಂಗ್ ಅವರು ಈ ಯಪ್ಪಂಗಿಂತಾ ಸಾವಿರ ಪಾಲು ವಾಸಿ.

ಸುಂದರ್

Anonymous ಅಂತಾರೆ...

Sariyaagi Helidri Sundar avre.

-naga

ಸಾಗರದಾಚೆಯ ಇಂಚರ ಅಂತಾರೆ...

ನಮ್ಮ ಸಂಸ್ಕ್ರತಿಯನ್ನು ಇಂಥವರು ನಿರ್ಧರಿಸುತ್ತಾರೆ. ಎಂಥ ದುಸ್ಥಿತಿ ನೋಡಿ

Kannada movies ಅಂತಾರೆ...

baayi bittare bannageDu .. namma mantri gaLa kathe .. idanne madras nalli Heliddare (kamal haasan bandu namge helidante) .. adontara .. abhimaana illada jana ...

namma hindina peeLige (eega 40 ra vayassu meliruva) kathene heege ansatte .. eegeega yuva peelige yavaru kannadada abhimaana torsuttirudu santoshada sangati ..

Amarnath Shivashankar ಅಂತಾರೆ...

ಇದೇ ರಾಣಿ ಸತೀಶರನ್ನ ನಮ್ಮ ಇಂಜಿನೀರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಮಾಡಿದ್ದಾಗ ಯಾರದೋ ಶಿಫ಼ಾರಸ್ಸಿನ ಮೇಲೆ ಕರೆಸಿದ್ದೆವು.
ಈಯಮ್ಮ ಆಗಿನ ಕನ್ನಡ ಮತ್ತು ಸಂಸ್ಕೃತಿ ಮಂತ್ರಿಗಲಾಗಿದ್ರು ಅನ್ನಿಸುತ್ತದೆ.
ಧ್ವನಿವರ್ಧಕದ ಮುಂದೆ ನಿಂತ ತಕ್ಷಣ ಶುರು ಆಯಿತು ನೊಡ್ರಪ್ಪಾ. ಎಲ್ಲಿಲ್ಲದ ಕನ್ನಡಾಭಿಮಾನ, ಕನ್ನಡದ ಕಿಚ್ಚು.
ನಮ್ಮ ಭಾಷೆ ಹಂಗೆ, ನಾವು ಕನ್ನಡಿಗರು ಹಿಂಗೆ ಅಂತ ಬುರುಡೆ ಪುರಾಣ ಹೇಳಿದ್ದು ಹೇಳಿದ್ದೇ.
ರಾಜಕಾರಣಿಗಳು ಊಸರವಳ್ಳಿಗಳ ತರ ಪದೇ ಪದೇ ಬಣ್ಣ ಬದಲಾಯಿಸ್ತಾರೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಇದು.

ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕೇ ಬೇಕಿದೆ. ನಾರಾಯಣ ಗೌಡರೇ, ಅದು ನಿಮ್ಮಿಂದ ಮಾತ್ರ ಸಾಧ್ಯ. ದಯವಿಟ್ಟು ನಮ್ಮ ಬೇಡಿಕೆಯನ್ನು ಸಾಕಾರಗೊಳಿಸಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails