ನಮ್ಮ ಮೆಟ್ರೋ: ಕೇಂದ್ರದ ಒಪ್ಪಿಗೆಪತ್ರದಲ್ಲೇನಿದೆ ಗೊತ್ತಾ?

(ಫೋಟೋ ಕೃಪೆ: http://sandeepvarma.com)

ಬೆಂಗಳೂರಿನ ನಮ್ಮ ಮೆಟ್ರೋ ಬಗ್ಗೆ ಬಿಎಂಆರ್‌‍ಸಿಎಲ್ ಸಂಸ್ಥೆಯ ಮಿಂಬಲೆಯಲ್ಲಿ ಕೊಂಚ ಹುಡುಕಾಟ ನಡೆಸಿದರೆ ಒಳ್ಳೊಳ್ಳೆ ಮಾಹಿತಿಗಳು ಸಿಗುತ್ವೆ! ಮೊನ್ನೆ ಅದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿವಸೈಲಂ ಅವರು "ಇದು ಕೇಂದ್ರಸರ್ಕಾರದ ಅಧೀನ ಸಂಸ್ಥೆ... ಅದುಕ್ಕೇ ಹಿಂದೀ ಹಾಕ್ತೀವಿ" ಎನ್ನುವ ಧ್ವನಿಯಲ್ಲಿ ಮಾತಾಡಿದ್ದನ್ನು ಓದಿಯೇ ಇದ್ದೇವೆ. ಆ ಹಿನ್ನೆಲೆಯಲ್ಲಿ ರಾಜ್ಯ ಕೇಂದ್ರಗಳ ನಡುವಿನ ಈ ಜಂಟಿ ಯೋಜನೆಯ ಇತಿಹಾಸ ನೋಡಿದರೆ, ಭಾರತ ಸರ್ಕಾರ ತನ್ನ ರಾಜ್ಯಗಳನ್ನು ಹೇಗೆ ನಡೆಸಿಕೊಳ್ಳುತ್ತದೆ? ಒಕ್ಕೂಟದಲ್ಲಿ ರಾಜ್ಯಗಳನ್ನು ಏನೆಂದು ಪರಿಗಣಿಸುತ್ತದೆ? ಎಂಬುದರ ಬಗ್ಗೆ ಸುಳುಹು ನೀಡೋ ಒಂದು ದಾಖಲೆಯನ್ನು ಇಲ್ಲಿ ನೋಡಿ!

ಕೇಂದ್ರದ ಕರಾರುಗಳು ರಾಜ್ಯದ ಕೊಡುಗೆ

ನಮ್ಮ ಮೆಟ್ರೋ ಸಂಸ್ಥೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಆರಂಭಿಸಿದ್ದು ೧೯೯೪ರಲ್ಲಿ. ಇಡೀ ಯೋಜನೆಯನ್ನು ರೂಪಿಸಿ ರಾಜ್ಯಸರ್ಕಾರ ಚಾಲನೆ ನೀಡಿದ್ದು ೨೦೦೫ರಲ್ಲಿ. ಇದಕ್ಕೆ ಕೇಂದ್ರಸರ್ಕಾರವು ಒಪ್ಪಿಗೆ ನೀಡಿದ್ದು ೨೦೦೬ರಲ್ಲಿ. ಈ ಒಪ್ಪಿಗೆ ಪತ್ರದ ಸಾರಾಂಶ ನೋಡಿದಾಗ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳೆಲ್ಲಾ ಭಾಗೀದಾರರಲ್ಲದೆ ಸಾಮಂತರಾಗಿದ್ದಾವೆನ್ನುವ ಅನುಮಾನ ಓದುಗರಲ್ಲಿ ಮೂಡಿದಲ್ಲಿ ಅಚ್ಚರಿಯಿಲ್ಲ. ಈ ಒಪ್ಪಿಗೆ ಪತ್ರದಲ್ಲೇನಿದೆ ನೋಡೋಣ ಬನ್ನಿ:
೭. ಕೆಳಗಿನ ಸಮಿತಿಗಳನ್ನು ರಚಿಸತಕ್ಕದ್ದು:
ಉನ್ನತಾಧಿಕಾರವುಳ್ಳ ಜಾರಿ ಸಮಿತಿ: ಮೆಟ್ರೋ ಯೋಜನೆಯನ್ನು ಜಾರಿ ಮಾಡುವಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸುವ ಹೊಣೆ ಈ ಸಮಿತಿಯದ್ದು. ನೆಲ ವಶಪಡಿಸಿಕೊಳ್ಳುವಲ್ಲಿ, ಸೌಕರ್ಯ ಸರಬರಾಜು ಮಾರ್ಗ ಬದಲಾವಣೆ, ಮೆಟ್ರೋ ಯೋಜಿತ ಮಾರ್ಗಕ್ಕೆ ಅಡ್ಡಿಯಾಗುವ ಕಟ್ಟಡ/ ನಿರ್ಮಾಣಗಳ ಸ್ಥಳಾಂತರ, ಯೋಜನೆಯಿಂದಾಗಿ ಸಂತ್ರಸ್ತರಾಗುವ ಜನರ ಪುನರ್ವಸತಿಯೇ ಮೊದಲಾದವುಗಳನ್ನು ನಿಭಾಯಿಸುವುದು ಈ ಸಮಿತಿಯ ಹೊಣೆಯಾಗಿರುತ್ತದೆ. ಈ ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಮುಖ್ಯಸ್ಥರನ್ನಾಗಿ ಹೊಂದಿರುತ್ತದೆ. ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳು, ಜನಪ್ರತಿನಿಧಿ ಸಂಸ್ಥೆಗಳ ಮುಖ್ಯಸ್ಥರುಗಳು ಈ ಸಮಿತಿಯ ಇತರೆ ಸದಸ್ಯರಾಗಿರುತ್ತಾರೆ. ಈ ಸಮಿತಿಯು ತಿಂಗಳಿಗೊಮ್ಮೆ ಸಭೆ ಸೇರಿ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುತ್ತದೆ.
ಸರ್ವೋನ್ನತ ಸಮಿತಿ: ಕರ್ನಾಟಕದ ಒಬ್ಬ ಸದಸ್ಯರನ್ನು ಸಮಿತಿಗೆ ಸೇರಿಸಿಕೊಳ್ಳುವ ಮೂಲಕ ಬೆಂಗಳೂರಿನ ನಮ್ಮ ಮೆಟ್ರೋವನ್ನೂ ಕೂಡಾ ನವದೆಹಲಿಯಲ್ಲಿನ ಮೆಟ್ರೋ ಸಂಸ್ಥೆಯನ್ನು ನಿಯಂತ್ರಿಸುತ್ತಿರುವ ಉನ್ನತ ಸಮಿತಿಯ ವ್ಯಾಪ್ತಿಗೆ ಸೇರಿಸಲಾಗಿದೆ. 
ಮಂತ್ರಿಗಳ ಸಮಿತಿ: ಕರ್ನಾಟಕದ ಮುಖ್ಯಮಂತ್ರಿಯನ್ನು ಇದರ ಶಾಶ್ವತ ಆಹ್ವಾನಿತರನ್ನಾಗಿಸುವ ಮೂಲಕ “ನಿಯಮಗಳನ್ನು ರೂಪಿಸುವ ಹಾಗೂ  ದೆಹಲಿ ಮೆಟ್ರೋದ ಪ್ರಗತಿಯನ್ನು ಪರಿಶೀಲಿಸುವ" ಹೊಣೆಗಾರಿಕೆಯುಳ್ಳ ಸಮಿತಿಯ ವ್ಯಾಪ್ತಿಗೆ ಬೆಂಗಳೂರು ಮೆಟ್ರೋವನ್ನೂ ಸೇರಿಸಲಾಗಿದೆ.
೮. ನಿಬಂಧನೆಗಳು:
ಇಡೀ ಯೋಜನೆಗೆ ಬೇಕಾದ ಭೂಮಿಯ ಬೆಲೆಯನ್ನು ಕರ್ನಾಟಕ ಸರ್ಕಾರವು ಬಡ್ಡಿ ರಹಿತ ಅಧೀನ ಸಾಲದ ಮೂಲಕ ಭರಿಸತಕ್ಕದ್ದು.
ಕರ್ನಾಟಕ ಸರ್ಕಾರವು ಇಡೀ ಯೋಜನೆಗೆ ಅಗತ್ಯವಿರುವ ವಿದ್ಯುತ್ತನ್ನು ಯಾವುದೇ ಲಾಭ ನಷ್ಟವಿಲ್ಲದ ದರದಲ್ಲಿ ಪೂರೈಸತಕ್ಕದ್ದು.
ಮೂಲಯೋಜನೆಯ ಲೆಕ್ಕಾಚಾರದಂತೆ ಪ್ರಯಾಣಿಕರನ್ನು ಸೆಳೆಯಲು ಪ್ರಯಾಣ ಬೆಲೆ ನಿರ್ಧಾರವೇ ಮೊದಲಾದ ಕ್ರಮಗಳ ಮೂಲಕ ರಾಜ್ಯಸರ್ಕಾರವು ಕ್ರಮತೆಗೆದುಕೊಳ್ಳತಕ್ಕದ್ದು.
ಕರ್ನಾಟಕ ಸರ್ಕಾರವು ಮೆಟ್ರೋ ಪ್ರಯಾಣಿಕರನ್ನು ನಿಲ್ದಾಣಕ್ಕೆ ಕರೆತರುವ ಪೂರಕ ಸಾರಿಗೆ ವ್ಯವಸ್ಥೆಯ ಯೋಜನೆಗಳಿಗೆ ಆದ್ಯತೆ ನೀಡತಕ್ಕದ್ದು.
ಭಾರತ ಸರ್ಕಾರವು ಯೋಜನೆಯ ಎರಡನೇ ವರ್ಷದಲ್ಲಿ ಕೊಳ್ಳಲಾಗುವ ಹೆಚ್ಚುವರಿ ರೈಲುಗಳನ್ನು ಕೊಳ್ಳಲು ಹಣನೀಡುವುದಿಲ್ಲ. ಏಕೆಂದರೆ ಇದು ಯೋಜನೆಯ ಅಂಗವಾಗಿರುವುದಿಲ್ಲ.
ಭಾರತ ಸರ್ಕಾರವು ಯೋಜನೆಯು ಜಾರಿಯಾಗುವ ಸಂದರ್ಭದಲ್ಲಾಗುವ ಹಣಕಾಸು ನಷ್ಟವನ್ನಾಗಲೀ, ಯೋಜನೆಯ ಚಾಲ್ತಿ ವೆಚ್ಚವನ್ನಾಗಲೀ ಭರಿಸುವುದಿಲ್ಲ.
ಇವೆಲ್ಲವನ್ನೂ ಕರ್ನಾಟಕ ಸರ್ಕಾರ/ ವಿಶೇಷ ಉದ್ದೇಶದ ವಾಹಕವೇ ಭರಿಸತಕ್ಕದ್ದು.ಯೋಜನೆಯನ್ನು ಜಾರಿಗೊಳಿಸಿದ ನಂತರ ಬಿಎಂಆರ್‍‍ಸಿಎಲ್ ಸಂಸ್ಥೆಯು ದೀರ್ಘಾವಧಿ ಸಾಲವನ್ನು ಮಾರುಕಟ್ಟೆಯಲ್ಲಿ ಸ್ವತಂತ್ರವಾಗಿ ಹುಟ್ಟಿಸಿಕೊಳ್ಳಬಹುದಾಗಿದೆ ಮತ್ತು ಇದರ ಬಗ್ಗೆ ಸರ್ಕಾರವು ಯಾವುದೇ ರೀತಿಯಲ್ಲಿ ಹೊಣೆಗಾರಿಕೆ ಹೊಂದಿರುವುದಿಲ್ಲ ಮತ್ತು ಗ್ಯಾರಂಟಿಯನ್ನು ನೀಡುವುದಿಲ್ಲ. ಆದಾಗ್ಯೂ ವಿದೇಶಿ ಸಾಲವನ್ನು ಪಡೆಯಲು ಉದ್ದೇಶಿಸಿದಲ್ಲಿ ಕೇಂದ್ರಸರ್ಕಾರವು ಅದಕ್ಕೆಂದೇ ರೂಪಿಸಿರುವ ನಿಯಮಗಳು ಇದಕ್ಕೂ ಅನ್ವಯವಾಗುತ್ತದೆ.
ಇದೆಲ್ಲಕ್ಕೂ ಕಲಶವಿಟ್ಟಂತೆ ನಮ್ಮ ಮೆಟ್ರೋದ ಮುಖ್ಯಸ್ಥರಾದ ಶ್ರೀ ಶ್ರೀ ಶ್ರೀ ಸಿವಸೈಲಂ ಅವರು "ನಮ್ಮ ಮೆಟ್ರೋ"ಲಿ ಹಿಂದೀ ಭಾಷೆಯನ್ನು ಹಾಕೋದು, ಹಿಂದೀ ಭಾಷಿಕರಿಗೆ ಎಲ್ಲಾ ಸೇವೆ ಹಿಂದಿಯಲ್ಲೇ ಸಿಗುವಂತೆ ಮಾಡೋದು, ಭಾರತದ ಏಕತೆಯನ್ನು ಹೆಚ್ಚಿಸುವ ಸಾಧನವೆಂದು ನಂಬಿದವರಂತೆ "ಇದು ಕೇಂದ್ರಸರ್ಕಾರದ ಯೋಜನೆ, ರಾಷ್ಟ್ರೀಯ ಏಕತೆಗಾಗಿ ರೂಪಿಸಿರುವ ರಾಷ್ಟ್ರೀಯ ನಿಯಮದ ರೀತ್ಯಾ ಹಿಂದೀಯನ್ನು ಬಳಸಿದ್ದೇವೆ. ನೀವು ಸ್ವಲ್ಪ ಸಹಿಷ್ಣುಗಳಾಗಬೇಕು" ಎನ್ನೋ ಉಪದೇಶವನ್ನು ನೀಡುತ್ತಿರುವ ಈ ಸಂದರ್ಭದ ಹಿನ್ನೆಲೆಯಲ್ಲಿ ಮೆಟ್ರೋಗೆ ಕೇಂದ್ರಸರ್ಕಾರ ನೀಡಿರುವ  ಒಪ್ಪಿಗೆ ಪತ್ರವನ್ನು ನೋಡಿದಾಗ... ನಿಮಗೆಕೇಂದ್ರಸರ್ಕಾರವು ನಮ್ಮಮೆಟ್ರೋದ ಮೇಲೆ ಅಧಿಕಾರ ಹೊಂದಲು ಬಯಸುತ್ತದೆ ಮತ್ತು ಹೊಣೆಗಾರಿಕೆ ಹೊಂದಲು ಬಯಸುವುದಿಲ್ಲ. ನೀತಿ ನಿಯಮಗಳ ನಿಯಂತ್ರಣ ಬೇಕು, ಲಾಭದಲ್ಲಿ ಪಾಲು ಬೇಕು, ನಷ್ಟವೆಲ್ಲಾ ರಾಜ್ಯಸರ್ಕಾರ ಹೊರಬೇಕು, ಭೂಮಿಯ ಬೆಲೆಯನ್ನೆಲ್ಲಾ ರಾಜ್ಯ ಭರಿಸಬೇಕು, ರಾಜ್ಯಸರ್ಕಾರ ತೆರಿಗೆ ಹಾಕಬಾರದು, ಕೇಂದ್ರ ಮಾತ್ರಾ ತೆರಿಗೆ ವಿನಾಯ್ತಿ ನೀಡುವುದಿಲ್ಲ, ಸಂಸ್ಥೆ ಲಾಭದಾಯಕವಾಗಿ ನಡೆಯಲು ಫೀಡರ್ ವ್ಯವಸ್ಥೆಯನ್ನು ನಷ್ಟವಾದರೂ ರಾಜ್ಯಸರ್ಕಾರ ನಡೆಸಬೇಕುಮೆಟ್ರೋಲಿ ಅಗತ್ಯವಿರುವಷ್ಟು ಪ್ರಯಾಣಿಕರನ್ನು ಕರೆತರುವ ಹೊಣೆ ರಾಜ್ಯಸರ್ಕಾರದ್ದುಕೇಂದ್ರದ್ದು ಮೆಟ್ರೋನ ನಿಯಂತ್ರಣ ಮಾಡೋದಷ್ಟೇ ಕೆಲಸ, ಹಾಕಿರೋ ಮೂರು ಮತ್ತೊಂದು ಕಾಸಿಗೆ ಹಿಂದೀನ ನಮ್ಮ ಮೇಲೆ ಹೇರೋಕೆ ಮುಂದಾಗಿದ್ದಾರೆಎಂದು ಅನ್ನಿಸಿದರೆ ಅದು ನಮ್ಮ ತಪ್ಪಲ್ಲಾ ಗುರೂ! ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಇರೋದೇ ಹೀಗೇ!

4 ಅನಿಸಿಕೆಗಳು:

vaiju ಅಂತಾರೆ...

ಮಾನ್ಯರೆ, ನಮ್ಮ ದರಿದ್ರ ವ್ಯವಸ್ಥೆ(1950ರಿಂದೀಚೆಗೆ) ಇರೋದೇ ಹೀಗೆ ಎಲ್ಲವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಳ್ಳಬಯಸುವ ರಾಜ(ಕಪಿ)ಕಾರಣಿಗಳಿಂದಾಗಿ ಇವೊತ್ತು ನಮ್ ದೇಶ ೀ ೀಈ ಸ್ಥಿತಿಗೆ ಬಂದಿದೆ ಇದಕ್ಕೆ ಒಂದು ಪರಿಹಾರ ವೆಂದರೆ ಅಮೇರಿಕಾ ಅಧ್ಯಕ್ಷೀಯ ಮಾದರಿ ಆಡಳಿತ ಜಾರಿಗೆ ಬರಬೇಕು ಇದಕ್ಕೆ ನಮ್ ದೇಶದ ದರಿದ್ರ? (ಬೌದ್ಧಿಕ ದಾರಿದ್ರ್ಯ ಮತ್ತು ಸ್ವಾರ್ಥ) ಜನರ ಮನ ಬದಲಾದಾಗ ಸಾಧ್ಯವಾಗುತ್ತೆ ಅದೂ 2020ರವೇಳೆಗೆ ಸಾಕಾರವಾಗುತ್ತದೆ ಎಂಬ ನಂಬಿಕೆಯಲ್ಲಿರೊಣ...
ವೈಜನಾಥ ಗುರುಮಠಕಲ್ ಹಿರೇಮಠ, ಯಾದಗಿರಿ | ಹೊಸಜಿಲ್ಲೆ

Anonymous ಅಂತಾರೆ...

ಎಂ.ಎನ್. ಮಂಜುನಾಥ್, ತುಮಕೂರು: ಇದು ತೀರಾ ಕಳವಳಕಾರಿಯಾದ ವಿಷಯ. ಎಲ್ಲಾಹಂತಗಳಲ್ಲೂ ಕೇಂದ್ರ ಸರ್ಕಾರ ತನ್ನ ಮಲತಾಯಿ ಧೋರಣೆಯನ್ನ ಸಮರ್ಥಿಸಿಕೊಳ್ಳಲು ಸಿಗುವ ಎಲ್ಲ ಅವಕಾಶಗಳನ್ನ ಚೆನ್ನಾಗಿ ಬಳಸಿಕೊಳ್ಳುತ್ತಿರುವಂತಿದೆ ...

dhiraj ಅಂತಾರೆ...

nachike agabeku ..inta hindi herike yannu sahisikollutiruva namma rajya sarkarakke..........ee hindi herike yannu tamilu nadinalli madalu kendra sarkarakke agutitte...sadyavilla..........yakendare tamilu nadina rajakaranigalu gandasaru , shikandigalalla ...inta naduvalike namma rajakaranigalige anvayavaguvudilla ...adakke karnatakakke matra ee hindi herike.......

dhiraj ಅಂತಾರೆ...

Kendra sarkara...namma rajyadinda...TAX rupadalli bhikshe padedu.....adannu namage kodallu ...navu avara samskruti anusarisa beku yennuva sharattannu vidisuttade ...adannu navu opputteve yendare...idu namma kannadigara daurbalyave horathu berenu alla..........Kannada tayi dhanyaladalu inta makkalannu padedu....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails