ಹಿಂಗ್ಲೀಷ್ ಜಾಹೀರಾತು - ದುಡ್ಡು ದಂಡ !

ಈ ಬ್ಲಾಗಿನ ಸಂಪಾದಕರು: ಶ್ರೀ ಆನಂದ್. ಇವರಿಗೆ ಮಿಂಚಿಸಲು ಇಲ್ಲಿ ಕ್ಲಿಕ್ಕಿಸಿ.
ಅಂತೂ ಇಂತೂ ರೈಲ್ವೆ ಯೋಜನೆಗಳ ವಿಷಯದಲ್ಲಿ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಿತು ಗುರು. ಫೆಬ್ರವರಿ 7 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿಯವರು ಕರ್ನಾಟಕದ ಈ ಕೆಳಗಿನ 19 ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದರು:
- ಚಾಮರಾಜನಗರ - ಮೆಟ್ಟುಪಾಳ್ಯ ಯೋಜನೆಗೆ ಚಾಲನೆ.
- ಮೈಸೂರು - ಶಿವಮೊಗ್ಗ ನಡುವೆ ಕುವೆಂಪು ಎಕ್ಸ್-ಪ್ರೆಸ್ ರೈಲಿಗೆ ಚಾಲನೆ.
- ಮಂಗಳೂರು - ಬೆಂಗಳೂರು ನಡುವೆ ವಾರಕ್ಕೆ ಒಂದು ದಿನ ಇದ್ದ ರೈಲನ್ನು ಪ್ರತಿ ದಿನಕ್ಕೆ ವಿಸ್ತರಣೆ.
- ಕೊಡಗು - ಬೆಂಗಳೂರು ನಡುವ ಮಾರ್ಗ ಸಮೀಕ್ಷೆಗೆ ಚಾಲನೆ.
- ಬೆಳಗಾವಿ - ಬೆಂಗಳೂರು - ಮೈಸೂರು ಜನ ಶತಾಬ್ದಿ ರೈಲ್ವೆ ಯೋಜನೆಗೆ ಚಾಲನೆ.
- ಚಿತ್ರದುರ್ಗ - ಬೆಂಗಳೂರು ನಡುವೆ ಪ್ರತಿ ದಿನ ಓಡುವ ರೈಲು ಯೋಜನೆಗೆ ಚಾಲನೆ.
- ಮಂಗಳೂರು - ಕಾರವಾರ ಜನ ಶತಾಬ್ದಿ ರೈಲ್ವೆ ಯೋಜನೆಗೆ ಚಾಲನೆ.
- ಬಿಜಾಪುರ - ಬೆಂಗಳೂರು ಮಧ್ಯೆ ಹೊಸ ರೈಲು ಮಾರ್ಗಕ್ಕೆ ಚಾಲನೆ.
- ಧಾರವಾಡದಲ್ಲಿ ರೈಲ್ವೆ ಕೋಚ್ ಕಾರ್ಖಾನೆಗೆ ಸ್ಥಾಪನೆಗೆ ನಿರ್ಧಾರ.
- ಬೆಂಗಳೂರು ಮೈಸೂರು ಜೋಡಿ ಮಾರ್ಗಕ್ಕೆ ಚಾಲನೆ.
- ಮಂಗಳೂರು - ಕಾಸರಗೋಡು ನಡುವೆ ಪುಶ್ ಪುಲ್ ರೈಲು ಸೇವೆಗೆ ಚಾಲನೆ.
- ಬಿಜಾಪುರ - ಅಕ್ಕಲಕೋಟೆ ನಡುವೆ ವಾರಕ್ಕೆ 3 ಬಾರಿ ರೈಲು ಸೇವೆಗೆ ಚಾಲನೆ.
- ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗದ ಎಲ್ಲ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ನಡೆಸಲು 1000 ಕೋಟಿ ರೂಪಾಯಿ ಮಂಜೂರು.
- ಬರೋ 4 ವರ್ಷಗಳಲ್ಲಿ ಕರ್ನಾಟಕದ ಸುಮಾರು 1,000 ಕಿ.ಮೀ ರೈಲುಮಾರ್ಗ ವಿದ್ಯುತ್ ಮಾರ್ಗವಾಗಿ ಬದಲಿಸುವ ಯೋಜನೆಗೆ ಚಾಲನೆ.
- ಹರಿಹರ - ಕೊಟ್ಟೂರು ನಡುವೆ ಹೊಸ ರೈಲು ಮಾರ್ಗಕ್ಕೆ ಚಾಲನೆ.
- ಹುಬ್ಬಳ್ಳಿ - ದಾವಣಗೆರೆ ನಡುವೆ ದಿನವೂ ಓಡಾಡುವ ರೈಲಿಗೆ ಚಾಲನೆ.
- ಗುಲ್ಬರ್ಗಾ - ಹುಬ್ಬಳ್ಳಿ ನಡುವೆ ವಾರಕ್ಕೆ ೨ ಬಾರಿ ಓಡಾಡುವ ರೈಲಿಗೆ ಚಾಲನೆ.
- ಬಿಜಾಪುರ - ಬಾಗಲಕೋಟೆ ನಡುವೆ ಪುಶ್ ಪುಲ್ ರೈಲು ಸೇವೆಗೆ ಚಾಲನೆ.
- ಗದಗ - ಬಾಗಲಕೋಟೆ - ಬಿಜಾಪುರ ಮಾರ್ಗದಲ್ಲಿ ವಾರಕ್ಕೆ 3 ದಿನ ಸಂಚರಿಸುವ ರೈಲು ಮಾರ್ಗಕ್ಕೆ ಚಾಲನೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ದಿನ ಕರ್ನಾಟಕದ ಇತಿಹಾಸದಲ್ಲೇ ಮರೆಯಲಾಗದ್ದು ಎಂದರು. ಕರ್ನಾಟಕದ ರೈಲ್ವೆ ಕನಸುಗಳನ್ನೆಲ್ಲ ಒಂದೇ ಏಟಿಗೆ ಈಡೇರಿಸಿದ ರೈಲ್ವೆ ಇಲಾಖೆಯನ್ನು ತಮ್ಮ ಭಾಷಣದುದ್ದಕ್ಕೂ ಕೊಂಡಾಡಿದರು.
ನಿಲ್ಲಿ ನಿಲ್ಲಿ ನಿಲ್ಲಿ.... ಇದೆಲ್ಲ ಯಾವಾಗಾಯ್ತಪ್ಪಾ ಅಂದ್ಕೊಬಿಟ್ರಾ ?? ಯಾವ ಪೇಪರಲ್ಲೂ, ಯಾವ ಟಿವಿಲೂ ಈ ಸುದ್ದಿ ನೋಡೇ ಇಲ್ವಲ್ಲ ಅಂದ್ಕೊಂಡ್ರಾ? ನಿಮ್ಮ ಊಹೆ ಸರಿ ಗುರು, ಇದು ಬರೀ ತಮಾಶೆಗೆ ಅಂತಾ ಏನ್ ಗುರು ಕೊಟ್ಟ ಸುದ್ದಿ. ನಿಜಕ್ಕೂ ಇದೆಲ್ಲ ಆಗಿದ್ದು ಇಲ್ಲಲ್ಲ ದೂರದ ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶದಲ್ಲಿ ಮಮತಾ ಬ್ಯಾನರ್ಜಿ ಅವರು ಒಂದೇ ದಿನದಲ್ಲಿ ಚಾಲನೆ ನೀಡಿದ 19 ಯೋಜನೆಗಳ ವಿವರಗಳಿಗೆ ಪತ್ರಿಕೆಯಲ್ಲಿ ಬಂದ ಜಾಹೀರಾತಿನ ತುಣುಕನ್ನು ಇಲ್ಲಿ ಮತ್ತು ಇಲ್ಲಿ ನೋಡಿ.
ದಿಲ್ಲಿಯಲ್ಲಿ ಯಾವ ರಾಜ್ಯದ ಹಿಡಿತ ಬಿಗಿಯಾಗಿರುತ್ತೋ, ಆ ರಾಜ್ಯಗಳಿಗೆ ಮಾತ್ರ ಇಂತದೆಲ್ಲ ದಕ್ಕಿಸಿಕೊಳ್ಳಲು ಸಾಧ್ಯ ಗುರು. ಕರ್ನಾಟಕದಂತಹ ಪ್ರಾದೇಶಿಕ ಪಕ್ಷವಿಲ್ಲದ, ಸರಿಯಾದ ನಾಯಕತ್ವವಿಲ್ಲದ ನಾಡಲ್ಲಿ ಇದೆಲ್ಲ ಕನಸೇ ಸರಿ. ಏನಂತೀಯಾ ಗುರು?
ಕರ್ನಾಟಕದಲ್ಲಿ ಕನ್ನಡದ ತಲುಪು ಶಕ್ತಿ ಹೆಚ್ಚು!
ಕನ್ನಡವು ಕರ್ನಾಟಕದಲ್ಲಿ ಅತೀ ಹೆಚ್ಚು ಮಂದಿಗೆ ತಿಳಿದ ಭಾಷೆಯಾಗಿದ್ದು, ಜಾಹೀರಾತಿಗೆ ಕನ್ನಡ ಬಳಸುವುದೇ ಸರಿ ಎಂಬುದು ಕಾಮನ್‍ಸೆನ್ಸು. ಆದರೂ ಕೆಲವು ಕಂಪನಿಗಳು ಬಂದ ಹೊಸತರಲ್ಲಿ ತಪ್ಪೆಸಗಿ ನಂತರ “ಕೆಟ್ಟ ಮೇಲೆ ಬುದ್ಧಿ ಬಂತು” ಎಂಬಂತೆ ಕನ್ನಡದ ಅನಿವಾರ್ಯತೆ ಕಂಡುಕೊಳ್ಳುತ್ತಿವೆ ಅನ್ನುವ ಹಾಗಿದೆ. ವರ್ಜಿನ್ ಮೊಬೈಲ್‍ನವರಲ್ಲಾದ ಈ ಬದಲಾವಣೆಯು, “ಗ್ರಾಹಕನನ್ನು ಪರಿಣಾಮಕಾರಿಯಾಗಿ ಮುಟ್ಟಿ ಅವನ ಮನ ಒಲಿಸಲು ಆತನ ನುಡಿಗಿಂತಾ ಬೇರೊಂದು ಸಾಧನವಿಲ್ಲಾ” ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಗುರು!
ಕರ್ನಾಟಕದಲ್ಲಿ ವ್ಯಾಪಾರಕ್ಕೆ ಬರುವ ಪ್ರತಿಯೊಂದು ಕಂಪನಿಯೂ ಕನ್ನಡಿಗ ಗ್ರಾಹಕರನ್ನು ಆಕರ್ಷಿಸಲು ಕನ್ನಡವನ್ನು ಬಳಸುವುದೇ ಸರಿಯಾದ ಮತ್ತು ಸಹಜವಾದ ದಾರಿ. ಇಲ್ಲವಾದಲ್ಲಿ, ಮಾರುಕಟ್ಟೇನಾ ಗೆಲ್ಲೋದು ಕಷ್ಟ ಅನ್ನೋದು ಬೀದಿ ದಿಟ. ಇದುನ್ನ ಅರಿತಾಗ ಅವರಿಗೂ ಲಾಭ, ಇಲ್ದಿದ್ರೆ ಮುಟ್ಟೋ ಮೂರು ಮತ್ತೊಬ್ಬರನ್ನೇ ಗ್ರಾಹಕರನ್ನಾಗಿ ಪಡೆದು ಪಾಲಿಗೆ ಬಂದಿದ್ದೇ ಪಂಚಾಮೃತ ಅಂತಾ ಸಮಾಧಾನ ಪಟ್ಟುಕೋಬೇಕಾಗುತ್ತೆ, ಅಲ್ವಾ ಗುರು ?