ಕೋಕಾಕೋಲಾ ಕಂಡುಕೊಂಡ ಗೆಲುವಿನ ದಾರಿ!


ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಸ್ಟೈಲಲ್ಲೇ ಹೇಳೋದಾದ್ರೆ...
ಗೊತ್ತಾಗೋಯ್ತು ಕಣ್ರೀ,
ಕೋಕಾಕೋಲಾದವ್ರಿಗೆ ಗೊತ್ತಾಗೋಯ್ತು ಕಣ್ರೀ...
ಕರ್ನಾಟಕದಲ್ಲಿ ವ್ಯಾಪಾರ ಮಾಡಿ ಗೆಲ್ಲಬೇಕು ಅಂದ್ರೆ ಏನ್ ಮಾಡ್ಬೇಕು ಅಂತಾ ಗೊತ್ತಾಗೋಯ್ತು ಕಣ್ರೀ

ಕೋಕಾಕೋಲಾ ಸಂಸ್ಥೆಯವರು ಕರ್ನಾಟಕದ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ ಅವರನ್ನ ರಾಯಭಾರಿ ಮಾಡ್ಕೊಂಡಿರೋದೂ, ಅವ್ರುನ್ ಹಾಕ್ಕೊಂಡು ಜಾಹೀರಾತು ಮಾಡಿರೋದೂ ಒಳ್ಳೇ ಬೆಳವಣಿಗೆ ಗುರು!

ಮಾರುಕಟ್ಟೆ ಗೆಲ್ಲಕ್ಕಿದು ಸರಿಯಾದ ತಂತ್ರ!

ಕರ್ನಾಟಕದಲ್ಲಿ ಕನ್ನಡದಲ್ಲಿ ಜಾಹೀರಾತು ಹಾಕೋದು, ಕನ್ನಡದ ತಾರೆಯರನ್ನ ಪ್ರಚಾರಕ್ಕೆ ಬಳಸೋದು ಇಲ್ಲಿನ ಮಾರುಕಟ್ಟೆ ಗೆಲ್ಲೋಕೆ ಇರೋ ತಂತ್ರ ಅನ್ನೋದು ಅಂಗೈ ಮೇಲಿರೋ ಸ್ಪಟಿಕದಷ್ಟೇ ಸ್ಪಷ್ಟ. ಕೋಕಾಕೋಲಾ ಸಂಸ್ಥೆಗೆ ತಡವಾಗಿಯಾದ್ರೂ ಇದು ಅರ್ಥವಾಗಿದೆ ಗುರು! ಯಾವುದೇ ವಸ್ತೂನ ಕೊಳ್ಳಬೇಕಾದ್ರೆ ಅದರ ಬಗ್ಗೆ ಶಿಫಾರಸ್ಸು ಮಾಡೋರು ನಮ್ಮೋರು ಅನ್ನೋ ಭಾವನೆ ಕೊಳ್ಳುಗನಲ್ಲಿರಲಿ ಅನ್ನೋದೆ ಜಾಹೀರಾತುಗಳಲ್ಲಿ ಪರಿಚಿತ ಕಲಾವಿದರನ್ನು ಬಳಸೋಕಿರೋ ಕಾರಣ. ಇದನ್ನು ಮಾಡಕ್ಕೆ ಚೂರು ಜಾಸ್ತಿ ದುಡ್ಡು ಆಗುತ್ತೆ ಅಂತಾನೋ ಅಥ್ವಾ ಇನ್ನೊಂದಕ್ಕೋ ನಮ್ಮ ಉತ್ಪಾದಕರುಗಳು, ಜಾಹೀರಾತು ಸಂಸ್ಥೆಗಳೋರೂ ಒಂದು ಭಾಷೆಯ ಜಾಹೀರಾತನ್ನೇ ಎಲ್ಲಾ ಕಡೆ ಬರಿ ದನಿ ಬದಲಿಸಿ ಹಾಕ್ಕೊಳ್ಳೊ ದಾರಿ ತುಳಿಯುತ್ತಿದ್ರು ಅನ್ನೋದು ಗೊತ್ತೇ ಇರೋ ಸಂಗತಿ. ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಜನರ ಮನಸ್ಸಿಗೆ ತಲುಪಿಸಬೇಕು ಅನ್ನೋ ನಿಜವಾದ ಬುದ್ಧಿ ಮತ್ತು ಮನಸ್ಸಿದ್ದೋರು ಬಳಸೋ ದಾರೀನೇ ಈಗ ಕೋಕಾಕೋಲಾದವ್ರು ಕಂಡುಕೊಂಡಿದಾರೆ ಗುರು!

ಇದು ಕೊನೆಗೂ ಬದಲಾಗ್ತಾ ಇದೆ !

ಇವತ್ತಿನ ದಿವ್ಸಾ ಕೋಕಾಕೋಲಾ ಸಂಸ್ಥೆ ಇಟ್ಟಿರೋ ಈ ಹೆಜ್ಜೆ ನಾಡಿನ ಇತರೆ ಉದ್ದಿಮೆದಾರರಿಗೆ ಮಾದರಿಯಾಗಿದೆ. ಕರ್ನಾಟಕದಲ್ಲಿ ವ್ಯಾಪಾರ, ವ್ಯವಹಾರ ಮಾಡಲು ಬರುವ ಸಂಸ್ಥೆಗಳು ಹೆಚ್ಚೆಚ್ಚು ಲಾಭಗಳಿಸಲು ಇರುವ ಹಾದಿ ಎಂದರೆ ತಮ್ಮ ಜಾಹೀರಾತುಗಳನ್ನು ಹೆಚ್ಚೆಚ್ಚು ಕನ್ನಡಿಗರಿಗೆ ತಲುಪುವಂತೆ ಮಾಡುವುದು ಅಂತಾ ಸಾರ್ತಿದೆ. ಹಾಗೆ ಕನ್ನಡಿಗರ ಮನಸ್ಸನ್ನು ತಲುಪಲು, ಕನ್ನಡದ ಕಲಾವಿದರನ್ನು, ಜನಪ್ರಿಯ ಕನ್ನಡದ ಕ್ರೀಡಾಪಟುಗಳನ್ನು ತಮ್ಮ ಜಾಹೀರಾತುಗಳಲ್ಲಿ ಬಳಸಬೇಕು ಇದು ಲಾಭದಾಯಕ ಅನ್ನೋ ಸಂದೇಶಾನೂ ಕೊಡ್ತಿದೆ. ಇದರಿಂದ ಸಿನಿಮಾ ರಂಗದ ಜೊತೆಜೊತೆಗೇ ಜಾಹೀರಾತು ರಂಗದ ಅವಕಾಶವೂ ಸಿನಿಮಾ ಮಂದಿಗೆ ಸಿಗುತ್ತೆ. ಇದನ್ನು ಸಿನಿಮಾದವ್ರು ಅರ್ಥ ಮಾಡ್ಕೊಂಡು ಜಾಹೀರಾತು ಕ್ಷೇತ್ರಕ್ಕೆ ಧುಮುಕುದ್ರೆ ಇದರಿಂದ ಎರಡೂ ರಂಗದೋರಿಗೆ ಲಾಭ, ಸಂಸ್ಥೆಗಳಿಗೆ ಮಾರುಕಟ್ಟೆ ವಿಸ್ತಾರವಾಗೋದೂ ದಿಟ!! ಹೌದಲ್ವಾ ಗುರು?

4 ಅನಿಸಿಕೆಗಳು:

Anonymous ಅಂತಾರೆ...

ಹೌದು..ಸರಿಯಾಗಿ ಹೇಳಿದೀರ...ಖಂಡಿತಾ ಪ್ರಭಾವ ಬೀರುತ್ತೆ... ಗಣೇಶ ಬಂದ ಅಂತನೇ ಜಾಹೀರಾತನ್ನ ಸಂಪೂರ್ಣವಾಗಿ ನೋಡುವ ಜನ ಇದಾರೆ ಯಾಕೆ ಅಂದ್ರೆ ಅವ ನಮ್ಮನೆ ಹುಡುಗ ಅಂತ. ಎಂಥಾ ಸೂಕ್ಷ್ಮವಾದ ವಿಷಯ ಇದು !!! ಅಲ್ಲ.. ಇಂಥಾ ವಿಚಾರಗಳೇ ಮಾರುಕಟ್ಟೆ ಮೇಲೆ ಇಷ್ಟು ಪರಿಣಾಮ ಬೀರುವಾಗ ಕನ್ನಡ ಚಾನೆಲ್ ಗಳಲ್ಲಿ ನಮಗೆ ದೂರವಾದ ಆಂಗ್ಲ, ಹಿಂದಿ, ತೆಲುಗು ಭಾಷೇಲಿ ಜಾಹೀರಾತನ್ನ ಪ್ರಸಾರ ಮಾಡುತಾರಲ್ಲ ಏನು ಹೇಳಬೇಕು. ದೊಡ್ಡ ದೊಡ್ಡ ಹೊದ್ದೇಲಿ ಇದ್ದು, ಪ್ರಚಾರಕ್ಕೆ ಅಂತ ಕೋಟಿಗಟ್ಟಲೆ ಖರ್ಚು ಮಾಡ್ತಾರೆ.. ನೀರಲ್ಲಿ ಹೋಮ ಮಾಡಿದಹಾಗೆ ಸರಿ.

Anonymous ಅಂತಾರೆ...

ಕನ್ನಡದವರೇ ಆಗ್ಲೀ ಇನ್ಯಾರೇ ಆಗ್ಲಿ ಆದ್ರೂ ಕೋಕಾಕೋಲದಂತಹ ಪಾನೀಯವನ್ನು ಉತ್ತೇಜಿಸುವುದು ಅಷ್ಟೇನೂ ಸರಿಯಲ್ಲ.

ಹರಿಜೋಗಿ

Anonymous ಅಂತಾರೆ...

ಸರ್‍.

ಈ Adನ ವಿಡಿಯೋನೋ, ಪೋಟೋನೋ ತೋರಿಸ್ತೀರ....ಪ್ಲೀಸ್!?

Captionಗಳು, ಡಯ್ಲಾಗ್ಗಳು ಏನು ಎಂದು ತಿಳಿದ್‌ಕೊಳ್ಳೋ ಆಸೆ.

ನನ್ನಿ

gangadhara ಅಂತಾರೆ...

sariyaagi helidri guru.. nam janaanu mele barbeku..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails