ದೈನಂದಿನ ವ್ಯವಹಾರದಲ್ಲಿ ಹಿಂದಿ ಹೇರಿಕೆಯಿಂದ ಮಾನಸಿಕವಾಗಿ ಕುಗ್ಗುತ್ತಿರುವ ಕನ್ನಡಿಗ

ಕರ್ನಾಟಕದ ಎಲ್ಲಾ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳು, ಬ್ಯಾಂಕುಗಳು, ವಿಮಾ ಕಂಪನಿಗಳು - ಯಾರೇ ಆಗಲಿ - ನಮ್ಮ ಹತ್ರ ಕನ್ನಡ್ದಲ್ಲಿ ವ್ಯವಹರಿಸಬೇಕು, ಕನ್ನಡದಲ್ಲಿ ಗ್ರಾಹಕ ಸೇವೆ ನೀಡ್ತಾ ಇಲ್ಲಿನ ಸಂಸ್ಕೃತಿ, ಬಾಷೆ ಮತ್ತು ಭಾವ್ನೆಗಳಿಗೆ ಮನ್ನಣೆ ನೀಡಬೇಕು ಅಂತ ಏನಾದ್ರೂ ಹೊಸದಾಗಿ ಹೇಳಬೇಕಾ? ಗ್ರಾಹಕನಿಗೆ ನಿಜವಾಗಲೂ ಸೇವೆ ಸಲ್ಲಿಸುವ ದೃಷ್ಟಿಯಿಂದಾಗಲಿ ಭಾರತದ ವಿವಿಧತೆಯನ್ನು ಕಾಪಾಡುವ ದೃಷ್ಟಿಯಿಂದಾಗಲಿ, ಕರ್ನಾಟಕದಲ್ಲಿ ಈ ವಲಯಗಳಲ್ಲೆಲ್ಲಾ ಕನ್ನಡ ಕಿತ್ತೊಗೆದು ಹಿಂದಿ ತುರುಕ್ತಾ ಇರೋದ್ನ ನೋಡುದ್ರೆ ಅದೇನು ನಗಬೇಕೋ ಅಳಬೇಕೋ ಗೊತ್ತಾಗಲ್ಲ ಗುರು!

ನಮ್ಮ ಭಾಷೆಯಲ್ಲೇ ತಾನೆ ಕನ್ನಡದ ಗ್ರಾಹಕರಿಗೆ ಸರಿಯಾಗಿ ಸೇವೆ ಕೊಡಲು ಸಾಧ್ಯ? ಈ ಸಾಮಾನ್ಯ ತಿಳುವಳಿಕೆ ಮತ್ತು ಹೊಣೆಗಾರರಿಕೆ ಇಲ್ಲಿ ವ್ಯಾಪಾರ ಮಾಡೋರಿಗೆ ಇಲ್ಲದೆ ಇರೋದ್ರಿಂದ ಕನ್ನಡಿಗನ ಮನಸ್ಸಿನ ಮೇಲೆ ಎಂಥಾ ದುಷ್ಪರಿಣಾಮಗಳು ಆಗ್ತಿವೆ ಅಂತ ಯೋಚ್ನೆ ಮಾಡಿದೀರಾ?

ಗ್ರಾಹಕ ಸೇವೆಯಲ್ಲಿ ಕನ್ನಡಿಗನನ್ನು ಕಾಡುತ್ತಿರುವ ಹಿಂದಿ ಭೂತ

ಕರ್ನಾಟಕದಲ್ಲಿ ಈ ಅದ್ಭುತಗಳು ನೋಡಕ್ಕೆ ಸಿಗೋದು ಹಿಂದಿ ಹೇರಿಕೆಯ ಪ್ರಭಾವ ಗುರು:
 • ಬೆಂಗಳೂರಿನ ಅಚ್ಚ ಕನ್ನಡದ್ ಪ್ರದೇಶ, ಕನ್ನಡ ಚಳವಳಿ ಪಿತಾಮಹ ಅನಕೃ ರಸ್ತೆ ಪ್ರಾರಂಭದಲ್ಲಿ (ಬಸವನಗುಡಿ ದೇಶೀಯ ವಿದ್ಯಾಶಾಲೆ ಸಮೀಪ) ಇರೋ ಈ ಇಂಡಿಯನ್ ಆಯಿಲ್ ಕಾರ್ಪೋರೇಷನ್ನಿನ ಪೆಟ್ರೋಲ್ ಅಂಗಡೀಲಿ ಎಂತಾ ಗ್ರಾಹಕ ಸೇವೆ ಫಲ್ಕ ಜಡ್ಸಿದಾರೆ ನೋಡ್ಗುರು! ಇಲ್ಲೀಗ್ ಬಂದು ಗಾಡಿಗೆ ಪೆಟ್ರೋಲ್ ತುಂಬಿಸ್ಕೊಳ್ಳೋನು ಕನ್ನಡ್ದವನು, ಅಂಗಡಿ ಯಜ್ಮಾನ ಕನ್ನಡ್ದೋನು, ಫಲ್ಕ ನೇತಾಕಿರೊದು ಯಾರ್ಗೇ ಗುರು? ಅಬ್ಬೇಪಾರಿ ಕನ್ನಡಿಗ ಹಿಂದಿ ಅರ್ಥ ಮತ್ತು ಸಂದೇಶ ಹೋದಿರೋ ಈ ಜಾಹೀರತನ್ನ, ಇಂಗ್ಳಿಷ್ ನಲ್ಲಿ ಒದೋಂತ ಪರಿಸ್ಥಿತಿ ಮಾಡಿರೋರು ಯಾರು ಗುರು?
 • ಇವತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಬೆಂಗಳೂರಿನ ಜಯನಗರದಲ್ಲಿ ಹೊಸ ಶಾಖೆ ತೆಗೀತು, ಬೆಂಗಳೂರಿನ ಎಲ್ಲಾ ಪತ್ರಿಕೆಗಳಲ್ಲಿ ಜಾಹೀರಾತು ನೀಡ್ತಾ ಇಲ್ಲಿ ಶಾಖೆ ತೆರಿತಿರೋದಕ್ಕೆ ಅವ್ರು ಒಂದು ಕಾರಣ ಪ್ರಕಟಿಸಿದ್ರು: "ಸಮ್ಜೆ ಆಪ್ಕೆ ದಿಲ್ ಕಿ ಬಾತ್". "ನಿಮ್ಮ ಮನಸ್ಸು ನಮಗೆ ಅರ್ಥ ಆಗಿದೆ "ಅಂತ ಕನ್ನಡದಲ್ಲಿ ಬರೆಸಕ್ಕೆ ಇವರಿಗೇನು ರೋಗ ಬಂದಿತ್ತು ಗುರು? ಈ ರೀತಿ ಬರೆದು ಮಾತ್ರ ಇವರು ಕನ್ನಡಿಗರನ್ನು ತಮ್ಮತ್ತ ಸೆಳ್ಕೋಬೋದು ಅಂತಾದ್ರೂ ಗೊತ್ತಾಗಬೇಡ್ವಾ ಇವರ ತಲೆಗೆ? ಇದೇ ತಪ್ನ ಈ ಬ್ಯಾಂಕು ಮಹಾರಾಷ್ಟ್ರದಲ್ಲಿ ಮಾಡಿದರೂ ತಪ್ಪೇ! ಅಲ್ಲಿ ಮರಾಠಿಯಲ್ಲಿ ಬರೀಬೇಕು!
 • ಹೀಗೆ ನೀವು ಯಾವುದೇ ಬ್ಯಾಂಕಿನ ಅಂತರ್ಜಾಲ ತಾಣ ತೆಗೆದು ನೋಡಿ. ನಿಮಗೆ ಸೇವೆ ಇಂಗ್ಲೀಷ್ ಜತೆಗೆ ಎರಡನೆಯದೇನಾದರು ಇದ್ದರೆ ಅದು ಹಿಂದಿಯಲ್ಲಿರುತ್ತದೆ.
 • ಬೆಂಗಳೂರಿಂದ/ಗೆ ವಿಮಾನದಲ್ಲಿ ಓಡಾಡಿ, ನಿಮಗೆ ಇಂಗ್ಲೀಷ್ ಜತೆಗೆ ಹಿಂದಿಲಿ ಘೋಷಣೆಗಳನ್ನು ಕೇಳಿಸುತ್ತಾರೆ, ಕನ್ನಡದಲ್ಲಿ ಇರೋದಿಲ್ಲ.
 • ವಿಮಾ ಕಂಪನಿಗಳಿಗೆ ಹೋಗಿ ಅಲ್ಲಿ ಎಲ್ಲಾ ರೀತಿಯ ಅರ್ಜಿ ನಮೂನೆಗಳು ನಿಮಗೆ ಇಂಗ್ಲೀಷ್ ಜತೆಗೆ ಹಿಂದಿಯಲ್ಲಿ ಕಣ್ಣಿಗೆ ರಾಚುತ್ತದೆ.
 • ಯಾವುದೇ ರೀತಿಯ ಕರೆ ಕೇಂದ್ರಕ್ಕೆ ಕರೆ ಮಾಡಿ ಇಂಗ್ಲೀಷ್ ಜತೆಗೆ ಹಿಂದಿ ಮಾತ್ರ ಕಿವಿಗೆ ಅಪ್ಪಳಿಸುತ್ತೆ. ಹೀಗೆ ಹಿಂದಿ ಹಿರಿಯಕ್ಕನ್ ಚಾಳಿ ಊರೆಲ್ಲಾ ಹಬ್ಬಿ ಗಬ್ ಎಬ್ಬದೇ ಇರೋ ಜಾಗಾನೇ ಬಾಕಿ ಉಳಿದಿಲ್ಲ
ಕನ್ನಡಿಗನ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ

ಈ ರೀತಿ ಹಿಂದಿ ಹೇರಿಕೆಯ ಬಗ್ಗೆ ನಾವು ಸುಮ್ಮನಿದ್ದರೆ ಏನಾಗತ್ತೆ ಅಂತ ಯೋಚ್ನೆ ಮಾಡಿದ್ಯಾ ಗುರು? ಬೆಳಿಗ್ಗೆ ಎದ್ದಾಂಗಿದ ರಾತ್ರಿ ಮಲ್ಗೋ ವರೆಗೆ ಈ ರೀತಿ ಹಿಂದಿ ಹೇರಿಕೆಗೆ ತುತ್ತಾಗ್ತಿರೋ ಕನ್ನಡಿಗನ ಮನಸ್ಥಿತಿ ಹೇಗೆ ಕುಗ್ತಾ ಇದೆ ಅಂತ ಯೋಚ್ನೆ ಮಾಡಿದ್ಯಾ ಗುರು?
 • ಕನ್ನಡಿಗನಿಗೆ ತನ್ನ ಬಗ್ಗೆ , ಹಿಂದಿಯಲ್ಲದ ತನ್ನ ಭಾಷೆ ಬಗ್ಗೆ , ಹಿಂದಿಯನ್ನು ಕಲಿಯದಿದ್ದ ಬಗ್ಗೆ ಕೀಳರಿಮೆ ಮೂಡ್ತಾ ಇದೆ.
 • ತಾನು ತನ್ನ ನುಡಿ ತನ್ನ ನಾಡು ಯಾವುದೂ ಉಪಯೋಗವಿಲ್ಲದ್ದು ಅನ್ನೋ ಆತ್ಮಹತ್ಯಾ ಮನೋಭಾವ ನಿಧಾನವಾಗಿ ಕನ್ನಡಿಗನಿಗೆ ಮೂಡ್ತಾ ಇದೆ
 • ಕನ್ನಡದಲ್ಲಿ ವ್ಯವಹರಿಸಿದ್ರೆ ತನ್ನನ್ನು ಮಕ ಮಕ ನೋಡಿ, ಹಳ್ಳಿ ಗಮಾರ ಅಂತ ನಗಾಡ್ತಾರೆ ಅಂತ ಯೋಚ್ನೆ ಮಾಡಕ್ಕೆ ಶುರು ಮಾಡ್ತಿದಾನೆ
 • ತನ್ನ ಸುತ್ತ ಮುತ್ತಲಿನವರನ್ನು ಮೆಚ್ಸಕ್ಕೆ, ಕನ್ನಡದ ಬಗ್ಗೆ ತಾನೇ ತಮಾಷಿ ಮಾಡಕ್ಕೆ ಕನ್ನಡಿಗ ಶುರು ಮಾಡ್ಕೊಂಡಿದಾನೆ.
 • ಕನ್ನಡ ಮಾತಾಡೋದು, ಕನ್ನಡದವರನ್ನ ಮಾತಾಡ್ಸೋದು ಅವಮಾನ ಅನ್ಕೊಳ್ತಿದಾನೆ.
 • ಹುಸಿ ಗೌರವಕ್ಕೆ ಮನರಂಜನೆ ಇಂದ ಹಿಡ್ದು ಎಲ್ಲಾ ಕಡೆ ಹಿಂದಿ ಬೇಕು ಅಂತಿದಾನೆ.
 • ಕನ್ನಡದ ಜಾಹೀರಾತು ಉದ್ದಿಮೆ ಕುಸೀತಿದೆ
 • ದೀರ್ಘಾವದಿಯಲ್ಲಿ ಇದು ಸಂಪೂರ್ಣವಾಗಿ ಒಂದು ನಡೆ-ನುಡಿ-ಆಚಾರ-ವಿಚಾರವನ್ನು ಛಿದ್ರ ಛಿದ್ರ ಮಾಡಿಬಿಡುವ ಸಾಧ್ಯತೆ ಇದೆ
ಬರೀ ನಮ್ಮ ಕನ್ನಡದ ಸಾಹಿತ್ಯಕ್ಕೆ 7 ಜ್ಘಾನಪೀಠ ಬಂದ್ರೆ ಮಾತ್ರ ಸಾಲ್ದು ಗುರು, ಕನ್ನಡ ದೈನಂದಿನ ಬದುಕಿನಲ್ಲಿ ರಾಜಾರೋಷವಾಗಿ ಇರಬೇಕು. ನಮ್ಮ ಬದುಕಿನ ಎಲ್ಲಾ ರೀತಿಯ ಕೆಲಸಗಳಲ್ಲಿ ನಮಗೆ ಕನ್ನಡ ಕಾಣಿಸ್ತಿರಬೇಕು. ಆಗ್ಲೇ ಕನ್ನಡ ಭಾಷೆಗೆ ಮುನ್ನಡೆ ಮತ್ತು ಮನ್ನಣೆ. ಇಲ್ಲದಿದ್ರೆ ನಿನ್ನಾಣೆ ಗುರು ಈ ಹಿಂದಿ ಭೂತ ನಮ್ಮೆಲ್ಲರನ್ನೂ ತಿಂದು ತೇಗ್ಬಿಡತ್ತೆ, ಇದರಿಂದ ಕನ್ನಡಿಗ ಮಾನಸಿಕವಾಗಿ ಕುಸಿದು ನಶಿಸಿ ಹೋಗ್ತಾನೆ. ಇದನ್ನು ತಡೆಗಟ್ಟದೆ ಬೇರೆ ದಾರಿಯಿಲ್ಲ ಗುರು...

18 ಅನಿಸಿಕೆಗಳು:

Anonymous ಅಂತಾರೆ...

ಬರೀ ತಮಿಳು ನಾಡಿಗೆ,ತಮಿಳರಿಗೆ ಬಯ್ಕೊಂಡು ,ಅವರಿವರಿಗೆ ಹೋಲಿಸಿಕೊಂಡು... ಇದೇ ಆಯ್ತು ನಮ್ಮ ನಿಮ್ಮ ಜೀವನ..
constructive ಆಗಿ ಬರಿಈರಿ ಸಾರ್ , ಜನರನ್ನ ಎತ್ತಿ ಕಟ್ಟಬೇಡಿ.. ಇಂತ ಲೇಖನಗಳಿಂದ , ಒಳ್ಳೆಯದಾಗುವುದನ್ನು ನಾನು ಕಾಣೆ..
ಕನ್ನಡ ,ಕನ್ನಡ ಎನ್ನುವುದೇನೋ ಸರಿ ಆದರೆ ಎಲ್ಲ ವಿಷಯಕ್ಕೂ ತಮಿಳುನಾಡು,ತಮಿಳನ್ನು ಎಳೆದು ತರುವುದರಲ್ಲಿ ನೀವುಗಳು ಯಾವ ಹೊಲಸು ರಾಜಕಾರಣಿಗೂ ಕಮ್ಮಿ ಇಲ್ಲ ಎಂದು ಸಾಭೀತುಪಡಿಸಲು ಹೊರಟಂತಿದೆ

Amarnath Shivashankar ಅಂತಾರೆ...

kannaDigara mEle hindi herikeyaaguttide annuvude eshTo kannaDigarige gotilla.
Hindi inna namma raashtrabhaashe annuva hucchu kalpaneyalle iddare jana..
namma education system daTTa daridravaagide...
alla swaamy 1 ne taragatiyiMda makkaLige hindi kalisuttiddare..adanna 10/12/15 varushagaLu kalita janakke adanna biDakke saadyavagalla..
Hindi kalita takshaNa hindi haDugaLu/cinemagaLna noDakke shuru maDtaare..
cinema addiction gottalla baDDi magandu drugs ginta powerful..
ee ella aMshagaLna noDidaaga gotagatte Hindi herike yava range nalli agta ide anta..
namma vyavaste keTTu kulageTTide..
Tamilnadnalli school nalli bari 2 language gaLu..
kuvempu avaru heLida haage tribhaasha sootra, trishoola samana andiddu karnatakakke chennagiye aagide

Anonymous ಅಂತಾರೆ...

ನನ್ನ ಕೆಲಸ ಇರೋದು ಬೆಂಗಳೂರಿನ ಪ್ರತಿಷ್ಠಿತ ಕಟ್ಟಡದಲ್ಲಿ. ಅನೇಕ ಸಲ ಲಿಫ್ಟಿಗೆ ಕಾಲಿಡುತ್ತಿದ್ದಂತೆ ಕನ್ನಡಿಗರೆ ಆದ ಲಿಫ್ಟಮನ್ಗಳು ಹಿಂದಿಯಲ್ಲಿ ಎಷ್ಟನೆ ಅಂತಸ್ತಿಗೆ ಅಂತ ಕೇಳ್ತಾರೆ. ಕಾರ್ಪೋರೇಟ್ ಆಫೀಸಿನಲ್ಲಿ ಕೆಲಸ ಮಾಡೋ ಕನ್ನಡಿಗರು ಇಂಗ್ಲೀಷ್ ಇಲ್ಲವೇ ಹಿಂದಿಯಲ್ಲಿ ಮಾತಾಡ್ಲಿಕ್ಕೆ ಮುಂದೆ ಬರ್ತಾರೆ. ನಮ್ಮ ಕೀಳರಿಮೆಗೆ ಬೇರೆ ಸಾಕ್ಷಿ ಬೇಕೆ?

ನಮ್ಮ ಆಡಳಿತದಲ್ಲಿ ಕನ್ನಡ ಸಂಪೂರ್ಣವಾಗಿ ಜಾರಿಗೆ ಬರಬೇಕು. ಸಣ್ಣ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವಂತೆ ವ್ಯವಹಾರದಲ್ಲೂ ಕನ್ನಡದ ಬಳಕೆ ಹೆಚ್ಚಿಸಬೇಕು. ಇಲ್ಲಾಂದ್ರೆ ನಮಗೆ ಉಳಿಗಾಲವಿಲ್ಲ.

Vijendra ( ವಿಜೇಂದ್ರ ರಾವ್ ) ಅಂತಾರೆ...

ಹಿಂದಿ ಹೇರಿಕೆಯ ಪರಿಣಾಮಕ್ಕೆ ಒಂದು ಉದಾಹರಣೆ ನೋಡಿ. ನಮ್ಮ ನಿಮ್ಮೆಲ್ಲರ ನೆಚ್ಚಿನ ಮುಂಗಾರು ಮಳೆ, ಚಿತ್ರದಲ್ಲಿ ಎಷ್ಟು ಹಿಂದಿ ಶಬ್ದಗಳಿವೆ, ಗಮನಿಸಿದ್ದಿರ? ಬುಡ್ದಾ, ಹನಿ ಹನಿ ಪ್ರೇಮ್ ಕಹಾನಿ, ಕರಾಬ್, ದಿಲ್.. ಇನ್ನೂ ಕೆಲವು. ಇವುಗಳೆಲ್ಲಾ ಅನಗತ್ಯ ತುರುಕಲ್ಪಟ್ಟವು.

Anonymous ಅಂತಾರೆ...

GurugaLe, illi neevu bhaasheyabagge maatra gamana haristiddeera. bhaashe kevala samparka mattu sahakaara maadhyama ashte. manushyanige baaLalu bekaada maanaveeya moulyagaLu haagoo dharma samkskrutigaLe badukina kendra binduvaagabeku. bhaashe, namma vichaaragalella adakke poorakavaagirabeku. manushya tanna manassige yaavudu nemmadi koduvudo adara hinde hoguttane. nanna maatannu artha maaDikolli.
dharmada talahadi tappiruvudarindale namma deshadalli indu kannaDavoo uliyuttilla, hindiyoo uliyuttilla.
yella vyaapaara vyavahaara kendrikrutavaaguttide.

monne Europe nalli sameekshe maaDidaaga gottagiddu yenu gotte? allina prati 5 janadalli 3 janarige allina vyavastheyalli 'neeti' illa annistideyante, 4 janarige badukinalli santosha illavante. andare English kalitu hechu duddu sampaadane maaDidaakshaNa santosha illa anta oppikondra?

neetigetta namma janarannu modalu saridaarige taralu prayatnisi.

Anonymous ಅಂತಾರೆ...

The language of a province is just not a commercial tool. Language is a symbol of culture and tradition of a place. Thus Kannada in Karnataka is a symbol of its culture. This should be the case with any respective language in its respective state.

Non-localites who want to reside for a long duration in any different state where their native language is not an official language, should respect and learn the local language to get into the mainstream with the localites. They should have the vision to understand the nativity of locals, grasp the local customs and should always carry in their memory the ethnicity of any City. This is what authorities of any city should try to do. They should try to uphold their City’s rituals, habits and folklore.

You all might have read " Brition recently brought out a new law. who ever has to visit/go there should have passed english proficiany exam" why did they implemented this law??????

It is not for nothing that the proverb, “When in Rome, behave like a Roman” has been coined.”

Anonymous ಅಂತಾರೆ...

Sriram,

Illi neevu confuse aagiddira annisutte? ee lekhanadalli baredirodu hindi na kannada mele herike maadta iddare horatu bere yeno alla. Illi neeti niyama bittu kevala bhaashe beLasi aMta heLallilla.

Anonymous ಅಂತಾರೆ...

Kris avre,,

illi hindi imposition bagge ashte maatadtirodu.. tamilu politics yeLakonDa bandoru neevu?? constructive aagi charche maadi, adu biTTu sumne tale haraTe maaDtiralla..

Anonymous ಅಂತಾರೆ...

ಜಾಹೀರಾತು ಕರ್ನಾಟಕದಲ್ಲಿ ಕನ್ನಡದಲ್ಲಿರಬೇಕು. ಆಂದ್ರದಲ್ಲಿ ತೆಲುಗಿನಲ್ಲಿರಬೇಕು. ಮದ್ಯಪ್ರದೇಶದಲ್ಲಿ ಹಿಂದಿಲಿ ಇರಬೇಕು. ಮದ್ಯಪ್ರದೇಶದವನು ಬಂಗಳೂರಿಗ ಬರ್ತಾನೆ ಅಂತ ನಾವು ಅವನಿಗೆ ಜಾಹೀರಾತು ಹಿಂದಿಲಿ ಹಾಕೋದು ಅವನಿಗೆ ಹಿಂದಿ ಸಿನಿಮಾ ತೋರ್ಸೋದು ಮಾಡ್ತಾನೆ ಇದೀವಿ. ಅವನು ಒಂದ್ಸಲಾ ಕನ್ನಡದವನು ಭೋಪಾಲ್ ಗೆ ಬರ್ತಾನೆ. ಅಲ್ಲಿನ ಬಿ ಹೆಚ್ ಇ ಎಲ್ ನಲ್ಲಿ ತುಂಬಾಜನ ಕನ್ನಡದವರು ಇದ್ದರೆ ಅವ್ರಿಗೆ ಅಲ್ಲಿ ಕನ್ನಡ ಜಾಹೀರಾತು ಹಾಕೋದು, ಕನ್ನಡ ಸಿನೆಮಾ ಹಾಕೋದು ಮಾಡಿದಾರ?

ನಮ್ಮ ಹಿರಣ್ಣಯ್ಯ ಹೇಳ್ತಾರೆ. ಕನ್ನಡದವನು ಎಲ್ಲೆ ಹೋದ್ರು ಅನ್ನ ತಿಂತಾನೆ. ಅವನ ಮನಸ್ಸು ಶುದ್ದವಾಗಿರುತ್ತೆ. ಅಲ್ಲಿಯವನಾಗ್ತಾನೆ. ಇಲ್ಲಿಗೆ ಬರೋ ಬೇರೆವ್ರು ಎನೇನು ತಿಂತಾರೋ ಅದಕ್ಕೆ ನಮಗೆ ನಮ್ಮೂರಿಂದಾನೆ ಎಲ್ಲ ಬರಬೇಕು ಅಂತಾರೆ.

ಉತ್ತಮ ಕನ್ನಡಿಗ ಎಲ್ಲೆಲ್ಲಿ ಹೋಗಿ ಹೇಗಿರ್ತಾನೆ ಅನ್ನಕ್ಕೆ ಕೆಲವು ಉದಾಹರಣೆಗಳು

೧] ರಜನೀಕಾಂತ್ : ತಮಿಳುನಾಡಿಗೆ ಹೋಗಿ ತಮಿಳನಾಗಿದ್ದಾರೆ
೨] ಜಾರ್ಜ್ ಫರ್ನಾಂಡಿಸ್ : ಬಿಹಾರಕ್ಕೆ ಹೋಗಿ ಬಿಹಾರಿ ಆಗಿದ್ದಾರೆ
೩] ಜಯಲಲಿತ : ತಮಿಳಾನಡಿಗೆ ಹೋಗಿ ತಮಿಳ್ ಸೆಲ್ವಿ ಆಗಿದ್ದಾರೆ
೪] ನರೇಂದ್ರ : ಉತ್ತರ ಕರ್ನಾಟಕದ ಇವರು ಆಂದ್ರದ ತೆಲಂಗಾಣದಲ್ಲಿ ಎಮ್. ಎಲ್. ಎ. ಆಗಿ ತೆಲುಗನಾಗಿದ್ದರೆ.
೫] ದೇವೇಗೌಡ ಪ್ರಧಾನ ಮಂತ್ರಿ ಅಗಿ ದೆಹಲಿಗೆ ಹೋದ್ರು. ಅವರು ಮೊದಲು ಮಾಡಿದ ಕೆಲಸ ಹಿಂದಿ ಕಲಿತಿದ್ದು.
೬] ನಮ್ಮ ವಿಷ್ಣುವರ್ಧನ್ ಮಲಯಾಳಂ ನ ಸಿನಿಮಾದಲ್ಲಿ [ಕೌರವರ್ ಎಂಬ ಮಲಯಾಳಿ ಸಿನಿಮಾ ಇದೆ. ಮಮ್ಮಟ್ಟಿ ಸಹ ನಟಿಸಿದ್ದಾರೆ] ನಟಿಸಕ್ಕೆ ಅಂತ ಹೋದವ್ರು ಮಲಯಾಳಂ ಕಲ್ತು ತಮ್ಮ ಡಬ್ಬಿಂಗ್ ತಾವೇ ಮಾಡಿದ್ದಾರೆ.
೭] ನಮ್ಮ ಗುರುಗಳೆ ಬರೆದಂಗೆ ದೆಹಲಿಲಿ ನಮ್ಮ ಕನ್ನಡಿಗರು ಯಕ್ಷಗಾನನ ಹಿಂದಿಲಿ ಮಾಡಿದ್ರು.
೮] ಕನ್ನಡದ ಹಿರಿಯ ಸಾಹಿತಿ ಅನಕೃ ತಮಿಳುನಾಡಿಗೆ ಹೋಗಿ ೬ ತಿಂಗಳು ಕೊಯಮತ್ತೂರಿನಲ್ಲಿ ಇದ್ದು ವಾಪಸ್ ಬರೋದಕ್ಕೆ ಮುಂಚೆ ಅಲ್ಲಿ ತಮಿಳರು ನಾಚುವಂತೆ ತಮಿಳಿನಲ್ಲಿ ಭಾಷಣ ಮಾಡಿ ಬಂದರಂತೆ. ಮುಂಬೈನಲ್ಲಿ ಎರಡು ವರ್ಷ ಇದ್ದದ್ದಕ್ಕೆ ಮರಾಠಿ ಕಲ್ತು ಅಲ್ಲಿನ ಸಾಹಿತಿ/ಪತ್ರಕರ್ತರ ಜತೆ ಮರಾಠಿ ನಲ್ಲೇ ಮಾತಾಡ್ತಿದ್ದರಂತೆ.

ಹೀಗೆ ಸಾವಿರಾರು ಉದಾಹರಣೆಗಳಿವೆ.

ಕನ್ನಡಿಗರ ಆಶಯ: ಕರ್ನಾಟಕಕ್ಕೆ ಬರುವವರು, ನೆಲೆಸುವವರು ಕನ್ನಡಿಗರಾಗಬೇಕು. ಇಲ್ಲಿ ಕನ್ನಡ ಸಾರ್ವಬೌಮ ಭಾಷೆ ಆಗಬೇಕು ಅಷ್ಟೆ.

ನಾನು ೨ ವರ್ಷದಿಂದ ಭೂಪಾಲದಲ್ಲಿದ್ದೇನೆ. ಇಲ್ಲಿಗೆ ಬರಕ್ಕೆ ಮುಂಚೆ ಒಂದು ತಿಂಗಳು ಹಿಂದಿ ಕಲಿಯಕ್ಕೆ ಪ್ರಯತ್ನಿಸಿದೆ. ಈಗ ನಾನು ಇಲ್ಲಿನ ಹಿಂದಿ ಪತ್ರಿಕೆಗಳಿಗೆ ಲೇಖನ ಬರೀತಿದೀನಿ.ಇದನ್ನ ನನಗೆ ಯಾರೂ ಹೇಳಲಿಲ್ಲ. ನಾನಾಗಿ ನಾನೆ ಕಲಿತೆ. ಏಕೆಂದ್ರೆ ನಾನು ಎಲ್ಲಿ ಹೋದ್ರು ಅನ್ನ ತಿಂತೀನಿ. [ ತಪ್ಪು ತಿಳಿಬೇಡಿ ನಾನು ಇಲ್ಲಿ ತಿಂತಿರೋದು ರೋಟಿನೇ]ಇದರ ಅರ್ಥ ಹೇ............ ತಿನ್ನೋ ಕೆಲ್ಸ ಮಾಡ್ಬೇಡಿ ಅಂತ]

ಭೂಪಾಲಿ

Anonymous ಅಂತಾರೆ...

gurugaLe, nicely said.
namma janakke(kannadigarige), bere bhaasheyanna hogaLidare taavu vishaala hrudayigaLu anta tiLkotidaare. namma bhaasheyanna nelakke kachchisi bere bhaasheyannu meresuvudu desha drohada kelasa endu avru artha maaDkobEku. modlu namma mane swachchavaagi itkobeku amele beedi. modlu kannada odi/tiLidu/baLasi adara samskruti beLesabEku amele mikkinadu.

Anonymous ಅಂತಾರೆ...

karnatakadalli kannaDa anna, Hindi he... ashte..

Anonymous ಅಂತಾರೆ...

ಪ್ರೀತಿಯ kris,
ಬನವಾಸಿ ಬಳಗದ ಈ ಏನ್ ಗುರೂ ಬ್ಲಾಗ್ ನ ಯಾವ ಲೇಖನದಲ್ಲಿ ಬೇರೆ ಭಾಷೆ ಬಗ್ಗೆ ಕೀಳಾಗಿ ಬರೆದಿದೆ? ಯಾವ ಲೇಖನದಲ್ಲಿ ತಮಿಳು, ತಮಿಳುನಾಡು, ಹಿಂದಿ ಭಾಷೆ ಮತ್ತು ಜನಾಂಗಗಳ ಬಗ್ಗೆ ನಿಂದಿಸಿ ಬರೆದಿದ್ದಾರೆ? ಸ್ವಲ್ಪ ಹೇಳಿ. ನಮ್ಮ ಒಕ್ಕೂಟ ವ್ಯವಸ್ಥೆ ಕನ್ನಡ-ಕರ್ನಾಟಕ-ಕನ್ನಡಿಗರ ಏಳಿಗೆಗೆ ಹೇಗೆ ಮಾರಕವಾಗಿದೆ ಅಥವಾ ಪೂರಕವಾಗಿದೆ ಅಂತ ಸರಿಯಾಗ್ ಚಿಂತನೆ ಮಾಡಿ ಬರೀತಿರೋ ಈ ಲೇಖನಗಳ ಬಗ್ಗೆ ಪೂರ್ವಾಗ್ರಹ ಅದೂ ತಪ್ಪು ಅನಿಸಿಕೆ ಇಟ್ಕೊಂಡು ಬರೀಬೇಡಿ. ಅಥವಾ ಅದೆಲ್ಲಿ ಹಾಗಿದೆ ತೋರ್ಸಿ. ನಾಡು ಕಟ್ಟೋ ಕೆಲ್ಸ ಅಂದ್ರೆ ಒಂದು ಹೂವಿನ ತೋಟ ಮಾಡೋ ಹಾಗೆ. ಇಲ್ಲಿ ಬೇಲೀನೂ ಹಾಕಬೇಕು, ಕಳೇನೂ ಕೀಳಬೇಕು. ಇಲ್ಲಾಂದ್ರೆ ತೋಟಾನ ಹಾಳು ಗೆಡವಕ್ಕೆ ಪೋಲಿದನಗಳು ಕಾಯ್ತಾನೆ ಇರ್ತಾವೆ . . .

ತಿಮ್ಮಯ್ಯ

Anonymous ಅಂತಾರೆ...

/SriRam ಅಂತಾರೆ:
GurugaLe, illi neevu bhaasheyabagge maatra gamana haristiddeera. bhaashe kevala samparka mattu sahakaara maadhyama ashte.
//

if we don't form movement against hindi /sanskrit influence over our kannada, we lose our mother language on another 100 years. people like sriram innocent, seems to be he does not know anything importance about language. do not bother about him.

chakara has given good explanation.

- manjunath

Anonymous ಅಂತಾರೆ...

ಶ್ರೀರಾಮ್ ಅವರೆ,

ನೀತಿಪಾಠ ಕಲಿಸಬೇಕು, ನಿಜ. ಕನ್ನಡಿಗನಿಗೆ ಯಾವ ಭಾಷೆಯಲ್ಲಿ? ಇದೇ ಪ್ರಶ್ನೆ.

Unknown ಅಂತಾರೆ...

ಹೌದು, ನಾನು ಒಮ್ಮೆ ಹೈದರಬಾದಿಗೆ ವಿಮಾನಯಾನ ಮಾಡಿದ್ದೆ, ಅಲ್ಲಿ ಇಂಗ್ಲೀಷ್, ಹಿಂದಿ ಜೊತೆ ತೆಲುಗಿನಲ್ಲು ಸಂದೇಶ ಕೊಡುತ್ತಿದ್ದರು, ಅದೆ ಬೆಂಗಳೂರಿಗೆ ಬಂದಾಗ ನನ್ನ ಕಿವಿಗೆ ಬಿದ್ದಿದ್ದೂ ಬರಿ ಇಂಗ್ಲೀಷ್ ಹಾಗು ಹಿಂದಿ.

ಇನ್ನು ಪೆಟ್ರೋಲ್ ಬಂಕ್ ಗಳು ಕನ್ನಡದಲ್ಲಿ ನಾಮಫಲಕಗಳನ್ನ ಹಾಕಿಕೊಂಡಿರುವುದನ್ನ ನಾನು ನೋಡಿಯೇಯಿಲ್ಲ.

ನಾವು ತಿರುಗೆಬೀಳೊವರೆಗು ಇದು ಹೀಗೆ ಮುಂದುವರಿಯುತ್ತದೆ.

Aravind M.S ಅಂತಾರೆ...

ಶ್ರೀರಾಮ್ ಹೇಳುವುದು ಒಂದು ಕಡೆಯಿಂದ ನೋಡಿದರೆ ಸರಿಯಾಗಿದೆ ಅನಿಸುತ್ತದೆ ಅಷ್ಟೆ. ಅವರು ಕನ್ನಡದಲ್ಲಿ / ಯಾವುದೇ ಭಾಷೆಯ ಅಂತರಂಗದಲ್ಲಿ ಆ ಭಾಷೆಯ ನಾಡಿನ ವಿಭಿನ್ನ ಮತ್ತು ವಿಶಿಷ್ಟ್ ಧರ್ಮವೇ ಇರುವುದನ್ನು ಗಮನಿಸಿದಂತಿಲ್ಲ. ಉದಾ : ಹಿಂದಿಯಲ್ಲಿ ‘ನನಗೆ ನೀರು ನೀಡು’ ಅನ್ನೋದಕ್ಕೆ ‘ನನಗೆ ನೀರು ಕುಡಿಸು (ಪಾನಿ ಪಿಲಾದೋ)’ ಅಂತಾರೆ. ಈ ಹೊಸ ಧೋರಣೆಯ ಭಾಷೆಗಳು ನಮಗೂ ಅದನ್ನೇ ಕಲಿಸಿ ನಮ್ಮ ನೀತಿ ಹಾಳು ಮಾಡುವುದಲ್ಲವೇ ಎಂದು ಪ್ರಶ್ನಿಸಬೇಕಾಗಿರೋದು.

Samarth Bhushan ಅಂತಾರೆ...

nam karnatakadalli ee reeti shuru aagirodu engg colleges start aadaglinda ansatte...yaake andre nam karnatakada yaavude engg colleges nodidaga alli nam raajyada vidyaarthigala sankhyege hecchukammi samaanvaagi uttara bhaaratadavaru irataare..
awaru appi tappinu kannada kalyo manas maade irodu idakke kaarana anbahudu..athwa naave awrig kalsodak hinjaritidiwi ansatte...namma raajyada halawaaru sowlabhyagalanna nam jote awroo upyogsirodrinda nam sarkaardavru awrig kashta aagbardu anta hindi nal vyavahariso dodda{dadda}manasu maadiddare..

autodavru kooda nam coll hatra kai torsidre "kaha jaana hain bhaiyya?" anta keltare..

idu nammade tappu!!!!!!
kannadigaru eddu sari maadbeku...

Annnnoymouse ಅಂತಾರೆ...

@SriRam - "GurugaLe, illi neevu bhaasheyabagge maatra gamana haristiddeera. bhaashe kevala samparka mattu sahakaara maadhyama ashte. manushyanige baaLalu bekaada maanaveeya moulyagaLu haagoo dharma samkskrutigaLe badukina kendra binduvaagabeku. manushya tanna manassige yaavudu nemmadi koduvudo adara hinde hoguttane."

ide reeti hindu dharmadavaru christianity anusarisalu yaak devru neevu kireek maaDteera? Christian aadre anna-neeru-kelsa-sthaana ella sigutte, ade hindu SC/ST aadre bari anyaaya maaDtira.. so manushya tanage yaavd beko adr hinde hogtaane anta taavu sumnirteera? illa taane!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails