ಮಲಯಾಳಿಗಳಿಂದ ಕನ್ನಡದ ರೈಲು ಕದಿಯೋ ಹುನ್ನಾರ

ನಿನ್ನೆ ವಿಜಯ ಕರ್ನಾಟಕದಲ್ಲಿ ಕರ್ನಾಟಕದ ಕೊಂಕಣ ರೈಲ್ವೆ ಆಫೀಸಲ್ಲಿ ಕೆಲ್ಸಾ ಮಾಡೋ 1500ಕ್ಕೂ ಹೆಚ್ಚು ಮಲಯಾಳಿಗಳು ನ್ಯಾಯವಾಗಿ ಹುಬ್ಬಳ್ಳಿಯ ನೈರುತ್ಯ ವಲಯಕ್ಕೆ ಸೇರಬೇಕಾದ ಕೊಂಕಣ ರೈಲ್ನ ಕೇರಳದ ಪಾಲ್ಘಾಟ್ ವಿಭಾಗಕ್ಕೆ ಸೇರಿಸಿ ಅಂತ ರೈಲ್ವೆ ಮಂಡಳಿಗೆ ಗುಟ್ಟಾಗಿ ಹಕ್ಕೊತ್ತಾಯ ಮಾಡಿರೋದು ಬಯಲಾಗಿದೆ. ಸಾಲದು ಅಂತ ಅಂತರ್ಜಾಲದಲ್ಲೂ ಕೇರಳದ ಪರ ಅಭಿಪ್ರಾಯ ರೂಪಿಸೊ ಕೆಲ್ಸಾ ಶುರು ಹಚ್ಚಕೊಂಡಿದಾರೆ! ಮಲಯಾಳಿಗಳ ಈ ಹುನ್ನಾರವೇನಾದರೂ ಫಲಿಸಿದರೆ ಕರ್ನಾಟಕಕ್ಕೆ ಮಹಾ ಮೋಸ ಗುರು!

ಪಾಲ್ಘಾಟ್ ವಿಭಾಗದ ಕೆಲವು ಪ್ರದೇಶಗಳು ಸೇಲಂ ನಲ್ಲಾಗಿರೋ ಹೊಸ ವಿಭಾಗಕ್ಕೆ ಸೇರಿರೋದ್ರಿಂದ ಕೇಂದ್ರ ಸರ್ಕಾರ ಕೇರಳದ ಪಾಲ್ಘಾಟ್ಗೆ ಹೊಸ ರೈಲ್ವೆ ವಲಯ ಮಾಡಿ ಕೊಡ್ತಾ ಇದೆ. ಅದೇನೋ ಸರಿ, ಆದ್ರೆ ಆ ವಲಯಕ್ಕೆ ನಮ್ಮ ಕೊಂಕಣ ರೈಲ್ವೇನೂ ಸೇರ್ಸಿ ಅಂತ ಅಲ್ಲಿನ ಕೆಲವು NGOಗಳು, ರಾಜಕಾರಣಿಗಳು ಕೇಂದ್ರಕ್ಕೆ ಒತ್ತಾಯ ಮಾಡ್ತಿದಾರಲ್ಲ ಗುರು! ತಕೊಳ್ಳಪ್ಪಾ ಇಲ್ಲಿದೆ ನೋಡು ನ್ಯಾಯ!

ರೈಲಿಗಾಗಿ ಕನ್ನಡಿಗರ ನೆಲ ಗುಳುಂ, ಆದರೆ ಉದ್ಯೋಗಾವಕಾಶವೂ ಇಲ್ಲ, ರೈಲೂ ಇಲ್ಲ!

ಸುಮಾರು 760 ಕಿ.ಮೀ. ಉದ್ದದ ಈ ರೈಲುದಾರಿಯಲ್ಲಿ ಕರ್ನಾಟಕದ ಪಾಲು ಸುಮಾರು 350 ಕೀ.ಮೀ ಅಷ್ಟಿದೆ. ಹತ್-ಹತ್ರ 2500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಯೋಜನೆಗೆ 42 ಸಾವಿರ ಜನ ತಮ್ಮ ನೆಲ ಬಿಟ್ಟಕೊಟ್ರು. ಅದರಲ್ಲಿ ಕನ್ನಡಿಗರ ಪಾಲು ಶೇಕಡಾ 45 ರಷ್ಟು - ಅಂದರೆ ಸುಮಾರು 19 ಸಾವಿರ ಜನ.

ಇಷ್ಟೆಲ್ಲ ತ್ಯಾಗ ಮಾಡಿರೊ ನಮ್ಮ ಪಾಲಿಗೆ ಸಿಕ್ಕಿರೋ ಪ್ರಸಾದ ಎನ್ ಗೊತ್ತಾ? ಕೊಂಕಣ ರೈಲ್ವೆಯಲ್ಲಿ 4500 ಜನ ಉದ್ಯೋಗಿಗಳಿದ್ದು, ಅದರಲ್ಲಿ ಕನ್ನಡಿಗರ ಸಂಖ್ಯೆ ಬರೀ 750, ಅಂದ್ರೆ ಬರೀ ಶೇಕಡ 16.5 ಮಾತ್ರ! ಅದೂ ಕೂಡಾ ಕಾಮಗಾರಿ ಸಮಯದಲ್ಲಿ ಭೂಮಿ ಕಳೆದುಕೊಂಡ ಕನ್ನಡಿಗರಿಗೆ ಉದ್ಯೋಗ ಕೊಡಲೇ ಬೇಕಾಗಿದ್ದ ಕಾರಣಕ್ಕೆ, ಕೆಳಸ್ತರದ ಕೆಲವು ಉದ್ಯೋಗ ಮಾತ್ರ ನಮಗೆ ದೊರಕಿದೆ ಗುರು!

ಮಂಗಳೂರು, ಉಡುಪಿ, ಕಾರವಾರಕ್ಕೆ ಬರೋ ಪ್ರಮುಖ ರೈಲುಗಳು ಮಧ್ಯ ರಾತ್ರಿ ಬರೋದ್ರಿಂದ ನಮ್ಮ ಜನಾ ನಿದ್ದೆಗೆಟ್ಟು ರೈಲಿಗೆ ಕಾಯೊ ಪರಿಸ್ಥಿತಿ ಈಗಾಗಲೇ ಇದೆ. ಚಿಕ್ಕ ಚಿಕ್ಕ ಊರುಗಳಾದ ಮೂಲ್ಕಿ, ಬ್ರಹ್ಮಾವರ, ಕೋಟ, ಬೈಂದೂರು, ಭಟ್ಕಳ, ಕುಮಟಾ, ಹೊನ್ನಾವರ, ಅಂಕೋಲಗಳಿಗೆ ಸರಿಯಾದ ರೈಲೂ ಇಲ್ಲ, ಬಂದ್ರೂ ಅವು ಅಪರಾತ್ರಿಲಿ ಬರ್ತಾವೆ ಗುರು! ಈಗ್ಲೇ ಹೀಗಿರಬೇಕಾದ್ರೆ, ಇನ್ನು ನಮ್ಮ ಕೊಂಕಣ ರೈಲು ಕೇರಳದ ಪಾಲಾದ್ರೆ ದೇವರೇ ಗತಿ! ಧಾರವಾಡ ಕನ್ನಡದಲ್ಲಿ ಹೇಳೊ ಹಾಗೆ "ಉದೋದ ಕೊಟ್ಟು ಬಾರಸೋದ ತಗೊಂಡ್ರು" ಅನ್ನೊ ಹಾಗಾಗುತ್ತೆ ನಮ್ಮ ಕರಾವಳಿ ಜನರ ಪರಿಸ್ಥಿತಿ!

ನಮ್ಮಲ್ಲಿ ಒಗ್ಗಟ್ಟಿಲ್ಲದಿರುವುದೇ ಇದಕ್ಕೆಲ್ಲ ಕಾರಣ

ಇವೆಲ್ಲಾ ನಿಲ್ಲಬೇಕು ಅಂದ್ರೆ ಮೊದ್ಲು ನಾವು ಕನ್ನಡಿಗರು ಒಂದಾಗಿ ನಿಂತು ನಮ್ಮ ಮೇಲೆ ಏನೇನೆಲ್ಲಾ ಮೋಸ ನಡೀತಿದೆ ಅಂತ ಅರ್ಥ ಮಾಡ್ಕೋಬೇಕು, ಅವುಗಳ್ನ ತಡೆಗಟ್ಟಕ್ಕೆ ಗಟ್ಟಿಯಾಗಿ ನಿಲ್ಲಬೇಕು. ವಿ.ಕ. ಹೇಳತ್ತೆ:
[ಆದರೆ] ಕೊಂಕಣ ರೈಲ್ವೆಯಲ್ಲಿ 750 ಮಂದಿ ಕನ್ನಡಿಗ ಉದ್ಯೋಗಿಗಳಿದ್ದರೂ ಕನ್ನಡಪರ ಸಂಘಟನೆಯೇ ಇಲ್ಲದಿರುವುದು ಕರ್ನಾಟಕ ರಾಜ್ಯದಲ್ಲಿ ಕೊಂಕಣ ರೈಲ್ವೆಯ ಅಸ್ತಿತ್ವಕ್ಕೆ ಕೊಡಲಿಯೇಟು ಹಾಕಿದೆ. ಕೊಂಕಣ ರೈಲ್ವೆಯನ್ನೂ ಕಸಿಯುವ ಸನ್ನಾಹವನ್ನು ಕೇರಳಿಗರು ನಡೆಸಿದ್ದಾರೆ.

ತಿರ್ಗಾ ಅದೇ ಪಾಠ ಅನ್ನಿ! ಕನ್ನಡಿಗರು ಒಗ್ಗಟ್ಟಾಗಲೇಬೇಕು. ಇಲ್ದಿದ್ರೆ ಇಷ್ಟೇ ಅಲ್ಲ - ಕನ್ನಡಿಗರ ಮನೆಗಳ್ಗೆ ಕನ್ನಡೇತರರು ಹಗಲಲ್ಲೇ ಕನ್ನ ಹಾಕಿ "ನೀನು ಸನ್ಯಾಸಿ ತಾನೆ? ವಿಶ್ವಮಾನವ ತಾನೆ? ಶರೀರ, ಆಸ್ತಿ-ಅಂತಸ್ತು ಎಲ್ಲಾ ಎಷ್ಟೇ ಆದರೂ ನಶ್ವರ! ತೆಪ್ಪಗಿರು, ನಾವು ಬೇಕಾದ ಬೇಳೆಕಾಳು ಬೇಯಿಸಿಕೋತೀವಿ" ಅಂತ ಹೇಳಿ ಹೋಗ್ತಾರೆ, ನಾವು ಬೆಪ್ಪ ಮುಂಡೇವಂಗೆ ನೋಡ್ತಾ ಕೂತಿರಬೇಕಾಗತ್ತೆ!

ಬೇಕಾ ಇವೆಲ್ಲ? ಬೇಡ ತಾನೆ? ಇದಕ್ಕೆ ಪರಿಹಾರವೇ ಒಗ್ಗಟ್ಟು. ಐಟಿ ಕಂಪನಿಗಳಾಗಲಿ, ಬಿಸಿಸಿಐ ಆಗಲಿ, ರೈಲ್ವೆಯಾಗಲಿ, ಸರ್ಕಾರವಾಗಲಿ, ಮತ್ತೆಲ್ಲೇ ಆಗಲಿ, ಕನ್ನಡಿಗರು ಒಗ್ಗಟ್ಟಾಗಿ ನಿಲ್ಲಬೇಕು! ಒಬ್ಬರಿಗೆ ಒಬ್ಬರು ಕಷ್ಟದಲ್ಲಿ ನೆರವಾಗ್ಬೇಕು! "ಮಲಯಾಳೀನೂ ಭಾರತೀಯನೇ ಕನ್ನಡಿಗನೂ ಭಾರತೀಯನೇ" ಅಂತಾನೋ ಅಥವಾ "ಇಬ್ಬರೂ ಮನುಷ್ಯರೇ" ಅಂತಾನೋ ಅಥವಾ "ಶರೀರವೇ ನಶ್ವರ" ಅಂತಾನೋ ಕನ್ನಡಿಗರು ಒಗ್ಗಟ್ಟಾಗದೇ ಹೋದರೆ ಕನ್ನಡ ಜನಾಂಗವನ್ನ ಕನ್ನಡಿಗರೇ ಸುಟ್ಟುಹಾಕಿದಹಾಗೆ ಆಗತ್ತೆ ಗುರು! ಮುಂದಿನ ಪೀಳಿಗೆ ಅನ್ನ ಅಲ್ಲ, ಇನ್ನೇನೋ ತಿನ್ನಬೇಕಾಗತ್ತೆ!

7 ಅನಿಸಿಕೆಗಳು:

Anonymous ಅಂತಾರೆ...

hotte uriyattalri kaLidre ...

Anonymous ಅಂತಾರೆ...

ಕನ್ನಡದವರಿಗೆ ಕೆಲಸ ಕೊಡದೇ ಇರೋ ಯಾವ ಉದ್ದಿಮೇನೂ ನಮಗೆ ಬೇಡ. ಅದು ಇನ್ಫೋಸಿಸ್ ಆಗಿರ್ಲಿ, ರೇಲ್ವೇ ಆಗಿರ್ಲಿ, ಇಲ್ಲವೇ ಇಂದ್ರನ ಒಡ್ಡೋಲಗವೇ ಆಗಿರ್ಲಿ... ನಮ್ಮನ್ನಾಳೋ ಸೂಳೆಮಕ್ಕಳಾ ಇನ್ನಾದ್ರೋ ಎದ್ದೇಳ್ರೋ . . . ಇಲ್ಲಾಂದ್ರೆ ಅಟ್ಟಾಡುಸ್ಕೊಂಡ್ ಒದೀತೀವಿ..

ಕ್ರಾಂತಿ ದೀಪಕ್

Rohith B R ಅಂತಾರೆ...

ಕರ್ನಾಟಕವೆಂಬ ಕೋಟೆಯನ್ನು ಎಲ್ಲ ದಿಕ್ಕಿನಿಂದಲೂ ಒಡೆಯಲು ಪ್ರಯತ್ನ ಪಡುತ್ತಿರುವುದನ್ನು ಈಗಾಗಲೇ ನಾವೆಲ್ಲ ಕಾಣುತ್ತಿದ್ದೇವೆ.. ಇದನ್ನು ತಡೆಯಲು ಕನ್ನಡಿಗರಿಗೆ ಒಗ್ಗಟ್ಟೇ ಮದ್ದು.. "ನಾವು" ಅನ್ನುವ ಪದಕ್ಕೆ ನಿಜವಾದ ಅರ್ಥ ಕಲ್ಪಿಸಿ ನಮ್ಮ ಸುತ್ತಲು ನಿಂತು ನಮ್ಮನ್ನ ತಿನ್ನಲು ಕಾಯುತ್ತಿರುವ ತೋಳಗಳಿಗೆ ನಾವು ಏನು ಎಂದು ತೋರಿಸುವ ಸಮಯ ಇಲ್ಲಿದೆ..

Unknown ಅಂತಾರೆ...

sir Bangalore nalli IT comapnies nalli,Northies and tamilians mejority.Chikka-chikka hotel kooda nedsoru bahu paalu keraligaru.
Bengalooru nalli kannada maathododu kevala 45%.
Iga railway nallu kerala davru.guru hinge adre nammanna odsi bidthare aste.dayavittu ondagona.kannadigara saamrajyaa kattonaa..naavenu kammi illa antha thorisonaa...
jai karnataka

Anonymous ಅಂತಾರೆ...

mallugaLu taNNage kaaNNaDigara soulabhyagaLannella melluttiddare!

ee bagge Vijaya Karnataka dalli uttama vaada varadigaloo bandive. intaha vichaaragaLalli nammannu echarisuvante maaDuttiruvudu Vijaya Karnataka.

kaNNaDapara sanghatanegaLu horaaDabeku !

Anonymous ಅಂತಾರೆ...

ee post na kone paragraph oduvaaga nenapige bantu; kannadigaru neevu heLida haage vishwa maanavaru, swartha bittavaru ..

Aagina kaaladalli jakaNachaari idee kallina devashtana kattidaru (varsha gaLu kelsa maadi), tanna hesaru ellooo kettalilla ..

ee reetiya niswartha samskruthi namma kannadigarannu aavariside ..

eddeLO kannaDiga .. eegina kaalakke aa samskruthi sooktavalla ..

Sri

Anonymous ಅಂತಾರೆ...

ನಿಜವಾಗಿಯು ಇದನ್ನು ಕೇಳಿ ಹೊಟ್ತೆ ಉರಿಉತ್ತದೆ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails