ಹಿಂದಿ ಹೇರಿಕೆಯನ್ನು ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುವುದು ರಾಷ್ಟ್ರಭಕ್ತಿಯೇನು?

ರಾಷ್ಟ್ರಭಕ್ತಿ ಎಂಬ ಪದವನ್ನು ನಾವು ಯಾರೂ ಕೇಳದೆಯೇನಿಲ್ಲ, ಉಪಯೋಗಿಸದೆ ಏನಿಲ್ಲ. ಆದರೆ ಯಾವುದು ನಿಜವಾದ ರಾಷ್ಟ್ರಭಕ್ತಿ? ಹಿಂದಿ ಭಾಷೆಯು ಒಂದಾದಮೇಲೊಂದು ಕ್ಷೇತ್ರದಲ್ಲಿ ಕನ್ನಡದ ಸ್ಥಾನವನ್ನು ತೆಗೆದುಕೊಳ್ಳುತ್ತಾ ಹೋಗುತ್ತಿರುವುದನ್ನು ಮೂಕರಂತೆ ಒಪ್ಪಿಕೊಳ್ಳುವುದು ರಾಷ್ಟ್ರಭಕ್ತಿಯ ಸಂಕೇತವೇನು?

ಭಾರತದ ಒಂದು ನಕ್ಷೆಯನ್ನಿಟ್ಟುಕೊಂಡು ಭಾವುಕನಾಗಿ ಗೊಳೋ ಎಂದು ಅಳುವುದು ರಾಷ್ಟ್ರಭಕ್ತಿಯೇನು? ಯಾವುದರಿಂದ ನನ್ನ ಕೈಗಳು ಕೆಲಸ ಮಾಡದೆ ಕೇವಲ ಕಣ್ಣು ನೀರು ಸುರಿಸುವುದೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ನಾನು ನನ್ನ ಸುತ್ತಮುತ್ತಲಿನ ಬೆಂಕಿಯನ್ನು ಆರಿಸುವುದಕ್ಕೇ ಯೋಗ್ಯತೆಯಿಲ್ಲದ ನಪುಂಸಕನಾಗಿ ನನ್ನ ಪ್ರಭಾವದ ವ್ಯಾಪ್ತಿಯನ್ನು ಮೀರಿದ ಬೆಂಕಿಯನ್ನು ಆರಿಸಬೇಕೆಂದು ನನ್ನ ಬೆಚ್ಚನೆಯ ಕುರ್ಚಿಯಿಂದ ಉತ್ತರನ ಪೌರುಷವನ್ನು ತೋರುತ್ತ ಬೋಧಿಸುವೆನೋ ಅದು ರಾಷ್ಟ್ರಭಕ್ತಿಯೇನು?

ಯಾವುದರಿಂದ ನನ್ನ ಸುತ್ತಮುತ್ತಲ ಜನರ ಭಾಷೆಯೇ ಕೀಳೆಂದು ಏರ್ಪಡುತ್ತದೋ ಅದು ರಾಷ್ಟ್ರಭಕ್ತಿಯೋ? ಯಾವುದರಿಂದ ನಮ್ಮ ಕಂದಮ್ಮಗಳ ಬಾಯಿಂದ ಕನ್ನಡವೇ ನಶಿಸಿಹೋಗುತ್ತಿದೆಯೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ನನ್ನ ಸುತ್ತಮುತ್ತಲ ನಾಡಿನ ಇತಿಹಾಸವೇ ಮರೆತಂತಾಗಿ ಈ ನಾಡು ಸಾಧನೆಗಳಿಲ್ಲದ ಬಂಜರುಭೂಮಿಯೆನಿಸುವುದೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ತಲೆತಲಾಂತರಗಳಿಂದ ನನ್ನ ಪೂರ್ವಜರು ಆಡಿಕೊಂಡು ಬಂದಿದ್ದ ಭಾಷೆ ಇವತ್ತು "ಆಟಕ್ಕುಂಟು ಲೆಕ್ಕಕ್ಕಿಲ್ಲ" ಎಂದು ಏರ್ಪಡುತ್ತದೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ಕೋಟಿಗಟ್ಟಲೆ ವೀರ ಅರಸರಾಳಿದ ನಾಡು ಕಸಕ್ಕಿಂತ ಕಡೆಯೆನಿಸುವುದೋ ಅದು ರಾಷ್ಟ್ರಭಕ್ತಿಯೇನು?

ನನ್ನ ಸುತ್ತಮುತ್ತಲ ಜನರೊಡನೆ ಸಹಕರಿಸಲು ನನ್ನ ಭಾಷೆಯೇ ಸಾಧನವಾಗಿರುವಾಗ ಆ ಸಾಧನವನ್ನು ಸಮರ್ಪಕವಾಗಿ ಬಳಸುವುದಕ್ಕೇ ಯಾವುದರಿಂದ ಅನುಮತಿಯಿಲ್ಲವೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ನನ್ನ ಸುತ್ತಮುತ್ತಲಿನ ಜನರ ಒಗ್ಗಟ್ಟೇ ಅಸಾಧ್ಯವೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ಹತ್ತಿರದ್ದೆಲ್ಲವೂ ಕೆಟ್ಟದೆನಿಸುವುದೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ದೂರದ್ದೆಲ್ಲವೂ ಪರಿಪೂರ್ಣತೆಗೆ ಹತ್ತಿರವಿದೆಯೆನಿಸುವುದೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ದಿನೇ ದಿನೇ ನನ್ನ ಆತ್ಮವಿಶ್ವಾಸವೇ ಕುಂದಿಹೋಗುತ್ತಿದೆಯೋ ಅದು ರಾಷ್ಟ್ರಭಕ್ತಿಯೇನು?

ಯಾವುದರಿಂದ ಕನ್ನಡ ಗೌಣವೆನಿಸುತ್ತಿದೆಯೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ಕನ್ನಡಿಗ ಗೌಣವೆನಿಸುತರುವನೋ ಅದು ರಾಷ್ಟ್ರಭಕ್ತಿಯೇನು? ಯಾವುದರಿಂದ ಕರ್ನಾಟಕ ಗೌಣವೆನಿಸುತ್ತಿದೆಯೋ ಅದು ರಾಷ್ಟ್ರಭಕ್ತಿಯೇನು?

ಅಲ್ಲ. ಇದಾವುದೂ ರಾಷ್ಟ್ರಭಕ್ತಿಯಲ್ಲ.

ರಾಷ್ಟ್ರಭಕ್ತಿಯೆಂದರೆ ನಮ್ಮ ಕಾಲ್ಕೆಳಗಿನ ಎರಡು ಹಿಡಿ ಮಣ್ಣಿನ ಭಕ್ತಿ. ರಾಷ್ಟ್ರಭಕ್ತಿಯೆಂದರೆ ಈ ನಾಡಿನ ಭಕ್ತಿ. ರಾಷ್ಟ್ರಭಕ್ತಿಯೆಂದರೆ ಈ ನುಡಿಯ ಭಕ್ತಿ. ರಾಷ್ಟ್ರಭಕ್ತಿಯೆಂದರೆ ಈ ಜನರ ಭಕ್ತಿ. ಕನ್ನಡಿಗನ ಮಟ್ಟಿಗೆ ಕನ್ನಡ-ಕನ್ನಡಿಗ-ಕರ್ನಾಟಕಗಳ ಭಕ್ತಿಯೇ ರಾಷ್ಟ್ರಭಕ್ತಿಯೂ ಅದೇ ವಿಶ್ವಬಂಧುತ್ವವೂ. ಕನ್ನಡ ಕುಲಪುರೋಹಿತ ಶ್ರೀ ಆಲೂರ ವೆಂಕಟರಾಯರು ಹೇಳುತ್ತಾರೆ ("ನನ್ನ ಜೀವನ ಸ್ಮೃತಿಗಳು") -
ಒಂದು ತೃಣದಲ್ಲಿ ಕೂಡ ಪರಮಾತ್ಮನ ಸಂಪೂರ್ಣ ಸಾನ್ನಿಧ್ಯವಿರುತ್ತದೆ. ಅದಿಲ್ಲದಿದ್ದರೆ ಆ ಹುಲ್ಲು ಕೂಡ ಅಳಗಾಡಲಾರದು. ಅಂದಬಳಿಕ ನನ್ನ ’ಕರ್ನಾಟಕತ್ವ’ದಲ್ಲಿ ರಾಷ್ಟ್ರೀಯತ್ವ, ವಿಶ್ವಬಂಧುತ್ವಗಳು ಅಡಕವಾಗುವವೆಂದು ಹೇಳಿದರೆ ಆಶ್ಚರ್ಯವೇನು?

[...]

ರಾಸಕ್ರೀಡೆಯಲ್ಲಿ ಬೇರೆ ಬೇರೆ ಗೋಪಿಕಾಸ್ತ್ರೀಯರು ಕೋಲಾಟವನ್ನಾಡುವಾಗ ಹೇಗೆ ಒಬ್ಬನೇ ಕೃಷ್ಣನನ್ನು ತಮ್ಮ ಹತ್ತಿರ ಕಾಣುತ್ತಿದ್ದರೋ, ಹಾಗೆ ವಿವಿಧ ಪ್ರಾಂತಗಳು ವಿಶಿಷ್ಟ ಮಾರ್ಗದಿಂದ ತಮ್ಮ ಉನ್ನತಿ ಮಾಡಿಕೊಳ್ಳುವಾಗ ರಾಷ್ಟ್ರೀಯತ್ವವನ್ನು ಹತ್ತರವೇ ಕಾಣಬೇಕು...

ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ. ಕನ್ನಡವೇ ಸಾಕು. ಕನ್ನಡವೇ ಸತ್ಯ. ಅನ್ಯವೆನಲದೇ ಮಿಥ್ಯ.

14 ಅನಿಸಿಕೆಗಳು:

Anonymous ಅಂತಾರೆ...

nudi-gudi blog inda kaDa tandaddu:

The three pronged approach (through administration, education and media / entertainment) of central govt to impose Hindi has met with success to a considerable degree in some of the states of India. Many of the languages like Bhojpuri, Maithili, Santhali, Rajasthani, Haryanvi, etc have been systematically reduced to "dialects" of Hindi. Many other languages like Punjabi, Marwari, Gujarati, Bengali, Marathi have lost their entertainment industries and are happy entertaining themselves in Hindi, an alien language to most people living in those states. Students in most of the states have been brainwashed that Hindi is the national language of India. Loyalty and patriotism to the nation has been reduced to acceptance of Hindi as the sole "National" and "Link" language. Any Indian having a different opinion on this is branded as not being nationalist enough! A bigger problem this has created is the false sense of superiority in the Hindi speakers. Their expectation that the whole of India speaks Hindi, their reluctance to learn the language of the place they settle in, arrogance that they display in their interaction with fellow non-Hindi speaking Indians is the biggest threat to national integration.
8. I never knew all this was happening. I am aware of this issue now. What should I do?
• Be aware that Hindi is not the ONLY national language of India. All the languages spoken in India are National languages. Please create this awareness in people around you.
• If you are residing in non-Hindi states, ensure that you conduct all the transactions at central government offices and banks in the language of the land or English. Do not use Hindi.
• Boycott Hindi films and music in non-Hindi speaking states. Encourage the media and entertainment industry of the place you live.
• Boycott schools and colleges that teach ONLY Hindi and not the local language in non-Hindi states.
• In non-Hindi states, converse with Hindi speakers in the language of the land or English. Do not converse / transact with them in Hindi.

Anonymous ಅಂತಾರೆ...

Anti-Hindi movement on net.

Lets see when this gets into street.

I strongly feel, Anti-Hindi movement is necessary but not on mere internet!

Anonymous ಅಂತಾರೆ...

Guru,
The entire world is polarising into two sides as Terrorists and Non-Terrorists. bhaashe illi gouNa. manege hattiruva benkiyannu modalu aarisuva.

Anonymous ಅಂತಾರೆ...

GurugaLe,
naanu sumaaru dinadinda nimma ee blogspot annu nodta iddene. ee taaNada janapriyate kadimeyaagide anta nimage annisuvudillave? baree bhaashe bhaashe andre yaroo jana barodilla ree. bhaasheya moolaka janarige upayuktavaada jnaana kodi. aaga odugaru bartaare.

Anonymous ಅಂತಾರೆ...

Houdu, Hindi herikeyannu taDegattabeku. Samagra kannaDa hagoo Hindu Karnataka nirmaaNada kanasu nanasaagabeku.

Anonymous ಅಂತಾರೆ...

Hindi gulaamaraaguvudu beDa. Hindi herikeyannu tappisi. haageye naavu kannaDigarellaroo kendra sarkaarada avygnaanika yojaneyaada 'Sethu Samudram' yojaneyannu virodhisoNa. ee vishayadalli VHP yondige ky joDisoNa.

Anonymous ಅಂತಾರೆ...

Guru,

Ee nimma lekhana atyuttamma, Kannada nudiyannu tayi ante nodtiroru nanna jothe jana iddare anta helkoloke khushi aagutte,
Kannada cinema Kannada tana ella nasha aagtiro ee samayadalli navellaru sididela beku, Hindi chitragallannu nododu bidabeku etc etc .......naanu IT kshetradalli kelasa maadtiddini....... namma janarige tiluvalike heloru beku anta tumba sankatadinda helabekaagide........

dayavittu hindi chitrangallannu nododu nillisi,bari Kannada chitra nodi, ellellu Kannada upayogisi, Kannda barede iruvavarannu hasayya vagi nodi, Kannada maataadadiro angadigalli enu kareedisabedi........

Anonymous ಅಂತಾರೆ...

Annavru mayura chitradalli ee keLagina dailogue hodedidre hegirtittu .. :)

"madrasi gaLa jote kai joDisi hindiyanni himmettabeku" ..

naavaDuva nudiye kannaDa nudi ..

Anonymous ಅಂತಾರೆ...

ಮೋಹನ್,

ಸ್ವಾಮಿ ನಿಮ್ಮ ಚಡ್ಡಿ ಬುದ್ದಿ ಇಲ್ಲಿ ತರಬೇಡಿ. ವಿಷಯಕ್ಕೆ ಸಂಭದ ಪಟ್ಟ ಬಗ್ಗೆ ಮಾತಾಡಿ. ಸೇತುಸಮುದ್ರಂ ವಿಶ್ಯ ಬಿಡಿ, ರಾಜ್ಯದಲ್ಲಿ ಬೀಳುತ್ತಿರುವ ಸೇತುವೆಗಳ ಬಗ್ಗೆ ಯೋಚನೆ ಮಾಡಿ.
ಹಿಂದಿ ಹೇರಿಕೆಗೂ ಮತ್ತು ನಿಮ್ಮ ಚಡ್ಡಿ-ಒಳಚಡ್ಡಿ ಪಡೆಗೂ ಬೋ ಲವ್. ಬೊಲೊ ಭಾರತ್ ಮಾತಕೀ ಜೈ ಅಂದರೆ ಮಾತ್ರ ಅವನು ದೇಶಪ್ರೇಮಿ,ಇಲ್ಲವಾದರೆ ಅವನು ಮಿರಸಾದಿಕ್ ಅಲ್ವಾ ?

Anonymous ಅಂತಾರೆ...

Samastha hindu gaLa pratishteya sanketavaada Rama sethu vanne ulisikollalaagadavaru kannaDavannu yenu uLisikondaaru?
Swamy Deepu avre, nimage Hindutvada bagge nambike illadidru parvagilla. aadre budhi(ladhi ?)jeevigaLa reeti ella vishayakko moogu toorisabeDi. nimagishta ildidre baaymuchkond kootkoLLi.

ಬನವಾಸಿ ಬಳಗ ಅಂತಾರೆ...

ಗೆಳೆಯರೆ/ಗೆಳತಿಯರೆ,

ನಿಮ್ಮ ಅನಿಸಿಕೆಗಳು ಸಭ್ಯತೆಯ ಎಲ್ಲೆ ಮೀರದಂತೆ ನೋಡಿಕೊಳ್ಳಿ. ಜೊತೆಗೆ ಕನ್ನಡಕ್ಕೆ ಇಲ್ಲಸಲ್ಲದ ನಂಟನ್ನು ಇಲ್ಲಿ ಕಟ್ಟಲು ಹೊರಡಬೇಡಿ. ಅನಿಸಿಕೆಗಳು ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳುವುದು ರಾಷ್ಟ್ರಭಕ್ತಿಯೆ ಸಂಕೇತವೋ ಅಲ್ಲವೋ ಎನ್ನುವ ವಿಷಯಕ್ಕೆ ಸಂಬಂಧಪಟ್ಟಿರಲಿ.

Anonymous ಅಂತಾರೆ...

mohanji,
ramasethugu kannadigarigu yenri link?. nimma asahakatheyannu kannadigara asahayakathe antha prachara madabedi. swami ee ramasethu ide anthannu gottiralilla, ee naduve nimma dombaranta keli gottagiddu. omme NK kade banni, prathi varusha nere bandre hege sethuvegalu shitila aagide antha. paradeshadalli iddu irada sethuve bagge nanage naya paise chinte illa. iruvudannu bittu illade iruva kade manassu bayasuvadalla HINDUTVA. maathige munche HINDU,MUNDU anno padagalannu balasi agga maadabedi.

Mohanji, neevu RAMASETHU ulisi chaluvaliyalli palgondidraa. alli idda phalaka,bitti patra mattu goshanegalu HINDI herike anisalilva?.

enguru,
balapanthiyara prakara bharathiya andre avanu HINDU/HINDI agirabeku. illavadare avaru deshadrohigalu swami

-D

Anonymous ಅಂತಾರೆ...

ಅಲ್ಲ.. ಎದನ್ನು ಎದಕ್ಕೆ ಲಿಂಕು ಹಾಕ್ತೀರಿ ನೀವ್ಗಳು...

ನಮ್ ಬಳ್ಳಾರಿ ಕಡೆ ಆಂದ್ರದ ಗಣಿಕಳ್ಳರು ಬಂದು ದೋಚ್ತಿದ್ರೆ ಅದನ್ನ ನಿಗ ಮಾಡದಬಿಟ್ಟು ಇವರು ಸ್ರೀಲಂಕೆಯ ಹಳಕಲು ಸೇತುವೆ ಬಗ್ಗೆ ಚಳುವಳಿ ಅಂತೆ.

ಅಲ್ಲೋ ಮಾರಾಯ ನಮ್ಮ ಕನ್ನಡ ನಾಡ್ನಾಗೆ ಕನ್ನಡ ಉಳಿಸ್ರಿ, ಕನ್ನಡಿಗ ಮಂದೀನ ಉಳಸ್ರಿ ಅಂತ ಇವರು ಹೇಳತಾರು. ಇವನು ನಮಗೆ ಯಾತಕ್ಕೂ ಸಂಬಂದಿಲ್ಲದ ಸುದ್ದಿ ತಂದು ಗದ್ದಲ ಮಾಡ್ತಾನ.

ರಾಮನ ಸೇತುವೆಯೂ, ಕ್ರಿಷ್ಣನ ಸೇತುವೆಯೋ, ಅದರ ಸುದ್ದಿ ಇದ್ರೆ ಬಿದ್ರೆ ನಮ್ಮ ಕನ್ನಡದ ಮಂದಿಗೆ ಏನ್ ಬಾಗ್ಯ..

ಒಮ್ಮೆ ಬಂದು ನಮ್ಮ ಬಳ್ಳಾರಿ ಹಂಪೆ ನೋಡಿರಿ. ಅದು ಹೆಂಗೆ ನಮ್ಮ ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಅಸಡ್ಡೆಯಿಂದ ಹಾಳಾಗಿ ಅದಾ ಗೊತ್ತಾಗ್ತದ.

ನಮ್ಮ ಮನೆಯಾಗೆ ಬೆಂಕಿ ಬಿದ್ದದ, ನೀವು ಊರಾಚೆ ರಂಗೋಲಿ ಹಾಕೋ ಮಾತಾಡ್ತೀರ.

ಯಾಕೆ ಹಿಂಗ ಈ ಮಂದಿ, ಎಲ್ಲದಕ್ಕೂ ಜಾತಿ, ಪಂಥ ತರ್ತಾರ? ನಮ್ಮ ಊರಾಗೇ ನಾವ್ ಹಿಂದು ಮುಸ್ಲಿಂ ಮಂದಿ ಕೂಡಿ ಆರಾಮಾಗಿ ಇದ್ದೀವಲ್ಲ. !!

Lohith ಅಂತಾರೆ...

Correct ag heledya guru.......Nam jana hege....yete andre prate antare....Nav erod el kannada olesoke....ad bit jati gete a setuve e setuve anta hodedadok ala....First nam mane(KARNATAKA) ....amel pakad mane kanrapa......Nam mane talpaya ne sari ela and mel pakad mane nodoke agota.....Optene Bharath and mael nav yela onde anta...Adre modulu karnataka nam mane mikedyela amel....Jai Karnataka Mathe

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails