ಕನ್ನಡವಾಡುವ ಮುದ್ದಿನ ಪೋಲೀಸ್!

ಮೊನ್ನೆ 24ನೇ ತಾರೀಕಿನ ಕನ್ನಡದ 'ಟೈಮ್ಸ್ ಆಫ್ ಇಂಡಿಯಾ' ದಲ್ಲಿ ನಮ್ಮ ಪೋಲೀಸ್ ಇಲಾಖೆ ಕನ್ನಡದ ಅನುಷ್ಠಾನ ಸರಿಯಾಗಿ ಮಾಡಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡೋ ನಿಟ್ನಲ್ಲಿ ಈ ಕೆಳಗಿನ ಬದಲಾವಣೆಗಳ್ನ ಮಾಡಕ್ಕೆ ಹೊರಟಿದೆ ಅಂತ ವರದಿ ಬಂದಿದೆ:
 1. ಎಫ್.ಐ.ಆರ್. ಕನ್ನಡದಲ್ಲೇ
 2. ಪೋಲಿಸ್ ಭುಜಪಟ್ಟಿಗಳಲ್ಲಿ ಕನ್ನಡದಲ್ಲೇ ಕಂಗೊಳಿಸಲಿರುವ ಐ.ಪಿ.ಎಸ್., ಕೆ.ಎಸ್.ಪಿ.ಎಸ್.
 3. ದೋಷಾರೋಪ ಪಟ್ಟಿ ಸೇರಿದಂತೆ ನ್ಯಾಯಾಲಯಕ್ಕೆ ಸಲ್ಲಿಸುವ ಕಡತಗಳು ಕನ್ನಡದಲ್ಲಿ
 4. ಸಿಬ್ಬಂದಿ ಜತೆ ಕನ್ನಡದಲ್ಲೇ ವ್ಯವಹಾರ
 5. ಸಂಚಾರ ಪೋಲೀಸರ ದಂಡ ಪಾವತಿ ರಸೀತಿಯಲ್ಲೂ ಕನ್ನಡ
 6. ಕನ್ನಡ ಚೆನ್ನಾಗಿ ಬಳಸುವ ಪೋಲಿಸರಿಗೆ ಬಹುಮಾನ, ಬಡ್ತಿಗೆ ಶಿಫಾರಸು
 7. ಪೋಲೀಸರು ಕಳುಹಿಸುವ ಇ-ಮೇಲ್ ಸಂದೇಶಗಳೂ ಕನ್ನಡದಲ್ಲೇ
ತನ್ನ ಎಲ್ಲಾ ಕೆಲ್ಸಗಳನ್ನ ತನಗೆ ಅರ್ಥ ಆಗೋ ಭಾಷೇಲಿ, ಈ ನಾಡಿನ ಜನತೆಗೆ ಅರ್ಥ ಆಗೋ ಭಾಷೇಲಿ ಮಾಡಿದ್ರೆ ಹೆಚ್ಚು ಪರಿಣಾಮಕಾರಿಯಾಗಿರುತ್ತೆ ಅಂತ ತಿಳ್ಕೊಂಡು ಹೆಚ್ಚಾಗಿ ಕನ್ನಡಾನ ಬಳಕೆಗೆ ತರಕ್ಕೆ ಒಂಟಿರೋ ಪೋಲೀಸ್ ಇಲಾಖೆಗೆ ನಾವೆಲ್ರೂ ಸಲೀಟ್ ಮಾಡ್ಬೇಕು ಗುರು!

ಜನಸಾಮಾನ್ಯರಿಗೆ ತೀರಾ ಹತ್ತಿರ್ವಾಗಿ ಕೆಲ್ಸ ಮಾಡೋ ಇಲಾಖೆಗಳಲ್ಲಿ ಪೋಲೀಸ್ ಇಲಾಖೆ ಬಹು ಮುಖ್ಯವಾದದ್ದು. ಹೆಚ್ಚೆಚ್ಚು ಜನ್ರನ್ನ ತಲ್ಪೋ ಪೋಲಿಸ್ ಇಲಾಖೆ ಕನ್ನಡಮಯವಾದ್ರೆ -
 • ಜನಸಾಮಾನ್ಯರು ಪೋಲೀಸರೊಡನೆ ಸುಲಭವಾಗಿ ವ್ಯವಹಾರ ಮಾಡಕ್ಕೆ ಸಹಾಯ ಆಗೋದ್ರಿಂದ ರಾಜ್ಯದ ಕಾನೂನು-ಸುರಕ್ಷತೆ ಹೆಚ್ಚತ್ತೆ.
 • ಪೋಲೀಸರಿಗೆ ತಮ್ಮ ಕೆಲಸವನ್ನ ಯಾವುದೋ ಬೇರೆದೇಶದ ಭಾಷೆಯಲ್ಲಿ ಮಾಡೋ ಹೊರೆ ಹೋಗಿ ನಿಜವಾಗಲೂ ಕಾನೂನು-ಸುರಕ್ಷತೆಗಳ ಕಡೆ ಗಮನ ಹೆಚ್ಚತ್ತೆ
 • ಇಲ್ಲಿಗೆ ಬರೋ ವಲಸಿಗ್ರೂ ಸ್ಥಳೀಯ ಪೋಲಿಸ್ರನ್ನ ಆಶ್ರಯಿಸ್ಬೇಕಾಗಿರೋದ್ರಿಂದ ಅವ್ರಿಗೆ ಕನ್ನಡದಲ್ಲೇ ವ್ಯವಹರಿಸೋದು ಅನಿವಾರ್ಯ ಆಗತ್ತೆ.
 • ನಾಡಿನ ಭಾಷೇಲಿ ಆಡಳಿತ ನಡೆಸಿದ್ರೆ ಹೆಚ್ಚು ಅನುಕೂಲ, ಯಶಸ್ಸು ಸಾಧ್ಯ ಅಂತ ತೋರಿಸ್ಕೋಡೋದ್ರಿಂದ ಇತರ ಇಲಾಖೆಗಳು ಕನ್ನಡಮಯ ಆಗೋಕೆ ಕಣ್ಣು ತೆರ್ಸಿ- ಸ್ಪೂರ್ತಿ ಕೊಡುತ್ತೆ.
ನಮ್ಮ ಪೋಲಿಸ್ರಿಂದ ಮತ್ತಷ್ಟು ಕನ್ನಡ ಡಿಂಡಿಮ ಹೊಡ್ಸೋದಕ್ಕೆ ತಮ್ಮ ಸಂಫೂರ್ಣ ಬೆಂಬಲ ಇದೇ ಅಂತ ಹೇಳಿರೋ ರಾಜ್ಯ ಪೋಲಿಸ್ ಮಹಾ ನಿರ್ದೇಶಕರು ಆದಷ್ಟು ಬೇಗ ಇದನ್ನ ಕಾರ್ಯರೂಪಕ್ಕೆ ತರಬೇಕು ಗುರು, ಕರಾರಸಾಸಂ ಥರಾ ಹೇಳುವುದು ಒಂದು, ಮಾಡುವುದು ಇನ್ನೊಂದು ಅಂತ ಆಗದೇ ಇರಲಿ! ನಮ್ಮ ಪೋಲಿಸ್ರ ಈ ಬುದ್ಧಿವಂತಿಕೆ, ಈ ಉತ್ಸಾಹ ಸರ್ಕಾರದ ಬೇರೆ ಇಲಾಖೆಗಳಿಗೂ ಸಹ ಹರಡಲಿ ಅಂತ ಆಸೆಪಡೋಣ ಗುರು!

4 ಅನಿಸಿಕೆಗಳು:

Anonymous ಅಂತಾರೆ...

ಹೌದು, ಪೋಲಿಸ್ ಇಲಾಖೆ ಈಗಲಾದರು ಎಚ್ಚೆತ್ತುಕೊಂದಿರುವುದು ನಿಜಕ್ಕು ಪ್ರಶಂಸನೀಯ. ಈ ಹಿಂದೆ ಒಂದು ಪ್ರಸಂಗದಲ್ಲಿ ಕನ್ನಡ ಮಾತನಾಡದೆ ಇರುವವನಿಗೆ ಬೆಂಗಳೂರು ಪೊಲಿಸ್ ಬೈದದ್ದು ಕಂಡಿದ್ದೆ. ಪರ ಊರಿನ ಒಬ್ಬ ಬಿ.ಈ. ವಿದ್ಯಾರ್ಥಿ (ಓದು ಮುಗಿಸಿದವನೋ ಅಥವ ಓದುತ್ತಿರುವವನೋ) ಪಾಸ್ಪೋರ್ಟ್ ಆಫಿಸಿನಲ್ಲಿ ಸರತಿಯನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲ. ಅಲ್ಲಿದ್ದ ಪೋಲಿಸ್ ಒಬ್ಬರು ಅವನಿಗೆ ಕನ್ನಡದಲ್ಲಿ ಬೈದರು. ಅವನು ವ್ಹಾಟ್ ವ್ಹಾಟ್ ಅಂತ ಕೇಳಿದ್ದಕ್ಕೆ ಪೋಲಿಸರು ನಿಂಗೆ ಕನ್ನಡ ಬರೋಲ್ವ ಅಂತ ಕೇಳಿದರು. ಅದಕ್ಕವನು ಇಲ್ಲ ಎಂದ. ನೀನು ಏನು ಓದಿದ್ದೀಯ ಎಂದು ಪುನ: ಕೇಳಿದಾಗ ಅವನು ಬಿ.ಈ. ಎಂದದ್ದಕ್ಕೆ ಪೋಲಿಸರು ಕನ್ನಡದಲ್ಲಿ ’ಬಿ.ಈ. ನೋ ಮಣ್ಣೋ ನೀನು ಎನು ಓದಿದರೆ ಏನು ಪ್ರಯೋಜ್ನ ಮೊದ್ಲು ಕನ್ನಡ ಕಲಿ’ ಅಂದ್ರು. ಹೀಗೆ ಪೋಲಿಸರಿಗೆ ಕನ್ನಡ ಮಾತನಾಡಲು ಬಾರದೆ ಇರುವವರ ಹತ್ತಿರ ವ್ಯವಹಾರ ಮಾಡುವುದು ಕಶ್ಟವಾಗಿದೆ. ಇಂತಹ ಸಮಯದಲ್ಲಿ ಪೋಲಿಸರು ತಮಗೆ ಬಾರದೇ ಇದ್ದ ಭಾಶೆಯಲ್ಲಿ ಮಾತನಾಡಲು ಹೋಗಿ ಅದರಿಂದ ಕಾನೂನಿನ ಕಡೆ ಗಮನ ಹರಿಸುವುದಕ್ಕೆ ಕಶ್ಟ ಪದಬಹುದು ಎನ್ನುವು ನಿಮ್ಮ ಅಬ್ಭಿಪ್ರಾಯ ಒಪ್ಪಾಬೇಕಾದದ್ದೆ. ಒಳ್ಳೆಯ ಲೇಖನ.

Unknown ಅಂತಾರೆ...

Nijavaaglu ondhu olle belavanige! Idu ella kade heege munduvaredare Kannada benglooralle allade Karnatakada ellede Gattiyaagi beroorodralli yaava samshayagalu illa!

Anonymous ಅಂತಾರೆ...

ಇದೇ ಪೋಲಿಸ್ನೋರು ಸ್ವಲ್ಪ ದಿನದ ಹಿಂದೆ ಹಿಂದಿ ಭಾಷಿಕರಿಗೆ ಅನುಕೂಲ ಮಾಡಿಕೊಡಕ್ಕೆ ಹಿಂದಿ ಸಹಾಯವಾಣಿ ಪ್ರಾರಂಭ ಮಾಡ್ತೀವೆ ಅಂತ ಹೇಳಿದ್ರು. ಈಗ ಈ ರೀತಿ ನಿರ್ದಾರ ತಗೊಂಡಿರೋದು ಅವರಿಗೇ ಒಳ್ಳೇದು. ಇಲ್ಲದಿದ್ರೆ ಅವರ ಪೋಲಿಸ್ನೋರಿಗೆ ಹಿಂದಿ ಕಲ್ಸೋ ಹೊರೆ ಇರ್ತಿತ್ತು.

ಇದು ವಲಸಿಗರಿಗೆ ಸ್ಪಷ್ಟ ಸಂದೇಶ ರವಾನ್ಸತ್ತೆ: ಕರ್ನಾಟಕದಲ್ಲಿ ಚೆನ್ನಾಗಿ ಬಾಳಿ ಬದುಕಬೇಕಾ? ಇಲ್ಲಿನ ಜನದ ಜತೆ ಬೆರಿರಿ,ಕನ್ನಡ ಕಲೀರಿ, [ಕನ್ನಡ ಕಲಿಯೋದ್ರ ದೊಡ್ಡರ್ಥ - ಕನ್ನಡಿಗರು ಹೇಗೆ ಬೇರೆ ಊರ್ಗಳಿಗೆ ಹೋಗಿ ಆಯಾ ಭಾಷೆ ಕಲ್ತು ಸುಸಂಸ್ಕ್ರತರಾಗ್ತಾರೋ ಹಾಗೆ ಅವರು ಇಲ್ಲಿ ಸುಸಂಸ್ಕ್ರುತರಾಗೋದು] ಹಾಗೆ ಎಲ್ರೂ ಒಳ್ಳೇರಾದ್ರೆ ಪೋಲಿಸಣ್ಣಂಗೂ ಕಾಯೋ ಕೆಲ್ಸ ಕಡಿಮೆ, ಸರ್ವ ಜನರಿಗೂ ನೆಮ್ಮದಿ.

ನಮ್ಮ ಪೋಲಿಸಣ್ಣ ಇದನ್ನ ನಿಧಾನವಾಗಿ ಬುದ್ದಿವಂತೆಕೆಯಿಂದ ಅರ್ಥ ಮಾಡ್ಕೋಂಡಿದಾನೆ ಅಂತ ಹೇಳಕ್ಕೆ ಅಲ್ವ ಗುರುಗಳೆ ಕೊನೇಲಿ ನೀವು "ಬುದ್ದಿವಂತಿಕೆ / ಉತ್ಸಾಹ" ಪದ ಉಪಯೋಗ್ಸಿರೋದು.

Anonymous ಅಂತಾರೆ...

gurugaLe,, hats off,, tumba olle suddina namagagi tandidira..

bengaluru yen toTadappana chatrana anthu ultimate,, explaination kottiro riti, nimma kannada-da shailil yella super gurugaLe,, kannada jaagruti ya kelsadalli nimma patra adbhuta vaagide,, nimagu nimma tanDakku nanna abhinandanegaLu..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails