ಮತ್ತೆ ಕರಾರಸಾಸಂ ಬಾಲ ಡೊಂಕು!

ತನ್ನ ಪ್ರತಿಯೊಂದು ಬಸ್ಸಲ್ಲೂ ಮನರಂಜನೆ ಕನ್ನಡದಲ್ಲೇ ಇರಬೇಕು ಅಂತ 2 ತಿಂಗಳ ಹಿಂದೆ ಕರಾರಸಾಸಂ ಸುತ್ತೋಲೆ ಹೊರಡಿಸಿತ್ತು, ನಾವು ಅದನ್ನ ಓದಿ ಸಕ್ಕತ್ ಖುಷಿ ಪಟ್ಟಿದ್ದೂ ಉಂಟು. ಆದ್ರೆ ಕೊಟ್ಟ ಮಾತು ಹಳ್ಳ ಹಿಡಿದು ಹೇಗೆ ಅದೇ ಬಸ್ಸುಗಳಲ್ಲಿ ಮತ್ತೆ ತಮಿಳು, ತೆಲುಗು, ಮರಾಠಿ ಮತ್ತು ಹಿಂದೀ ಚಿತ್ರಗಳು ಓಡ್ತಿವೆ ಅಂತ ಇವತ್ತಿನ ವಿ.ಕ. ದಲ್ಲಿ ವರದಿ ಬಂದಿದೆ.

ಜವಾಬ್ದಾರಿಯಿಲ್ಲದ ವರ್ತನೆ ಕರಾರಸಾಸಂಗೆ ಶೋಭಿಸೋದಿಲ್ಲ

ಅವಕಾಶಗಳ ತವರೂರಾಗಿರೋ ನಮ್ಮ ಬೆಂಗಳೂರು-ಕರ್ನಾಟಕಕ್ಕೆ ಈ ಬಸ್ಸುಗಳ ಮೂಲಕ ಒಂದೇತಪ್ಪ ಬೇರೆ ರಾಜ್ಯಗಳಿಂದ ಬರೋ ವಲಸಿಗರಿಗೆ ಬಸ್ಸಲ್ಲೇ "ಇಲ್ಲಿ ನೀವು ಬದುಕಬೇಕಾದರೆ ಕನ್ನಡ ಕಲೀಬೇಕು" ಅಂತ ಸವಿನಯವಾಗಿ ಹೇಳೋ ಒಂದು ಅವಕಾಶ ಆ ಆದೇಶದಿಂದ ಈಡೇರ್ತಿತ್ತು. ಅಲ್ಲದೆ ಕರ್ನಾಟಕದಲ್ಲಿ ಕನ್ನಡ ಉಳೀಬೇಕಾದ್ರೆ ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡ ಓಡಾಡ್ತಿರಬೇಕು ಅನ್ನೋ ಕನ್ನಡಿಗನ ಕನಸಿಗೆ ಆ ಆದೇಶ ಪೂರಕವಾಗಿತ್ತು ಗುರು. ಆದರೆ ಆ ಆದೇಶಾನ ಕರಾರಸಾಸಂ ಗಂಭೀರವಾಗಿ ಪರಿಗಣಸ್ದೆ ಬಹಳ ಲಘುವಾಗಿ ತಗೊಂಡಿರೋದು ಕನ್ನಡಿಗನ ಭಾವನೆಗಳಿಗೆ ಎಸಗಿರೋ ಒಂದು ದೊಡ್ಡ ಅಪರಾಧ ಅಲ್ಲದೆ ಇನ್ನೇನು ಗುರು?

ಇದಕ್ಕೆ ಕರಾರಸಾಸಂ ಅಧಿಕಾರಿಗಳು ಕೊಡೋ ಕುಂಟು ನೆಪಗಳು ನೋಡಿ:
  • ಪ್ರಯಾಣ ಮಾಡ್ಬೇಕಾದ್ರೆ ನಮ್ಗೆ ನಮ್ಮ ಭಾಷೆ ಚಿತ್ರ ಹಾಕಿ ಅಂತ ಪರಭಾಷಿಕರು ಹೇಳ್ತಾರೆ
  • ಕನ್ನಡದ ಹೊಸ ಚಿತ್ರಗಳು ಪ್ರದರ್ಶನಕ್ಕೆ ಲಭ್ಯವಿಲ್ಲ; ಕನ್ನಡದ ಚಿತ್ರ ನೋಡುಗರಿಗೆ ಹಳೇ ಚಿತ್ರ ಬೇಕಾಗಿಲ್ಲ,
ಅಲ್ಲ, ಬೇರೆ ರಾಜ್ಯದ ಬಸ್ಸುಗಳಲ್ಲಿ ಪ್ರಯಾಣ ಮಾಡೋ ಕನ್ನಡಿಗರಿಗೆ ಕನ್ನಡ ಚಿತ್ರ ನೋಡೋ ಅವಕಾಶ ಇದ್ಯಾ? ಕರಾರಸಾಸಂ ನೋರು ಈ ರೀತಿ ಕುಂಟುನೆಪ ಕೊಡ್ತಿರೋದ್ರಿಂದ ಕರ್ನಾಟಕಕ್ಕೆ ಬರೋರು ಇಲ್ಲಿಯ ಭಾಷೆ-ಸಂಸ್ಕತಿ ಆಚರಣೆಗಳಿಗೆ ಒಗ್ಗಬೇಕು ಅನ್ನೋ ಕನ್ನಡಿಗರ ನಿಲುವಿಗೆ ಹಿನ್ನಡೆ ಆಗ್ತಿದೆ ಅಂತಾದ್ರೂ ಔರಿಗೆ ಗೊತ್ತಾಗಬೇಡವಾ? ವಲಸಿಗರಿಗೆ ನಿಮ್ಮ ಭಾಷೇನ ನಿಮ್ಮ ಮನೇಲೇ ಬಿಟ್ಟು ಬಸ್ ಹತ್ತಿ ಅಂತ ಔರ್ನ ಬಾಗಿಲಲ್ಲೇ ತಡೀಬೇಕಾಗಿದ್ದ ಬಸ್ ನಡ್ಸೋರು ವಲಸಿಗರನ್ನೇ ತಲೆ ಮೇಲೆ ಕುಡಿಸ್ಕೋಂಡಿರೋದು ಕರ್ನಾಟಕಕ್ಕೆ ಸಕ್ಕತ್ತಾಗಿ ಸೇವೆ ಸಲ್ಲಿಸಿದಂತಾಯ್ತು ಬಿಡಿ!

ಜೊತೆಗೆ ಕನ್ನಡದಲ್ಲಿ ಮನರಂಜನೇನೇ ಇಲ್ಲ ಅನ್ನೋ ಬಾವನೇನ ಕರಾರಸಾಸಂ ನೋರು ವಲಸಿಗರ ಮನಸ್ಸಲ್ಲಿ ಹುಟ್ಟಿಹಾಕಿದಂಗಾಗತ್ತೆ ಗುರು. ಮುಂದೆ ಅದೇ ಬಸ್ಸಲ್ಲಿ ಕೂತು ಒಳಗೆ ಬಂದೋರು ಕನ್ನಡ ಚಿತ್ರಗಳ ಬಗ್ಗೆ ಬಾಯಿಗೆ ಬಂದಂಗೆ ಮಾತಾಡ್ತಾರೆ, ಬಾಯಿಗೆ ಬಂದಂಗೆ ನಮ್ನೇ ಅಂತಾರೆ! ಇದನ್ನೆಲ್ಲ ತಡೆಗಟ್ಟೋ ಶಕ್ತಿ ಕರಾರಸಾಸಂ ಕೈಲಿ ಇದ್ದಾಗ ಸ್ವಲ್ಪ ಜವಾಬ್ದಾರಿಯಿಂದ ನಡ್ಕೋಬೇಡ್ವೆ? ಕರ್ನಾಟಕದ ಬಸ್ಗಳಲ್ಲಿ ಕನ್ನಡದಲ್ಲಿ ಮನರಂಜನೆ ಕೊಡಕ್ಕೆ ಯಾರ್ಗೂ ಕರಾರಸಾಸಂನೋರು ಅಂಜ್ಬೇಕಾಗಿಲ್ಲ. ಬಸ್ಗಳಲ್ಲಿ "ಧೂಮಪಾನ" ಹೇಗೆ ನಿಷೇದ ಮಾಡಿದೆಯೋ ಹಾಗೇ "ಕನ್ನಡೇತರ ಭಾಷೆಗಳಲ್ಲಿ ಮನರಂಜನೆ ನಿಷೇಧಿಸಿದೆ" ಅಂತ ಬೋರ್ಡು ತಗಲಿಹಾಕಿದರೂ ಚಿಂತೆಯಿಲ್ಲ ಗುರು - ಆಗ ಬಸ್ಸಲ್ಲಿ ಬೇರೆಭಾಷೆಯಲ್ಲಿ ಮನರಂಜನೆ ಕೊಡಿ ಅಂತ ಹೇಳೋರಿಗೆ ಪದೇ ಪದೇ ಚಾಲಕ/ನಿರ್ವಾಹಕ ಉತ್ರ ಕೊಡಬೇಕಾಗಲ್ಲ.

ನಾವು-ನೀವು ಕನ್ನಡದಲ್ಲೆ ಮನರಂಜನೆ ಕೊಡಿ ಅಂತ ಒತ್ತಾಯ ಮಾಡಬೇಕು

ಇನ್ನು ಕರಾರಸಾಸಂ ಬಸ್ಸಲ್ಲಿ ಪ್ರಯಾಣ ಮಾಡೋ ನಾವು-ನೀವು ಕನ್ನಡ ಚಿತ್ರ/ಮನರಂಜನೇನೇ ಬೇಕು ಅಂತ ಪಟ್ಟು ಹಿಡಿಯೋ ಸಮಯ ಬಂದಿದೆ ಗುರು! ಕನ್ನಡದಲ್ಲಿ ಮನರಂಜನೆ ಕೊಡಲ್ಲ ಅಂದ್ರೆ ಆ ಬಸ್ಸಿನ ಸಂಖ್ಯೆ, ಪ್ರಯಾಣಿಸಿದ ದಿನಾಂಕ, ಸಮಯ ದಾಖಲಿಸಿಕೊಂಡು ಸಾರಿಗೆ ಸಂಸ್ತೆಯಲ್ಲಿ ದೂರು ಕೊಡಕ್ಕೆ ಶುರು ಮಾಡಬೇಕು.

ಕೊನೆ ಗುಟುಕು

ಅಂದಹಾಗೆ ಕನ್ನಡಿಗರು ಬಸ್ಸಲ್ಲಿ ಹೊಸ ಚಿತ್ರಗಳ್ನ ಹಾಕಿ ಅಂತ ಕೇಳೋದು ತಪ್ಪೇನಿಲ್ಲ. ಚಿತ್ರ ನಿರ್ಮಾಪಕರು ಮುಂತಾದೋರು ಹೊಸ ಚಿತ್ರ/ಹಾಡುಗಳ್ನ ಡೀವೀಡಿ-ಗೀವೀಡೀಲಿ ಬಿಡಕ್ಕೆ ಮುಂದಾಗಬೇಕು. ಇಲ್ಲೀವರೆಗೂ ಮುಂಗಾರುಮಳೆ ಡೀವೀಡಿ ಸಿಗದೇ ಇರೋದು ಆ ಚಿತ್ರ ಮಾಡಿದೋರಿಗೇ ಲಾಸು ಗುರು! ಚಿತ್ರಮಂದಿರಕ್ಕೆ ಬಂದು ನೋಡ್ಲಿ ಅನ್ನೋದು ತಪ್ಪೇನಿಲ್ಲ. ಆದರೆ ಬಸ್ಸಲ್ಲಿ ನೋಡಕ್ಕೆ ಅವಕಾಶಾನೇ ಮಾಡಿಕೊಡದೆ ಇರೋದು ಮಹಾನ್ ಪೆದ್ದತನ ಅಲ್ಲದೆ ಇನ್ನೇನು? ದುಡ್ಡಿಗೆ ದುಡ್ಡೂ ಸಿಕ್ಕಿದಂಗಲ್ಲ, ಪ್ರಚಾರಕ್ಕೆ ಪ್ರಚಾರಾನೂ ಸಿಕ್ಕಿದಂಗಲ್ಲ! ನಮ್ಮ ಚಿತ್ರರಂಗದೋರು ಸೊಲ್ಪ ತಲೆ ಉಪಯೋಗಿಸಿ ಈಗ ಸಕ್ಕತ್ ಹಾಟಾಗಿರೋ ಕನ್ನಡ ಚಿತ್ರೋದ್ಯಮದಿಂದ ಒಂಚೂರೂ ಬಿಡದಂಗೆ ಲಾಭ ಪಡ್ಕೋಬೇಕು ಗುರು!

25 ಅನಿಸಿಕೆಗಳು:

Anonymous ಅಂತಾರೆ...

ವೇಗದ ಮಿತಿ ಘಂಟೆಗೆ ೪೮ ಕಿ.ಮೀ., ಟಿಕೆಟ್ ಇಲ್ಲದೆ ಪ್ರಯಾಣ ನಡೆಸುವವರಿಗೆ ದಂಡ ವಿಧಿಸಲಾಗುವುದು,ಬಸ್ ನಲ್ಲಿ ಧೂಮಪಾನ ನಿಷೇದಿಸಲಾಗಿದೆ,

ಇದರ ಜತೆಗೆ ಕರಾರಸಾಸಂ ನ ಬಸ್ಗಳಲ್ಲಿ ಕೇವಲ "ಕನ್ನಡ ಮನರಂಜನೆ ಮಾತ್ರ " ಎಂಬ ಫಲಕ ಅಥವ ಬರಹ ಸಹ ಮೂಡಿಸಬೇಕಿದೆ.

Anonymous ಅಂತಾರೆ...

ಯಾರ ಬಳಿ ಆದ್ರೂ KSRTC email ID [ಎಲ್ಲಾ ಅಧಿಕಾರಿಗಳ, ಸಾರಿಗೆ ಮಂತ್ರಿದೂ ಸಹ]ಇದ್ರೆ ತಿಳಿಸಿ ಎಲ್ಲರೂ ಈ post ನ ಅವರಿಗೆ ರವಾನೆ ಮಾಡಿ ನಮ್ಮ ಬಸ್ ನಲ್ಲಿ ಕನ್ನಡ ಮನರಂಜನೆಗೆ ಆಗ್ರಹಿಸೋಣ

Anonymous ಅಂತಾರೆ...

KSRTC ಮಿಂಚೆ: gmtraffic@ksrtc.org

Anonymous ಅಂತಾರೆ...

ನಮಸ್ಕಾರ,
ಒಂದು ಸಲ ನಾನು ಹೈಡೆರಬ್ಯಾಡ್ ನಿಂದ ಬೆಂಗಳೂರು ಗೆ ಕೇ.ಸ್.ರ್.ತ್.ಸೀ ಬಸ್ ನಲ್ಲಿ ಹೋಗುವಾಗ್ಗೆ ನಾನು ,ಉಳಿದವರೆಲ್ಲ ಎಸ್ಟು ಕೇಳೋಕೊಂಡ್ರೂ ಕನ್ನಡ ಚಲನಚಿತ್ರ ಹಾಕದೆ ತೆಲುಗು ಹಾಕಿದ.
ಅದೇ ಅಂದ್ರ ಬಸ್ ನಲ್ಲಿ ಹೈಡೆರಬ್ಯಾಡ್ ನಿಂದ ಮಂಗಾಲೂರ್ ಗೆ ಹುಗ್ವಾಗ್‌ಗೆ ತೆಲುಗು ಮಾತ್ರ ಹಕ್ತರೆ.

Anonymous ಅಂತಾರೆ...

ಗುರುವೇ ಬೆಂಗಳೂರಿನ ನಗರ ಸಾರಿಗೆಯ ಯಾವ ಓಲ್ವೋ ಬಸ್ ನಲ್ಲು ಕನ್ನಡ ಹಾಡನ್ನ ಹಾಕೋದೇ ಇಲ್ಲ ನಾವಾಗೆ ಕೇಳಿದ್ರೆ ಕೆಲ ಒಬ್ಬ ಅಯೋಗ್ಯ ಬಸ್ ಕಂಡೆಕ್ಟರ್ ಮತ್ತೆ ಡೈವರ್ ನಿವೊಬ್ಬರೇ ಅಲ್ಲ ಅಭಿಮಾನಿಗಳು ನಾವು ಕೊಡ ಅಭಿಮಾನಿಗೆಳೇ ಅಂತ ಕೊಂಕು ಉತ್ತರ ಕೊಡ್ತಾರೆ, ಇಂತ ಲೋಪರ್ ಬಸ್ ಕಂಡೆಕ್ಟರ್ ಮತ್ತೆ ಡೈವರ್ ಒದ್ದು ಕರ್ನಾಟಕದಿಂದ ಓಡಿಸಬೇಕು.

Unknown ಅಂತಾರೆ...

hosa hosa kannada chitrgaLa CD/DVD release madodilla. chitra chennagidre jana theatres ge bartare atva CD/DVD tagondu nodtare. meaning, olle chitragaLige market idde ide. ittichina chitragaLa quality chennagirodrinda hosa cinemagaLannu CD/DVD madi market ge bidbeku. Aaga KSRTC navru adannu play madabahudu. market expand madodanna namma jana kalibeku.. agle uddara aagodu... idu innu namma industrynavrige artha agilla..

Anonymous ಅಂತಾರೆ...

noDi, naavu adu telugu, idu tamiLu, idu kannaDa anta kootre idakke kone modalilla. Best thing is to bring all the languages under one umbrella and still maintain indivuduality of all the languages.

One easy option we can think of is to use sanskrit words as much possible in all languages. I'm sure in almost all Indian languages including Telugu and KannaDa, many sanskrit words are there. It will be meaningful also and easy to use and understand also.

ofcourse, India, being identified as the people following a single culture(about 800 years ago) living on the banks of Sindhu river and they were following Hindu religion.

There wre plenty of references in the Wikipidia and the researchers that Sanskrit was the language being spoken for such a long time known to mankind and that is the mother of all Indian languages.

For example even the Kannada grammer, 'lipi', Yoga, Medicines and all such useful information to mankind was available in sanskrit only.

(I'd have loved to type all these in KannaDa fonts but there's an issue in the software I'm using. Sorry for that dear readers)

Unknown ಅಂತಾರೆ...

ಎಲ್ಲ ವಾಹನಗಳಲ್ಲು
ಧೂಮಪಾನ ನಿಷೇದಿಸಿದೆ ಎನ್ನುವ ಪಲಕದ ಕೆಳಗೆ
"ಕನ್ನಡೇತರ ಮನರಂಜನೆ ನಿಷೇಧಿಸಿದೆ " ಎ೦ದು ಬರೆಯಬೆಕು.

Anonymous ಅಂತಾರೆ...

ಸ್ವಾಮಿ ಶಂಕರ್ ಅವರೆ,

ಸಂಸ್ಕೃತದ ಬಗ್ಗೆ ನಿಮ್ಮ ಅವಿದ್ಯೆಯನ್ನ ಹೋಗಲಾಡಿಸಿಕೊಳ್ಳಿ, ಸಂಸ್ಕೃತ ಎಲ್ಲಾ ಭಾಷೆಗಳಿಗೂ ತಾಯಿ ಎನ್ನುವ ಆಧಾರವಿಲ್ಲದ ವಾದ ಮಾಡಬೇಡಿ. ಸಂಸ್ಕೃತಿಗೂ ಸಂಸ್ಕೃತಕ್ಕೂ ತಳಕು ಹಾಕಿಕೊಂಡು ಜೀವನ ಹಾಳುಮಾಡಿಕೊಳ್ಳಬೇಡಿ!

ಈ ಕೆಳಗಿನ ಕೊಂಡಿ ನೋಡಿ:

http://enguru.blogspot.com/2007/07/blog-post_29.html

ಇನ್ನು ಕರ್ನಾಟಕದಲ್ಲಿ ಜನ ಬೀದಿಯಲ್ಲಿ ಹೋಗುವವರಿಗೆಲ್ಲಾ ಕೊಡೆ ಹಿಡಿದೂ ಹಿಡಿದೂ ಈಗಾಗಲೇ ಸಾಕಷ್ಟು ತೊಂದರೆ ಆಗಿದೆ, ಆದ್ದರಿಂದ ನಿಮ್ಮ ಕೊಡೆ ಕೊಡುಗೆಯನ್ನ ನೀವೇ ಇಟ್ಟುಕೊಳ್ಳಿ.

Anonymous ಅಂತಾರೆ...

intaha sookshma vishayagaLannu varadi maaDi kannaDigarannu echarisuttiruva Vijaya karnataka patrikege naavu abhinandane heLbeku kanree. beraava patrikegaLoo talekeDisikollada intaha kannaDapara vaadagaLu prakatavaaguvudu Vi.Ka dalli maatra.

houdu bus gaLalli manaranjanege kevala KannaDa/Hindi chitragaLanne torisabeku.

Anonymous ಅಂತಾರೆ...

ತಗಳಪ್ಪ ಬಂದ್ರು ಉದ್ರಿ ಸಲ್ಹೆ ಕೊಡಕ್ಕೆ. ಕನ್ನಡ ಇರ್ಬೇಕು ಅಂದಿದ್ದು ಸರಿ. ಆದ್ರೆ ಹಿಂದಿ ಯಾಕಪ್ಪ ಬೇಕು.

ಎಂ.ಪಿ., ಬಿಹಾರ, ಯುಪಿ. ಹೆಚ್.ಪಿ.ಹಿಂದಿ ಊರಲ್ಲಿ ಹೋಗಿ ಅವರೂರಲ್ಲಿ ಬಸ್ [ಅದೇನಾದ್ರು ಇದ್ರೆ!! ನಮ್ಮೂರಿನ್ ಪಾಕದ ಮಿಠಾಯಿ ಕೋಡೋನು ಸಹ ತೂಕಕ್ಕೆ ಹಾಕ್ತೀವಿ ಅಂತವರೇನಾದ್ರು ಬಂದ್ರೆ ಅದ್ನ ಬೇಡ ಅಂದ್ ಬಿಡ್ತಾನೆ]ನಲ್ಲಿ ಎಲ್ಲಿ ಹಿಂದಿ ಜತೆ ಕನ್ನಡ ಹಾಡು ಹಾಕು ಅಂತ ಬರೀಪ್ಪಾ

ಗುರು, ಕರ್ನಾಟಕದಲ್ಲಿ ಬರೀ ಕನ್ನಡ ಮಾತ್ರ ಇರಬೇಕು, ಬೇರೆ ಭಾಷೆ ಹೆಸರೆತ್ತಿದ್ರು ಅವರ ಬಾಯಿ ಹರ್ದಾಕ್ಬೇಕು.

ಇದಕ್ಕೆಲ್ಲ ಒಂದೆ ಮದ್ದು.

ದಂಡಂ ದಶಗುಣಂ

F1raghu ಅಂತಾರೆ...

naanu hyderabad ge hoguvaga namma ksrtc bus nalli telugu film hakidha nanna kaiyyali summane kulithikolloke agilla..so conductor neeru kodalu bandaga naa avanige kelidhe idu KSRTC na illa APSRTC na anta...naa avanige helide naave kannadana marthre bere avru mathadthara,avarigu kalisabeku nam bashena modalu change maadi anta....conductor sorry keli srimanjunatha film hakidha.... naa yenu movie nodbekagirlilla aadru bere bhashe avarige namma bhashabhimana torisbekithu ashte.....

Unknown ಅಂತಾರೆ...

Navu bharatiyaru, bharat maateya makkalu. Bharat dalliiruva ella rajyagalu annatammandira haage. Nimma maneli nevu endadaru nimma makkalige nimma anna tammandira makkal jote bhavanegalannu hanchodanna avar jote aata aadodanna athava avar jote enjoy madodanna beda anta helidira?..... Haudu aadre..... idu namma sanskruti alla, kanndigaru tamma mugdatege hesuru vasi, navu bere telugu bere tamil bere annodralli yenu artha illa... yellru ellana enjoy maadabeku..... kannada kannada annodar kinta, BHARATda yeligegagi dudibeku..... andaaga matra yellaru sukha shanti inda irabahudu.

Anonymous ಅಂತಾರೆ...

ಅಕ್ಕಾ ..ಸುಜಾತ,

ನಿಂದೊಂದು ಫೋಟೋ ಕಳ್ಸಕ್ಕಾ, ಹಾಕ್ಕೊಂಡ್ ಪೂಜೆ ಮಾಡ್ತೀವಿ. ನಿಮ್ಮಂತಹ ಮುಗ್ಧರ ತಲೆ ಸವರೀ ಸವರೀನೆ ನಮ್ ಕನ್ನಡದವ್ರನ್ನ ೬೦ ವರ್ಷದಿಂದ ಯಾಮಾರುಸ್ಕೊಂಡ್ ಬರ್ತಿರೋದು. ಅಣ್ಣತಮ್ಮಂದಿರು ಅಂದ್ರೆ ಎಲ್ರುಗೂ ಒಂದೇ ರೀತಿ, ನೀತಿ, ನಿಯಮ ಇರ್ಬೇಕು. ನಾನ್ ಅಣ್ಣಾ ನೀನ್ ತಮ್ಮಾ ಹೇಳ್ದಂಗ್ ಕೇಳ್ಕೊಂದ್ ಬಿದ್ದಿರು ಅಂತನ್ನೋದ್ ಇನ್ಮುಂದೆ ನಡ್ಯಲ್ಲ.ಅಂಧಾಗೆ ಇಲ್ಲಿ ಕನ್ನಡದವರು ಅಣ್ಣಂದಿರ್ ಆಗ್ಬೇಕು.

ಟಪೋರಿ

Anonymous ಅಂತಾರೆ...

ಸುಜಾತ ಅವರೆ,

[ಪೂರ್ತಿ ಓದಿಗೆ http://enguru.blogspot.com/2007/08/blog-post_14.html ನೋಡಿ]

ಯಾರು ನಾವು, "ಭಾರತೀಯರು" ಅಂದ್ರೆ?

ಬ್ರಿಟಿಷರನ್ನ ಒದ್ದೋಡಿಸೋ ಆತ್ರದಲ್ಲಿ "ಈ ಭಾರತದ ರಚನೆಯಾದರೂ ಹೇಗಿದೆ?", "ಇದರಲ್ಲಿರುವ ಜನರಾರು?", "ಇವರು ತಮ್ಮನ್ನು ತಾವೇ ಆಳಿಕೊಳ್ಳುವುದು ಎಂದರೆ ಅರ್ಥವಾದರೂ ಏನು?" ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಭಾರತದಲ್ಲಿರೋ ವಿವಿಧತೆಗೆ ಹೆಚ್ಚಾಗಿ ಪ್ರಾಶಸ್ತ್ಯ ಕೊಟ್ಟಿರಲಿಲ್ಲ. ವಿವಿಧತೆ ಇದೆ ಅಂತ ಹೇಳಿಕೊಳ್ಳಕ್ಕೇ ನಾಚಿಕೆ ಅನ್ನೋ ರೀತಿಯಲ್ಲಿ ಭಾರತ ಅಂದ್ರೆ ಒಂದೇ ಸಂಸ್ಕೃತಿ, ಒಂದೇ "ಮುಖ್ಯ" ಭಾಷೆ, ಎಲ್ಲವೂ ಒಂದೇ ಅಂತ ಹೇಳ್ಕೊಂಡು ತಿರುಗಿದ್ದೇ ಹೆಚ್ಚು.

ಆದರೆ ನಿಜವಾದ ಸಂಗತಿಯೇನಪ್ಪಾ ಅಂದ್ರೆ ನಾವು - ಅಂದ್ರೆ ಭಾರತೀಯರು - ಬೇರೆಬೇರೆ ಭಾಷಾವಾರು ಜನಾಂಗಗಳಿಗೆ ಸೇರೋರು. ನಮ್ಮ ನಡೆ-ನುಡಿಗಳು ಬೇರೆ, ನಮ್ಮ ಆಚರಣೆಗಳು ಬೇರೆ, ನಮ್ಮ ಸಂಸ್ಕೃತಿಗಳು ಬೇರೆ, ನಮ್ಮ ಇತಿಹಾಸಗಳು ಬೇರೆ. ಈ ಬೇರೆಬೇರೆ ಜನಾಂಗಗಳು ಭಾರತ ಅನ್ನೋ ಹೆಸರಿನ ಉನ್ನತ ತತ್ವವೆಂಬ ದಾರಕ್ಕೆ ಪೋಣಿಸಿರೋ ಬೇರೆಬೇರೆ ಮಣಿಗಳಿದ್ದಂಗೆ ("ಸೂತ್ರೇ ಮಣಿಗಣಾ ಇವ"). ಒಂದು ಮಣಿ ಕರ್ನಾಟಕ, ಮತ್ತೊಂದು ತಮಿಳ್ನಾಡು, ಮತ್ತೊಂದು ಆಂಧ್ರ, ಮತ್ತೊಂದು ಮಹಾರಾಷ್ಟ್ರ, ಮತ್ತೊಂದು ಉತ್ತರಪ್ರದೇಶ...ಹೀಗೆ ಈ ಮಣಿಗಳಿಗೆ ಹೆಸರುಗಳು. ಈ ಮಣಿಗಳಿಲ್ಲದೆ ಸೂತ್ರಕ್ಕೆ ಬೆಲೆಯಾದ್ರೂ ಎಲ್ಲಿದೆ ಗುರು? ಮಣಿಗಳಿಂದಾನೇ ಸೂತ್ರಕ್ಕೆ ಬೆಲೆ!

Unknown ಅಂತಾರೆ...

Anna tapori nanna photonalla Bharatanbeya photona ittakondu puje madi. Such kind of a feeling towards nation is invitation for foreigners to rule us again. All fingures in our hands are not equal at the same time we use our thumb more than other fingures, we use our right hand more than left one. U can't blame god for all this, do u? Same thing applies here. Work for the progress of this nation, for this state. There are people dying on the roads without food, shelter, Why dont you think about that instead of thinking something which will one day lead to inter state fueds..... India won 20Twenty not because of one persons efforts, it was the team india's effort. India is the richest country in this world but people here are poor why? India has most talented people on this earth but it is not extracted out why? why? U can break a single stick but not a bundle of sticks.....

Anonymous ಅಂತಾರೆ...

Sujata,

Think about this:

Even a bundle of sticks collapse if each stick has been affected with termites!

A disease is slowly eating away each stick in the bundle. That disease is nothing but the neglect of the state's own language, the state's own people, the state's own development.

Before you cure the disease of each stick, it is actually disastrous to bring all the sticks together - the disease spreads!

Unknown ಅಂತಾರೆ...

You are absolutely right Arnold, this is wht the kind of answer i was expecting:-) Termites are external to the bundle, once they sense sticks in the bundle are not resistant for external attack they will eat off entire bundle, thats wht i want convey.... dont allow external forces to destroy us. Let us become resistant for such forces, lets develop brotherlyhood feeling.... I strongly feel no one in this state want to have a different country called Karnataka.... If so we need to stay together and maintain strong relationship with our brothers.......

Anonymous ಅಂತಾರೆ...

@ Sujata

The termites I was referring to are not external to the bundle. They are in the minds of the people living in each stick.

The termite of disregard and neglect of one's own state's language, people and development didn't come from the British or the Pakis. It's right in the heads of our people.

Be not so naive, so straitjacketed as to think termites are necessarily from "outside".

Nothing I have said should be interpreted to mean that those termites which DO come from "outside" should be neglected. I don't mean that. All I'm saying is - we need to destroy the termites in our own heads first.

And then talk of all the sticks sticking together in a bundle. In fact, what the bundle should encourage is sharing of knowledge and best practices w.r.t. how exactly the termites can be destroyed.

Karnataka should set an example for reviving all the native tongues of our great country, India. This is the path to India's progress.

Anonymous ಅಂತಾರೆ...

i completely agree about giving priority to kannadigas. national integrity will not exist untill we learn to respect the culture and languages of all the nationals. when they use the resources of kannadigas, they need to respect and accept the norms and ways of kannadigas too. any disrespect should not be tolerated.

Vijendra ( ವಿಜೇಂದ್ರ ರಾವ್ ) ಅಂತಾರೆ...

ಸುಜಾತ ಅವ್ರೆ...
"lets develop brotherlyhood feeling.... I strongly feel no one in this state want to have a different country called Karnataka.... If so we need to stay together and maintain strong relationship with our brothers......."
ಇದೆಲ್ಲಾ ಸಾಧ್ಯ...ಆದ್ರೆ ಬೇರೆಯವ್ರೂ ಇದನ್ನು ತಿಳ್ಕೋಬೇಕು ಅಲ್ವ?ಬರೇ ನಾವು ಬಡ್ಕೊಳ್ತಾ ಕೂತ್ರೆ ಎನು ಪ್ರಯೋಜನ? ನಾವು ಅಣ್ಣ ತಮ್ಮಂದಿರು ಅಂತ ಅಂದುಕೊಂಡವ್ರೆ ಬೆನ್ನಿಗೆ ಚೂರಿ ಹಾಕೊಕೆ ಬಂದ್ರೆ ಆಗ ಎನ್ ಮಾಡೋಣ? ಕಾವೇರಿ ನೀರಿನ ವಿಷಯದಲ್ಲಿ ಎನ್ ಆಯ್ತು ಅಂತ ಎಲ್ರಿಗೂ ಗೊತ್ತಿದೆ...
ಬ್ರಿಟಿಷರು ಇದ್ದಾಗಿನ ಸ್ತಿತಿಗಿಂತ ಈಗಿನ ನಮ್ಮ ಸ್ತಿತಿ ಎಷ್ಟು ಭಿನ್ನವಾಗಿದೆ? ನಾವಿಲ್ಲಿ ತಮಿಳ್ನೊರಿಗೆ, ತೆಲುಗರಿಗೆ ಹೊಡಿಬೇಕಂತ ಎಲ್ಲೂ ಹೇಳಿಲ್ಲ.. ನಮ್ಮ ನಾಡು ನುಡಿಯನ್ನ ಹೇಗೆ ಬಲಪಡಿಸುವುದು ಅಂತ ಚರ್ಚೆ ಮಾಡ್ತಾ ಇದ್ದಿವಿ.. ಹುಸಿ ರಾಷ್ಟ್ರಿಯತೆಯಿಂದ ಯಾವ ಪ್ರಯೋಜನಾನು ಇಲ್ಲ...

daya ಅಂತಾರೆ...

ಈ ಬೆರಿಕೆ ಜನಗಲನ್ನೆಲ್ಲ ಒದ್ದು ಹೊರಗೆ ಹಾಕಬೇಕು
ಇಂಥವರಿಂದ ನಮ್ಮ ನಾಡಿಗೆ ಮಾರಕ

Anonymous ಅಂತಾರೆ...

ಹಿಂದೆ ನೆಹ್ರೂ ಅವ್ರು “ಹಿಂದೀ ಚೀನಿ ಬಾಯಿ ಭಾಯಿ” ಅಂತ ನಂಬ್ಕೊಂಡು ಕೊನೆಗೆ ಅವ್ರಿಂದಲೇ ಬೆನ್ನಿಗೆ ತಿವಿಸಿಕೊಂಡ್ರು. ಅದೇ ತರಾ ಕನ್ನಡದವ್ರು “ನಾವೆಲ್ಲಾ ಅಣ್ಣತಮ್ಮಂದ್ರು, ಭಾರತೀಯರು” ಅಂತ ನಂಬ್ಕೊಂಡು ನೆರೆಹೊರೆಯವರಿಂದ ಬೆನ್ನಿಗೆ ಹಲವಾರು ಸಲಾ ಚೂರಿಹಾಕಿಸಿಕೊಂಡಿದ್ರೂ ನಮ್ಮೋರಿಗೆ ಇನ್ನೂ ಬುದ್ದಿ ಬಂದಿಲ್ಲ. ನಮ್ಮ ನೆರೆಹೊರೆಯ ರಾಜ್ಯಗಳು ನಮ್ಮ ಜೊತೆ ಅಣ್ಣತಮ್ಮಂದಿರಂತೆ ನಡ್ಕೊಂಡಿವ್ಯಾ? ಸುಜಾತಕ್ಕಾ ಹೇಳಿ. ನ್ಯಾಯ ಇಬ್ಬರ ಕಡೆನೂ ಸಮ ಇರ್ಬೇಕು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಆಗ್ಬಾರ್ದು. ಅನ್ಯಾಯ ಆಗ್ತಿರಬೇಕಾದ್ರೆ ಯಾರು ಏನಂದ್ಕೋತಾರೋ ಅಂತ ಸುಮ್ಮನಿರೋದು ಸರಿಯಲ್ಲ. ಮಾಭಾರತದಲ್ಲಿ ಅರ್ಜುನಂಗೆ ಕೃಷ್ಣ ಏನ್ ಹೇಳಿದ ಅದನ್ನೇ ಏನ್ಗುರು ಏಳ್ತಾವ್ರೆ. “ನ್ಯಾಯಕ್ಕಾಗಿ ಹೋರಾಡು. ನಮ್ಮೋರು ಬೇರೆಯೋರು ಅಂತಲ್ಲ.”
ಏನ್ಗುರು ಹೇಳೋದು ಎಲ್ಲಾ ಭಾಷೆಯೋರಿಗು ಅನ್ವಯ ಆಗುತ್ತೆ.

-ಅಳ್ಳಿಮುಕ್ಕ

Anonymous ಅಂತಾರೆ...

kannaDa 'Kasturi' vaahiniyu ballari muntaada gaDibhaagada janarige innoo labhyavaagillavante..!! adakke kaaraNa allina telugu raajakaariNigaLu. Nodi hegide namma raajyadalle ondu hosa TV channel noduva hakkilla namma kannaDigarige !!

Karthik ಅಂತಾರೆ...

ಅದರ ಕಥೆ ಬಿಡು ಗುರೂ.
KSRTC ನವ್ರು ಈಗ ಟಿಕೆಟ್ ಮೆಷಿನ್ ಗಳನ್ನ ಕಂಡಕ್ಟರ್ ಕೈಗೆ ಕೊಟ್ಟವ್ರೆ. ನಮ್ಮಳ್ಳಿ ಕಡೆ ಇವೃ ಕೊಡೊ ಟಿಕೆಟ್ ಗಳು ಇಂಗ್ಲೀಷ್ ನಲ್ಲಿ ಇರ್ತಾವೆ. ಯಾವ್ ನನ್ ಮಗ ಹಳ್ಳಿ ಕಡೆ ಇಂಗ್ಲೀಷ್ ಟಿಕೆಟ್ ಕೊಡೋ ಐಡೀಯಾ ಕೊಟ್ನೋ ಇವರ್ಗೆ!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails