ಡಬ್ಬಿಂಗ್ ಬೇಡ ಅನ್ನೋ ಕಾಲ ಇದಲ್ಲ

ನೈಸ್ ಅಶೋಕ್ ಖೇಣಿ ಕನ್ನಡ್‍ದಲ್ಲಿ ಚಿತ್ರ ಮಾಡ್ತೀನಿ, ಒಳ್ಳೊಳ್ಳೆ ಬೇರೆಭಾಷೆ ಚಿತ್ರಗಳ್ನ ಕನ್ನಡಕ್ಕೆ ಡಬ್ ಮಾಡಿ ಕನ್ನಡಿಗರ ಮುಂದೆ ಇಡ್ತೀನೆ ಅಂದ್ರೆ ಮಾಜಿ ಕನ್ನಡ ಚಿತ್ರನಟ ಅಶೋಕ್ "ಅದೆಂಗೆ ಮಾಡ್ತೀರ ನೋಡ್ತೀನಿ!" ಅನ್ನೋ ರೀತೀಲಿ ತೊಡರುಗಾಲು ಹಾಕಿದಾರೆ ಅಂತ ಆಗಸ್ಟ್ 1ರ ವಿ.ಕ. ದಲ್ಲಿ ಸುದ್ದಿ.

ಅದ್ಯಾಕ್ ಇವ್ರುಗೂ ಡಬ್ಬಿಂಗ್ಗೂ ಎಣ್ಣೆ-ಸೀಗೇಕಾಯಿ ಸಂಬಂಧವೋ ಗೊತ್ತಿಲ್ಲ. ಹಿಂದೆ ಡಬ್ಬಿಂಗ್ ವಿರೋಧ್ಸಿ ಚಳುವಳಿ ಮಾಡಿದ್ರು ಅಂತ್ಲೋ ಏನೋ ಈಗ್ಲೂ "ಅಪ್ಪ ಹಾಕಿದ್ ಆಲದ್ ಮರಕ್ಕೆ" ಜೋತುಬೀಳೋದು ಸೊಲ್ಪ ತಮಾಷಿಯಾಗಿದೆ ಗುರು!

ಹಿಂದೆ ಅರವತ್ತರ ದಶಕದಲ್ಲಿ ಕನ್ನಡ ಸಿನಿಮಾಗಳ್ನ ಮಾಡೋರೇ ಜಾಸ್ತಿ ಇರ್ಲಿಲ್ಲ. ಮಾಡ್ತಿದ್ದ ಬೆರಳೆಣಿಕೆ ಸಂಸ್ಥೆಗಳೂ ಬೇರೆಭಾಷೆಯೋರ ಕೈಯಲ್ಲೇ ಇದ್ವು. ಆಗ ಔರು ಮಾಡ್ತಿದ್ದ ಡಬ್ಬಿಂಗಿಂದ ಕನ್ನಡ ಚಿತ್ರನಿರ್ಮಾಣ ಮತಷ್ಟು ಕಡ್ಮೆಯಾಗಿ ಕನ್ನಡ ಕಲಾವಿದರು ಮತ್ತು ಕನ್ನಡ ಚಿತ್ರಮಂದಿರಗಳು ಬದುಕಕ್ಕೇ ಕಷ್ಟ ಪಡ್ತಾ ಇದ್ವು. ಆಗ ಡಬ್ಬಿಂಗ್ ಬೇಡ ಅನ್ನೋ ನಿಲುವು ಸರಿಯಾಗೇ ಇತ್ತು. ಆಗ ಕನ್ನಡದ ಕಟ್ಟಾಳು ಅನಕೃ ಮತ್ತು ಇನ್ನೂ ಕೆಲವು ಹಿರಿಯರು ಚಳವಳಿ ಮಾಡಿದ್ದಕ್ಕೇ ಕನ್ನಡ ಚಿತ್ರರಂಗ ಬದುಕಿ ಬೆಳೀತು ಅಂದ್ರೆ ಸುಳ್ಳಲ್ಲ.

ಆ ಚಳುವಳಿಯ ಫಲವಾಗೇ ಅಂತ ಕಾಣತ್ತೆ, ಇವತ್ತು ನಂ ನಾಡಲ್ಲಿ ಚಿತ್ರನಿರ್ಮಾಣದ ಎಲ್ಲಾ ಸವಲತ್ತುಗಳೂ, ತಂತ್ರಜ್ಞಾನ, ಪ್ರತಿಭಾವಂತ ಕಲಾವಿದರ ತಂಡ ಎಲ್ಲವೂ ಸಿಗತ್ತೆ. ಆದ್ರೂ ಇವತ್ತು ಕನ್ನಡ ಚಿತ್ರರಂಗಕ್ಕೆ ಕಷ್ಟ ಇಲ್ಲದೆ ಇಲ್ಲ. ಕಷ್ಟ ಆಗ್ಲೂ ಇತ್ತು, ಈಗ್ಲೂ ಇದೆ, ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಡಬ್ಬಿಂಗ್ ಬೇಡಾಂತ ಅನಕೃ ಮುಂತಾದೋರು ಹೋರಾಡ್ತಿದ್ ಕಾಲಕ್ಕೆ ಹೋಲಿಸಿದರೆ ಈಗ ಮುಖ್ಯವಾಗಿ ಎರಡು ಬದಲಾವಣೆಗಳಾಗಿವೆ:
  1. ಕರ್ನಾಟಕಕ್ಕೆ ವಲಸೆ ಬರೋರು ಜಾಸ್ತಿಯಾಗಿ, ಅವರ ಜೊತೆ ಆಯಾ ಭಾಷೆಗಳ ಚಿತ್ರಗಳೂ ವಲಸೆ ಬರೋದು ಹೆಚ್ಚಾಗಿದೆ
  2. ಜಾಗತೀಕರಣದಿಂದಾಗಿ ಹೊರದೇಶಗಳಿಂದ ಬರೋ ಚಿತ್ರಗಳೂ ಹೆಚ್ಚಿವೆ
ಒಟ್ನಲ್ಲಿ ಇವತ್ತು ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಸಂಖ್ಯೆಗೂ ಬೇರೆಭಾಷೆ ಚಿತ್ರಗಳ ಸಂಖ್ಯೆಗೂ ಪೈಪೋಟಿ ಇದೆ. ಹೀಗಿರುವಾಗ ಎಷ್ಟೋ ಜನ ನಮ್ಮ ಕನ್ನಡಿಗರೂ "ರಜನೀ" ನೋಡ್ಬೇಕು, "ಚಿರು" ನೋಡ್ಬೇಕು, "ಬಿಪ್ಸ್" ನೋಡ್ಬೇಕು, "ಶ್ಯಾರನ್ ಸ್ಟೋನ್" ನೋಡ್ಬೇಕು ಅಂತ ತಮಿಳು, ತೆಲುಗು, ಹಿಂದಿ, ಇಂಗ್ಲೀಷ್ ಚಿತ್ರಗಳಿಗೆ ಹೋಗೋದುಂಟು. ಹಿಂದಿ ಚಿತ್ರಗಳಂತೂ ಕನ್ನಡಿಗರ ಮೇಲೆ ಹಿಂದಿ ಹೇರಿಕೆಗೆ ಒಂದು ಹೊಸ ಆಯಾಮವನ್ನೇ ತಂದುಕೊಟ್ಟಿವೆ. ಇಂಗ್ಲೀಷಿನ ಚಿತ್ರಗಳಂತೂ ನಾಕ್ ಅಕ್ಷರ ಇಂಗ್ಲೀಷ್ ಬರೋ ಕನ್ನಡಿಗರಿಗೆಲ್ಲ ಬೇಕೇ ಬೇಕು, ನೋಡದೇ ಇದ್ರೆ ಏನೋ ಜೀವನದಲ್ಲಿ ಕಡಿಮೆ ಆಗಿದೆ ಅನ್ನೋ ಅಷ್ಟು ಹುಚ್ಚು. ಈ ಬೇರೆಭಾಷೆ ಚಿತ್ರಗಳ ಹಾವಳೀಲಿ ಎಷ್ಟೇ ಚೆನ್ನಾಗಿದ್ರೂ ಕರ್ನಾಟಕದಲ್ಲೇ ಕನ್ನಡ ಚಿತ್ರಗಳಿಗೆ ತಿಯೇಟ್ರು ಸಿಗೋದು ಕಷ್ಟ ಆಗಿದೆ.

ಇವೆಲ್ಲ ಬೇಕಾ ಗುರು? ಇದ್ರ ಬದ್ಲು ಅದೇ ಚಿತ್ರಗಳ್ನ ಕನ್ನಡಕ್ಕೆ ಡಬ್ಬಾರೂ ಮಾಡುದ್ರೆ ಅದನ್ನೇ ಕನ್ನಡಿಗ್ರು ನೋಡಲ್ವೆ? ಅದೇ "ರಜನೀ", ಅದೇ "ಚಿರು", ಅದೇ "ಬಿಪ್ಸು", ಅದೇ "ಶ್ಯಾರನ್ ಸ್ಟೋನ್" ಗಳ್ನ ಕನ್ನಡದಲ್ಲಿ ನೋಡಿದ್ರೆ ತಪ್ಪೇನು? ಈ ಮೂಲಕವಾದ್ರೂ ಕನ್ನಡಾನ ಉಳುಸ್ಕೋಬೋದಲ್ಲ? ಬೇರೆಭಾಷೆಯೋರೂ ಕನ್ನಡದಲ್ಲೇ ತಮ್ಮ ಮೆಚ್ಚಿನ ನಟ-ನಟಿಯರ್ನ ನೋಡೇ ನೋಡ್ತಾರೆ. ಇವೆಲ್ಲ ಬಿಟ್ಟು ಮಡಿಮಡಿಯಾಗಿ ಕನ್ನಡಾನ ಎಲ್ಲೋ ದೂರದಲ್ಲಿಟ್ರೆ ಅದೂ ಸಂಸ್ಕೃತದಂಗೆ ಮೇಲೆಲ್ಲೋ ಮೋಡದಲ್ಲಿ ಕಾಲ್ಪನಿಕ ಜನ್ರು ಮಾತಾಡೋ ಭಾಷೆಯಾಗೋಗಲ್ವಾ ಗುರು? ಡಬ್ಬಿಂಗಿಂದ "ಕನ್ನಡ ಸಂಸ್ಕೃತಿ" ಹಾಳಾಗತ್ತೆ ಅಂತ ವಾದ್ಸೋರು ಮೊದ್ಲು ಕನ್ನಡಿಗರ್ನ ಕನ್ನಡಿಗರಾಗೇ ಉಳಿಸಿಕೊಳ್ಳೋದ್ನ ಕಲೀಬೇಕು. ಚಟ ತೀರಿಸಿಕೋಬೇಕಾದ್ರೆ ನಂ ಭಾಷೇಲಿ ಆಗಲ್ಲ ಅನ್ನೋ ಪರಿಸ್ಥಿತಿ ಹುಟ್ಟು ಹಾಕಿದರೆ ಅದು ಕನ್ನಡದ ಉಳಿವಿಗೇ ಪೆಟ್ಟು ಗುರು!

ಇವತ್ತಿನ್ ದಿನ ಅಣ್ಣೋರಿದ್ದಿದ್ರೆ ಡಬ್ಬಿಂಗ್ ಬೇಡ ಅನ್ನೋರ್ಗೆ "ಲೋ ಪೆದ್ರಾ",
ಮುತ್ತಿನಂಥ ಮಾತೊಂದು ಗೊತ್ತೇನಮ್ಮ?
ನಿನಗೆ ಗೊತ್ತೇನಮ್ಮ?
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು
ನಾವು ತಾಳಕ್ಕೆ ತಕ್ಕಂತೆ ಕುಣಿಯಬೇಕು

ಅಂತ ಹೇಳಿ "ಮಾಡ್ರಪ್ಪ, ಡಬ್ಬಿಂಗ್ ಮಾಡಿ ತಪ್ಪೇನಿಲ್ಲ, ಇದ್ರಿಂದ್ಲೇ ಕನ್ನಡಕ್ಕೆ ಒಳ್ಳೇದು" ಅಂದಿರೋರು ಗುರು! ಡಬ್ಬಿಂಗ್ ಬೇಡ ಅನ್ನೋ ಕಾಲ ಇದಲ್ಲ. ತಾಳ ಬದಲಾಯ್ತು.

17 ಅನಿಸಿಕೆಗಳು:

Anonymous ಅಂತಾರೆ...

ನಮ್ಮ ಚಿತ್ರರಂಗದ ಹಿರಿಯರು ಕೊಡೋ ಕಾರಣಗಳು ಮಾತ್ರ ಚಿತ್ರ-ವಿಚಿತ್ರವಾಗಿದೆ.

೧) ಕನ್ನಡ ತಂತ್ರಜ್ಞರಿಗೆ ಕೆಲ್ಸ ಹೋಗೊತ್ತೆ ಅಂತ.
ಹೀಗೆ ಹೇಳೋ ಜನ, ಮಹಿಷಿ ಅನ್ನೋ ತೆಲುಗು ಲೇಖಕ ಹತ್ರ ಕಥೆ ಬರಿಸ್ತಾರೆ, ಇನ್ಯಾರೋ ಊರಿಂದ ನಿರ್ದೇಶಕರನ್ನು ಕರಕೊಂಡು ಬರ್ತಾರೆ. ತಮಿಳ್ ನಾಡಿನಿಂದ
ತೆರೆಮರೆಯ ತಂತ್ರಜ್ಞರು ಬರ್ತಾರೆ. ಮಲೆಯಾಳಿ ಫೊಟೊಗ್ರಾಫರ್ ಆಗ್ತಾನೆ.
ಉತ್ತರ ಭಾರತದಿಂದ ಹಿರೋಯಿನ್ ಕರೆಸ್ತಾರೆ ಮತ್ತು ಅಲ್ಲಿಂದ ಕುನಾಲ್,ಮಿನಾಲ್,ಶ್ರೇಯಾ ಅನ್ನೋ ಗಾಯಕರನ್ನು ಕರೆಸಿ ಹಾಡಿಸ್ತಾರೆ. ಅಷ್ಟು ಸಾಲದು ಅಂತ ಪರದೇಶದಲ್ಲಿ ಶೂಟಿಂಗ್ ಬೇರೆ ಮಾಡ್ಕೊಂಡು ಬರ್ತಾರೆ. ಇದು ಕನ್ನಡ ಚಿತ್ರ. ಇದನ್ನು ಪ್ರಶ್ನೆ ಮಾಡಿದರೆ, ಕಲಾವಿದರಿಗೆ ಭಾಷೆ ಇಲ್ಲಾ ಅಂತಾರೆ. ಇವರು ಹಿರೋಗಳಾಗುವದಕ್ಕೆ ಕನ್ನಡ ಚಿತ್ರ ಬೇಕು ಅಷ್ಟೆ.
ಡಬ್ಬಿಂಗ್ ಮಾಡಿದರೆ ಕೆಲ್ಸ ಹೋಗೊದು ಯಾರಿಗೆ, ಪರಭಾಷೆಯಿಂದ ಬಂದಿರುವ ಜನಕ್ಕಾ ಇಲ್ಲಾ ಈ ಹೀರೋಗಳಿಗಾ?, ಇವರಿಗೆ ಹೊದ್ರೆ ಕಂಠದಾನ ಕಲಾವಿದರಿಗೆ ಸಿಗೋತಲ್ಲ ಅಂತ ಯಾಕೆ ಇವರಿಗೆ ಅನಿಸುವದಿಲ್ಲವೋ ನಾ ಕಾಣೆ ಗುರುವೇ.
ಇವ್ರೇ ಹೇಳಿದ ಹಾಗೆ ಕಲಾವಿದರಿಗೆ ಭಾಷೆ ಇಲ್ಲಾ ಅಲ್ವಾ, ನಮ್ಮ ಕನ್ನಡ ಕಲಾವಿದರು ಬೇರೆ ಭಾಷೆಯಲ್ಲಿ ಹೋಗಿ ಮಾಡ್ಲಿ ಬಿಡಿ. ಇವಗಾ ಎನೂ ಮಾಡ್ತ ಇಲ್ವಾ ?

ಸುಮ್ಮನೆ ಅನೇಕ ಸಂಸಾರಗಳು ಬೀದಿಗೆ ಬಿಳ್ತವೇ ಅಂತ ಡೋಂಗು ಬಿಟ್ಟು, ಎಲ್ಲಾ ತೆರಿಗೆಗಳಿಂದ ವಿನಾಯಿತಿ ಪಡೆಯೋದು ಮತ್ತು ಕನ್ನಡ ಚಿತ್ರ ಬೇರೆ ಭಾಷೆಯ ಚಿತ್ರಗಳಿಗಿಂತ ಕಮ್ಮಿ ಅಂತ ಹೇಳ್ಕೊಂಡು ಬರ್ತಾರೆ ಈ ಜನ.

ಡಬ್ಬಿಂಗ್ ಮಾಡಿದರೆ ಕನ್ನಡ ಚಿತ್ರರಂಗ ಮುಳಗಿ ಹೋಗೊತ್ತೆ ಅಂತ ಅನಕೃ ಮತ್ತು ಡಾ.ರಾಜ್ ಹೇಳಿದ್ರು.

ಹೀಗೆ ಮಾತಡೊ ನಟಭಯಂಕರರು ಒಳಒಳಗೆ ಸೇರ್ಕೋಂಡು ಶಿವಾಜಿ ಚಿತ್ರವನ್ನು ೪ ಪ್ರಿಂಟಗಳು ಅಂತ ಬೂಸಿ ಬಿಟ್ಟು ೩೫ ಪ್ರಿಂಟಗಳನ್ನು ಬಿಟ್ಟು ಕನ್ನಡ ಚಿತ್ರಗಳಿಗೆ ಮಾರಕ ಅದ್ರಲ್ಲಾ , ಇವರ ಈ ಮಾತು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗಿತೆ ಬಂದ ಹಾಗೆ ಅನಿಸೊತ್ತೆ ಗುರುವೇ.
ನಮ್ಮ ಚಿತ್ರ ಮುಳಗಿ ಹೋಗ್ತಾ ಇರೋದು ಇಂತಾ ಹಲಾಲ್ಕೋರ್ ನನ್ನಮ್ಕಳ್ಳಿಂದ.

Anonymous ಅಂತಾರೆ...

ಹತ್ತು ಸಾವಿರ ಕಲಾವಿದರ ಹೊಟ್ಟೆ ಮೇಲೆ ಹೊಡೆದ ಹಾಗಾಗುತ್ತೆ, ಡಬ್ಬಿಂಗ್ ಮಾಡುದ್ರೆ ಅನ್ನೋರ ನಿಜವಾದ ಉದ್ದೇಶ ಪಕ್ಕದ ಭಾಷೇಲಿ ತಯಾರೋಗೊ ಹಿಟ್ ಸಿನಿಮಾನ ಇಲ್ಲಿ ರಿಮೇಕ್ ಮಾಡಕ್ಕೆ ಅವಕಾಶ ಬೇಕಲ್ಲ. ಡಬ್ಬಿಂಗ್ ಆಗಿ ಬಂದ್ರೆ ಇವರು ರಿಮೆಕ್ ಮಾಡಕ್ ಆಗಲ್ಲ ಅನ್ನೋ ಸಂಕಟ ಅಷ್ಟೆ. ಐದು ಕೋಟಿ ಕನ್ನಡಿಗರ ಅಸ್ತಿತ್ವಕ್ಕೆ ಅಗತ್ಯ ಅನ್ಸುದ್ರೆ ಈ ಹತ್ತು ಸಾವಿರ ಜನಕ್ಕೆ ಬೇರೆ ಕೆಲಸ ಹುಡುಕಿಕೊಳ್ಳೋಕೆ ಹೇಳೋಣ ಗುರೂ ...

ಚಿತ್ರ ಗುಪ್ತ

Anonymous ಅಂತಾರೆ...

ನಂಗೇನು ಆ ಚಿರು, ಗುರು, ರಜ್ನಿನೆಲ್ಲಾ ನೋಡ್ಬೇಕು ಅಂತ ಆಸೆ ಅಗೋಲ್ಲ ಗುರು. ನಮ್ಮ ಜನರೆ ಸಿನಿಮಾ ಮಾಡಿದ್ರೆ ನೋಡಕ್ಕೆ ಇಷ್ಟ. ಇವರು ಎಲ್ಲಾ ಕನ್ನಡದ ಜನರ ಕೈಯಲ್ಲಿ ಸಿನಿಮ ಮಾಡಿಸಿದರೆ ಇನ್ನು ಚೆನ್ನಾಗಿರೊತ್ತೆ. ಅಂದ್ರೆ ನಟಿಯರು, ಹಾಡುಗಾರರು, ಎಲ್ಲರು ಕನ್ನಡದವರೆ ಆದ್ರೆ ಒಳ್ಳೇದು.

ಇವರು ಎಲ್ಲಾ ಕೆಲಸ ಬೇರೆಯವರ ಕೈಯಲ್ಲಿ ಮಾಡಿಸೋದು ಅಮೇಲೆ ಕನ್ನಡಿಗರಿಗೆ ಕೆಲಸ ಹೋಗೊತ್ತೆ ಅನ್ನೋ ಸೋಗು ಹಾಕಿ ಡಬ್ಬಿಂಗ್ ಬೇಡ ಅನ್ನೋದು meaningless. ಒಳ್ಳೆ ಪಾಯಿಂಟ್.

ಆದ್ರೆ ಡಬ್ಬಿಂಗ್ ಚಿತ್ರ ನೋಡೊಕ್ಕೆ ನಂಗಂತು ಇಷ್ಟ ಇಲ್ಲ. ನಮ್ಮ ಸ್ವಂತದ್ದು ಅನ್ನೋದೇ ಇರೊಲ್ಲ. ಅದು ಅಲ್ಲದೆ, ಡಬ್ಬಿಂಗೆ ಚಿತ್ರಗಳು ಬಂದಾಕ್ಷಣ ಇಲ್ಲಿ ಬೇರೆ ಭಾಷೆ ಚಿತ್ರಗಳನ್ನ ಹಾಕೋದು ನಿಲ್ಲೋತ್ತ?

Anonymous ಅಂತಾರೆ...

Dab mADidr tamilu, telugu, hinhi bhashe citragala havali karnatakadalli kadime agutte.

DON ಅಂತಾರೆ...

thite subba,,

sarige heliddya rajaa.

ivru ella dongi nanamakklu, dabbing bandre innu sumar jana kannadavarige kelsa sigutte. bere baashe technicians gella kelsa hogutte.

avalagadru solpa parabashe chitraga havali tadibahudu.

Anonymous ಅಂತಾರೆ...

ಗುರುಗಳೇ,, ನೀವ ಏನ್ ಅನ್ರೀ.. ಡಬ್ಬ ಮಾಡಿದ್ದ ಪಿಚ್ಚರ್ ನೋಡು ಕರ್ಮ ನಮಗ ಯಾಕ್ರಿ.. ಅವೆಲ್ಲ ಅಲ್ಲಿ ಭಾಷಾ, ಅಲ್ಲಿ ಸಂಸ್ಕ್ರುತಿ ತೋರಸು ಪಿಚ್ಚರಗೊಳ್ರಿ.. ಅವು ನಮ್ಮ ಕನ್ನಡ ಸಂಸ್ಕ್ರುತಿ ಆಗಲಿ, ನಮ್ಮ nativity ನ ಆಗ್ಲಿ ತೋರಸಂಗಿಲ್ರಿ ಗುರುಗಳೇ.. ಅದು ಅಲ್ಲದ್,, ನಾಳೆ ಊರ ತುಂಬ ಅವರವ ಪಿಚ್ಚರ ಹತ್ತಿದ್ರ,, ನಮ್ಮ ಕನ್ನಡ ಪಿಚ್ಚರಗೊಳು ಎಲ್ಲಿ ಹೋಗ್ಬೇಕ್ರಿ..??

Anonymous ಅಂತಾರೆ...

ಗುರುವೇ ವಸಂತ,
ನೀನು ಹೇಳಿದ ಹಾಗೆ ಇದ್ದಿದ್ರೆ ನಮ್ಮ ರಾಜ್ಯದಲ್ಲಿ ಬೇರೆ ಭಾಷೆ ಚಿತ್ರ ಇಷ್ಟರ ಮಟ್ಟಿಗೆ ಬರ್ತಾ ಇರಲಿಲ್ಲ.
ನಮಗೆ ಬೇಡ ಅಂದು ಬಿಟ್ಟರೆ ಎನು ನಮ್ಮ ರಾಜ್ಯದಲ್ಲಿ ಭೇರೆ ಭಾಷೆ ಚಿತ್ರ ಬರೋಲ್ವಾ?

ನಮ್ಮ ಡೋಂಗಿ ಗಂಗಿ ಮತ್ತು ಸಾರಾಯಿ ಗೋವಿ ಈ ಮಟ್ಟಿಗೆ ನಿಗರಾಡೊದು ಬಿಡ್ತಾರಾ ?. ಭಾಯಲ್ಲಿ ಕನ್ನಡ ಮಾಡೊದು ಮಾತ್ರ ಬೇರೆ ಭಾಷೆ ಕೆಲ್ಸಾ ಮಾಡೊದು ನಿಲ್ಲಿಸ್ತಾರ ?

ಬೇಡ ಅಂದರೂ ನಮ್ಮ ರಾಜ್ಯದಲ್ಲಿ ಆ ಭಾಷೆ ಚಿತ್ರ ಬರೋವಾಗ ಅದನ್ನು ಕನ್ನಡದಲ್ಲಿ ತೆಗೆದುಕೊಂಡರೆ ಎನು ನಷ್ಟ. ಈಗ ಹೇಗಿದ್ದರು ೫೦% ಚಲನಚಿತ್ರ ಮಂದಿರ ಅವರಿಗೆ ಮೀಸಲು ಇಟ್ಟಿಲ್ವಾ. ಅಲ್ಲಿ ಬೇರೆ ಭಾಷೆ ಬದಲು ಕನ್ನಡ ಚಿತ್ರ ಓಡೊತ್ತೆ.


ಅಲ್ಲರೀ ನಿಮಗೆ ಕನ್ನಡದಲ್ಲಿ ಹೇಳಿದ್ರ ಅರ್ಥ ಆಗೊತ್ತಾ ಇಲ್ಲ ಅದನ್ನು ತಮಿಳನಲ್ಲೇ ಹೇಳಬೇಕಾ ?. ನಮ್ಮ ಉದಾರಿ ಕನ್ನಡಿಗರು ಭಾಷೆ ಕಲಿತುಕೊಂಡು ನೋಡೊದು ತಪ್ಪೊತ್ತೆ.

ಇದೇ ವ್ಯವಸ್ಥೆ ಆಂದ್ರ ಮತ್ತು ತಮಿಳುನಾಡುವಿನಲ್ಲಿ ಇಲ್ವಾ ?

ಸ್ವಲ್ಪ ನಾವು large interest ನೋಡಬೇಕು, ಹಾಗೆ ನೋಡಿದರೆ ಈ ಸಾರಾಯಿಗೋವಿಂದು ಮತ್ತು ಇರಕೇಸರಿ ಅಶೋಕ ಅವರು ಡಬ್ಬಿಂಗ ವಿಷ್ಯಕ್ಕೆ ಬಂದ್ರೆ ಉರಕೋಂಡು ಬರೋದು ನೋಡಿದ್ರೆ ನಗು ಬರ್ತಾದೆ. ಇವರು ಮಾಡೊ ಅನಾಚಾರಕ್ಕೆ ಡಾ.ರಾಜ್ ಮತ್ತು ಅನಕೃ ಹೆಸರು ಬಳಿಸ್ತಾರೆ.

ಇನ್ನಾ ಒಬ್ಬ ಇದ್ದ ಪುಣ್ಯಾತ್ಮ, ರಾಜಾಬಾಬು, ಟಿ.ವಿ ಕ್ಯಾಮರ ಬಂದ್ರೆ ಸಾಕು ಅನಕೃ ೧೯೬೫ ನಲ್ಲಿ ಎನು ಹೇಳಿದ್ರೂ ಗೊತ್ತಾ ಅಂತ ಡವ್ ಮಾಡೊನೊ, ಇವನೇ
ಭಾರತ್-೨೦೦೦ ಅನ್ನೋ ಸುಪ್ರಸಿದ್ಧ, ಕಿರುತರೆಯಲ್ಲಿ ಮೊಟ್ಟಮೊದಲ ಬಾರಿಗೆ ಬರೋ ಸೂಪರ್ ಹಿಟ್ ಕನ್ನಡ ಚಿತ್ರ ಮಾಡಿದ್ದ .

Hero - Tamil
Heroien - Telgu ,Tamil
Side Actors :- Telgu and Tamil
Music ;- Telgu

ಇವರನ್ನು ಹಾಕಿಕೊಂಡು ಕನ್ನಡ ಚಿತ್ರ ಮಾಡಿದ್ದ, ಯಾಕೆ ಅಂದರೆ ಈದೇ ಚಿತ್ರ ತೆಲುಗಿ/ತಮಿಲನಲ್ಲಿ ಮಾಡಿದರೆ ಕರ್ನಾಟಕದಲ್ಲಿ ರೀಲಿಸ್ ಮಾಡೊಕ್ಕೆ ಆಗೊಲ್ಲ ಅಂತ ಕನ್ನಡ ಚಿತ್ರ ಅಂತ ಬೂಸಿ ಬಿಟ್ಟ. ಇಲ್ಲಿ ತೆರಿಗೆ ಅದು ಇದು ಅನ್ನೊ ಬೆನಿಫಿಟ್ ಬೇರೆ ಪಡೆದ, ಕನ್ನಡ ಚಿತ್ರಕ್ಕೆ ಒಂದು ಕೆಟ್ಟ
ಪದ್ಧತಿ ಹಾಡಿದ.
ನಟ ಭಯಂಕರ ಸಾಯಿ, ಅರುಲ್ ಪಾಂಡಿಯನ್ ಅನ್ನೊ ಪಕ್ಕದ ರಾಜ್ಯದ ವೇಸ್ಟ್ಗಗಳು ಕೂಡ ಇಲ್ಲಿ
ನಮ್ಮ ಥ್ರಿಲರ್ ಹಾಕಿಕೊಂಡು ಎಷ್ಟು ಚಿತ್ರ ಮಾಡಲಿಲ್ಲ ನೀನೆ ಹೇಳು ಗುರು..

ನಮಗ ಇದು ಬೇಕಾ ??

-ಸುಬ್ಬ

Anonymous ಅಂತಾರೆ...

ಒಂದು ವೇಳೆ ಡಬ್ಭಿಂಗ್ ಇಲ್ಲಿ ಶುರುವಾಯಿತು ಅಂತನೇ ಇಟ್ಟುಕೊಳ್ಳಿ, ಆಗ ಬೆರೆ ಭಾಷೆ ಚಿತ್ರಗಳು ಇಲ್ಲಿ ಬರೋದೆ ಇಲ್ಲ ಅಂತ ಏನು ಗ್ಯಾರಂಟಿ? ಇಲ್ಲಿ ಬೇರೆ ಭಾಷೆ ಜನರಿದ್ದಾರೆ, ಅವರಿಗೆಲ್ಲ ಕನ್ನಡ ಬರಲ್ಲ so ಅವರ ಭಾಷೆಯಲ್ಲು ಚಿತ್ರಗಳು ಇರಲಿ ಎಂದು ನಮ್ಮ ಗಂಗ ಹಾಗು ಗೋವಿಂದ ಅವ್ರು ಹೇಳಿದ್ರೆ ಏನು ಮಾಡ್ತಿರ? ಈಗ ತೆಲುಗಿನಲ್ಲಿ ಎಲ್ಲಾ ಹಿಂದಿ ಚಿತ್ರಗಳು ಏನು ದಬ್ಬ್ ಮಾಡೋಲ್ಲ. So ಹಿಂದಿ ಚಿತ್ರಗಳು ಬೇಜಾನ್ release ಆಗ್ತವೆ ಆಂದ್ರದಲ್ಲಿ. ಪರಭಾಷಾ ಹಾವಳಿಯನ್ನು ಡಬ್ಬಿಂಗ್ ಇಂದ ತಡೆಯಬಹುದು ಎನ್ನುವುದು ಎಷ್ಟು ಸರಿಯೋ ದೇವರಿಗೆ ಗೊತ್ತು.

ಇನ್ನು ತಮಿಳರ ವಿಶಯಕ್ಕೆ ಬಂದರೆ, ಜೋಗಿ ಚಿತ್ರನ ಡಬ್ಬ್ ಮಾಡಿ ತಮ್ಮ ಜನಕ್ಕೆ ತೋರಿಸುವ ಬದಲು ಅದನ್ನು ಧನುಶ್ ಕೈಯಲ್ಲಿ ರಿಮೇಕ್ ಯಾಕೆ ಮಾಡಿಸಿದರು? ಆಪ್ತ ಮಿತ್ರ ಮಲಯಾಳಮ್ ನ ಡಬ್ಬ್ ಮಾಡಿದ್ರೆ ಬಿಳಿ ಸೀರೆ ಉಟ್ಕೊಂಡಿರೋ ಹೆಂಗಸರುನ್ನ ನೋದ್ಬೇಕಿತ್ತು. ಅದು ಅಲ್ಲದೆ ಅವರ ತುಟಿ ಚಾಲನೆಗು ನಮ್ಮ ಕನ್ನಡ dialogue ಗು ಏನು link ಇರೊಲ್ಲ.

ಇದು ನನ್ನ ವೈಯಕ್ತಿಕ ಅಭಿಪ್ರಾಯ. Large scale viewers ಗೆ ಉಪಯುಕ್ತ ಎನಿಸಿದರೆ ಡಭ್ಬಿಂಗ್ ಗೆ permisson ಕೊಡಬಹುದೆನೊ.

Anonymous ಅಂತಾರೆ...

ವಸಂತಣ್ನ, ಶ್ವೇತಕ್ಕ . . . ಒಸಿ ಕೇಳ್ರಲಾ,

ನಿಮ್ ಆತಂಕ್ ಅರ್ಥ ಆಕ್ಕೈತಿ. ನೀವ್ ಹೆದ್ರೂ ಹಾಂಗ ಶುರೂನಾಗ್ ಆಗ್ಲೂ ಬೌದು. ಆದರ ನಮ್ಮ ಮಂದಿ ಶ್ವೇತಕ್ಕ ಹೇಳ್ದ್ ಹಾಗ್ ಬಿಳೀ ಸೀರಿ ಉಡೋ ಮಲಯಾಳಿ ಆಪ್ತಮಿತ್ರನ್ನಾಗ್ಲಿ. ಹುಲಿ ಮೀಸಿ ಬಿಡೋ ಇಜಯ್ ಕಾಂತನ್ನಾಗ್ಲಿ ಭಾಳ ದಿನ ಸಯಿಸ್ಕೊಳಂಗಿಲ್ಲ. 'ಬ್ಯಾರಿ ಭಾಷಿ ಸಿನಿಮಾ ಇಲ್ ಬಂದ್ ಮ್ಯಾಲೂ ಆ ಭಾಷ್ಯಾಗ್ ಮತ್ ಬರಂಗಿಲ್ಲ ಅಂತ್ ಏನ್ ಖಾತ್ರಿ ಐತಿ?' ಅನ್ನೊ ಮಾತ್ ಖರೇನ ಐತೆ. ಆದ್ರ ಸಿನಿಮಾ ತೆಗ್ಯೋ ಮಂದಿ 'ಬಿಸಿನೆಸ್' ನವರ್ ಇರ್ತಾರ. ಅವ್ರುಗ ರೊಕ್ಕ ಬಂತದ್ರ ಆತು. ಆ ಮಂದಿಗ್ ತಮ್ಮ ಸಿನಿಮಾ ಇಲ್ಲಿ ಕನ್ನಡದಾಗ್ ಬಂದ್ರ್ ಮತ್ತೂ ಛಲೋ ರೊಕ್ಕ ಮಾಡ್ತೈತಿ ಅಂದ್ರ ಆತಲ್ಲ. ಹಾಂಗ್ ಬ್ಯಾರಿ ಭಾಷೀನಾಗ್ ಬಂತದ್ರು ನಾವೂ ನೀವೂ ಏನ ಮಾಡಕ್ ಬರಂಗಿಲ್ಲ. ಭಾರತ್ ದೇಶದಾಗ ಯಾವ್ ಭಾಷೀ ಸಿನಿಮಾ ಎಲ್ಲರ ಬಿಡ್ಬೌದು ಅಂತ ಸಂವಿಧಾನ ತೋರುಸ್ತಾರ ಮಂದಿ. ಅದಕ್ಕಾ ನಮ್ ಏಳ್ ವಾರಾ ಕಳುದ್ ಮ್ಯಾಲಾ ನಿಮ್ ಭಾಷೇ ಸಿನಿಮಾ ಬಿಡ್ರಿ ಅನ್ನೋ ಒಪ್ಪಂದಕ್ ಕಿಲುಬ್ ಕಾಸಿನ್ ಬೆಲಿ ಇಲ್ಲಾಗದ. ನಾವ್ ಮಂದಿ ಏನಾರ ಇರೋಧ ಮಾಡುದ್ರ ತುಸ ಗೆಲ್ಲ ಬೌದು ಅಷ್ಟೆ. ನಾವ್ ಮತ್ತೊಂದು ತಿಳ್ಕೋ ಬೇಕ್ರಲಾ. . ಈಗ್ ಡಬ್ಬಿಂಗ್ ಗ ನಾವ್ ಹೂ ಅಂದ್ರ ಕೊನೀ ಪಕ್ಷ ಕನ್ನಡ್ ನಾಡಾಗಿರೋ ಬ್ಯಾರೆ ಭಾಷಿ ಮಾತೋಡೋರ್ ಮುಂದಿನ್ ಜನರೇಷನ್ನವ್ರಾದ್ರೂ ಕನ್ನಡದ್ ಮುಖ್ಯವಾಹಿನಿ ಒಳಗ್ ಬರ್ತಾರಾ, ಹೌದೋ ಅಲ್ಲೋ. ಇದ್ನೇ ತಮಿಳ್ ನಾಡಾಗ್ ಮಾಡಿರೋದು, ಅಲ್ಲಾರ ನಮ್ ಕನ್ನಡ್ ಮಂದಿ ಹ್ಯಾಂಗ್ ಅದಾರ್ ಗೊತ್ತದೇನು? ತಮಿಳ್ ಭಾಷ್ಯಾಗ್ ಸಿನಿಮಾ ನೋಡ್ಕೋತಾ, ನೋಡ್ಕೋತಾ ಕನ್ನಡ್ ಎಷ್ಟ್ ಛಲೋ ಇದ್ರೂ ಸೇರಂಗಿಲ್ಲ ಅಂತಾರ . . . ಹಿಂಗ್ ಮಾಡ್ಕೊಂತಾನಾ ತಮ್ಮ ಬುಡ ಭದ್ರ ಮಾಡ್ಕೊಂಡಾರಾ ಆ ಮಂದಿ. ಈಗ್ ನೀವೇ ನೋಡಲಾ . . ನಮ್ ಮನಿ ಮಕ್ಳು ಕಾರ್ಟೂನ್ ಆಗ್ಲಿ, ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್, ಹ್ಯಾರಿ ಪಾಟರ್ ಥರಾ ಸಿನಿಮಾನಾರ ಆಗ್ಲಿ ನಮ್ ಕನ್ನಡದಾಗಾ ನೋಡುದ್ರೆ ಎಷ್ಟ್ ಛಲೋ ಇರ್ತೈತಿ ಅಂತ. ಈಗ ಡಬ್ಬಿಂಗ್ ಬ್ಯಾಡಾ ಅಂದ್ರ ನಾಳಿಕ್ ಪುಸ್ತಕ ತರ್ಜುಮೆ ಮಾಡೂದು ಬ್ಯಾಡ ಅನ್ಬೌದಲ್ಲೇನು?

ಶರಣು . .

ಚಿತ್ರಗುಪ್ತ

Anonymous ಅಂತಾರೆ...

gurU,
nange buddhi baMtu gurU!!!
dubbing sinimaa bEDa aMta hELouralli naanu obba gurU. aadre Iga annistaa ide dubbing maaDbEku aMta. ondu neenu hELiruva kaaraNa guru. amEle innondu kaaraNa ide. adEnappa aMdre. samaanyavaagi namma jana tamil, telgu arthavaagadiddarU athava ardhambarda arthavaadarU aa bhaasheya sinima nodtaare. poorti artha aagdidru sakhat aagi ide amta hoguLtaare kannada sinimaagaLu chennaagiralla anthaare. adE avarige tamil/telgu/hindi sinimaagaLu kannaDakke anuvaada maaDi torsidre avara banDavaaLa bayalaagatte guru... enantya????

Rohith B R ಅಂತಾರೆ...

ಡಬ್ಬಿಂಗ್ ಮಾಡ್‍ದ್ರೆ ನನ್ ಪ್ರಕಾರ ಇನ್ನೊಂದು ಉಪ್ಯೋಗ ಅಂದ್ರೆ, ಮುಂದಿನ ದಿನಗಳಲ್ಲಿ ಹೊರಭಾಷಾ ಚಿತ್ರಗಳೆಲ್ಲವೂ ನಮ್ಮ ನಾಡೊಳಗೆ ಬರ್ಬೇಕು ಅಂದ್ರೆ ನಮ್ಮ್ ಭಾಷೆಯಾಗೇ ರಿಲೀಸ್ ಆಗ್ಬೇಕು ಅಂತ ನಿರ್ಧಾರ ಆಗತ್ತೆ.. ಈಗ್ ಈಚಿಗೆ spiderman-3 ಅಂತ ಇಂಗ್ಲಿಷ್ ಚಿತ್ರ ಒಂದು ರಿಲೀಸ್ ಆಯ್ತು. ನಮ್ಮ ಇಡೀ ನಾಡಿನಲ್ಲಿ ಅದನ್ನ ಇಂಗ್ಲಿಷಲ್ಲೇ ನೋಡ್‍ದ್ರು ನಮ್ಮ್ ಜನ! ಪುಣ್ಯಾತ್ಮರು.. ಅದೇ ತಮಿಳ್‍ನಾಡಲ್ಲಿ ನೋಡಿ, ಯಾಕೆ ನಮ್ಮ್ ನಾಡಲ್ಲೇ ತಮಿಳು ಚಿತ್ರ ತೋರ್ಸೋ ಚಿತ್ರ-ಮಂದಿರಗಳಲ್ಲಿ ನೋಡಿ, ಈ ಚಿತ್ರ ತಮಿಳಿನಲ್ಲಿ ಡಬ್ ಆಗೇ ತೀರಿದೆ.. ತಮಿಳ್ರು ಎಲ್ಲ್ರೂ spiderman-3 ಚಿತ್ರಾನ ತಮಿಳ್ನಲ್ಲೇ ನೋಡ್‍ದ್ರು. ಇದು ಏನ್ ತೋರ್ಸ್ತು?: ಒಳ್ಳೆ ಚಿತ್ರ ತೆಗ್ದಿದೀರ? ಸರಿ. ಅದನ್ನ ನಾವು ನೋಡ್ಬೇಕ? ಸರಿ. ನೋಡಣ. ಆದ್ರೆ ನಮ್ಮ್ ಭಾಷೇಲಿ ತೋರ್ಸ್ದ್ರೆ ಮಾತ್ರ ನೋಡೋದು.. ಅಂತ ಹೇಳ್ದ್‍ ಹಂಗಾಯ್ತು, ಅಲ್ವೆ? ಈ ರೀತಿಯಾಗಿ ನಮ್ಮ್ ಭಾಷೆಯ ನಿಜವಾದ ಡಿಮಾಂಡ್ ತೋರಿಸಿದ ಹಾಗೆ ಆಯ್ತು..

Rohith B R ಅಂತಾರೆ...

ಒಟ್ಟಿನಲ್ಲಿ ಯಾವ್ದೇ ಚಿತ್ರ ನಮ್ಮ ನಾಡಿನಲ್ಲಿ ರಿಲೀಸ್ ಆಗಿ ಬಂದಾಗ ಅದು ಕನ್ನಡದಲ್ಲಿದ್ದ್ರೆ ಮಾತ್ರ "ನಡಿ"ಯತ್ತೆ, ಇಲ್ದೇಇದ್ರೆ ಫ್ಲಾಪ್ :P ಇದ್ರಿಂದ ಇಲ್ಲಿನ ಜನ ಏನ್ ಮಾಡ್ದ್ರೂ ಕನ್ನಡದಲ್ಲೇ ಮಾಡ್‍ತಾರೆ ಅಂತ ಇತರರಿಗೆ ಮನವರಿಕೆ ಆಗಕ್ಕೆ ಅವ್ಕಾಶ ಮಾಡ್ಕೊಟ್ಟಂಗಾಗತ್ತೆ.. ಕೊನೆಗೆ ಕನ್ನಡ ಚಿತ್ರರಂಗಕ್ಕೇ ಹೆಸರು, ಲಾಭ ಎಲ್ಲ.. ಇದು ಚಿತ್ರನಟ ಅಶೋಕ್ ಮತ್ತು ಅವರ ಹಿಂದೆ ಇರೋ ಜನ ತಿಳ್ಕೊಳ್ಬೇಕು.

Anonymous ಅಂತಾರೆ...

ಶರಣು ಗುರುಗಳೇ,,
ಇಲ್ಲಿ ನಡದಿರು ಚರ್ಚಾ ನೋಡಿದ ಮ್ಯಾಲ ನೀವು ಹೇಳು ಮಾತ್ನಾಗ್ ಧಮ್ ಐತಿ ಅಂತ ನನಗ ಅನಸೆತಿ. ನಮ್ಮ ಚಿತ್ರರಂಗದ ಮಂದಿ ಲಬ ಲಬ ಹೊಯ್ಕೊಳ್ಳುದ ತಮಗ ಇನ್ನ ಮ್ಯಾಲೆ ರೀಮೇಕ್ ಮಾಡಾಕ್ ಆಗುದಿಲ್ಲ ಅನ್ನು ಕಾರಣಕ್ಕ ಅನಸತೆತಿ. ಅವರೌರ್, ಇ ಮಂಗ್ಯಾನ್ ಮಕ್ಕಳು ಚಲೋ ಚಲೋ ಪಿಚ್ಚರ ಮಾಡಿದ್ರ ಮಂದಿ ಯಾಕ್ ನೋಡುದಿಲ್ಲ.. ನೋಡೆ ನೋಡತಾರ್.. ಹಿಂದ ಬೆಂಕಿ ಹತ್ತಿದ ಮೇಲೆ ಇವರೆಲ್ಲ ಸುಧಾರಸತಾರ್ ರೀ ಗುರುಗಳೇ... ಹಿಂಗಾ.. ಬರೀರಿ....

Anonymous ಅಂತಾರೆ...

ಗುರುಗಳೇ, ಅಗದಿ ನನ್ನ ಬಾಯನ್ ಮಾತ್ ಹೇಳಿದ್ರಿ. ಇದರ ಬಗ್ಗೆ ಬಾಳಾ ದಿವಸದಿಂದ್ ನಾ ಸಿಕ್ಕ ಸಿಕ್ಕ ಕಡೆ ಬರಿತಾನ ಅದೀನಿ. sampada.net ನಲ್ಲಿ ಇದರ ಬಗ್ಗೆ ತುಂಬಾ ಸಲ ಬರೆದಿದ್ದೀನಿ. ನನ್ನ ಬ್ಲಾಗಿನಲ್ಲೂ ಬರೆದಿದ್ದೀನಿ(ಒಬ್ಬ ಕನ್ನಡಿಗ).

ಬಹುಶ ನಾವು ಕನ್ನಡಿಗರೇ ಸೇರಿಕೊಂಡು ಈ ಕನ್ನಡ ಸಿನಿಮಾದವರಿಗೆ ಒದ್ದು ಬುದ್ದಿ ಕಲಿಸುವವರೆಗೂ ಅವರು ಎಚ್ಚೆತ್ತುಕೊಳ್ಳಲ್ಲಾ. ತೀಟೆಸುಬ್ಬ, ಏನ್ ಸಕ್ಕತ್ತಾಗಿ ಹೇಳಿದಿರಾ ಗುರು, ಚಿತ್ರಗುಪ್ತ ಹೇಳೂದು ನೂರಕ್ಕೆ ನೂರು ಸರಿ ಇದೆ. ನಮ್ ಉತ್ತರ ಕರ್ನಾಟಕದ ಕಡೆ ತೆಲುಗು ಸಿನಿಮಾಗಳು ಹೆಂಗ್ ಬರ್ತಾ ಇದಾವೆ ಅಂದ್ರೆ ಗಾಬರಿ ಆಗ್ಬೇಕು ಆ ಲೆವೆಲ್ಲಿಗೆ ಬರ್ತಾ ಅದಾವು.

ಅಲ್ಲಾ ಹೊರಗಿಂದ ಬಂದವರಿಗೆ ಅವರ ಭಾಸೆಲೇ ಸಿನಿಮಾಗಳು ಈ ಲೆವೆಲ್ಲಿಗೆ ಸಿಗಬೇಕಾದ್ರೆ ಅವರ್‍ಯಾಕೆ ಕನ್ನಡ ಸಿನಿಮಾ ನೋಡ್ತಾರೆ ಹೇಳಿ. ಸ್ವೆತಾ ಅವರು ಕೇಳೋದು ಡಬ್ಬಿಂಗ್ನೂ ಬಿಟ್ಟು, ಅವರ ಬಾಸೆಲೂ ಬಿಟ್ರೆ ಏನ್ ಮಾಡೋದು ಅಂತಾ. ಅವರು ಕೇಳೋದು ಸರಿ ಐತಿ, ಅದಕ್ಕೆ ಚಿತ್ರಗುಪ್ತರ ಉತ್ತರ ಸರಿನೇ ಐತಿ. ಬೇರೆ ಭಾಸೆ ಮಾತಾಡೋ ಕನ್ನಡ ನಾಡಿನಲ್ಲಿರುವವರು ಕನ್ನಡ ಮುಕ್ಯವಾಹಿನಿಗೆ ಸೇರ್ಕೋತಾರೆ, ತುಸು ವಿಚಾರ ಮಾಡ್ರಲಾ ಸ್ವೇತಾ ಅವರೇ.

ಕರ್ನಾಟಕದ ಗಡಿ ಭಾಗಗಳಲ್ಲಿ ಅಲ್ಲಿ ಜನ ಕನ್ನಡ ಸಿನಿಮಾ ಅಂದ್ರ ಮೂಗ್ ಮುರಿತಾರ. ಮೊದಲ್ ಅವರಿಗೆ ಕನ್ನಡದಾಗ ಸಿನಿಮಾ ನೋಡೊದನ್ನ್ ರೂಡಿ ಮಾಡಬೇಕಾಗುತ್ತೆ. ಮುಂದ್ ಹೊದಂಗ್ ಅವರೂ ನಮ್ ಓರಿಜಿನಲ್ ಕನ್ನಡ ಸಿನಿಮಾಗಳನ್ನು ಇಸ್ಟಪಡಾಕ್ ಸುರು ಮಾಡ್ತಾರ. ಈ ಡಬ್ಬಿಂಗ್ ಮಾಡಾಕ್ ಬಿಡದೇ ಇರೋದರಿಂದ ಕನ್ನಡಾಕ ಕುತ್ತು ಬಂದಿದೆ, ಈ ಕೊಂಡಿ ನೋಡ್ರಿ.

ಕೆಲವರು ನಾವು ಕನ್ನಡದಲ್ಲಿ ಬರೋ ಸಿನಿಮಾ ಅಸ್ಟೇ ನೋಡ್ತಿವಿ ಅನ್ನುವವರು ಬೇರೆಯವರ ಬಗ್ಗೆ ವಿಚಾರ ಮಾಡ್ಬೇಕು. ಕಪ್ಪೆ ಬಾವಿ ಅನಿಸ್ಕೋಬೇಕಾಗ್ತೈತಿ. ಅದರಿಂದ ನಮ್ಮ ತಿಳಿ ಒಂದ್ ಲಿಮಿಟ್ ಒಳಗ ಉಳದ ಬಿಡ್ತೈತಿ. ನಮಗೆ ಎಲ್ಲಾ ತಿಳಿವು ಬೇಕು ಮತ್ತು ಅದು ಕನ್ನಡದಲ್ಲಿಯೇ ಆಗಿರಬೇಕು ಅನ್ನುವ ಧೋರಣೆಯಿಂದ ಅಸ್ಟೇ ಕನ್ನಡ ಉಳಿದು ಬೆಳೆಯಲು ಸಾದ್ಯ.

ಆಪ್ತಮಿತ್ರ ಬಿಳಿ ಸೀರೆ ಬಗ್ಗೆ, ಅದರಿಂದ ನಮಗೆ ಮಲಯಾಳಿಗಳ ಕಲ್ಚರ್ ಗೊತ್ತಾಗುತ್ತಲ್ಲಾ, ಅದು ನಮ್ಮ ಕನ್ನಡದ ಮೂಲಕವೇ ಅಂದಾಗ ಅದಕ್ಕಿಂತ ಒಳ್ಳೆಯದೇನಿದೆ. ನಮ್ಮಲ್ಲಿ ತಯಾರಾಗುವ ಸಿನಿಮಾಗಳಲ್ಲಿ ನಮ್ಮದೇ ಕಲ್ಚರ್ ಎಸ್ಟರ ಮಟ್ಟಿಗಿದೆ?

ಒಟ್ಟಿನಲ್ಲಿ ಎಸ್ಟು ತರದಲ್ಲಿ ಅಳೆದು ಸುರಿದು ನೋಡಿದ್ರೂ ಡಬ್ಬಿಂಗ್ ನಮಗೆ ಬೇಕು ಅನ್ನುವದೇ ಸರಿ, ಗುರುಗಳೇ ಮತ್ತು ತೀಟೇಸುಬ್ಬ, ತುಂಬಾ ನನ್ನಿ ನಿಮಗೆ.

ಇದರ ಬಗ್ಗೆ ಆದಸ್ಟು ಬೇಗ ಒಂದು ತೀರ್ಮಾನವಾಗಿ ಡಬ್ಬಿಂಗ್ ಕನ್ನಡಕ್ಕೇ ಬೇಕೇ ಬೇಕು ಅಂತಾ ಆಗಬೇಕೆಂದು ನನ್ನ ಕೋರಿಕೆ.

Anonymous ಅಂತಾರೆ...

ide vishayada bagge nanna post.

Anonymous ಅಂತಾರೆ...

ಗಾಂಧಿ ನಗರದವರಿಗೆ ಮೊದಲು ಒದ್ದು ಬುದ್ದಿ ಕಲಿಸಬೇಕು. ರಾಜ್ಯದ ಎಲ್ಲಾ ಭಾಗದ ಜನರಿಗೆ ಹಿಡಿಸುವ ಚಿತ್ರಗಳನ್ನ ಮೊದಲು ತಯಾರಿಸಲಿ. ಇವತ್ತಿಗೂ ಈ ಜನ ತಗೆಯೋ ಚಿತ್ರಗಳು ಬೆಂಗಳೂರು-ಮೈಸೂರಿನ ಜನರಿಗೆ ಮಾತ್ರವೇನೋ ಅನ್ನುವಂತೆ ಇರುತ್ತವೆ. ಜೊತೆಗೆ ಹಳಸಿದ ಕಥೆ, ಸಂಭಾಷಣೆ, ಮಚ್ಚು,ಲಾಂಗೂ...ಛೀ. ಈ ವರ್ಷ ಕೆಲ ಒಳ್ಳೆ trend ಗಳು ಶುರುವಾಗಿದ್ದು ಒಳ್ಲೆಯದು. ರಾಜ್ಯದ ಐದೂವರೆ ಕೋಟಿ ಜನರಿಗೆ ಮೆಚ್ಚುಗೆಯಾಗುವ ಚಿತ್ರಗಳು ಮೊದಲು ಬರಲಿ.

Anonymous ಅಂತಾರೆ...

English Bhasheya ellaa chitragalannu modalu dub maadali. Idu sarkarakke, mattu film industry ge modalane hejje.

Janarige bhashe mukhya alla, entertainment mukhya. Aa entertainment kannadadalli sigbeku.

Karnataka dalli yavude chitra, yavude theatre nalli release agbekaadru kannadadalle aagbeku anta gottaadre, kannada chitragalu international level nalli compete madakke siddavagutte.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails