ಸುಳ್ಳು + ಸುಳ್ಳು = ನಿಜ ಅಲ್ಲ !!

ಕಾರವಾರದ ಮೂರ್ ತಾಲೂಕುಗಳನ್ನು ಗೋವಾಕ್ ಸೇರುಸ್ ಬಿಡ್ಬೇಕು ಅಂತ ಚಳುವಳಿಗೆ ಶುರು ಹಚ್ಕೊಂಡೀರೋ ಕೆಲ ಸಂಘಟನೆಗಳ ಪರವಾಗಿ ಗೋವಾದ ನವ್ ಹಿಂದ್ ಟೈಮ್ಸ್ ಹೇಳತ್ತೆ -
The Goans, who support the border merger movement, have also decried the hegemony of the Karnataka government for imposing the Dravidian culture, especially its Kannada language and its “strange script” on the majority of the Konkani speaking people.

ಅಂದ್ರೆ ಕೊಂಕಣಿ ಜನರು ಆರ್ಯರು, ಇವರ ಮೇಲೆ ಕನ್ನಡಿಗರ ವಿಚಿತ್ರ ಲಿಪಿ ಮತ್ತು ದ್ರಾವಿಡ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಅನ್ನೋ ಮಾತುಗಳು. ಇತಿಹಾಸಾನ ತಮ್ ಅನುಕೂಲಕ್ ತಿರುಚೋದು ಅಂದ್ರೆ ಇದೇ ಅಲ್ವಾ ಗುರೂ . . ಹಾಗ್ ಇತಿಹಾಸ ಕೆದುಕ್ ನೋಡೋದಾದ್ರೆ ಇಡೀ ಗೋವಾನೆ ನಮಗ್ ಕೊಡ್ಬೇಕಾಗುತ್ತೆ. ಇದಕ್ಕೆ ನಾವು ಕೊಂಕಣಿ ಭಾಷಿಕರ ಮೂಲ ನೋಡ್ಬೇಕು, ಗೋವಾದ ಮೂಲ ನಿವಾಸಿಗಳು ಯಾರು ಅನ್ನೋದ್ನ ನೋಡ್ಬೇಕು.
Origins : The Konkanis are Indo-Aryans who first settled in the Saraswati River basin between the Indus river system and the Gangetic river system. When the river started drying, up they migrated to various places, some to Kashmir, Rajasthan etc. Some came to settle in the region known as Konkan (which at that time referred to the entire western coast of India), particularly in and around Goa.
ಗೌಡರು (ಹಾಲಕ್ಕಿ) ಅಲ್ಲಿನ ಮೂಲ ಜನಾಂಗ. ಅವರನ್ನು ಒಕ್ಕಲೆಬ್ಬಿಸಿ ಈಗ ಅಲ್ಪಸಂಖ್ಯಾತರನ್ನಾಗಿ ಮಾಡಿರೋದು . . . ಸರಸ್ವತಿ ನದಿ ದಡದ ವಾಸಿಗಳಾಗಿದ್ದು ವಲಸೆ ಬಂದಿರುವ ಕೊಂಕಣಿ ಜನ.
Its original inhabitants were native Dravidians who where gradually conquered and outnumbered by the Aryans, who ambitiously advanced into the south around 1500 BC.
ಗೋವಾನ ಕದಂಬರು ಆಳಿದ್ದು, ವಿಜಯನಗರದವರು, ಬಿಜಾಪುರದವರು ಆಳ್ತಿದ್ರು ಅನ್ನೋದ್ನ ಮರ್ಯಕ್ ಆಗುತ್ತಾ ಗುರು? ಭಾರತ ದೇಶ ಅಂತ ಆಗೋವಾಗ, ತುಂಬಾ ಹಟ ಮಾಡ್ದೆ ಎಲ್ರ ಜೊತೆ ಹೊಂದ್ಕೊಂಡು ಬಾಳೋಣ, ನಮ್ಮದು ಸ್ವಲ್ಪ ಹೋದ್ರೂ ಪರ್ವಾಗಿಲ್ಲ (ಹೋಗಿದ್ದು ತುಂಬಾನೆ ಬಿಡಿ) ಅನ್ನೋ ದೊಡ್ಡ ಗುಣ ಕನ್ನಡದೋರು ತೋರುಸ್ದ್ರೂ ಅಕ್ಕ ಪಕ್ಕದೋರು ತೋರುಸ್ದೆ ಸುಮ್ನೆ ಕಿರಿಕ್ ಮಾಡ್ತಾನೆ ಬಂದಿದ್ದಕ್ಕೇ ಕೊನೇ ಪರಿಹಾರವಾಗಿ ಮಹಾಜನ್ ಆಯೋಗ ಬಂದಿದ್ದಲ್ವಾ?

ಈಗ ತಮಗೆ ಅನುಕೂಲ ಆಗಲ್ಲ ಅಂತ ಅದನ್ನ ತಿರಸ್ಕಾರ ಮಾಡ್ತಿರೋ ಮಹಾರಾಷ್ಟ್ರ, ಕೇರಳಗಳ ನಡವಳಿಕೆ... ಈಗ ಕೊಂಕಣಿ ಜನರನ್ನು ಎತ್ತಿಕಟ್ಟಿ ಕಾರವಾರ ಕಬಳ್ಸಕ್ ಹೊರ್ಟಿರೋ ಗೋವಾದ ನಡವಳಿಕೆ ಒಕ್ಕೂಟಕ್ಕೆ ತೋರ್ಸೋ ಅಗೌರವ ಅಲ್ವಾ ಗುರು?

ಸುಮ್ನೆ ಇಲ್ಲದ ಕಿತಾಪತಿ ಮಾಡೋ ಬದ್ಲು, ಇರೋ ವಾಸ್ತವ ತಿಳ್ಕೊಂಡು, ನಾಡು ಒಡೆಯೋ ಕೆಲ್ಸ ಕೈ ಬಿಟ್ಟು ನೆಮ್ಮದಿಯ ಸಹಬಾಳ್ವೆ ನಡೆಸೋದು ಒಳ್ಳೇದು ಮತ್ತು ಅದೇ ಮುಖ್ಯ ಅಲ್ವಾ ಗುರು!

5 ಅನಿಸಿಕೆಗಳು:

Anonymous ಅಂತಾರೆ...

ಕೊಂಕಣಿಗರು ಮತ್ತು ಕನ್ನಡಿಗರು ನೂರಾರು ವರ್ಷಗಳಿಂದ ಸಾಮರಸ್ಯದಿಂದ ಬದುಕಿದ್ದಾರೆ. ಪೋರ್ಚುಗೀಸರ ಮತ್ತು ಮರಾಠರ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳಲು ಗೋವಾದಿಂದ ಹೊರಬಂದ ಕೊಂಕಣಿಗರಿಗೆ ನಮ್ಮ ಕರಾವಳಿ ಪ್ರದೇಶ ನೆಲೆ ನೀಡಿದೆ. ಕಳೆದ ಕೆಲ ವರ್ಷಗಳಿಂದ ಬಡತನ ಮತ್ತು ಬರಗಾಲದಿಂದ ತಪ್ಪಿಸಿಕೊಳ್ಳಲು ಲಕ್ಷಾಂತರ ಕನ್ನಡಿಗರೂ ಗೋವಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ ಕನ್ನಡಿಗರ ಪ್ರಮಾಣ ಗೋವಾದಲ್ಲಿ ಶೇ. ೩೦.

ನಮ್ಮ ನುಡಿ, ಸಂಸ್ಕೃತಿ, ಸಾಹಿತ್ಯ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಕೊಂಕಣಿಗರ ಕಾಣಿಕೆ ಅಗಾಧವಾದದ್ದು.

ನಮ್ಮ ನಡುವೆ ವಿಷಬೀಜ ಬಿತ್ತಲು ಹೊರಟಿರುವ ಈ ಸಂಘಟನೆಗಳಿಗೆ ಧಿಕ್ಕಾರ.

Anonymous ಅಂತಾರೆ...

ಎಲ್ಲಾ ಕಡೆ ಇಂದನು ನಮ್ಮ ನಾಡನ್ನ ಹುರಿದು ಮುಕ್ಕೋ ಜನ ಇದಾರೆ ಅನ್ನೊದು ಎಷ್ಟು ಭಯ ತರಿಸುತ್ತೆ ನೋಡಿ. ಈ ಕಡೆ ಕೇರಳ, ಆ ಕಡೆ ಮಹರಾಷ್ಟ್ರ, ಈಗ ಗೋವ. ನಮ್ಮ ಸಹನೆಯನ್ನ ಇವರು ಕೈಲಾಗದವರು ಅಂದುಕೊಂಡಂತಿದೆ. ನಮ್ಮ ತಂಟೆಗೆ ಬಂದರೆ ತೋರ್ಸೋಣ ಬಿಡಿ. ಕಾರವಾರದ ಜನರು ಯಾವಾಗಲು ನಮ್ಮೋಟ್ಟಿಗೆ ಇದ್ದಾರೆ. ನಮ್ಮ ಸರ್ಕಾರದವರು ಕೊಂಕಣಿಯನ್ನು ಸಹ ಶಾಲೆಗಳಲ್ಲಿ ಕಲಿಸುತ್ತಿದ್ದಾರೆ. ಅದನ್ನು ಕನ್ನಡವಲ್ಲದೆ ದೇವನಾಗರಿ ಲಿಪಿಯಲ್ಲಿ ಕಲಿಸಲು ಸಹ ಮುಂದಾಗಿದ್ದಾರೆ. ಇನ್ನು ಏನಂತೆ ಇವರಿಗೆ.

http://thatskannada.oneindia.in/news/2007/02/01/canara_kannada.html

http://thatskannada.oneindia.in/news/2007/07/16/konkani-textbook-devanagari-script.html

Anonymous ಅಂತಾರೆ...

ನಮಸ್ಕಾರ ಗುರುಗಳೇ,,
ನಾನು ಕಾರವಾರದ ಒಬ್ಬ ಸ್ನೇಹಿತನ ಕೂಡ ಈಗಷ್ಟ ಮಾತಾಡಿದೆ. ಅವನ ಮಾತ್ರಭಾಷಾನು ಕೊಂಕಣಿ. ಅವನು ಹೇಳೊದು ಎನಂದ್ರ,, ಇದೆಲ್ಲ ಕಿತಾಪತಿ ಶುರು ಆಗುದು ಕಾಳಿ ನದಿ ದಾಟಿ ಇನ್ನೆನ್ ಗೋವಾ ಬಂತು ಅನ್ನು ಮುಂದ. ಕಾಳಿ ನದಿ ದಾಟಿದ ಮ್ಯಾಲ ಗೋವಾ ಬಾಳ ಸಮೀಪ.. ಹಿಂಗಾಗಿ ಅಲ್ಲಿರು ಕೊಂಕಣಿ ಮಂದಿ ಎಲ್ಲ ವ್ಯವಹಾರಕ್ಕೂ ಗೋವಾಕ್ಕ ಹೋಗತಾರ್.. ಆದ್ರ ಕಾರವಾರ ಆಗಲಿ, ಅಂಕೋಲಾದಾಗ್ ಆಗಲಿ,, ಇ ಮಂಗ್ಯಾನ್ ಮಕ್ಕಳಿಗ ಯಾವ supportu ಇಲ್ಲ. ಒಂದ ನಾಕ ಮಂದಿ ಬಾಯಿ ಬಡಕೊಂಡ್ರ ಚಿಂತಿ ಮಾಡುಡ ಬ್ಯಾಡರಿ ಗುರುಗಳೇ..

Anonymous ಅಂತಾರೆ...

ಕರ್ನಾಟಕದ ಅವಿಭಾಜ್ಯ ಅಂಗಗಳಾದ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಜೋಯಿಡಾ ಹಾಗೂ ಹಳಿಯಾಳ ತಾಲ್ಲೂಕುಗಳನ್ನು ಗೋವಾ ರಾಜ್ಯಕ್ಕೆ ಸೇರಿಸುವಂತೆ ಗೋವೆಯ ಪರವಾದ ಗೋವ ರಾಜ್ಯ ಏಕೀಕರಣ ಮಂಚ್ ಸರ್ವೋಚ್ಚ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿದ್ದನ್ನು ಪತ್ರಿಕೆಗಳಲ್ಲಿ ಓದಿದಾಗ ಇವರ ದೂರ್ತತನಕ್ಕೆ ಏನ್ನೆನಬೇಕೋ ತಿಳಿಯುತಿಲ್ಲ.

ಕಾರವಾರ, ಜೋಯಿಡಾ ತಾಲ್ಲೂಕಿನಲ್ಲಿ ಪ್ರತಿಶತ ೬೦ ರಷ್ಟು ಕೊಂಕಣಿ ಭಾಷಿಕರಿದ್ದರೂ, ಅವರೆಲ್ಲರೂ ಕರ್ನಾಟಕವನ್ನೇ ತಮ್ಮ ಮನೆ ಎಂದು ಒಪ್ಪಿಕೊಂಡು ಕನ್ನಡಿಗರಾಗಿ ಬಾಳುತ್ತಿದ್ದಾರೆ.ಇನ್ನೂ ಹಳಿಯಾಳ ತಾಲ್ಲೂಕಿನಲ್ಲಿ ಕನ್ನಡಿಗರೇ ಬಹು ಸಂಖ್ಯಾತರು. ಅಲ್ಲಿನ ಮೂಲ ನಿವಾಸಿಗಳಾದ ಗೌಳಿಗಳು, ಹಾಲಕ್ಕಿ ಒಕ್ಕಲಿಗರು, ಕುಣಮಿಗಳು ತಮ್ಮ ಮಾತ್ರಭಾಷೆ ಕೊಂಕಣಿ ಆಗಿದ್ದರೂ ಕನ್ನಡವನ್ನಾಗಲಿ, ಕರ್ನಾಟಕವನ್ನಾಗಲಿ ತಿರಸ್ಕರಿಸಿ ಮಾತನಾಡಿಲ್ಲ. ಒಮ್ಮಿಂದೊಮ್ಮೆಲೆ, ಈ ರೀತಿ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸುವುದರ ಹಿಂದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ. ವಿಜಯ ಕರ್ನಾಟಕ ದ ವರದಿಯ ಅನುಸಾರ, ಗೋವಾ ರಾಜ್ಯಕ್ಕೆ ಹೊಂದಿಕೊಂಡಿರುವ ಜಮೀನು ಖರೀದಿ ಮಾಡಿರುವ ಕೆಲವರು ತಮ್ಮ ಭೂದರ ಹೆಚ್ಚಳ ಮಾಡಲು ಈ ರೀತಿ ನಾಟಕ ಮಾಡುತ್ತಿದ್ದಾರೆ. ಕೊಂಕಣಿ ಭಾಷಾವಾರು ಪ್ರಾಂತ್ಯಕ್ಕೆ ಒತ್ತಾಯಿಸುವವರು ಮೊದಲು ಕೊಂಕಣಿಗೊಂದು ಲಿಪಿ ಬರೆಯಲು ಮುಂದಾಗಲಿ.

ಆದರೆ, ಇ ಎಲ್ಲ ಅಪಸ್ವರಗಳು ಶಾಶ್ವತವಾಗಿ ಕೊನೆಗೊಳ್ಳಲು ರಾಜ್ಯ ಸರಕಾರ ಮಾಡಬೇಕಾದ ಒಂದಿಷ್ಟು ಕೆಲಸಗಳಿವೆ. ಮೊದಲನೆಯದಾಗಿ, ಗೋವೆಯ ಪಕ್ಕದಲ್ಲೇ ಇದ್ದು, ಗೋವೆಗಿಂತಲೂ ಸುಂದರ ತಾಣಗಳನ್ನೊಳಗೊಂಡ ಕಾರವಾರ ಮತ್ತು ಸುತ್ತ ಮುತ್ತಲ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವ್ರುದ್ದಿಯನ್ನು ಸಮರೋಪಾದಿಯಲ್ಲಿ ಕೈಗೊಂಡು ಜಿಲ್ಲೆಯ ಜನರಿಗೆ ಉದ್ಯೋಗವಕಾಶ ಹೆಚ್ಚಿಸಬೇಕು. ಎರಡನೆಯದಾಗಿ, ನೂರೆಂಟು ಯೋಜನೆಗಳಿಗೆ ತನ್ನ ನೆಲ-ಜಲ ಬಿಟ್ಟು ಕೊಟ್ಟು ರಾಜ್ಯದ ಪ್ರಗತಿಗೆ ಕೊಡುಗೆ ನೀಡಿರುವ ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವ್ರುದ್ದಿ ಗೆ ಸರಕಾರ ಒತ್ತು ನೀಡಬೇಕು.

ಅಂತಿಮವಾಗಿ, ಭಾಷೆಯ ಆಧಾರದ ಮೇಲೆ ಇವತ್ತು ಕಾರವಾರ-ಜೋಯಿಡಾ ಕೇಳುವವರು, ನಾಳೆ ಮಂಗಳೂರಲ್ಲೂ ಕೊಂಕಣಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂದೂ, ಗೋವೆಗೆ ಅದನ್ನು ಸೇರಿಸಿ ಎಂದೂ ಕೇಳಲ್ಲ ಅಂತಾ ಏನಿದೆ ಖಾತ್ರಿ?? ನಾಡ ಪ್ರೇಮಿ ಕನ್ನಡಿಗರೆಲ್ಲ ಗೋವ ರಾಜ್ಯ ಏಕೀಕರಣ ಮಂಚ್ದ ಇ ಧೋರಣೆಯನ್ನು ಖಂಡಿಸಿ ನಮ್ಮ ನೆಲದ ಡೊಂಗಿ ರಾಜಕಾರಣಿಗಳನ್ನು ಎಚ್ಚರಿಸಬೇಕು.

ಜೈ ಕರ್ನಾಟಕ.

prasadh ಅಂತಾರೆ...

ನಂಗೊಂದು ಸಂಶಯ... ಆರ್ಯನ್ ಥಿಯರಿ ಸುಳ್ಳು ಅಂದ್ಮೇಲೆ ಅದರ ಉಲ್ಲೇಖ ಯಾಕೆ ಮಾಡಿದೀರಾ?? ಅದನ್ನು ತೆಗೆದು ಸಹ ಗೋವಾ ಪ್ರದೇಶವು ಸಹ ಕನ್ನಡ ರಾಜರ ಆಳ್ವಿಕೆಯಲ್ಲಿತ್ತು ಅಂತ ಪ್ರೂವ್ ಮಾಡಬಹುದಲ್ವ??

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails