ಬಿಸಿ ಸುದ್ದಿ: ಹುಬ್ಬಳ್ಳಿಯಲ್ಲಿ ಕೆಲಸ ಖಾಲಿ ಇದೆ. ಆದರೆ ಕನ್ನಡಿಗರು ದೂರ ಇರಿ!

ರೈಲ್ವೆ ಇಲಖೆಯೋರು ಕನ್ನಡಿಗರ್ನ ಕಡೆಗಣಿಸ್ತಾ ಇರೋದನ್ನ ಬನವಾಸಿ ಬಳಗ ಇದೇ ಬ್ಲಾಗಿನಲ್ಲಿ ಸಾಕಷ್ಟು ತೋರಿಸಿಕೊಟ್ಟಿದೆ. ಆದ್ರೆ ಇದು ಮಾತ್ರ ಅದ್ನೆಲ್ಲ ಮೀರ್ಸತ್ತೆ ಗುರು:

ಹುಬ್ಬಳ್ಳಿಯಲ್ಲಿ ರೈಲ್ವೇ ಇಲಾಖೆಯೋರು ಗ್ರೂಪ್-ಡಿ ಕೆಲಸಗಳಿಗೆ ಅರ್ಜಿಗಳನ್ನ ಕರೆದಿರೋದು ಹೀಗೆ:
Candidate should carefully read the instructions in this Employment Notice before filling up the application form. Application (including Personal Data Sheet) should be made on a good quality white paper of A4 size (210mm x 297mm) using ONE SIDE ONLY. The candidate should use the FORMAT published in the Employment Notice. The candidates have to fill up required information with Black Ink Pen/Black Ball Point pen in his/her own handwriting. The application should be written only in English or Hindi and not in any other language. The application has to be duly dated and signed by the candidate. Application filled in any language other than Hindi/English, and by any person other than the applicant, and having any change in the format will be rejected summarily.

ಇವರು ಯಾವ ವಯಸ್ಸಿನ ಜನರನ್ನ ಕರೆದಿರ್ತಾರೋ ಆ ಕನ್ನಡಿಗರಿಗೆ ಇಂಗ್ಲೀಷಾಗಲಿ ಹಿಂದಿಯಾಗಲಿ ಬರೋದೇ ಇಲ್ಲ. ಒಟ್ನಲ್ಲಿ ಕರ್ದಂಗ್ ಮಾಡಿ ಮೊದಲ್ನೇ ಹೆಜ್ಜೆಯಿಂದಾನೇ ಕನ್ನಡಿಗರನ್ನ ದೂರ ಇಡೋ ಹುನ್ನಾರವಲ್ದೆ ಇದು ಇನ್ನೇನು ಗುರು?

ಕನ್ನಡಿಗರಿಗೆ ಕಳೆದ ತಿಂಗಳಲ್ಲೇ ರೈಲ್ವೆ ಇಲಾಖೆಯೋರು ಮಾಡಿರೋ ಮೋಸಗಳಿಗೆ ಓದಿ:
ಹಳಿ ತಪ್ಪಿದ ರೈಲು: ಬೆಂಗಳೂರಲ್ಲಿ ಟಿಕೆಟ್ ಕಾದಿರಿಸೋ ಅರ್ಜಿ ತಮಿಳಲ್ಲಿ!, ಭವ್ಯಕರ್ನಾಟಕದ ಕನಸಿಗೆ ಹುಬ್ಬಳ್ಳಿಯಲ್ಲಿ ತಮಿಳ್ ಹುಳಿ?

8 ಅನಿಸಿಕೆಗಳು:

Anonymous ಅಂತಾರೆ...

ivattu pradhani Manmohan Singh bandiddare bangalore ge..Congressigarige bhaashana Maadiddare..aa vayya yeneno adhikaara, hastaantara anta yeneno maatadidnante..adre alli kuntidda namma congressigaru kanaaDa shaastreeya bhaashe sthaana maana yenaaytu anta aa vayyange yaako keLale ilvante noDi. adakke heegide nam kannaDa desa....gottaytu bidri ee raastriya paksa gaLinda yenu kisiyakkaagakkilla anta..

Rohith B R ಅಂತಾರೆ...

ಅಯ್ಯೋ ಬಿಡ್ರಿ ಈ ಕಾಂಗ್ರೆಸ್ಸಿನವರ ಮಾತಾ.. ಹೆಂಡ ಕುಡಿಯೋ ದೇವ್ರಿಗೆ ಹೇಲ್ ತಿನ್ನೋ ಪೂಜಾರಿ.. ಸ್ವಾಭಿಮಾನ ಇರೋ ಕನ್ನಡಿಗರೇ ಹೆಚ್ಚು ಆಗುವ ತನಕ ನಮ್ಮನ್ನು ಆಳುವವರು ಇಂತಹ ಹೇಲ್ ತಿನ್ನೋ "ಕಾಂಗ್ರೆಸ್ಸಿನವರು" ಪೂಜಾರಿಗಳೇ ಹೆಚ್ಚಿರ್ತಾರೆ..

Anivaarya ಅಂತಾರೆ...

ಇದೆಂತಾ ಅನ್ಯಾಯ, ಏನ್ ಹುಚ್ಚುತನ ಗುರು!! ಮತ್ತೊಮ್ಮೆ, ಬರೀ ಈ ರೈಲ್ವೇ ಅವ್ರ್ನ ಬೈದ್ರೆ ಸಾಲ್ದು ಗುರು, ಈ ನಮ್ ನಾಲಾಯಕ್ ಸರ್ಕಾರದ ಕಿವಿಗೆ, ಕಣ್ಣಿಗೆ, ತಲೆಗೆ, ಮೆದುಲಿಗೆ ತುಂಬ ಬೇಕು. ಪ್ರೈವೇಟ್ ಕಂಪನಿಗಳಲ್ಲಿ ಮಿಸಿಲಾತು ಬೇಕು ಅಂತ ಮಂಗಗಳ್ ತರ ಕುಣ್ದಾಡ್ತಾರೆ, ಆದ್ರೆ ಇಲ್ಲಿ ತಮ್ಮ ಕೈಯಲ್ಲಿರೋ ಕಂಟ್ರೋಲ್ ಯಾರ್ಗೋ ಕೊಡ್ತಾರೆ! ಅರ್ಥವೇ ಆಗಲ್ಲ. ಅಸ್ಸಂಬದ್ಧ ರೀತಿ ಗುರು, ಪ್ರತಿಭಟಿಸಲೇ ಬೇಕು.

Anonymous ಅಂತಾರೆ...

ಇನ್ನೂ ನಾವು ಈ ದೇಶದಲ್ಲೇ ಇರಬೇಕಾ?

ಚಂದ್ರು

Anonymous ಅಂತಾರೆ...

idu yaako ati aaytu. E railway awrige hiMdi English kaddaya madokke bidodu; amele praathamika shikshana kannadadalle irbeku anta koogu hakOdu idE agOytu namma raajya sarkaarada haNe baraha.

IT/BT gaLu enadru haaLagli; iMtha basic sarkaarI job gaLe english/hindi kaddaya madibitre namma kannada maadhyamadalli Odiruwawara gati EnaagbEDa?

Anonymous ಅಂತಾರೆ...

ಯಾರಾದ್ರು ರೈಲ್ವೆ ಇಲಾಖೆಯ ಮೇಲೆ PIL ಕೇಸು ದಾಖಲಿಸಬೇಕು. ಬೀದಿ ಹೋರಾಟ ಒಳ್ಳೆಯದು ಆದರೆ ನಮಗೆ ಅನ್ಯಾಯ ಆಗಿದೆ ಅಂತ ನ್ಯಾಯಾಲಯದಲ್ಲಿ ತೋರಿಸಿದರೆ ನಮ್ಮವರಿಗೆ ಸರಿಯಾದ ಪ್ರಮಾಣದಲ್ಲಿ ಕೆಲಸಗಳಾದ್ರು ಸಿಗಬಹುದೇ?

ನಮ್ಮ ಜನ ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಳ್ಳುವುದೂ ಮುಖ್ಯ. ಆಂಧ್ರದಲ್ಲಿರುವಂತೆ ಪರೀಕ್ಷಾ ತರಬೇತಿ ಕೇಂದ್ರಗಳನ್ನು ತೆರೆದು ನಾಡಿನ ನಿರುದ್ಯೋಗಿಗಳಿಗೆ ಸಹಾಯ ನೀಡಬೇಕು.

Anonymous ಅಂತಾರೆ...

ಈ ವಿಷಯದಲ್ಲಿ ಕಾನೂನಿನ ನೆರವು ಪಡೆಯಬಹುದೆ? ಕಾನೂನು ತಜ್ಞರ ಪರಿಚಯ ನಿಮಗೆ ಇದ್ದರೆ ದಯವಿಟ್ಟು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಬರೆಯಿರಿ. ಕನ್ನಡ ಜಾಗೃತಿಯ ಜೊತೆಗೆ ಹೋರಾಟದ ಹಾದಿಯನ್ನೂ ತೋರಿಸಿಕೊಡಿ.

-ಶ್ರೀಧರ್

Anonymous ಅಂತಾರೆ...

ಶ್ರೀಧರ, PIL ಬಗ್ಗೆ ಬರೆದದ್ದು ನಾನು. ಕಾನೂನು ನನಗೆ ಗೊತ್ತಿಲ್ಲ. ನನಗೆ ಅನಿಸಿದ್ದು ಇಷ್ಟು - ನಮ್ಮ ರಾಜ್ಯ ಭಾರತ ಒಕ್ಕೂಟದ ಅಂಗ. ಎಲ್ಲಾ ರಾಜ್ಯಗಳಿಂದ ತೆರಿಗೆ/ಆದಾಯ ಸಂಗ್ರಹಿಸಿ ನಡೆಯುವ ಕೇಂದ್ರ ಸರ್ಕಾರ, ರೈಲ್ವೆ ಕೆಲಸಗಳಿಗೆ ಹಿಂದಿ ಭಾಷಿಕರಿಗೆ ಯಾವ ನಿರ್ಭಂಧ ಹೇರದೆ ಹಿಂದಿಯೇತರರಿಗೆ ಮಾತ್ರ ಹಿಂದಿ ಅಥವಾ ಇಂಗ್ಲೀಷನಲ್ಲಿ ಅರ್ಜಿ/ಪರೀಕ್ಷೆ ನಡೆಸುವುದು ನೈತಿಕವಾಗಿ ತಪ್ಪು. ಇದನ್ನು ಕಾನೂನಿನ ಪ್ರಕಾರ ತಾರತಮ್ಯವೆಂದೂ ಮತ್ತು ಹಿಂದಿಯೇತರರನ್ನು ಎರಡನೆ ದರ್ಜೆ ನಾಗರಿಕರಂತೆ ನೋಡಲಾಗುತ್ತಿದೆ ಎಂದು ತೋರಿಸಬಹುದೆ?

ನೈರುತ್ಯ ರೈಲ್ವೆ ಹುಟ್ಟುವ ಮೊದಲು ಆಂಧ್ರ ಮತ್ತು ತಮಿಳುನಾಡಿನವರೆ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ರೈಲ್ವೆ ಕೆಲಸದಲ್ಲಿದ್ದರು. ಈಗ ಗ್ರೂಪ್ ಡಿ ಕೆಲಸಗಳಿಗೂ ಬಿಹಾರಿಗಳನ್ನು ದೇಶದಲ್ಲೆಲ್ಲ ತುಂಬುವ ಹುನ್ನಾರ ನಡೀತಾ ಇದೆ(ಅಸ್ಸಾಮಿನಲ್ಲಿ ಇದೇ ಕಾರಣಕ್ಕೆ ಗಲಭೆಗಳು ನಡೆದವು). ಕನ್ನಡ ಹೋರಾಟಗಾರರ ಮೆಲೆ ನೂರಾರು ಕೇಸುಗಳಿವೆ. ನಾವೇ ಸರ್ಕಾರಗಳ ಮೇಲೆ ಖಟ್ಲೆ ದಾಖಲಿಸಿದರೆ ಹೇಗೆ? ಕ.ರ.ವೇ ಮತ್ತು ಇತರ ಸಂಘಟನೆಗಳಿಗೆ ನಮ್ಮ ವಕೀಲರು ದಾರಿ ತೋರಿಸಬಹುದೆನೋ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails