ಬ್ರಿಟಿಷರಿಂದ ಬಿಡುಗಡೆ ಸ್ವಾತಂತ್ರ್ಯದ ಮೊದಲನೇ ಹೆಜ್ಜೆ ಮಾತ್ರ

ಇವತ್ತಿಗೆ ಭಾರತದಿಂದ ಬ್ರಿಟೀಷರನ್ನ ಒದ್ದೋಡಿಸಿ 60 ವರ್ಷಗಳು ಕಳೆದವು. ಅದೆಷ್ಟು ಜನರ ಬಲಿದಾನ, ಅದೆಷ್ಟು ಕಷ್ಟ ಪಟ್ಟು ಇದ್ನ ಗಳ್ಸಿದೀವಿ ಅನ್ನೋದನ್ನ ಮತ್ತೊಮ್ಮೆ ನೆನಪಿಸಿಕೊಳ್ಳುತ್ತ ಸಂತೋಷ ಪಡಕ್ಕೂ ಇದು ದಿನ, ಆ ಸಂತೋಷದ ಜೊತೆಗೆ ನಮ್ಮ ಕರ್ತವ್ಯಗಳನ್ನೂ ನೆನೆದು ಭವಿಷ್ಯದೆಡೆಗೆ ಧೈರ್ಯವಾಗಿ ಮುನ್ನುಗ್ಗೋಣ ಅಂತ ಪಣ ತೊಡಕ್ಕೂ ಇದು ದಿನ.


ಬ್ರಿಟೀಷರನ್ನ ಓಡಿಸಿದ್ದಷ್ಟಕ್ಕೆ "ಸ್ವಾತಂತ್ರ್ಯ" ಸಿಕ್ಕಂಗಲ್ಲ

"ಸ್ವಾತಂತ್ರ್ಯ" ಅನ್ನೋದಕ್ಕೆ ಬರೀ "ಬ್ರಿಟೀಷರನ್ನ ಭಾರತದಿಂದ ಓಡ್ಸೋದು" ಅಂತ ಅರ್ಥ ಮಾಡ್ಕೊಳೋದು ನಮ್ಮ ಜನಕ್ಕೆ ವಾಡಿಕೆ. ಆದರೆ ಅಷ್ಟಕ್ಕೇ ಸೀಮಿತವಾಗಿರೋದು "ಸ್ವಾತಂತ್ರ್ಯ" ಅಲ್ಲ, ಅದು ಬರೀ ಬ್ರಿಟಿಷರಿಂದ ಬಿಡುಗಡೆಯಷ್ಟೆ. ನಮ್ಮ ಆಳ್ವಿಕೆ ನಮ್ಮ ಕೈಯಲ್ಲೇ ಇದ್ದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಅಂತ ಹೇಳಕ್ಕಾಗೋದು. ನಮಗೆ ಸಿಕ್ಕಿರೋದು ಬ್ರಿಟಿಷರಿಂದ ಬಿಡುಗಡೆ ಮಾತ್ರ. ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕೇ ಇಲ್ಲ ಅನ್ನೋದು ನಮ್ಮ ವಾದ. "ಅಯ್ಯಯ್ಯೋ...ಇದೇನು ಗುರು? ನಮ್ನ ನಾವೇ ಆಳ್ಕೋತಾ ಇದೀವಲ್ಲ?" ಅಂತ ಅನ್ನಿಸ್ತಿದ್ಯಾ? ಯೋಚ್ನೆ ಮಾಡಿ ನೋಡಿ. ಮೊದಲು "ನಾವು" ಅಂದ್ರೆ ಯಾರು ಅಂತ ತಿಳ್ಕೊಳೋಣ.

ಯಾರು ನಾವು, "ಭಾರತೀಯರು" ಅಂದ್ರೆ?

ಬ್ರಿಟಿಷರನ್ನ ಒದ್ದೋಡಿಸೋ ಆತ್ರದಲ್ಲಿ "ಈ ಭಾರತದ ರಚನೆಯಾದರೂ ಹೇಗಿದೆ?", "ಇದರಲ್ಲಿರುವ ಜನರಾರು?", "ಇವರು ತಮ್ಮನ್ನು ತಾವೇ ಆಳಿಕೊಳ್ಳುವುದು ಎಂದರೆ ಅರ್ಥವಾದರೂ ಏನು?" ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಭಾರತದಲ್ಲಿರೋ ವಿವಿಧತೆಗೆ ಹೆಚ್ಚಾಗಿ ಪ್ರಾಶಸ್ತ್ಯ ಕೊಟ್ಟಿರಲಿಲ್ಲ. ವಿವಿಧತೆ ಇದೆ ಅಂತ ಹೇಳಿಕೊಳ್ಳಕ್ಕೇ ನಾಚಿಕೆ ಅನ್ನೋ ರೀತಿಯಲ್ಲಿ ಭಾರತ ಅಂದ್ರೆ ಒಂದೇ ಸಂಸ್ಕೃತಿ, ಒಂದೇ "ಮುಖ್ಯ" ಭಾಷೆ, ಎಲ್ಲವೂ ಒಂದೇ ಅಂತ ಹೇಳ್ಕೊಂಡು ತಿರುಗಿದ್ದೇ ಹೆಚ್ಚು.

ಆದರೆ ನಿಜವಾದ ಸಂಗತಿಯೇನಪ್ಪಾ ಅಂದ್ರೆ ನಾವು - ಅಂದ್ರೆ ಭಾರತೀಯರು - ಬೇರೆಬೇರೆ ಭಾಷಾವಾರು ಜನಾಂಗಗಳಿಗೆ ಸೇರೋರು. ನಮ್ಮ ನಡೆ-ನುಡಿಗಳು ಬೇರೆ, ನಮ್ಮ ಆಚರಣೆಗಳು ಬೇರೆ, ನಮ್ಮ ಸಂಸ್ಕೃತಿಗಳು ಬೇರೆ, ನಮ್ಮ ಇತಿಹಾಸಗಳು ಬೇರೆ. ಈ ಬೇರೆಬೇರೆ ಜನಾಂಗಗಳು ಭಾರತ ಅನ್ನೋ ಹೆಸರಿನ ಉನ್ನತ ತತ್ವವೆಂಬ ದಾರಕ್ಕೆ ಪೋಣಿಸಿರೋ ಬೇರೆಬೇರೆ ಮಣಿಗಳಿದ್ದಂಗೆ ("ಸೂತ್ರೇ ಮಣಿಗಣಾ ಇವ"). ಒಂದು ಮಣಿ ಕರ್ನಾಟಕ, ಮತ್ತೊಂದು ತಮಿಳ್ನಾಡು, ಮತ್ತೊಂದು ಆಂಧ್ರ, ಮತ್ತೊಂದು ಮಹಾರಾಷ್ಟ್ರ, ಮತ್ತೊಂದು ಉತ್ತರಪ್ರದೇಶ...ಹೀಗೆ ಈ ಮಣಿಗಳಿಗೆ ಹೆಸರುಗಳು. ಈ ಮಣಿಗಳಿಲ್ಲದೆ ಸೂತ್ರಕ್ಕೆ ಬೆಲೆಯಾದ್ರೂ ಎಲ್ಲಿದೆ ಗುರು? ಮಣಿಗಳಿಂದಾನೇ ಸೂತ್ರಕ್ಕೆ ಬೆಲೆ!

ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ಸಿಗಬೇಕಾದರೆ ಏನೇನಾಗಬೇಕು?
ಇಷ್ಟೆಲ್ಲ ಬೇರೆತನವಿದ್ದಾಗ "ನಾವು" ಸ್ವತಂತ್ರವಾಗೋದು ಅಂದ್ರೆ ಏನರ್ಥ? ಆ ದಾರ ಸ್ವತಂತ್ರವಾಗೋದು ಅಂತಲ್ಲ; ದಾರವೇ ಮಣಿಹಾರವಲ್ಲ. ಹಾಗೆಯೇ ಯಾವುದೋ ಒಂದು ಮಣಿ ಸ್ವತಂತ್ರವಾಗೋದು ಅಂತಲ್ಲ. ದಾರದಲ್ಲಿರೋದು ಒಂದೇ ಮಣಿ ಅಂತ ತಿಳ್ಕೊಂಡಿರೋ ವ್ಯವಸ್ಥೆ ಕಟ್ಟೋದಲ್ಲ.

ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ಸಿಗಬೇಕಾದರೆ ಭಾರತದ ಭಾಷಾವಾರು ರಾಜ್ಯಗಳ ಸ್ವಾತಂತ್ರ್ಯ - ಅಂದ್ರೆ ಸಾಧನೆಯ ಶಿಖರಕ್ಕೇರಲು ತಮಗೆ ಬೇಕಾದ್ದನ್ನೆಲ್ಲ ಪೂರೈಸಲೆಂದೇ ಮೀಸಲಾಗಿರುವ ನಿಜಕ್ಕೂ ಅವುಗಳದೇ ಆಡಳಿತ - ಎಂಬ ಎರಡನೇ ಹೆಜ್ಜೆ ಇಡುವುದು ಬಹಳ ಮುಖ್ಯ. ಸ್ವಾತಂತ್ರ್ಯ ಅಂದ್ರೆ ಮಣಿಗಳಿಗೆ ದಾರದಿಂದ ಬಿಡುಗಡೆ ಅಲ್ಲ (ಭಗವಂತನಿಂದ ಬಿಡುಗಡೆಯೆಂದರೆ ಅರ್ಥವಿಲ್ಲದ್ದು ಗುರು!), ಆದರೆ ಅದೇ ದಾರದಲ್ಲಿದ್ದು ಒಂದೊಂದು ಮಣಿಯೂ ಫಳಫಳನೆ ಹೊಳೆಯಲು ಬೇಕಾದ್ದೆಲ್ಲ ಇರುವಂತಹ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಭಾರತದ ಬೇರೆಬೇರೆ ಭಾಷಾವಾರು ಜನಾಂಗಗಳ ಮೇಲೆ ಹಿಂದಿ ಹೇರಿಕೆಯಾಗಲಿ, ನಮ್ಮದಲ್ಲದ ಇಂಗ್ಲೀಷಿನಲ್ಲಿ ಕಲಿಕೆ ಇಲ್ಲವೇ ನಮ್ಮ ನಾಡಿನಲ್ಲಿ ನಮಗೇ ಕೆಲಸ ಕೊಡದ ಉದ್ಯಮಗಳಾಗಲಿ, ಆಯಾ ರಾಜ್ಯಗಳ ನಾಡು-ನುಡಿಗಳ ಏಳ್ಗೆಯ ಕನಸೇ ಇಲ್ಲದ "ರಾಷ್ಟ್ರೀಯ ಪಕ್ಷಗಳು" ಆಳುವುದಾಗಲಿ, ಕೇಂದ್ರಸರ್ಕಾರ ತನಗೆ ಸಂಬಂಧಪಡದ ವಿಷಯಗಳಿಗೆ ತಲೆಹಾಕುವುದಾಗಲಿ, ಕೇಂದ್ರದಲ್ಲಿ ಲಾಬಿ ಮಾಡೋರಿಗೇ ಕಾವೇರಿ ನೀರು ಎನ್ನುವ ಯಾವ ನಿಯಮಗಳೂ ಇಲ್ಲದ ವ್ಯವಸ್ಥೆಯಾಗಲಿ, ಇರಲಾರವು ಗುರು! ಪೂರ್ಣ ಸ್ವಾತಂತ್ರ್ಯಕ್ಕೆ ಅಡ್ಡಗಾಲು ಹಾಕಿಕೊಂಡು ನಿಂತಿರುವ ಇವುಗಳು ಹೋಗದೆ ಕರ್ನಾಟಕಮಣಿ ದಾರದಲ್ಲಿ ಹೊಳೆಯುವುದೆಂತು ನಮ್ಮಪ್ಪ? ಆ ದಾರಕ್ಕೆ ಬೆಲೆಯಾದರೂ ಬರುವುದೆಂತು ನಮ್ಮಪ್ಪ?

12 ಅನಿಸಿಕೆಗಳು:

Rohith B R ಅಂತಾರೆ...

ಗುರುಗಳೇ, ನಮ್ಮ ದೇಶ ಮತ್ತು ಮಣಿ-ಪೋಣಿಸಿರುವ ದಾರದ ಹೋಲಿಕೆ ಸಕ್ಕತ್ ಸರಿ ಅನಿಸುತಿದೆ ರೀ.. ಅದರಲ್ಲೂ ಒನ್ನೊಂದು ಭಾಷಾವಾರು ರಾಜ್ಯವೂ ಒನ್ನೊಂದು ಮಣಿ ಅಂದ್ರಲ್ಲ ಅದು ಬಾಳ ಸಂದಾಗಿತ್ತು ಗುರು. ಈ ಹೋಲಿಕೆ ಬಹಳ ಸರಿಯಾದ್ದೂ ಹೌದು, ಸೂಕ್ತವೂ ಹೌದು.

ದಾರದಲ್ಲಿ ಪೋಣಿಸಿರುವ ಒಂದು ಮಣಿಗೆ ಬೆಣ್ಣೆ, ಒಂದು ಮಣಿಗೆ ಸುಣ್ಣ ಮಾಡುತ್ತಿರುವ ಕೇಂದ್ರ ಸರ್ಕಾರ ಹೋಗಿ ಎಲ್ಲರಿಗೂ ಬೆಣ್ಣೆಯೇ ಮಾಡುವ ಒಂದು ಕೇಂದ್ರ ಸರ್ಕಾರ ಬಂದು, ಅದರಿಂದ ಮುಕ್ತವಾಗಿ ಕೆಲ್ಸ ಮಾಡೋ ರಾಜ್ಯ ಸರ್ಕಾರಗಳು ಬಂದು ಅವುಗಳು ಕೇಂದ್ರದ ಸಮ್ಮುಖದಲ್ಲಿ ತಮ್ಮ್-ತಮ್ಮ ರಾಜ್ಯಗಳನ್ನು ಉದ್ಧಾರ ಮಾಡಿದಾಗಲೇ ನಿಜವಾದ ಸ್ವಾತಂತ್ರ ಅಲ್ವ.. ಆಗಲೇ ದಾರದ ಮೇಲಿರುವ ಎಲ್ಲಾ ಮಣಿಗಳೂ ಒಂದೇ ಸಮನೆ ಹೊಳೆಪುವುದು. ಆಗಲೇ ಚೆನ್ನಾಗಿ ಕಾಣುವುದು ಈ ಭಾರತ ಎಂಬ ಹಾರ! ಸರಿಯಾಗಿ ಬರ್ದಿದೀರ ಗುರು! ಸಕ್ಕತ್!

Anivaarya ಅಂತಾರೆ...

ನಿಮ್ಮ ಮಣಿ ಉಧಾಹರಣೆ ಸೂಪರ್! ಸಕ್ಕತ್! ಆದ್ರೆ ಇಲ್ಲಿಯ ಮಣಿಗಳಿಗೆ ಜೀವವಿದೆ, ಅವುಗಳದೇ ಆದ requirementsಇವೆ, demandsಗಳಿವೆ, ಪ್ರತಿಯೊಂದೂ ಒಂದೊಂದು ಧಿಕ್ಕಿನಲ್ಲಿ ಹೋಗೋ ಆಸೆಗಳಿವೆ, ಇವುಗಳ ಮಧ್ಯೆ ಪೈಪೋಟಿ ಇದೆ, ಹೊಟ್ಟೆ ಉರಿ ಇದೆ, ಅಸಹ್ಯಗಳಿವೆ, ಜಗಳಗಳಿವೆ, complaints ಇವೆ, ಅವುಗಳದೇ ಆದ characteristicsಇವೆ, natural resources ಇವೆ, ಎಲ್ಲಾವ್ದಕ್ಕಿಂತ ಪ್ರತಿ ಮಣಿಯಲ್ಲೂ ಅದರದೇ ಗುಣಗಳಿರೋ ವಿಭಿನ್ನ ಅಣುಗಳಿವೆ. ಇಂತಾ ಕ್ಲಿಷ್ಟ ವಸ್ತುವನ್ನ ಪೋಣಿಸಿ ಅದನ್ನ ಒಟ್ಟಿಗೆ ಇಟ್ಟುಕೊಳ್ಳೋದು ಹೇಳೊ ಅಷ್ಟು ಸುಲುಬ ಅಲ್ಲ. ಆದ್ರಿಂದ ಇಷ್ಟು ಸುಲುಬವಾಗಿ ಹೀಗೆ ಹೋಲಿಕೆ ಸಂಪೂರ್ಣವಾಗಿ ಸರಿಯಲ್ಲ ಅಲ್ವಾ? ಏನ್ ಅಂತೀರಾ? ಆದ್ರೂ ಹೀಗೆ ಆಗೊ ಹಾಗಿದ್ರೆ ಅದಕ್ಕಿಂತಾ ಒಳ್ಳೆಯ ವಿಷಯ ಬೇರೊಂದಿಲ್ಲ.

ಸಕ್ಕತ್ ಲೆಖನ ಗುರು! ಸೂಪರ್!

Healthy foods ಅಂತಾರೆ...

Thanks for the sending the link, I don't know when our people will wake up,

I am seeing the Kannada groups also sending the messages for wishing the Independence Day.

I really don't understand what they want to tell, this is eye opening article at least they understand after reading this.


In our own mother land (Karnataka) we are fighting for our rights, for our land, and Jobs for our people, atrocities going, on our people,this Is the pathetic situation; this is happening inour own mother land, forget about our people staying outside our mother land. Is this the Independence ?

Good one all kannadigas has read this and wake up.

Prasad

Anonymous ಅಂತಾರೆ...

ಪ್ರೀತಿಯ ಅನಿವಾರ್ಯ ಉರುಫ್ ಏನಯ್ಯನವರೇ,

ಈ ಬ್ಲಾಗ್ ಒಳಗೆ ಏನೆ ವಿಷಯ್ ಬಂದರೂ ಎದನ್ನು ನೀವು ಸ್ವೀಕರಿಸೋ ರೀತಿ ನೋಡುದ್ರೆ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಅನುಮಾನ ಹುಟ್ಟತ್ತೆ. ನೋಡಿ ನಿಮ್ ಹೆಸ್ರನ್ನು ಮುಚ್ಚಿಟ್ಕೊಳ್ಳೋ ಮಖೇಡಿ ತನ ಇಟ್ಕೊಂಡಿದೀರಿ, ಯಾವ್ದೋ ಉದಾಹರಣೇನ ಹೇಗೆ ಹೊಂದಿಕೆಯಾಗುತ್ತೆ ಅಂತ ನೋಡ್ದೆ ಹೇಗ್ ಹೊಂದಲ್ಲ ಅಂತಲೇ ನೋಡ್ತೀರ. ತಾತ್ವಿಕವಾಗಿ ವಾದ ಮಾಡಕ್ ಆಗ್ದೆ ಇದ್ದಾಗ 'ನಾನಿರೋದೆ ಹೀಗೆ, ಏನ್ ಬೇಕಾದ್ರೂ ಮಾಡ್ಕೊಳ್ಳಿ' ಅಂತೀರ. ಅಥ್ವಾ ಮಾತ್ ಎಲ್ಲೆಲ್ಲೋ ಹೋಗುತ್ತೆ ವಾದ ಬೇಡ ಅಂತ ಪಲಾಯನ ವಾದ ಮಾಡ್ತೀರ.
ಯಾಕ್ ಸ್ವಾಮಿ, ಎಲ್ಲಾದ್ರಲ್ಲೂ ಅಪಸ್ವರಾನೆ ಹುಡುಕ್ತೀರಿ? ಏನೋ ಒಂದು ಇಲ್ಲದ ಮಾತ್ ತೆಗ್ದು ಕೊಂಕು ಮಾತಾಡೋ ಗುಣ ಒಳ್ಳೇದಲ್ಲಾ ಕಣ್ರೀ. ಇದೇ ನಿಮ್ ಸ್ವಭಾವ ಆಗಿದ್ರೆ ಖಂಡಿತ ನೀವೂ ನೆಮ್ಮದಿಯಾಗಿ ಇರಲ್ಲ, ನಿಮ್ಮ ಸಂಪರ್ಕಕ್ ಬಂದವ್ರನೂ ನೆಮ್ಮದಿಯಾಗ್ ಇರಕ್ಕೆ ಬಿಡಲ್ಲ.
ಮನುಷ್ಯಂಗೆ ಒಂದು ನಂಬಿಕೆ ಇರಬೇಕು. ಅದು ಸರೀನಾ ತಪ್ಪ ವಿಮರ್ಶೆ ಮಾಡ್ಕೋತಾ ಇರಬೇಕು. ಸರಿಯಿದ್ದರೆ ವಾದ ಮಾಡಿ ಯಾಕೆ ಸರಿ ಅಂತ ಮನವರಿಕೆ ಮಾಡಿಕೊಡಬೇಕು. ತಪ್ಪಿದ್ದರೆ ತಿದ್ದಿಕೊಳ್ಳುವ ದೊಡ್ಡಸ್ತಿಕೆ ಇರ್ಬೇಕು. ಇವ್ಯಾವ್ದು ಇಲ್ದೆ ಸುಮ್ಮನೆ ಮೊಂಡುವಾದ, ನಕಾರಾತ್ಮಕ ನಿಲುವು, ಕಂಡದ್ದರಲ್ಲೆಲ್ಲ ತಪ್ಪು ಹುಡುಕೋದು . . . ಇವೆಲ್ಲ ಮನೋರೋಗದ ಲಕ್ಷಣಾ ಸ್ವಾಮಿ.
ಆದಷ್ಟು ಬೇಗ ತಿದ್ದಿಕೊಳ್ಳಿ . . . .

ಪ್ರೀತಿಯಿಂದ
ಸತೀಶ್ ಹೊನ್ನಾವರ

Anonymous ಅಂತಾರೆ...

ಗುರುಗಳೆ, ಇವತ್ತಿನ ದಿ ಹಿಂದೂ ಪತ್ರಿಕೆಯಲ್ಲಿ ಕರುಣಾನಿಧಿ ಇದನ್ನೇ ಬರೆದಿದ್ದಾರೆ. ನೀವೇನಾದ್ರು ಅವರಿಗೆ ಬರೀಲಿಕ್ಕೆ ಹೇಳಿದ್ರಾ? :-)

"Autonomy for the states, Federalism at the center" ಎಂಬುದು ಅವರ ಬರಹ.

Anonymous ಅಂತಾರೆ...

olleya lekhana. monne garments naukararige kirukula kottaralla adaada melu namma naadinalli swatantra ide anta hege helkolakkagutte. karnataka rakshna bedike yawaru baradiddalli aa mahileyara gati enaaguttitto devare balla. kendradawaru haalaagi hogali, namma sarkaaradavare, namma police janare intha kirukulakke mundadare idakkinta viparyaasa berondilla. olleya lekhana nijawagiyu nammannu naawu prashnisikollabeku omme 'kannada naadinalli ellide swaatantra" anta

Anonymous ಅಂತಾರೆ...

ಕರುಣಾನಿಧಿ ಬರಹಕ್ಕೆ ಕೊಂಡಿ ಇಲ್ಲಿದೆ:
http://www.hindu.com/2007/08/15/stories/2007081554591200.htm

Anivaarya ಅಂತಾರೆ...

ಪ್ರೀತಿಯ ಸತೀಶ್,

ಧನ್ಯವಾದ ನಿಮ್ಮ ಅನಿಸಿಕೆಗೆ. ಲೇಖನದ ಬಗ್ಗೆ ಧನ್ಯವಾದವನ್ನೂ ಹೇಳಿದ್ದೇನೆ. ಅದು ಸರಿ, ಸಂತೋಷ ಆಯ್ತು ಅಂತಾನೂ ಹೇಳಿದ್ದೇನೆ. ಬಿಡಿ. ಆದರೆ ಕೆಲವೊಮ್ಮೆ ಒಂದು ವಿಷಯದ ಆಳಕ್ಕೆ ಹೊಗಬೇಕಾದರೆ, ನಮ್ಮ ಅನಿಸಿಕೆಗಳು ದೃಡವಾಗಬೇಕಾದರೆ constructive critisism ಮಾಡಬೇಕಾಗುತ್ತೆ, ಒಬ್ಬ "ಕಪ್ಪು ಕುರಿ" ಅಂತಾರಲ್ಲ ಇದ್ದರೆ ಒಳ್ಳೆದು. ಅದರಲ್ಲಿ ತಪ್ಪು ಕಂಡು ಹಿಡಿಯುವುದು intention ಆಗಿರಲ್ಲ, ಆದ್ರೆ ಬರೆದಿದ್ದೆಲ್ಲಾ ಬರೀ ಸರಿ ಅಂತ ಹೇಳ್ತಾ ಹೋದ್ರೆ ಸ್ವಲ್ಪ dogmatic ಆಗ್ತೀವು ಒಮ್ಮೊಮ್ಮೆ. ಇದು ಸ್ವಲ್ಪ ನೀರನ್ನ ಕಲಕಿ ನೋಡುವ ಅನ್ನೋ ಪ್ರಯತ್ನವಷ್ಟೆ. ಕಲಕಿದಾಗ ಒಳಗಿನ ಸತ್ವಗಳು ಆಚೆ ಬರುತ್ತೆ, ನಿಮ್ಮಂತವರ, ರವಿ ಅಂತವರ ನುಡೀಗಳು ಆಚೆ ಬರುತ್ತೆ. ನನ್ನ ಮೇಲೆ ವಯಕ್ತಿಕ ಟೀಕೆ ಬೇಡ ಸತೀಶ್, ಅದು ಕನ್ನಡಕ್ಕೆ ಏನೊ ಪ್ರಯೊಜ್ನವಿಲ್ಲ, ಅನಸಿಕೆಯ ಮೇಲೆ ಆದಲ್ಲಿ ಬರೆಯಿರಿ ದಯವಿಟ್ಟು.

ಕೆಲವೊಮ್ಮೆ ಹಳೆಯ "biases"ಗಳ್ನ counter ಮಾಡಕ್ಕೆ ಹೆಸರು ಬದಲಾಯಿಸಿ ಮಾಡಬೇಕಾಗುತ್ತೆ. ಬಿಡಿ. ಮಾನಸಿಕ ಆರೋಗ್ಯದ ಅನುಮಾನದ ಚಿಂತನೆ, ಅನುಕಂಪಕ್ಕೆ ಧನ್ಯ :)

ಮತ್ತೊಮ್ಮೆ, ಇದು ಒಂದು ಉತ್ತಮ ಲೇಖನ ಅಂತ ಮನಃ ಪೂರಕವಾಗಿ ಒಪ್ಪುತ್ತೇನೆ.

ಫ್ರೀತಿಯ,
ಯಾರಯ್ಯ

Anonymous ಅಂತಾರೆ...

Autonomy for the States, federalism at the Centre


Kalaignar M. Karunanidhi


The time is ripe now for establishing a true federal system that will strengthen the bonds of mutual cooperation, unity, and cordiality between the Centre and the States.
The DMK is of the view that for proper and ideal Centre-State relations, there should be more powers for the States. To be more appropriate and precise, there should be autonomy for the States and federalism at the Centre.

The demand for restructuring Centre-State relations is as old as the adoption of the Constitution of India in 1950. The creation of a new structure of constitutional government for independent India deserves to be seen in historical context, particularly by taking into account the objective political situation that existed then. In fact, political imperatives emerging out of the independence movement historically as well as the immediate imperatives of the Partition of India influenced the design of government incorporated in the Constitution. On the one hand, the framers, drawing the spirit of the independence movement, found the federal scheme appropriate for India; on the other hand, Partition created a fear of centrifugal elements in the nascent nation.

Indeed, the major part of the history of the struggle for self-rule and independence reflects efforts to find a solution to India’s gigantic diversity. Even the mobilisation for the national movement was based on federal principles. The acceptance of language as the basis for redrawing the provincial boundary, for example, was a result of such a mobilisation. The history of federalism and Centre-State relations in India is marked by political mobilisation and intermittent struggle to fashion a more federal set-up. Even though such efforts have not yet resulted in any major constitutional changes towards a more federal orientation, the struggle has not been entirely fruitless.

In the phase lasting until the last 1960s, the task of nation building and development was the main concern of the nation’s rulers. However, this period was not solely dominated by the trend of centralisation. One of the major democratic movements in the post-Independence period — the movement for the formation of the linguistic States — took place in the 1950s, which resulted in the formation of linguistic States in 1956. The Central government resisted this demand and gave in — in the face of strong popular movements. This laid the basis for the later assertion by the States for greater powers.

“It is the Sappers and Miners who go in advance clearing the bushes and the thorns and preparing the way for the tanks in the Army. I plead with the ruling party to use us as Sappers and Miners to clear the way for them. We are not mindful of the dust we would gather in the course of this task. The ruling party should utilise our services for getting more powers transferred from the Centre to the States.” It may be borne in mind that these were the words Arignar Anna [C. N. Annadurai, who became Chief Minister a decade later] spoke fifty years ago, on May 6, 1957, in the Tamil Nadu Legislative Assembly.

The second phase began with the 1967 general elections. Non-Congress State governments came into being. The demand for restructuring of Centre-State relations picked up momentum. In this connection, it may be useful to recall the impression of Arignar Anna, gathered by him as the Chief Minister. In his last epistle to his brethren titled “Hail, The Dawn!” published in Home Rule in January 1969, he wrote about “Federalism” and about our Constitution, “w hich on paper is federal but in actual practice tends to get more and more centralised.” After the passing of Arignar Anna in February 1969, when I was asked to bear the burden of responsibility, I continued the tenor and tone of our towering teacher and mentor.

The Dravida Munnetra Kazhagam decided to carry on a campaign on Centre-State relations in a systematic and scientific manner. It was on March 17, 1969, during my first visit to New Delhi as Chief Minister — in the course of answering searching questions on a wide range of subjects by over fifty newsmen representing newspapers from all over the country — that I said the Government was considering the setting up of an Expert Committee to go into the question of Centre-State relations and recommend the powers that should be transferred from the Centre to the States. On August 19, 1969, I announced on the floor of the Legislative Assembly the formation of a Three Member Committee with Dr. P.V. Rajamannar as Chairman and Dr. A.L. Mudaliar and P. Chandra Reddy as Members.

In February 1970, in the DMK Conference in Tiruchy, in order to take the Will of Arignar Anna to the hearts of partymen, a popular slogan, “Autonomy for the States; Federalism at the Centre,” was given and it started reverberating through the length and breadth of the States.

With a view to taking the concept of State autonomy to the people, the DMK conducted on September 12 and 13, 1970, a State Autonomy Conference at Anna Nagar, Chennai. Thanthai Periyar E.V. Ramasamy, Quaid-e-Milleth Ismail, the then West Bengal Chief Minister, Ajoy Mukherjee, Pranab Mukherjee, N. Srikandan Nair, Arangil Sridharan, S.M. Krishna, and a number of MPs and leaders participated. I presided over the conference.


In its 1971 Election Manifesto, the DMK announced: “Though the Constitution of India is described as a Federal one, the balance is more tilted towards the Centre and hence the States are not able to function freely in the administrative and financial spheres. Only such powers as are necessary for the Centre to preserve the strength of India should be assigned to the Centre and all the other powers should be left to the States without impairing the ideal of a strong India.”

The report of the Rajamannar Committee was received on May 27, 1971. On April 16, 1974, I moved a historic resolution in the Tamil Nadu Legislative Assembly requesting the Central government to accept the views of the Tamil Nadu government on State autonomy and the recommendations of the Rajamannar Committee and proceed to effect immediate changes in the Constitution of India to establish a truly federal set-up. In 1974, Murasoli Maran, an inimitable ideologue of the DMK, brought out a brilliant treatise on State autonomy. He explained in simple and effective language decentralisation and federalism; devolution and provincial autonomy; the nature of the Indian Constitution; and the basis for State autonomy.

For the first time, in 1989, a National Front coalition government headed by V.P. Singh, which included major regional parties like the DMK, took office at the Centre. Though short-lived, this government took certain steps to strengthen the federal principle. The Inter-State Council was constituted in 1990. The entry of regional parties in coalition governments at the Centre became a regular feature in 1996 with the formation of the United Front government and in all subsequent ones — and presently in the United Progressive Alliance government functioning under the esteemed guidance of Sonia Gandhi. The Left parties, which supported both the National Front Government in 1989 and the United Front government in 1996-1998 and the present UPA government, are strong supporters of the federal principle.

Attempts have been made to impose a unitary form of government in the country. The character of India as a multinational, multilingual, multi-religious state has been blatantly ignored. The relevant recommendations of the Sarkaria Commission on the restructuring of Centre-State relations have not been accepted and implemented in true spirit — as a result of which there has been a persistent trend of centralisation of economic and political powers in the country. The time is ripe now [for a transformation] with almost every major political party realising — by sheer experience and because of objective conditions — the need to establish a true federal system that would strengthen the bonds of mutual cooperation, unity, and cordiality between the Centre and the States.

It needs to be remembered that only the spirit of “co-operative federalism” — and not an attitude of dominance or superiority — can preserve the balance between the Union and the States and promote the good of the people. Under our constitutional system, no single entity can claim superiority. Sovereignty does not lie in any one institution or in any one wing of the government. The power of governance is distributed in several organs and institutions — a sine qua non for good governance. Even if we assume that the Centre has been given a certain dominance over the States, that dominance should be used strictly for the purpose intended, not for oblique purposes. An unusual and extraordinary power like the one contained in Article 356 cannot be employed for furthering the prospects of a political party or to destabilise a duly elected government and a duly constituted Legislative Assembly. The consequences of such improper use may not be evident immediately. But those do not go without any effect. Their consequences become evident in the long run and may be irreversible.

As the DMK is wedded to the principle of more powers to the States to ensure a true federal set-up in India, it has been ceaselessly and tirelessly underlining this principle wherever the occasion arises. It may be recalled that in the Governor’s address of January 20, 2007, in the Tamil Nadu Legislative Assembly, it has been explained that “this Government, holding Arignar Anna’s principle of State Autonomy close to its heart, while voicing its demand for rights and at the same time extending a hand of friendship, shall endeavour to secure the due rights and benefits for our State from the Union Government.”

Rohith B R ಅಂತಾರೆ...

that article in hindu states this at the end:
"As the DMK is wedded to the principle of more powers to the States to ensure a true federal set-up in India, it has been ceaselessly and tirelessly underlining this principle wherever the occasion arises. It may be recalled that in the Governor’s address of January 20, 2007, in the Tamil Nadu Legislative Assembly, it has been explained that “this Government, holding Arignar Anna’s principle of State Autonomy close to its heart, while voicing its demand for rights and at the same time extending a hand of friendship, shall endeavour to secure the due rights and benefits for our State from the Union Government.”

This is incredible and is not surprising at all to see it exists in TN. Karnataka badly needs this kind of mindset and I feel that is something that needs to be at the top of the priorities of any govt. coming in the future.

Anonymous ಅಂತಾರೆ...

samasye andre ella "unity in diversity" , hindi inda eka sadya anno brame li idare guru. Naanu kooda swalpa varshagaLa hinde ee bramele idde. eega kaNNu teredide.
ee lekhana hechchu kade prachara agali guru aaga adakke thumba bele baratte. ellargu gottagatte nijvada swatantra andre bari "kendra sarakarada" agnegaLanna palisodu ALLA antha...

Anonymous ಅಂತಾರೆ...

ನಮಸ್ತೆ,
ಒಳ್ಳೆ ಬಿಸಿಯಾದ ಚರ್ಚೆ. ಮೆದುಳಿಗೆ ಚುರುಕುಮುಟ್ಟಿಸುವ ಹಾಗಿದೆ. ಟೈಮ್ಸ್ ಆಫ್ ಇಂಡಿಯಾದ ’ಲೀಡ್ ಇಂಡಿಯಾ’ದಂಥ ಕ್ಯಾಂಪೇನುಗಳನ್ನ ಬೆಳೆಸ್ಬೇಕಾದವರು ನಾವು.ರಾಜಕೀಯ ಚಿಂತನೆ ಬರಿ ರಾಜಕೀಯದವರಿಗಷ್ಟೆ ಅಲ್ಲ, ನಮಗೂ ಸೇರಿದ್ದು ಎಂದು ತೋರಿಸಲು ಇದು ಒಳ್ಳೆಯ ಅವಕಾಶ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails