ಹೊರಗಿಂದ ಹುಡುಗೀರ್ನ ಕರ್ಕೊಂಡ್ ಬರ್ತಿರೋದೇ ತಪ್ಪು

ಹೋದ ವಾರದ ವಿ.ಕ.ದಲ್ಲಿ "ಪ್ರೀತ್ಸೆ" ಚಿತ್ರದ ಸೊನಾಲಿ ಬೇಂದ್ರೆ ತಮಗೆ ಕನ್ನಡ ಚಿತ್ರಗಳ ಬಗ್ಗೆ ಗೌರವ ಇದೆ, ಆದರೆ ಕನ್ನಡ ಚಿತ್ರಗಳಲ್ಲಿ ನಟಿಸೋದು ನನಗೆ ಸ್ವಲ್ಪವೂ ಹಿಡಿಸಲಿಲ್ಲ, ನನಗಾದ ಆ ಕೆಟ್ಟ ಅನುಭವ ಖಂಡಿತ ತಿರ್ಗಾ ಬೇಡ, "ಕನ್ನಡ ಚಿತ್ರದಲ್ಲಿ ಇನ್ನೊಮ್ಮೆ ನಟಿಸಲಾರೆ" ಅಂದಿರೋದರ ಬಗ್ಗೆ ಒಂದು ವರದಿ ಐತಿ, ಓದ್ ನೋಡಿ.

ಇದೇ ಆಗೋದು ಹೊರಗಿನೌಳು ಯಾರೋ ಟಸುಕ್-ಪುಸುಕ್ ಅಂತ ಇಂಗ್ಲಿಷ್ ಮಾತಾಡ್ತಾಳೆ ಅಂತ ಕನ್ನಡ ಚಿತ್ರ ಮಾಡೋರು ಕರ್ಕೊಂಬಂದು ತಲೆ-ಮೇಲ್ ಕೂಡಿಸಿಕೊಂಡ್ರೆ. ಕನ್ನಡ ಬರದೇ ಇದ್ರೂ ಪರವಾಗಿಲ್ಲ ಇಂತೌಳ್ನ ಕರ್ಕೊಂಡ್ ಬರಬೇಕು ಅಂತ ಇವತ್ತಿನ ನಿರ್ದೇಶಕರು ಅನ್ಕೋತಿರೋದಾದರೂ ಯಾಕೆ ಗುರು?

ಅಲ್ಲ ಈವೆಣ್ಣು ಹೇಳೋಹಂಗೆ ವಂಶದಿಂದ ಸೌಂದರ್ಯ ಪಡ್ಕೊಂಬಂದ ಕನ್ನಡದ ಹುಡುಗೀರೇ ಇಲ್ವಾ? ಇಲ್ಲಾ ಕನ್ನಡದ ಹುಡುಗೀರಿಗೆ ಇವತ್ತಿನ ದಿನ ಚಿತ್ರನಟಿ ಆಗೋದರ ಬದ್ಲು ಯಾವುದೋ ಐಟಿ ಕಂಪನೀಲಿ ಇಡೀ ಜೀವನ ಕಂಪ್ಯೂಟರ್ ಮುಂದೆ ಕೂತ್ಕೋಬೇಕು ಅನ್ನೋ ಆಸೇನೋ?

ಕನ್ನಡದ ಹುಡುಗ/ಹುಡುಗೀರು ಚಿತ್ರರಂಗಕ್ಕೆ ಬರಕ್ಕೆ ಹಿಂದೇಟ್ ಹಾಕ್ಬಾರ್ದು. ಇವತ್ತಿನ ದಿನ ಕನ್ನಡ ಚಿತ್ರಗಳು ಮತ್ತೊಮ್ಮೆ ಜನಮನ ಗೆಲ್ತಿರುವಾಗ ಚಿತ್ರರಂಗದಲ್ಲಿರೋಷ್ಟು ದುಡ್ಡು ಇನ್ನೆಲ್ಲಿದೆ ಗುರು? ಇದ್ನಾದರೂ ನಮ್ಮ ಹುಡುಗ್ರು/ಹುಡುಗೀರು ಅರ್ಥ ಮಾಡ್ಕೋಬೇಕು ಗುರು! ನಟನೆ ಬರೋ ಅಂದದಮೈಯ ಹುಡುಗ/ಹುಡುಗೀರು ನಮ್ಮಲ್ಲಿ ಕಡ್ಮೆಯೇನಿಲ್ವಲ್ಲ?

ಅಂದಹಾಗೆ ಈ ಸೊನಾಲಿ ಬೇಂದ್ರೆ ಓದಿದ್ದು ಬೆಂಗ್ಳೂರಿನ ಕೇಂದ್ರೀಯ ವಿದ್ಯಾಲಯದಲ್ಲೇ. ಕೇಂದ್ರೀಯ ವಿದ್ಯಾಲಯ ಅಂದ್ರೆ ಕನ್ನಡ ಎಷ್ಟು ಕಲ್ತಿರಬಹುದು ಅಂತ ಗೊತ್ತಾಯ್ತು ತಾನೆ? ಕನ್ನಡ ಅಂದ್ರೆ ಎಷ್ಟು ಗೌರವ ಇರಬಹುದು ಅಂತ ಗೊತ್ತಾಯ್ತು ತಾನೆ? ಏನೂ ಬೇಡ, ಭಾರತದ "ರಾಷ್ಟ್ರಭಾಷೆ" ಯಾವುದು ಅಂತ ಕೇಳ್ನೋಡಿ!

ಏನ್ ಹಂಗ್ ನೋಡ್ತಿದ್ಯ? ಹೋಗಮ್ಮ ತಾಯಿ, ನೀನಿಲ್ಲಾಂತ ಇಲ್ಲಿ ಅಳೋರು ಯಾರೂ ಇಲ್ಲ!

16 ಅನಿಸಿಕೆಗಳು:

Anonymous ಅಂತಾರೆ...

ನಾನಿರೋದು ಅಮೆರಿಕಾದಲ್ಲಿ. ಸೊನಾಲಿ ಬೆಂದ್ರೆ ಅಪ್ಪನಂತಾ ಸ್ಪಾನಿಶ್ ಹುಡುಗೀರನ್ನ ಇಲ್ಲಿ ಇದಾರೆ. ಅವ್ರು ಇಂಗ್ಲಿಶ್ ಹಾಗೆ ಸ್ಪಾನಿಶ್ ಕೂಡ ಚೆನ್ನಾಗಿ ಮಾತಾಡ್ತಾರೆ. ಅವ್ರು ಸ್ಪಾನಿಶ್ ಮಾತಾಡೋವಾಗ ಒಂದು ಇಂಗ್ಲಿಶ್ ಪದ ಉಪಯೋಗಿಸಲ್ಲ. ನಮ್ ಕನ್ನಡದ ಹುಡುಗೀರು ಮಾತಾಡೋ ಕನ್ನಡದಲ್ಲಿ ಹತ್ತರಲ್ಲಿ ಒಂದು ಮಾತ್ರ ಕನ್ನಡ ಪದ ಇರುತ್ತೆ!

Anivaarya ಅಂತಾರೆ...

ಏನ್ಗುರು!

ಅವ್ಳು ಕನ್ನಡ ಸಿನೆಮಾ ಮಾಡಲ್ಲಾ ಅನ್ನಕ್ಕೂ, ಕನ್ನಡ ಭಾಷೇಗೂ ಸಂಬಂಧ ಜಾಸ್ತಿ ಇಲ್ಲ ಅಂತೀನಿ. ಅವ್ಳ್ ಹೇಳೋದು "The entire team was very unprofessional and disorganised”. ಆದ್ರಿಂದ ಅವಳ ಅನಿಸಿಕೆ ಆ ಚಿತ್ರ ತಂಡದ ಮೇಲೆ, ಕರ್ನಾಟಕವಾಗಲೀ, ಕನ್ನಡದ ಮೇಲಾಗಲೀ ಅಲ್ಲ ಅಲ್ವಾ? ಕೆಲವೊಮ್ಮೇ ನವೂ ಹೀಗೆ generalized opinions ಕೊಡ್ತೀವಿ ಅಲ್ವಾ.

"one bad experience can shape a permanent perception about a company or a product". "Perception is just the way someone judges an experience based on their value system of what they believe should happen". ಇದು ನಮ್ಗೂ ನಿಮ್ಗೂ ಎಲ್ಲಾರ್ಗೂ ಆಗಿರೋದೆ ಅಲ್ವಾ?

ಆದ್ರೆ ಅವಳ ಕೆಟ್ಟ ಅನುಭವ, ವಯ್ಯಕ್ತಿಕ ಅನುಭವ, ಬರೀ ಕನ್ನಡ ಚಿತ್ರಗಳ ಜೊತೆ ಮಾತ್ರ, ಕನ್ನಡದ ಜೊತೆಯಾಗಲಿ, ಕನ್ನಡಿಗರ ಜೊತೆಯಾಗಲಿ ಸಂಬಂಧವಿಲ್ಲಾ, ಅಲ್ವಾ? ನಮಗೂ ಕೆಟ್ಟ ಅನುಭವಗಳು ಎಷ್ಟೊ ಇರುತ್ವೆ, ನಮ್ಮ ಕನ್ನಡ ಸ್ನೇಹಿತರ ಜೊತೆಯೆ ಎಷ್ಟೊ ಸಾರಿ ಆಗಿರುತ್ತೆ, ಈ forum ನಲ್ಲೆ ಆಗಿದೆ, ಆದ್ರೆ ಅದನ್ನ ಅಲ್ಲಿಗೆ ಸೀಮಿತ ಮಾಡುದ್ರೆ ಒಳ್ಳೆದು.

ನನಗೆ ಶ್ರೀಲಂಕಾಕ್ಕೆ ಹೋದಾಗ ಕೊಲೊಂಬೋದಲ್ಲಿ (ಬರಿ ಒಂದು ನಗರದ ಅನುಭವ, ದೇಷದ ಅನುಭವವಾಗುತ್ತೆ) ತುಂಬಾ ಕೆಟ್ಟ ಅನುಭವವಾಯ್ತು, ಮತ್ತೆ ನಾನು ಶ್ರಿಲಂಕಾಕ್ಕೆ ಹೋಗ್ಬಾರ್ದು ಅನ್ಸುತ್ತೆ. ನಾನು ಹೋಗ್ದೆ ಇದ್ದ್ರೆ ಮಣ್ಣಾಂಗಟ್ಟಿ, ಹಾಗಂತಾ ಶ್ರಿಲಂಕಾಕ್ಕೆ ಬೇರೆ ಯಾರೂ ಹೋಗಲ್ವೆ? ಹಾಗೆ ಅಷ್ಟೆ.

ನಾನೂ ೫ ವರ್ಷದಲ್ಲಿ 2-3 ಹೊಸ ಕನ್ನಡ ಸಿನೆಮ ನೋಡಿದ್ದೇನೆ ಅಷ್ಟೆ. ಆದ್ರೆ ಈಗ್ಲೂ ಬಂಗಾರದ ಮನುಷ್ಯ, ಸಾಕ್ಷಾತ್ಕಾರ, ಬೇಡರ ಕಣ್ಣಪ್ಪ, ಭಕ್ತ ಕೊಂಬಾರದಂತಹಾ ಮುತ್ತು-ರತ್ನಗಳನ್ನ ಅವಾಗವಾಗ ನೋಡ್ತಾನೇ ಇರ್ತೀನಿ. ನಾನು ಅಚ್ಚಾ ಕನ್ನಡಿಗ, ಸಿಕ್ಕಾಪಟ್ಟೆ ಕನ್ನಡ ಅಭಿಮಾನಿ, ಆದ್ರೂ ಕನ್ನಡ ಚಲನ ಚಿತ್ರಗಳ ಬಗ್ಗೆ ಅಷ್ಟೇನು ಒಳ್ಳೆ ಅಭಿಪ್ರಾಯವಿಲ್ಲ. ಹಾಗಂತ ನನಗೆ ಕನ್ನಡದ ಮೇಲೆ ಪ್ರೀತಿ, ಮರ್ಯಾದೆ ಇಲ್ಲ ಅಂತ ಹೇಳ್ಬೇಡಿ ದಯವಿಟ್ಟು :) ಹೆಹೆ :) ಇರ್ಲಿ.

ಜೊತೆಗೆ, ನೀವೇ ಯೊಚಿಸ್ನೋಡಿ, ಅವಳು ಕೇಂದ್ರೀಯ ವಿಧ್ಯಾಲಯದಲ್ಲಿ ಯಾಕೆ ಓದಿದ್ಲು, ಎಷ್ಟ್ ದಿನ ಓದಿದ್ಲು, ಎಂತಾ ವಾತಾವರಣದಲ್ಲಿ ಇದ್ಲು, ಅಂತ. ತಮಿಳುನಾಡೊ, ಅಸ್ಸಾಮ್, ಬೆಂಗಾಲೋ ಅತ್ವಾ ಯಾವುದೋ ಅಂತಹಾ ಕೇಂದ್ರೀಯ ವಿಧ್ಯಾಲಯದಲ್ಲಿ ಓದಿದ್ರೆ ಆಯಾ ಭಾಷೆಗಳನ್ನ ನೀವು ಕಲೀತಿದ್ರಾ ಗುರು? ನೀವ್ ಕಲೀತಿದ್ರೇನೊ ಗೊತ್ತಿಲ್ಲ, ಆದರೆ ಎಲ್ಲಾ ನಮ್ಮ ವಾತಾವರಣದ ಮೇಲೆ ನಿರ್ಬರವಾಅಗಿರುತ್ತೆ, ಆದ್ರಿಂದ ಆ ಠೀಕೆಯೂ ಸ್ವಲ್ಪ ಸರಿ ಇಲ್ಲ ಅನ್ನಿಸ್ತು. ಕೇಂದ್ರೀಯ ವಿಧ್ಯಾಲಯಗಳ purposeಏ ಬೇರೆ, ಆದ್ರಿಂದ ದಯವಿಟ್ಟು ಅದರ ಬಗ್ಗೆ ಕೆಟ್ಟ ಟೀಕೆ ಬೇಡಾ ಗುರು :)

ನೀನೇ ಹೇಳ್ದಂಗೆ, ಅವ್ಳು ಮಾಡ್ದೆ ಇದ್ರೆ ಮಣ್ಣಾಂಗಟ್ಟಿ. ಸೋನಾಲಿನೋ, ಸುಂಡಿಲಿನೋ ನಮ್ಗೇನು. ಆಚೆಕಡೆಯೋರು ಬರ್ಲಿ ಬಿಡು ಗುರು ನಮ್ ನಾಡ್ಗೆ, ಕಲೀಲಿ ನಮ್ ಭಾಷೆ. ಈ ತರದ್ ಕೆಟ್ಟ ಅನುಭವ ಕೆಲವು ಇರುತ್ತೆ ಅಷ್ಟೆ. ಅದ್ಯಾರೊ ಹೊಸ ಹುಡ್ಗಿ ಬಂದಿದಾಳಂತಲ್ಲ ಈಗ ಅವ್ಳ್ಗೇನೂ ಕೆಟ್ಟ ಅನುಭವವಾಗಿಲ್ಲ ಅಲ್ಲ್ವಾ? ಬರ್ತಾ ಇರ್ಲಿ, ಒಳ್ಳೆ ಒಳ್ಳೆ ಸಿನೆಮಾಗಳು ಬರ್ತಾ ಇರ್ಲಿ, ಅಷ್ಟೆ.

ಇದು ನನ್ನ ಅನಿಸಿಕೆ ಅಷ್ಟೆ.

Anonymous ಅಂತಾರೆ...

hmmm... ಇವಳು ಯಾವ್ ಊರ್ ನಟಿ ಅಂತ ನಾವು ಅಳ್ಬೇಕು? ನಟನೆಗೆ ಇವಳ contribution ಒಂದು ದೊಡ್ಡ ಸೊನ್ನೆ.

ಅದ್ರೂ ಇವಳು ಯಾಕೆ ನಟನಗೆ ಒಪ್ತಿಲ್ಲ ಅನ್ನೋದು ಮಾತ್ರ ರಹಸ್ಯ. ಮುಲಾಜಿಲ್ದೆ ಬಟ್ಟೆ ಬಿಚ್ಚೋಳು, ಮನಸ್ಸು ಬಿಚ್ಚೋಕೆ ಹಿಂದು ಮುಂದು ನೋಡ್ತಿದಾಳೆ. ವಿಚಿತ್ರ ಆದರೂ ನಿಜ!

Anonymous ಅಂತಾರೆ...

ಯಾರೈನೋರೆ,

ಇಲ್ಲೂ ಸೊನಾಲಿ ಬೇಂದ್ರೆ ಬರೀ ಒಂದು ನೆಪ ಮಾತ್ರ ಎನ್ನಿಸುತ್ತಿಲ್ಲವೆ ನಿಮಗೆ? ಇಲ್ಲೂ ಬರಹಗಾರರು ಹೇಳಲು ಹೊರಟಿರುವುದು - ಕನ್ನಡಿಗರು ನಟನೆಗೆ ಇಳಿಯಬೇಕು, ಇವರನ್ನೆಲ್ಲ ನಂಬುವ ಅವಶ್ಯಕತೆಯಿಲ್ಲ ಎಂದು ನನಗನ್ನಿಸುತ್ತಿದೆ. ಇಲ್ಲಿ ಸೊನಾಲಿಗೆ ಅದಿಷ್ಟವಾಗಲಿಲ್ಲ ಇದಿಷ್ಟವಾಗಲಿಲ್ಲ ಅನ್ನುವುದು ವಿಷಯ ಅಲ್ಲವೇ ಅಲ್ಲ ಎನಿಸುತ್ತಿದೆ.

ಇನ್ನು ಕೆಂದ್ರೀಯ ವಿದ್ಯಾಲಯಗಳ ಬಗ್ಗೆ "ಕೆಟ್ಟ ಟೀಕೆ" ಮಾಡಿದಹಾಗೆ ನನಗೇನೂ ಕಾಣುತ್ತಿಲ್ಲ. ಕೇಂದ್ರೀಯ ವಿದ್ಯಾಲಯಗಳ purpose ಏನೇ ಆಗಿರಲಿ, ಅವುಗಳಲ್ಲಿ ಕನ್ನಡ ಕಲಿಸದೆ ಇರುವುದು ಅಕ್ಷಮ್ಯ.

ಯಾವ ರಾಜ್ಯಕ್ಕೆ ಬೇಕಾದರೂ ಕೇಂ.ವಿ. ಮಕ್ಕಳ ತಂದೆತಾಯಿಗಳು transfer ಆಗಬಹುದು ಎನ್ನುವ ಪರಿಸ್ಥಿತಿ ಇರುವುದೇ ಸರಿಯಿಲ್ಲ ನನ್ನ ಪ್ರಕಾರ. ಅವರವರ ರಾಜ್ಯದಲ್ಲೇ ಇದ್ದು "ಕೇಂದ್ರದ ಕೆಲಸ" ಮಾಡಬಹುದಲ್ಲ? ಅಥವಾ ಯಾರು ಹೋಗಲು ಇಷ್ಟ ಪಡುತ್ತಾರೋ ಅಥವಾ ಯಾರನ್ನು ಅವರವರ ಪ್ರತಿಭೆಗಳಿಗಾಗಿ transfer ಮಾಡಲೇಬೇಕೋ ಅವರಿಗೆ ಈ "ಅಲ್ಲಲ್ಲೀ ಭಾಷೆ ಕಲಿಯುವುದು" ಎನ್ನುವ extra ಹೊಣೆ ಇದ್ದೇ ಇರಬೇಕು.

ಇನ್ನು ಹಿಂದಿಯನ್ನು ಕೇಂ.ವಿ.ಗಳವರು ಮೆರೆಸುವ ರೀತಿಯಂತೂ ಪ್ರಜಾಪ್ರಭುತ್ವಕ್ಕೇ ಧಕ್ಕೆತರುವಂಥದ್ದು ಎನ್ನುವುದಂತೂ ನಿಜ. ಅವುಗಳಲ್ಲಿ ರಾಜಾರೋಷವಾಗಿ ಹಿಂದಿ "ರಾಷ್ಟ್ರಭಾಷೆ" ಎಂದು ಹೇಳಿಕೊಡಲಾಗುತ್ತದೆ.

Anivaarya ಅಂತಾರೆ...

ಪ್ರೀತಿಯ ರವಿ,

ನಾನು ಇದೇ ಅನಿಸಿಕೆಯನ್ನೆ ಬೇರೊಂದು ಸೂತ್ರದಲ್ಲಿ (ಬರೀ ಬ್ಯಾಂಕಿಂದಲ್ಲ.....) ಹೇಳಿದ್ದೇನೆ ನೋಡಿ! ಇಲ್ಲಿ, ಸೋನಾಲಿಯ ಕೆಲವು ಅನಿಸಿಕೆಗಳು ಕನ್ನಡಕ್ಕೆ ಸಂಬಂಧವಿಲ್ಲ ಆದ್ರೆ ಯಾವುದೋ ಚಿತ್ರರಂಗದ ತಂಡಕ್ಕೆ, ಚಿತ್ರರಂಗಕ್ಕೆ ಅಂತ ಹೇಳ್ದೆ ಅಷ್ಟೆ. ಆ context ಇಂದ ಸ್ವಲ್ಪ ಆಚೆ ತೆಗೆದು ಹೇಳಿರೋದರ ಬಗ್ಗೆ, specificity to generalization ಬಗ್ಗೆ ನನ್ನ ವಿಚಾರ ವ್ಯಕ್ತ ಪಡೆಸಿದ್ದೇನೆ ಅಷ್ಟೆ; intent ನನಗೂ ಗೊತ್ತು ರವಿ. ಆದರೂ ಧನ್ಯವಾದಗಳು ತಿದ್ದಿದ್ದಕ್ಕೆ.

ಕೇಂದ್ರೀಯ ವಿಧ್ಯಾಲಯಗಳು ನಮ್ಮ ದೇಷವನ್ನ ದಿನ-ರಾತ್ರಿ ಕಾಯುವಂತಹಾ ಸೈನಿಕ ಮಕ್ಕಳಿಗಾಗಿ ಅಂತ ಶುರು ಮಾಡಿದ್ದು ಅನ್ಸುತ್ತೆ. ಆಮೇಲೆ ಅದು ಕೇಂದ್ರ ಸರ್ಕಾರ ನೌಕರರ ಮಕ್ಕಳಿಗೊ ಅಂತ ಆಗಿದೆಯಷ್ಟೆ. ಅವರು ಯಾವಾಗ ದೇಷದ ಯಾವ ಮೂಲೆಗೆ ಹೋಗುತ್ತಾರೋ ಪಾಪ ಅವರಿಗೇ ತಿಳಿಯದು. ಅವರ ಬಗ್ಗೆ, ಅವರ ಮಕ್ಕಳ ಬಗ್ಗೆಯೂ ಸ್ವಲ್ಪ ಯೋಚಿಸಿ ನೋಡಬೇಕಾಗುತ್ತದೆ ಅಲ್ಲ್ವಾ? ಅವರ ಬಯಕೆಗಳೇನು ಅಂತ ನೋಡದೇ ಪ್ರತಿ ರಾಜ್ಯವೂ ಅವರ ಮೇಲೆ ಭಾಷೆ ಹೇರೋದು, ಇದು ಪ್ರಜಾಪ್ರಭುತ್ವವಾಗುತ್ತಾ? ಅದೊಂದೇ ಅಲ್ಲ, ಬರೀ english ಕಲಿಸಿ ಅನ್ನೋದೂ ತಪ್ಪು ಅಲ್ವಾ? ಯಾವುದಾದರೊ ಒಂದು ಭಾರತೀಯ ಭಾಷೆ ಕಲಿಯಲೇಬೇಕು (preferably ಮಾತೃ ಭಾಷೆ)ಅಂತಾದ್ರೆ ಅಲ್ಲಿ ಬರೋ ಮಕ್ಕಳು ಸಾಕಷ್ಟು north indians ಮಕ್ಕಳೇ, ಅದು ಕನ್ನಡಿಗರ ದೃಷ್ಟಿಯಿಂದ ವಿಷಾದನೀಯ, ಅದಿರ್ಲಿ ಬಿಡಿ. ಅಲ್ಲಿ ನಮ್ಮ ಭಾಷೆ ಹೇಳ್ಕೊಡಲ್ಲಾ ಅಂದ್ರೆ ನಮ್ ಮಕ್ಳುನ ಕಳ್ಸೋದ್ ಬೇಡ, ಅಷ್ಟೆ. ಇರ್ಲಿ. ಒಮ್ಮೆ Defence quartersಗೆ ಹೋಗಿ ನೋಡಿ, ಬರೀ punjabis, tamilians, north indians majority ಇರ್ತಾರೆ. ಆರ್ಮಿ ಸ್ಕೂಲೂ ಇದೆ, ಆದ್ರೂ ಅವರು ಯಾವಾಗ ವಾಪಸ್ ಹೋಗ್ತಾರೆ ಅಂತ ಅವ್ರ್ಗೆ ಗೊತ್ತಿರಲ್ಲ ಪಾಪ. ಹಿಂದಿ ಕಲಿಬೇಕಾದದ್ದು ಅವರಿಗೆ ಅನಿವಾರ್ಯ, ಒಳ್ಳೆಯದೂ ಕೂಡ. ಒಂದಾದರೂ ಸಾಮಾನ್ಯ ಭಾರತೀಯ ಭಾಷೆ ಬೇಡ್ವೆ? ಹಾಗಂತಾ ಕನ್ನಡ (ಅಥ್ವಾ ಮೂರು ವರ್ಷಕ್ಕೊಮ್ಮೆ ಒಂದು ಹೊಸ ಭಾಷೆ), ಹಿಂದಿ, ಇಂಗ್ಲೀಶ್ ಮೂರ್ ಮೂರ್ ಭಾಷೆ ಹೇಳ್ಕೊಡ್ಬೇಕಾಗುತ್ತೆ, ಅದು ಸರಿನಾ ಯೊಚ್ಸಿ. ಅವ್ರು ಪಾಲಿಸೋದು ಕೇಂದ್ರೀಯ syallabi. ಹೀಗಿದ್ದಾಗ ಹೇಗೆ ಸಾಧ್ಯ ರವಿ? ಅವರ mission statements ನೋಡಿ:

http://kvsangathan.nic.in/mission1.aspx

ಅದು ಹೇಗೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯೋ ಗೊತ್ತಿಲ್ಲ. ನಮಗೇ ಬೇಕಾದನ್ನ ನಾವು ಆರಿಸಿಕೊಳ್ಳೋ ಹಕ್ಕು ನಮಗೆಂದೂ ಇರುತ್ತೆ. ಕೆ.ವಿಗೆ ಅವರ ಮಕ್ಕಳುಗಳನ್ನ ಕಳಿಸಬಯಸುವವರಿಗೆ ಅದರ ಅರಿವು ಉಂಟು.

ಬರೀ ಕೆ.ವಿ ಯಾಕೆ, ನಮ್ಮ ಶಾಲೆಗಳಲ್ಲೂ ಹಿಂದಿ ರಾಷ್ಟ್ರ ಭಾಷ ಅಂತಾನೇ ಹೇಳ್ಕೊಡೋದು, ನಾನು(ಅನೇಕರು) ಅದನ್ನ ಒಪ್ಪುತ್ತೇನೆ (ಒಪ್ಪುತ್ತಾರೆ; ಬರೀ ಒಪ್ಪೋದಲ್ಲ, ನಂಬೋದೂ ಕೂಡ). ಇಲ್ಲೂ ಅಷ್ಟೆ, ಈಗಲೂ ಅಷ್ಟೆ ಯಾರೇ ಕೇಳಿದರೂ ನಾನು ಹಿಂದಿ ನನ್ನ ರಾಷ್ಟ್ರ ಭಾಷೆ ಅಂತಾನೇ ಹೇಳ್ತೀನಿ (ನನಗೆ english ನನ್ನ ರಾಷ್ಟ್ರ ಭಾಷೆ ಅನ್ನಕಾಗ್ಲೀ, ನಮಗೆ ರಾಷ್ಟ್ರ ಭಾಷೆಯೇ ಇಲ್ಲ ಅನ್ನಕ್ಕಾಗ್ಲಿ ಇಷ್ಟ ಇಲ್ಲ), ನನ್ನ ಮಾತೃ ಭಾಷೆ ಕನ್ನಡ ಅನ್ನೋದು ನನಗೆ ಹೆಮ್ಮೆಯ ವಿಷಯ.

ಇದು debatable ಬಿಡಿ, ಆದ್ರಿಂದಾ ಇಲ್ಲಿ ಅದರ ಬಗ್ಗೆ ದಯವಿಟ್ಟು ಚರ್ಚೆ ಬೇಡ, ಅದು ಎಲ್ಲೆಲ್ಲಿಗೋ ಹೋಗುತ್ತೆ.

ಇದೆಲ್ಲಾ ಯಾಕೆ ರವಿ. ಬೆಂಗಳೂರಿನಲ್ಲಿ (ಅದ್ಯಾಕೆ ಮಂಡ್ಯ, ಮೈಸೂರ್, ತುಮ್ಕೂರ್) ಒಂದು ರೌಂಡ್ ಹಾಕುದ್ರೆ ಗೊತ್ತಾಗುತ್ತೆ ಅಲ್ವೆ, ಎಲ್ಲಿ ನೋಡುದ್ರೂ "We are proud to follow CBSE/ICSE syllabus" ಅಂತ! ತಂದೆ ತಾಯಿಗಳಿಗೂ ಇದೇ ಬೇಕು, ಗರ್ವದಿಂದ ಹೇಳ್ಕೊಳ್ತಾರೆ, ಅವರಿಗೆ state syllabus ಅಂತ ಹೇಳ್ಕೊಳಕ್ಕೆ ನಾಚ್ಕೆ. ಜನರಿಗೆ Delhi Public Schools ಬೇಕು, International School ಬೇಕು. ಅದರಲ್ಲೂ option ಸಿಗುತ್ತೆ ಅವ್ರ್ಗೆ. ಕನ್ನಡ ಹೇಳ್ಕೊಡ್ದೆ ಇದ್ದ್ರೂ ಬೇಡ ನಮ್ ಮಕ್ಕ್ಳು english ಚೆನ್ನಾಗ್ ಕಲ್ತ್ರೆ ಸಾಕು ಅನ್ನೋ ಮನೋಭಾವ.

ಆದ್ರಿಂದ ಕೊಳಕು ಎಲ್ಲೋ ಒಂದ್ ಕಡೆ ಇಲ್ಲ ರವಿ, ಸುಚಿಯಾಗಿಡ್ಬೇಕಾದ್ರೆ ನಾವು ಮೊದಲು ಬದಲಾಗ್ಬೇಕು.

ಕನ್ನಡದ ಮೇಲೆ ಹೀಗೆ ಪ್ರೇಮ ಇಡೋಣ, ಅದನ್ನ ಬಳಿಸಿ ಬೆಳೆಸೋಣ.

ಪ್ರೀತಿಯ,
ಯಾರಯ್ಯ

Anonymous ಅಂತಾರೆ...

ಯಾರಯ್ಯನವರೇ,
ನೋಡಪ್ಪಾ ನಮ್ಮ ಭಾಷೆ ಕನ್ನಡ. ಇದರಲ್ಲೇ ನಮ್ಮ ಬದುಕು, ಕಲಿಕೆ, ಹೊಟ್ಟೆಪಾಡು ಎಲ್ಲ ಆಗಬೇಕು. ಏಕಂದ್ರೆ ಪ್ರಪಂಚದ ಎಲ್ಲಾ ಭಾಷಾ ಶಾಸ್ತ್ರಜ್ಞರು, ವಿಜ್ಞಾನಿಗಳೂ ನಮಗೆ, ತಾಯಿನುಡಿಯಲ್ಲೇ ನಿಮ್ಮ ಏಳಿಗೆ ಸಾಧ್ಯ ಅಂತ ಶೋಧಿಸಿ ಸಾಧಿಸಿ ತೋರಿಸಿ ಕೊಟ್ಟಿದ್ದಾರೆ. ನಮಗೆ ಕನ್ನಡದ ಬಗ್ಗೆ ಅಭಿಮಾನ ಇದೆ ಅದಕ್ಕೋಸ್ಕರ ಸಂಘ-ಸಂಸ್ಥೆ ಕಟ್ಕೊಂಡಿದೀವಿ ಅಂತ ಅನ್ನೋ ಮನಸ್ಥಿತಿ ಬಿಟ್ಟು ನಮ್ಮ ಕನ್ನದ ಜನಾಂಗದ ಏಳಿಗೆ ಹೇಗೆ ಮತ್ತು ಯಾವುದರಿಂದ ಸಾಧ್ಯ? ನಮ್ಮ ಏಳಿಗೆಗೆ ಅಡ್ಡಿಯಾಗ್ತಿರೋದು ಯಾವುದರಿಂದ ಅಂತ ಸ್ವಲ್ಪ ಯೋಚಿಸಿ ನೋಡಿ. ನೀವು ಈ ಬ್ಲಾಗ್ ನ ಕನ್ನಡ ಅಭಿಮಾನಿಗಳು ಕಟ್ಕೊಂಡಿರೋ ಟೈಮ್ ಪಾಸ್ ಸಂಘ್ಹ ಅಂದ್ಕೊಂಡಿದ್ರೆ ಅಭಿಪ್ರಾಯ್ ಅಬದಲಾವಣೆ ಮಾಡ್ಕೊಂಡು ಸುಮ್ನೆ ಎಲ್ಲದ್ರ ಮಧ್ಯ ನಂದೊಂದಿರ್ಲಿ ಅಂತ ನಿಮ್ಮ ಸ್ವಂತ ವೈಯುಕ್ತಿಕ ಹೇಳಿಕೆಗಳನ್ನೇ ಸಾರ್ವತ್ರಿಕವಾಗಿ ಕೊಡಕ್ ಬರ್ಬೇಡಿ. ನಮ್ಮ ಭಾಷೆಯಲ್ಲೇ ಆಡಳಿತ, ಕಲಿಕೆ, ಉದ್ಯೋಗಗಳನ್ನು ಮಾಡುವುದಾದರೆ ಯಾವ ಕ್ಷೇತ್ರದಲ್ಲಾದರೂ ನಾವು ಯಶಸ್ಸಿನ ಶಿಖರ ಏರಲು ಸಾಧ್ಯ. ಪ್ರಪಂಚದ ಏಳಿಗೆ ಹೊಂದಿದ ದೇಶಗಳೆಲ್ಲಾ ತಮ್ಮ ತಾಯ್ನುಡಿಯ ಸುತ್ತಲೇ ಕಟ್ತಿಕೊಂಡವುಗಳು. ನಾವೂ ಹಾಗೇ ಮಾಡಬೇಕು. ಅದೇ ನಮ್ಮ ಜನಾಂಗಕ್ಕೆ (ಕನ್ನಡಿಗರು ಎನ್ನುವುದು ಒಂದು ಜನಾಂಗ) ಅತ್ಯಂತ ಸಹಜವೂ ಸರಳವೂ ಆದದ್ದು ಅನ್ನೋದನ್ನ ನೀವು ಒಪ್ಪೋದಿಲ್ಲ ಅಂದ್ರೆ ಇಲ್ಲಿ ಬರ್ಯೋದ್ ಯಾವ್ದೂ ನಿಮ್ಮ ತಲೆಗೆ ಹೋಗಲ್ಲ.
ದೊಡ್ಡ ದೇಶ ಪ್ರೇಮಿ ಥರಾ ಒಂದು ದೇಶಕ್ಕೆ ಒಂದೇ ಭಾಷೆ ಇರ್ಬೇಕು ಅನ್ನೋ ಅಭಿಪ್ರಾಯದಲ್ಲಿ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅನ್ನೋದೇ ಆಗ್ಲಿ, ಕನ್ನಡದವರೆಲ್ಲ ಅದನ್ನು ಒಪ್ಕೋಬೇಕು ಅಂತ ಅನ್ನೋದಾಗ್ಲಿ, ಹಾಗ್ ಒಪ್ಕೊಳ್ಳೋದೆ ಶಾಣ್ಯಾತನ, ಇಲ್ದಿದ್ರೆ ದೇಶ ಒಡ್ಯುತ್ತೆ ಅನ್ನೋದಾಗ್ಲಿ ತುಂಬಾ ಬಾಲಿಶವಾದ ಮಾತುಗಳು.ಅದನ್ನು ಯಾವ್ದಾದ್ರು ನರ್ಸರಿ ಮಕ್ಕಳಿಗೆ ಹೇಳ್ಹೋಗಿ. ನಿಮ್ ಥರಾ ಹಿಂದಿನಾ ಹೇರಕ್ ಹೋಗಿದ್ದಕ್ಕೆ ಈಶಾನ್ಯ ರಾಜ್ಯಗಳಲ್ಲಿ ಅಷ್ಟೊಂದು ದೇಶದ ಒಗ್ಗಟ್ಟು ಮುರಿಯೋ ಚಟುವಟಿಕೆ ನಡೀತಿರೋದು ಅನ್ನೋದ್ನ ಅರ್ಥಮಾಡ್ಕೊಳ್ಳಿ. ಸುಮ್ನೆ ಹಿಂದಿ ರಾಷ್ತ್ರಭಾಷೆ ಅಂತ ನಮ್ ಶಾಲೇಲೂ ಹೇಳ್ಕೊಟ್ರು. ಅದು ಸುಳ್ಳು ಅಂತ ಗೊತ್ತಿದ್ರೂ ಅದನ್ನು ನಾನು ಒಪ್ತೀನಿ ಅಂದ್ರೆ . . . ಇದು ಸೆಗಣಿ, ಹಾಗಂತ ನಂಗೊತ್ತು ಆದ್ರೂ ಇದನ್ನು ತಿಂತೀನಿ ಅಂತ ವಾದ್ ಮಾಡಿದ ಹಾಗೆ ಅಲ್ಲವೇ ಮೂರ್ಖ ಶಿಖಾಮಣಿಗಳೇ. ದೇಶ ಒಡೀ ಬಾರದು ಅಂದ್ರೆ ಇದರ ವೈವಿಧ್ಯತೆಗಳನ್ನು ಕಾಪಾಡಿಕೊಳ್ಳಬೇಕು ಅಂತಂದ್ರೆ ನಿಮಗೆ ಅರ್ಥವೇ ಆಗೋಲ್ಲ. ಹಿಂದಿಗೆ ಅಲ್ಲೇನೋ ವಿನಾಯ್ತಿ ಕೊಡ್ತೀರ. ನಿಮ್ಮ ದೇಶ ಪ್ರೇಮ, ಕನ್ನಡ ಪ್ರೇಮ ಒಪ್ಕೋತೀನಿ. ಆದ್ರೆ ನಮ್ಮ ಏಳಿಗೆಗೆ ಇರೋ ಮಾರ್ಗ ನಮ್ಮ ಭಾಷೇನ ನಮ್ಮ ಎಲ್ಲ ವ್ಯವಹಾರಗಳಲ್ಲಿ ಬಳಸೋದು ಮಾತ್ರ. ನಮಗೆ ಕೆಲ್ಸ ಸಿಗ್ಬೇಕು ಅಂದ್ರೆ ನಮ್ಮ ನಾಡಲ್ಲಿ ನಾವು ಬದುಕು ಸಾಗ್ಸಕ್ಕೆ ಹಿಂದಿ ಕಲೀಬೇಕು ಅಂದ್ರೆ . . . ಧಿಕ್ಕಾರ ನಿಮ್ಮ ಹಿಂದಿ ಗುಲಾಮಗಿರಿ ಮನಸ್ಥಿತಿಗೆ.
ಒಂದು ಸಣ್ಣ ಘಟನೆ ಹೇಳ್ತೀನಿ ಕೇಳಿ. ತಿಂಗಳ ಹಿಂದೆ ಬೆಂಗಳೂರಿನ ಫೋರಂ ಮಳಿಗೆಗೆ ಹೋಗಿದ್ದೆ. ಅಲ್ಲಿನ ಸೆಕ್ಯುರಿಟಿ ಗಾರ್ಡ್, ಪಾರ್ಕಿಂಗ್ ಬಗ್ಗೆ ಹಿಂದೀಲ್ ಹೇಳಕ್ ಬಂಡ. ಕನ್ನಡದಲ್ ಹೇಳಪ್ಪ ಅಂತ ತುಂಬಾ ಪೊಲೈಟ್ ಆಗೇ ಹೇಳೀದ್ರೆ, ಕ್ಯಾ ಕನ್ನಡ? ಜಾವ್, ಜಾವ್ ಅಂತ ಭಿಕ್ಷುಕರನ್ನು ಓಡ್ಸೋ ಹಾಗ್ ನಡ್ಕೊಂಡ. ಇದು ಕನ್ನಡ ನಾಡು . . . ಇಲ್ಲಿ ಕನ್ನಡ ನಡೀಬೇಕು. ಹಿಂದಿ ಅಲ್ಲ ಅನ್ನೋದನಾದ್ರೂ ಒಪ್ತೀರ ಅಂದ್ಕೋತೀನಿ. ಹಿಂದಿ ರಾಷ್ಟ್ರ ಭಾಷೆ ಅಂತ ಒಪ್ಪ್ಕಳ್ಳೋದು ಅಂದ್ರೆ ಹಿಂದಿನಾ ದೇಶದ ಯಾವ ಮೂಲೆಗ್ ಹೋದ್ರೂ ಆಡಬಹುದು. ದೇಶದ ಎಲ್ಲ ಜನರೂ ಕಲೀಬೇಕು ಅಂತ ಅರ್ಥ ಅಲ್ಲವೇ . .ಮೂರ್ಖ ಶಿಖಾಮಣಿಗಳೆ.
ನಿಮ್ಮನ್ನು ನೀವು ಹಿಂದಿಯವರಿಗೆ ಮಾರ್ಕೊಂಡಿದ್ರೆ . . ತೆಪ್ಪಗೆ ಬೇರೆ ಬ್ಲಾಗ್ ನೋಡ್ಕೊಂಡ್ ಇರಿ. ಇಲ್ದಿದ್ರೆ ವೈವಿಧ್ಯತೆ ಕಾಪಾಡ್ಕೊಂಡು ದೇಶ ಒಡೀದೆ ಇರೋ ಹಾಗ್ ನೋಡ್ಕೊಳ್ಳೋದು ಹ್ಯಾಗೆ ಅಂತ ಚೂರು ಯೋಚಿಸಿ.
ಯಾತ್ರಿಕ ಧರ್ಮ ಅಂತ ಒಂದಿರುತ್ತೆ ಅದನ್ನು ಹೊರತು ಪಡಿಸಿದರೆ ನಾವು ಯಾವ ಪ್ರದೇಶಕ್ಕೆ ಹೋದರೂ ಅಲ್ಲಿನ ಭಾಷೆಯನ್ನು ಮಾತಾಡೋದೂ, ಅಲ್ಲಿನ ಸಂಸ್ಕೃತಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದೂ ನಿಜವಾದ ದೇಶ ಪ್ರೇಮವಾಗುತ್ತೆ. ನಿಮ್ಮ ಚಿಂತನೆ ಅಪ್ಪಟ ದೇಶದ್ರೋಹವಾಗುತ್ತದೆ.
ಇದು ಈ ಬ್ಲಾಗ್ ಬರಹಗಳ ಆಶಯ. ಇದನ್ನು ಅರ್ಥ ಮಾಡ್ಕೊಂಡು . . . ಈ ನಿಲುವು ಸರಿ ಇದೆ ಅನ್ಸುದ್ರೆ ಒಪ್ಕೊ. ಇಲ್ಲ್ . . . ಈ ಕಡೆ ತಲೆ ಹಾಕ್ದೆ ಇರು... ನಿನ್ನ ರಾಷ್ತ್ರೀಯ ವಾದ ಏನಾದ್ರೂ ಇದ್ದರೆ ಅದನ್ನು ಮಂದಿಸು, ಚರ್ಚೆ ಮಾಡೋಣ. ಅದು ಬಿಟ್ಟು ನಾನಿರೋದೆ ಹೀಗೆ, ಎಲ್ರೂ ಹೀಗೆ ಇರ್ಬೇಕು ಅಂದ್ರೆ . . . ತಪ್ಪಾಗುತ್ತೆ.

ನಮಸ್ಕಾರ
ಚಂದ್ರಶೇಖರ

Anonymous ಅಂತಾರೆ...

ಯಾರೈನೋರೆ, ನೀವು ಹೇಳಿದ್ದು...

ನನಗೆ english ನನ್ನ ರಾಷ್ಟ್ರ ಭಾಷೆ ಅನ್ನಕಾಗ್ಲೀ, ನಮಗೆ ರಾಷ್ಟ್ರ ಭಾಷೆಯೇ ಇಲ್ಲ ಅನ್ನಕ್ಕಾಗ್ಲಿ ಇಷ್ಟ ಇಲ

ನಿಮ್ಮ ಮಾತಿಗೆ ಭಾರತಕ್ಕೆ "ಒಂದೇ ಒಂದು ರಾಷ್ಟ್ರಭಾಷೆ ಇರಬೇಕು" ಎನ್ನುವ ಬಣ್ಣ ಇದೆ. ಇಲ್ಲೇ ನೀವು ತಪ್ಪು ಮಾಡುತ್ತಿರುವುದು. ಭಾರತವನ್ನು ನೀವು ಹೋಲಿಸಬೇಕಾದ್ದು ಯೂರೋಪಿಗೇ ಹೊರತು ಅಮೇರಿಕಕ್ಕಲ್ಲ. ಯೂರೋಪಿನಲ್ಲಿ ಹೋಗಿ ಹೇಳಿ ನೋಡಿ - "ಫ್ರೆಂಚ್ ಯೂರೋಪಿನ ರಾಷ್ಟ್ರಭಾಷೆ" ಅಂತ! ಮುಂದಿನ ಸೆಕೆಂಡಿನಲ್ಲೇ ಯುದ್ಧ!

ಆದ್ದರಿಂದ ಒಂದು ರಾಷ್ಟ್ರಕ್ಕೆ ಒಂದೇ ರಾಷ್ಟ್ರಭಾಷೆ ಇರಬೇಕು ಎಂದು ನೀವು ಹೇಳುತ್ತಿರುವುದು ಭಾರತಕ್ಕೆ ಅನ್ವಯಿಸುವುದಿಲ್ಲ. ಅದೇ ರಾಷ್ಟ್ರವೆನ್ನುವುದರ ವ್ಯಾಖ್ಯಾನ ಎಂದು ನೀವು ವಾದಿಸುವುದಾದರೆ ಭಾರತ ಒಂದು ರಾಷ್ಟ್ರವೇ ಅಲ್ಲ ಎಂದು ಸಿದ್ಧವಾದೀತು. ಇದು ನಮ್ಮಿಬ್ಬರಿಗೂ ಅಪ್ರಿಯವಾದದ್ದು.

ಇನ್ನು ಕೇಂ.ವಿ.ಗಳೆಲ್ಲ ಈ ಮೇಲಿನ ತಪ್ಪುಗಳನ್ನೇ ಮಾಡುತ್ತಿರುವ ಸಂಸ್ಥೆಗಳು. ಅವುಗಳ ಮಾತೇಕೆ, ಬಿಡಿ.

Anivaarya ಅಂತಾರೆ...

ಪ್ರೀತಿಯ ರವಿ,

"ನಿಮ್ಮ ಮಾತಿಗೆ ಭಾರತಕ್ಕೆ "ಒಂದೇ ಒಂದು ರಾಷ್ಟ್ರಭಾಷೆ ಇರಬೇಕು" ಎನ್ನುವ ಬಣ್ಣ ಇದೆ. ಇಲ್ಲೇ ನೀವು ತಪ್ಪು ಮಾಡುತ್ತಿರುವುದು"

ಇದು ಸ್ವಲ್ಪ debatable ಅಂತ ಹೇಳಿದ್ದೇನೆ. ತಪ್ಪು-ಸರಿ ಅವರವರಿಗೆ ಬಿಟ್ಟಿದ್ದು, ನೀವೇ ಹೇಳುದ್ರಲ್ಲ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬೇಡ ಅಂತ. ಕೆಲವರಿಗೆ (ಕನ್ನಡ ಅಭಿಮಾನಿಗಳೆ) ನಿಮ್ಮದು ತಪ್ಪು ಅನ್ನಿಸ ಬಹುದು, ಆದ್ರಿಂದ ದಯವಿಟ್ಟು ಈ ಚರ್ಚೆ ಜಾಸ್ತಿ ಬೇಡ ಅನ್ಸುತ್ತೆ.

ಆದ್ರೂ.

ನೀವು ಯೂರೇಪಿಗೆ ಹೋಲಿಸಿದ್ದು ಒಂದ್ ತರಾ ಸರಿನುವೇ, ಸ್ವಲ್ಪ ಅಷ್ಟ್ ಸರಿ ಇಲ್ಲಾನುವೆ, ಅಲ್ವಾ? ನಮ್ಮದು subcontinent ಆದ್ರೂ ಒಂದು ದೇಷವನ್ನ ಒಂದು ಖಂಡಕ್ಕೆ ಹೋಲಿಸುವುದು, ಭಾರತವನ್ನ ಹಾಗೇ ನೋಡೋದು ಸ್ವಲ್ಪ ಕಷ್ಟ. ಯಾಕಂದ್ರೆ ಯೂರೋಪ್ ಬಿಡಿಬಿಡಿಯಾಗಿದ್ರೊ ನಡ್ಯುತ್ತೆ, ಅವರಿಗೆ Unity ಅನ್ನೋದು ಬೇಕಿಲ್ಲ. ಹಾಗ್ ಭಾಷೆಯ ಮೇಲೆ ವಿಭಾಜನೆ ಮಾಡ್ಬೇಕಾದ್ರೆ ಕೊಡವರಿಗೆ ಅವರದೇ ರಾಜ್ಯ ಕೊಟ್ಟು, ಮಂಗಳೂರನ್ನ ತುಳು ರಾಜ್ಯ ಮಾಡಬೇಕೇನೋ; ಅವಗಳು ಕರ್ನಾಟಕದ ಅಂಗಗಳೇ ಆದ್ರೂ ಮೂಲತಹಾ ಅವರವರ್ದೇ ಭಾಷೆ ಮಾತಾಡ್ತಾರೆ ಅಲ್ವಾ? ಅವರಿಗೆ ಕನ್ನಡ optional ಮಾಡಕಾಗುತ್ತಾ? ಇದು ದೇಷ ದ್ರೊಹ ಆಗುತ್ತೆ. ಅವರು "ಕನ್ನಡ" ನಮ್ಮ ಜಿಲ್ಲೆಯ (ರಾಜ್ಯ)ಭಾಷೆಯಲ್ಲ ಅಂದ್ರೆ ಅದು ಸರಿಯೇ? ಈ ಉದಾಹರಣೆ ಅಷ್ಟ್ ಸರಿ ಬರಲ್ಲ ಗೊತ್ತು, ಆದ್ರೆ ನಿಮ್ಮ ಹೋಲಿಕೆ/ಉಧಾಹರಣೆ ಸರಿ ಇದ್ದ್ರೆ ಇದೂ ಸರಿನೆ ಇರ್ಬಹುದು. ನೀವು ರಾಜ್ಯನ ರಾಷ್ಟ್ರಕ್ಕೆ ಹೋಲ್ಸಿದ್ರೆ, ನಾನು ಜಿಲ್ಲೆನ ರಾಜ್ಯಕ್ಕೆ ಹೋಲಿಸ್ದೆ ಅಷ್ಟೆ.

ಓಕೆ ಓಕೆ ಓಕೆ!! ಎಲ್ಲೆಲ್ಲಿಗೋ ಹೋಗದ್ ಬೇಡ ಬಿಡಿ.

ಹಿಂದಿ ರಾಷ್ಟ್ರ ಭಾಷೆ ಅಂತ ಅನ್ನೋದ್ ಬೇಡ ಬಿಡಿ. ನಿಮ್ಮ ಅನಿಸಿಕೆಯನ್ನ ಸಂಪೂರ್ಣವಾಗಿ ಆದರಿಸುತ್ತೇನೆ, I respect it sincerely. ರಾಷ್ಟ್ರ ಭಾಷೆ ಅಂತ ಒಪ್ಪೋದು ಕಷ್ಟ. ಆಗಲ್ಲ. ನಿಜ. ಇರ್ಲಿ. ಆದ್ರೆ ನನಗೆ ರಾಷ್ಟ್ರಭಾಷೆ ಅನ್ನೋದು representative, symbolic; ಹಾಕಿ, ನವಿಲು, ಹುಲಿ, ಕಮಲ, ಆಲದ ಮರ, ರಾಷ್ಟ್ರ ಧ್ವಜ, ರಾಜಧಾನಿ, national anthem, ಇದ್ದ ಹಾಗೆ. ನನ್ಗೆ ಕನ್ನಡ ಮೊದಲು, ಪ್ರಮುಖ, ಆದ್ರೆ ಹಿಂದಿನೊ ಸ್ವಲ್ಪ ಮಟ್ಟಿಗೆ ಮುಖ್ಯ, ನಿಮಗೆ ಬೇಡ್ವೆ ಬೇಡ, ಇದನ್ನೇ ಪ್ರಜಾಪ್ರಭುತ್ವ ಅನ್ನೋದು ಅಲ್ವಾ?

ನಾನು ಕಳೆದ 7-8 ವರ್ಷ ಜಾಸ್ತಿ ಭಾರತದ ಆಚೆನೇ ಇದ್ದೇನೆ. ಭಾರತದ ಬೇರೆ ಬೇರೆ ಕಡೆಯಿಂದ ಬಂದ ಸ್ನೇಹಿತರು ಸಿಗ್ತಾನೆ ಇರ್ತ್ತಾರೆ - ಕನ್ನಡಿಗರು, ಹಿಂದಿ, ಅಸ್ಸಾಮಿ, ಬೆಂಗಾಲಿ, ಮುಂಬೈ, ಗುಜ್ಜು, ಹಿಮಾಚಲ, ತಮಿಳರು, ಪಂಜಾಬಿ, ಮಲಯಾಳಿ etc etc. ನಾವೆಲ್ಲಾ, ತಮಿಳರೂ ಕೂಡ (ಆಶ್ಚರ್ಯ ಅನ್ನಿ), ಹಿಂದಿಯಲ್ಲೇ ಮಾತಾಡ್ತೀವಿ, ತುಂಬಾ ಖುಷಿ ಆಗುತ್ತೆ. ನಿಜ್ವಾಗ್ಲೂ ಹೇಳ್ತೀನಿ Hindi has integrated us as Indians more than English could ever have, atleast outside India ಅನ್ಸುತ್ತೆ. May be that is why I am now even more convinced than ever before ಅನ್ಸುತ್ತೆ.

ಇರಲಿ ಬಿಡಿ, ನಮ್ಮ ನಮ್ಮ ವಯ್ಯಕ್ತಿಕ ಅನುಭವಗಳು, ಅನಿಸಿಕೆಗಳು ಬೇರಾದರೂ ಪರ್ವಾಗಿಲ್ಲ, ಕನ್ನಡ ಅನ್ನೋದು ಒಂದು ಇದ್ದ್ರೆ ಸಾಕು.

ತಪ್ಪಿದ್ದಲ್ಲಿ ಕ್ಷಮೆ ಇರಲಿ.

ಕನ್ನಡ ಪ್ರೇಮ, ಕಾರ್ಯ ಹೀಗೆ ಮುಂದುವರೆಯಲಿ.

Anivaarya ಅಂತಾರೆ...

ನಾನು ಸುಮ್ನೆ ಒಂದು ಬ್ಲಾಗ್ ಶುರು ಮಾಡಣ ಅಂತ ನೋಡ್ದೆ, ಏನೊ ೨-೩ ಹೆಸ್ರು ಕೇಳ್ತು. ಅದ್ರಲ್ಲಿ "ಅನಿವಾರ್ಯ" ಅಂತ ಕೊಟ್ಟೆ. ಈಗ ನನ್ನ ಹೆಸರು ಅನಿವಾರ್ಯ ಅಂತ ತೋರ್ಸ್ತಾ ಇದೆ. ಯಾರಿಗಾದರೂ, ನನಗೆ ಏನೇ ಬೈಬೇಕಿದ್ದ್ರು ಯಾರಯ್ಯನನ್ನೇ ಬಳಿಸಿ, ಅನಿವಾರ್ಯ ಉಪ್ಯೊಗ್ಸೋದು ಅನಿವಾರ್ಯವೇನಲ್ಲ :) ಯಾರಯ್ಯ ಈ ಅನಿವಾರ್ಯ ಅನ್ಕೊಬೇಡಿ, ಇದು ಯಾರಯ್ಯಾನೇ :)

ಪ್ರೀತಿಯ,
ಯಾರಯ್ಯ

Anonymous ಅಂತಾರೆ...

ಯಾರೈನೋರೆ,

ಭಾರತಕ್ಕೆ ಒಂದೇ ರಾಷ್ಟ್ರಭಾಷೆ ಎನ್ನುವುದು ಸರಿಯಲ್ಲ ಎಂದೆನೇ ಹೊರತು ರಾಷ್ಟ್ರಭಾಷೆಗಳು ಅನೇಕವಿರಬಾರದು ಎನ್ನಲಿಲ್ಲವಲ್ಲ ನಾನು? 'representative, symbolic' ಆಗಿ ಒಂದಕ್ಕಿಂತ ಹೆಚ್ಚು ಭಾಷೆಗಳಿದ್ದರೇನು ತೊಂದರೆ?

ಅಂದಹಾಗೆ ಭಾರತದ ಸಂವಿಧಾನವನ್ನು ಓದಿ, ಅದರಲ್ಲಿ ಯಾವೊಂದು ಭಾಷೆಯನ್ನೂ ’ರಾಷ್ಟ್ರಭಾಷೆ’ ಎಂದು ಕರೆದಿಲ್ಲ ಎನ್ನುವುದನ್ನು ತಿಳಿದಿರುತ್ತೀರಿ ಎಂದುಕೊಂಡಿದ್ದೇನೆ. ಹಿಂದಿ ಮತ್ತು ಇಂಗ್ಲೀಷುಗಳು ’ಅಧಿಕೃತ ಭಾಷೆ’ ಅಥವಾ ’official language' ಎನಿಸಿಕೊಳ್ಳುತ್ತವೆಯೇ ಹೊರತು ’ರಾಷ್ಟ್ರಭಾಷೆ’ ಗಳಲ್ಲ.

ಅದೇ ಯೂರೋಪಿನಲ್ಲಿ 21-ಚಿಲ್ಲರೆ ಅಧಿಕೃತ ಭಾಷೆಗಳಿವೆ.

ಇನ್ನು ಯೂರೋಪಿನವರಿಗೆ Unity ಬೇಕಿಲ್ಲ ಎನ್ನುವುದು ಸರಿಯಿಲ್ಲ. ಬೇಕಾಗಿರುವುದರಿಂದಲೇ ಒಗ್ಗೂಡುತ್ತಿರುವುದು ಅವರು.

ಇನ್ನು ಕೊಡವರ ಮಾತು. ಕೊಡವ ಭಾಷೆಯನ್ನು ಕಡೆಗಣಿಸಿ ಎಂದು ಹೇಳುತ್ತಿರುವುದು ’ರಾಷ್ಟ್ರಭಾಷೆ’ ವಾದಿಗಳಾದ ನಿಮ್ಮಂಥವರೇ ಹೊರತು ನಾನಲ್ಲ. ವೈವಿಧ್ಯತೆಯನ್ನು ಮೆರೆಸಲು ಹೇಳುತ್ತಿರುವುದು ನಾನೇ ಹೊರತು ನೀವಲ್ಲ. ಕೊಡವರ ಮೇಲೆ ಬೇರೊಂದು ಭಾಷೆಯನ್ನು ಹೇರಲು ಹೊರಟಿರುವುದು ನೀವೇ ಹೊರತು ನಾನಲ್ಲ. ವಿವಿಧತೆಯನ್ನು ಅಳಿಸಿಹಾಕಲು ಹೊರಟಿರುವುದು ನೀವೇ ಹೊರತು ನಾನಲ್ಲ.

ಆದ್ದರಿಂದ ಕೊಡವರಿಗೆ ಕರ್ನಾಟಕದಲ್ಲಿ ಸರಿಹೊಂದುತ್ತಿಲ್ಲ ಎನ್ನುವ ಪರಿಸ್ಥಿತಿ ಹುಟ್ಟುವುದಕ್ಕೆ ನನ್ನಿಂದ ಸಾಧ್ಯವಿಲ್ಲ, ನಿಮ್ಮಿಂದ ಮಾತ್ರ.

ಅಂದಹಾಗೆ - ಯೂರೋಪಿನ ರಾಜ್ಯಗಳೊಳಗೂ ಈ ರೀತಿ ಭಾಷಾ ಗುಂಪುಗಳಿವೆ. ಸ್ಪೇನಿನಲ್ಲಿ ಕ್ಯಾಟಲೂನ್ ಜನರಿದ್ದಾರೆ, ನೆದರ್ಲ್ಯಾಂಡ್ಸಿನಲ್ಲಿ ಲಿಂಬೂರ್ಗ್ / ಫ್ರೀಸ್ ಜನರಿದ್ದಾರೆ. ಅವರ ಭಾಷೆಗಳಿಗೂ ಆಯಾ ರಾಜ್ಯಗಳ ’ಪ್ರಚಲಿತ’ ಭಾಷೆಗಳಿಗೂ ಬಹಳ ವೆತ್ಯಾಸಗಳಿವೆ. ಇಂತಹ ರಾಜ್ಯಗಳು ನಿಮ್ಮ ಪ್ರಕಾರ ಒಡೆದುಹೋಗಬೇಕಿತ್ತು. ಒಡೆದಿಲ್ಲವಲ್ಲ? ಕಾರಣ ಏನು ಗೊತ್ತಾ? ಆಯಾ ರಾಜ್ಯಗಳು ವಿವಿಧತೆಯನ್ನು ಕಣ್ಣಿಗೊತ್ತಿಕೊಂಡು ಪೂಜಿಸಿವುದೇ ಕಾರಣ. ನಿಮ್ಮಂತೆ ವಿವಿಧತೆಯೇ ನಮ್ಮ ಶತ್ರು ಎಂದುಕೊಳ್ಳುವುದರಿಂದಲೇ ಒಡೆಯುವಿಕೆ.

ಇನ್ನು ಅನಿವಾಸಿ ಭಾರತೀಯರಿಗೋಸ್ಕರ ಹಿಂದಿ ಬೇಕು ಎಂದು ನೀವು ವಾದಿಸುತ್ತಿರುವುದು ಸ್ವಲ್ಪ ಬಾಲಿಶವಾಗಿಯೇ ಇದೆ. ಅಲ್ಲ ಸ್ವಾಮಿ - ಬೆರಳೆಣಿಕೆಯಷ್ಟು (ಕೋಟಿ? ಲಕ್ಷ?) ಅನಿವಾಸಿ ಭಾರತೀಯರಿಗೋಸ್ಕರ ದೇಶದ ಒಳಗಡೆ ಹೇಸಿಗೆ ಮಾಡುವುದು ಸರಿಯೆ? ವ್ಯವಸ್ಥೆಯನ್ನು ಕಟ್ಟುವಾಗ ನಿಮಗೆ ಬಹುಸಂಖ್ಯಾತರಿಗಿಂತ ಅಲ್ಪಸಂಖ್ಯಾತರೇ ಮುಖ್ಯರಾದರೆ?

ಇದೇ ನೀವು ಮಾಡುವ ತಪ್ಪು.

Anonymous ಅಂತಾರೆ...

ನಿಮ್ಮ ಪ್ರಕಾರ ಸ್ಪೇನ್ (spain) ಒಂದು ರಾಷ್ಟ್ರ (nation) ತಾನೆ? (ನಾನು ಮೇಲೆ ಅದನ್ನು ರಾಜ್ಯ (state) ಎಂದು ಕರೆದಿದ್ದೇನೆ). ಈ ರಾಷ್ಟ್ರ/ರಾಜ್ಯ ಎನ್ನುವ ಪದಗಳೆಲ್ಲ ಪೊಳ್ಳು, ನಿಜವಾಗಿ ಒಳಗಡೆ ಏನು ಮಾಡುತ್ತೀರಿ ಎನ್ನುವುದೇ ಮುಖ್ಯ ಸ್ವಾಮಿ! ಸ್ಪೇನಿನ ಸಂವಿಧಾನದಲ್ಲಿ ಏನಿದೆ ನೋಡಿ:

http://en.wikipedia.org/wiki/Spanish_Constitution_of_1978

The Constitution recognizes the existence of nationalities and regions (Preliminary Title).

Preliminary Title

Section 2. The Constitution is based on the indissoluble unity of the Spanish Nation, the common and indivisible homeland of all Spaniards; it recognizes and guarantees the right to self-government of the nationalities and regions of which it is composed and the solidarity among them all.

As a result, Spain is now composed entirely of 17 Autonomous Communities and two autonomous cities with varying degrees of autonomy, to the extent that, even though the Constitution does not formally state that Spain is a federation (nor a unitarian state), Spain has a decentralized system in practice.

ಅಯ್ಯೋ - How can a nation talk about different "Nationalities" within it? ಅಂತ confuse ಆಗ್ತಿದೆಯಾ ಯಾರೈನೋರೆ?

ಮೇಲೆ ಹೇಳಿದೆನಲ್ಲ, ಈ ರಾಜ್ಯ/ರಾಷ್ಟ್ರ ಎನ್ನುವ ಪದಗಳು ನಿಘಂಟಿನಲ್ಲಿ ಇವೆ ಎನ್ನುವ ಕಾರಣಕ್ಕೆ ಇಲ್ಲದ್ದನ್ನು ಇದೆ ಎಂದಾಗಲಿ (ಭಾಷಾ ಏಕತೆ) ಇರುವುದನ್ನು ಇಲ್ಲವೆಂದಾಗಲಿ (ಭಾಷಾ ವಿವಿಧತೆ) ತೋರಿಸಲಾಗುವುದಿಲ್ಲ.

Anivaarya ಅಂತಾರೆ...

ಈ ಚರ್ಚೆ ಬೇಕಾದ್ರೆ ಕೊನೆ ಇಲ್ದೆ ನಡ್ಯುತ್ತೆ ರವಿ, ಆದ್ರಿಂದ ನಾನು ಇಲ್ಲಿಗೆ ಬಿಡ್ತೀನಿ. ಧನ್ಯವಾದ.

ನನಗೆ ಹಿಂದಿ ಇರ್ಲಿ - ಅದನ್ನ ಇಷ್ಟಾ ಪಡ್ತೀನಿ, ಕಲೀತೀನಿ, ಕಲಿಸ್ತೀನಿ, ಬಳೆಸ್ತೀನಿ! ನಿನಗೆ ಹಿಂದಿ ಬೇಡ - ಕಲಿಬೇಡ, ಕಲಿಸ್ಬೇಡ, ಬಳೆಸ್ಬೇಡ, ಇಷ್ಟಾ ಪಡ್ಬೇಡ ಅಷ್ಟೆ! ಪರ್ವಾಗಿಲ್ಲ! ಆದ್ರೆ ನಾವು ನಮ್ಮ ನಮ್ಮ ಸ್ಥಾನಗಳಲ್ಲಿ ಕನ್ನಡಕ್ಕೆ ಆಗೊ ಅಂತ ಸೇವೆಯನ್ನ ಮಾಡ್ತಾ ಇರೋಣ.

ನಾವು ಕನ್ನಡಗಿರು, ಕನ್ನಡವೇ priority.

ಸಿಗೋಣ.

Anonymous ಅಂತಾರೆ...

ಯಾರೈನೋರೆ,

ನನ್ನ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರ ಇಲ್ಲದಿದ್ದರೆ ಉತ್ತರ ಇಲ್ಲ ಎನ್ನಿ, ಚರ್ಚೆಯ ಬಗ್ಗೆ ದೊಡ್ಡಸ್ತಿಕೆಯ ಮಾತು ಬೇಡ.

ಇಷ್ಟು ಹಿಂದೀಮೋಹವಿಟ್ಟುಕೊಂಡಿರೋ ನೀವು ಕನ್ನಡವೇ priority ಎನ್ನುವ ಮಾತು ಆಡುತ್ತೀರ. ಇದು ಬೂಟಾಟಿಕೆಯ ಮಾತು ಸ್ವಾಮಿ! ಏಕೆ ಎನ್ನುತ್ತೀರಾ? ನಿಮಗೆ ಕನ್ನಡದಲ್ಲಿ ಏನೇನಾಗಬೇಕು ಎನ್ನುವುದರ ಅರಿವೇ ಇಲ್ಲ. ಎಲ್ಲೋ ಅಮೇರಿಕದಲ್ಲಿ ಕೂತುಕೊಂಡು ನಾಲ್ಕು ಜನ ಬೇರೆಭಾಷೆಯವರ ಜೊತೆ ಹಿಂದಿಯಲ್ಲಿ ಮಾತಾಡಿಕೊಂಡು ನಗುನಗುತ್ತಾ ಕಾಲ ಕಳೆಯಬೇಕು ಎನ್ನುವುದಷ್ಟೇ ನಿಮ್ಮ ದೇಶಪ್ರೇಮ ಇದ್ದಂತಿದೆ! ಇಲ್ಲಿ ಕರ್ನಾಟಕದಲ್ಲಿ ಕನ್ನಡ ಕಡೆಗಣಿಸಲ್ಪಟ್ಟು ನಾಡೇ ಸೊರಗುತ್ತಿದೆ, ಅದು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವಲ್ಲ, ಇದಕ್ಕೆ ಏನು ಹೇಳಲಿ?

ಕನ್ನಡದಲ್ಲೇ ಆಗಬೇಕಾದ ಕೆಲಸ ಎಷ್ಟಿದೆ ಎಂದರೆ ಮತ್ತೊಂದು ಭಾಷೆಯ ಬಗ್ಗೆ "ದೇವರು ಅದನ್ನು ಚೆನ್ನಾಗಿಟ್ಟಿರಲಿ" ಎನ್ನುವುದಕ್ಕಿಂತ ಮೇಲೆ ಇನ್ನೇನೂ ಮಾಡಲು ಸಮಯವೆಲ್ಲಿಂದ ಬಂತು?

ನಿಮಗೇ ಒಬ್ಬ ಹೆಂಡತಿಯೆಂಬುವಳಿದ್ದಾಗ ಪರಸ್ತ್ರೀಯೊಬ್ಬಳ ಬಗ್ಗೆ ತಿಳಿದುಕೊಳ್ಳಲು, ಅವಳ ಸೌಂದರ್ಯದ ಗುಣಗಾನ ಮಾಡಲು ಸಮಯವೆಲ್ಲಿಂದ ಬಂತು ನಿಮಗೆ? ನಿಮ್ಮ ಹೆಂಡತಿಯನ್ನು ಕಡೆಗಣಿಸದೆ ಇದು ಎಲ್ಲಿಂದ ಸಾಧ್ಯ?

ಹೋಗಲಿ ಒಳಗೊಳಗೆ ಏನು ಬೇಕಾದರೂ ಮಾಡಿಕೊಳ್ಳಿ, ನಿಮ್ಮ ಬೀಗರಿಗೇ ಬಂದು ಆ ಪರಸ್ತ್ರೀಯ ಬಗ್ಗೆ ಗುಣಗಾನ ಮಾಡಬೇಡಿ, ನಮಸ್ಕಾರ!

Anonymous ಅಂತಾರೆ...

nanu france nalli vasisuthiddene.
adre thamashe andre illi chitrarangada naTiyarige avara bhasheya bagge bahaLa abhimaanavide. eechege naDeda Cannes utsavada varadigaLu illinia TV yalli barutthittu. ellu yaava naTiyaru french bittare bere bhashegaLalli matanaadalilla. english nalli kelo prashnegaligoo ella french nalli uttara kottaru.. ade iruvadu thamashe ...
- Rakesh bhat

Anonymous ಅಂತಾರೆ...

ಆಕೆಯ criticism ನ್ನು constructive ರೀತಿಯಲ್ಲಿ ತುಗೊಳ್ಳೋದೇನೋ ಸರಿ, ಆದರೆ ಒಂದು ಟೀಮ್ ನ ದೆಸೆಯಿಂದ ಇಡೀ ಇಂಡಸ್ಟ್ರಿ ಬಗ್ಗೆ comment ಮಾಡ್ತಿರುವ ಆಕೆಯದೆಸ್ಟು ಸರಿ?

ಬರೀ ಕನ್ನಡದವರೆ acting ಮಾಡಲಿ ಅಂದ್ರೆ ಹೆಂಗೆ? ಕೆಲ ಪಡ್ಡೆ ಹುಡುಗರಿಗೆ ಹೊರಗಿನ ಹುಡುಗಿಯರೇ ಇಸ್ಟ ಆತಾರಲ್ಲಾ. ;)

-ಸಂಗನ

Tarale Seena ಅಂತಾರೆ...

Ravi, I do not see "Yarayya" favoring imposition of anything on Kodavas, for instance. He has only sympathized with soldiers and central govt employees who get transferred every so often, that they would need a sense of sanity in learning just (at least!) one Indian language. Now, we could try and ask the Central Government to teach Kannada to these folks across board, but that ain't going to happen. So, to heck with it, Hindi be it. What was wrong in what he said, that people call him "Moorkha shikamanigale".

Having said that, I agree that our own folks in Karnataka are "proud to implement Central syllabus", proud to "speak Yinglissh" and the typical Kannidaga's alasya and nirabhimana are things that need to be fixed on priority!

I'm trying to figure out how everybody is able to write Kannada script on this site, I have downlaoded Baraha font on my machine but it doesnt seem to work with my browser..?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails