ಟಾಟಾ ಬರಲಿ, ಆದರೆ ಕನ್ನಡಿಗರಿಗೆ ಟಾಟಾ ಮಾಡದೇ ಇರಲಿ!

ಧಾರವಾಡದ ಹೊರವಲಯದಲ್ಲಿ 2012 ವೇಳೆಗೆ 37,000 ಕನ್ನಡಿಗರಿಗೆ ಟಾಟಾ ಸಂಸ್ಥೆಯ ವತಿಯಿಂದ ಕೆಲಸ ಸಿಗಲಿದೆ ಅಂತ 29 ಆಗಸ್ಟಿನ ಕನ್ನಡಪ್ರಭದಲ್ಲಿ ಬಹಳ ಧೈರ್ಯವಾಗಿ ಹಾಕಿದಾರೆ. ಧೈರ್ಯ ಯಾಕೇಂತೀರಾ? ಅಲ್ ಕೆಲ್ಸ ಕನ್ನಡಿಗರಿಗೇ ಸಿಗತ್ತೆ ಅಂತ ಹೇಳಿರೋದೇ ಧೈರ್ಯ.

10,000 ಜನರಿಗೆ ನೇರವಾಗಿ, 27,000 ಜನರಿಗೆ ನಂಟಿನ ಕ್ಷೇತ್ರಗಳಲ್ಲಿ ಕೆಲಸ ಹುಟ್ಟೋ ಖಾತ್ರಿ ಐತಿ ಅಂತ ಕಂದಾಯ ಸಚಿವ ಜಗದೀಶ ಶೆಟ್ಟರ ಆಶ್ವಾಸನೆ. ನಿಜವಾಗಲೂ ಕನ್ನಡಿಗರಿಗೇ ಕೆಲಸ ಸಿಕ್ರೆ ಇದು ಅತಿವೃಷ್ಟಿ-ಅನಾವೃಷ್ಟಿಯಿಂದ ಕಷ್ಟಕ್ಕೆ ಒಳಗಾಗಿರೋ ಉತ್ತರ ಕರ್ನಾಟಕದ ಜನತೆಗೆ ಸ್ವಲ್ಪ ನೆಮ್ಮದಿ ಕೊಡೋಂಥಾ ವಿಷಯಾನೇ.

ಆದ್ರೆ ಕನ್ನಡಿಗರಿಗೇ ಸಿಗೋಹಾಗೆ ನೋಡಿಕೊಳ್ಳೋ ವ್ಯವಸ್ಥೆ ನಿಜವಾಗಲೂ ನಮ್ಮಲ್ಲಿ ಇದ್ಯಾ? ಸಿಗೋಹಾಗೆ ಮಾಡಕ್ಕೆ ಏನ್ ಮಾಡಬೇಕು?

ಟಾಟಾಗೋಸ್ಕರ ಕನ್ನಡಿಗರು ಮಾಡಿಕೊಡ್ತಿರೋ ಸೌಲತ್ತುಗಳು

ನಮ್ಮ ಸರ್ಕಾರ ಟಾಟಾ ಸಂಸ್ಥೆಗೆ ಮಾಡಿಕೊಡ್ತಾ ಇರೋ ಸೌಲಭ್ಯ ಸಕ್ಕತ್ತಿದೆ: ಉದ್ದಿಮೆ ಶುರು ಮಾಡಕ್ಕೆ ಬೇಕಾಗಿರೋ ಭೂಮಿ ಕಡಿಮೆ ಬೆಲೆಯಲ್ಲಿ, ಭೂಮಿ ನೋಂದಾವಣಿಯಲ್ಲಿ ರಿಯಾಯ್ತಿ, ಅನಿಯಮಿತ ವಿದ್ಯುತ್, ನಿತ್ಯ 2600 ಕ್ಯುಬಿಕ್ ಲೀಟರ್ ನೀರು, 11 ವರ್ಷ ಮೌಲ್ಯ ವರ್ಧಿತ ತೆರಿಗೆಗೆ ರಜಾ...ಹೀಗೆ ಒಂದಾ ಎರಡಾ...

ಇವೆಲ್ಲಾ ಸೌಕರ್ಯ ಮಾಡಿ ಕೊಡ್ತಿರೋದ್ರಿಂದ ಕನ್ನಡಿಗರಿಗೆ ಉಪಯೋಗವಾದರೂ ಆಗಬೇಡವೆ? ಕೆಲಸಗಳಲ್ಲಿ ಸಿಂಹಪಾಲು ಕನ್ನಡಿಗರಿಗೇ ಸಿಗಬೇಕು ಅಂತ ಸಾರ್ತಾಇರೋ ಸರೋಜಿನೀ ಮಹಿಷಿ ವರದಿ ಇದ್ದೇ ಇದೆ. ಆದರೆ ಅದನ್ನ ಅನುಷ್ಠಾನ ಮಾಡಿದಾರೋ ಇಲ್ವೋ ಅಂತ ಪರೀಕ್ಷೆ ಮಾಡೋ ವ್ಯವಸ್ಥೆ ಎಲ್ಲಿದೆ?

ನಾವು ಕತ್ಲೆಯಲ್ಲಿ ಇದ್ದು ಬೇರೆಯವರಿಗೆ ದೀಪ ಹಿಡೀಬೇಕಾ?

ಈ ಹಿಂದೆ ಕೂಡ ಕರ್ನಾಟಕದಲ್ಲಿ ಎಲ್ಲಾ ಸೌಲಭ್ಯ ಪಡೆದು ಕನ್ನಡಿಗರಿಗೆ ಕೆಲಸ ಕೋಡದೆ ಮೂರು ನಾಮ ಹಾಕಿದ ಸಂಸ್ಥೆಗಳ ಸಾಲಿಗೆ ಟಾಟಾನೂ ಸೇರಬಾರದು ಗುರು! ಅರ್ಹತೆ ಅಂತ ನೆಪ ಒಡ್ಡಿ ಬೇರೆ ಬೇರೆ ಕಡೆಯಿಂದ ಜನರನ್ನು ಕೆಲಸಕ್ಕೆ ಕರ್ಕೊಂಡು ಬರೋ ಹಾಗಿದ್ರೆ ಇದು ಬೇಡವೇ ಬೇಡ! ಈ ಉದ್ದಿಮೆಗೆ ಎಲ್ಲಾ ಸೌಲಭ್ಯ ಕೊಡಬೇಕಾದರೆ ಅನೇಕ ಹಳ್ಳಿಗಳು ಕತ್ತಲಲ್ಲಿ ಕಾಲ ಕಳೀಬೇಕು, ಕುಡಿಯೋ ನೀರಿಗಾಗಿ ಪರದಾಡಬೇಕು ಅನ್ನೋದನ್ನ ಮರೀಬೇಡಿ.

ಈ ತ್ಯಾಗಗಳ್ನ ಬೀದೀಲಿ ಹೋಗೋರಿಗೆಲ್ಲಾ ಮಾಡಿಕೊಂಡು ನಾವು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಲಗಕ್ಕೆ... ನಾವು ಕನ್ನಡಿಗ್ರು ತಯಾರಿಲ್ಲ ಗುರು! ಇವನ್ನೆಲ್ಲ ನಾವು ಕೊಡೋದು ಕನ್ನಡಿಗರಿಗೇ ಉದ್ಯೋಗ ಸಿಗಲಿ ಅನ್ನೋ ಒಂದೇ ಕಾರಣದಿಂದ. ಕನ್ನಡಿಗರ ಬದಲು ಬೇರೆಯೋರು ಬಂದು ಇಲ್ಲಿಗೆ ತುಂಬ್ಕೊಂಡ್ರೆ, ಇದು ಕನ್ನಡಿಗರ ಪಾಲಿಗೆ ವರವಾಗದೇ ಶಾಪ ಆಗುತ್ತೆ ಅಂತ ನಾವು ಮರೀಬಾರದು.

ಮೊದಲಿಂದಲೇ ಟಾಟಾ ಮೇಲೆ ನಿಗಾ ಇಡಬೇಕು

ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುದ್ರು ಅಂತ ಆಗದೇ, ಮೊದಲಿಂದಲೂ ಸರ್ಕಾರದ ಪ್ರತಿನಿಧಿಗಳು ಉದ್ಯೊಗ ನೇಮಕಾತಿಯಲ್ಲಿ ಪಾಲ್ಗೊಳ್ಳಬೇಕು. ಅಭ್ಯರ್ಥಿಗಳು ಕನ್ನಡಿಗರಾ ಅಂತ ತಿಳಿದುಕೊಳಕ್ಕೆ ಜನನ ಪ್ರಮಾಣ ಪತ್ರ, ವಾಸಪತ್ರಗಳನ್ನು ಚೆನ್ನಾಗಿ ಪರಿಶೀಲಿಸಿಯೇ ಆರಿಸಬೇಕು. ಎಲ್ಲದಕ್ಕೂ ಮುಖ್ಯವಾಗಿ ಕನ್ನಡದ ಬಗ್ಗೆ ಕಾಳಜಿ ಇರುವ ಮಾನವ ಸಂಪನ್ಮೂಲ ಅಧಿಕಾರಿಗಳ(HR) ನೇಮಕವಾಗಬೇಕು. ಅಲ್ಲಿ ನೇಮಕ ಆಗಿರೋ ಪ್ರತಿಯೊಬ್ಬ ಉದ್ಯೋಗಿಯ ಮಾಹಿತಿ ಸರ್ಕಾರದ ಬಳಿ ಇರಬೇಕು.

ಇದು ಮಾಡದೇ, ಮುಂದೆ ಇಲ್ಲಿ ಚೆನ್ನಾಗಿ ಬೇರು ಊರಿದ ಸಂಸ್ಥೆಗಳಿಗೆ ಎಷ್ಟು ಕನ್ನಡಿಗರನ್ನು ಸೇರಿಸಿಕೊಂಡಿದ್ದೀರಾ ಅಂತ ಪತ್ರ ಬರೆದರೆ ಅವು ಕ್ಯಾರೇ ಅನ್ನೋಲ್ಲ. ಅದಕ್ಕೇ ಕನ್ನಡವನ್ನು ಕಾಯಲು ಇರುವ ಸಮಿತಿಗಳು, ಮಂಡಲಿಗಳು ಮತ್ತು ಪರಿಷತ್ತುಗಳೂ ಈಗಲೇ ಇದರ ಮೇಲೆ ಒಂದು ಕಣ್ಣು ಇಡಬೇಕು ಗುರು!

8 ಅನಿಸಿಕೆಗಳು:

ಆನಂದ್ ಅಂತಾರೆ...

ಹುಬ್ಬಳ್ಳಿ ಧಾರವಾಡ ಬೆಳಗಾವಿ ಗದಗಗಳ ಕನ್ನಡಿಗರು ಈಗಿನಿಂದಲೇ ಸಂಘಟಿತರಾಗಿ ಸಂಬಂಧಪಟ್ಟ ಮಂತ್ರಿಗಳು, ಟಾಟಾ ಸಂಸ್ಥೆಯ ಅಧಿಕಾರಿಗಳಿಗೆ ಮನವಿಗಳನ್ನು ಕೊಟ್ಟು ಹಕ್ಕೊತ್ತಾಯ ಮಾಡಬೇಕು. ಅಲ್ಲಿ ಪ್ರಬಲವಾಗಿರೋ ಕನ್ನಡ ಪರ ಸಂಘಟನೆಗಳನ್ನು ಈ ಉದ್ದೇಶಕ್ಕಾಗಿ ಮುಂದೆ ಇಟ್ಕೋಬೇಕು. ಅಲ್ಲಿನ ಕಾಲೇಜುಗಳ ಆಡಳಿತ ಮಂಡಲಿಗಳಿಗೆ ಯಾರಾದ್ರೋ ತಿಳಿ ಹೇಳ್ರಪ್ಪಾ . . .

ತಿಮ್ಮಯ್ಯ

Anonymous ಅಂತಾರೆ...

ಟಾಟಾ ಕಂಪನಿಯ ಒಂದು ಘಟಕ ಹಲವಾರು ವರ್ಷಗಳಿಂದ ಅಲ್ಲಿ ಕೆಲಸ ಮಾಡ್ತಾ ಇದೆ. ಈ ಹೊಸ ಯೋಜನೆ ಭಾರಿ ದೊಡ್ಡ ಗಾತ್ರದ್ದು. ಕೆಲ ವರದಿಗಳ ಪ್ರಕಾರ ಹಿಂದಿನ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಮತ್ತು ITI ತರಬೇತಿ ಮುಗಿಸಿದ ಸ್ಥಳೀಯರಿಗೆ ಕೆಲಸ ಸಿಕ್ಕಿದೆ. ಬೇರೆ ವರದಿಗಳ ಪ್ರಕಾರ ಭೂಮಿ ಕಳೆದುಕೊಂಡ ಅನೇಕರಿಗೆ ಸರಿಯಾದ ಪರಿಹಾರ ಅಥ್ವಾ ಕೆಲಸ ಸಿಕ್ಕಿಲ್ಲ. ಯಾವದನ್ನು ನಂಬೋದು ಯಾವದನ್ನು ಬಿಡೋದು? ವಿಷಯ ಏನೇ ಇರಲಿ:

೧. ರಾಜ್ಯ ಸರ್ಕಾರ ಮಹಿಷಿ ವರದಿಯನ್ನ ಸರಿಯಾಗಿ ಜಾರಿಗೆ ತರಬೇಕು.
೨. ಸ್ಥಳೀಯ ಕನ್ನಡ ಪರ ಸಂಸ್ಥೆಗಳು ಯಾವಾಗಲೂ ಜಾಗೃತವಾಗಿರಬೇಕು.
೩. ಟಾಟಾ ಕಂಪನಿಯ ಸಮೀಪ ಸರ್ಕಾರ ಹೊಸ ITI ಮತ್ತು Polytechnic ಕಾಲೆಜುಗಳನ್ನು ತೆರೆದು ಸ್ಥಳೀಯ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು [ಧಾರವಾಡದ ಸುತ್ತ ಸರ್ಕಾರದ ನಿರ್ಲಕ್ಷದಿಂದ ಬಡವರ ಕೈಗೆ ಸಿಗದ ಖಾಸಗಿ ತಾಂತ್ರಿಕ ತರಬೇತಿ ಕೆಂದ್ರಗಳೇ ಹೆಚ್ಚಾಗಿವೆ]. ಬೇಕಾದರೆ ಟಾಟಾ ಕಂಪನಿಯ ಸಹಯೋಗದಲ್ಲೆ ಈ ಹೊಸ ತಾಂತ್ರಿಕ ಕಾಲೇಜುಗಳು ನಡೆಯಲಿ.

ಭಾರಿ ಗಾತ್ರದ ಕಬ್ಬಿಣ ಮತ್ತು ಉಕ್ಕು ತಯಾರಿಸುವ ಕಾರ್ಖಾನೆಗಳು ಬಳ್ಳಾರಿ, ಹೊಸಪೇಟೆ ಮತ್ತು ಕೊಪ್ಪಳದ ಬಳಿ ತಲೆಯೆತ್ತುತ್ತಿವೆ. ಈ ಕಂಪನಿಗಳ ಮೇಲೂ ನಾವು ಕಣ್ಣಿಡಬೇಕು. ಈ ಭಾಗದಲ್ಲೂ ಸರ್ಕಾರ ಹೊಸ ತಾಂತ್ರಿಕ ತರಬೇತಿ ಕೇಂದ್ರಗಳನ್ನು ತೆರೆದು ಸ್ಥಳೀಯರಿಗೆ ಸಹಾಯ ಮಾಡಲಿ.

ಬಿಡದಿಯಲ್ಲಿರುವ ಟೊಯೋಟಾ ಕಂಪನಿಯಲ್ಲಿ ಕನ್ನಾಡಿಗರೆ ಹೆಚ್ಚಾಗಿದ್ದಾರೆ ಮತ್ತು ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತದೆ ಎಂದು ಕೇಳಿದ್ದೇನೆ. ಇದು ನಿಜವಾಗಿದ್ದಲ್ಲಿ ನಮ್ಮ ದೇಶದ ಕಂಪನಿಗಳಿಗೆ ಇದೇ ರೀತಿಯ ಸಂಬಂಧವನ್ನ ಸ್ಥಳೀಯರೊಂದಿಗೆ ಇಟ್ಟುಕೊಳ್ಳಲು ಧಾಡಿಯೇನು?

Anonymous ಅಂತಾರೆ...

haudu, karnaataka rakshana vedike athawa bere kannada para samghatanegalu ee vishayavannu modalinindale gamanisuttirabeku.
kannadigarige ellaadaru mosa kandu bandalli takshana pratibhatane nadesabeku.

shwetha

Anonymous ಅಂತಾರೆ...

ಟಾಟ ಈ ಹಿಂದೆ ಕನ್ನಡಿಗರಿಗೆ ಮೋಸ ಮಾಡಿತ್ತು, ಈ ಸಲ ಹಾಗೆ ಆಗಬಾರದು ಕಣ್ರಿ. ನೇಮಕ ಪ್ರಕ್ರಿಯೆಯಲ್ಲಿ ಕನ್ನಡ ಸಂಘಟನೆಗಳು ಪಾಲ್ಗೊಳ್ಳಬೇಕು. ಆಮೇಲೆ ಕನ್ನಡಿಗರಿಗೆ ಕೆಲಸ ಕೊಟ್ಟಿಲ್ಲ ಅಂತ ದೂರುವದರಲ್ಲಿ ಸುಖ್ವಿಲ್ಲ.

-deepu

Anonymous ಅಂತಾರೆ...

TATA kshetradalli TATA heladiralu saamanya janarigintha hecchagi sarkara/adhikarigalu HECCHINA gamana thorisabeku guru......

Anonymous ಅಂತಾರೆ...

TATA kshetradalli TATA heladiralu saamanya janarigintha hecchagi sarkara/adhikarigalu HECCHINA gamana thorisabeku guru......

Anonymous ಅಂತಾರೆ...

We should have some tracking mechanism to make sure TATA recruits Kannada People. As someone pointed out we the North karnataka people should pressurise Ministers and concerned TATA officials over this matter. We do not want Hubli to be like one more Bangalore where kannadiga's are less. We loose land and someone else get its benefit. Not accepted !!

Are their any organizations working for North Karnataka welfare? Its time for us to act.
-Yuvraj
yuva21@gmail.com

Unknown ಅಂತಾರೆ...

Kelsa kodalu munna ivaru kannadavara ilvaa annodanna check maadle beku.

Illa andre bari TN,AP inda jana bandu serkothare,Amaale hubli nallu bangalore thara kannada hudukabekaguthhe alvaa?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails