ಕನ್ನಡಿಗರ ಒಗ್ಗಟ್ಟೇ ಮೋಸಕ್ಕೆ ಮದ್ದು

ರಾಹುಲ್ ದ್ರಾವಿಡ್ ಮುಂಬಯಿ ಲಾಬಿ ಎದುರು ಮುಗ್ಗರಿಸಿ ಹೇಗೆ ಭಾರತ ಕ್ರಿಕೆಟ್ ತಂಡದ ನಾಯಕತ್ವ ಕಳ್ಕೋಬೇಕಾಯ್ತು ಅಂತ ವಿ.ಕ.ದಲ್ಲಿ ಬಂದಿದೆ ನೋಡಿ ಒಂದು ವಿಶ್ಲೇಷಣೆ.

ದ್ರಾವಿಡ್ ಜಾಗದಲ್ಲಿ ಗಂಗೂಲಿ ಏನಾದ್ರು ಇದ್ದಿದ್ದಿದ್ರೆ, ಏಕಾಏಕಿ ಈ ರೀತಿ ನಿರ್ಧಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಹುಟ್ಟಿಕೊಂಡು ಇಡೀ ಪ.ಬಂಗಾಳ ಇಷ್ಟು ಹೊತ್ತಿಗೆ ಹತ್ಕೊಂಡು ಉರೀತಿತ್ತು ಗುರು!

ಬೇರೆ ರಾಜ್ಯದೋರು ಒಗ್ಗಟ್ಟಿಂದ ಬಿಸಿಸಿಐ ನಲ್ಲಿ ಹೇಗೆ ತಮ್ಮ ಬೇಳೆ ಬೇಯಿಸಿಕೊಳ್ತಾ ಇದಾರೋ, ಹಾಗೇ ಕ್ರಿಕೆಟ್ ಆಡಳಿತದಲ್ಲಿರೋ ಕನ್ನಡಿಗರು ಕೂಡ ಒಳಜಗಳಗಳ್ನ ಬದಿಗಿಟ್ಟು ಒಗ್ಗಟ್ಟಿಂದ ವರ್ತಿಸಬೇಕಾಗಿರೋದು ಇವತ್ತು ಅತ್ಯಗತ್ಯ ಗುರು! ಎಲ್ಲಕ್ಕಿಂತ ಮೊದಲು ನಾವು ಕನ್ನಡಿಗರು ಅಂತ ಇವರು ಗುರುತಿಸಿಕೊಳ್ಳಬೇಕಿದೆ, ಒಗ್ಗಟ್ಟಿಂದ ಬಿಸಿಸಿಐ ನಲ್ಲಿ ನಿಂತು ಕನ್ನಡದ ಆಟಗಾರರಿಗೆ ಹೀಗೆ ಮೋಸ ಆಗದೇ ಇರೋಹಾಗೆ ನೋಡ್ಕೋಬೇಕಿದೆ. ಇದನ್ನ ಮಾಡದೇ ಇರೋದ್ರಿಂದ್ಲೇ ಹಿಂದೇನೂ ಗುಂಡಪ್ಪ ವಿಶ್ವನಾಥು, ಪ್ರಸನ್ನ ಮುಂತಾದೋರಿಗೂ ಪಂಗನಾಮ ಸಿಕ್ಕಿದ್ದು ಗುರು!

ತಿರ್ಗಾ ಅದೇ ಪಾಠ: ಕನ್ನಡಿಗ್ರು ತಾವು ಕನ್ನಡಿಗ್ರು ಅಂತ ಎಂದಿಗೂ ಮರೀದೆ ಒಗ್ಗಟ್ಟಿಂದ ಇರಬೇಕು. ಬಿಸಿಸಿಐ ನಲ್ಲೂ ಅಷ್ಟೇ, ಬೆಂಗಳೂರಿನ ಐಟಿ ಕಂಪನಿಗಳಲ್ಲೂ ಅಷ್ಟೇ. ಇಲ್ದೇ ಹೋದ್ರೆ ಎಲ್ಲೀಗ್ ಹೋದ್ರೂ ಕನ್ನಡಿಗಂಗೆ ಪಂಗನಾಮಾನೇ ಗುರು! ಒಗ್ಗಟ್ಟಾಗಿರೋದು ಬಿಟ್ಟು ನಾನೊಬ್ಬ "ವಿಶ್ವಮಾನವ", ನನಗೆ ಕನ್ನಡತನ ಇಲ್ಲ, ನನಗೆ ವಿಶ್ವಮಾನವತ್ವ ಒಂದೇ ಇರೋದು ಅಂತೇನಾದ್ರೂ ಇನ್ನೂ ಕೂತಿದ್ರೆ ಕನ್ನಡಿಗ ಮಟೇಸ್! ಯಾರು ಮಟೇಸ್ ಮಾಡೋರು ಅಂತೀರಾ? ಯಾರು "ಕನ್ನಡಿಗರು ವಿಶ್ವಮಾನತ್ವಕ್ಕೆ ಹೆಸರುವಾಸಿಯಾಗಿರೋರು, ನೀವು ಹಾಗೇ ಇರಿ" ಅಂತ ಮಾರ್ಜಾಲನ್ಯಾಯ ಹೇಳಿಕೊಂಡು ತಮ್ಮ ಬೇಳೆಕಾಳು ಬೇಯಿಸಿಕೋತಾರೋ ಔರು!

14 ಅನಿಸಿಕೆಗಳು:

Anonymous ಅಂತಾರೆ...

Hi,
rahul dravid yaava kannadatana merediddane? bere kannadigaru team nalli idre 12th atva 13th man agidru ex. Robin Uthappa. avanu swalpa oggatuu torisi swalpa lobby madbekaittu. aaga ellaru ondagiroru. yake andre avana hatra captaincy power ittu. eega ella matash!!! neevu helida haage:)

Anonymous ಅಂತಾರೆ...

ಯಾಕೋ ರಾಹುಲ್ ದ್ರಾವಿಡ್ ಕನ್ನಡಿಗ ಅಂತ ಹೇಳ್ಕೊಳಕ್ಕೇ ಮುಜುಗರ ಆಗತ್ತೆ. ಯಾಕಂದ್ರೆ ಅವನು ಯಾವತ್ತೂ ಹಾಗೆ ವರ್ತಿಸಿಲ್ಲ. ಆದ್ದರಿಂದ ಕರ್ನಾಟಕದವನೆಂಬ ಒಂದೇ ಕಾರಣಕ್ಕೆ ಅವನನ್ನ ಬೆಂಬಲಿಸಬೇಕು ಅಂತ ಹೇಳೋದು ತಪ್ಪು. ಇನ್ನುಳಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರು ಪ್ರಬಲರಾಗ್ಬೇಕು ಅನ್ನೋದು ದಿಟ.

Anonymous ಅಂತಾರೆ...

ಅಜಯ್,

ನೀವು ಹೇಳೋದು ೧೦೦% ಸರಿ.

ದ್ರಾವಿಡ್ ಎಂದಿಗೂ ಬಾಯ್ತುಂಬ "ನಾನು ಕನ್ನಡಿಗ" ಎಂದು ಹೇಳಿಕೊಂಡಿಲ್ಲ, ಹಾಗೆ ನಡೆದುಕೊಂಡಿಲ್ಲ.

ಆದರೆ ಅದಕ್ಕೆ ಪರಿಹಾರ - ಅವನು ಹಾಗೆ ಹೇಳಬೇಕು, ನಡೆಯಬೇಕು! ಹೇಳದಿದ್ದರೆ ಹೇಳುವಂತೆ ಮಾಡಬೇಕು, ನಡೆಯದಿದ್ದರೆ ನಡೆಸಬೇಕು. ಇದಕ್ಕೆ ಒಪ್ಪದಿದ್ದರೆ ಕರ್ನಾಟಕದಿಂದ ಒದ್ದು ಓಡಿಸಬೇಕು!

ಆದರೆ ಇದು ಕನ್ನಡಿಗರು ಒಗ್ಗಟ್ಟಾಗಿರಬೇಕು ಎನ್ನುವ ಪಾಠ ಎಂದು ಹೇಳಿರುವುದು ಬಹಳ ಸೂಕ್ತ.

Anonymous ಅಂತಾರೆ...

naanu saha idanne hELona anta idde.
rahul dravid endu nammavarige itara aatagaararige avakashakkagi prayatna madale illa. intavarige kannada davanu antha hemme barbeku. endadru avanu KANNADA dalli matadiddu nodiddira ?

eegalu avanu tannannu taanu MARATI yavanu anthane gurutisi koLtane.

ide nammavarige iro problem. Kannada davaru elle hodru avaru alliyavaraagthare. Adre bere bhasheyavaru illi bandre avaru thamma moolavannu bittu kodalla - karuNaa

Vijendra ( ವಿಜೇಂದ್ರ ರಾವ್ ) ಅಂತಾರೆ...

ಐ ಟಿ ಕಂಪನಿಗಳಲ್ಲಿ (ಹಾಗು ಬೇರೆ ಎಲ್ಲಾ ಕ್ಷೇತ್ರಗಳಲ್ಲಿ ) ಯೋಗ್ಯತೆ ಇದ್ರೂ ಕನ್ನಡಿಗರಿಗೆ ಆಗುತ್ತ್ತಿರುವ ಅನ್ಯಾಯ ನೋಡ್ತಾ ಇದ್ದೇವೆ. ಇನ್ನಾದ್ರು ನಾವು ನಿದ್ರೆ ಬಿಟ್ಟು ಎಚ್ಚರ ಆಗ್ಬೇಕಾಗಿದೆ.. ಆಗ್ತಾ ಇದ್ದೇವೆ. ಖಂಡಿತವಾಗಿ ಆಗ್ತೇವೆ.

Anonymous ಅಂತಾರೆ...

Dravid is a maharashtrian. His family has migrated to bangalore long back and still he doesnt know kannaDa at all.

Thats the problem here.

Many of my friends who are living here for past 10-15 years also do not know kannaDa. They say everyone can speak Hindi/English here so we do not need to learn KannaDa at all.

This situation must change.

Manju (Janakiram) ಅಂತಾರೆ...

Namaskara,

Dravid yavathu taanu kannadiga antha gurthiskondilla.

Kelavu varshagala hinde nanna friend avra tande dravid na avra bank nalli yavudo karykrammake karsidru. Aaga nana friend hogi dravid jothe kannadadalli maatanaadidare...avnu "nange kannada gothilla " antha heliddane.

So, kannada naadinalli iddukondu kannadada bagge abhimana illa andre...anthavarannu support maadodu sariyilla.

Anonymous ಅಂತಾರೆ...

I guess all these are happening because we(kannaDigas) are:

1. Only 66% of total Karnataka population.

2. Because of this there is no feeling that Karnataka is for KannaDa and kannaDigas.

3. Only National parties rule K'taka. They think that Karnataka is multi lingual and hence pro-kannaDa sentiments have no significance here. when 'kannaDa naaDu' party was launched by Sankeshwar, all national parties have openly issued statements that kannada, kaannaDigas are not the only ones residing in K'taka and hence regionalism doesnt work here !!.

4.More than 50% of land in K'taka is fertile and hence kannaDigas in interior k'taka are self-sufficient residing there itself instead of educating themselves and coming for jobs in cities. Hence kannaDa population is less in B'lore.

5. Capital of K'taka B'lore is in the border of 3 states including k'taka itself and hence easily accessable to all.

6. More number of central govt establishments in Bangalore ensured more number of Hindi staff here.

7. Britishers brought Tamils for labour intensive work in KGF and Bangalore. This too contributed a lot even as early as 1800s.

8. Only Old Mysore (south k'taka) was safe heaven for kannada during earlier days because of Mysore king's rule. Rest of K'taka was under the influence of neighbouring state's languages.

All these are causes for our today's situation !!.

A lot needs to be done to restore Kannada & KannaDiga supremacy in K'taka.

Anonymous ಅಂತಾರೆ...

ಏನ್ ಗುರೂ... ಸೂಪರ್ ಫೋಟೊ ಹಾಕಿದೀರ ಸಾರ್.
ಅಯ್ಯಾ ದ್ರಾವಿಡ್, ನೀನ್ ಕನ್ನಡದವನಾಗಿ ಮುಖ್ಯವಾಹಿನಿಯಲ್ಲಿ ಸೇರಿದ್ದಿದ್ದರೆ ಕಡೇ ಪಕ್ಷ ಈ ಬ್ಲಾಗ್ ಓದೋ ಜನಗಳ ಬೆಂಬಲ ಇ ರ್ತಿತ್ತಲ್ಲಯ್ಯಾ? ನೀನ್ ಎಷ್ಟೇ ಮುಂಬೈಕರ್ ಆಗಿದೀನಿ ಅಂದುಕೊಂಡ್ರೂ ಅವರು ನಿನ್ನ ಗುರುತ್ಸೋದು ಕರ್ನಾಟಕದವನು ಅಂತಲೇ . . . .

ಚಂದ್ರು

Amarnath Shivashankar ಅಂತಾರೆ...

alla swamy,

Rahul Dravid karnatakadalli settle aagi, karnataka team ge aDodu biTre inyava kannaDa/karnataka para kelasa maaDiddane anta heLteera.
ondu function nallu kooDa kannaDa matanaDalla..inna yava seeme kannaDiga ivnu..
ivana family sumaaru varshagaLa hinde illi bandu neleyooridaru ashte..
ivananna kannaDiga anta heLodu kannaDigarige avamaana ashte.
Team India dalli dodda player irabahudu..deshada ati shreshTa aaTagaaralli obbanu irabahudu..adre ivana kannaDakke link maDkoLo avashyakathe illa

IrsuMursu ಅಂತಾರೆ...

ದ್ರಾವಿಡ್ ಕನ್ನಡತನದ ಬಗ್ಗೆ ಯವುದೇ ರೀತಿಯ ಅನುಮಾನವೇ ಬೇಡ! ಇಲ್ಲಿ ಎಲ್ರೂ ಹೆಳಿರೋ ಹಾಗೆ ಅದು ಭೂತ್ಗಾಜು ಹಾಕ್ಕೊಂಡ್ ಹುಡ್ಕಿದ್ರೂ ಸಿಗಲ್ಲ. "ನಮ್ಮ" ಬೆಂಗ್ಳೂರಲ್ಲಿ ಇರೋ ಕೆಲ್ವು Thames ಶಾಲೆಗಳಲ್ಲಿ ಒದೀರೋರ ಹಣೆಬರಹ ಇಷ್ಟೇ ಅನ್ಸತ್ತೆ!

ಅದು ಹಾಗಿರಲಿ ಕರ್ನಾಟಕದ ಅತಿ ಹೆಚ್ಚು ಚಾಲನೆಯಲ್ಲಿರುವ ಪತ್ರಿಕೆಯಲ್ಲಿ ಸಕತ್ತಾಗಿ ಬಟ್ಟಿ ಇಳಿಸಿದ್ದಾರೆ! (copy cat)

ಈ ಕೊಂಡಿ ಕ್ಲಿಕ್ಕಿಸಿ ಒದಿ, ದಿನಾಂಕ ಗಮನಿಸಿ http://www.rediff.com/cricket/2007/sep/16haresh.htm

ಹಾಗೆ ಇಜಯ ಕರ್ನಾಟಕದ ಅಂಕಣ ಓದಿ, ದಿನಾಂಕ ಗಮನಿಸಿ http://vijaykarnatakaepaper.com/svww_showarticle.php?art=20070918a_007101001

ಸ್ವಲ್ಪನೂ ನಾಚಿಕೆ ಇಲ್ದೆ ಕದ್ದಿದ್ದಾರೆ! original ವಿಶಯವಾಗಲಿ style ಆಗಲಿ ಇಲ್ಲ... ಹೋಗ್ಲಿ referenceಅದ್ರೂ ಕೊಟ್ಟಿದಾರಾ? ಇಲ್ಲ. ಬಹಳ ನಾಚಿಕೆಗೇಡಿನ ವಿಚಾರ, ಕ್ಯಾಕರ್ಸಿ ಮೊಖ್ಖುಗಿಬೇಕು ಬಡ್ಡೈಕ್ಳಿಗೆ...

Anonymous ಅಂತಾರೆ...

ijaya karnataka copy naadru maadtaare. aadre bere patrikegaLavru intaha sensitive vishaya iddaaga yaake baayige beega haakkonDu koortaare? avrenu raashreeya vaadigaLe?

ವೀರಭದ್ರ ಅಂತಾರೆ...

rahul dravid yaavaga kannadiga aada?

Anonymous ಅಂತಾರೆ...

That is correct. Rahul Dravid was never a Kannadiga

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails