ಜ್ಞಾನಪೀಠ ಪಡೆದೋರ ಬಗ್ಗೆ ಹೇಳಿಕೊಂಡು ತಿರುಗಿದರೆ ಸಾಲದು!

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಲ್ಲಿ ಶಾಲೆಯಿಂದ ಶಾಲೆಗೆ ಜ್ಞಾನಪೀಠ ಪ್ರಶಸ್ತಿ ಪಡೆದೋರ ಬಗ್ಗೆ ಭಾಷಣಗಳನ್ನ ತೊಗೊಂಡು ಹೋಗೋ ಕಾರ್ಯಕ್ರಮ ಹಮ್ಮಿಕೊಂಡಿದೆ ಅಂತ ಇವತ್ತಿನ ಡೆಕನ್ ಹೆರಾಲ್ಡಲ್ಲಿ ಸುದ್ದಿ. ವಿಶೇಷವಾಗಿ ಇಂಗ್ಲೀಷ್ ಮಾಧ್ಯಮ ಓದೋರಿಗೆ ಇದರಿಂದ ಉಪಯೋಗ ಆಗತ್ತೆ ಅಂತ ಅವರ ಆಶಯವಂತೆ. "ಫ್ಲೋರೆನ್ಸ್ ಪಬ್ಲಿಕ್ ಸ್ಕೂಲ್"ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲನೇ ಸರಿ ಅಂತ ವಿ.ಕೃ.ಗೋಕಾಕ್ ಅವರ ಪರಿಚಯ ಮಾಡ್ಕೊಟ್ರಂತೆ.

ಆದ್ರೆ ಇಷ್ಟು ಸಾಕಾ ಗುರು? ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ಸಿಕ್ಕಾಪಟ್ಟೆ ಸಿಕ್ಕಿರೋದೇನೋ ನಿಜ, ಅದು ಹೆಮ್ಮೇನೂ ನಿಜ. ಅವರ ಬಗ್ಗೆ ಹೈಕಳಿಗೆ ಹೇಳೋದೂ ತಪ್ಪೇನಿಲ್ಲ. ಆದ್ರೆ ಅಷ್ಟೆಲ್ಲಾ ದುಡ್ಡು ಹಾಕ್ಕೊಂಡು ಶಾಲೆಯಿಂದ ಶಾಲೆಗೆ ಹೋಗೋ ಕ.ಸಾ.ಪ. ಮೊದಲು ಹೈಕಳಲ್ಲಿ ಮೂಡಿಸಬೇಕಾದ್ದು ಕನ್ನಡತನದ ಜಾಗೃತಿಯಲ್ಲವೆ? ಕನ್ನಡ ಭಾಷೆಯ ಹಿರಿಮೆಯೇನು? ಅದೆಷ್ಟು ಹಳೇದು? ಅದು ಬೇರೆ ಭಾರತೀಯ ಭಾಷೆಗಳಿಗಿಂತ ಹೇಗೆ ಬೇರೆ? ನಮ್ಮ ಜೀವನದಲ್ಲಿ ಕನ್ನಡದ ಸ್ಥಾನ ಏನು? ಇಂಥದ್ದನ್ನೆಲ್ಲ ಹೈಕಳಿಗೆ ಹೇಳಬೇಕಾಗಿರೋದು ಮೊದಲನೇ ಕೆಲಸ. ಗೋಕಾಕರ ಬಗ್ಗೆ ಹೇಳ್ತಿದ್ದಾಗ ಹೈಕ್ಳು ಆಕಳ್ಸಿ ಆಕಳ್ಸಿ ತಲೆತೂಗಿ ಮನೇಗ್ ಹೋಗಿ "ಹ್ಯಾರಿ ಪಾಟರ್ರು ಹ್ಯಾರಿ ಪಾಟರ್ರು" ಅಂದ್ರೆ? "ಯಾರಪ್ಪಾ ಇವ್ರು? ಇವರ ಬಗ್ಗೆ ನಮಗ್ಯಾಕೆ ತಲೆ ತಿಂದಿದಾರೆ?" ಅಂದ್ರೆ?

ಅಡುಗೆ ಮನೇಲಿ ಪಾತ್ರೆ ಜೋಡ್ಸೋರು ದೊಡ್ಡ ಪಾತ್ರೆ ಮೊದ್ಲು ಕೆಳಗಿಡಬೇಡ್ವಾ ಗುರು? ಮೊದ್ಲು ಲೋಟ ಇಡೋ ಪೆದ್ದತನ ಯಾಕೆ ನಮ್ಮ ಜನಕ್ಕೆ?

5 ಅನಿಸಿಕೆಗಳು:

Girish ಅಂತಾರೆ...

ಇದು ಸಾಲ್ದು ಗುರು, ಆದ್ರೆ ಒಳ್ಳೆ ಶುರು ಅಂತೂ ನಿಜ! ಇಲ್ಲೀವರ್ಗೂ ಬೆರೆ ಯಾರೂ ಪ್ರಯತ್ನ ಕೂಡಾ ಮಾಡಿರ್ಲಿಲ್ಲ್ವಲ್ಲಾ ಗುರು!! ಕನ್ನಡ ಭಾಷೆಯ ಹಿರಿಮೆ,ಎಷ್ಟ್ ಹಳೇದು,ಹೇಗೆ ಅದು ಬೇರೆ ಅಂತ ಹೇಳೋದ್ರಿಂದ ಎನಾದ್ರೂ ಆಗುತ್ತೆ ಅಂತೀಯಾ ಗುರು? ಯಾರೋ third party ಬಂದ್ ಹೇಳುದ್ರೆ ಅಷ್ಟ್ effect ಇರುತ್ತಾ ಗುರು? ಇಲ್ಲಾ ಗುರು! ನಮ್ ಶಿಕ್ಷಕ ವರ್ಗಕ್ಕೆ ಈ ಹೆಮ್ಮೆ ಬರ್ಬೇಕು, ಕನ್ನಡದ ಬಗ್ಗೆ ತಿಳುವಳಿಕೆ ಬರ್ಬೇಕು, ನಂಮ್ಮಂತಾ ಬೀದಿ ಹೈಕ್ಳುಗಳ್ಗೆ ಆ difference ಮಾಡ್ಬೇಕು ಅನ್ನೊ ಮನಸ್ ಆಗ್ಬೇಕು. ಯಾರೋ ಹೋಗಿ ಯೇನೇ ಹೇಳುದ್ರೂ ಅದು ಏನೂ ಪ್ರಯೊಜನ ಆಗಲ್ಲ ಗುರು. ಸುತ್ತಾ ಮುತ್ತಾ, ಎಲ್ಲಾ ಕಡೆ (ನಾವು, ನೀವು, ಎಲ್ಲಾರೂ) ಆ ಹುಮ್ಮಸ್ಸು, ಉತ್ಸಾಹಾ, ಭಾಷಾ ಪ್ರೇಮಾ, ಇಂತಹ qualities ಕಾಣ್ಸ್ಬೇಕು, whole system ನಲ್ಲಿ ಆ feeling ಸಿಗ್ಬೇಕು. ಅಪ್ಪ-ಅಮ್ಮ, ಗುರುಗಳು, ಹೀಗೆ ನಮ್ಮಲ್ಲಿ ಆ promise ಕಾಣಿಸಬೇಕು. ಇಲ್ಲಾ ಅಂದ್ರೆ long term ಸಾದನೆ ಆಗುಲ್ಲ.

ಗೊತ್ತು ಇದು ಸಾಕಷ್ಟು ಕಷ್ಟ, ಆದ್ರೇ ನೀನ್ ಹೇಳ್ತಾ ಇರೋದೂ ಕೇಳಕ್ಕೆ ಚೆನ್ನಾಗಿರುತ್ತೆ ಆದ್ರೆ ಆ ಹುಮ್ಮಸ್ಸನ್ನ sustain ಮಾಡೋದು ಸ್ವಲ್ಪ ಕಟಿಣ ಆಗುತ್ತೇನೋ. ಆದ್ರೂ ಪ್ರಯತ್ನ ಅಂತೂ ಮಾಡೋಣ. ನಾವು ಬದಲಾಗೋಣ, ಕನ್ನಡ ಆದಷ್ಟೂ ಬಳಿಸೋಣಾ, ತಪ್ಪು ಆದ್ರೂ ಪರ್ರ್ವಾಗಿಲ್ಲ ಕನ್ನಡ ಬಳಿಸೋಣ ಹಾಗೆ ಆ changeಗೆ ದಾರಿ ಮಾಡೋಣಾ!

ನಾವು ಹೇಗೆ contribute ಮಾಡ್ಬಹುದು ಅಂತ ಯೊಚ್ಸಣಾ ಗುರು. ನಮ್ಕೈಲಿ ಆಗೋ ಅಷ್ಟು ನಾವೂ ಮಾಡೋಣ. ಕನ್ನಡ ಭಾಷೆಯ ಹಿರಿಮೆಯೇನು? ಅದೆಷ್ಟು ಹಳೇದು? ಅದು ಬೇರೆ ಭಾರತೀಯ ಭಾಷೆಗಳಿಗಿಂತ ಹೇಗೆ ಬೇರೆ? ನಮ್ಮ ಜೀವನದಲ್ಲಿ ಕನ್ನಡದ ಸ್ಥಾನ ಏನು? ಇವುಗಳ ಬಗ್ಗೆ ನಿಮ್ಮ ಅನಸಿಕೆಯನ್ನ ಇಲ್ಲಿ ಬರೆಯಿರಿ ನಾವೂ ಕಲಿತಂತೆ ಆಗುತ್ತೆ.

ನಮ್ ಕೈಲಾಗಿದ್ ಸೇವೆ ನಾವೂ ಮಾಡೋಣ, ಕ.ಸಾ.ಪ ಅದರ ಪ್ರಯತ್ನ ಮಾಡ್ಲಿ. ನಮ್ಮ ಸಿರಿ ಕನ್ನಡಕ್ಕೆ ಜಯವಾಗಲಿ. ಜೈ ಕರ್ನಾಟಕ ಮಾತೆ.

Anonymous ಅಂತಾರೆ...

ಕಸಾಪ ಒಂದು ಮಾಡಲಿ, ನಾವು ಒಂದು ಮಾಡೋಣ ಅನ್ನುವುದಕ್ಕಿಂತ ಇಬ್ಬರೂ ಕೂಡಿ ಏನು ಮಾಡಬೇಕೋ ಅದನ್ನ ಮಾಡುವುದು ಉತ್ತಮ. ಇಬ್ಬರೂ ಮಾತಾಡಬಹುದಲ್ಲ?

ಅಂದಹಾಗೆ...ಪಾತ್ರೆ ಉದಾಹರಣೆ ಚೆನ್ನಾಗಿದೆ.

ಗಿರೀಶ್ ಅವರೆ, ನಿಮ್ಮ ಉತ್ಸಾಹ ಇಷ್ಟವಾಯಿತು.

Girish ಅಂತಾರೆ...

ಗುರು ರವಿ, ಸರ್ಯಾಗ್ ಹೇಳ್ದೆ! ನಿಜ್ವಾಗ್ಲೂ ಖುಷಿ ಆಯ್ತು.

ಇಬ್ಬರೂ ಮಾತಾಡಬಹುದು ಅನ್ನೋದು best case scenario ಅಂತಾರಲ್ಲ ಹಾಗೆ ಅಲ್ವಾ ರವಿ?! ಹಾಗೇನಾದ್ರೂ ಆಗೋ ಹಾಗಿದ್ರೆ ಅದಕ್ಕಿಂತಾ ಒಳ್ಳೇದು ಬೇರೊಂದಿಲ್ಲ. ಆದ್ರೆ ಇದು ಒಂದು gradual process ಅಲ್ವಾ ಗುರು? ಅದ್ರಿಂದ ಸ್ವಲ್ಪ ಸಮಯ ಆಗುತ್ತೆ system (ಕ್.ಸಾ.ಪ ಆಗ್ಲೀ ಸರ್ಕಾರ ಆಗ್ಲೀ) ಮತ್ತು ಜನ ವಕ್ಕೂಡಕ್ಕೆ, ಇಂಟಿಗ್ರೇಟ್ ಆಗಕ್ಕೆ. ನಮ್ಮಲ್ಲಿ ಆ ಹುಮ್ಮಸ್ಸು ಬಂದ್ರೆ ಈ ಕ.ಸಾ.ಪ ಕ್ಕೂ ಪ್ರೊತ್ಸಾಹ ಸಿಗುತ್ತೆ. ಅದಕ್ಕೆ ಹಾಗೆ ಹೇಳ್ದೆ ಅಷ್ಟೆ!! ಎಲ್ಲಾರೂ ಆ ಪ್ರಯತ್ನ ಪಡೋಣ, ಆ passion ತೋರ್ಸೋಣ, ಆಗ ಆಚೆ ಕಡೆಯವರಿಗೂ (northies, westies, easties, hindies, tamilies, ಯಾರೇ ಆಗಿರ್ಲೀ) ತಿಳಿಯುತ್ತೆ ನಾವು ಏನೂ ಅಂತ, ನಾವು ಎಷ್ಟು ದೃಡವಾಗಿರ್ತೀವಿ, ವಗಟ್ಟಾಗಿರ್ತೀವಿ ಅಂತ. ಆ ವಾತಾವರಣ ನಂಮ್ಮಿಂದ ಶುರು ಆಗ್ಬೇಕು ಗುರು!

ಆದಷ್ಟು ಕನ್ನಡ ಬಳಿಸೋಣ. ಇದು ಸ್ವಲ್ಪ ಕಷ್ಟ ನಿಜ, ನಮಗೆ ಈಗ english ಸಿಕ್ಕಾಪಟ್ಟೆ ಅಭ್ಯಾಸ ಆಗೊಗಿದೆ, ಅದ್ರಲ್ಲೂ ಊರಿನಿಂದ ಸ್ವಲ್ಪ ದೂರ ಇರೊ ನಮ್ಮಂತಾ NRIಗಳ್ಗೆ. ಆದ್ರೆ ನಾವೂ ಕೂಡ contribute ಮಾಡ್ಬಹುದು ಅನ್ನೋ ನಂಬಿಕೆ ಸಾಕಷ್ಟ್ ಇದೆ. ಮಾಡೋಣ.

ಧನ್ಯವಾದಗಳು ರವಿ, ಹೀಗೆ ಬರೀತಾ ಇರೋಣ!

ಬನವಾಸಿ ಬಳಗ ಅಂತಾರೆ...

ಗಿರೀಶ್, ರವಿ,

ಯಾವ ಕನ್ನಡಿಗರ ಒಗ್ಗಟ್ಟಿನ ಬಗ್ಗೆ, ಏಳ್ಗೆಯ ಬಗ್ಗೆ ನೀವಿಬ್ಬರೂ ಮಾತಾಡುತ್ತಿದ್ದೀರೋ ಅದೇ ಒಗ್ಗಟ್ಟನ್ನು, ಅದೇ ಏಳ್ಗೆಯನ್ನು ತಕ್ಕಮಟ್ಟಿಗೆ ಬನವಾಸಿ ಬಳಗ ಸಾಧಿಸುತ್ತಿದೆ. ಕನ್ನಡ ಚಳುವಳಿಗೆ ತಿಳುವಳಿಕಸ್ಥರು ಇಳಿಯುತ್ತಿರುವುದು ಬಹಳ ಒಳ್ಳೆಯ ಸಂಗತಿಯೇ. ಬನವಾಸಿ ಬಳಗದೊಡನೆ ಕೂಡಿ ಕನ್ನಡಕ್ಕಾಗಿ ಕೆಲಸ ಮಾಡುವ ಆಸೆಯಿದೆಯೆ? ಹಾಗಾದರೆ banavasibalaga@gmail.com ಗೆ ಮಿಂಚಿಸಿ.

Girish ಅಂತಾರೆ...

ಚಿಂದಿ ಗುರು! ಈ blogspot ಸಾಕ್ಷಿ ಬಿಡು ಗುರು ಈ ಬಳಗ ಕೆಲ್ಸ ಮಾಡ್ತಾಯಿದೆ ಅಂತ! ನಾನು ಇರೋದು ಕ್ಯಾನಡಾದ್ದಲ್ಲಿ, ಹೇಗೆ contribute ಮಾಡ್ಬಹುದು ಅಂತ ತಿಳ್ಸು ಗುರು! ಈ emailಗೆ subscribe ಆಗ್ಬೇಕಾ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails