ಮೊದಮೊದಲು ಅಂಕಿ-ಅಂಶ ಹುಟ್ಟಿಸು, ಬರ್ತಾ ಬರ್ತಾ ಅದೂ ಇಲ್ಲದೆ ಬೇಕಾದ್ದು ಒದರು!

ನೆನ್ನೆ ನಡೆದ "ನಿನ್ನದೇ ನೆನಪು" ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ಬಂದು ಕೂತಿದ್ದ ನೋಡಿ ಬಿಗ್ ಎಫ್ ಎಂ ೯೨.೭ ನ ಭೂಪ ಕಿರಣ್ ಶ್ರೀಧರ್ರು. ಪಾಪ ಅವನ ಕಂಪನಿಯೋರು ಬಾಯಿಪಾಠ ಮಾಡ್ಸಿದಾರೆ ಅಂತ ಕಾಣತ್ತೆ - "ಬೆಂಗಳೂರಿನಲ್ಲಿ ಕನ್ನಡ ಲೆಕ್ಕಕ್ಕಿಲ್ಲ, ಇಲ್ಲಿರೋದು ಇಂಗ್ಲೀಷೇ" ಅಂತ, ಮಹಾನುಭಾವ ಈ "ಕಲಿಕೆ"ಯನ್ನೇ ಅಲ್ಲಿ ನೆರೆದಿದ್ದವರ ಮುಂದೆ ಪ್ರದರ್ಶಿಸುತ್ತ "ಬೆಂಗಳೂರಿನ ಭಾಷೆ ಇಂಗ್ಲೀಷ್" ಅಂತ ಒದರಿದ್ದಾನೆ. ಅಲ್ಲಿದ್ದ ಪತ್ರಕರ್ತರು ಚೆನ್ನಾಗಿ ತರಾಟೆಗೆ ತೊಗೊಂಡು "ಮೊದಲು ಅಂಕಿ-ಅಂಶ ತೋರಿಸು ಮಗ್ನೆ" ಅಂದಿದಾರೆ. ಎಲ್ಲಿಂದ ತೋರಿಸುತ್ತಾನೆ? ಬೆಪ್ಪಾಗಿ ಹ್ಯಾಪೆಮೋರೆ ಹಾಕಿಕೊಂಡು ಚಡಪಡಾಯಿಸಿಬಿಟ್ಟನಂತೆ.


ಈ ಎಫ್.ಎಂ. ವಾಹಿನಿಯವರ ಯೋಗ್ಯತೆಯೇ ಇಷ್ಟು. ಅಲ್ಲೆಲ್ಲೋ ದಿಲ್ಲಿ-ಗಿಲ್ಲಿಯಲ್ಲೋ ಮುಂಬಾಯಲ್ಲೋ ಹಿಂದಿ ಹಾಡಿಗೆ ಕಾಸು ಕೊಟ್ಟಿರ್ತಾರೆ, ಅದನ್ನೇ ಭಾರತದಲ್ಲೆಲ್ಲ ಹಾಕಿ ಕಾಸು ಉಳಿಸಬೇಕು ಅನ್ನೋ ನೆಪಕ್ಕೆ ನಮ್ಮೂರಲ್ಲಿ ಇಲ್ಲದಿರೋ ಮಾರುಕಟ್ಟೆ ಇದೆ ಅಂತ ಸುಳ್ಳು ಹುಟ್ಟುಹಾಕುತ್ತಾರೆ. ಅಂಕಿ ಅಂಶಗಳನ್ನೂ ತೋರಿಸುತ್ತಾರೆ - ತಮಗೆ ಬೇಕಾದ ಹೊತ್ತಲ್ಲಿ ತಮಗೆ ಬೇಕಾದ ರಸ್ತೆಯಲ್ಲಿ ಹೋಗಿ ತಮಗೆ ಬೇಕಾದ ೪ ಜನರನ್ನು ಕೇಳಿದಂತೆ ಮಾಡಿ ಇಲ್ಲಸಲ್ಲದ ಅಂಕಿ-ಅಂಶಗಳನ್ನ ಹುಟ್ಟಿಸುತ್ತಾರೆ, ಅದನ್ನ ಇಡೀ ಬೆಂಗಳೂರಿಗೆ, ಇಡೀ ಕರ್ನಾಟಕಕ್ಕೆ ತಳಕು ಹಾಕುತ್ತಾರೆ. ಎಲ್ಲೋ ಎಂ.ಜಿ. ರಸ್ತೆಯಲ್ಲಿ ಸಿಕ್ಕ ನಾಲ್ಕು ಜನರು ಒದರಿದ್ದನ್ನ ಆಧಾರವಾಗಿಟ್ಟುಕೊಂಡು ಇಡೀ ಬೆಂಗಳೂರೇ ಹಂಗೆ ಹಿಂಗೆ ಅಂತ ಬರೀತಾರೆ. ಕೋರ್ಟು ಕಚೇರೀಗೆ ಎಳೀದೇ ಇರಲಿ ಅಂತ ಒಂದು ಸಣ್ಣ "*" ಹಾಕಿ ಕಾಣದೇ ಇರೋ ಹಂಗೆ "ನಾವು ಕೇಳಿದ್ದು ಎಂ. ಜಿ. ರಸ್ತೆಯಲ್ಲಿ ೪ ಜನರನ್ನ" ಅಂತ ನಾಚಿಕೆ ಇಲ್ಲದೆ ಬರೆದುಕೊಳ್ಳುತ್ತಾರೆ.


ಒಟ್ಟಿನಲ್ಲಿ ಅಂಕಿ-ಅಂಶ ಹುಟ್ಟಿಸೋ ಕೆಲ್ಸ ಈ ವಾಹಿನಿಗಳಿಗೆ ಹೊಸದೇನಲ್ಲ ಬಿಡಿ. ಆದರೆ ಆ ಸುಳ್ಳು ಅಂಕಿ-ಅಂಶವೂ ಇಲ್ಲದೆ ಬಾಯಿಗೆ ಬಂದಿದ್ದನ್ನ ಒದರಿದ್ದಾನಲ್ಲ ಕಿರಣ್ ಶ್ರೀಧರ್ರು...ಇವನಿಗೇನಂತೀರಿ?

ಇವತ್ತಿನ ಸಂಜೆವಾಣಿಯಲ್ಲಿ ಈ ಬಗ್ಗೆ ಬಂದ ಸುದ್ದಿ ಇಲ್ಲಿದೆ ನೋಡಿ.

3 ಅನಿಸಿಕೆಗಳು:

Anonymous ಅಂತಾರೆ...

Eee Kiran Sreedharru, bhahala kobbidaane. Ivaramma ivnige chandammama torsidra illa Moon-Uncle torsidra kelbeku. Ivnige Kannadada jnana estu ide antha kelbeku. Radio-dalli Ivna matugalo..Aa devrige preethi.. Ivanna Oddu, Oddu, Oddu Hakbeku..

- Madhu

Anonymous ಅಂತಾರೆ...

ಇಂತೋರ್ನ ಹಿಡಿದು ಒದೀಬೇಕು.

ಏನ್ ತಿಂತಾರೋ ಹೊಟ್ಟೆಗೆ? ಅಲ್ಲ ಸುಳ್ಳುಸುಳ್ಳು ಯಾಕೆ ಹೇಳ್‌ಬೇಕು?

ಬೆಂಗಳೂರಲ್ಲಿ ಕನ್ನಡ ಆಯ್ತೆ ದಿಟ. ಹಂಗಂತ ಕನ್ನಡವೇ ಇಲ್ಲ ಇಲ್ಲಿ ಅನ್ನೋದು ಬಲು ಅನ್ಯಾಯ.

ಪರದೇಸಿಗಳು, ಇಲ್ಲಿ ಬಂದು ನಮ್ಮನ್ನು ಓಡಿಸೋ ಹುನ್ನಾರ!

VENU VINOD ಅಂತಾರೆ...

ಆಸಕ್ತಿದಾಯಕ ಬ್ಲಾಗ್ ಪರಿಚಯಿಸಿದ್ದಕ್ಕೆ ಧನ್ಯವಾದ.
ವಿಷಯಸಂಗ್ರಹ ಚೆನ್ನಾಗಿದೆ. ಮುಂದುವರಿಯಲಿ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails