ಹೋಗಿ ಬನ್ನಿ ಕಲಾಂ, ನಿಮಗೆ ಕನ್ನಡಿಗರ ಸಲಾಂ!

ಇದೀಗ ತಮ್ಮ ಸರದಿ ಮುಗಿಸಿದ ಮಾಜಿ ರಾಷ್ಟ್ರಪತಿ ಕಲಾಂ 2005 ನವೆಂಬರ್ರಲ್ಲಿ ಕರ್ನಾಟಕದ ಬೆಳವಣಿಗೆ ಆಗಬೇಕು ಅಂದ್ರೆ ಯಾವಯಾವ ಕೆಲ್ಸ ಸರೀಗೆ ಆಗಬೇಕೂಂತ ಗುರುತಿಸಿ, ಕರ್ನಾಟಕದ ಶಾಸಕರ ಮುಂದೆ ಗೋರ್ಕಲ್ಲಮೇಲೆ ಮಳೆಸುರಿದಂಗೆ ಅವರಿಗೆ ತಿಳಿಸಿದ್ರು. ಅವರು ಗುರುತಿಸಿದ ಕೆಲವು ಅಂಶಗಳು ಹೀಗಿವೆ:
 • ಕನ್ನಡಿಗನ ಸರಾಸರಿ ವರ್ಷದ ಆದಾಯ ತಲಾ 26,000 ರೂಪಾಯಿಂದ 75,000 ರೂಪಾಯಷ್ಟಾಗಬೇಕು ಮತ್ತು ಜೀವನ ಶೈಲಿ ಉತ್ತಮ ಆಗಬೇಕು
 • ಕರ್ನಾಟಕದಲ್ಲಿ ಅಕ್ಷರತೆ ಈಗ 67% ಇದೆ, ಅದು 2012 ಹೊತ್ತಿಗೆ 100% ಆಗಬೇಕು
 • ಕನ್ನಡಿಗರಿಗೆ ಹೆಚ್ಚು ಕೆಲಸ ಸಿಗಬೇಕು, ಅದಕ್ಕೆ ಹೆಚ್ಚು ಉದ್ಯಮಗಳು ಬರಬೇಕು, 2009 ರೊಳಗೆ ಹೆಚ್ಚು ಅವಕಾಶಗಳು ಬಂದು 2 ಕೋಟಿ ಕನ್ನಡಿಗರಿಗೆ ಉದ್ಯೋಗ ಕರ್ನಾಟಕದಲ್ಲಿ ಸಿಗಬೇಕು
 • ಕರ್ನಾಟಕ್ಕೆ ಬೇಕಾಗಿರುವ ವಿದ್ಯುತ್ ಶಕ್ತಿಯನ್ನು ಬಯೋ ಇಲ್ಲಾ ಕಸದಿಂದ ಉತ್ಪಾದಿಸಲು ಕ್ರಮ ಕೈಗೊಳ್ಳಬೇಕು
 • ಮ್ಯಾಂಚೆಸ್ಟರ್ ಆಗಿದ್ದ ದಾವಣಗೆರೆಯಲ್ಲಿ ಮತ್ತು ಇತರ ಕಡೆ ಮತ್ತೊಮ್ಮೆ ಜವಳಿ ಉದ್ಯಮ ತಲೆ ಎತ್ತಬೇಕು. ಹತ್ತಿ ಉತ್ಪಾದನೆ ಹೆಚ್ಚು ಮಾಡಿ ವಿದೇಶಗಳಿಗೆ ಕಳುಹಿಸುವ ಹಾಗೆ ಆಗಬೇಕು. 100 ಕೋಟಿ ಬಟ್ಟೆ ರಫ್ತು ಗುರಿ ಇಟ್ಟುಕೊಂಡರೆ ಇದರಿಂದ 4 ಲಕ್ಷ ಜನರಿಗೆ ಕೆಲಸ ಸಿಗುತ್ತದೆ
 • ಕೃಷಿ ಉತ್ಪಾದನೆ 6,000 ಕೋಟಿ ಇದೆ, 2009ರ ವೇಳೆಗೆ ಅದು 10,000 ಕೋಟಿ ಆಗಬೇಕು, ಈ ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ಗುಣಮಟ್ಟ ಮತ್ತು ಶುದ್ಧತೆ ಬಗ್ಗೆ ಹೆಚ್ಚು ಗಮನ ಕೋಡಬೇಕು
 • ಪ್ರವಾಸೊದ್ಯಮ ಹೆಚ್ಚು ಅಭಿವೃದ್ದಿ ಹೊಂದಬೇಕು, ಕರ್ನಾಟಕವನ್ನು ನೋಡಲು ದೇಶ-ವಿದೇಶಗಳಿಂದ ಜನ ಮುಗಿದುಬಿದ್ದು ಬರಬೇಕು. ಪ್ರವಾಸಿಗರ ಸಂಖ್ಯೆ ಪ್ರತಿ ವರುಷ 90% ಹೆಚ್ಚಾಗಬೇಕು
 • ಹಳ್ಳಿಗಳು ಮತ್ತು ನಗರಗಳ ನಡುವೆ ಅಂತರ ಕಮ್ಮಿ ಆಗಬೇಕು. ಹಳ್ಳಿಗಳಲ್ಲಿ ಎಲ್ಲಾ ಸೌಲಭ್ಯಗಳು ದೊರಕಬೇಕು.
 • ಕರ್ನಾಟಕದ ಪ್ರಮುಖ ನಗರಗಳನ್ನು ಅಭಿವೃದ್ದಿಗೊಳಿಸಬೇಕು, ಮೈಸೂರು, ಮಂಗಳೂರು, ಗುಲ್ಬರ್ಗ, ಮಡಿಕೇರಿ, ಹುಬ್ಬಳ್ಳಿ-ಧಾರವಾಡ, ಬೆಳವಾವಿ ನಗರಗಳನ್ನು ಬೆಂಗಳೂರಿಗೆ ಎಲ್ಲಾ ರೀತಿಯಲ್ಲೂ ಸಂಪರ್ಕ ಇರುವ ಹಾಗೆ ಮಾಡಬೇಕು. ಆಗ ರಾಜ್ಯದ ಅಭಿವೃದ್ದಿ ಎಲ್ಲಾ ಪ್ರದೇಶಗಳಿಗೂ ವಿಸ್ತಾರ ಆಗುತ್ತದೆ. ಹಾಗೇ ಬೆಂಗಳೂರಿನಲ್ಲಿ ಮೆಟ್ರೋ ರೈಲು ಓಡಾಡಿ, ಸಂಚಾರದ ಭಾರ ಕಮ್ಮಿ ಮಾಡಬೇಕು.
 • ನೀರಿನ ಸಮಸ್ಯೆಯನ್ನು ಸರಿಯಾಗಿ ಬಳಸುವದರ ಮೂಲಕ ಬಗೆಹರಸಿಕೊಳ್ಳಬೇಕು
 • ಸರಕಾರ ಯುವಕರಲ್ಲಿ ಉದ್ಯಮಶೀಲತೆ ತರಬೇಕು ಮತ್ತು ಕನ್ನಡಿಗರು ಉದ್ಯಮಶೀಲರಾಗಲು ಸಹಾಯ ಮಾಡಬೇಕು.
ಇದೆಲ್ಲ ಕೇಳಿದ ನಮ್ಮ "ನಾಯಕರು" ಕಲಾಂ ಸಾಹೇಬ್ರಿಗೆ "ಉಘೇ ಉಘೇ" ಹಾಕಿ, ಸಕ್ಕತ್ ಸೂತ್ರಗಳು ರೀ ನಿಮ್ಮದು ಅಂತ ರಾಕೆಟ್ಟಪ್ಪಂಗೇ ರಾಕೆಟ್ ಬಿಟ್ರು , ಆ ರಾಕೆಟ್ಟು ಗಾಳೀಲಿ "ಪುರ್ರ್‍ರ್ರ್‍ರ್ರ್‍ರ್ರ್‍ರ್ರ್" ಆಗೋಗಿದೆ ಈಗ!

ದೇಶ ಕಂಡ ಅತ್ಯುತ್ತಮ ರಾಷ್ಟ್ರಪತಿಗಳಲ್ಲಿ ನಮ್ಮ ಕಲಾಂ ಒಬ್ಬರು. ಇವರಿಂದ ಕನ್ನಡಿಗರು ಕಲಿಯಬೇಕಾಗಿರುವ ಅನೇಕ ಅಂಶಗಳಲ್ಲಿ ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕೂರುವ ಹೇಡಿತನವನ್ನ ಬುಡಸಮೇತ ಕಿತ್ತುಹಾಕಿ ಎಂಥಾ ಕತ್ತಲಲ್ಲೂ ಹೊಸಬೆಳಕಿನ ಕನಸನ್ನು ಮುಂದಿಟ್ಟುಕೊಂಡು ಮುನ್ನುಗ್ಗುವ ಗಟ್ಟಿ ಮನಸ್ಸು.

ಕಲಾಂಗೆ ವಿದಾಯ ಹೇಳುತ್ತ, ಹೋಗಿ ಬನ್ನಿ ಕಲಾಂ, ನಿಮಗೆ ಮತ್ತು ನಿಮ್ಮ ಕನಸುಗಳಿಗೆ ನಮ್ಮೆಲ್ಲರ ಸಲಾಂ! ನಿಮ್ಮ ಕನಸು ನಮ್ಮ ಕನಸೂ ಕೂಡ. ಇಂದಲ್ಲ ನಾಳೆ ನನಸಾಗಿಸದೆ ಬಿಡಲ್ಲ. ಇದು ನಾವು ನಿಮಗೆ ಕೊಡೋ ಮಾತು!

11 ಅನಿಸಿಕೆಗಳು:

kannaDigare eddELi ಅಂತಾರೆ...

ಗುರು, ನಮ್ಮ ಕಲಾಂ ಗುರುಗಳನ್ನು ಕರೆಸಿ ವಿಧಾನ ಸಭೆಯಲ್ಲಿ ಭಾಷಣ ಮಾಡಿಸಿ ಸುವರ್ಣ ಕರ್ನಾಟಕದ ಕನಸನ್ನು ಸಂದೂಕದಲ್ಲಿ ಇಟ್ತು ಬೀಗ ಜಡೆದು ಗೊರಕೆ ಹೊಡೆಯುತ್ತಿದ್ದರೆ ನಮ್ಮ ದೊರೆಗಳು. ಈ ದೊರೆಗಳನ್ನು ಹಾಗೂ ಕಾಫಿ ಕುಡಿದು ಹೊದ್ದು ಮಲಗಿರುವ ನಮ್ಮ ಕನ್ನಡದ ಕಂದಗಳನ್ನು ಬಡಿದೆಬ್ಬಿಸಬೇಕಿದೆ. ಇದಕ್ಕೆ ನಾವು ಮಾಡಿ ತೋರಿಸುವ ಕೆಲಸವೆ ಡಿಂಡಿಮವಾಗಲಿ. ನಾವು ನಡೆದ ದಾರಿಯೆ ಈ ಕನಸನ್ನು ನನಸಾಗಿಸುವ ದಾರಿ ಅಂತ ಜನರಿಗೆ ತೋರಿಸೋಣ

Anonymous ಅಂತಾರೆ...

ಕಲಾಮ್ ಅವರು ಪಾಪ ಅದೇನೋ ಆಸೆ ಇಟ್ಟ್ಕೊಂಡು ಏನೆಲ್ಲ ಯೋಚನೆಗಳನ್ನು ಮಾಡಿ ಹೇಳಿಹೋದರು.. ನಮ್ಮ ಮಂತ್ರಿಗಳು ತಿನ್ನ್ಬಾರದನ್ನ ತಿಂದ್ರು.. ಇನ್ನೂ ತಿನ್ನ್ತನೇ ಇದಾರೆ..
ಎಲ್ಲ waste ಆಗೋಯ್ತು..

Anonymous ಅಂತಾರೆ...

ದುರಂತ ನೋಡ್ರಿ.. ೬ ಕೋಟಿ ಮಂದಿ ಇರು ನಮ್ಮ ರಾಜ್ಯದಾಗ್.. ನಮ್ಮ ರಾಜ್ಯದ ಬಗ್ಗೆ, ನಮ್ಮ ಭವಿಷ್ಯದ ಬಗ್ಗೆ ಕನಸ್ಸ ಕಾಣಾಕ್, ಆ ಕನಸ್ ನಮ್ಮ ದರಿದ್ರ ರಾಜಕೀಯ ಮಂದಿಗೆ ತಿಳಿ ಹೇಳಾಕ್ ಕಲಾಂ ಸರ್ ಬರಬೇಕಾತ್. ನೀವಾ ಒಮ್ಮೆ ವಿಚಾರ ಮಾಡ್ರಿ..ನಮ್ಮ ರಾಜ್ಯದ ಬಗ್ಗೆ ಇಷ್ಟೆಲ್ಲ ವಿಸ್ತಾರವಾಗಿ ವಿಚಾರ್ ಮಾಡಾಕ್, study ಮಾಡಾಕ್ ಕಲಾಂ ಸರ್ ಎಷ್ಟ ವ್ಯೆಯಕ್ತಿಕ ಸಮಯಾ ಕೊಟ್ಟಿರಬೇಕ್..?? ಬ್ಯಾರೆ ಏನು ಬ್ಯಾಡ್ರಿ,, ಬರೇ tourism ಚಂದಂಗ್ develop ಮಾಡಿದ್ರ ಅವನೌನ್ ಬೇಕಾದಂಗ ಉದ್ಯೋಗ ಸ್ರಷ್ಟಿ ಮಾಡಬಹುದು. ಹೇಳಾಕ್ ಏನೇನಿಲ್ಲ ನಮ್ಮ ನಾಡನ್ಯಾಗ್.. ನಾವೆಲ್ಲ ಸೇರಿದ್ರ ಪಕ್ಕಾ ನಮ್ಮ ಕನಸಿನ ಕರ್ನಾಟಕ ಕಟ್ಟಬಹುದ್ರಿ ಗುರುಗಳೇ..ಕನ್ನಡ ಜಾಗ್ರತಿ ಬಾಳ್ ಆವಶ್ಯಕ ಐತ್ರಿ.. ಚಲೋ ಕೆಲ್ಸ ನಡ್ಸಿರಿ,, ನಿಮ್ಮ ಕೂಡಾ ನಾವೆಲ್ಲ ಅದೇವ್ರಿ..

Anonymous ಅಂತಾರೆ...

ರಾಷ್ತ್ರಪತಿ ಭವನದಲ್ಲಿ ಅರಳಿರುವ ಸುಂದರ ಕುಸುಮದಂತೆ ನಮ್ಮ ದೇಶಕ್ಕೆ ಕಂಪನ್ನು ಬೀರುತ್ತ ಇದ್ದರು ಕಲಾಂ. ಎಲ್ಲರಂತಲ್ಲ ನಮ್ಮ ಕಲಾಂ. ಅವರದೆ ವೈಶಿಷ್ಟ್ಯಗಳಿಂದ ತಮ್ಮದೆ ಛಾಪನ್ನು ಮೂಡಿಸಿದ್ದರು. ನಮ್ಮ ರಾಜ್ಯಕ್ಕೆ ಅವರು ಗುರುತಿಸಿದ್ದ ಬೆಳವಣಿಗೆಯ ಅಂಶಗಳನ್ನು ಗಮನಿಸಿದರೆ ಇದು ಮನದಟ್ಟಾಗುತ್ತದೆ. ದೇಶದ ಸರ್ವತೋಮುಖ ಅಭಿವ್ರುದ್ಧಿಗೆ ಪ್ರತಿಯೊಂದು ರಾಜ್ಯದ ಬೆಳವಣಿಗೆ ಮುಖ್ಯ ಎಂಬುದನ್ನು ಮನಗಾಣಬಹುದು.

ಆದರೆ ನಮ್ಮ ರಾಜಕಾರಿಣಿಗಳಿಗೆ ಏನು ಹೇಳಿದರು ಎಮ್ಮೆ ಮೇಲೆ ಬರೆ ಎಳೆದಂಗೆ. ಆ ದಪ್ಪ ಮೈಗೆ ಏನು ಪರಿಣಾಮ ಬೀರೊಲ್ಲ.

ಹಾಗಂತ ನಾವು ಹತಾಶರಾಗಿ ಕೈ ಕಟ್ಟಿ ಕುಳಿತುಕೊಳ್ಳದೆ, ಎನ್ ಗುರು ಹೇಳಿದಂಗೆ ಬನ್ನಿ ನಾವೆಲ್ಲರು ಕಲಾಂ ಸಾರ್ ಕನಸು ನನಸಾಗಿಸೋಣ.

Anonymous ಅಂತಾರೆ...

ಸೂಪರ್‍ ಗುರು..!!

ಈ ಹೊಸ ಯಮ್ಮ ನಮಗೇ ಏನ್ ಮಾಡ್ತಾಳೋ ನೋಡುಮ..

ಈಕೆಮರಾಟಿ ಅಂತ ಸಿವಸೇನೆ ಆಗಲೇ, ಬೆಂಬಲಕೊಟ್ಟಿದೆ.. ದೇವ!!

Anonymous ಅಂತಾರೆ...

ನಮ್ಮ ಸಮಿಶ್ರ ಸರಕಾರ ಅಧಿಕಾರಕ್ಕೆ ಬಂದು ೧೮ ತಿಂಗಳೂ ಆಗ್ತಾ ಬಂತು, ಮಾಡ್ತಿವಿ-ಮಾಡ್ತಿವಿ ಅಂತಾನೆ ಹೇಳ್ತಾ ಅವರೆ, ಮಾಡಿರೋದು ಮಾತ್ರ ಕಮ್ಮಿನೇ. ಹಾಗೂ ತುಂಬಾ ಬಲವಂತ ಮಾಡಿ ಕೇಳಿದರೆ ಹೇಳ್ತಾರೆ...

"The first mission is to elevate all of them and bring smiles to their faces". It could be done by focused development leading to higher per capita income and better quality of life."
ಈ ಸೂತ್ರ ಆಗಿಲ್ಲಾ ಅಂತ ಯಾರು ಹೇಳಿದ್ದು ಗುರು, ಪೈಲೆಟ್ ಆಗಿ ನಮ್ಮ ಕಣ್ಣೀರರಾಣಿ (roadigilida)ರಾಧಿಕರನ್ನು ಆರಿಸಿ, ಅವರೂ ಡಾಲರ್ ಕಾಲನಿಯ ಕೋಟಿ ಮನೆಯಲ್ಲಿ ನಗುತ್ತ ಇರೋ ಹಾಗೆ ಮಾಡಿರುವುದು ಮತ್ತು ಸಾವಿರ ರೂಪಾಯಿ ಸಂಪಾದಿಸುತ್ತ ಅವರ percapita income ಕೋಟಿ ಮಾಡಿದ್ದು ಸಾಧನೆ ಅಲ್ವಾರಾ?. ಅಂತ ವಾಪಿಸ್ ಪ್ರಶ್ನೆ ಹಾಕಿ ನಮ್ಮ ಬಾಯಿ ಮುಚ್ಚಿಸಿದ್ದು ಅಟ್ಟಿ ಲಕ್ಕಮ್ಮ ಮೇಲಾಣೆ ಗುರು.

Anonymous ಅಂತಾರೆ...

ಆಗಿನ ಮುಮ ಆಗಿದ್ದ ಧರ್ಮಸಿಂಗ ಅವರು ನಾವು ಮಾಡೋಣ ಅಂತಾನೆ ಇದ್ವಿ, ಅದಕ್ಕೆ ಅಂತ ಪೂಜೆ ಕೂಡ ಮಾಡಿಸಿದ್ವಿ ನೋಡಿ, ಅಷ್ಟರಲ್ಲಿ ಸರ್ಕಾರ ಪತನ ಆಗಿಹೋಯಿತು. ಮತ್ತೆ ಕಾಂಗ್ರೆಸ ಸರಕಾರ ಅಧಿಕಾರಕ್ಕೆ ಬಂದ್ರೆ ಮತ್ತೆ ಮೊದಲಿಂದಲೂ ಮಾಡ್ತಿವಿ ಚಿಂತೆ ಬ್ಯಾಡ್ರ. ನಮ್ಮ ಜೇವರ್ಗಿ ಕ್ಷೇತ್ರದ ಅಭಿವೃದ್ದಿ ಮೇಲೆ ಆಣೆ ಮಾಡಿ ಹೇಳ್ತಿನಿ, ನಾವು ಅದಕ್ಕೆ ಭದ್ದ ಅಂತ ಒಂದೇ ಸಮನೆ ಹೇಳಿದ್ದನ್ನೆ ಹೇಳ್ತಾವ್ರೆ.

Anonymous ಅಂತಾರೆ...

GurugaLe, bhaaLa chalo ade ri, nimma lekhana..hinga mundavarisigondu hogrila..

Unknown ಅಂತಾರೆ...

kalaam saahebare nimmaMta doora drushti idddiddare ...
navello irtha idvi. adakke eega iro kadene irodu. adru bejarilla sir navella nimma kansanna saakara madakke hontevri ..innu 10-20 varsha admele nodri
namma karnataka hyanga agirthade antha - danyasi

Anonymous ಅಂತಾರೆ...

ಗುರೂ, ಭಾಳ ವಳ್ಳೇ ಕೆಲ್ಸ ಮಾಡ್ತಿದೀಯ, ಆದ್ರೆ ಸಿಕ್ ಸಿಕ್ ಬ್ಲಾಗ್-ಗೆಲ್ಲ ಬಂದ್ಬಿಟ್ಟು ಸಿಕ್-ಸಿಕ್ಕಂಗೆಲ್ಲ ಜಾಹೀರಾತು ಕೊಟ್ಟು ಇಂಪ್ರೆಶನ್ ಹಾಳು ಮಾಡ್ಕೋಬೇಡಪ್ಪಾ.... ಜನಕ್ಕೆ ್ದು ಇಷ್ಟ ಆಗಲ್ಲ, ನೀ ಮಾಡೋ ವಳ್ಳೆ ಕೆಲ್ಸ ನೀರಲ್ ಹುಣ್ಸೆ ಹಣ್ ತೊಳ್ದ ಥರಾ ಆಗತ್ತೆ ಅಷ್ಟೆ.

Anonymous ಅಂತಾರೆ...

Nanige e yamma koothirodu hege kaanisuthaide andre Mangana kaiyalli manikya kottu simhasanda mele koorisidantaagide. Estu divasa A stanakke estu kale itthu.ondu Gaurava, adhimana tandu kottidru. Adre oblu Henninda tanna hata sadisokke, tanna adhikara enu anta torisodike, NDA nemisida Kalamavaranna Nepa maadi Min!!....gutidolu yaavdo Kothina karedukondu bandu koorisidhale Bos----. 6 sari, 7 saari geddiro Dharam singh , Kharge antavaru shikhandigala tara monne monne banda avala munde tale taggisi nintkondthare swabhimaanilladavaru. Swabhimaana illavadru taayi langa bichoddikoo hinjariyadillante.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails