ಕನ್ನಡ ಬಾರದ ಆದಾಯ ತೆರಿಗೆ ಇಲಾಖೆ!

ಈ ಥರಾ ಕಚಡಾ ಜಾಹೀರಾತ್ನ ನಾಲ್ಕು ಜನರ ಮುಂದೆ (ನಾವು ನೋಡಿದ್ದು ನೆನ್ನೆ ವಿ.ಕ.ದಲ್ಲಿ) ಬಿಡೋ ಧೈರ್ಯವಾದರೂ ಬರತ್ತಲ್ಲ ಆದಾಯ ತೆರಿಗೆ ಇಲಾಖೆಯೋರಿಗೆ, ಅದಕ್ಕೇನು ಹೇಳ್ತೀರಿ?ಮೇಲಗಡೆ "ರಿಟರ್ನ ಭರ್ತಿ ಮಾಡುವದು..." ಅನ್ನೋ ವಾಕ್ಯಕ್ಕೆ ಉಪಯೋಗಿಸಿರೋ ಫಾಂಟ್ ಯಾವ್ದು ಅಂತ ಸೊಲ್ಪ ಕೇಳಿ! ಯಾವುದೋ ಮಗು ಕೈಲಿ ಬರೆಸಿದಂಗಿದೆಯಲ್ಲ ಗುರು! ಹಾಗೇ "ತುಂಬಾಸರಳ" ಅನ್ನೋದು ಒಂದು ಪದ ಕನ್ನಡದಲ್ಲಿ ಯಾವಾಗಿಂದ ಆಯ್ತು? ಇನ್ನು ಜಾಹೀರಾತಿನ "ಮೈ"ಯಲ್ಲೆಲ್ಲ "ಆದಾಯಕರ" ಅನ್ನೋ ಪದ ಉಪಯೋಗಿಸಿದೆ, ಕೆಳಗಡೆ ಮಾತ್ರ "ಆದಾಯ ತೆರಿಗೆ ಇಲಾಖೆ" ಅಂದಿದೆ. ಹಿಂದಿಯಿಂದ ಅನುವಾದ ಮಾಡುವಾಗ ಮೈಯಲ್ಲಿ ಮಾತ್ರ "ಕರ" ಅನ್ನೋದನ್ನ ಹಾಗೇ ಬಿಟ್ಟಿರೋದು ನಗೆಪಾಟಲಾಗಿದೆ! ಹಿಂದಿಯಲ್ಲಿ "ಆದಾಯ್ ಕರ್" ಅಂದಿರ್ತಾರೆ, ಅದನ್ನ ಹಾಗೇ ಕನ್ನಡದ ಲಿಪಿಯಲ್ಲಿ ಯಾರೋ ಅನುವಾದಕಲಾವಿಶಾರದ ಬಿಟ್ಟಿದಾನೆ, ಅಷ್ಟೆ.

ಇನ್ನು ಈ ಕೆಳಗಿನ ವಾಕ್ಯಕ್ಕೆ ಏನಾದರೂ ಅರ್ಥ ಇದ್ಯಾ ಗುರು?

ನೀವು ವೇತನ ಪಡೆಯುವರು ಕಾರ್ಪೊರೇಟ ಮೌಲ್ಯಮಾಪನಕ್ಕೆ ಒಳಪಡದವರು ಹಾಗೂ ನಿಮ್ಮ ಲೆಕ್ಕ ಪತ್ರಗಳನ್ನು ಆಡಿಟ್ ಮಾಡುವ ಅಗತ್ಯವಿಲ್ಲದಿದ್ದರೆ ದಯವಿಟ್ಟು ಜುಲೈ 31, 2007 ರೊಳಗಾಗಿ ರಿಟರ್ನ ಭರ್ತಿಮಾಡಿ.

ಏನು ಹಿಂಗಂದ್ರೆ? "ಪಡೆಯುವರು" ಅನ್ನೋದರಲ್ಲಿ ಒಂದು "ವ" ದಿಲ್ಲಿಯಿಂದ ಬೆಂಗಳೂರಿಗೆ ಬರೋ ರೈಲಲ್ಲಿ ತಪ್ಪಿಸಿಕೊಂಡಂಗಿದೆಯಲ್ಲ? ಸೊಲ್ಪವಾದರೂ ಕನ್ನಡ ವ್ಯಾಕರಣದ ಗಂಧ ಇರಬಾರದೇ ಈ ಜಾಹೀರಾತು ಮಾಡೋರಿಗೆ? ಕರ್ನಾಟಕದಲ್ಲಿ ಆದಾಯ ತೆರಿಗೆ ಇಲಾಖೆ ಸೇರೋರಿಗೆ ಇಂಗ್ಲೀಷ್/ಹಿಂದಿ ಕಡ್ಡಾಯವಾಗಿ ಬರಬೇಕು ಅಂದ್ರೆ ಇನ್ನೇನಾಗತ್ತೆ ಗುರು? ಮೇಲಿನ ವಾಕ್ಯವನ್ನ ನಿಜವಾದ ಕನ್ನಡಿಗ ಬರೆದಿದ್ದರೆ ಹೀಗಿರುತ್ತಿತ್ತು, ಅದಕ್ಕೆ ಇಂಥದ್ದು ಅಂತ ಅರ್ಥ ಇರುತ್ತಿತ್ತು:

ನೀವು ವೇತನ ಪಡೆಯುವವರೂ ಕಾರ್ಪೊರೇಟ ಮೌಲ್ಯಮಾಪನಕ್ಕೆ ಒಳಪಡದವರೂ ಆಗಿದ್ದು ನಿಮ್ಮ ಲೆಕ್ಕ ಪತ್ರಗಳನ್ನು ಆಡಿಟ್ ಮಾಡುವ ಅಗತ್ಯವಿಲ್ಲದಿದ್ದರೆ ದಯವಿಟ್ಟು ಜುಲೈ 31, 2007 ರೊಳಗಾಗಿ ರಿಟರ್ನ ಭರ್ತಿಮಾಡಿ.


ಇದನ್ನ ಇಲಾಖೆಯೋರು ಓದ್ತಿದಾರಾ ಗುರು? ಸೊಲ್ಪ ಕೇಳಿ! ಇಷ್ಟು ಬೇಕಾಬಿಟ್ಟಿ ಜಾಹೀರಾತು ಮಾಡೋದು ಇವರಿಗೆ ಒಳ್ಳೇ ಹೆಸರು ತರುತ್ತಾ? ಇದಕ್ಕಾದರೂ ಕನ್ನಡಿಗರನ್ನ ನೇಮಿಸಿಕೊಳ್ಳಬಾರದೆ?

ಅಂದಹಾಗೆ ಅಲ್ಲಿ ಕೊಟ್ಟಿರೋ ಅಂತರ್ಜಾಲ ತಾಣಕ್ಕೆ ಹೋಗಿ ನೋಡಿ. ಅದು ಕನ್ನಡದಲ್ಲಿ ಯಾಕಿಲ್ಲ ಅಂತ ಕೇಳಿ. ಆದಾಯ ತೆರಿಗೆ ಬಗ್ಗೆ ಮಾಹಿತಿ ಪಡ್ಕೊಳಕ್ಕೆ ನಮ್ಮದಲ್ಲದ ಭಾಷೆಗಳಾದ ಇಂಗ್ಲೀಷೋ ಹಿಂದೀನೋ ಬರಬೇಕು ಅನ್ನೋದು ಒಂದು ಪ್ರಜಾಪ್ರಭುತ್ವಕ್ಕೆ ಶೋಭಿಸುತ್ತಾ? ಸೊಲ್ಪ ಯೋಚನೆ ಮಾಡು ಗುರು!

3 ಅನಿಸಿಕೆಗಳು:

Anonymous ಅಂತಾರೆ...

ಸರಿ ನಾವು ಯಾರು ಇನ್ಕಂ ತೆರಿಗೆ ಕಟ್ಟೋದೇ ಬೇಡ!! :)

ಕನ್ನಡದಲ್ಲಿ ಅರ್ಜಿ ತುಂಬಿಸಬೋದ?

ಪವ್ವಿ ಅಂತಾರೆ...

ನಮ್ಮ ಸಿದ್ದಲಿಂಗಯ್ಯ ಪಾಪ ಸನ್ಮಾನ ಮತ್ತು ಭಾಷಣ ಮಾಡೊದ್ರಲ್ಲೆ ಬಿಜಿ ಆಗಿದ್ದಾರೆ, ಅದಕ್ಕೆ ಪಾಪ ಕಣೊಲ್ಲ. ಕಂಡರೂ ನಮ್ಮ ರಾಷ್ತ್ರಭಾಷೆ ಹಿಂದಿ ಅಲ್ವಾ ಅಂತ ಪ್ರಶ್ನೆ ಕೇಳ್ತಾರಲ್ಲ ಗುರು ...

Anonymous ಅಂತಾರೆ...

thumbane precise aagi heliddiri. ishtakku inthaha sign thing itself is really painful.
income tax iga ondu rithiya kathe aagi hogide!

'-----------------------------------
http://quillpad.in/kannada/ The best editor to type in Kannada for blogs!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails