ಆದರೆ ಯು.ಎನ್. ಗೆ ಹಿಂದಿ ಏರಿಕೆ ಹೆಚ್ಚದೀತೆ ಕನ್ನಡಿಗನ ಮೇಲೆ ಹಿಂದಿ ಹೇರಿಕೆ?

ಭಾರತೀಯ ಭಾಷೆಗಳಲ್ಲಿ ಒಂದಾದ ಹಿಂದಿಯನ್ನು ಯು.ಎನ್. ನಲ್ಲಿ ಒಂದು ಅಧಿಕೃತ ಭಾಷೆಯಾಗಿ ಒಪ್ಪಿಕೊಳ್ಳಿ ಅಂತ ಭಾರತ ಸರ್ಕಾರ ಭಾರೀ ಲಾಬಿ ನಡೆಸಿದೆ. ನ್ಯೂಯಾರ್ಕಿನಲ್ಲಿ ವಿಶ್ವ ಹಿಂದಿ ಸಮ್ಮೇಳನ ಮಾಡುವುದೇನು, ಯು.ಎನ್. ಸೆಕ್ರೆಟರಿ ಜನರಲ್ ಕೈಲಿ ಹಿಂದಿ ಮಾತಾಡಿಸುವುದೇನು! ಬಾನ್ ಕಿ-ಮೂನ್ ತಮ್ಮ ಭಾಷಣದಲ್ಲಿ ಹೀಗನ್ನಬೇಕೆ?:
After all, as India's national language,...

ಇವರಿಗೆ ಯಾರು ಪಾಠ ಕಲಿಸಿದೋರು ಹಿಂದಿ ಇಂಡಿಯಾದ ರಾಷ್ಟ್ರಭಾಷೆ ಅಂತ? ಭಾರತೀಯ ಒಕ್ಕೂಟದ ಸಂವಿಧಾನದಲ್ಲೇನು ಹಾಗಿಲ್ಲವಲ್ಲ? ಇಂಗ್ಲೇಷಿನ ಜೊತೆ ಹಿಂದಿ ಒಂದು ಅಧಿಕೃತಭಾಷೆ ಅನ್ನೋ ಸ್ಥಾನವನ್ನ ಹಿಂದಿಯೋರು ತಮಗೆ ತಾವೇ ಕೊಟ್ಟಿಕೊಂಡಿರೋದು. ಅಷ್ಟು ಬಿಟ್ಟು ಹಿಂದಿಯನ್ನ ರಾಷ್ಟ್ರಭಾಷೆ ಅನ್ನೋ ಸುಳ್ಳನ್ನ ಪಾಪ ಈ ವಯ್ಯನಿಗೆ ಹೇಳಿಕೊಟ್ಟಿರೋದು ಕೇಂದ್ರಸರ್ಕಾರವೇ ಇರಬೇಕು! ಸ್ವಲ್ಪವೂ ಹಿಂದೆ-ಮುಂದೆ ವಿಚಾರಿಸದೆ ವಿಶ್ವಸಂಸ್ಥೆಯ ಮುಖ್ಯಸ್ಥ ಅನ್ನಿಸಿಕೊಂಡೋರಿಗೆ ಇಷ್ಟು ಅಜ್ಞಾನ ಸ್ವಲ್ಪವೂ ಶೋಭಿಸಲ್ಲ. ಇವರ ವಿಶ್ವ ತಮ್ಮ ಸುತ್ತ ಮುತ್ತ ಲಾಬಿ ಮಾಡುತ್ತಿರೋರಿಗೆ ಮೀಸಲಾಗಿರೋ ಬಾವಿ-ಕಪ್ಪೆಯ ವಿಶ್ವ ಅನ್ನೋದು ಇದರಿಂದ ಸ್ಪಷ್ಟ ಗುರು!

ಐ.ಬಿ.ಎನ್. ಲೈವ್ ಪ್ರಕಾರ ಈ ಸಮ್ಮೇಳನಕ್ಕೇಂತ ಕೇಂದ್ರ ಸರ್ಕಾರ (ರಾಮನ ಲೆಕ್ಕದಲ್ಲಿ; ಕೃಷ್ಣನ ಲೆಕ್ಕದಲ್ಲಿ ಗೋವಿಂದ!) ೩ ಕೋಟಿ ಕರ್ಚು ಮಾಡಿದೆ ಬೇರೆ! ಮತ್ತೆ ಬಾಲೀವುಡ್ಡು ತುಂಬ ಜನಪ್ರಿಯವಂತೆ, ಅದಕ್ಕೆ ವಿಶ್ವಸಂಸ್ಥೆಯಲ್ಲಿ ಅಧಿಕೃತಭಾಷೆ ಸ್ಥಾನ ಸಿಗಬೇಕಂತೆ! ಕೇಂದ್ರ ಸರ್ಕಾರಕ್ಕೆ ಯಾವುದೋ ಒಂದು ಭಾಷೆಗೆ ಇಷ್ಟು ಹಣ ಕರ್ಚು ಮಾಡೋ ಹಕ್ಕು ಕೊಟ್ಟೋರು ಯಾರು? ಕುವೈತಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡಿಯತ್ತಲ್ಲ, ಅದು ನಡೆಯೋದಾದರೂ "ನಮ್ಮ" ಕೇಂದ್ರ ಸರ್ಕಾರಕ್ಕೆ ಗೊತ್ತಾ? ಅದಕ್ಕೆಷ್ಟು ದುಡ್ಡು ಕೊಟ್ರು? ಎಷ್ಟು ಕೊಟ್ರು? ಒಂದು ಬಿಡಿಗಾಸು ಕೊಟ್ರಾ? ಈಗ್ಲೇ ಹೀಗಿರುವಾಗ ಇನ್ನು ಹಿಂದಿಗೆ ವಿಶ್ವಸಂಸ್ಥೆಯಿಂದ ಮಾನ್ಯತೆ ಸಿಕ್ಕರೆ ಕನ್ನಡ ಅಂತ ಒಂದು ಭಾಷೆ ಇದೆ, ಕರ್ನಾಟಕ ಅಂತ ಒಂದು ರಾಜ್ಯ ಇದೆ ಅನ್ನೋದನ್ನೇ ಕೇಂದ್ರಸರ್ಕಾರ ಮರೆತುಬಿಡೋದ್ರಲ್ಲಿ ಸಂದೇಹ ಇದ್ಯಾ?

ಈಗಾಗಲೇ ಹಿಂದಿಯನ್ನ ರಾಷ್ಟ್ರಭಾಷೆ ಅಂತ ಇಡೀ ಭಾರತದಲ್ಲಿ ಕೃಷ್ಣನ ಲೆಕ್ಕದಲ್ಲಿ ಪ್ರಚಾರ ಮಾಡಾಯಿತು, ನಮ್ಮ ಪಠ್ಯಪುಸ್ತಕಗಳಲ್ಲೂ ಅದೇ ಸುಳ್ಳು ಬರೆದು ಹಿಂದಿಬಾರದವರಿಗೆಲ್ಲ ತಲೆತಿರುಗಿಸಿದ್ದಾಯಿತು, ಇನ್ನು ಯು.ಎನ್. ಸೆಕ್ರೆಟರಿ ಜನರಲ್ಗೂ ಬಾಯಿಪಾಠ ಮಾಡಿಸಿದ್ದಾಯಿತು, ಇನ್ನು ಹಿಂದಿಗೆ ವಿಶ್ವಸಂಸ್ಥೆಯ ಅಧಿಕೃತಭಾಷೆ ಅನ್ನೋ ಸ್ಥಾನ ಸಿಕ್ಕರೆ ಕನ್ನಡ ಗೋಓಓಓಓಓಓಓವಿಂದ! ಕರ್ನಾಟಕದಲ್ಲಿರೋ ಹಿಂದಿ ವಲಸಿಗರಿಗಂತೂ ಅಹಂಕಾರ ನೆತ್ತಿಗೇರೋದರಲ್ಲಿ ಸಂದೇಹವೇ ಇಲ್ಲ! ಮುಂದೆ ಇವೆಲ್ಲ ಕೇಳಿಸಿಕೊಳ್ಳಬೇಕಾದೀತು:

"ಕರ್ನಾಟಕದಲ್ಲಿ ’ಕನ್ನಡ್’ ತೆಗೀರಿ, ಹಿಂದಿ ಹಾಕಿ, ಹಿಂದಿ ವಿಶ್ವಸಂಸ್ಥೆಯ ಅಧಿಕೃತಭಾಷೆ". "ಬಂದ್ರು ಬಂದ್ರು ವಿಶ್ವಸಂಸ್ಥೆಯ ಅಧಿಕೃತಭಾಷೆಯಾದ ಹಿಂದಿ ಮಾತಾಡುವ ಅರಸರು ಬಂದ್ರು, ದಾರಿ ಬಿಡಿ!". "ಏನು ಕನ್ನಡಾನಾ? ಅದೇನದು? ಸ್ಲಮ್ಮುಗಳಲ್ಲಿ ಮಾತಾಡೋ ಭಾಷೆ ಅದು! ಹಿಂದಿ ನೋಡಿ - ವಿಶ್ವಸಂಸ್ಥೆಯ ಅಧಿಕೃತ ಭಾಷೆ".

ಇಷ್ಟೇ ಅಲ್ಲ. ನಮ್ಮ ದುಡಿಮೆಯಿಂದ ನಮ್ಮ ಮೊದಲನುಡಿ, ನಮ್ಮ ತೊದಲನುಡಿ, ನಮ್ಮೊಲುಮೆಯ ಕನ್ನಡಕ್ಕೆ ಸಿಗಬೇಕಾದ ಹಣ ಸಂಬಂಧವಿಲ್ಲದ ಹಿಂದಿಗೆ ಕಡ್ಡಾಯವಾಗಿ ಕೊಡಿ ಅಂತ ಕಿತ್ತುಕೊಂಡು ಹೋಗ್ತಾರೆ, ನಾವು ಬೆಪ್ಪರಂಗೆ ನೋಡ್ತಾ ಕೂತಿರಬೇಕಾಗತ್ತೆ!

ಈ ಸಮಯದಲ್ಲಿ ಕನ್ನಡಿಗ ಏನು ಮಾಡಬೇಕು? ನಮ್ಮ ಕಾಸಿಂದ ಪಕ್ಕದ ಮನೇಲಿ ಕೂಸು ಹುಟ್ಟಿತು ಅಂತ ನಮ್ಮನೇಲಿ ತೊಟ್ಟಿಲು ತೂಗೋದನ್ನ ಬಿಟ್ಟು ಕನ್ನಡಿಗ ನಿಜವಾಗಲೂ ಭಾರತದಲ್ಲಿ ನಮಗೆ ಯಾವ ಸ್ಥಾನ ಇದೆ ಅನ್ನೋದನ್ನ ಯೋಚನೆ ಮಾಡಬೇಕು. ಆದರ್ಶವಾದ ಒಕ್ಕೂಟ ವ್ಯವಸ್ಥೆಯ ರೀತಿಯಲ್ಲಿ ಭಾರತ ಕೆಲಸ ಮಾಡಬೇಕಾದರೆ ಈ ನಾಟಕವೆಲ್ಲ ನಡಿಯಲ್ಲ ಅಂತ ಅರ್ಥ ಮಾಡ್ಕೋಬೇಕು! ಕನ್ನಡದ ಮನೆಗೆ ಬೆಂಕಿ ಬಿದ್ದಿರುವಾಗ ಹಿಂದಿಯ ಮನೆಗೆ ಸುಣ್ಣ-ಬಣ್ಣಕ್ಕೆ ದುಡ್ಡು ಕೊಡಲ್ಲ ಅಂತ ಪಣ ತೊಡಬೇಕು! ಈ ಹಗಲು ದರೋಡೆಯನ್ನ ನಿಲ್ಲಿಸಬೇಕು!

ಇಲ್ದಿದ್ರೆ ನಾವೂ ಗೋವಿಂದ ನಮ್ಮ ಕನ್ನಡವೂ ಗೋವಿಂದ, ನಮ್ಮ ಕರ್ನಾಟಕವೂ ಗೋವಿಂದ! ಅಲ್ಲಲ್ಲ. "ಗೋವಿಂದ್"!

19 ಅನಿಸಿಕೆಗಳು:

Anonymous ಅಂತಾರೆ...

ಗುರು... ಭಾರತದಾಗೆ ಇರೋದು ಎಲ್ಡೇ ರಾಷ್ಟ್ರ ಭಾಸೆಗೋಳು. ಒಂದು ಇಂದಿ ಆಮ್ಯಾಗೆ ತ್ಯಮಿಳು. ಮಿಕ್ಕದ್ದೆಲ್ಲಾ ದೇಶ್ಯಭಾಷೆಗಳು (local languages). ಆಟಕ್ಕುಂಟು ಲೆಕ್ಕಕ್ಕಿಲ್ಲ ಅಸ್ಟೇಯಾ!

ಇನ್ನು ಕೇಂದ್ರ ಸರ್ಕಾರಕ್ಕೆ ಕನ್ನಡ ಅಂತ ಒಂದು ಇದೆ ಅಂತ ಎಂಗ್ಲಾ ತಿಳೀತದೆ? ನಮ್ಮ ಎಂಪಿಗಳು ಕನ್ನಡದಾಗ ಮಾತಾಡಿದ್ರೆ ತಾನೆ? ಕನ್ನಡದಾಗ ಮಾತೋಡೋದಿರ್ಲಿ. ಅವ್ರು ಬಾಯೇನಾರಾ ಬಿಟ್ಟಿದ್ದಾರಾ? ಅಲ್ಲಿ ಅವ್ರು ಬಾಯ್ನಲ್ಲಿ ಮಾತಾಡೋಕ್ಕಿಂತ ಅಂಡಲ್ಲಿ ಪುರ್‍ ಬಿಟ್ಟಿದ್ದೇ ಜಾಸ್ತಿ!

Girish ಅಂತಾರೆ...

namaskaara doregaLge ... neevu chennaagg yeno bardhidheeraa, aadhre nannge vondh artha aaglilla hindi namm rashtrabhaase antha voppkoNdre yenn thappu anntha? official language yeno nija, jothege nammdhu antha irodhu thappenu guru!!

Kannada govinda aagodhu Hindi na raashtra bhaashe maaDodhrindha alla ... Kannada govinda aagodhu Kannadigarige abhimaana, bhaashe prema illdhe irodhrindha ... prema andhre vikopa/prakopa fighting passion antha allaa ... Kannada vuddhaaraa maaDbekaadhre aache noDbedi dore ... firstu namm voLge nodi saaaku ... koLth hogthaa iro namm janruna nodi, MG Road naa nodi saaaku ....

Karnatakakke govinda aagodhu Hindi na raashtra bhaashe maaDodhrindha allaa Vaataal anntha mahaan raajakaaraNigaLindha .... dhikkooo dase illadhe, adhikaaraa naayigaLoo, brashta jagaLagaNtaroo aadha namma manthri matthu administration inndha ...

desha dindha Karnatakakke aaglee, Kannadakke aaglee yaavatthooo bedharike bandhillaa ... kannada bere bhaashe gaLa haage vondhu bhaashe ashte, tamilooo kooda ....

allaa swaami, heeegg heLo haagidhre maximum gnaanapeeta prashasti nammge barrthirrlillaa ... talent idhe guru, aadhre national encouragementooo idhe ... idhanna neglect maaDodh beda ...

beDdhe iro "divide and rule" approach tharodh beda .... prema irrli aadhre namm limitations arrtha maadkoNdre voLLedhu .. Telugu yenn kammi? Marathi yenn kammi? Bengali yenn kammi? yellaa ive guru, aadhre Hindi annodhooo namm deshadha vondhu pairu adhanna thuLibedi ... it connects Indians more than English can ... dayavittu artha maadkoLee ...

naaanoo kannada abhimaani guru, haagandh maathrakke fanatic about it aagbekilla allve?

heege bareethaa iri ... kushi aayythu ee forum ...

IrsuMursu ಅಂತಾರೆ...

ಗಿರಿಶ್ ಚಂದ್ರ ಅವರೆ, ನಿಮ್ಮ ಮಾತು ಸ್ವಲ್ಪ ಸಿಹಿ ತುಂಬ ಕಹಿ ಅನ್ನಸ್ತು ನನಗೆ, ಯಾಕೇಂತ ಕೇಳಿ:

ಮೊದಲಾಗಿ, ಹಿಂದಿ ರಾಷ್ಠ್ರ ಭಾಷೆ ಅನ್ನೋದು ಭಾರತದ ಸಂವಿಧಾನಬಾಹಿರವಾದದ್ದು! ಒಂದು ಭಾಷೆಯನ್ನು ರಾಷ್ಠ್ರ ಭಾಷೆ ಅಂತ ನಿರ್ಧರಿಸಬೇಕಾದ್ರೆ ಎಲ್ಲ ರಾಜ್ಯಗಳು/ರಾಜ್ಯದಿಂದ ಹೋದ ಪ್ರತಿನಿಧಿಗಳು ಒಪ್ಪಬೇಕು. ಈ ವಿಷಯ ಬಂದಾಗ ನೋಡಿ ನಮ್ಮ ಅಕ್ಕ ಪಕ್ಕದ ರಾಜ್ಯಗಳ ವರಸೆ ಹೇಗಿರುತ್ತೆ ಅಂತ.

ನಮಗೆ ಹಿಂದಿಯ ಅವಶ್ಯಕತೆಯೇ ಇಲ್ಲ, ಮುಂದೆಯೂ ಇರಬೇಕಾಗಿಲ್ಲ. ಹಿಂದಿಯಿಂದ ನಮ್ಮ ಹೊಟ್ಟೆ ತುಂಬುವುದಿಲ್ಲ, ಸಧ್ಯಕ್ಕೆ English ಇದೆ, ಮಿಕ್ಕೆಲ್ಲಾ ವಿಚಾರಗಳಿಗೂ ಕನ್ನಡ ಇದೆ. ಹೇಗೆ ನಮಗೆ ಪಾರ್ಸಿ, ಫ್ರೆಂಚ್ ಅಥವಾ ತಮಿಳು ಬೇಕಿಲ್ಲವೋ ಹಾಗೆಯೆ ಹಿಂದಿ ಕೂಡ ಬೇಕಿಲ್ಲ, ಏನಿದ್ದರೂ academic interest ಅಷ್ಟೆ.

ಕರ್ನಾಟಕದ ೨೦೦೦ಕ್ಕೂ ಹೆಚ್ಚು ವರುಷಗಳ ಇತಿಹಾಸದಲ್ಲಿ ಹಿಂದಿ ಯಾವತ್ತೂ ಆಡು ಭಾಷೆ ಆಗಿರಲಿಲ್ಲ, ಈಗ ಹೀಗಾಗುವ ಅವಶ್ಯಕತೆಯಂತೂ ಇಲ್ಲವೇ ಇಲ್ಲ. ಕರ್ನಾಟಕದಲ್ಲಿ ಹಿಂದಿ ಕಲಿಯಬೇಕು, ರಾಷ್ಠ್ರ ಭಾಷೆ ಎಂದು ಒಪ್ಪಬೇಕು ಅನ್ನುವುದು ದಬ್ಬಾಳಿಕೆಯ(hegemony) ಮಾತಷ್ಟೆ.

"ಭಾರತ ದೇಶ" ಅನ್ನುವ ವ್ಯವಸ್ಥೆಯಿಂದ ಕರ್ನಾಟಕಕ್ಕೆ/ಕನ್ನಡಕ್ಕೆ ಒಳ್ಳೆಯದೇ ಆಗಿದೆ. ಆದರೆ ಹಿಂದಿಯ ಹೇರಿಕೆಯಿಂದ ಕನ್ನಡಕ್ಕೆ ಆಗಿರುವುದು ಕೆಟ್ಟದ್ದಷ್ಟೆ, ನೀವೇ ಹೇಳಿದ ಹಾಗೆ M G Road ಇದಕ್ಕೆ ಸಾಕ್ಷಿ. ಭಾರತ ಮತ್ತು ಹಿಂದಿ ಎರಡೂ ಪ್ರತ್ಯೇಕ ವಿಷಯ/ವಸ್ತುಗಳು, ನೀವು ಅವುಗಳನ್ನು ಹಾಗೆಯೇ ನೋಡಬೇಕು. Divide and Ruleಗೂ, ಹಿಂದಿ ಭಾಷೆ ಬೇಡ ಅನ್ನೋದಕ್ಕೂ ಯಾವುದೇ ಸಂಬಂದ ಇಲ್ಲ.

ನನಗೆ ಹಿಂದಿ ಸರಿಯಾಗಿ ಬರಲ್ಲ, ನಾನು ನನ್ನ ಹೊರ ರಾಜ್ಯದ ಮಿತ್ರರೊಡನೆ ಮಾತಾಡೋದು Englishನಲ್ಲಿ, connection ಇದೂವರೆಗೆ ಕೈ ಕೊಟ್ಟಿಲ್ಲ!

ಕನ್ನಡಿಗರಿಗೆ ಅಭಿಮಾನ ಇಲ್ಲ/ಕಡಿಮೆ ಅನ್ನೋದು ಶುಧ್ದ ಸುಳ್ಳು, ನೀವು ಹಾಗೆಲ್ಲ ಎನೇನೋ ಬರೆಯಬಾರದು. ಹಾಗೆಯೇ ಭಾಷೆಯ ಬಗ್ಗೆ ಕಾಳಜಿ ಇರುವವರನ್ನ fanatics ಅಂದ್ರೆ ತಪ್ಪಾಗತ್ತೆ.

ಹಿಂದಿ ಅನ್ನೋ ಪೈರನ್ನ ಬೆಳಸಲಿಕ್ಕೆ, ಉತ್ತರದಲ್ಲಿ ೧೦ಕ್ಕಿಂತ ಹೆಚ್ಚು ರಾಜ್ಯಗಳಿವೆ, ಮನಸೋ ಇಛ್ಛೆ ಬೆಳೆಸಲಿ. ಅದೆ ಕರ್ನಾಟಕ ಎಂಬ ಒಂದು ರಾಜ್ಯದಲ್ಲಿ ಕನ್ನಡದ ಪೈರನ್ನು ಉಳಿಸೋದು ನಾವು ಮಾಡಲೇಬೇಕಾದ ಕೆಲಸ. ನೀವೇ ಹೇಳಿ ಕರ್ನಾಟಕದಲ್ಲಿ ಕನ್ನಡ ಉಳಿಸೋದು fanatismಒ ಅಥವಾ ಹಿಂದಿ ಬೆಳೆಸೋದು fanatismಒ ಅಂತ?

-ಇರ್ಸು ಮುರ್ಸು

Anonymous ಅಂತಾರೆ...

hi enguru,

bahala sariyaagi heLddiri. Namma hindi ghulamagiri hogovaregu ee reethi maatado girish chandraru idde irataare. Avarige innu hindi raashtrabhaashe anno moodanambike hoda haage annisutta illa.


nimmava,
Ranga

Anonymous ಅಂತಾರೆ...

UN office na email viLaasa tegedukondu naavugaLu avarige Hindi bhaaratada raashtrabhaasheyalla endu manavarike maadikodabeku. allade, hindi yindaagi bere bhaashegaLigaaguttiruva anyaayavannu avarige manavarike maaDikottu, Hindi yannu adhukrutabhaashe yendu oppitkolladante vinantisabeku..

yaaradroo UN office na email viLaasa kodteera??

Amarnath Shivashankar ಅಂತಾರೆ...

ನಿಮ್ಮ ಮಾತುಗಳನ್ನು ಓದುತ್ತಿದ್ದರೆ ಕಾಳಿಂಗರಾಯರು ಹೇಳಿದಂತೆ "ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ"
ಅಲ್ಲ ಸ್ವಾಮಿ, ತಮಗೆ ಹಿಂದಿ ಯ ಮೇಲೆ ವ್ಯಾಮೋಹ ಅಥವ ಪ್ರೀತಿ ಇರುವುದು ವಿಚಿತ್ರವಾಗಿ ಕಂಡುಬರುತ್ತಿದೆ.
ನಿಮ್ಮ ವಿಶ್ವ ಮಾನವ ಕಣ್ಣುಗಳಲ್ಲಿ ಕನ್ನಡಕ್ಕೆ ಅನ್ಯಾಯವಾಗುತ್ತಿರುವುದು ಕಾಣುತ್ತಿಲ್ಲವೇ?

--ರೈಲ್ವೆ ಯಲ್ಲಿ ಕನ್ನಡ ತೆಗೆಯಿರಿ ಅಂತ ಹೇಳಿದ್ದು ಈ ಹಿಂದಿ ಸಾಮ್ರಾಜ್ಯ ಶಾಹಿಗಳು
--ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಕೊಡಿ ಎಂದು ಎಷ್ಟು ವರುಷಗಳಿಂದ ಕೇಳಿದರು ಕೊಡುತಿಲ್ಲ.ಅದಕ್ಕೆ ಅವರು ಕೊಟ್ಟ ಕಾರಣ ಕೇಂದ್ರ ಸರ್ಕಾರದಲ್ಲಿ ಹಣವಿಲ್ಲವೆಂದು
ಇಗ ಯು.ಎನ್ ನಲ್ಲಿ ಹಿಂದಿ ಸಮ್ಮೇಳನ ಮಾಡುವುದಕ್ಕೆ ದುಡ್ಡು ಎಲ್ಲಿಂದ ಬಂತು?

ನಮ್ಮ ಜನರು ಹಿಂದಿ ಯನ್ನು ಒಪ್ಪಿಕೊಂಡಿರುವುದರಿಂದ ಕನ್ನಡಕ್ಕೆ ಸಮಸ್ಯೆಗಳು ಹೆಚ್ಚುತ್ತಿರುವುದು.
ಇದನ್ನೆ ಪೊಳ್ಳೂ ರಾಷ್ಟ್ರೀಯತೆ ಎನ್ನುವುದು.
ಹಿಂದಿಗೇನು ಕೊಂಬಿಲ್ಲ.ದೇಷದ ಉಳಿದ ಭಾಷೆಗಳಂತೆ ಅದೂ ಒಂದು.
ನಮಗಿರುವುದು ಒಂದೇ ಭಾಷೆ, ಅದು ಕಸ್ತೂರಿ ಕನ್ನಡ

Anonymous ಅಂತಾರೆ...

ಒಳ್ಳೆಯ ಅರಿಕೆ.

ನನ್ನಿ! ಎನ್ಗುರು.

ತಮಿಳರು ಇದಕ್ಕಾಗಾಲೇ ಪ್ರತಿಭಟನೆ ಶುರು ಹಚ್ಚಿದ್ದಾರೆ!!

Anonymous ಅಂತಾರೆ...

please sign this petition:

http://www.petitiononline.com/19652007/petition.html

Anonymous ಅಂತಾರೆ...

ee ondu vishayadalli bahusha navella thamilu/telegu anno vicharavillade onde ommatakke barabEku, "namage hindi beda ashte". idakke hichchina prachaara kodoNa ...

Anonymous ಅಂತಾರೆ...

ಗುರು,

ಈಗಾಗಲೆ, ಹಲವು ತಮಿಳರು, ತೆಲುಗಿನವರು ಎಲ್ಲಾ ಈ ಚರ್ಚೆ ಶುರು ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ನಿಲುವಿನ ವಿರುಧ್ಧ ದಂಗೆ ಎದ್ದಿದ್ದಾರೆ. ಇದು ನಮ್ಮನ್ನೂ ಸೇರಿ, ತನ್ನದೇ ಆದ ಒಂದು ಭಾಷೆ, ಸಂಸ್ಕೃತಿ, ಗುರುತು ಇರುವ ಎಲ್ಲ ಭಾರತೀಯನಿಗೂ ಅನ್ವಯಿಸುತ್ತದೆ.

ಈಗಾಗಲೆ ಹಲವು ಆನ್ ಲೈನ್ ಪಿಟಿಷನ್ ಗಳೂ ಶುರು ಆಗಿವೆ. ನಾವೆಲ್ಲರೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.

Anonymous ಅಂತಾರೆ...

oMdE bhaaShe ide anta oMd dEsha maaDOdu 'natural'. oMdu dEsha idE annO kaaraNakke oMdu bhaaShe hErOdu yaav nyaay gurooooo

Anonymous ಅಂತಾರೆ...

tuMbaa oLLe vichAra guru. nAnu aMdra pradEshakke olase hOdre telagu kaltu telgUna meristIni, tamiLu naaDige hOdre tamiLu kaltu tamiLanna meristeeni. haage karnATakakke olase barouru kannaDa kalIbeku. idE bhaaratada okkUTe vyavaste kooDa hELOdu. ivugaLa madhya hiMdi yaake toorkoLbEku guru? hiMdige enu saMbandha guru?

Anonymous ಅಂತಾರೆ...

anEkatheyalli Ekathe aMta hELi mata giTTiskoMDu eega adanna mareyOdu eMtha nyaaya? eegaagale kannaDada gaaLiyalli hiMdi kELi bartaa ide, uttara bhaaratadiMda volse baMdirOru kannaDa kaliyakka udaaseena tOristaa idaare, hiMdeena raaShtra bhaaShe(?) aMta bere hELkotidaare. innu ee reethi UN nalli hiMdeena adhikruta bhaaShe aMta maaDudre, ivrgaLanna hiDiyOru yaaru?

mahantesh ಅಂತಾರೆ...

eno, guru nangyaako idra tale buda ne gottagta illa,

hindi sammelana Newyork nalli maadodu , kannada sammelana UP Nalli maadodu bhaasheya pracharada kelsa antu alla,adanna bittu bangalorenalli hindi haikalge ondu balake kannada kaliso prayatna,UP nalli kannada haikalge Hindi kaliso prayatna, maadodu olledu ansutte.

matte ondu vishya, hindi raastra bhaashe anta yellu bareedale iddru adra balake deshdalli jaasti annodanna gamana dallitko beku.

kannada kalsi kannada Ulsi, yaavdo bhaashe mugsi kannada ulsokagutta.

anda haage kendra sarkara madiro karchu polu annodralli enu sandehane illa, adanella navu khandisle beku.
matte vishwa samsteyalli adakke adhikruta bhashe staana sikkre enaaguttante? bhaashabhivruddi ge anta nu saala kodutta adu?

Anonymous ಅಂತಾರೆ...

guru irsumursu ... fanatic anntha pada upyogsiddhu ee forum nallli contribute maaDthaa iro buddivantha community na alla ... how can I do that while I sincerely am appreciating this forum ... nimmge gotthaagg bahuhu naanu yaaranna indicate maaDthaa irbahudhu antha annkoNde, adhakke vondh udhaaharaNe kooda kottiddhene .... anyway, bidi ...


Hindi beda bekaadhre English heri, english herdhre parrvaagillaa anno logic hmmmmm typical tamilian, dead against what kannadigas represented ... bidi, let us follow the footsteps ... nanna aneka tamilian friends bejaarrr maaadkothaare Hindi kaleebekitthu antha, atleast as another language if not as national language, mundhe namm makkLooo heege annkoLo opportunity create maadoNa ....

Englishooo beku guru ... aadhre ... yeno bidu guru! neenn heLthaa irodhe sari irrbeku!

naanannthoo hindi kalitiddhene, nannge ishtaa kooda, nann magugoo kalsthene, but Kannada sandhehave ildhe first priority ... Hindi, adhu raashtra bhaasheno allvo aadhre namm deshakke seriddhu, adhakke Hindi English gintha saakashtu hathra ansutthe ... bittt haaaki .... Anyway!

namma vichaaragaLu swalpa differ aagg bahudhu, aadhre naanooo appata kannadiga, kannada premi, Mandyadhava ... so dayavittu thammm kannada prema na nannn mele herakke prayathna maaDbedi :) my way of loving my language is different from your approach ashte ... idhu nanna anisike ashte ....

mundhuvareyali .. thummbhaa chennaagg mooodd barrthaa idhe eee samvaada ....

Anonymous ಅಂತಾರೆ...

ದಯವಿಟ್ಟು ಕನ್ನಡದಲ್ಲಿ ಕಾಮೆಂಟ್ಸ್ ಬರೆಯಿರಿ.

ನೋಡಿ:
http://quillpad.com/kannada/
http://www.baraha.com/BarahaIME.htm

-ಸ್ವಾಮಿ

Anonymous ಅಂತಾರೆ...

ಧನ್ಯವಾದ ಸ್ವಮಿ, ಬರಹ ಉಪಯೊಗಿಸಿದ್ದೆ ಮುಂಚೆ ಆದ್ರೆ ಹೀಗೆ ಟೈಪ್ ಕೂಡ ಮಾಡ್ಬಹುದು ಅಂತ ಗೊತ್ತಿರ್ಲಿಲ್ಲ. ಮತ್ತೊಮ್ಮೆ ಧನ್ಯವಾದಗಳು.

Anonymous ಅಂತಾರೆ...

ಅನಾನಿಮಸ್ ಅವರೆ,

ಇತರ ಭಾಷೆ ಬಗ್ಗೆ ನಿಮ್ಮ ನಿಲುವನ್ನು ಗೌರವಿಸುತ್ತೀನಿ. ಆದರೆ ಒಂದು ಸಣ್ಣ ತಪ್ಪು ತಿಳಿವಳಿಕೆ ಇದೆ. ಇಲ್ಲಿ ನಮ್ಮ ಗುರು ಬೇರೆ ಭಾಷೆ ಕಲೀಬಾರದು ಅಂತ ಎಲ್ಲೂ ಆಶಯ ವ್ಯಕ್ತ ಪಡಿಸಿಲ್ಲ ಅನ್ನಿಸುತ್ತೆ. ಈ ಲೇಖನ ಆಶಯ ಇಷ್ಟೆ: ಬೇರೆ ಭಾಷೆನ ನಮ್ಮ ಮೇಲೆ ಹೇರಬಾರದು. ಅಥವಾ ಅದಕ್ಕೆ ಸಹಾಯ ಆಗೋ ಯಾವುದೇ ಘಟನೆ ನಡೆದರೂ ಅದನ್ನ ನಾವು ವಿರೋಧಿಸಬೇಕು ಅಂತ. ನಾವು ವೈಯಕ್ತಿಕವಾಗಿ ಯಾವ ಭಾಷೆನಾದ್ರು ಕಲಿಯೋಣ, ಆದರೆ, ಕರ್ನಾಟಕದಲ್ಲಿ ಕನ್ನಡನೇ ಸಾರ್ವಜನಿಕ ಭಾಷೆ ಮತ್ತು ಸಾರ್ವಭೌಮ ಭಾಷೆಯಾಗಿರಬೇಕು.

ಏನಂತೀರ ಸ್ವಾಮಿ?

Anonymous ಅಂತಾರೆ...

Hindi .. my ass .. English is much better ..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails