ಮರಾಠಿಗಳಿಂದ್ಲೂ ಕಲೀಬೇಕ್ರಿ ನಾವು!

ಮೊನ್ನೆ ತಾನೆ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೀತಲ್ಲಾ ಆಗ ನಮ್ಮ ಪಕ್ಕದ ಮಹಾರಾಷ್ಟ್ರದಲ್ಲಿರೋ ರಾಜಕೀಯ ಪಕ್ಷಗಳು ನಡೆದುಕೊಂಡ ರೀತಿ ನೋಡಿ ಸ್ವಲ್ಪ ನಾವೂ ಕಲೀಬೇಕ್ರಿ. ಶಿವಸೇನೆ ಮತ್ತು ಭಾಜಪದ ಮೈತ್ರಿಗೆ ಕುತ್ತು ಬರೋ ಸ್ಥಿತಿ ಹುಟ್ಟುದ್ರೂ ಲೆಕ್ಕಿಸ್ದೆ, ಶಿವಸೇನೆ, ಶ್ರೀಮತಿ ಪ್ರತಿಭಾ ಪಾಟೀಲರನ್ನು ಬೆಂಬಲಿಸ್ತು. ಇದರ್ ಬಗ್ಗೆ ಶಿವಸೇನೆ ಮುಖಂಡರ ಹೇಳಿಕೆ ನೋಡಿ.


ಮೊದಲಿಗೆ ನಾವು ಮರಾಠಿಗರು, ಆಮೇಲೆ ಆ ಪಕ್ಷ ಈ ಪಕ್ಷಕ್ಕೆ ಸೇರಿದವರು ಅನ್ನೋ ಸಂದೇಶಾನ ಇಡೀ ದೇಶಕ್ಕೆ ಕೊಟ್ರು. ಹುಟ್ಟಿದಾಗಿಂದ ವಿರೋಧಿಸ್ತಿದ್ದ ಕಾಂಗ್ರೆಸ್ ಮುಂದಾಳ್‌ತನದ ಯು.ಪಿ.ಏ ಸರ್ಕಾರದ ಅಭ್ಯರ್ಥಿಯಾದ ಪ್ರತಿಭಾ ಪಾಟೀಲ್‌ರನ್ನು ಅವರು ಮರಾಠಿಗರು ಅನ್ನೋ ಕಾರಣ ಮಾತ್ರದಿಂದ ಬೆಂಬಲ ನೀಡ್ತಿದೀವಿ ಅಂತ ಹೇಳಿದ್ದನ್ನು ಮೆಚ್ಚದೇ ಇರಕ್ ಆಗಲ್ಲ ಬಿಡಿ. ಇದೇ ತರಹವೇ ಬೆಂಗಾಲಿಗಳು ಸೋಮನಾಥ ಚಟರ್ಜಿ ಪರವಾಗಿ ಪಕ್ಷಭೇದ ಮರೆತು ಬೆಂಬಲವಾಗಿ ನಿಂತ್ರು.

ನಮ್ಮ ಕನ್ನಡ ನಾಡಿನ ರಾಜಕೀಯ ಮುಖಂಡರುಗಳು ಇನ್ನಾದ್ರೂ ಕಣ್ ಬಿಡ್ತಾರ ನೋಡೋಣ. ಕರ್ನಾಟಕ ಏಕೀಕರಣ ಆಗ್ಲಿ ಅಂತ ದೊಡ್‌ದೊಡ್ಡೋರು ಹೋರಾಟ ಮಾಡ್ತಿದ್ರೆ ಒಕ್ಕಲಿಗರ ಪ್ರಾಬಲ್ಯ ಬೆಳಿಯುತ್ತೆ ಅಂತ ಇವ್ರೂ, ಲಿಂಗಾಯಿತರ ಪ್ರಾಬಲ್ಯ ಬೆಳ್ಯುತ್ತೆ ಅಂತ ಅವ್ರೂ ಏಕೀಕರಣಾನೆ ಬೇಡ ಅಂತ ಕನ್ನಡಿಗರ ಬದುಕು ಭವಿಷ್ಯಾನೇ ಬಲಿಕೊಡಕ್ಕೆ ಹೊರಟಿದ್ರು. ತೊಂಬತ್ತರ ದಶಕದಲ್ಲಿ ದೇವೇಗೌಡ್ರು ಪ್ರಧಾನಿ ಆಗೋ ಸಂದರ್ಭದಲ್ಲಿ ನಮ್ಮ ಹಲವಾರು ರಾಜಕಾರಣಿಗಳು ಕನ್ನಡದವ್ರು ಪ್ರಧಾನ್ ಮಂತ್ರಿ ಆಗ್ತಿದಾರೆ ಅಂತ ಖುಷಿ ಪಡೋದಕ್ಕಿಂತ್ಲೂ ಅವ್ರು ನಮ್ಮ ಪಕ್ಷದವ್ರು ಅಲ್ಲ ಅನ್ನೋ ಕಾರಣಕ್ಕೆ ಖಂಡಿಸಿ, ಹಂಗಿಸಿ ಮಾತಾಡೋದ್ನ ಕಂಡ್ವಿ. ನಾವೂ ನಮ್ಮ ರಾಜಕೀಯದವ್ರೂ, ಜಾತಿ, ಧರ್ಮ ಮೀರಿ ಕನ್ನಡಿಗ ಪಕ್ಷಪಾತಿಗಳಾಗೋ ವಿಷಯದಲ್ಲಿ ಮರಾಠಿಗರಿಂದ ಕಲೀಬೋದಲ್ವಾ ಗುರೂ . . .

11 ಅನಿಸಿಕೆಗಳು:

Anonymous ಅಂತಾರೆ...

ಸರಿಯಾಗಿ ಹೇಳಿದೆ ಗುರು... ನಮ್ಮ ರಾಜಕಾರಣಿಗಳು ನಿಜವಾದ ಕನ್ನಡಿಗರೇ ಆದ್ದಲ್ಲಿ, ಪಕ್ಷಭೇದ, ಜಾತಿಭೇದ ಎಲ್ಲವನ್ನೂ ಮರೆತು, ಕನ್ನಡದ ಕಣ್ಣಿನಿಂದ ರಾಜಕೀಯ ಮಾಡಬೇಕು. ಇದನ್ನು ಅವರಾಗಿದ್ದು ಅವರೇ ಅವರಪ್ಪನಾಣೆ ಮಾಡಲ್ಲ! ನಿಜವಾದ ಕನ್ನಡಿಗರಾದ್ದ ನಾವು ಮಾಡಿಸಬೇಕು. ಈಗಾಗಲೆ ಇರುವ ಎಲ್ಲಾ ಪಕ್ಷಗಳೂ ಪ್ರಾದೇಶಿಕ ಬೆಳವಣಿಗೆ ಬಗ್ಗೆ ಚಿಂತಿಸುವಂತೆ ಒತ್ತಾಯಿಸಬೇಕು, ಇಲ್ಲವೇ, ಅವರನ್ನೆಲ್ಲ ಉಗಿದು ಬಿಟ್ಟುಹಾಕಿ, ಒಂದು ಹೊಸ, ಕನ್ನಡದ ಪ್ರಾದೇಶಿಕ ಪಕ್ಷ ಕಟ್ಟಬೇಕು. ಈ ನಿಟ್ಟಿನಲ್ಲಿ ಕ.ರ.ವೇ. ಅಂತ ಪ್ರಾಮಾಣಿಗ ಸಂಘಟನೆಗೆ ಬೆಂಬಲ ಕೊಡಬೇಕು.

ಎಲ್ಲರೂ ಏನಂತೀರಪ್ಪೋ?

ವಸಂತ ಅಂತಾರೆ...

ನಮಸ್ಕಾರ ಗುರುಗಳಿಗೆ,
ಶಿವಸೇನೆಯ ಇ ಕ್ರಮ ಕರೇನು.. ಬಾಳ ಚಲೊ ನಿರ್ಧಾರ ಐತಿ. ನಮ್ಮ ಕರ್ನಾಟಕದ ರಾಜಕೀಯದ ಮಂದಿ ಬರೇ ಜಗಳಾ ಮಾಡುದ ಬಿಟ್ಟು ಸ್ವಲ್ಪ ಮರಾಠಿ ಮಂದಿನ ನೋಡಿ ಕಲಿಲಿ. ಬೆಳಗಾವಿ ನ್ಯಾಗ ನಮ್ಮ ಗೆಳೆಯ ಒಬ್ಬಾತ ಹೇಳಾಕತ್ತಿದ್ದ ಮೊನ್ನೆ,, ಇಗೀಗ ಹೆಂಗ್ ಅಲ್ಲಿ ಕನ್ನಡದ ಮಂದಿ ಒಟ್ಟಾಗ್ಯರ್ ಕ.ರ.ವೆ ಬಂದ ಮ್ಯಾಲೆ ಅಂತ. ನಮ್ಮ ರಾಜಕೀಯದ ಮಂದಿ ನು ಸ್ವಲ್ಪ ಕೈ ಜೋಡಸಿದ್ರ ಅವನೌನ್ ಯಾವ ನನ್ನ ಮಕ್ಕಳ್ ಬಂದ್ರು ನಾವೇನ್ ಅಂಜಬೇಕಾಗಿಲ್ಲ..

Kannada ಅಂತಾರೆ...
This comment has been removed by the author.
Kannada ಅಂತಾರೆ...

This is the committment of maraThi's.
Politicians from Karnataka are least bothered about kannada. I still rememeber, sometime back during the campaigning for elections,Dharam Singh, Kharge and Deshpande spoke in Marathi in a public gathering in a village in Bidar.
Shameless politicians from Karnataka are least concerned about safeguarding kannada or karnataka.
We are badly in need of a Regional party in Karnataka.
Mr.Narayana Gowda(KRV), are you listening???????????

Anonymous ಅಂತಾರೆ...

Raj Thackery awaru heliruwa innondu maatu saha aksharasha satya. adeneMdare people of this soil should be given employment first in which ever field it is. Karnataka dalli kannadigarige udyogada simhapaalu doreyatakkaddu.

Anonymous ಅಂತಾರೆ...

ನಮ್ಮ ರಾಜಕಾರಿಣಿಗಳು ಇದನ್ನು ಪಾಲಿಸಿದ್ದರೆ ಕರ್ನಾಟಕಕ್ಕೆ ಈ ಪರಿಸ್ಠಿತಿ ಬರುತ್ತಿರಲಿಲ್ಲ. ಈಗಲು ಕಾಲ ಮಿಂಚಿಲ್ಲ. ಕನ್ನಡಿಗರಿಂದ ಕನ್ನಡಿಗರಿಗೋಸ್ಕರ ಕನ್ನಡಿಗರಿಗಾಗಿ ಅನ್ನುವಂತಹ ಸರ್ಕಾರ ಬೇಗ ಬರಲಿ ಎಂದು ಆಶಿಸುವ.

Anonymous ಅಂತಾರೆ...

ನಮ್ಮ ಪತ್ರಕರ್ತರು ರಜನಿಕಾಂತ್ ಕನ್ನಡಿಗ ಎಂದು ಸಿವಾಜಿ ಯನ್ನು ಬೆಂಬಲಿಸಿದ್ದೆವೆ ಯೆಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯ. ಯಾವಾಗ ಬೆಂಬಲಿಸಬೆಕು, ಯಾರನ್ನು ಬೆಮ್ಬಲಿಸಬೆಕು ಎಂದು ಗೊತ್ತಿಲ್ಲದ ಮೂರ್ಖ್ಹರು..

Anonymous ಅಂತಾರೆ...

yaru ee patrikeya sampadakaru? idara barahagararu yaru? suddi maaduttiruvavaru yaaru?

idu karnatakada number one blog!

parabashikarige paranbare madikondiruva kanndada itara patrikegalannu kaDegaNisi. enguruna belasabeku

Anonymous ಅಂತಾರೆ...

keLagina link noDi

http://epaper.timesofindia.com/Repository/ml.asp?Ref=VE9JUFUvMjAwNy8wNy8yNCNBcjAwOTAx&Mode=HTML&Locale=english-skin-custom

svanta tammana maga [raj thakrey] doddappanannu[bal thakrey] edurisuttiruvudu.

kEvala marathi basha premakkaagi!!

namma rajakaranigalu higiddare. appa kannada hesaru helkodonu 1 ru madidre maga 2 ru madtane.

ಬನವಾಸಿ ಬಳಗ ಅಂತಾರೆ...

ರಾಮಾಚಾರಿಗಳೆ,

ಈ ಬ್ಲಾಗಿನ ಬಗ್ಗೆ ನಿಮ್ಮ ನಲ್ಮೆಯ ಮಾತುಗಳಿಗೆ ನನ್ನಿ!

ಈ ಬ್ಲಾಗನ್ನು ನಡೆಸುತ್ತಿರುವುದು ಬನವಾಸಿ ಬಳಗ.

Deshpande N.R. ಅಂತಾರೆ...

ರಾಜಕಾರಣಿಗಳು ಹಾಗೂ ಅವರು ಮಾಡುವ ರಾಜಕಾರಣ ಸಮಾಜದ ಕನ್ನಡಿಗಳಂತೆ. ಹೀಗಿರುವಾಗ ನಾವು ಮೊದಲು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಇಂಥ ಜನರನ್ನು ನಾವು ಮತದಾನ ಮಾಡಿ ಗೆಲ್ಲಿಸಿರುವುದರಿಂದಲೇ ಇವರು ಈ ತರಹದ ರಾಜಕಾರಣ ಮಾಡುತ್ತಿದ್ದಾರೆ. ಹೋಗ್ಲಿ, ನಮ್ಮ ಭಾಷಾಭಿಮಾನ ಕೂಡ ನಾವು ಆಡುವ ಕಂಗ್ಲೀಷ್ ನಿಂದ ತೀರ ಸ್ಫುಟವಾಗಿ ತಿಳಿಯುತ್ತದೆ. ಇದನ್ನೇ ನೀವು ಮರಾಠಿ ಟಿವಿ ವಾಹಿನಿಗಳಲ್ಲಿ ನೋಡಿ, ಒಂದು ಇಂಗ್ಲೀಷ್ ಪದವನ್ನೂ ಕೂಡ ಅವರು ಬಳಸುವದಿಲ್ಲ. ಮರಾಠಿ ಪದಗಳು ಅನಾಯಾಸವಾಗಿ ಬರುತ್ತವೆ ಹಾಗೂ ಮನಸ್ಸಿಗೆ ಮುದವನ್ನೂ ನೀಡುತ್ತವೆ. ಈಗಿನ ಕಾಲದಲ್ಲಿ ನಾವು ನಮ್ಮ ಬಿಡುವಿನ ವೇಳೆಯ ಮುಖ್ಯಭಾಗವನ್ನು ಟಿವಿಯ ಎದುರಿಗೇ ಕಳೆಯುವುದರಿಂದ ಎಲ್ಲ ಕನ್ನಡ ವಾಹಿನಿಯವರು ಕನ್ನಡವನ್ನೇ ಪ್ರಧಾನವಾಗಿ ಬಳಸಿದರೆ ಸಾಕಷ್ಟು ಬದಲಾವಣೆಯನ್ನು ತರಬಹುದು. ಇದನ್ನು ಅನುಷ್ಠಾನಕ್ಕೆ ಬಹಳಷ್ಟು ಸಲಹೆಗಳಿವೆ. ಆದರೆ ಒಂದು ರಾಜಕಾರಣಿಗಳು ಅಥವಾ ರಾಜಕಾರಣ ಇಲ್ಲದ ವೇದಿಕೆಯ ಅವಶ್ಯಕತೆ ಇದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails